ಭಾರತದ ರಾಷ್ಟ್ರೀಯ ಚಿಹ್ನೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಭಾರತದ ರಾಷ್ಟ್ರೀಯ ಚಿಹ್ನೆ

ಭಾರತ ಸರ್ಕಾರವು ೧೯೫೦ ಜನವರಿ ೨೬ ರಂದು ಅಧಿಕೃತವಾಗಿ ಸಾರನಾಥದ, ಅಶೋಕ ಸ್ತಂಭದಲ್ಲಿರುವ ನಾಲ್ಕು ಮುಖಗಳ ಸಿಂಹವನ್ನು ತನ್ನ ರಾಷ್ಟ್ರ ಲಾಂಛನವನ್ನಾಗಿ ಆಯ್ದುಕೊಂಡಿತು. ಚಿಹ್ನೆಯಲ್ಲಿ ಮೂರೆ ಮುಖ ಕಾಣಿಸಿದರು, ಲಾಂಛನವು ನಾಲ್ಕು ಸಿಂಹದ ಮುಖಗಳನ್ನು ಹೊಂದಿದ್ದು, ನಾಲ್ಕನೆಯ ಮುಖವು ಹಿಂಬದಿಯಲ್ಲಿರುವುದು.

ಈ ಲಾಂಛನವು ಒಂದು ವೃತ್ತಾಕಾರದ ಹಾಸುಗಲ್ಲಿನ ಮೇಲೆ ಅಲಂಕರಿಸಿದ್ದು, ಓಡುತ್ತಿರುವ ಕುದುರೆ, ಏತ್ತು, ಆನೆ ಮತ್ತು ಸಿಂಹದ ಅಕೃತಿಗಳು ಧರ್ಮ ಚಕ್ರದ ಜೊತೆಯಲ್ಲಿ ಪರ್ಯಾಯವಾಗಿ ಹಾಸುಗಲ್ಲಿನ ಮೇಲೆ ಕೆತ್ತಲ್ಪಟ್ಟಿದೆ. ಇವುಗಳ ಜೊತೆಗೆ ಮುಂಡಕೋಪನಿಷತ್ ನಲ್ಲಿ ಉಲ್ಲೇಖಿಸಿರುವ "ಸತ್ಯಮೇವ ಜಯತೆ" ಪದವನ್ನು ದೇವನಾಗರಿ ಲಿಪಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ: