ಕೋಲಾರಮ್ಮ ದೇವಸ್ಥಾನ
ಗೋಚರ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಕೋಲಾರಮ್ಮ ದೇವಾಲಯಗಂಗರ ಕಾಲದಲ್ಲೇ ನಿರ್ಮಾಣವಾಗಿದೆ ಎಂದು ಚರಿತ್ರೆ ಹೇಳುತ್ತದೆ. ಇದು ಅದ್ಭುತ ಶಿಲ್ಪಕಲೆಯಿಂದ ಕೂಡಿದೆ.
ಪರಿಚಯ
[ಬದಲಾಯಿಸಿ]- ಇಲ್ಲಿ ಗಂಗರ ಕಾಲದಲ್ಲೇ ನಿರ್ಮಾಣವಾಗಿ, ಚೋಳರ ಕಾಲದಲ್ಲಿ ಜೀರ್ಣೋದ್ಧಾರಗೊಂಡ ಕೋಲಾರಮ್ಮ ದೇವಾಲಯ ವಾಸ್ತು ವೈಭವದಿಂದ ಕೂಡಿದೆ. ಪ್ರಧಾನ ದೇವಾಲಯ ಪೂರ್ವಾಭಿಮುಖವಾಗಿದೆ. ದೇವಾಲಯದ ವಿಸ್ತಾರವಾದ ಮಂಟಪವು ಉತ್ತರಾಭಿಮುಖವಾಗಿದೆ. ದೇವಾಲಯ ಸಾಮಾನ್ಯ ದ್ರಾವಿಡ ಶೈಲಿಯಲ್ಲಿದೆ. ದೇವಾಲಯದ ಪ್ರವೇಶ ದ್ವಾರವೇ ಆಕರ್ಷಣೀಯ. ಮಹಾದ್ವಾರ ಅದ್ಭುತ ಶಿಲ್ಪಕಲೆಯಿಂದ ಶ್ರೀಮಂತವಾಗಿದೆ.
- ಸುರಳಿಯಾಕಾರದ ವರ್ತುಲಗಳಲ್ಲಿ ಮದನಿಕೆಯರ ಶಿಲ್ಪಗಳಿವೆ. ೨೦ ಅಡಿಗಳಿಗೂ ಹೆಚ್ಚು ಎತ್ತರ ಇರುವ ಈ ದ್ವಾರಗೋಪುರಗಳ ಕಲ್ಲುಕಂಬಗಳಲ್ಲಿ ಅಪರೂಪದ ಶಿಲ್ಪಾಲಂಕಾರಗಳಿವೆ. ಕೃಷ್ಣ, ಪರಶುರಾಮ, ಬಲರಾಮ, ಬಿಲ್ಲು ಹಿಡದ ಸ್ತ್ರೀವಿಗ್ರಹ, ಕುಂಭ, ಶುಕ, ಪ್ರಭಾವಳಿಗಳಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಈ ಉಬ್ಬುಶಿಲ್ಪದಲ್ಲಿ ಶಿಲ್ಪಿ ಹೆಣೆದ ಜಡೆಯನ್ನು ಅತ್ಯಂತ ಮನಮೋಹಕವಾಗಿ ಕಡೆದಿದ್ದಾರೆ.
- ಒಳ ಕಂಬಗಳಲ್ಲಿ ಮಿಥುನಶಿಲ್ಪಗಳನ್ನು ಹೋಲುವಂಥ ಕೆತ್ತನೆಗಳಿವೆ. ಗರ್ಭಗೃಹದಲ್ಲಿ ಸಪ್ತಮಾತೃಕೆಯರ ಮತ್ತು ಅಷ್ಟಭುಜಗಳ ಮಹಿಷಾಸುರಮರ್ದಿನಿಯ ರೂಪದಲ್ಲಿರುವ ಕೋಲಾರಮ್ಮ ತಾಯಿ ವಿಗ್ರಹವಿದೆ. ಇದರ ಬಲಭಾಗದಲ್ಲಿರುವ ಗುಡಿಯಲ್ಲಿ ಸಪ್ತಮಾತೃಕೆಯರ ಮೂರ್ತಿಗಳಿವೆ. ದೇವಿಯ ಮೇಲೆ ವೃಶ್ಚಿಕ ಶಿಲ್ಪವಿದೆ. ಕಾಲಭೈರವೇಶ್ವರನ ವಿಗ್ರಹವೂ ಇದೆ.
- ವಿಗ್ರಹದ ಮೂಗು ವಿರೂಪವಾಗಿರುವ ಕಾರಣ ಇದನ್ನು 'ಮೂಕನಾಚ್ಚಾರಮ್ಮ' ಎಂದೂ ಸ್ಥಳೀಯರು ಕರೆಯುತ್ತಾರೆ. ದೇವಿಗೆ ಪೂಜೆ ಮಾಡಿಸಿ, ತಾಯಿತ ಕಟ್ಟಿಸಿಕೊಳ್ಳಲು ನಿತ್ಯ ಇಲ್ಲಿಗೆ ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ಬೆಂಗಳೂರಿನಿಂದ ಕೋಲಾರಕ್ಕೆ ನೇರ ಬಸ್ ಸೌಕರ್ಯವಿದೆ. ರಸ್ತೆಯೂ ಉತ್ತಮವಾಗಿದೆ. ಜಿಲ್ಲಾ ಕೇಂದ್ರವಾದ ಕೋಲಾರದಲ್ಲಿ ಉಳಿಯಲು ಹೋಟೆಲ್ ವ್ಯವಸ್ಥೆ ಇದೆ.
ನೋಡಬೇಕಾದ ಸ್ಥಳಗಳು
[ಬದಲಾಯಿಸಿ]ಕೋಲಾರ ಸುತ್ತಮುತ್ತ ನೋಡಬೇಕಾದ ಸ್ಥಳಗಳು -
- ಅಂತರಗಂಗೆ,
- ಕುರುಡುಮಲೆ,
- ಮಾರ್ಕಂಡೇಶ್ವರ ಬೆಟ್ಟ,
- ಆವನಿ,
- ಮುಳಬಾಗಿಲು,
- ಚಿಕ್ಕತಿರುಪತಿ,
- ಬಂಗಾರ ತಿರುಪತಿ ಹಾಗು
- ಕೋಟಿಲಿಂಗೇಶ್ವರ.
-
Kolarmma Temple, Kolar
-
Kolarmma Temple, Kolar - Full View
-
ಚೋಳ ಶಾಸನಗಳು, ಕೊಲಾರಾಮ ದೇವಸ್ಥಾನ (KL 112 109)[೧]
-
ಯುದ್ಧದಲ್ಲಿ ರಾಜೇಂದ್ರ ಚೋಳ, ಕೊಲಾರಾಮ ದೇವಸ್ಥಾನ
ಉಲ್ಲೇಖಗಳು
[ಬದಲಾಯಿಸಿ]- ↑ Rice, Benjamin Lewis (1894). Epigraphia Carnatica: Volume X: Inscriptions in the Kolar District. Mangalore, British India: Department of Archeology, Mysore State. Retrieved 4 August 2015.