ಕೋಲಾರ
ಕೋಲಾರ | |
![]() | |
ರಾಜ್ಯ - ಜಿಲ್ಲೆ |
ಕರ್ನಾಟಕ - ಕೋಲಾರ |
ನಿರ್ದೇಶಾಂಕಗಳು | |
ವಿಸ್ತಾರ | km² |
ಸಮಯ ವಲಯ | IST (UTC+5:30) |
ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |

ಕೋಲಾರ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಇಲ್ಲಿರುವ ಚಿನ್ನದ ಗಣಿಗಳು ಮತ್ತು ಚಿನ್ನದ ಗಣಿಗಾರಿಕೆಗೆ ಕೋಲಾರ ಜಿಲ್ಲೆ ಪ್ರಸಿದ್ಧ. ಕೋಲಾರ ನಗರ ಈ ಜಿಲ್ಲೆಯ ಕೇಂದ್ರಸ್ಥಾನ. ಕೋಲಾರ ಗಂಗರ ರಾಜಧಾನಿಯಾಗಿತ್ತು ಇದನ್ನು ಮೊದಲು ಕುವಲಾಲಪುರ ಅಂತಲೂ ಕರೆಯುತ್ತಿದ್ದರು. ಕಾಲ ಕ್ರಮೇಣ ಕೋಲಾರವಾಯಿತು. ಗಂಗರು ಕಟ್ಟಿಸಿದಂತ ಹಲವಾರು ಸ್ಥಳಗಳು ಕೋಲಾರದಲ್ಲಿ ಮತ್ತು ಕೋಲಾರ ಜಿಲ್ಲೆಯಲ್ಲಿವೆ ಅದರಲ್ಲೂ ಮುಖ್ಯವಾಗಿ ಗಂಗರು ಕಟ್ಟಿಸಿದ ಕೋಲಾರಮ್ಮ ದೇವಾಲಯ ಜಿಲ್ಲೆಯಲ್ಲಿಯೆ ಪ್ರಸಿದ್ದಿಯನ್ನು ಪಡೆದಿದೆ.[೧]
ಕೋಲಾರ ಜಿಲ್ಲೆಯ ಬಗ್ಗೆ[ಬದಲಾಯಿಸಿ]
ನಾಡಿಗೆ ಮತ್ತು ರಾಷ್ಟ್ರಕ್ಕೆ ತನ್ನೊಡಲ ಚಿನ್ನವನ್ನು ಧಾರೆಯೆರೆದು ‘ಚಿನ್ನದ ನಾಡು’ ಎಂದೇ ಹೆಸರಾಗಿದ್ದ ಕೋಲಾರ ಜಿಲ್ಲೆಯು ನಾಡಿನ ಕೃಷಿ, ಸಾಹಿತ್ಯ, ರಾಜಕೀಯ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿದ ಗೌರವಕ್ಕೆ ಪಾತ್ರವಾಗಿದೆ. ಸಿಲ್ಕ್ ಅಂಡ್ ಮಿಲ್ಕ್, ಹಣ್ಣು ಮತ್ತು ತರಕಾರಿಗಳ ರಾಜಧಾನಿ ಎನಿಸಿರುವ ಕೋಲಾರ ಜನಪದ ಹೋರಾಟಗಳು ಮತ್ತು ಜನಪದ ಸಂಸ್ಕೃತಿಯನ್ನು ಮೆರೆದಿದೆ . ಆಗಸ್ಟ್ ೨೦೦೭ರಂದು ಚಿಕ್ಕಬಳ್ಳಾಪುರ ಉಪವಿಭಾಗವು ಸ್ವತಂತ್ರ ಜಿಲ್ಲೆಯಾಗಿ ಕೋಲಾರದಿಂದ ವಿಭಜನೆ ಹೊಂದಿದೆ.ಕೋಲಾರ ಜಿಲ್ಲೆಯ ಮುಖ್ಯ ಕಸುಬುಗಳೆಂದರೆ ಕೃಷಿ, ಪಶು ಸಾಕಾಣಿಕೆ ಹಾಗೂ ರೇಷ್ಮೆ ಉದ್ಯಮ. ಶಿವಾರ ಪಟ್ಟಣ ಕಲ್ಲಿನಿಂದ ಕೆತ್ತಿರುವ ಶಿಲ್ಪಕಲೆಗೆ ಪ್ರಖ್ಯಾತಿ.ಕೋಲಾರನ್ನು ಚಿನ್ನದ ಗಣಿ ಎಂದು ಸಹ ಕರೆಯುತ್ತಾರೆ
ಇತಿಹಾಸ[ಬದಲಾಯಿಸಿ]
ಐತಿಹಾಸಿಕವಾಗಿ ಕೋಲಾರವು ೨ ನೇ ಶತಮಾನದಲ್ಲಿಯೇ ಗಂಗರ ರಾಜಧಾನಿಯಾಗಿದ್ದು, ನಂತರ ಚೋಳರ ಆಳ್ವಿಕೆಗೆ ಒಳಪಟ್ಟಿದೆ. ೪ ರಿಂದ ೧೯ ನೇ ಶತಮಾನದವರೆಗೆ ಕದಂಬ, ಗಂಗ, ಪಲ್ಲವ, ಚೋಳ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಅರಸರು, ಮೈಸೂರಿನ ಅರಸರು, ಪಾಳೇಗಾರರು ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು.
ಜನಸಂಖ್ಯೆ[ಬದಲಾಯಿಸಿ]
೨೦೨೧ ರ ಆದಾರ್ ನೊಂದಣಿ ಪ್ರಕಾರ, ಕೋಲಾರ ಜಿಲ್ಲೆಯ ಜನಸಂಖ್ಯೆಯು 16,53,320 ಆಗಿದೆ ಹಾಗೂ ೨೦೧೧ ರ ಜನಗಣತಿಯ ಪ್ರಕಾರ 15,36,411. ಇದರಲ್ಲಿ ಪುರುಷರ ಸಂಖ್ಯೆ 776,396 ಹಾಗು ಸ್ತೀಯರ ಸಂಖ್ಯೆ 760,005 ಇದೆ .[೨]
ಜಿಲ್ಲೆಯ ಪ್ರಮುಖರು[ಬದಲಾಯಿಸಿ]
ಸಾಹಿತ್ಯ, ಸಂಸ್ಕೃತಿ ಹಾಗೂ ರಾಜಕೀಯ ಕ್ಷೇತ್ರಗಳಿಗೆ ವಿಶೇಷ ಕೊಡುಗೆ ನೀಡಿರುವ ಈ ಜಿಲ್ಲೆಯು ನಾಡಿನ ಮೊದಲ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ಅವರನ್ನು ಕೊಟ್ಟ ಹೆಗ್ಗೆಳಿಕೆಗೆ ಪಾತ್ರವಾಗಿದೆ.
- ಶ್ರೀ ಟಿ ಚನ್ನಯ್ಯ ಕರಡು ಸಮಿತಿ ಸದಸ್ಯರು, ಡಾ. ಬಿಆರ್ ಅಂಬೇಡ್ಕರ್ ಅವರಿಗೆ ಆತ್ಮೀಯರು, ಭಾರತದ ಮೊದಲ ತಂಡದ ರಾಜ್ಯ ಸಭಾ ಸದಸ್ಯರು ಮೈಸೂರು ರಾಜ್ಯದ ಮಂತ್ರಿಯಾಗಿದ್ದರು ಬೆಂಗಳೂರು ನಗರ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು ಕರ್ನಾಟಕ ವಿದ್ಯುತ್ ಶಕ್ತಿ ಮಂಡಳಿ ಅಧ್ಯಕ್ಷರಾಗಿದ್ದರು ಕೋಲಾರಕ್ಕೆ ವಿದ್ಯುತ್ ತರಲು ನೀರು ತರಲು ಹೋರಾಡಿದವರು, ಉತ್ತಮವಾದ ನಗರ ರಚನೆ ಮಾಡಿ ಕೋಲಾರದ ಗಾಂಧಿನಗರ ನಿರ್ಮಿಸಿದವರು
- ಕೈವಾರ ನಾರಣಪ್ಪ
- ಸರ್.ಎಂ.ವಿಶ್ವೇಶ್ವರಯ್ಯ
- ಮಲ್ಲಿಕರ್ಜುನ ರೆಡ್ಡಿ ಸೂಕ್ಷ್ಮ ಕಲೆ ಗಿನ್ನೆಸ್ ವಿಶ್ವ ದಾಖಲೆ.ತೊಪ್ಪನಹಳ್ಳಿ.
- ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ
- ತೀ.ತಾ. ಶರ್ಮ.
- ಗಟ್ಟಹಳ್ಳಿ ಆಂಜನಪ್ಪಸ್ವಾಮಿ
- ಡಿ. ವಿ. ಗುಂಡಪ್ಪ
- ಸೌಂದರ್ಯ
- ಅ.ನಾ.ಪ್ರಹ್ಲಾದರಾವ್ ಪದಬಂಧ ರಚನೆಯಲ್ಲಿ ಲಿಮ್ಕಾ ರಾಷ್ಟ್ರೀಯ ದಾಖಲೆಕಾರ
- [[ಪಿಚ್ಚಳ್ಳಿ ಶ್ರೀನಿವಾಸ್] ಗಾಯಕ ಮತ್ತು ರಂಗಕರ್ಮಿ
- ಕುಪ್ನಳ್ಳಿ ಎಂ. ಬೈರಪ್ಪ, ಕವಿ ಮತ್ತು ವಿಮರ್ಶಕರು
ಆಕರ್ಷಣೆಗಳು[ಬದಲಾಯಿಸಿ]
ಕೋಲಾರ ಜಿಲ್ಲೆಯಲ್ಲಿರುವ ಕೆಲವು ಚಾರಿತ್ರಿಕ ಸ್ಥಳಗಳೆ೦ದರೆ[೩]
- ಚಿನ್ನದ ಗಣಿ (ಕೆ.ಜಿ.ಎಫ್),
- ಮುಳಬಾಗಿಲು,
- ಬ೦ಗಾರು ತಿರುಪತಿ,
- ಕೋಟಿಲಿ೦ಗೇಶ್ವರ,
- ಅ೦ತರಗ೦ಗೆ,
- ಮಾರ್ಕ೦ಡೇಯ ಪರ್ವತ,
- ಸೋಮೇಶ್ವರ ದೇವಸ್ಥಾನ,
- ಕೋಲಾರಮ್ಮ ದೇವಸ್ಥಾನ,
- ಕುರುಡುಮಲೆ,
- ಆವಣಿ,
- ಚಿಕ್ಕ ತಿರುಪತಿ
- ಮುರುಗಮಲ್ಲ ದರ್ಗ(ಚಿಂತಾಮಣಿ),
- ನಂದಿ ಬೆಟ್ಟ (ಈಗ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದೆ),
- ವಿಧುರಾಶ್ವತ್ಥ (ಗೌರಿಬಿದನೂರು)
- ಶ್ರೀ ಮನ್ಮಾಧವ ತೀಥ೯ರ ಮೂಲ ಮಹಾ ಸಂಸ್ಠಾನ ಮಠ ಇದೆ.
- ಮರುಗಮಲ್ಲ ಗ್ರಾಮ ಮುಸ್ಲಿಂರ ಪವಿತ್ರ ಕ್ಷೇತ್ರವಾಗಿದೆ.
ನಗರದ ಸುಧಾರಣೆ[ಬದಲಾಯಿಸಿ]
- ಕೋಲಾರದಲ್ಲಿ ಕಸದ ಪ್ರಮಾಣ ಮತ್ತು ಪ್ಲಾಸ್ಟಿಕ್ ಬಳಕೆ ಹೆಚ್ಚಿರುವುದನ್ನು ಕಂಡು, 'ಗೋ ಪ್ಲಾಗ್![೪]' ಎಂಬ ವಿಶಿಷ್ಟ ಅಭಿಯಾನವನ್ನು ಸುಮಂಗಲಿ ನೋಹ ಪ್ರಾರಂಭಿಸಿದ್ದಾರೆ. ಈ ಸಂಸ್ಥೆಯು ಕೋಲಾರವನ್ನು ಕಸ ಮುಕ್ತಗೊಳಿಸಲು ಪಣತೊಟ್ಟಿದೆ.
- ಹೆಚ್ಚಿನ ಹಳೆಯ ಕಟ್ಟಡಗಳನ್ನು ಬಿಳಿಸಿ, ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಇದನ್ನೂ ನೋಡಿ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ ಕೋಲಾರ ಜಿಲ್ಲಾ ದರ್ಶನ ಒಂದು ನೋಟ[ಶಾಶ್ವತವಾಗಿ ಮಡಿದ ಕೊಂಡಿ]
- ↑ Kolar District : Census 2011 data
- ↑ ಕೋಲಾರದ ಪ್ರೇಕ್ಷಣೀಯ ಸ್ಥಳಗಳು[ಶಾಶ್ವತವಾಗಿ ಮಡಿದ ಕೊಂಡಿ]
- ↑ https://www.prajavani.net/585755.html
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages using div col with unknown parameters
- ಭೂಗೋಳ
- ಕರ್ನಾಟಕದ ಜಿಲ್ಲೆಗಳು
- ಕೋಲಾರ ಜಿಲ್ಲೆಯ ತಾಲೂಕುಗಳು
- ಕರ್ನಾಟಕದ ಪ್ರಮುಖ ಸ್ಥಳಗಳು
- ಭಾರತದ ಹಿಂದಿನ ರಾಜಧಾನಿ ನಗರಗಳು