ವಿಷಯಕ್ಕೆ ಹೋಗು

ಇಂದ್ರಕುಮಾರ್ ಗುಜ್ರಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಐ. ಕೆ. ಗುಜ್ರಾಲ್ ಇಂದ ಪುನರ್ನಿರ್ದೇಶಿತ)
ಐ ಕೆ ಗುಜ್ರಾಲ್
ಐ ಕೆ ಗುಜ್ರಾಲ್
ಜನನ: ಡಿಸೆಂಬರ್ ೪, ೧೯೧೯
ಜನ್ಮಸ್ಥಳ ಝೇಲಮ್, ಪಂಜಾಬ್
ಭಾರತದ ಪ್ರಧಾನ ಮಂತ್ರಿ
ರಾಜಕೀಯ ಪಕ್ಷ: ಜನತಾ ದಳ
ಅವಧಿ ಆರಂಭ ಏಪ್ರಿಲ್ ೨೧, ೧೯೯೭
ಅವಧಿ ಅಂತ್ಯ: ಮಾರ್ಚ್ ೧೯, ೧೯೯೮
ಪೂರ್ವಾಧಿಕಾರಿ ಎಚ್ ಡಿ ದೇವೇಗೌಡ
ಉತ್ತರಾಧಿಕಾರಿ ಅಟಲ್ ಬಿಹಾರಿ ವಾಜಪೇಯಿ

(ಜನನ: ಡಿಸೆಂಬರ್ ೪, ೧೯೧೯-ಮರಣ: ನವೆಂಬರ್, ೩೦, ೨೦೧೨) ಇಂದ್ರ ಕುಮಾರ್ ಗುಜ್ರಾಲ್,ಭಾರತದ ೧೨ ನೆಯ ಪ್ರಧಾನ ಮಂತ್ರಿಗಳು. ಹೆಚ್.ಡಿ.ದೇವೇಗೌಡರನಂತರ ರಾಜ್ಯಸಭೆಯಿಂದ ನೇಮಕಗೊಂಡ ಎರಡನೇ ಪ್ರಧಾನಿಯಾಗಿದ್ದಾರೆ. ಇಂದ್ರ ಕುಮಾರ್ ಗುಜ್ರಾಲ್ ಒಬ್ಬ ಬುದ್ಧಿಜೀವಿ, ಸಭ್ಯರಾಜಕಾರಣಿ, ಆದರ್ಶವಾದಿ, ಶಾಂತಿಪ್ರಿಯ, ತನ್ನದೇ ಆದ ರಾಜಕೀಯ ನೀತಿ ಹಾಗೂ ತಮ್ಮ ವಿಶಿಷ್ಠ ಛಾಪು ಇರುತ್ತಿತ್ತು. ಸೈದ್ಧಾಂತಿಕ ಹಾಗೂ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು. ತಮ್ಮ ಸ್ವಸಾಮರ್ಥ್ಯದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಲಯಗಳಲ್ಲಿ ಮೆರೆದರು. ಆಳವಾದ ಜ್ಞಾನ ಹೊಂದಿದ್ದರು. ೨ ಬಾರಿ ವಿದೇಶಾಂಗ ಸಚಿವರಾಗಿದ್ದರು. ನೆರೆಹೊರೆಯ ರಾಷ್ಟ್ರಗಳ ಜೊತೆಗೆ ಸ್ನೇಹ ಸಂಬಂಧ ಸೌಹಾರ್ದಯುತವಾಗಿರಬೇಕೆನ್ನುವ ಸಿದ್ಧಾಂತ. ವಿದೇಶೀಯರೂ ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು.

ಪರಿಶುದ್ಧವಾದ ರಾಜಕೀಯ ಜೀವನ

[ಬದಲಾಯಿಸಿ]

ರಾಜಕೀಯ ಜೀವನ ಪರಿಶುದ್ಧವಾಗಿತ್ತು. ಶ್ರೀಮತಿ ಇಂದಿರಾಜಿಯವರ ಸಂಪುಟದಲ್ಲಿ ವಿವಿಧ ಖಾತೆಗಳಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು. ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಜನತಾದಳದ ನೇತೃತ್ವದ ಸಂಯುಕ್ತರಂಗ ವಹಿಸಿಕೊಂಡ ಸರ್ಕಾರದಲ್ಲೂ ಪ್ರಧಾನಿಯಾಗಿ ಶೋಭಿಸಿದರು. ಎಚ್.ಡಿ.ದೇವೇಗೌಡರಿಗೆ ನೀಡಲಾದ ಬೆಂಬಲವನ್ನು ಕಾಂಗ್ರೆಸ್ ಹಿಂತೆಗೆದುಕೊಂಡಿತು. ಆಗ ಅಜಾತಶತೃವಿನಂತಿದ್ದ ಪ್ರಧಾನಿಯಾಗಿ ಚುನಾಯಿಸಲ್ಪಟ್ಟರು. ಇದ್ದದ್ದು ಕೇವಲ ೧೦ ತಿಂಗಳಾದರೂ ಪಕ್ಷಭೇದವಿಲ್ಲದೆ ಎಲ್ಲರೊಡನೆಯೂ ಸೌಹಾರ್ದಯುತವಾಗಿ ವ್ಯವಹರಿಸಿ ಜನರ ಹೃದಯವನ್ನು ಗೆಲ್ಲುವ ಶಕ್ತಿಯಿತ್ತು.

ಜನನ, ವಿದ್ಯಾಭ್ಯಾಸ

[ಬದಲಾಯಿಸಿ]

ಜನಿಸಿದ್ದು ಸನ್. ೧೯೧೯ ರ ಡಿಸೆಂಬರ್, ೪ ರಂದು, ಪಾಕೀಸ್ತಾನದ ಝೀಲಂ ನಲ್ಲಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಅವತಾರ್ ನಾರಾಯಣ್ ಹಾಗೂ ಪುಷ್ಪಾ ಗುಜ್ರಾಲರಿಗೆ. ಡಿಎವಿ ಕಾಲೇಜ್, ಹೈಲಿ ಕಾಲೆಜ್ ಆಫ್ ಕಾಮರ್ಸ್, ಮತ್ತು ಪ್ರಸಕ್ತ ಲಾಹೋರಿನಲ್ಲಿರುವ 'ಫೋರ್ ಮ್ಯಾನ್ ಕ್ರಿಶ್ಚಿಯನ್ ಕಾಲೇಜ್' ನಲ್ಲಿ ಕಲಿತ ಗುಜ್ರಾಲ್, ವಿದ್ಯಾರ್ಥಿಯಾದಾಗಲೇ ರಾಜಕಾರಣದಲ್ಲಿ ಭಾಗಿಯಾಗಿದ್ದರು. ಮುಂದೆ, 'ಕ್ವಿಟ್ ಇಂಡಿಯಾ ಚಳುವಳಿ'ಯಲ್ಲಿ ಧುಮಿಕಿ ೧೯೪೨ ರಲ್ಲಿ ಜೈಲುವಾಸವನ್ನೂ ಅನುಭವಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಅವರು ಭಾರತೀಯ ಕಮ್ಯುನಿಷ್ಟ್ ಪಕ್ಷದ ಸದಸ್ಯರಾದರು. ಅವರಿಗೆ ಇಬ್ಬರುಗಂಡುಮಕ್ಕಳು ಹಾಗೂ ಮೂವರು ಮೊಮ್ಮಕ್ಕಳಿದ್ದಾರೆ. ಅವರ ಪತ್ನಿ ೧೧ನೇ ಜುಲೈ ೨೦೧೧ರಂದು ಕಾಲವಾದರು. ತಮ್ಮ ಜೀವನದುದ್ದಕ್ಕೂ 'ಅಜಾತಶತೃ'ವೆಂದು ಹೆಸರಾದ ಅವರು, ಮೌಲ್ಯಾಧಾರಿತ ರಾಜಕೀಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ಪ್ರಧಾನಮಂತ್ರಿಯ ಸ್ಥಾನದಲ್ಲಿದ್ದಾಗ ಒತ್ತಡದಲ್ಲೂ ಸಮಾಧಾನವಾಗಿರುವುದು ಹೇಗೆ ಎನ್ನುವ ಉದಾಹರಣೆಗೆ ಅವರು ಅನ್ವರ್ಥನಾಮರಾಗಿದ್ದರು. ಸಂಕಷ್ಟದ ಸಮಯದಲ್ಲಿ ಶಾಂತ ಮನಸ್ಸಿನಿಂದ ಇರುವ ಸ್ವಭಾವವನ್ನು ಬೆಳೆಸಿಕೊಂಡಿದ್ದರು. ತಾವು ನಂಬಿದ ಮೌಲ್ಯಗಳಲ್ಲಿ ಅಚಲ ನಿಷ್ಟೆಯಿಂದ ಇರುತ್ತಿದ್ದರು. ವಿಧ್ಯಾರ್ಥಿಯಾಗಿದ್ದಾಗಲೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಭೂಗತ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ದಶಕಗಳಕಾಲ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನೆರೆಹೊರೆಯ ರಾಷ್ಟ್ರಗಳ ಜೊತೆ ಸ್ನೇಹ ಬಾಂಧವ್ಯ ಇರಿಸಿಕೊಳ್ಳಲು ೫ ತತ್ವಗಳನ್ನು ರೂಪಿಸಿದ್ದರು. ಅವನ್ನು 'ಗುಜ್ರಾಲ್ ಡಾಕ್ಟ್ರಿನ್,' ಎಂದು ಕರೆಯುತ್ತಾರೆ. ರಾಷ್ಟ್ರದ ವಿಭಜನೆಯ ಸಮಯದಲ್ಲಿ ಪಾಕೀಸ್ತಾನದಿಂದ ವಲಸೆಬಂದ ಗುಜ್ರಾಲ್, ತಳಮಟ್ಟದ ರಾಜಕೀಯ ಕಾರ್ಯಕರ್ತರಾಗಿದ್ದರೂ ಅದೃಷ್ಟದ ಬಲದಿಂದ ಪ್ರಧಾನಿಯ ಪಟ್ಟವೇರಿದರು.

ಐ.ಕೆ.ಗುಜ್ರಾಲ್ ರವರ ಶುದ್ಧ-ವ್ಯಕ್ತಿತ್ವ

[ಬದಲಾಯಿಸಿ]

ಒಬ್ಬ ಪ್ರತಿಭಾನ್ವಿತ ವ್ಯಕ್ತಿ. ಅತ್ಯುತ್ತಮ ಓದುಗ, ಬರಹಗಾರ, ವಿದೇಶಾಂಗ ವ್ಯವಹಾರ ಖಾತೆಯ ಸಚಿವರಾಗಿ ಭಾರತವನ್ನು ವಿಶ್ವಮಟ್ಟದಲ್ಲಿ ಸಮರ್ಥವಾಗಿ ಗುರುತಿಸುವಂತೆ ನಡೆದುಕೊಂಡರು. ಅಪ್ಪಟ ದೇಶಪ್ರೇಮಿ, ಮಾಸ್ಕೋದಲ್ಲಿ ಪ್ರತ್ಯೇಕವಾದ ವಿದೇಶಾಂಗ ವ್ಯವಹಾರಗಳ ಸಚಿವರ ಅಗತ್ಯವಿರಲಿಲ್ಲ. ಗುಜ್ರಾಲ್ ನೆಹರೂ ತತ್ವಗಳ ಆಧಾರದಮೇಲೆ ಅಪಾರ ವಿಶ್ವಾಸ ಪ್ರೀತಿ ಇಟ್ಟುಕೊಂಡಿದ್ದರು. ಸಮ್ಮಿಶ್ರ ಸರ್ಕಾರವನ್ನು ನಿಭಾಯಿಸುವ ಕ್ಲಿಷ್ಟ ಘಟ್ಟದಲ್ಲೂ ಅವರು ಹಲವಾರು ಸಂಕೀರ್ಣ ವಿಚಾರಗಳನ್ನೂ ಬಹಳ ಯಶಸ್ವಿಯಾಗಿ ನಿಭಾಯಿಸಿದ್ದರು. ಗುಜ್ರಾಲ್ ತಮ್ಮ ಬಿಡುವಿನ ಸಮಯದಲ್ಲಿ ಉರ್ದು ಕವನಗಳನ್ನು ಸಹ ಬರೆಯುತ್ತಿದ್ದರು.

ರಾಜಕೀಯ ಜೀವನ

[ಬದಲಾಯಿಸಿ]

೫೦ ರ ದಶಕದಲ್ಲಿ 'ಎನ್.ಡಿ.ಎಂಸಿಯ ಉಪಾಧ್ಯಕ್ಷರಾಗಿ ಅಧಿಕಾರ ಪರ್ವ' ಆರಂಭಿಸಿದರು. ೧೯೬೪ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರುವ ಪೂರ್ವದಲ್ಲಿ ಗುಜ್ರಾಲರು ೧೯೫೮ರಲ್ಲಿ ನವದೆಹಲಿಪೌರ ಸಮಿತಿಯ ಉಪಾಧ್ಯಕ್ಷರಾದರು. ಅವರು ೧೯೬೪ರಲ್ಲಿ ರಾಜ್ಯಸಭೆಯ ಸದಸ್ಯರಾದರು. ೧೯೭೫ರ ತುರ್ತು ಪರಿಸ್ಥಿತಿಯಲ್ಲಿ ಸೂಚನಾ ಮತ್ತು ಪ್ರಸಾರಣ ಮಂತ್ರಿಯಾಗಿದ್ದರು. ಆ ಸಮಯದಲ್ಲಿ ದೂರದರ್ಶನದ ಮೇಲ್ಚಿಚಾರಣೆಯನ್ನಲ್ಲದೇ, ಮಾಧ್ಯಮ ನಿಯಂತ್ರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರು ಜಲಸಂಪನ್ಮೂಲ ಖಾತೆಯನ್ನೂ ಕೂಡ ಸಂಭಾಳಿಸಿದ್ದಾರೆ. ನಂತರ ಇಂದಿರಾ ಗಾಂಧಿಯವರಿಂದ ಸೊವಿಯೆಟ್ ಒಕ್ಕೂಟರಾಯಭಾರಿಯಾಗಿ ನೇಮಿಸಲ್ಪಟ್ಟು, ಮೊರಾರ್ಜಿ ದೇಸಾಯಿ ಹಾಗೂ ಚೌಧುರಿ ಚರಣ್ ಸಿಂಗ್‍ರ ಅಧಿಕಾರಾವಧಿಯಲ್ಲಿಯೂ ಕೂಡ ಮುಂದುವರೆದರು. ೧೯೮೦ ರಲ್ಲಿ ಕಾಂಗ್ರೆಸ್ ತೊರೆದು, ಜನತಾದಳಕ್ಕೆ ಸೇರಿದರು. ೧೯೮೯ ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ನ್ಯಾಷನಲ್ ಪ್ರಂಟ್ ಸರಕಾರದ ವಿದೇಶಾಂಗ ಸಚಿವರಾದರು. ಕುವೈಟ್ ನ್ನು ಇರಾಕ್ ಆಕ್ರಮಿಸಿದಾಗ, ಅತಂತ್ರ ಸ್ಥಿತಿಯಲ್ಲಿದ್ದ ಸಾವಿರಾರು ಭಾರತೀಯರ ಸಮಸ್ಯೆಗಳನ್ನು ಬಗೆಹರಿಸಿ ಮೆಚ್ಚುಗೆಗೆ ಪಾತ್ರರಾದರು. ದೇವೇಗೌಡರ ಯುನೈಟೆಡ್ ಫ್ರಂಟ್ ಸರಕಾರ ಸನ್ ೧೯೯೭ ರಲ್ಲಿ ಪತನವಾದಮೇಲೆ ಅಸ್ತಿತ್ವಕ್ಕೆ ಬಂದ ಸರಕಾರದಲ್ಲಿ 'ಗುಜ್ರಾಲರೇ ಪ್ರಧಾನಿ'. ಯುಎಫ್ ನಾಯಕ ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಮತ್ತಿತರ ನಡುವೆ ಗಂಭೀರ ಸ್ವರೂಪದ ಭಿನ್ನಾಭಿಪ್ರಾಯ ತಲೆದೋರಿದಾಗ, ಗುಜ್ರಾಲ್, ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿ ಪ್ರಧಾನಿ'ಯಾದ ಅದೃಷ್ಟವಂತರು. ಐ.ಜಿ.ಗುಜ್ರಾಲ್ ರವರ ರಾಜಕೀಯ ಜೀವನದ ಮೆಟ್ಟಿಲುಗಳು :

  • ೧೯೬೪ ರಲ್ಲಿ ರಾಜ್ಯ ಸಭಾ ಸದಸ್ಯ
  • ೧೯೬೬ ರಲ್ಲಿ ಇಂದಿರಾಜಿಯವರು ಪಟ್ಟಕ್ಕೇರಲು ಕಾರಣವಾದ ಕೂಟದಲ್ಲಿ ಗುರುತಿಸಿಕೊಂಡಿದ್ದರು.
  • ತುರ್ತು ಪರಿಸ್ಥಿತಿ ಹೇರಿದಾಗಲೂ ವಾರ್ತಾ ಸಚಿವರಾಗಿದ್ದರು. ಪತ್ರಿಕೆಗಳನ್ನು ಸೆನ್ಸಾರ್ ಮಾಡಿದರು.
  • ೧೯೬೪ ಹಾಗೂ ೧೯೭೬ ರ ನಡುವೆ, ೨ ಬಾರಿ, ರಾಜ್ಯಸಭಾ ಸದಸ್ಯ..
  • .೧೯೮೯ ರಿಂದ ೧೯೯೧ ರ ತನಕ ಲೋಕಸಭೆಯ ಸದಸ್ಯ.

ಎರಡನೆಯ ಬಾರಿಗೆ ಪ್ರಧಾನಿ

[ಬದಲಾಯಿಸಿ]

ಈ ಬಾರಿ ಪ್ರಧಾನಿಯಾಗಿ ಇದ್ದದ್ದು ೨ ತಂಗಳು ಮಾತ್ರ. ರಾಜೀವ್ ಗಾಂಧಿಯವರ ಹತ್ಯೆ ತನಿಖೆ ನಡೆಸಿದ ಜೈನ್ ಆಯೋಗದ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂದೆಗೆದುಕೊಂಡಾಗ, ಗುಜ್ರಾಲ್ ಸರಕಾರ ಮತ್ತೊಮ್ಮೆ ಪತನಗೊಂಡಿತು.

ವೃದ್ಧಾಪ್ಯ,, ಬಹುಅಂಗ ವೈಫಲ್ಯ,, ಹಾಗೂ ಗಂಭೀರ ಸ್ವರೂಪದ ಎದೆ ಸೋಂಕಿಗೆ ತುತ್ತಾದ ೯೨ ವರ್ಷ ಪ್ರಾಯದ ಇಂದ್ರಕುಮಾರ್ ಗುಜ್ರಾಲ್ ರವರು, ಸುಮಾರು ಒಂದು ವರ್ಷದಿಂದ 'ಡಯಾಲಿಸಿಸ್' ಗೆ ಒಳಪಡುತ್ತಿದ್ದರು. ಶ್ವಾಸಕೋಶದ ಸೋಂಕಿನ ಚಿಕಿತ್ಸೆಗಾಗಿ ಅವರನ್ನು ನವೆಂಬರ್ ೧೯ ರಂದು ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಅವರು, ಗುರ್ಗಾವ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ನವೆಂಬರ್, ೩೦, ಶುಕ್ರವಾರದಂದು, ಮದ್ಯಾನ್ಹ ೩-೨೭ ಕ್ಕೆ ಕೊನೆಯುಸಿರೆಳೆದರು. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದರಿಂದ 'ಜೀವರಕ್ಷಕ ವ್ಯವಸ್ಥೆ'ಯನ್ನು ಒದಗಿಸಲಾಗಿತ್ತು. ಶ್ರೀ ಗುಜ್ರಾಲರು, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 'ನರೇಂದ್ರ ಗುಜ್ರಾಲ್' ರಾಜ್ಯಸಭಾ ಸದಸ್ಯ., ಹಾಗೂ ಅಕಾಲಿ ದಳದ ನಾಯಕ. 'ಸತೀಶ್ ಗುಜ್ರಾಲ್,' ಸುಪ್ರಸಿದ್ಧ ಚಿತ್ರ ಕಲಾವಿದ, ಮತ್ತು 'ಆರ್ಕಿಟೆಕ್ಟ್ 'ಆಗಿದ್ದಾರೆ. ಗುಜ್ರಾಲ್ ಅವರ ಪತ್ನಿ ಶೀಲಾ ಗುಜ್ರಾಲ್ ಖ್ಯಾತ ಕವಯಿತ್ರಿ. ಪಂಜಾಬಿ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಶೀಲಾ, ಸನ್ ೨೦೧೧ ರಲ್ಲಿ ತೀರಿಕೊಂಡರು. ಇಂದ್ರ ಕುಮಾರ್ ಗುಜ್ರಾಲ್ ರವರ, ಅಂತ್ಯ ಕ್ರಿಯೆ, ನವ ದೆಹಲಿಯಲ್ಲಿ ಡಿಸೆಂಬರ್ ೧ ರಂದು, ಶನಿವಾರ ಮಧ್ಯಾನ್ಹ ೩.೩೦ ಕ್ಕೆ 'ಸ್ಮೃತಿ ಸ್ಥಲ್' ನಲ್ಲಿ ಜರುಗಿತು. ಗುಜ್ರಾಲ್ ರವರ ಮೃತದೇಹಕ್ಕೆ ಅಗ್ನಿಯನ್ನು ಇಬ್ಬರು ಮಕ್ಕಳೂ ಸೋಕಿಸಿದರು. ಶ್ರೀ ಗುಜ್ರಾಲ್ ರವರ ಅಗಲುವಿಕೆಯ ಶೋಕವನ್ನು ಅಚರಿಸಲು, ಕೇಂದ್ರ ಸರ್ಕಾರ, ೭ ದಿನಗಳ ಶೋಕವನ್ನು ಪ್ರಕಟಿಸಿದೆ.

ಆತ್ಮಕಥನ

[ಬದಲಾಯಿಸಿ]
  • I. K. Gujral: Matters of Discretion: An Autobiography, Hay House, India, 519 pages, Feb. 2011. ISBN 978-93-8048-080-0. Distributors: Penguin books, India. (ಭಾರತೀಯ ಪ್ರಧಾನಮಂತ್ರಿಯೊಬ್ಬರು ರಚಿಸಿದ ಆತ್ಮಕಥೆ)