ಥಾವರ್ ಚಂದ್ ಗೆಹ್ಲೋಟ್
ಗೋಚರ
ಥಾವರ್ ಚಂದ್ ಗೆಹ್ಲೋಟ್ | |
---|---|
ಕರ್ನಾಟಕದ 19ನೇ ರಾಜ್ಯಪಾಲ
| |
ಹಾಲಿ | |
ಅಧಿಕಾರ ಸ್ವೀಕಾರ 11 July 2021 | |
ಪೂರ್ವಾಧಿಕಾರಿ | ವಜುಭಾಯಿ ರುದಭಾಯಿ ವಾಲಾ |
ವೈಯಕ್ತಿಕ ಮಾಹಿತಿ | |
ಜನನ | ರೂಪೇಟಾ, ನಾಗ್ಡಾ, ಮಧ್ಯಪ್ರದೇಶ, ಭಾರತ | ೧೮ ಮೇ ೧೯೮೪
ರಾಜಕೀಯ ಪಕ್ಷ | ಬಿಜೆಪಿ |
ಸಂಗಾತಿ(ಗಳು) | ಅನಿತಾ ಗೆಹ್ಲೋಟ್ |
ಅಭ್ಯಸಿಸಿದ ವಿದ್ಯಾಪೀಠ | ವಿಕ್ರಮ್ ವಿಶ್ವವಿದ್ಯಾಲಯ, ಉಜ್ಜಯಿನಿ, ಮಧ್ಯಪ್ರದೇಶ |
ಧರ್ಮ | ಹಿಂದು |
ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ಪ್ರಸ್ತುತ ರಾಜ್ಯಪಾಲರಾಗಿದ್ದಾರೆ. ಅವರು ಮಧ್ಯಪ್ರದೇಶದಿಂದ ಕರ್ನಾಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಮೊದಲ ವ್ಯಕ್ತಿ. ಜುಲೈ 6, 2021 ರಂದು ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡು ೨೦೨೧ ರ ಜುಲೈ ೧೧ ರಂದು ಅಧಿಕಾರ ವಹಿಸಿಕೊಂಡರು.[೧][೨][೩]ಅವರು 2014 ರಿಂದ 2021 ರವರೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಲ್ಲಿ ಸದನದ ನಾಯಕರಾಗಿದ್ದರು. ಅವರು ಸಂಸದೀಯ ಮಂಡಳಿ ಮತ್ತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು.
ಆರಂಭಿಕ ಜೀವನ
[ಬದಲಾಯಿಸಿ]ಗೆಹ್ಲೋಟ್ ರವರು ಜನಿಸಿದ್ದು ಭಾರತದ ಮಧ್ಯಪ್ರದೇಶದ ನಾಗ್ಡಾದ ರುಪೆಟಾ ಗ್ರಾಮದಲ್ಲಿ. ಅವರದ್ದು ದಲಿತ ಕುಟುಂಬ. ಅವರು ಭಾರತೀಯ ಜನತಾ ಪಕ್ಷದ ಹಿರಿಯ ಸದಸ್ಯರಾಗಿದ್ದಾರೆ ಹಾಗೂ ಅವರು ಕೇಂದ್ರ ಸರ್ಕಾರದಲ್ಲಿ ಹಲವಾರು ಬಾರಿ ಮಂತ್ರಿ ಸ್ಥಾನ ಪಡೆದರು.