ಕರ್ನಾಟಕ ಸರ್ಕಾರ

ವಿಕಿಪೀಡಿಯ ಇಂದ
(ಕರ್ನಾಟಕ ಸರಕಾರ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕರ್ನಾಟಕ ಸರ್ಕಾರ
Seal of Karnataka.png
ಹಳದಿ +ಕೆಂಪು ಪಟ್ಟಿ
ರಾಜ್ಯ ಬಾವುಟ
ವಿಧಾನ ಮಂಡಲ ವಿಧಾನಸೌಧ ಬೆಂಗಳೂರು
ಕಾರ್ಯಾಂಗ
ರಾಜ್ಯಪಾಲರು ವಜುಭಾಯಿ ರೂಡಭಾಯಿ ವಾಲ
ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಸಕಾಂಗ
ಕರ್ನಾಟಕ ವಿಧಾನ ಸಭೆ
ಸಭಾಪತಿ_(ಸ್ಪೀಕರ್) ಕೆ. ಬಿ. ಕೋಳಿವಾಡ
ವಿಧಾನ ಸಭೆ ಸದಸ್ಯರು ೨೨೫
ವಿಧಾನ ಪರಿಷದ್ ಕರ್ನಾಟಕ ವಿಧಾನ ಪರಿಷತ್
ಅಧ್ಯಕ್ಷ ಡಿ.ಎಚ್.ಶಂಕರಮೂರ್ತಿ
ವಿಧಾನ ಪರಿಷದ್ ಸದಸ್ಯರು ೭೫
ನ್ಯಾಯಾಂಗ
ಉಚ್ಚನ್ಯಾಯಲಯ ಕರ್ನಾಟಕ ಉಚ್ಚನ್ಯಾಯಲಯ
ಮುಖ್ಯ_ನ್ಯಾಯಾಧೀಶರು ಸುಬ್ರೊ ಕಮಲ್ ಮುಖರ್ಜಿ

ರಾಜ್ಯಾಡಳಿತ[ಬದಲಾಯಿಸಿ]

ಕರ್ನಾಟಕ ಸರ್ಕಾರವು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ, ರಾಜ್ಯಪಾಲರು ಸಂವಿಧಾನಾತ್ಮಕ ನಾಯಕರಾಗಿರುವ ಒಂದು ಸಂಸ್ಥೆ. ಐದು ವರ್ಷದ ಅವಧಿಗೆ ನೇಮಿತರಾದ ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲವನ್ನು ನೇಮಿಸುತ್ತಾರೆ. ರಾಜ್ಯಪಾಲರು ರಾಜ್ಯದ ಸಾಂಪ್ರದಾಯಿಕ ನಾಯಕರಾಗಿರುತ್ತಾರಾದರೂ, ಸರ್ಕಾರದ ದೈನಂದಿನ ನಿರ್ವಹಣೆಯು ಗಮನಾರ್ಹವಾದ ಶಾಸನಾಧಿಕಾರಗಳನ್ನು ವಹಿಸಲಾದ ಮುಖ್ಯಮಂತ್ರಿ ಮತ್ತು ಅವರ ಮಂತ್ರಿಮಂಡಲದ ಉಸ್ತುವಾರಿಯಲ್ಲಿರುತ್ತದೆ.

ಇತಿಹಾಸ[ಬದಲಾಯಿಸಿ]

ಕರ್ನಾಟಕದ ಏಕೀಕರಣ
  • ಭಾರತವು ಸ್ವತಂತ್ರವಾದ ಮತ್ತು ದೇಶ ವಿಭಜನೆಯಾದ ಬಳಿಕ ಭಾಷಾವಾರು ಮತ್ತು ಇತರ ಮಾನದಂಡಗಳನ್ನು ಆಧರಿಸಿ ರಾಜ್ಯಗಳನ್ನು ರಚಿಸಲು ಪುನರ್ವಿಂಗಡಣೆಯ ಗಡಿಗಳನ್ನು ಗುರುತಿಸಲಾಯಿತು ಸ್ವಾತಂತ್ರ್ಯದ ನಂತರ, ಒಡೆಯರ್ ಅವರು ಜನರ ಚಳುವಳಿಯನ್ನು ಗಮನಿಸಿ ಅವರ ಅಪೇಕ್ಷೆ ಮನ್ನಿಸಿ ಭಾರತದ ಭಾಗವಾಗಲು ಸಮ್ಮತಿಸಿದರು. 1950 ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು, ಮಹಾರಾಜರು 1975 ರ ವರೆಗೆ ಅದರ ರಾಜ ಪ್ರಮುಖ, ಅಥವಾ ರಾಜ್ಯಪಾಲರಾದರು. ಏಕೀಕರಣ ಚಳುವಳಿ 19ನೆಯ ಶತಮಾನದ ಎರಡನೇ ಭಾಗದಲ್ಲಿ ಆರಂಭವಾಗಿ, 1956 ರಲ್ಲಿ ರಾಜ್ಯ ಪುನಸ್ಸಂಘಟನೆ ಕಾಯಿದೆಯೊಂದಿಗೆ ಚಳುವಳಿ ಮುಕ್ತಾಯವಾಯಿತು. ಇದರಿಂದ ಕೂರ್ಗ್ / ಕೊಡಗು, ಮದ್ರಾಸ್`ಪ್ರಾಂತ್ಯ , ಹೈದರಾಬಾದ್, ಹಾಗು ಮುಂಬಯಿ ರಾಜ್ಯದ ಕನ್ನಡ ಭಾಷೆಯ ಜನರು ಹೆಚ್ಚು ಇರುವ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸು ಅವರ ಕಾಲದಲ್ಲಿ ೧ ನವೆಂಬರ್, ೧೯೭೩ ರಂದು, ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೊಸ ಮೈಸೂರು ರಾಜ್ಯವು(ನಂತರ ವಿಶಾಲ ಮೈಸೂರು-ನಂತರ ಕರ್ನಾಟಕ) ೧ ನವೆಂಬರ್.೧೯೫೬ ರಲ್ಲಿ ರಚನೆಯಾಯಿತು ಅಂದಿನಿಂದ ೧ ನವೆಂಬರ್ ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
  • ಕನ್ನಡ ಭಾಷೆಯ ಕೆಲವು ಪ್ರದೇಶಗಳು ಸೇರ್ಪಡೆ ಆಗದ ಕಾರಣ ಕನ್ನಡಿಗರು ನಿರಾಶೆ ಹೊಂದಿದ್ದರೂ, ಸಂಸತ್ತಿನಲ್ಲಿ ಎಸ್ಆರ್ಸಿ (SRC)ರಾಜ್ಯ ಪುನರ್ವಿಂಗಡಣಾ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲು ಒಪ್ಪಿದರು. ರಾಜರ ಆಡಳಿತದಲ್ಲಿದ್ದ ಮೈಸೂರು ರಾಜ್ಯವು ಸಕಾರಾತ್ಮಕವಾಗಿ, ಪ್ರತಿಕ್ರಿಯಿಸಿತು .ಕರ್ನಾಟಕಕ್ಕೆ ಸೇರದೆ ಕೈಬಿಟ್ಟ ಹೆಚ್ಚು ಕನ್ನಡಿಗರಿರುವ ಪ್ರದೇಶಗಳ ಪೈಕಿ ಅತ್ಯಂತ ಗಮನಾರ್ಹವಾದ ಪ್ರದೇಶ ಕಾಸರಗೋಡು. ಇದು ಏಕೀಕರಣ ಚಳವಳಿಯನ್ನು ಪ್ರಾರಂಭಿಸಿದ ಕೇಂದ್ರಗಳಲ್ಲಿ ಒಂದಾಗಿದೆ. ಹೀಗಾಗಿ ಕನ್ನಡ ಮಾತನಾಡುವ ಜನಸಂಖ್ಯೆಯುಳ್ಳ ಪ್ರದೇಶಗಳಲ್ಲಿ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಅವರು ತಳಮಳ ಗೊಂಡಿದ್ದಾರೆ; ಹೋರಾಟ ಮುಂದುವರಿದಿದೆ.
  • ಕರ್ನಾಟಕ ರಾಜ್ಯವು ತನ್ನ ರಾಜಧಾನಿಯಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿತು, ಮತ್ತು ಕನ್ನಡಕ್ಕೆ ಆಡಳಿತ ಭಾಷೆಯ ಸ್ಥಾನಮಾನವನ್ನು ನೀಡಿತು. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮೇಲ್ವಚಾರಣೆಯಲ್ಲಿ ವಿಧಾನಸೌಧದ ನಿರ್ಮಾಣವಾಗಿ, ಅದು ರಾಜ್ಯದ ಶಾಸನಸಭೆಯ (ಸಂಸತ್`ಭವನ) ಸದನವಾಯಿತು. ಹಿಂದಿನ ಸಚಿವಾಲಯವಾಗಿದ್ದ ‘ಅಠಾರಾ ಕಛೇರಿ'ಯನ್ನು (ಸರ್ಕಾರದ ಆಡಳಿತ ಕಛೇರಿ) ರಾಜ್ಯದ ಹೈಕೋರ್ಟ್ ಮಾಡಲಾಯಿತು.[೧][೨]
ಸ್ವಾತಂತ್ರಾನಂತರದ ನಂತರದ ಇತಿಹಾಸ

ಆಡಳಿತ ವಿಭಾಗಗಳು[ಬದಲಾಯಿಸಿ]

ವಿಧಾನ ಸೌದ:ಸರಕಾರದ ಮುಖ್ಯ ಆಡಳಿತ ಕೇಂದ್ರ
ಕರ್ನಾಟಕದ 30 ಜಿಲ್ಲೆಗಳನ್ನು ತೋರಿಸುವ ಭೂಪಟ
  • ಕರ್ನಾಟಕ ರಾಜ್ಯವನ್ನು ಆಡಳಿತಾತ್ಮಕ ಉದ್ದೇಶಗಳಿಗಾಗಿ ನಾಲ್ಕು ಆದಾಯ ವಿಭಾಗಗಳು, 49 ಉಪವಿಭಾಗಗಳು, 30 ಜಿಲ್ಲೆಗಳು, 177 ತಾಲ್ಲೂಕುಗಳು ಮತ್ತು 747 ಹೋಬಳಿ / ಆದಾಯ ವಲಯಗಳು ಮತ್ತು 5628 ಗ್ರಾಮ ಪಂಚಾಯತ್ಗಳಾಗಿ ವಿಭಜಿಸಲಾಗಿದೆ.[1] ರಾಜ್ಯವು 281 ಪಟ್ಟಣಗಳು ಮತ್ತು 7 ಪುರಸಭಾ ಸಂಸ್ಥೆಗಳನ್ನು ಹೊಂದಿದೆ. ಭಾರತದ 23 ನಗರಪ್ರದೇಶಗಳಲ್ಲಿ ಮತ್ತು ನಗರಗಳಲ್ಲಿ, ಬೆಂಗಳೂರು ಐದನೇ ದೊಡ್ಡ ಮಹಾನಗರವಾಗಿದೆ. ಇದು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಒಂದಾಗಿದೆ. . ನಗರೀಕರಣದಿಂದ ಜನ ಸಾಂದ್ರತೆಯು ಹೆಚ್ಚುತ್ತಿದೆ.
ಕನ್ನಡ ಬಾವುಟ
ಕನ್ನಡ ಬಾವುಟ.

ರಾಜಕೀಯ ಮತ್ತು ಆಡಳಿತಾತ್ಮಕ ಪುನಸ್ಸಂಘಟನೆ[ಬದಲಾಯಿಸಿ]

ಕರ್ನಾಟಕದ ಸಾಕ್ಷರ ಪ್ರಮಾಣ-ಬಣ್ಣಗಳಲ್ಲಿ

೨೦೧೩ ರ ಚುನಾಯಿತ ಸರ್ಕಾರ[ಬದಲಾಯಿಸಿ]

ಕರ್ನಾಟಕ ವಿಧಾನಸಭೆ ಚುನಾವಣೆ, 2013 ಭಾರತದ ಕರ್ನಾಟಕ ರಾಜ್ಯದ ಹದಿನಾಲ್ಕನೇ ವಿಧಾನಸಭೆಗೆ 5 ಮೇ 2013 ರಂದು 223 ಕ್ಷೇತ್ರಗಳ ಸದಸ್ಯರನ್ನು ಚುನಾಯಿಸುವ ಚುನಾವಣೆ ನಡೆಯಿತು.ಕರ್ನಾಟಕವು 224 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ, ಚುನಾವಣೆಯಲ್ಲಿ 223 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು. ಪೆರಿಯಾಪಟ್ಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಸಾವಿನ ಕಾರಣ ಅಲ್ಲಿಯ ಚುನಾವಣೆ 28 ಮೇ 2013 ಕ್ಕೆ ಮುಂದೂಡಲ್ಪಟ್ಟಿತು. [1] ರಾಜ್ಯದಲ್ಲಿ ಮತದಾನ 70.23 % ಆಗಿತ್ತು[2]. ಕನಾಟಕದ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಇವರ ನೇತ್ರತ್ವದಲ್ಲಿ ಚುನಾವಣೆ ನೆಡೆದು ಕಾಂಗ್ರೆಸ್ 122 ಸ್ಥಾನಗಳನ್ನು (ಪೆರಿಯಾಪಟ್ಣ ಸ್ಥಾನವನ್ನು ಸೇರಿದಂತೆ)ಪಡೆಯಿತು. ಮತದಾನ ದಿ.5-5-2013; ಎಣಿಕೆ 8-5-2013. ಬಹುಮತಕ್ಕೆ ಬೇಕಾದ 113.[3] ಕ್ಕೂ ಹೆಚ್ಚಾಗಿ 9 ಹೆಚ್ಚು ಸ್ಥಾನಗಳನ್ನು ಪಡೆದು ಸಂಪೂರ್ಣ ಬಹುಮತದಿಂದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂ)ಗೆಲವು ಸಾಧಿಸಿತು. ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ್. ತಮ್ಮಕ್ಷೇತ್ರದಲ್ಲ ಪ್ರಚಾರಕ್ಕೆ ಗಮನ ಕೊಡದೆ ಉಳಿದ ಕ್ಷೇತ್ರಗಳ ಪ್ರಚಾರ ಕೈಗೊಂಡಿದ್ದರಿಂದ ಚುನಾವಣೆಯಲ್ಲಿ ಸೋಲುಕಂಡರು. ಆದ್ದರಿಂದ ನಂತರದ ಕಾಂಗ್ರೆಸ್ ನಾಯಕ (ಹಿಂದಿನ ಜನತಾ ಪರಿವಾರದ ನಾಯಕ) ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಲಾಯಿತು. ಕಾಂಗ್ರೆಸ್ ತನ್ನ ಸ್ವಂತ ಬಲದಮೇಲೆ ಒಂಬತ್ತು ವರ್ಷಗಳ ನಂತರ ಪುನಃ ಅಧಿಕಾರಕ್ಕೆ ಮರಳಿತು.

ಸರ್ಕಾರ ರಚನೆ[ಬದಲಾಯಿಸಿ]

ದಿ.13-5-2013 ರಂದು 28 ನೇ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಒಬ್ಬರೇ ಪ್ರಮಾಣವಚನ ಸ್ವೀಕಾರಮಾಡಿದರು. ದಿ.18-5-2013 ಸಂಪುಟ ವಿಸ್ತರಣೆಮಾಡಿದರು

  • ಸಿದ್ದರಾಮಯ್ಯ:ಮುಖ್ಯ ಮಂತ್ರಿ
  • ಸಂಪುಟ ಸದಸ್ಯರು (ಮಂತ್ರಿಮಂಡಳ):
  • ಸಚಿವರ ಖಾತೆಗಳ ವಿವರ ಕೆಳಗಿನಂತಿದೆ:

ಜಾತಿವಾರು ವಿಂಗಡಣೆ[ಬದಲಾಯಿಸಿ]

ಮಂತ್ರಿಗಳು (ಇನ್ನೊಬ್ಬರ ವಿವರ ಬೇಕು) ಆಧಾರ:[೩]

ಲಿಂಗಾಯತರು ಒಕ್ಕಲಿಗರು ಪರಿಶಿಷ್ಟ ಜಾತಿ ಹಿಂದುಳಿದ ವರ್ಗ ಮುಸ್ಲಿಂ ಬ್ರಾಹ್ಮಣ ಪರಿಶಿಷ್ಟ ಪಂಗಡ ಕ್ರೈಸ್ತ ಜೈನ ರೆಡ್ಡಿ ದ.ಕ.ಬಂಟ(ರೈ) ಬಿಲ್ಲವ ಒಟ್ಟು
7 6 6 5 3 2 1 1 1 1 1 33+1

ಕರ್ನಾಟಕ ಮಂತ್ರಿಮಂಡಲ ಪುನರ್ರಚನೆ[ಬದಲಾಯಿಸಿ]

  • 2015 ಅಕ್ಟೋಬರ್ 27 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ, ಹಾಸನ ಜಿಲ್ಲೆ ಅರಕಲಗೂಡು ಶಾಸಕ ಎ.ಮಂಜು, ಧಾರವಾಡ ಶಾಸಕ ವಿನಯ್‌ ಕುಲಕರ್ಣಿ, ಹಾವೇರಿ ಜಿಲ್ಲೆಯ ಹಾನಗಲ್‌ ಶಾಸಕ ಮನೋಹರ ತಹಶೀಲ್ದಾರ್ ಅವರು ಸಚಿವರಾಗಿ ಸಂಪುಟ ಸೇರಿದರು.
  • ಸಂಪುಟ ಸೇರಿದ ಪರಮೇಶ್ವರ ಅವರು 2013ರ ವಿಧಾನಸಭೆ ಚುನಾವಣೆಗೆ ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು 54,074 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಪರಮೇಶ್ವರ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್‌ನ ಸುಧಾಕರಲಾಲ್ 72,229 ಮತಗಳನ್ನುಗಳಿಸಿ ಜಯಗಳಿಸಿದ್ದರು. 2014ರ ಜುಲೈ 1ರಂದು ಪರಮೇಶ್ವರ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು. 2010ರ ಅ. 29ರಂದು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಪರಮೇಶ್ವರ ಅವರು ಅಕ್ಟೋಬರ್ 29ರ ಗುರುವಾರ ಐದು ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಅಂದೇ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು.ಡಾ.ಜಿ.ಪರಮೇಶ್ವರ ಅವರಿಗೆ ಗೃಹ ಖಾತೆ ಕೊಡಲಾಗಿದೆ.

ಸಂಪುಟ ದರ್ಜೆ[ಬದಲಾಯಿಸಿ]

  • ಸಿದ್ದರಾಮಯ್ಯ: ಹಣಕಾಸು, ಗುಪ್ತಚರ, ಮಧ್ಯಮ ಕೈಗಾರಿಕೆ, ಮುಜರಾಯಿ
  • ರಾಮಲಿಂಗಾ  ರೆಡ್ಡಿ  : ಗೃಹ ಖಾತೆ
  • ಆರ್ ವಿ ದೇಶಪಾಂಡೆ ಕೈಗಾರಿಕೆ, ಪ್ರವಾಸೋದ್ಯಮ
  • ಖಮರುಲ್ ಇಸ್ಲಾಂ ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ, ಪೌರಾಡಳಿತ
  • ಟಿ ಬಿ ಜಯಚಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರ, ಉನ್ನತ ಶಿಕ್ಷಣ
  • ರಮಾನಾಥ ರೈ ಅರಣ್ಯ, ಪರಿಸರ
  • ಎಚ್ ಕೆ ಪಾಟೀಲ್ ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್
  • ರಾಮಲಿಂಗರೆಡ್ಡಿ ಸಾರಿಗೆ
  • ಶಾಮನೂರು ಶಿವಶಂಕರಪ್ಪ ತೋಟಗಾರಿಕೆ
  • ಶ್ರೀನಿವಾಸ್ ಪ್ರಸಾದ್ ಕಂದಾಯ
  • ಡಾ ಎಚ್ ಸಿ ಮಹದೇವಪ್ಪ ಲೋಕೋಪಯೋಗಿ
  • ಕೆ ಜೆ ಜಾರ್ಜ್ ಬೆಂಗಳೂರು ನಗರಾಭಿವೃದ್ಧಿ
  • ಎಚ್ ಎಸ್ ಮಹಾದೇವ ಪ್ರಸಾದ್ ಸಹಕಾರ
  • ಎಂ ಎಚ್ ಅಂಬರೀಶ್ ವಸತಿ
  • ಸತೀಶ್ ಜಾರಕಿಹೊಳಿ ಸಣ್ಣ ಕೈಗಾರಿಕೆ
  • ವಿನಯ್ ಕುಮಾರ್ ಸೊರಕೆ ನಗರಾಭಿವೃದ್ಧಿ
  • ಎಂ ಬಿ ಪಾಟೀಲ್ ಜನಸಂಪನ್ಮೂಲ
  • ಯು ಟಿ ಖಾದರ್ ಆರೋಗ್ಯ, ಕುಟುಂಬ ಕಲ್ಯಾಣ
  • ಬಾಬುರಾವ್ ಚಿಂಚನಸೂರು ಜವಳಿ
  • ಶಿವರಾಜ್ ತಂಗಡಗಿ ಸಣ್ಣ ನೀರಾವರಿ
  • ಎಚ್ ಆಂಜನೇಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ
  • ಎಸ್.ಆರ್.ಪಾಟೀಲ್ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನೆ ಮತ್ತು ಸಾಂಖೀಕ, ಸಂಪನ್ಮೂಲ ಅಭಿವೃದ್ದಿ
  • ಡಿ.ಕೆ. ಶಿವಕುಮಾರ್ ಇಂಧನ
  • ರೋಶನ್ ಬೇಗ್ ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಖಾತೆ
  • ಎ ಮಂಜು ಪಶುಸಂಗೋಪನೆ
  • ವಿನಯ್‌ ಕುಲಕರ್ಣಿ; ಗಣಿ ಮತ್ತು ಭೂವಿಜ್ಞಾನ
  • ಮನೋಹರ್ ಹೆಚ್ ತಹಸೀಲ್ದಾರ್ ಅಬಕಾರಿ
ರಾಜ್ಯ ಸಚಿವರು
  • ಅಭಯಚಂದ್ರ ಜೈನ್ ಯುವಜನ ಮತ್ತು ಕ್ರೀಡೆ, ಮೀನುಗಾರಿಕೆ
  • ದಿನೇಶ್ ಗುಂಡೂರಾವ್ ಆಹಾರ ಮತ್ತು ನಾಗರಿಕ ಪೂರೈಕೆ
  • ಕೃಷ್ಣ ಭೈರೇಗೌಡ ಕೃಷಿ
  • ಡಾ ಶರಣಪ್ರಕಾಶ್ ಪಾಟೀಲ್; ವೈದ್ಯಕೀಯ ಶಿಕ್ಷಣ
  • ಕಿಮ್ಮನೆ ರತ್ನಾಕರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ಉಮಾಶ್ರೀ ಮಹಿಳಾ, ಮಕ್ಕಳ ಕಲ್ಯಾಣ, ಕನ್ನಡ ಸಂಸ್ಕೃತಿ
  • ಪಿ ಟಿ ಪರಮೇಶ್ವರ ನಾಯಕ್ ಕಾರ್ಮಿಕ

ಪಟ್ಟಿ [೪]

ಎರಡನೇಬಾರಿ ಪುನರ್`ರಚನೆ[ಬದಲಾಯಿಸಿ]

  • ೧೯-೬-೨೦೧೬ ಭಾನುವಾರ:ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾನುವಾರ ಸಂಜೆ 4 ಗಂಟೆಗೆ ರಾಜಭವನದ ಗಾಜಿನಮನೆಯಲ್ಲಿ ನಡೆಯಿತು. ಪ್ರಮೋದ್ ಮಧ್ವರಾಜ್, ರುದ್ರಪ್ಪ ಲಮಾಣಿ, ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ ಅವರು ರಾಜ್ಯ ಖಾತೆ ಸಚಿವರುಗಳಾಗಿಯೂ, ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ತನ್ವೀರ್ ಸೇಠ್, ಎಂ ಆರ್ ಸೀತಾರಾಂ, ಸಂತೋಷ್ ಲಾಡ್, ರಮೇಶ್ ಜಾರಕಿಹೊಳಿ, ಎಸ್ ಎಸ್ ಮಲ್ಲಿಕಾರ್ಜುನ, ಬಸವರಾಜ ರಾಯರೆಡ್ಡಿ, ಹೆಚ್.ವೈ. ಮೇಟಿ ಅವರು ಸಂಪುಟ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
  • 1.ಖಮರುಲ್ಲ ಇಸ್ಲಾಂ, 2.ಶ್ರೀನಿವಾಸ ಪ್ರಸಾದ್, 3.ವಿನಯ್‌ಕುಮಾರ್ ಸೊರಕೆ, 4.ಅಂಬರೀಶ್, 5.ಶಾಮನೂರು ಶಿವಶಂಕರಪ್ಪ, 6.ಕಿಮ್ಮನೆ ರತ್ನಾಕರ, 7.ಶಿವರಾಜ್ ತಂಗಡಗಿ, 8.ದಿನೇಶ್ ಗುಂಡೂರಾವ್, 9.ಪರಮೇಶ್ವರ್ ನಾಯಕ್, 10.ಯು.ಟಿ.ಖಾದರ್, 11.ಅಭಯ್‌ಚಂದ್ರ ಜೈನ್, 12.ಬಾಬುರಾವ್ ಚಿಂಚನಸೂರ್, 13.ಎಸ್.ಆರ್.ಪಾಟೀಲ್ ಅವರುಗಳನ್ನು ಸಂಪುಟದಿಂದ ಕೈ ಬಿಡಲಾಗಿದೆ.

ಖಾತೆ ಹಂಚಿಕೆ[ಬದಲಾಯಿಸಿ]

  • 21-6-2016 ಮಂಗಳವಾರ:13 ನೂತನ ಶಾಸಕರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ವಸತಿ, ವಾರ್ತಾ ಇಲಾಖೆ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
  • ಕಾನೂನು ಸಚಿವ ಟಿಬಿ ಜಯಚಂದ್ರ: ಸಣ್ಣ ನೀರಾವರಿ( ಹೆಚ್ಚುವರಿ ಜವಾಬ್ದಾರಿ)
  • ಯುಟಿ ಖಾದರ್: ಆಹಾರ ಮತ್ತು ನಾಗರಿಕ ಸರಬರಾಜು
  • ಆರ್. ವಿ. ದೇಶಪಾಂಡೆ: ಕೈಗಾರಿಕೆ, ಮೂಲಸೌಕರ್ಯ ಖಾತೆ
  • ರೋಶನ್ ಬೇಗ್: ನಗರಾಭಿವೃದ್ಧಿ ಹಾಗೂ ಹಜ್ ಖಾತೆ
ಹೊಸ ಸಚಿವರು
ಸಂಪುಟ ದರ್ಜೆ
ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರ
  1. ಕಾಗೋಡು ತಿಮ್ಮಪ್ಪ: ಕಂದಾಯ ಖಾತೆ
  2. ರಮೇಶ್ ಕುಮಾರ್: ಆರೋಗ್ಯ ಖಾತೆ
  3. ಬಸವರಾಜ ರಾಯರೆಡ್ಡಿ: ಉನ್ನತ ಶಿಕ್ಷಣ
  4. ಎಚ್.ವೈ. ಮೇಟಿ : ಅಬಕಾರಿ
  5. ತನ್ವೀರ್ ಸೇಠ್: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತ ಖಾತೆ ಹಾಗೂ ವಕ್ಫ್
  6. ಸಂತೋಷ್ ಲಾಡ್: ಕಾರ್ಮಿಕ
  7. ರಮೇಶ್ ಜಾರಕಿಹೊಳಿ: ಸಣ್ಣ ಕೈಗಾರಿಕೆ
  8. ಎಂ.ಆರ್ ಸೀತಾರಾಂ: ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನಾ
  9. ಎಸ್.ಎಸ್ ಮಲ್ಲಿಕಾರ್ಜುನ್ – ತೋಟಗಾರಿಕೆ, ಎಪಿಎಂಸಿ
ರಾಜ್ಯ ಸಚಿವರು
  1. ಪ್ರಮೋದ್ ಮಧ್ವರಾಜ್: ಮೀನುಗಾರಿಕೆ, ಬಂದರು
  2. ರುದ್ರಪ್ಪ ಲಮಾಣಿ: ಮುಜರಾಯಿ, ಜವಳಿ
  3. ಪ್ರಿಯಾಂಕ್ ಖರ್ಗೆ: ಐಟಿ ಬಿಟಿ ಮತ್ತು ಪ್ರವಾಸೋದ್ಯಮ
  4. ಈಶ್ವರ ಖಡ್ರೆ : ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ

[೫] [೬]

ಪ್ರಾತಿನಿಧ್ಯ ವಿಂಗಡಣೆ[ಬದಲಾಯಿಸಿ]

ಲಿಂಗಾಯತರು ಒಕ್ಕಲಿಗರು ಪರಿಶಿಷ್ಟ ಜಾತಿ ಮುಸ್ಲಿಂ ಕುರುಬ ಬ್ರಾಹ್ಮಣ ಈಡಿಗ ದ.ಕ.ಬಂಟ ಬಲಿಜ ಮರಾಠ ಗಂಗಾಮತ ಕ್ರೈಸ್ತ ನೇಕಾರ ರೆಡ್ಡಿ ಒಟ್ಟು
8 4 6 3 2 2 1 1 1 1 1 1 1 1 33

[೭]

ಹೊಸಬರ ಸಂಕ್ಷಿಪ್ತ ಪರಿಚಯ[ಬದಲಾಯಿಸಿ]

ಹೊಸ ಸಚಿವರ ಸಂಕ್ಷಿಪ್ತ ಪರಿಚಯ
(21-6-2016 ಮಂಗಳವಾರ):
ಕ್ರ.ಸಂ. ಹೆಸರು ಕ್ಷೇತ್ರ ಜನನ-ದಿನಾಂಕ ವಿದ್ಯೆ ಜಾತಿ ಪರಿಚಯ
1 ಕಾಗೋಡು ತಿಮ್ಮಪ್ಪ ಸಾಗರ 10-9-1932 ಬಿಕಾಂ.ಎಲ್`ಎಲ`ಬಿ ಈಡಿಗ 1962 ಸೋ.ಪಾರ್ಟಿಯಿಂದ ಸ್ಪರ್ದೆ
2 ರಮೇಶಕುಮಾರ್ ಶ್ರೀನಿವಾಸಪುರ 22-11-1949 ಬಿಎಸ್`ಸಿ ಬ್ರಾಹ್ಮಣ 1972 ಶಾಸಕ; 1980 ಪರಿಷತ್ ಸದಸ್ಯ
3 ತನ್ವೀರ್ ಹುಸೇನ್ ಮೈ..ನರಸಿಂಹರಾಜ ಪುರ 3-8-67 ಬಿ.ಬಿ.ಎಂ. ಸುನ್ನಿ 1989:1994:1999:2013ಶಾಸಕ
4 ಎಂ.ಆರ್ ಸೀತಾರಾಮ್ ಮಲ್ಲೇಶ್ವರ 4-4-1956 ಬಿಎಸ್`ಸಿ. ಬಲಿಜ 5ಬಾರಿ ಶಾಸಕರು.;ವಿಧಾನಸಬೆ ಸ್ಪೀಕರ್-1994-99
5 ಸಂತೋಷ್ ಲಾಡ್ ಸಂಡೂರು 27-2-1975 ಬಿ.ಕಾಂ ಮರಾಠಾ 2002 ರಿಂದ 4 ಅವಧಿ ಶಾಸಕ; 2004-06ಹಜ್ ಸಚಿವ
6 ರಮೇಶ ಜರಕಿಹೊಳಿ ಗೋಕಾಕ 1-6-1959 (ಬಿಎ) ವಾಲ್ಮೀಕಿ ವಿ.ಪ.ಸದಸ್ಯ.-2012ರಿಂದ; ಸೇವಾದಳ 1986
7 ಎಸ್`ಎಸ್`ಮಲ್ಲಿಕಾರ್ಜುನ ದಾವಣಗೆರೆ 22-9-1967 ಬಿ.ಕಾಂ. ಲಿಂಗಾಯತ ಪ.ಪಂ.ಸದಸ್ಯ;ಶಾಸಕ 2004; ಕಲಘಟಕಿ 2008,2013; ಕೆಪಿಸಿಸಿ ಪ್ರ.ಕಾರ್ಯದರ್ಶಿ
8 ಬಸವರಾಜ ರಾಯರೆಡ್ಡಿ ಯಲಬರ್ಗಾ 6-9-1656 ಬಿ.ಎ.ಎಲ್`ಎಲ`ಬಿ. ಲಿಂಗಾಯತ 1977ರಿಂದ ಸಕ್ರಿಯ-1999ರಿಂದ4ಬಾರಿ ಶಾಸಕ
9 ಎಚ್.ವೈ.ಮೇಟಿ ಗುಳೇದಗುಡ್ಡ 9-10-1946 ಎಸ್`ಎಸ್`ಎಲ್`ಸಿ ಕುರುಬ 1989-94;-96;2004-08; ಅರಣ್ಯಸಚಿವ 1994-96.ಬಾ.ಕೋಟ ಸಂಸದ; 1996;2013 ಶಾಸಕ.
10 ಪ್ರಮೋದ ಮಧ್ವರಾಜ್ ಉಡುಪಿ 17-10-68 ಪಿಯುಸಿ (ಬಿಇ) ಮೊಗವೀರ ಬ್ಲಾಕ್ ಕಾಂ.ಅಧ್ಯಕ್ಷ; ಯುಎಸ್`ಯುಐ ಉಪಾಧ್ಯಕ್ಷ; ರಾಜ್ಯ ಯುವ ಕಾಂ.ಸಮತಿ ಕಾರ್ಯದರ್ಶಿ
11 ರುದ್ರಪ್ಪ ಲಮಾಣಿ ಹಾವೇರಿ; ಬ್ಯಾಡಗಿ 1-6-1959 ಬಿಎ.ಎಲ್`ಎಲ್`ಬಿ ಲಂಬಾಣಿ 2013 ಹಾವೇರಿ; ಬ್ಯಾಡಗಿ 1999-2004; 1985-89 ಧಾರವಾಡ ಲಿ.ಪ.ಸದಸ್ಯ.1980-ಸಕ್ರಿಯ
12 ಪ್ರಿಯಾಂಕ್ ಖರ್ಗೆ ಚಿತ್ತಾಪುರ 22-11-1978 1ನೇ ಪಿಯುಸಿ ದಲಿತ (ಬಲಗೈ) ಕ.ಪ್ರ.ಕಾಂ.ಉಪಾಧ್ಯಕ್ಷ; 2013 ಶಾಸಕ.
13 ಈಶ್ವರ ಖಂಡ್ರೆ ಭಾಲ್ಕಿ 15-1-1962 ಬಿಇ (ಮೆ) ಲಿಂಗಾಯತ 2008;2013 ಶಾಸಕ; ಜಿ.ಕಾಂ.ಅಧ್ಯಕ್ಷ.

[೮]

ಗಣಪತಿ ಆತ್ಮಹತ್ಯೆ ಪ್ರಕರಣ: ಜಾರ್ಜ್‍ರಿಂದ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಸಲ್ಲಿಕೆ[ಬದಲಾಯಿಸಿ]

  • ದಿ.18/07/2016:ಸೋಮವಾರ:ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಕೆ.ಜೆ.ಜಾರ್ಜ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಜಾರ್ಜ್‌ ರಾಜೀನಾಮೆ ಪತ್ರ ಸಲ್ಲಿಸಿದರು.ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ರಾಜ್ಯಪಾಲರಿಗೆ ಕಳುಹಿಸಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದಾರೆ. ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ತಮ್ಮ ಸಾವಿಗೆ ಸಚಿವ ಕೆ.ಜೆ.ಜಾರ್ಜ್, ಎಡಿಜಿಪಿ ಎ.ಎಂ.ಪ್ರಸಾದ್ ಮತ್ತು ಐಜಿಪಿ ಪ್ರಣವ್‌ ಮೊಹಾಂತಿ ಅವರು ಕಾರಣ ಎಂದು ಆರೋಪ ಮಾಡಿದ್ದರು.
  • ಜಾರ್ಜ್ ಬಳಿ ಇದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಮು.ಮಂ.ಯವರೇ ಇಟ್ಟುಕೊಂಡಿದ್ದಾರೆ.
  • ಈ ಸಂಬಂಧ ಗಣಪತಿ ಅವರ ಪುತ್ರ ನೇಹಾಲ್ ದಾಖಲಿಸಿದ್ದ ಖಾಸಗಿ ದೂರನ್ನು ಸೋಮವಾರ ವಿಚಾರಣೆ ನಡೆಸಿದ ಮಡಿಕೇರಿಯ ಪ್ರಧಾನ ಸಿವಿಲ್ ನ್ಯಾಯಾಲಯ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿತ್ತು. ಇದರ ಬೆನ್ನಲ್ಲೇ, ಜಾರ್ಜ್ ರಾಜೀನಾಮೆ ನೀಡಿದ್ದಾರೆ. ಅಲ್ಲದೇ, ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ಕಡ್ಡಾಯ ರಜೆ ಕಳುಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸುಗಮ ತನಿಖೆಗೆ ರಾಜೀನಾಮೆ: ನನ್ನ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ. ತನಿಖೆ ಸುಗಮವಾಗಿ ನಡೆಯಲು ರಾಜೀನಾಮೆ ನೀಡಿದ್ದೇನೆ ಎಂದು ಕೆ.ಜೆ.ಜಾರ್ಜ್ ಹೇಳಿದ್ದಾರೆ.
  • ಪೊಲೀಸ್ ಉಪ ವರಿಷ್ಠಾಧಿಕಾರಿ ಎಂ.ಕೆ. ಗಣಪತಿ, ಜುಲೈ 7 ರಂದು ಒಂದು ಲಾಡ್ಜ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಜಾರ್ಜ್ ಹಾಗೂ ಎರಡು ಐಪಿಎಸ್ ಅಧಿಕಾರಿಗಳು ಅವರಿಗೆ ಕಿರುಕುಳ ನೀಡಿದ್ದಾಗಿ ಹೇಳಿದ್ದರು. ಇದರಿಂದ ಕಾಂಗ್ರೆಸ್ ಆಳ್ವಿಕೆ ರಾಜ್ಯದಲ್ಲಿ ವಿವಾದಕ್ಕೆ ಕಾರಣವಾಯಿತು.

[೯] [೧೦]

ಎಂ ಕೃಷ್ಣಪ್ಪ ನೂತನ ಸಚಿವ[ಬದಲಾಯಿಸಿ]

  • ಸೆಪ್ಟೆಂಬರ್, 05,2016: ಗಣೇಶ ಹಬ್ಬದ ದಿನದಂದು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆಯಾಗಿದೆ. ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಅವರು ನೂತನ ಸಚಿವರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೋಮವಾರ ಸಂಜೆ 4.30ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕೃಷ್ಣಪ್ಪ ಪ್ರಮಾಣ ವಚನ ತೆಗೆದುಕೊಂಡರು. ಎಂ. ಕೃಷ್ಣಪ್ಪ ಅವರನ್ನು ಒಕ್ಕಲಿಗ ಕೋಟಾದಡಿ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದ್ದು ವಸತಿ ಖಾತೆಯ ಜವಾಬ್ದಾರಿ ವಹಿಸುವ ಸಾಧ್ಯತೆ ಹೆಚ್ಚಿದೆ
  • ಪಶು ಸಂಗೋಪನಾ ಖಾತೆ ಸಚಿವ ಅರಕಲಗೂಡು ಮಂಜು ಹಾಗೂ ಗಣಿಗಾರಿಕೆ ಸಚಿವ ವಿನಯ್ ಕುಲಕರ್ಣಿ ಅವರಿಗೆ ಬಡ್ತಿ ನೀಡಿ ಕ್ಯಾಬಿನೆಟ್ ದರ್ಜೆಗೇರಿಸಲಾಗಿದೆ
  • ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡಿದ್ದರಿಂದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಹೀಗಾಗಿ ಸಚಿವ ಸಂಪುಟದಲ್ಲಿ ಎರಡು ಸಚಿವ ಸ್ಥಾನ ಖಾಲಿ ಉಳಿದಿದ್ದವು. ಎರಡೂ ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗದ ಸಿದ್ದರಾಮಯ್ಯ, ಒಂದನ್ನು ಖಾಲಿ ಉಳಿಸಿಕೊಂಡಿದ್ದಾರೆ.

[೧೧]

ಶಾಸಕ ಕೆ.ಜೆ. ಜಾರ್ಜ್‌ ಅವರು ಇಂದು ಮರಳಿ ಸಂಪುಟಕ್ಕೆ[ಬದಲಾಯಿಸಿ]

ದಿ.26-9-2016ಸೋಮವಾರ ಬೆಳಗ್ಗೆ 10.15ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಜಾರ್ಜ್ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜು.೧೮ ರಂದು ರಾಜಿನಾಮೆ ಕೊಟ್ಟಿದ್ದ ಜಾರ್ಜ್ ಎರಡೇ ತಿಂಗಳಲ್ಲಿ ಮತ್ತೆ ಸಚಿವ ಸ್ಥಾನಕ್ಕೆ ಮರಳಿದ್ದಾರೆ. ಮತ್ತೆ ಸಚಿವ ಸಂಪುಟ ಸೇರಿರುವ ಜಾರ್ಜ್ ಅವರಿಗೆ ಈ ಹಿಂದೆ ನಿರ್ವಹಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡುವ ಸಾಧ್ಯತೆ ಇದೆ.[೧೨]

ಮಂತ್ರಿಮಂಡಲ ಪುನರ್ರಚನೆ ಮತ್ತು ಖಾತೆ ಮರು ಹಂಚಿಕೆ[ಬದಲಾಯಿಸಿ]

  • ದಿ.೧-೯-೨೦೧೭ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂತ್ರಿಮಂಡಲ ಪುನರ್ರಚನೆಮಾಡಿ ಖಾತೆಗಳನ್ನು ಮರುಹಂಚಿಕೆ ಮಾಡಿದ್ದಾರೆ.
  • ಜಿ. ಪರಮೇಶ್ವರ ಅವರಿಂದ ತೆರವಾದ ಗೃಹ ಖಾತೆಯನ್ನು (ಹೊಸ ಸೇರ್ಪಡೆ) ರಾಮಲಿಂಗಾರೆಡ್ಡಿಗೆ ಕೊಡಲಾಗಿದೆ.
  • ಸಂಪುಟಕ್ಕೆ ಹೊಸತಾಗಿ ಸೇರಿದ ವಿಧಾನ ಪರಿಷತ್‌ ಸದಸ್ಯ ಆರ್‌.ಬಿ. ತಿಮ್ಮಾಪೂರ ಅವರಿಗೆ ಅಬಕಾರಿ ಖಾತೆ.
  • ಸಂಪುಟಕ್ಕೆ ಹೊಸತಾಗಿ ಸೇರಿದ, ಎಂ.ಸಿ. ಮೋಹನ ಕುಮಾರಿ (ಗೀತಾ ಮಹದೇವ ಪ್ರಸಾದ್‌) ಅವರಿಗೆ ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆ
  • ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಕೌಶಲ್ಯ ಅಭಿವೃದ್ಧಿ ಹೊಣೆ.
  • ಸಣ್ಣ ಕೈಗಾರಿಕೆ ಖಾತೆ ಹೊಂದಿದ್ದ ರಮೇಶ ಜಾರಕಿಹೊಳಿ ಅವರಿಗೆ ಸಹಕಾರ ಖಾತೆ.
  • ಸಂಪುಟಕ್ಕೆ ಹೊಸತಾಗಿ ಸೇರಿದ, ಎಚ್‌.ಎಂ. ರೇವಣ್ಣ ಅವರಿಗೆ ಸಾರಿಗೆ ಖಾತೆ, ಅಬಕಾರಿ ಖಾತೆ;
  • ರಾಜ್ಯ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆಯವರಿಗೆ (ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ),
  • ರುದ್ರಪ್ಪ ಮಾನಪ್ಪ ಲಮಾಣಿ -(ಜವಳಿ ಮತ್ತು ಮುಜರಾಯಿ), ಖಾತೆ.
  • ಪ್ರಮೋದ್‌ ಮಧ್ವರಾಜ್‌ (ಯುವಜನ ಸೇವೆ ಮತ್ತು ಮೀನುಗಾರಿಕೆ) ಖಾತೆ.
  • ಈಶ್ವರ ಬಿ. ಖಂಡ್ರೆ ( ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ) ಅವರಿಗೆ ಸಂಪುಟ ದರ್ಜೆ ಸ್ಥಾನಕ್ಕೆ ಬಡ್ತಿ ನೀಡಲಾಗಿದೆ.

[೧೩]

ಹೊಸ ಸಂಪುಟ ರಚನೆ ಸೆಪ್ಟಂಬರ್ ೨೦೧೭[ಬದಲಾಯಿಸಿ]

  • ಸಿದ್ದರಾಮಯ್ಯ: ಮುಖ್ಯಮಂತ್ರಿ; ಸಿಬ್ಬಂದಿ; ಆಡಲಿತ ಸುಧಾರಣೆ; ಸಣ್ಣ ಉಳಿತಾಯ,-ಲಾಟರಿ; ಗುಪ್ತದಳ; ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ.
  • ರಾಮಲಿಂಗರೆಡ್ಡಿ: –ಗೃಹ.
  • ಆರ್ ವಿ ದೇಶಪಾಂಡೆ ಬೃಹತ್ ಮತ್ತುಮಧ್ಯಮ ಕೈಗಾರಿಕೆ ಮೂಲ ಸೌಲಭ್ಯ ಅಭಿವೃದ್ಧಿ
  • ಟಿ ಬಿ ಜಯಚಂದ್ರ : ಕಾನೂನು ಸಂಸದೀಯ ವ್ಯವಹಾರಗಳು ; ಸಣ್ನ ನೀರಾವರಿ
  • ರಮಾನಾಥ ರೈ: ಅರಣ್ಯ, ಪರಿಸರ
  • ಎಚ್ ಕೆ ಪಾಟೀಲ್: ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್
  • ಡಾ ಎಚ್ ಸಿ ಮಹದೇವಪ್ಪ: ಲೋಕೋಪಯೋಗಿ; ಬಂದರು; ಒಳನಾಡು;
  • ಕೆ ಜೆ ಜಾರ್ಜ್ : ಬೆಂಗಳೂರು ನಗರಾಭಿವೃದ್ಧಿ ನಗರ ಯೋಜನೆ;
  • ಯು ಟಿ ಖಾದರ್: ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ;
  • ಎಂ ಬಿ ಪಾಟೀಲ್: ಜನಸಂಪನ್ಮೂಲ
  • ಎಚ್ ಆಂಜನೇಯ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ
  • ರೋಶನ್ ಬೇಗ್: ನಗರಾಭಿವೃದ್ಧಿ, ಹಾಗೂ ಹಜ್ ಖಾತೆ
  • ಡಿ.ಕೆ.ಶಿವಕುಮಾರ್ :ಇಂಧನ
  • ಉಮಾಶ್ರೀ :ಮಹಿಳಾಮತ್ತು ಮಕ್ಕಳ ಅಭಿವೃದ್ಧಿ; ವಿಕಲಚೇತನ ಹಾಗೂ ಹಿರಿಯ ನಾಗರಕರು; ಸಂಸ್ಕೃತಿ;
  • ಕೃಷ್ಣಬೈರೇಗೌಡ : ಕೃಷಿ
  • ರಮೇಶ್ ಜಾರಕಿಹೊಳಿ: ಸಹಕಾರ
  • ಎಂ.ಆರ್.ಸೀತಾರಾಂ :ಯೋಜನೆ ಮತ್ತು ಸಾಂಖಿಕ; ವಿಜ್ಞಾನ ಮತ್ತು ತಂತ್ರಜ್ಞಾನ.
  • ಸಂತೊಷ್ ಎಸ್ ಲಾಡ್ : ಕಾರ್ಮಿಕ; ಕೌಶಲ ಅಭಿವೃದ್ಧಿ;
  • ಬಸವರಾಜ ರಾಯರೆಡ್ಡಿ: ಉನ್ನತ ಶಕ್ಷಣ;
  • ಎಂ.ಕೃಷ್ಣಪ್ಪ : ವಸತಿ;
  • ವಿನಯ ಕುಲಕರ್ಣಿ : ಗಣಿ ಮತ್ತು ಭೂವಿಜ್ಞಾನ;
  • ಎ. ಮಂಜು  : ಪಶುಸಂಗೋಪನೆ ರೇಷ್ಮೆ
  • ಪ್ರಿಯಾಂಕ ಖರ್ಗೆ :ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ; ಪ್ರವಾಸೋದ್ಯಮ;
  • ರುದ್ರಪ್ಪ ಮಾನಪ್ಪ ಲಮಾಣಿ :ಜವಳಿ ಮತ್ತು ಮುಜರಾಯಿ;
  • ಈಶ್ವರ ಬಿ ಖಂಡ್ರೆ  : ಪೌರಾಡಳಿತ ಹಾಗೂ ಸಾರ್ವಜನಿಕ ಉದ್ಯಮೆಗಳು;
  • ಪ್ರಮೋದ ಮಧ್ವರಾಜ್ :ಯುವಜನ ಮತ್ತು ಮೀನುಗಾರಿಕೆ;
  • ಎಚ್.ಎಂ.ರೇವಣ್ಣ :ಸಾರಿಗೆ;
  • ಆರ್.ಬಿ.ತಿಮ್ಮಾಪುರ :ಅಬಕಾರಿ
  • ಎಂ.ಸಿ. ಮೊಹನಕುಮಾರಿ : ಸಣ್ನಕೈಗಾರಿಕೆ ; ಸಕ್ಕರೆ.

[೧೪]

ಕಾರ್ಯಾಂಗ[ಬದಲಾಯಿಸಿ]

ಮುಖ್ಯ ಕಾರ್ಯದರ್ಶಿ: ಸುಭಾಷ್ ಚಂದ್ರ ಕುಂಠಿಯಾ

ಹಣಕಾಸು ಕಾರ್ಯದರ್ಶಿ: ಐ ಎಸ್ ಎನ್ ಪ್ರಸಾದ್ [೧೫]

ಗೃಹ ಕಾರ್ಯದರ್ಶಿ: ಪಿ ಕೆ ಗರ್ಗ್ [೧೬]

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. http://www.oneindia.com/2010/11/01/kannadigas-celebrate-karnata-rajyotsava-on-nov-1.html
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
  3. http://www.prajavani.net/article/%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%B0%E0%B2%BE%E0%B2%AE%E0%B2%AF%E0%B3%8D%E0%B2%AF-%E0%B2%B8%E0%B2%82%E0%B2%AA%E0%B3%81%E0%B2%9F-%E0%B2%AD%E0%B2%B0%E0%B3%8D%E0%B2%A4%E0%B2%BF
  4. ಪುನರ್ರಚನೆ
  5. 13-ಸಚಿವರಿಂದ-ಪ್ರಮಾಣ-ವಚನ-ಸ್ವೀಕಾರ
  6. [೨] 21-6-2016:kannadaprabha:official-portfolios-of-ministers-allocated
  7. ಸಿದ್ದರಾಮಯ್ಯ-ಸಚಿವ-ಸಂಪುಟದ-ಹೊಸ-ಸಚಿವರ-ಪರಿಚಯ
  8. ಸಚಿವ-ಸಂಪುಟದ-ಹೊಸ-ಸಚಿವರ-ಪರಿಚಯ
  9. hindustantimes:18/07/2016
  10. 18/07/2016:prajavani.net/article/ಸಚಿವ-ಸ್ಥಾನಕ್ಕೆ-ಕೆಜೆಜಾರ್ಜ್-ರಾಜೀನಾಮೆ-0
  11. ಕೃಷ್ಣಪ್ಪ ನೂತನ ಸಚಿವ
  12. http://www.prajavani.net/news/article/2016/09/26/440570.html
  13. ಸಂಪುಟ ವಿಸ್ತರಣೆ:1 Sep, 2017
  14. ರೇವಣ್ಣ , ತಿಮ್ಮಾಪೂರ್‌, ಗೀತಾ ಮಹದೇವ ಪ್ರಸಾದ್‌ ಪ್ರಮಾಣ ವಚನ ಸ್ವೀಕಾರ;ಪ್ರಜಾವಾಣಿ ವಾರ್ತೆ;1 Sep, 2017
  15. http://www.finance.kar.nic.in/
  16. http://home.kar.nic.in/contactus.html