ಶಿಕಾರಿಪುರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Shikaripur
ಶಿಕಾರಿಪುರ
ಪಟ್ಟಣ
Shikaripur is located in Karnataka
Shikaripur
Shikaripur
Location in Karnataka, India
Coordinates: 14°16′N 75°21′E / 14.27°N 75.35°E / 14.27; 75.35Coordinates: 14°16′N 75°21′E / 14.27°N 75.35°E / 14.27; 75.35
ದೇಶ  India
ರಾಜ್ಯ ಕರ್ನಾಟಕ
ಜಿಲ್ಲೆ ಶಿವಮೊಗ್ಗ
Subdivision ಸಾಗರ
Elevation ೬೦೩
Population (2001)
 • Total ೩೧,೫೦೮
ಭಾಷೆಗಳು
 • ಅಧಿಕೃತ ಕನ್ನಡ
Time zone IST (UTC+5:30)


ಶಿಕಾರಿಪುರವು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು ಕೇಂದ್ರ. ಇದು ಕರ್ನಾಟಕದ ಅರೆಮಲೆನಾಡು ಭಾಗದಲ್ಲಿ ಇರುವ ಊರು. ಈ ಊರಿನ ಸಮೀಪ ಕುಮುದ್ವತಿ ನದಿ ಹರಿಯುತ್ತದೆ,ಸ್ಥಳೀಯರು ಈ ನದಿಯನ್ನು ಗೌರಿಹಳ್ಳ ಎಂದೂ ಕರೆಯುವರು. ಶಿಕಾರಿಪುರದ ಬಳಿ ಇರುವ ಈಸೂರು ಗ್ರಾಮ ಸ್ವಾತಂತ್ರ ಹೊರಾಟಕ್ಕೆ ಪ್ರಸಿದ್ದಿ. ಶಿಕಾರಿಪುರದ ಬಳಿ ಇರುವ ಮತ್ತೊಂದು ಗ್ರಾಮ ಕಾಗಿನಲ್ಲಿ, ಇದು ಶಿಕಾರಿಪುರ-ಹೊನ್ನಾಳಿ ರಸ್ತೆಯಲ್ಲಿ ೧೫ ಕಿ.ಮೀ. ದೊರದಲ್ಲಿದೆ.

ಪ್ರಮುಖ ದೇವಸ್ಠಾನಗಳು[ಬದಲಾಯಿಸಿ]

ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನ-ಶಿಕಾರಿಪುರ ಇದೊಂದು ಪ್ರಾಚೀನ ದೇಗುಲ. ಶ್ರೀ ರಾಮದೂತ ಹನುಮಂತ ಹುಚ್ಚುರಾಯನೆಂದು (ಸಂಸ್ಕೃತದಲ್ಲಿ ಭ್ರಾಂತೇಶ) ಇಲ್ಲಿ ಕರೆಯಲ್ಪಡುವನು. ಈತನೇ ಶಿಕಾರಿಪುರದ ಗ್ರಾಮದೇವತೆ, ದೇಗುಲದ ಮುಖ್ಯದೇವ. ಇಲ್ಲಿ ಸೀತಾ-ಲಕ್ಷ್ಮಣರ ಸಹಿತ ಶ್ರೀರಾಮನ ವಿಗ್ರಹಗಳೂ ಇವೆ. ದೇಗುಲ ಸಮೀಪವೇ ಇರುವ ಕೆರೆಯಲ್ಲಿ ಈಗ ಪೂಜಿಸಲ್ಪಡುತ್ತಿರುವ ಮೂರ್ತಿ ಮುಳುಗಿತ್ತೆಂದೂ, ಭಕ್ತನೋರ್ವನ ಕನಸಿನಲ್ಲಿ ಶ್ರೀ ದೇವರು ಕಾಣಿಸಿಕೊಂಡು ತನ್ನ ಇರುವಿಕೆಯನ್ನು ತಿಳಿಸಿದ ನಂತರ ದೇಗುಲದಲ್ಲಿ ಸ್ಥಾಪಿಸಲಾಯಿತೆಂದೂ ಪ್ರತೀತಿಯಿದೆ. ಮೈಸೂರಿನ ಆಡಳಿತಗಾರ ಟೀಪು ಸುಲ್ತಾನನು ಶ್ರೀ ಹುಚ್ಚೂರಾಯನಿಗೆ ಬಂಗಾರದ ಬಾಸಿಂಗವೇ ಮೊದಲಾದ ಆಭರಣಗಳನ್ನು ನೀಡಿದನೆಂಬ ಇತಿಹಾಸವಿದೆ. ಪ್ರತಿವರ್ಷವೂ ಜರುಗುವ ಜಾತ್ರೆಯು ಬಹುಪ್ರಸಿದ್ಧವಾಗಿದ್ದು, ಸಾವಿರಾರು ಜನ ಆಗ ದೇವರ ದರ್ಶನ ಪಡೆಯುತ್ತಾರೆ. ದೇಗುಲದ ಮುಂದೆ ಹಾದು ಹೋಗುವ ಬೀದಿಯಲ್ಲಿ ಶ್ರೀ ದೇವರನ್ನು ರಥದಲ್ಲಿ ಕೊಂಡು ಹೋಗುವರು. ಈ ರಸ್ತೆಗೆ ಈ ಕಾರಣದಿಂದ ರಥಬೀದಿ ಎಂಬ ಹೆಸರಿದೆ. ಇತ್ತೀಚೆಗಷ್ಟೆ ದೇಗುಲದ ಜೀರ್ಣೋದ್ಧಾರ ನಡೆಯುತ್ತಿದ್ದು, ಪ್ರವೇಶದ್ವಾರದ ಮೇಲೆ ಗದೆ ಹಿಡಿದು ಮೊಣಕಾಲೂರಿ ಕುಳಿತಿರುವ ಮಾರುತಿಯ ಸುಂದರ ವಿಗ್ರಹವನ್ನು ನಿರ್ಮಿಸಲಾಗಿದೆ. ಶಿಕಾರಿಪುರ ಶಿವಮೊಗ್ಗ ಜಿಲ್ಲೆಯ ಒಂದು ಅಭಿವೃದ್ಧಿಯಾದ ತಾಲ್ಲುಕು ಹಾಗು ಇದನ್ನು ಈ ಜಿಲ್ಲೆಯ ಭತ್ತದ ಕಣಜ ಎಂದೆ ಕರೆಯಲಾಗುತ್ತದೆ ಅತಿ ಹೆಚ್ಚು ಭತ್ತ ಬೆಳೆಯುವ ತಾಲ್ಲುಕು. ಮುಖ್ಯವಾಗಿ ಶಿಕಾರಿಪುರದಿಂದ ೨೩ ಕಿಲೊಮೀಟರ್ ದೂರದಲ್ಲಿ ಬಳ್ಳಿಗಾವಿ ಎನ್ನುವ ಸ್ಥಳವಿದ್ದು ಗತಕಾಲದ ವೈಭವವನ್ನು ಸಾರುತ್ತದೆ.ಈ ಪ್ರದೇಶವು ಹೊಯ್ಸಳರ ಆಳ್ವಿಕೆಯನ್ನು ಕಂಡಿದ್ದು ಕೆಲ ದೇವಸ್ಥಾನಗಳು ಹೊಯ್ಸಳ ಶೈಲಿಯ ಕಟ್ಟಡವನ್ನು ಹೊಂದಿರುತ್ತವೆ ಹಾಗು ಈ ಸ್ಥಳ ನಾಟ್ಯರಾಣಿ ಶಾಂತಲೆಯ ತವರೂರಾಗಿದೆ. ಇಲ್ಲಿ ಕೇದಾರೇಶ್ವರ,ಅಮರನಾಥೇಶ್ವರ ಹಾಗು ಇನ್ನಿತರ ಪ್ರಸಿದ್ಧ ದೇವಸ್ಥಾನಗಳು ಇವೆ.

ಶ್ರೀ ದತ್ತಮಂದಿರ[ಬದಲಾಯಿಸಿ]

ಇದನ್ನು ಶ್ರೀ ಕೇವಲಾನಂದರೆಂಬ ಸಂನ್ಯಾಸಿಗಳು ೭೦ರ ದಶಕದಲ್ಲಿ ಸ್ಥಾಪಿಸಿದರು. ಹುಚ್ಚುರಾಯನ ಕೆರೆಯ ದಂಡೆಯಲ್ಲಿದೆ. ಇದೊಂದು ದತ್ತ ಪರಂಪರೆಗೆ ಸೇರಿದ ಆಶ್ರಮ. ಇಲ್ಲಿ ಶ್ರೀ ಶಾರದೆ, ಶ್ರೀ ಶಂಕರಾಚಾರ್ಯ ಹಾಗು ಶ್ರೀ ದತ್ತಾತ್ರೇಯನ ಬಿಳಿಶಿಲೆಯ ವಿಗ್ರಹಗಳಿವೆ ಮತ್ತು ಸ್ವಾಮಿಗಳ ಸಮಾಧಿ ಮಂದಿರವಿದೆ.

ಮುಖ್ಯ ಸ್ಥಳಗಳು[ಬದಲಾಯಿಸಿ]

ಉಡುಗಣಿ-ಅಕ್ಕಮಹಾದೇವಿಯ ಜನ್ಮಸ್ಥಳ-ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಇದೆ.ಹಾಗೂ ತೋಗರ್ಸಿ ಮಲ್ಲಿಕಾರ್ಜುನ ದೇವಸ್ಥಾನಗಳು ಇವೆ.

ಈ ಭಾಗದ ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

 • ಅನುಭಾವಿ ಅಲ್ಲಮಪ್ರಭು
 • ಶರಣೆ ಅಕ್ಕಮಹಾದೇವಿ
 • ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ-ಜನ್ಮಸ್ಥಳ
 • ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ- ಇವರ ವಿಧಾನ ಸಭಾಕ್ಷೇತ್ರ
 • ಎಸ್.ಆರ್. ರಾವ್, ಹರಪ್ಪಾ-ಮೊಹಂಜೊದಾರೊ ಖ್ಯಾತಿಯ ಪುರಾತತ್ವ ಶಾಸ್ತ್ರ ತಜ್ಞರು
 • ದಿವಂಗತ ಶ್ರೀ ಶಿಕಾರಿಪುರ ಹರಿಹರೇಶ್ವರ, ಅಮೆರಿಕದಲ್ಲಿ ೩೭ ವರ್ಷದುಡಿದು, ಅಲ್ಲಿನ ಕನ್ನಡಜನರ ಮನಸ್ಸನ್ನು ಒಂದುಗೂಡಿಸಿ, ಕನ್ನಡಪರ ಚಟುವಟಿಕೆಗಳನ್ನು ಪ್ರಾರಂಭಿಸಿದರು. ತಮ್ಮ ನಿವೃತ್ತಿಯ ಬಳಿಕ, ಮೈಸೂರಿನಲ್ಲಿ ವಾಸ್ತವ್ಯಹೂಡಿ ಅನವರತ ಕನ್ನಡಕ್ಕಾಗಿ ದುಡಿದ ಕನ್ನಡದ ಪರಿಚಾರಕ.
 • ಅನುಭಾವ ಮಂಟಪದ ವಚನಕಾರರಾದ ಸತ್ಯಕ್ಕ, ಮುಕ್ತಾಯಕ್ಕ, ಅಜಗಣ್ಣ, ಇಕ್ಕದ ಮಾರಯ್ಯ, ಅಂಕದ ಮಾರಯ್ಯ ಇವರೆಲ್ಲಾ ಈ ತಾಲ್ಲೂಕಿನವರೆ
 • ಹೆಚ್.ಎಸ್ ಶಾಂತವೀರಪ್ಪಗೌಡ , ಮಾಜಿ ವಿಧಾನಪರಿ‍‍‍ಷತ್ ಸದಸ್ಯರು.

ರಾಜಕೀಯ[ಬದಲಾಯಿಸಿ]

 • 1952-1957 ರ ಚುನಾವಣೆಯಲ್ಲಿ ಶಿಕಾರಿಪುರ ತಾಲ್ಲೂಕು ಸೊರಬ ತಾಲ್ಲೂಕಿನಲ್ಲಿ ಸೇರಿತ್ತು.
 • ವಿಧಾನ ಸಭೆ ಚುನಾವಣೆ :-
 • 1962- ರ ಚುನಾವಣೆಯಲ್ಲಿ ವೀರಪ್ಪ -ಕಾಂಗ್ರೆಸ್ -17313 ಅಂತರದಿಂದ ಗೆಲವು-ಮೀಸಲು ಕ್ಷೇತ್ರ.
 • |1967- ರಲ್ಲಿ ಜಿ ಬಸವಣ್ಯಪ್ಪ ಸಂಯುಕ್ತ ಸೋಸಿಯಲಿಸ್ಟ ಪಾರ್ಟಿ,21241ಅಂತರದಿಂದ ಗೆಲವು.
 • |1972-,1978 ರಲ್ಲಿ ಎರಡೂ ಬಾರಿ ಕೆ.ಯಂಕಟಪ್ಪ ಗೆಲವು.ಕಾಂಗ್ರೆಸ್ -ನಂತರ ಸಚಿವರಾದರು.
 • |1983-ಬಿ.ಎಸ್. ಯಡಿಯೂರಪ್ಪ ಬಿಜೆಪಿ,ಗೆಲವು,ಪಡೆದ ಮತ-40687-ಗೆಲುವು.x ಸಚಿವ ಕೆ ಯಂಕಟಪ್ಪ ಕಾಂಗ್ರೆಸ್
 • |1985- ಬಿ.ಎಸ್. ಯಡಿಯೂರಪ್ಪ ಬಿಜೆಪಿ,ಗೆಲವು,ಪಡೆದ ಮತ 39077 (97200ಮತದಾರು)xಮಾದೇಗೌಡ ಪಾಟೀಲ್ ಕಾಂ.
 • 1989- ಬಿ.ಎಸ್. ಯಡಿಯೂರಪ್ಪ ಬಿಜೆಪಿ,ಗೆಲವು,ಪಡೆದ ಮತ-36589,ಅಂತರ-2274 x ನಗರದ ಮಹಾದೇವಪ್ಪ ಕಾಂಗ್ರೆಸ್
 • 1994-ಬಿ.ಎಸ್. ಯಡಿಯೂರಪ್ಪ ಬಿಜೆಪಿ,ಗೆಲವು,ಪಡೆದ ಮತ-50885 x ನಗರದ ಮಹಾದೇವಪ್ಪ ಕಾಂಗ್ರೆಸ್
 • 1999-ಬ.ಎನ್. ಮಹಾಲಿಂಗಪ್ಪ ವಕೀಲ ಕಾಂಗ್ರೆಸ್,ಗೆಲವು-7561ಅಂತರ,x ಬಿ.ಎಸ್. ಯಡಿಯೂರಪ್ಪ ಬಿಜೆಪಿ
 • 2004-ಬಿ.ಎಸ್. ಯಡಿಯೂರಪ್ಪ ಬಿಜೆಪಿ-ಗೆಲವು-ಪಡೆದ ಮತ-64972;
 • 2008-ಬಿ.ಎಸ್. ಯಡಿಯೂರಪ್ಪ ಬಿಜೆಪಿ-ಗೆಲವು-ಅಂತರ-45927 -ಪಡೆದ ಮತ-834491; ಮೂರೂವರೆ ವರ್ಷ ರಾಜ್ಯದ ಮುಖ್ಯಮಂತ್ರಿ
 • 2013-ಬಿ.ಎಸ್. ಯಡಿಯೂರಪ್ಪ ಕೆಜೆಪಿ-ಗೆಲವು-ಅಂತರ-24424-ಪಡೆದ ಮತ-69126.ನಂತರ ರಾಜೀನಾಮೆ -ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ.
 • ಶಿಕಾರಿಪುರ ಕ್ಷೇತ್ರದಲ್ಲಿ ಉಪಚುನಾವಣೆ; ಮತದಾನ-21-8-2014 ; ಎಣಿಕೆ & ಫಲಿತಾಂಶ-25-8-2014;

ಆಧಾರ[ಬದಲಾಯಿಸಿ]

 • ೧-ಚುನಾವಣೆ ಕಮಿಶನ್ -ವರದಿ ಪ್ರಜಾವಾಣಿ

ನೋಡಿ[ಬದಲಾಯಿಸಿ]

Karnataka-icon.jpg
ಕರ್ನಾಟಕದ ಜಿಲ್ಲೆಗಳು
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ಯಾದಗಿರಿ | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ