ವಿಷಯಕ್ಕೆ ಹೋಗು

ಗುಸ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Pagetype/setindex' not found.

The House of Gucci
ಸಂಸ್ಥೆಯ ಪ್ರಕಾರSubsidiary of PPR (Euronext: PP)
ಸ್ಥಾಪನೆ1921
ಮುಖ್ಯ ಕಾರ್ಯಾಲಯಇಟಲಿ Florence, Italy
ಪ್ರಮುಖ ವ್ಯಕ್ತಿ(ಗಳು)Guccio Gucci, Founder
Patrizio di Marco, President & CEO,
Frida Giannini, Creative director
ಉದ್ಯಮConsumer Goods
ಉತ್ಪನ್ನClothing, watches, jewelry, shoes and leather goods
ಆದಾಯ2.2 billion euro, at 31 December 2009
ಪೋಷಕ ಸಂಸ್ಥೆPPR
ಜಾಲತಾಣwww.gucci.com

ದ ಹೌಸ್ ಆಫ್ ಗುಸ್ಸಿ , ಗುಸ್ಸಿ ಎಂಬ ಹೆಸರಿನಿಂದ ಪ್ರಸಿದ್ಧಿಯಾದ (Italian pronunciation: [ɡuttʃʃi]), ಇದು ಒಂದು ಇಟಾಲಿಯನ್ ಫ್ಯಾಷನ್ ಹಾಗೂಚರ್ಮದ ವಸ್ತುಗಳ ಕಂಪನಿಯ ಹೆಸರು, ಗುಸ್ಸಿ ಗ್ರೂಪ್‌ನ ಒಂದು ಭಾಗ, ಪಿನಾಲ್ಟ್-ಪ್ರಿಂಟೆಂಪ್ಸ್-ರೆಡೌಟ್ (PPR) ಎಂಬ ಫ್ರೆಂಚ್ ಕಂಪನಿಯು ಇದರ ಮಾಲಿಕತ್ವ ಹೊಂದಿದೆ. ಗುಸ್ಸಿ ಕಂಫನಿಯು ಗುಸ್ಸಿಯೊ ಗುಸ್ಸಿ ಎಂಬುವವರಿಂದ 1921 ರಲ್ಲಿ ಫ್ಲಾರೆನ್ಸ್‌ ನಗರದಲ್ಲಿ ಸ್ಥಾಪಿಸಲ್ಪಟ್ಟಿತು.[೧]

ಬ್ಯುಸಿನೆಸ್ ವೀಕ್ ಮ್ಯಾಗಜೀನ್ ಪ್ರಕಾರ, 2008ರಲ್ಲಿ ಗುಸ್ಸಿ ಜಗತಿನಾದ್ಯಂತ circa 2.2 ಬಿಲಿಯನ್ ಆದಾಯವನ್ನು ಸಂಪಾದಿಸಿತು ಮತ್ತು ಇಂಟರ್‌ಬ್ರ್ಯಾಂಡ್‌ನಿಂದ ರಚಿಸಲ್ಪಟ್ಟ "ಟಾಪ್ ಗ್ಲೋಬಲ್ 100 ಬ್ರ್ಯಾಂಡ್ಸ್" ಪಟ್ಟಿಯಲ್ಲಿ 41ನೆಯ ಸ್ಥಾನಕ್ಕೇರಿತು .[೨] ಅಷ್ಟೇ ಅಲ್ಲದೆ ಗುಸ್ಸಿಯು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಇಟಾಲಿಯನ್ ಬ್ರಾಂಡ್ ಆಗಿದೆ.[೨] ಗುಸ್ಸಿ ಜಗತ್ತಿನಾದ್ಯಂತ ಸರಿ ಸುಮಾರು 278 ಮಳಿಗೆಗಳಲ್ಲಿ ನೇರವಾಗಿ ತನ್ನ ಕಾರ್ಯಾಚರಣೆಯನ್ನು ಮಾಡುತ್ತದೆ (ಸೆಪ್ಟೆಂಬರ 2009 ರಲ್ಲಿ) ಮತ್ತು ತನ್ನ ಉತ್ಪನ್ನಗಳನ್ನು ಫ್ರಾಂಚೈಸೀಗಳ ಮೂಲಕ ಸಗಟು ಮಾರಾಟ ಮಾಡುತ್ತದೆ ಹಾಗೂ ಡಿಪಾರ್ಟ್‌ಮೆಂಟ್ ಸ್ಟೋರ್ಸ್‌ಗಳನ್ನು ನಡೆಸುತ್ತದೆ.[೩]

ಇತಿಹಾಸ[ಬದಲಾಯಿಸಿ]

ಗುಸ್ಸಿ ಕಂಫನಿಯು ಗುಸ್ಸಿಯೊ ಗುಸ್ಸಿ ಎಂಬುವವರಿಂದ 1921ರಲ್ಲಿ ಸ್ಥಾಪಿಸಲ್ಪಟ್ಟಿತು. 193ರಲ್ಲಿ, ಗುಸ್ಸಿ ವಿಸ್ತರಣೆಯಾಯಿತು ಮತ್ತು ಅದರ ಒಂದು ಮಳಿಗೆಯು ರೋಮ್ ನಗರದಲ್ಲಿ ತೆರೆಯಲ್ಪಟ್ಟಿತು. ಗುಸ್ಸಿ ಕಂಪನಿಯ ಬಹಳಷ್ಟು ಉತ್ಪನ್ನಗಳನ್ನು ವಿನ್ಯಾಸಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿತ್ತು. ಗುಸ್ಸಿ 1947ರಲ್ಲಿ ಬಿದಿರು ಹಿಡಿಕೆಯ ಕೈಚೀಲವನ್ನು ಪರಿಚಯಿಸಿತು ಮತ್ತು ಅದು ಇವತ್ತಿಗೂ ಕೂಡಾ ಕಂಪನಿಯ ಮುಖ್ಯ ಉತ್ಪಾದನೆಯಾಗಿದೆ. 1950 ದಶಕದಲ್ಲಿ ಗುಸ್ಸಿ ಟ್ರೇಡ್‌ಮಾರ್ಕ್ ಸ್ಟ್ರಿಪ್ಡ್ ವೆಬ್ಬಿಂಗ್ ಅನ್ನು ಅಭಿವೃದ್ಧಿ ಪಡಿಸಿತು, ಇದು ಸ್ಯಾಡಲ್ ಗರ್ತ್, ಮತ್ತು ಸುಯೆಡ್ ಮೊಕೇಸಿನ್ ಜೊತೆಗೆ ಒಂದು ಮೆಟಲ್ ಹಾರ್ಸ್‌ಬಿಟ್‌ಗಳಿಂದ ತಯಾರಿಸಲ್ಪಟ್ಟಿದೆ.

ಅವನ ಹೆಂಡತಿ ಐಡಾ ಕ್ಯಾವೆಲ್ಲಿಗೆಯು ಒಂದು ದೊಡ್ಡ ಕುಟುಂಬವನ್ನೇ ಹೊಂದಿದ್ದಳು, ಇದರಲ್ಲಿ ಅವಳ ಗಂಡು ಮಕ್ಕಳಾದ ವಾಸ್ಕೊ, ಅಲ್ಡೊ, ಉಗೊ ಮತ್ತು ರೊಡಾಲ್ಪೊ ಸೇರಿದ್ದಾರೆ- ಇವರು ಈ ಜಗತ್ಪ್ರಸಿದ್ದವಾದ ಕಂಪನಿಯಲ್ಲಿ ಮಹತ್ವದ ಪಾತ್ರವಹಿಸುತ್ತಾರೆ. 1953 ರಲ್ಲಿ ಗುಸ್ಸಿಯೊನ ಮರಣದ ನಂತರ , ಅಲ್ಡೊ ಕಂಪನಿಯ ಮೊದಲ ಬಾಟಿಕ್‌ಅನ್ನು ನ್ಯೂಯಾರ್ಕ್‌ನಲ್ಲಿ ಸ್ಥಾಪಿಸುವುದರ ಮೂಲಕ ಕಂಪನಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದನು. ಪ್ರಾರಂಭದಲ್ಲಿ ರೊಡಾಲ್ಪೊ ನಟನಾ ವೃತ್ತಿಯನ್ನು ಅರಂಬಿಸಿ ಒಬ್ಬ ಒಳ್ಳೆಯ ಕಲಾಕಾರನಾಗಬೇಕೆಂದು ಪ್ರಯತ್ನಪಟ್ಟನು, ಅದರೆ ಬಹು ಬೇಗ ತನ್ನ ಕಂಪನಿಗೆ ನಿರ್ದೇಶನ ನೀಡಲು ಹಿಂತಿರುಗಿದನು. ಗುಸ್ಸಿಯ ಪ್ರಾರಂಭದ ವರ್ಷಗಳಿಂದಲೂ, ಆತನ ಕುಟುಂಬವು ತೀವ್ರ ಒಳಜಗಳಗಳಿಂದ ಪ್ರಸಿದ್ಧಿಯಾಗಿತ್ತು. ಉತ್ತರಾಧಿಕಾರತ್ವದ ವಾದವಿವಾದಗಳು, ಸ್ಟಾಕ್ ಒಡೆತನ ಮತ್ತು ಅಂಗಡಿಗಳ ಪ್ರತಿನಿತ್ಯದ ನಿರ್ವಹಣೆಯ ವಿಷಯಗಳು ಕುಟುಂಬವನ್ನು ಒಡೆದು ಗುಂಪುಗಳನ್ನಾಗಿಸಿದವು. ಗುಸ್ಸಿ ವಿದೇಶಗಳಲ್ಲಿಯೂ ವಿಸ್ತರಣೆಯಾಯಿತು, ಕಂಪನಿಯ ಭವಿಷ್ಯದ ಬಗ್ಗೆ ಚರ್ಚಿಸಲು ಏರ್ಪಡಿಸಿದ್ದ ಬೋರ್ಡ್ ಮೀಟಿಂಗ್‌ಗಳು ಮೇಲಿಂದ ಮೇಲೆ ಜಗಳಗಳಿಂದ ಕೂಡಿರುತ್ತಿದ್ದವು ಮತ್ತು ಬರಿ ವೆಚ್ಚಗಳಿಗೆ ಕಾರಣವಾಗುತ್ತಿದ್ದವು. 1960 ರಲ್ಲಿ ಗುಸ್ಸಿ ಹಾಂಗ್‌ಕಾಂಗ್ ಮತ್ತು ಟೊಕಿಯೊಗಳಲ್ಲಿ ತನ್ನ ಮಳಿಗೆಗಳನ್ನು ಸ್ಥಾಪಿಸುವುದರ ಮೂಲಕ ಹೆಚ್ಚಿನ ವಿಸ್ತರಣೆಗೋಸ್ಕರ ಫಾರ್ ಈಸ್ಟ್‌ನ ಸಹಾಯ ಪಡೆಯಲು ಮುಂದಾಯಿತು. ಇದೆ ವೇಳೆಗಾಗಲೆ ಕಂಪನಿಯು ತನ್ನ ಪ್ರತಿಷ್ಟಿತ GG ಲೊಗೊ (ಗುಸ್ಸಿಯೊ ಗುಸ್ಸಿಯ ಮೊದಲ ಅಕ್ಷರಗಳು) ಅಭಿವೃದ್ಧಿ ಪಡಿಸಿತು, ಫ್ಲೋರಾ ಸಿಲ್ಕ ಸ್ಕಾರ್ಪ (ಹಾಲಿವುಡ ನಟಿ [[ಗ್ರೇಸ್ ಕೆಲ್ಲಿ ಧರಿಸಿದ್ದ) ಮತ್ತು ಅಮೇರಿಕಾದ ಅಧ್ಯಕ್ಷ ಜಾನ ಎಫ್ ಕೆನಡಿಯ ಹೆಂಡತಿ ಜಾಕಿ ಕೆನಡಿ|ಗ್ರೇಸ್ ಕೆಲ್ಲಿ [[ಧರಿಸಿದ್ದ) ಮತ್ತು ಅಮೇರಿಕಾದ ಅಧ್ಯಕ್ಷ ಜಾನ ಎಫ್ ಕೆನಡಿಯ ಹೆಂಡತಿ ಜಾಕಿ ಕೆನಡಿ]]]] ಡಿಸೈನ್ ಮಾಡಿದ Jackie O ಹೆಗಲುಚೀಲಗಳನ್ನು ಕೂಡ ಸಿದ್ದಪಡಿಸಿತು.

ಮುಂದೆ 1970 ದಶಕದವರೆಗೆ ಗುಸ್ಸಿ ಒಂದು ಪ್ರಿಮಿಯರ್ ಲಕ್ಷುರಿ ಉತ್ಪನ್ನಗಳ ಕಂಪನಿಯಾಗಿ ಉಳಿಯಿತು. ಆದರೆ ಅಪಾಯಕಾರಿ ವ್ಯಾಪಾರಿ ನಿರ್ಣಯಗಳು ಹಾಗೂ ಕುಟುಂಬದ ಒಳಜಗಳಗಳು ಕಂಪನಿಯನ್ನು ನಾಶದ ಅಂಚಿಗೆ ತಳ್ಳಿದವು. ಇದೆ ವೇಳೆಗೆ ಅಲ್ಡೊ ಮತ್ತು ಅವನ ಮಗನ ಕೊಡುಗೆಗಿಂತ ರೊಡಾಲ್ಪೊನ ಕೊಡುಗೆಯು ಕಡಿಮೆ ಇದ್ದರೂ ಸಹ, ಅಲ್ಡೊ ಮತ್ತು ರೊಡಾಲ್ಫೊ ಸಹೋದರರು ಕಂಪನಿಯ 50% ಶೇರುಗಳನ್ನು ಸಮನಾಗಿ ತಮ್ಮ ಹಿಡಿತವನ್ನು ಸಾದಿಸಿದರು. ಅಲ್ಡೊ 1979ರಲ್ಲಿ ಗುಸ್ಸಿ ಆಕ್ಸೆಸರೀಸ್ ಕಲೆಕ್ಷನ್ ಅಥವಾ GAC ಯನ್ನು ಅಭಿವೃದ್ಧಿಪಡಿಸಿದನು ಹಾಗೂ ತನ್ನ ಮಗನಿಂದ ನಿರ್ವಹಿಸಲ್ಪಡುತ್ತಿದ್ದ ಗುಸ್ಸಿ ಪರ್ಫ್ಯೂಮ್ಸ್ ವಿಭಾಗದ ಮಾರಾಟವನ್ನು ಹೆಚ್ಚಿಸಲು ನಿರ್ಣಯಿಸಿದನು. GAC ಯು ಚಿಕ್ಕ ವಸ್ತುಗಳಾದ ಕಾಸ್ಮೆಟಿಕ್ ಬ್ಯಾಗುಗಳು, ಲೈಟರ್‌‍ಗಳು ಮತ್ತು ಪೆನ್ನುಗಳನ್ನು ಒಳಗೊಂಡಿತ್ತು. ಹಾಗೂ ಇವುಗಳ ಬೆಲೆಗಳು ಕಂಪನಿಯ ಆಕ್ಸೆಸರಿಗಳ ಪಟ್ಟಿಯಲ್ಲಿ ಬರುವ ಇನ್ನಿತರ ವಸ್ತುಗಳಿಗಿಂತ ಕಡಿಮೆಯಾಗಿದ್ದವು. ಕಂಪನಿಯ ವ್ಯವಹಾರಗಳ ಮೇಲ್ವಿಚಾರಣೆ ಮೇಲೆ ರೊಡಾಲ್ಪೊನಿಗಿರುವ ಹಿಡಿತವನ್ನು ದುರ್ಬಲಗೊಳಿಸುವುದಕ್ಕೋಸ್ಕರ, ಅಲ್ಡೊ ಗುಸ್ಸಿ ಪರ್ಫ್ಯೂಮ್ಸ್ ಮೇಲಿನ ಅಧಿಕಾರವನ್ನು ತನ್ನ ಮಗ ರೊಬರ್ಟೊಗೆ ಹಸ್ತಾಂತರಿಸಿದನು.

ಗುಸ್ಸಿ ಆಕ್ಸೆಸರೀಸ್ ಕಲೆಕ್ಷನ್ ಒಳ್ಳೆಯ ಮನ್ನಣೆ ಪಡೆದಿದ್ದರೂ ಕೂಡಾ, ಈ ಬೆಳವಣಿಗೆಯು ಗುಸ್ಸಿ ವಂಶವನ್ನು ನೆಲಕ್ಕುರುಳಿಸುವ ಶಕ್ತಿಯಾಗಿ ಪರಿಣಮಿಸಿತು.

ಮುಂದೆ ಕೆಲವೆ ವರ್ಷಗಳಲ್ಲಿ ಪರ್ಫ್ಯೂಮ್ಸ್ ವಿಭಾಗವು ಅಕ್ಸೆಸರೀಸ್ ವಿಭಾಗದಲ್ಲಿ ತನ್ನ ಮಾರಾಟವನ್ನು ಹೆಚ್ಚಿಸಿತು. ಅಮೇರಿಕಾ ದೇಶವೊಂದರಲ್ಲೆ ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ GAC ಲೈನ್ ಒಂದು ಕಾಲದಲ್ಲಿ ಎಕ್ಸ್‌ಕ್ಲೂಸಿವ್ ಬ್ರ್ಯಾಂಡ್ ಆಗಿತ್ತು. ಆದರೆ ಹೊಸದಾಗಿ ಸ್ಥಾಪಿಸಿದ ಸಗಟು ವ್ಯಾಪಾರ ಬ್ರ್ಯಾಂಡ್‌ನ ಆಕರ್ಷಣೆಯನ್ನು ಫ್ಯಾಶನ್ ಜಗತ್ತಿನಲ್ಲಿ ಕುಂದುವಂತೆ ಮಾಡಿತು. "1960  ಹಾಗೂ 1970ರಲ್ಲಿ,  "ವ್ಯಾನಿಟಿ ಫೇರ್‌ನ ಸಂಪಾದಕ ಗ್ರೆಯಡೊನ್ ಕಾರ್ಟರ್‌ ಅವರ ಪ್ರಕಾರ ಗುಸ್ಸಿಯು ಪ್ಯಾಶನ್ ಜಗತ್ತಿನಲ್ಲಿ ಉತ್ತುಂಗ ಸ್ಥಿತಿಯನ್ನು ತಲುಪಿತ್ತು". ಅದರ ಪ್ಯಾಶನ್ ಐಕಾನ್‌ಗಳಾದ ಔಡ್ರೆ ಹೆಪ್ಬರ್ನ್, ಗ್ರೇಸ್ ಕೆಲ್ಲಿ, ಮತ್ತು ಜಾಕ್ವೆಲಿನ್ ಒನಾಸಿಸ್‌ ಅವರಿಗೆ ಈ ಜಯ ಸಲ್ಲುತ್ತದೆ. ಆದರೆ ಗುಸ್ಸಿ 1980 ದಶಕದಲ್ಲಿ ತನ್ನ ಬೇಡಿಕೆಯನ್ನು ಕಳೆದುಕೊಂಡಿತು ಮತ್ತು ಕಡಿಮೆ ಬೆಲೆಯ ಏರ್‌ಪೋರ್ಟ್ ಬ್ರಾಂಡ್ ಆಗತೊಡಗಿತು."

ಆಕಸ್ಮಿಕವಾಗಿ ಕಡಿತಗೊಂಡ ಗುಸ್ಸಿ ಸರಕುಗಳ ಬೆಲೆಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದವು. ಇದು ಗುಸ್ಸಿ ಹೆಸರು ಮಾರುಕಟ್ಟೆಯಲ್ಲಿ ಇನ್ನು ಹಾಳಾಗುವಂತೆ ಮಾಡಿತು. ಇದೆ ವೇಳೆಗಾಗಲೆ ಇಟಲಿಯಲ್ಲಿ ಕುಟುಂಬದ ಒಳಜಗಳ ಕಂಪನಿಯ ನಿರ್ವಹಣೆಯ ಮೇಲೆ ತನ್ನ ಕರಾಳ ಪ್ರಭಾವವನ್ನು ಬೀರುತ್ತಲಿತ್ತು. ರೊಡಾಲ್ಪೊ ಮತ್ತು ಅಲ್ಡೊನ ಮದ್ಯೆ ಪರ್ಫ್ಯೂಮ್ಸ್ ವಿಭಾಗದ ವಿಷಯಯದಲ್ಲಿ ವ್ಯಾಜ್ಯ ಉಧ್ಬವಿಸಿ ರೊಡಾಲ್ಪೊ ಕಂಪನಿಯ 20% ಶೇರುಗಳನ್ನಷ್ಟೇ ಹೊಂದಿದನು. ಇದೆ ವೇಳೆಗೆ ಅಲ್ಡೊನ ಮಗ ಪ್ಯಾಲೊ ಗುಸ್ಸಿ 1983ರಲ್ಲಿ ಕುಟುಂಬದಿಂದ ಹೊರನಡೆದನು ಮತ್ತು 'ಗುಸ್ಸಿ ಪ್ಲಸ್' ಎಂಬ ಅತೀ ಕಡಿಮೆ ಬೆಲೆಯ ಬ್ರಾಂಡನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದನು. ಪ್ಯಾಲೊ ಮತ್ತು ಆತನ ಸಹೋದರರ ಮಧ್ಯೆ ಬೊರ್ಡ್‌ರೂಮ್‌ನಲ್ಲಿ ನಡೆದ ಜಗಳ ಮುಷ್ಟಿಯುದ್ಧದಲ್ಲಿ ಕೊನೆಯಾಯಿತು, ಮತ್ತು ಪ್ಯಾಲೊ ಒಬ್ಬ ಸಹೋದರರಲ್ಲೊಬ್ಬನನ್ನು ಟೆಲಿಫೋನ್ ರಿಸೀವರ್‌ನಿಂದ ಹೊಡೆದು ಹಿಂದಕ್ಕೆ ತಳ್ಳಿದನು. ಇದಕ್ಕೆ ಪ್ರತಿಕಾರವಾಗಿ ಪ್ಯಾಲೊ ತನ್ನ ತಂದೆ ಅಲ್ಡೊನ ವಿರುದ್ದ ಅಮೇರಿಕಾ ದೇಶದ ತೆರಿಗೆ-ವಂಚನೆ ಮಾಡಿರುವನೆಂದು ಆರೋಪಿಸಿ ವರದಿ ನೀಡಿದನು ಮತ್ತು ಮಗನ ಹೇಳಿಕೆಯ ಮೇರೆಗೆ ಅಲ್ಡೊನನ್ನು ಬಂಧಿಸಲಾಯಿತು. ಈಗಾಗಲೇ, ಗುಸ್ಸಿ ತನ್ನ ಉತ್ತಮ ಗುಣಮಟ್ಟದ ವಿನ್ಯಾಸಗಳಿಂದ ಪಡೆದ ಪ್ರಖ್ಯಾತಿಯಷ್ಟೇ ಪ್ರಚಾರವನ್ನು ಮತ್ತೊಮ್ಮೆ ಗಾಸಿಪ್ ಮ್ಯಾಗಜಿನ್‌ಗಳು ಅದಕ್ಕೆ ನೀಡಿದ್ದವು.

1983 ರಲ್ಲಿ ಆತನ ಸಾವು ಕಂಪನಿಯಲ್ಲಿ ಅಲ್ಲೊಲಕಲ್ಲೊಲ ಪರಿಸ್ಥಿತಿಯನ್ನು ನಿರ್ಮಿಸಿತ್ತು. ರೊಡಾಲ್ಪೊ ಗುಸ್ಸಿಯು ತನ್ನ 50% ಶೇರುಗಳನ್ನು ಮಗ ಮೌರಿಜಿಯೊ ಗುಸ್ಸಿಗೆ ಬಿಟ್ಟು ಹೋದನು. ತದನಂತರ ಬೋರ್ಡ್ ಆಫ್ ಡೈರೆಕ್ಟರ್ಸ್‌ನಲ್ಲಿ ತನ ಹಿಡಿತ ಸಾದಿಸಲು ಮೌರಿಜಿಯೊ ಅಲ್ಡೋನ ಮಗ ಪ್ಯಾಲೊನ ಜೊತೆಯಲ್ಲಿ ಒಂದಾದನು ಮತ್ತು ಇದೇ ಉದ್ದೇಶಕ್ಕಾಗಿ ನೆದರ್ಲ್ಯಾಂಡ್‌ನಲ್ಲಿ ಗುಸ್ಸಿ ಲೈಸೆನ್ಸಿಂಗ್ ವಿಭಾಗವನ್ನು ಸ್ಥಾಪಿಸಿದನು. ಈ ನಿರ್ಧಾರದಿಂದ ಉಳಿದ ಕುಟುಂಬ ವರ್ಗದವರು ಕಂಪನಿಯಿಂದ ದೂರ ಉಳಿದರು ಹಾಗೆಯೇ ತನ್ನ ಇತಿಹಾಸದಲ್ಲೆ ಮೊಟ್ಟ ಮೊದಲನೆಯ ಬಾರಿಗೆ ಗುಸ್ಸಿ ಕಂಪನಿ ಒಬ್ಬ ವ್ಯಕ್ತಿಯು ಚುಕ್ಕಾಣಿ ಹಿಡಿಯುವಂತಾಯಿತು. ಮೌರಿಜಿಯೊ ತನ್ನ ಕುಟುಂಬ ಮತ್ತು ಕಂಪನಿಗೆ ಕುತ್ತು ತಂದ ಜಗಳವನ್ನು ಶಮನ ಮಾಡಿದನು ಮತ್ತು ಗುಸ್ಸಿಯ ಕಂಪನಿ ಭವಿಷ್ಯವನ್ನು ಮರು ರೂಪಿಸಲು ಕಂಪನಿಯಿಂದ ಹೊರಗಡೆ ಇರುವ ಪ್ರತಿಭೆಯನ್ನು ಶೋಧಿಸಲು ನಿರ್ಧರಿಸಿದನು.

ಸಂಸ್ಥೆ[ಬದಲಾಯಿಸಿ]

ರಾತ್ರಿ ವೇಳೆಯಲ್ಲಿ ಗುಸ್ಸಿ ಅಂಗಡಿ

ಈ ಬದಲಾವಣೆಗಳಿಂದ 1980 ದಶಕದ ಕೊನೆಯ ಭಾಗದಲ್ಲಿ ಕಂಪನಿ ಚೇತರಿಸಿಕೊಂಡಿತು[ಸೂಕ್ತ ಉಲ್ಲೇಖನ ಬೇಕು] ಹಾಗೂ ಅತ್ಯಂತ ಲಾಭದಾಯಕ ನಿರ್ವಹಣೆ ಜೊತೆಗೆ ಮತ್ತೆ ಜಗತ್ಪ್ರಸಿದ್ಧ ಫ್ಯಾಶನ್ ಕಂಪನಿಗಳಲ್ಲೊಂದಾಗಿ ಬೆಳೆಯಿತು[ಸೂಕ್ತ ಉಲ್ಲೇಖನ ಬೇಕು]. 1995 ಅಕ್ಟೋಬರ್‌ನಲ್ಲಿ ಗುಸ್ಸಿ ತನ್ನ $22 ರೂಪಾಯಿ ಮುಖ ಬೆಲೆಯ ಪ್ರಥಮ ಸಾರ್ವಜನಿಕ ಕೊಡುಗೆಯನ್ನು AMEX ಮತ್ತು NYSE ಮೇಲೆ ಘೋಷಿಸಿತು. 1997 ನವೆಂಬರ್‌ನಲ್ಲಿ ಸೆವೆರಿನ್-ಮಾಂಟ್ರೆಸ್ ಎಂಬ ವಾಚ್‌ನ ಲೈಸನ್ಸನ್ನು ತನ್ನದಾಗಿಸಿಕೊಳ್ಳುವುದರ ಜೊತೆಗೆ ಗುಸ್ಸಿ ಅದರ ಹೆಸರನ್ನು ಗುಸ್ಸಿ ಟೈಮ್ ಪೀಸಸ್ ಎಂದು ಮರುನೇಮಕ ಮಾಡಿಕೊಂಡಿತು. ಇದರ ಜೊತೆಗೆ ಯುರೋಪಿಯನ್ ಬ್ಯುಸಿನೆಸ್ ಪ್ರೆಸ್ ಫೆಡರೇಷನ್ ಕಂಪನಿಯ ಹಣಕಾಸಿನ ಬೆಳವಣಿಗೆ, ತಂತ್ರಗಾರಿಕೆ ದೃಷ್ಟಿಕೋನ ಮತ್ತು ನಿರ್ವಹಣಾ ಗುಣಮಟ್ಟವನ್ನು ಗುರುತಿಸಿ ಅದಕ್ಕೆ "ಯುರೋಪಿಯನ್ ಕಂಪನಿ ಆಫ್ ದ ಇಯರ್ 1998" ಎಂಬ ಪದವಿಯನ್ನು ನೀಡಿತು. ಗುಸ್ಸಿಯ ವಿಶ್ವ ಕಛೇರಿಗಳು ಮತ್ತು ಕೇಂದ್ರಕಾರ್ಯಾಲಯಗಳು ಫ್ಲಾರೆನ್ಸ್, ಮಿಲಾನ್, ಪ್ಯಾರಿಸ್, ಲಂಡನ್, ಹಾಂಗ್‌ಕಾಂಗ್, ಜಪಾನ್ ಮತ್ತು ನ್ಯೂಯಾರ್ಕನಲ್ಲಿವೆ. PPR ಕೇಂದ್ರಕಾರ್ಯಾಲಯಗಳು ಪ್ಯಾರಿಸನಲ್ಲಿವೆ.

ಯುನೈಟೆಡ್ ಸ್ಟೇಟ್ಸ್‌ನ ಪ್ಲ್ಯಾಗ್‌ಶಿಪ್ ಮಳಿಗೆಗಳು[ಬದಲಾಯಿಸಿ]

]]

ಆಸ್ಟ್ರೇಲಿಯಾ[ಬದಲಾಯಿಸಿ]

ಕೆನಡಾ[ಬದಲಾಯಿಸಿ]

ಬ್ರೆಜಿಲ್‌[ಬದಲಾಯಿಸಿ]

ಮಲೇಷ್ಯಾ[ಬದಲಾಯಿಸಿ]

ಮೆಕ್ಸಿಕ[ಬದಲಾಯಿಸಿ]

ಹೊಸ ನಿರ್ವಹಣಾ ಮಂಡಳಿ[ಬದಲಾಯಿಸಿ]

ಚಿತ್ರ:Gucci metallic horsebit clutch.jpg
ಟಾಮ್ ಫೊರ್ಡನ ಕ್ರಿಯಾಶೀಲ ನಿರ್ದೆಶನದಲ್ಲಿ ಡಿಸೈನ್ ಮಾಡಲಾದ ಗುಸ್ಸಿಯ ಕ್ಲಚ್

ಡಾವ್ನ್ ಮೆಲ್ಲೊನ ನ್ಯುಯಾರ್ಕನ ಚಿಲ್ಲರೆ ವ್ಯಾಪಾರದ ಅಂಗಡಿ ಬರ್ಗ್‌ಡಾರ್ಫ್ ಗುಡ್‌ಮ್ಯಾನ್‌ದ ಪುನರುಜ್ಜೀವನ 1970ರಲ್ಲಿ ಅವಳನ್ನು ತಾರೆಯನ್ನಾಗಿಸಿತು. 1989ರಲ್ಲಿ ಮೌರಿಜಿಯೊ ಅವಳಿಗೆ ತನ್ನ ಹೊಸದಾಗಿ ನಿರ್ಮಿಸಿದ ಗುಸ್ಸಿ ಗ್ರೂಪ್‌ನ ನಿರ್ವಾಹಕ ಉಪಾಧ್ಯಕ್ಷ ಮತ್ತು ಜಾಗತಿಕ ಕ್ರಿಯಾಶೀಲ ನಿರ್ದೇಶಕನ ಸ್ಥಾನವನ್ನು ವಹಿಸಿಕೊಳ್ಳುವಂತೆ ಕೇಳಿಕೊಂಡನು. ಡೊಮೆನಿಕೊ ಡಿ ಸೊಲ, ಒಬ್ಬ ಮಾಜಿ ವಕೀಲ ಮತ್ತು ಈತ 1987 ಮತ್ತು 1989ರಲ್ಲಿ ಕಂಪನಿ ಹತ್ತನೆಯ ಸ್ಥಾನ ಮುಟ್ಟುವಲ್ಲಿ ಮೌರಿಜಿಯೊಗೆ ಬಹಳ ಸಹಾಯ ಮಾಡಿದ್ದನು. ಆತ ಗುಸ್ಸಿ ಅಮೇರಿಕಾದ ನಿರ್ದೇಶಕರಲ್ಲಿ ಒಬ್ಬನಾಗಿದ್ದನು. ಗುಸ್ಸಿಯ ಕ್ರಿಯಾಶೀಲ ಗುಂಪು ಈಗಾಗಲೆ ಜಾಫ್ರೆ ಬೀನ್ ಮತ್ತು ಕ್ಯಾಲ್ವಿನ್ ಕ್ಲೆನ್ ರಂತಹ ಪ್ರಸಿದ್ದ ಡಿಸೈನರ್‌ಗಳನ್ನೊಳಗೊಂಡಿತ್ತು. ಕೊನೆಯದಾಗಿ ಈ ಗುಂಪಿಗೆ ಟಾಮ್ ಫೋರ್ಡ್ ಎಂಬ ಯುವ ಡಿಸೈನರ್ ನೇಮಕಗೊಂಡನು.

ಟೆಕ್ಸಾಸ್ ಮತ್ತು ನ್ಯೂ ಮೆಕ್ಸಿಕೊನಲ್ಲಿ ಬೆಳೆದ ಈತನಿಗೆ ಹರೆಯದ ದಿನಗಳಿಂದಲೂ ಫ್ಯಾಶನ್ ವಿಷಯದಲ್ಲಿ ಬಹಳ ಆಸಕ್ತಿ ಇತ್ತು. ನಂತರ ಈತ 1986ರಲ್ಲಿ ಪರ್ಸೊನ್ಸ್ ಸ್ಕೂಲ್ ಆಫ್ ಡಿಸೈನ್‌ನಲ್ಲಿ ಆರ್ಕಿಟೆಕ್ಚರ್ ಎಂಬ ಪ್ರಮುಖ ವಿಷಯ ಅದ್ಯಯನ ಮಾಡುವದನ್ನು ಬಿಟ್ಟ ಮೇಲೆ ಡಿಸೈನರ್ ಆಗಿ ವೃತ್ತಿ ಆರಂಭಿಸಿದನು. ಡಾವ್ನ್ ಮೆಲ್ಲೊ 1990ರಲ್ಲಿ ತನ್ನ ಪಾಲುದಾರ, ಬರಹಗಾರ ಮತ್ತು ಸಂಪಾದಕನಾದ ರಿಚರ್ಡ್ ಬಕ್ಲೆಯ ಒತ್ತಾಯದ ಮೆರೆಗೆ ಫೋರ್ಡ್‌ನನ್ನು ನೇಮಕಮಾಡಿಕೊಂಡರು.

1990 ದಶಕದ ಆರಂಭದಲ್ಲಿ ಗುಸ್ಸಿ ಬಡತನದ ಅವಧಿಯನ್ನು ಎದುರಿಸಿತು ಮತ್ತು ಕಂಪನಿಯ ಇತಿಹಾಸದಲ್ಲಿ ಇದು ಅತ್ಯಂತ ಬಡತನದ ಅವಧಿಯೆಂದು ಗುರುತಿಸಲ್ಪಡುತ್ತದೆ. ಮೌರಿಜಿಯೊ ಗುಸ್ಸಿ ಅಮೇರಿಕಾದ ಎಲ್ಲಾ ಹಂಚಿಕೆದಾರರು, ಶೇರುದಾರರು ಮತ್ತು ನಿರ್ವಾಹಕ ಅಧಿಕಾರಿಗಳಿಗೆ ತೊಂದರೆ ನೀಡಿ, ಪ್ರತಿ ವರ್ಷ ಬರಿ ಯುನೈಟೆಡ್ ಸ್ಟೇಟ್ಸ್ ಒಂದರಲ್ಲೇ $110 ಮಿಲಿಯನ ಆದಾಯವನ್ನು ಗಳಿಸುವ ಗುಸ್ಸಿ ಆಕ್ಸಸರಿಜ್ ಕಲೆಕ್ಸನ್ ಮಾರಾಟದ ಮೇಲೆ ಹಠಾತ್ತನೆ ತನ್ನ ಅಧಿಕಾರವನ್ನು ಸಾಧಿಸಿಕೊಂಡನು. ಕಂಪನಿಯ ಹೊಸ ಅಕ್ಸೆಸರೀಸ್‌ಗಳು ಮಾರುಕಟ್ಟೆಯ ವೇಗವನ್ನು ಎದುರಿಸುವಲ್ಲಿ ವಿಫಲಗೊಂಡವು. ಮುಂದಿನ ಮೂರು ವರ್ಷಗಳಲ್ಲಿ ಕಂಪನಿ ಅತಿಯಾದ ಹಾನಿಯನ್ನು ಅನುಭವಿಸಿತು ಮತ್ತು ದಿವಾಳಿತನದ ಅಂಚನ್ನು ಮುಟ್ಟಿತು. ಮೌರಿಜಿಯೊ ಒಬ್ಬ ಆಕರ್ಷಕ ವ್ಯಕ್ತಿತ್ವ ಹೊಂದಿದವನಾಗಿದ್ದ ಮತ್ತು ತನ್ನ ಕುಟುಂಬದ ವ್ಯಾಪಾರದ ಬಗ್ಗೆ ಅಪಾರ ಪ್ರೀತಿ ಹೊಂದ್ದಿದನು. ಆದರೆ ನಾಲ್ಕು ವರ್ಷಗಳ ನಂತರ ಕಂಪನಿಯ ಎಲ್ಲ ಹಿರಿಯ ಮ್ಯಾನೇಜರ್‌ಗಳು ಆತನನ್ನು ಕಂಪನಿ ನಡೆಸಿಕೊಂಡುಹೊಗಲು ಅಸಮರ್ಥ ಎಂದು ಒಪ್ಪಿಕೊಂಡರು. ಆತನ ಕಾರ್ಯನಿರ್ವಹಣೆಯು ಬ್ರಾಂಡನ ಆಕರ್ಷಣೆ, ಉತ್ಪಾದನೆಯ ಗುಣಮಟ್ಟ ಮತ್ತು ಹಂಚಿಕೆಯ ಮೇಲೆ ದುಷ್ಪರಿಣಾಮ ಬೀರಿತ್ತು. ಆಗಸ್ಟ್ 1993 ರಲ್ಲಿ ಆತ ಕಂಪನಿಯಲ್ಲಿಯ ತನ್ನ ಎಲ್ಲಾ ಶೇರುಗಳನ್ನು ಇನ್ವೆಸ್ಟ್‌ಕಾರ್ಪ್‌ಗೆ ಮಾರುವಂತೆ ಒತ್ತಾಯಕ್ಕೊಳಗಾದನು. ಮೌರಿಜಿಯೊ ಬಿಟ್ಟ ಒಂದೇ ವರ್ಷದಲ್ಲಿ ಡಾವ್ನ್ ಮೆಲ್ಲೊ ಬರ್ಗ್‌ಡಾರ್ಫ್ ಗುಡ್‌ಮ್ಯಾನ್‌ನಲ್ಲಿ ತನ್ನ ಕೆಲಸಕ್ಕೆ ಮರಳಿದಳು ಮತ್ತು ಕ್ರಿಯಾಶೀಲ ನಿರ್ದೆಶಕನ ಹುದ್ದೆ 32 ವರ್ಷದ ಟಾಮ್ ಫೊರ್ಡ್‌ನ ಪಾಲಾಯಿತು. ಮೌರಿಜಿಯೊ ಮತ್ತು ಮೆಲ್ಲೊನ ಸ್ಪೂರ್ತಿಯಿಲ್ಲದ ನಿರ್ದೇಶನದಲ್ಲಿ ಫೋರ್ಡ್ ಕೆಲ ವರ್ಷಗಳವರೆಗೆ ಕೆಲಸಮಾಡಿದ್ದನು ಮತ್ತು ಆತ ಕಂಪನಿಯನ್ನು ಹೊಸ ದಾರಿಯಲ್ಲಿ ನಡೆಸಿ ಅದಕ್ಕೆ ಹೊಸ ರೂಪ ಕೊಡುವ ಆಸೆ ಹೊಂದಿದ್ದನು. ಗುಸ್ಸಿ ಗ್ರೂಪ್ NVನ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬೆಳೆದ ಡಿ ಸೋಲ್, ಗುಸ್ಸಿ ಒಂದು ಲಾಭದಾಯಕ ಕಂಪನಿಯಾಗಿ ಬೆಳೆಯಲು ಅದಕ್ಕೆ ಹೊಸ ರೂಪ ಅಥವಾ ಗುರುತಿನ ಅವಶ್ಯಕತೆ ಇದೆಯಂದು ಅರಿತುಕೊಂಡನು ಮತ್ತು ಫೋರ್ಡ್‌ನ ಸಂಕಲ್ಪಕ್ಕೆ ತನ್ನ ಸಹಮತಿ ನೀಡಿದನು.

ಇದೇ ದೃಷ್ಟಿಕೋನದಲ್ಲಿಟ್ಟುಕೊಂಡು 1999 ಪೂರ್ವದಲ್ಲಿ ಬೆರ್ನಾರ್ಡ್ ಅರ್ನಾಲ್ಟ್‌ನ ಮುಂದಾಳತ್ವದಲ್ಲಿ LVMH ಎಂಬ ಲಕ್ಸುರಿ ವಸ್ತುಗಳ ಕಂಪನಿ ಗುಸ್ಸಿಯಲ್ಲಿ ತನ್ನ ಶೇರುಗಳ ಒಡೆತನವನ್ನು ಹೆಚ್ಚಿಸಿತು. ಡೊಮೆನಿಕೊ ಡಿ ಸೋಲೆ ಈ ಸುದ್ದಿ ತಿಳಿದು ಕೋಪಗೊಂಡನು ಮತ್ತು ಆತ ಕಂಪನಿಯ ನಿರ್ದೇಶಕರ ಗುಂಪಿನಲ್ಲಿ ಸ್ತಾನ ಕೊಡುವಂತೆ ವಿನಂತಿಸಿಕೊಂಡ ಅರ್ನಾಲ್ಟನ ಅಸೆಯನ್ನು ತಳ್ಳಿಹಾಕಿದನು. ಇದರಿಂದ ಅತನಿಗೆ ಗುಸ್ಸಿಯ ಗಳಿಕೆಯ ಗುಪ್ತ ವರದಿಗಳು, ಯೋಜನಾ ಸಬೆಗಳು ಮತ್ತು ಡಿಸೈನ್ ಉಪಾಯಗಳ ಬಗ್ಗೆ ಮಾಹಿತಿ ದೊರೆಯಬಹುದಿತ್ತು. ಅರ್ನಾಲ್ಟನ ಶೇರುಗಳ ಬೆಲೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಡಿ ಸೋಲ್ ಹೊಸ ಶೇರುಗಳನ್ನು ಬಿಡುಗಡೆಗೊಳಿಸುವುದರ ಮೂಲಕ ಆತನಿಗೆ ತಕ್ಕ ಉತ್ತರ ನೀಡಿದನು. ಯೋಜನಾತ್ಮಕ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಆತ ಫ್ರೆಂಚ್ ಮೂಲದ ಪಿನಾಲ್ಟ್-ಪ್ರಿಂಟೆಂಪ್ಸ್-ರೆಡೌಟ್ (PPR) ಕಂಪನಿಯನ್ನು ಸಂಪರ್ಕಿಸಿದನು. ಈ ಕಂಪನಿಯ ಸ್ಥಾಪಕನಾದ ಫ್ರಾನ್ಸಿಸ್ ಪಿನಾಲ್ಟ ಅತನ ಉಪಾಯಕ್ಕೆ ಒಪ್ಪಿಗೆ ನೀಡಿದನು ಮತ್ತು ಆತ ಕಂಪನಿಯ 37 ಮಿಲಿಯನ್ ಶೇರುಗಳನ್ನು ಅಂದರೆ 40% ಶೇರುಗಳನ್ನು ಕೊಂಡನು. ಇದರಿಂದ ಅರ್ನಾಲ್ಟನ ಶೇರುಗಳ ಬೆಲೆ 20% ಇಳಿಮುಖಗೊಂಡಿತು. ಕೋಪಗೊಂಡ ಆತ ಗುಸ್ಸಿ-PPR ಸಹಬಾಗಿತ್ವದ ನೈಜತೆಯನ್ನು ಪ್ರಶ್ನಿಸಿ ಕಾನೂನುಬದ್ದ ಹೋರಾಟಕ್ಕಿಳಿದನು ಮತ್ತು ಈ ಹೋರಾಟದಲ್ಲಿ ಗುಸ್ಸಿಯ ಪರವಾಗಿ ವಕಾಲತ್ತು ವಹಿಸಲು ಆತ ಸ್ಕೇಡನ್, ಆರ್ಪ್ಸ್, ಸ್ಲೇಟ್, ಮೀಘರ್ & ಫ್ಲೋಮ್ ಎಂಬ ಕಾನೂನು ತಜ್ಞರ ಸಹಾಯ ಪಡೆದನು. PPR ಒಪ್ಪಂದವು ನೆದರ್ಲ್ಯಾಂಡ್ ದೇಶದ ವ್ಯಾಪಾರಿಯ ನಿಯಮದನ್ವಯ ಮಾಡಿಕೊಳ್ಳಲಾಗಿತ್ತು. ಇದರಿಂದ ಅಲ್ಲಿಯ ನ್ಯಾಯಾಲಯ ಈ ಒಪ್ಪಂದವನ್ನು ಎತ್ತಿ ಹಿಡಿಯಿತು. ಕ್ರೆಡಿಟ್ ಲಿಯೊನ್ನೈಸ್ ಕಂಪನಿಯ 11% ಶೇರುಗಳನ್ನು ಹೊಂದಿದ್ದು ಎರಡನೆಯ ಅತ್ಯಂತ ಹೆಚ್ಚು ಶೇರುಗಳನ್ನು ಹೊಂದಿದ ಕಂಪನಿಯಾಗಿದೆ 2001 ಸೆಪ್ಟೆಂಬರ್‌ ವೇಳೆಯಲ್ಲಿ ಒಂದು ಸೆಟಲಮೆಂಟ್ ಒಪ್ಪಂದವು ಗುಸ್ಸಿ ಗ್ರೂಪ್, LVMH, ಮತ್ತು PPR ಕಂಪನಿಗಳ ನಡುವೆ ನಡೆಯಿತು.

ಕಂಪನಿಯ ಯಶಸ್ವಿ ಫ್ಲ್ಯಾಗಶಿಪ್ ಲೇಬೆಲ್‌ಗಳಾದ ಜಾನ್ ರೇ, ಅಲೆಸ್ಸಾಂಡ್ರಾ ಪ್ಯಾಛಿನೆಟ್ಟಿ ಮತ್ತು ಫ್ರಿಡಾ ಗಿಯಾನ್ನಿನಿ,[೪] ಇವುಗಳು ಫೋರ್ಡ್‌ನ ಕ್ರಿಯಾಶೀಲ ನಿರ್ದೇಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆತನ ನಿರ್ಗಮನದ ನಂತರ ಗುಸ್ಸಿ ಗ್ರೂಪ್ ತನ್ನ ಯಶಸ್ವಿ ಮುನ್ನೆಡೆಗೆ ಈ ಮೂರು ಡಿಸೈನರಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು.

 ಫ್ಯಾಛಿನೆಟ್ಟಿಯು 2004ರಲ್ಲಿ ಮಹಿಳೆಯರ ಬಟ್ಟೆಯ ವಿಭಾಗದ ಕ್ರಿಯಾಶೀಲ ನಿರ್ದೇಶಕನಾಗಿ ಬಡ್ತಿ ಪಡೆದನು ಮತ್ತು ಆತ ಕಂಪನಿಯನ್ನು ಬಿಡುವ ಮುಂಚೆ ಎರಡು ಸೀಸನ್‌ಗಳವರೆಗೆ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದನು. ರೇ ಮೂರು ವರ್ಷಗಳವರೆಗೆ ಪುರುಷರ ಬಟ್ಟೆಯ ವಿಭಾಗದ ಕ್ರಿಯಾಶೀಲ ನಿರ್ದೆಶಕನಾಗಿ ಸೇವೆಸಲ್ಲಿಸಿದನು. 32 ವರ್ಷ ವಯಸ್ಸಿನ ಗಿಯಾನ್ನಿನಿ ಪುರುಷರ ಮತ್ತು ಮಹಿಳೆಯರ ಬಟ್ಟೆಯ ಡಿಸೈನ್ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದನು. ಪ್ರಸ್ತುತ ಆತ  ಬ್ರಾಂಡಿನ ಕ್ರಿಯಾಶೀಲ ನಿರ್ದೆಶಕನಾಗಿ ಸೇವೆಸಲ್ಲಿಸುತ್ತಿದ್ದಾನೆ.

ಫ್ರಿಡಾ ಗಿಯಾನ್ನಿನಿ ಮೊದಲು ಆಕ್ಸಸರಿಗಳ ಕ್ರಿಯಾಶೀಲ ನಿರ್ದೇಶಕನಾಗಿದ್ದ ಮತ್ತು ಆತ 2006ರಲ್ಲಿ ಕಂಪನಿಗೆ ಒಬ್ಬನೆ ಕ್ರಿಯಾಶೀಲ ನಿರ್ದೇಶಕನಾಗಿ ನಾಮಕರಣಗೊಂಡನು.

2009ರಲ್ಲಿ ಪ್ಯಾಟ್ರಿಜಿಯೊ ಡಿ ಮಾರ್ಕೊ ಗುಸ್ಸಿಯ CEO ಮಾರ್ಕ್ ಲೀಯ ಹುದ್ದೆಯನ್ನು ಅಲಂಕರಿಸಿದನು.

ಅಟೋಮೊಬೈಲ್ ಕಲ್ಚರ್[ಬದಲಾಯಿಸಿ]

ಗುಸ್ಸಿ ಪ್ಯಾಕೇಜನ ಜೊತೆಗೆ AMC Hornet Sportabout ಒಳಬಾಗ.

ಅಮೇರಿಕನ್ ಮೋಟಾರ್ಸ್ ಕಾರ್ಪೊರೇಷನ್[ಬದಲಾಯಿಸಿ]

ಅಲ್ಡೊ ಗುಸ್ಸಿ ಹೊಸ ಮಾರುಕಟ್ಟೆಯಲ್ಲಿ ಅಮೇರಿಕನ್ ಮೋಟಾರ್ಸ್ ಕಾರ್ಪೊರೇಷನ್ (AMC) ಜೊತೆಗೆ ಒಂದು ಒಪ್ಪಂದವನ್ನೊಳಗೊಂಡಂತೆ ವಿಸ್ತಾರಗೊಳಿಸಿದನು. 1972 ಮತ್ತು 1973 ರಲ್ಲಿ ಒಬ್ಬ ಪ್ರಸಿದ್ದ ಫ್ಯಾಶ್ಯನ್ ಡಿಸೈನರ್ ನಿರ್ಮಿಸಿದ್ದ ಒಂದು ವಿಶೇಷ ಲಗ್ಜುರಿ ಟ್ರಿಮ್ ಪ್ಯಾಕೆಜ್ ಸೌಲಭ್ಯವುಳ್ಳ AMC Hornet ಕಾಂಪ್ಯಾಕ್ಟ್ "ಸ್ಪೋರ್ಟ ಅಬೌಟ್" ಸ್ಟೇಶ್ಯನ್ ವ್ಯಾಗನ್ ಮೊದಲ ಅಮೇರಿಕಾದ ಕಾರುಗಳಲ್ಲಿ ಒಂದಾಯಿತು. ಡಿಸೈನರ್‌ನ ಗುರುತು ಮತ್ತು ಹೊರಬಾಗದ ಬಣ್ಣದ ಬಾಗಗಳು ಜೊತೆಗೆ ಗುಸ್ಸಿ ಕಾರುಗಳ ಬಾಗಿಲು ಮತ್ತು ಮೇಲ್ಬಾಗಗಳು ಹಸಿರು, ಕೆಂಪು ಮತ್ತು ಬಿಳಿ ಬಣ್ಣದ ಪಟ್ಟಿಗಳಿಂದ ಅಲಂಕೃತಗೊಂಡಿದ್ದವು. ಅಮೇರಿಕನ್ ಮೋಟಾರ್ಸ್ ತನ್ನ ಜಾವೆಲಿನ್ ಆಟೋಮೊಬೈಲ್‌ನ ಒಂದು ಪಿಯರಿ ಕಾರ್ಡಿನ್ ಆವೃತ್ತಿಯನ್ನು ಕೂಡಾ ಅರ್ಪಿಸಿತು.

ಜನರಲ್‌ ಮೋಟಾರ್ಸ್‌[ಬದಲಾಯಿಸಿ]

1979 ಮತ್ತು 1980 ರಲ್ಲಿ ಒಂದು ಮಿಯಾಮಿ ಮೂಲದ ಆಫ್ಟರ್ ಮಾರ್ಕೆಟ್ ಕಂಪನಿ ಗುಸ್ಸಿ ಆವೃತ್ತಿಯ ಕಾಡಿಲ್ಯಾಕ್ ಸೆವಿಲ್ಲೆಯನ್ನು ಅರ್ಪಿಸಿತು. ಕಾರಿನ ಹೊರಬಾಗವು ಮುಚ್ಚಳದ ಆಭರಣವಾಗಿ ಗುಸ್ಸಿ ಗುರುತು "facing double G" ಮತ್ತು c-ಪಿಲ್ಲರ್‌ನಿಂದಾವೃತವಾದ ವಿನೈ ಮೇಲ್ಛಾವಣಿಯನ್ನು ಒಳಗೊಂಡಿತ್ತು. ಒಳಬಾಗದಲ್ಲಿ ಲೋಗೊ ಗುರುತನ್ನೊಳಗೊಂಡ ಹೆಡಲೈನರ್ ಮತ್ತು ಹೆಡರೆಸ್ಟ್‌ಗಳಿದ್ದವು. ಕಾರಿನ ನಿಯಂತ್ರಣ ಭಾಗ ದಪ್ಪಕ್ಷರದಲ್ಲಿ "ಗುಸ್ಸಿ ಸ್ಕ್ರಿಪ್ಟ್" ಗುರುತನ್ನು ಹೊಂದಿತ್ತು. ಒಳಭಾಗದಲ್ಲಿ ಗುಸ್ಸಿಯ ಲಗ್ಗೇಜನ ಪೂರ್ತಿ ಸೆಟ್ ಇತ್ತು.

ಫೋರ್ಡ್ ಮೋಟಾರ್ ಕಂಪನಿ[ಬದಲಾಯಿಸಿ]

1989ರ ಗುಸ್ಸಿಯ ಒಂದು ಶ್ರೇಣಿ Lincoln Town Car ಬಿಡುಗಡೆಗೊಳಿಸಲು ನಿರ್ಧರಿಸಿತು ಅದರೆ ಇದು ಎಂದೂ ಪಲಪ್ರದವಾಗಲಿಲ್ಲ. ಲಿಂಕನ್ 1970 ಮತ್ತು 1980ರ ದಶಕದಲ್ಲಿ ಎಮಿಲಿಯೊ ಪುಸ್ಸಿ, ಬಿಲ್ಲ್ ಬ್ಲಾಸ್, ಗಿಯಾನ್ನಿ ವರ್ಸಾಸ್, ಹಬರ್ಟ್ ಡಿ ಗಿವೆಂಚಿ ಮತ್ತು ವ್ಯಾಲೆಂಟಿನೊ ಡಿಸೈನರ್ ಆವೃತ್ತಿಗಳಾನ್ನು ಅರ್ಪಿಸಿತು.

ಸಹಭಾಗಿತ್ವಗಳು[ಬದಲಾಯಿಸಿ]

ಗುಸ್ಸಿ 2005ರಿಂದ UNICEFನ ಜೊತೆಗೆ ಒಂದು ಸಹಬಾಗಿತ್ವವನ್ನು ಹೊಂದಿತ್ತು.[೫] ಜಗತ್ತಿನಾದ್ಯಂತ ಗುಸ್ಸಿಯ ಸ್ಟೋರ್‌ಗಳಲ್ಲಿ ಮಾರಾಟಗಳ ಒಂದು ಪ್ರತಿಶತ ವಿಶೇಷವಾದ ಸಂಪಾದನೆಯು UNICEFಗೆ ದಾನವಾಗಿ ನೀಡಲಾಗುತ್ತದೆ. ಈ ವಿಶೇಷ ನಿಧಿಯು ಯುನೈಟೆಡ್ ನೇಷನ್ಸ್‌ ಚಿಲ್ಡ್ರನ್ಸ್ ಫಂಡ್‌ಗೆ ಹೋಗುತ್ತದೆ. ಶಿಕ್ಷಣ, ಆರೊಗ್ಯ, ರಕ್ಷಣೆ, ಸಬ್-ಸಹಾರನ್-ಆಫ್ರಿಕಾದ HIV/AIDS ಸೋಂಕಿತ ಮತ್ತು ಅನಾಥ ಮಕ್ಕಳಿಗೆ ಸ್ವಚ ನೀರಿನ ಯೋಜನೆಗೆ ಸಹಾಯ ಒದಗಿಸುವಲ್ಲಿ UNICEF ಸಹಾಯಾರ್ಥವಾಗಿ ಗುಸ್ಸಿಯ ವಾರ್ಷಿಕ ಚಳುವಳಿಯನ್ನು ಹಮ್ಮಿಕೊಳುತ್ತದೆ. 2009ರ ಚಳುವಳಿಗೆ, ಮೈಕೆಲ್ ರಾಬರ್ಟ್ಸ್ ಅವರು ಮಕ್ಕಳ ಪುಸ್ತಕ "ಸ್ನೋಮ್ಯಾನ್ ಇನ್ ಆಫ್ರಿಕಾ" ಬಿಡುಗಡೆ ಮಾಡಿದರು, ಇದರ ಲಾಭವು UNICEFಗೆ ಹೋಗುತ್ತದೆ. ಐದು ವರ್ಷಗಳಲ್ಲಿ ಗುಸ್ಸಿಯು UNICEFಗಾಗಿ $7 ಮಿಲಿಯನ್ ಹಣವನ್ನು ದಾನವಾಗಿ ನೀಡಿದೆ. 2004ರಲ್ಲಿ UNICEF , ನೆಲ್ಸನ್ ಮಂಡೆಲಾ ಫೌಂಡೇಶನ್, ಮತ್ತು ಹ್ಯಾಂಬರ್ಗ್ ಸೊಸೈಟಿ ಒಕ್ಕೂಟದಲ್ಲಿ ಪ್ರಾರಂಭವಾದ "ಸ್ಕೂಲ್ಸ್ ಫಾರ್ ಆಫ್ರಿಕಾ"ಕ್ಕೆ ಗುಸ್ಸಿಯು ಹೆಚ್ಚಿನ ಕೊಡುಗೆಯನ್ನು ನೀಡಿದೆ

 ಇದರ ಮೂಲ ಉದ್ದೇಶ ಎಲ್ಲರಿಗೂ ಸರಳವಾಗಿ ಮೂಲಬೂತ ಶಿಕ್ಷಣ ಸಿಗುವಂತಾಗಬೇಕು. HIV/AIDSನಿಂದ ಅನಾಥವಾದ ಮಕ್ಕಳು ಮತ್ತು ಕಡುಬಡತನದಲ್ಲಿ ವಾಸಿಸುತ್ತಿರುವ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ದಾಖಲೆಗಳು[ಬದಲಾಯಿಸಿ]

ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ಗುಸ್ಸಿಯ "ಜೀನಿಯಸ್ ಜೀನ್ಸ್" ಜಗತ್ತಿನಲ್ಲೆ ಅತ್ಯಂತ ವೆಚ್ಚದಾಯಕವಾದ ಜೀನ್ಸ್‌ಗಳಾಗಿವೆ. ಗುಸ್ಸಿಯು 1998 ಅಕ್ಟೋಬರ್‌ನಲ್ಲಿ ಮಿಲಾನ್ ದೇಶದ ತನ್ನ ಆರಂಭದ ದಿನಗಳಲ್ಲಿ ಆಫ್ರಿಕಾದ ಮುತ್ತಿನಿಂದ ಮಾಡಲ್ಪಟ್ಟ ಜೀನ್ಸ್ ಬಟ್ಟೆಗಳನ್ನು ತಯಾರಿಸಿತ್ತು ಮತ್ತು ಒಂದು ಜೊತೆ ಜೀನ್ಸ್ ಬಟ್ಟೆಯ ಬೆಲೆ US$3,134 ಆಗಿತ್ತು. CD[೬]

ಇವನ್ನೂ ನೋಡಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

  1. Gucci Group corporate history web pages Archived 29 May 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., 16 ಜೂನ್ 2007ರಂದು ಮರುಸಂಪಾದಿಸಲಾಗಿದೆ.
  2. ೨.೦ ೨.೧ "The 100 Top Brands: Gucci". Business Week. 2008. Archived from the original on 6 ಜುಲೈ 2013. Retrieved 19 ಏಪ್ರಿಲ್ 2010.
  3. Hoover Profile of Gucci Group NV Answers.comನಿಂದ
  4. Gucci official page for its creative Director Archived 29 May 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., 16 ಜೂನ್ 2007ರಂದು ಮರುಸಂಪಾದಿಸಲಾಗಿದೆ.
  5. "UNICEF International partnerships: Gucci". UNICEF. Archived from the original on 11 ಸೆಪ್ಟೆಂಬರ್ 2009. Retrieved 25 ಡಿಸೆಂಬರ್ 2009.
  6. "Yara, Susan, "The Most Expensive Jeans" Forbes magazine, 30 ನವೆಂಬರ್ 2005, 16 ಜೂನ್ 2007ರಂದು ಮರುಸಂಪಾದಿಸಲಾಗಿದೆ". Archived from the original on 15 ಡಿಸೆಂಬರ್ 2005. Retrieved 19 ಏಪ್ರಿಲ್ 2010.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:PPR (company)

"https://kn.wikipedia.org/w/index.php?title=ಗುಸ್ಸಿ&oldid=1223000" ಇಂದ ಪಡೆಯಲ್ಪಟ್ಟಿದೆ