ವಿಷಯಕ್ಕೆ ಹೋಗು

ಭಾರತದ ತ್ರಿವರ್ಣ ಧ್ವಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತದ ತ್ರಿವರ್ಣ ಧ್ವಜ
ಹೆಸರುತ್ರಿವರ್ಣ ಧ್ವಜ (ಇದರರ್ಥ "ಮೂರು ವರ್ಣಗಳ ಧ್ವಜ")
ಬಳಕೆರಾಷ್ಟ್ರ ಧ್ವಜ
ಅನುಪಾತ೩:೨
ಸ್ವೀಕರಿಸಿದ್ದು22 ಜುಲೈ 1947; 28176 ದಿನ ಗಳ ಹಿಂದೆ (1947-೦೭-22)
ವಿನ್ಯಾಸಅಡ್ಡ ತ್ರಿವರ್ಣ ಧ್ವಜ (ಭಾರತ ಕೇಸರಿ, ಬಿಳಿ ಮತ್ತು ಭಾರತ ಹಸಿರು). ಬಿಳಿ ಮಧ್ಯದಲ್ಲಿ ೨೪ ಕಡ್ಡಿಗಳನ್ನು ಹೊಂದಿರುವ ನೌಕಾಪಡೆಯ ನೀಲಿ ಚಕ್ರವಿದೆ
ವಿನ್ಯಾಸಗೊಳಿಸಿದವರುಪಿಂಗಳಿ ವೆಂಕಯ್ಯ[N ೧]

ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ. ಹಿಂದಿ ಭಾಷೆಯಲ್ಲಿ ತಿರಂಗಾ, ಕನ್ನಡದಲ್ಲಿ ತ್ರಿವರ್ಣ - ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ.[]

ವಿನ್ಯಾಸ ಮತ್ತು ನಿರ್ಮಾಣ ವಿವರಗಳು

[ಬದಲಾಯಿಸಿ]

ವಿಶೇಷಣಗಳು

[ಬದಲಾಯಿಸಿ]
ರಾಷ್ಟ್ರೀಯ ಧ್ವಜದ ಗಾತ್ರಗಳು
ಧ್ವಜದ ಗಾತ್ರ[][] ಅಗಲ ಮತ್ತು ಎತ್ತರ (ಮಿಮೀ) ಅಶೋಕ ಚಕ್ರದ ಗಾತ್ರ (ಮಿಮೀ)[]
6300 × 4200 1295
3600 × 2400 740
2700 × 1800 555
1800 × 1200 370
1350 × 900 280
900 × 600 185
450 × 300 90[]
225 × 150 40
150 × 100 25[]

ನಿರ್ಮಾಣ ಹಾಳೆಗಳು

[ಬದಲಾಯಿಸಿ]

ಬಣ್ಣಗಳು

[ಬದಲಾಯಿಸಿ]

ಭಾರತದ ಧ್ವಜ ಸಂಹಿತೆಯ ಪ್ರಕಾರ, ಭಾರತೀಯ ಧ್ವಜವು ಅಗಲ: ಎತ್ತರ ಆಕಾರ ಅನುಪಾತವನ್ನು ೩:೨ ಹೊಂದಿದೆ. ಧ್ವಜದ ಎಲ್ಲಾ ಮೂರು ಅಡ್ಡ ಬ್ಯಾಂಡ್‌ಗಳು (ಕೇಸರಿ, ಬಿಳಿ ಮತ್ತು ಹಸಿರು) ಸಮಾನ ಗಾತ್ರದಲ್ಲಿರುತ್ತವೆ. ಅಶೋಕ ಚಕ್ರವು ಇಪ್ಪತ್ನಾಲ್ಕು ಸಮ-ಅಂತರದ ಕಡ್ಡಿಗಳನ್ನು ಹೊಂದಿದೆ.[]

ವಸ್ತುಗಳು ೩.೧.೨.೨: ಬಣ್ಣಗಳು[]
ಬಣ್ಣ X Y Z ಹೊಳಪು
ಕೇಸರಿ 0.538 0.360 0.102 21.5
ಬಿಳಿ 0.313 0.319 0.368 72.6
ಹಸಿರು 0.288 0.395 0.317 8.9

ಕೋಷ್ಟಕದಲ್ಲಿ ನೀಡಲಾದ ಮೌಲ್ಯಗಳು CIE 1931 ಬಣ್ಣದ ಸ್ಥಳಕ್ಕೆ ಅನುಗುಣವಾಗಿರುತ್ತವೆ ಎಂಬುದನ್ನು ಗಮನಿಸಿ. ಬಳಕೆಗಾಗಿ ಅಂದಾಜು RGB ಮೌಲ್ಯಗಳನ್ನು ಹೀಗೆ ತೆಗೆದುಕೊಳ್ಳಬಹುದು: ಕೇಸರಿ #FF671F, ಬಿಳಿ #FFFFFF, ಭಾರತ ಹಸಿರು #046A38, ನೌಕಾಪಡೆಯ ನೀಲಿ #06038D. ಇದಕ್ಕೆ ಹತ್ತಿರವಿರುವ ಪ್ಯಾಂಟೋನ್ ಮೌಲ್ಯಗಳು 165ಸಿ, ಬಿಳಿ, 349ಸಿ ಮತ್ತು 2735 ಸಿ.

ಕೇಸರಿ ಬಿಳಿ ಹಸಿರು ನೌಕಾ ನೀಲಿ
Pantone 165 ಸಿ ಬಿಳಿ 349 ಸಿ 2735 ಸಿ
CMYK 0/60/88/0 0/0/0/0 96/0/47/58 100/100/0/50
Hexadecimal #FF671F #FFFFFF #046A38 #06038D
RGB 255/103/31 255/255/255 4/106/56 0/0/128

ತ್ರಿವರ್ಣ ಧ್ವಜದ ವೈಶಿಷ್ಟ್ಯ

[ಬದಲಾಯಿಸಿ]
  • ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರದ್ವಜ. ಈ ನಮ್ಮ ಸ್ವಾತಂತ್ರ್ಯ ದೇಶದ ಸಂಕೇತವಾಗಿರುವ ರಾಷ್ಟ್ರದ್ವಜದ ಅವಹೇಳನ ರಾಷ್ಟ್ರದ್ರೋಹವಾಗಿರುತ್ತದೆ.
  • ಅದರ ಉಳಿವಿಗಾಗಿ ಬಲಿದಾನವಾಗಲು ಸದಾ ಸಿದ್ದವಾಗಿರುವ ನಾವುಗಳು ಅದರ ಮೇಲಿರುವ ಭಕ್ತಿಯನ್ನೇ ದೇಶಭಕ್ತಿ ಎನ್ನುತ್ತೇವೆ. ಅಂದಿನ ಪ್ರಧಾನಿಯಾಗಿದ್ದ ಜವಾಹರ‌ಲಾಲ್ ನೆಹರು ೧೯೪೭ ಜುಲೈ ೨೨ ರಂದು ಅಸೆಂಬ್ಲಿಯಲ್ಲಿ ನಮ್ಮ ರಾಷ್ಟ್ರ ದ್ವಜವನ್ನು ದೇಶಕ್ಕೆ ಅರ್ಪಿಸಿದರು. ನಮ್ಮ ಸರಕಾರವು ದ್ವಜ ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು. ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ.
  • ಆದರೆ ಅದು ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು. ಕೇಸರಿ - ಬಿಳಿ - ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ ಇಪ್ಪತ್ತ ನಾಲ್ಕು ರೇಖೆಗಳಿವೆ. ದ್ವಜದ ಉದ್ದ ಮತ್ತು ಅಗಲ ೩:೨ ಪ್ರಮಾಣದಲ್ಲಿರ ತಕ್ಕದ್ದು ಎಂದು ತಿಳಿಸಿದೆ.
  • ರಾಷ್ಟ್ರಧ್ವಜ ತಯಾರಿಸುವ ಹಕ್ಕು ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಉತ್ತರ ಕರ್ನಾಟಕದಾದ್ಯಂತ ಒಟ್ಟು ೫೨ ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ.
  • ನಮ್ಮ ಪವಿತ್ರ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ, ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ, ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸುವುದೇ ನಮ್ಮ ರಾಷ್ಟ್ರ ಧ್ವಜವನ್ನು ಮೇಲಕ್ಕೆ ಹಾರಿಸುವ ಉದ್ದೇಶ.

ರಾಷ್ಟ್ರ ಧ್ವಜದ ಬಣ್ಣಗಳ ವಿಶೇಷತೆ

[ಬದಲಾಯಿಸಿ]
  • ಕೇಸರಿ:- ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆವ ಬಲಿದಾನಗಳ ಸಂಕೇತವಾಗಿದೆ.
  • ಬಿಳಿಬಣ್ಣ :- ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿದೆ.
  • ಹಸಿರು ಬಣ್ಣ :- ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯಗಳ ಸಂಕೇತವಾಗಿದೆ.

ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ಜನಗಣ ಮನವನ್ನು ಹಾಡಲೇಬೇಕು [].

ರಾಷ್ಟ್ರ ಧ್ವಜದ ಬಳಕೆ ಮತ್ತು ಪ್ರದರ್ಶನ

[ಬದಲಾಯಿಸಿ]
ಎರಡು ಭಾರತೀಯ ಧ್ವಜಗಳು ಅಕ್ಕಪಕ್ಕದಲ್ಲಿರುತ್ತವೆ, ಮೊದಲನೆಯದು ಕೇಸರಿ ಬ್ಯಾಂಡ್‌ನೊಂದಿಗೆ ಮೇಲ್ಭಾಗದಲ್ಲಿ ಅಡ್ಡಲಾಗಿರುತ್ತದೆ, ಎರಡನೆಯದು ಕೇಸರಿ ಬ್ಯಾಂಡ್‌ನೊಂದಿಗೆ ಎಡಕ್ಕೆ ಲಂಬವಾಗಿರುತ್ತದೆ.
ಧ್ವಜದ ಸರಿಯಾದ ಅಡ್ಡ ಮತ್ತು ಲಂಬ ಪ್ರದರ್ಶನ

ಧ್ವಜದ ಪ್ರದರ್ಶನ ಮತ್ತು ಬಳಕೆಯನ್ನು ಧ್ವಜ ಸಂಹಿತೆ, 2002 (ಧ್ವಜ ಸಂಹಿತೆಯ ಉತ್ತರಾಧಿಕಾರಿ - ಭಾರತ, ಮೂಲ ಧ್ವಜ ಸಂಕೇತ) ನಿಂದ ನಿಯಂತ್ರಿಸಲಾಗುತ್ತದೆ; ಲಾಂಛಾನಗಳು ಮತ್ತು ಹೆಸರುಗಳು (ಅನುಚಿತ ಬಳಕೆಯ ತಡೆಗಟ್ಟುವಿಕೆ) ಕಾಯ್ದೆ, 1950; ಮತ್ತು ರಾಷ್ಟ್ರೀಯ ಗೌರವ ಕಾಯ್ದೆ, 1971ರ[] ಅವಮಾನಗಳ ತಡೆಗಟ್ಟುವಿಕೆ. ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನಗಳು, ಅದರ ಮೇಲೆ ಒಟ್ಟು ಅನಾನುಕೂಲಗಳು ಅಥವಾ ಅಸಮಾಧಾನಗಳು, ಹಾಗೆಯೇ ಧ್ವಜ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಅದನ್ನು ಬಳಸುವುದು ಕಾನೂನಿನ ಮೂಲಕ ಶಿಕ್ಷಾರ್ಹ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡೂ.[]

  1. ದ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿದಾನಗತಿಯಲ್ಲಿ ಇಳಿಸಬೇಕು.
  2. ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ತನಕ ಮಾತ್ರ ಹಾರಿಸಬೇಕು.
  3. ರಾಷ್ಟ್ರ ದ್ವಜವನ್ನು ಕೆಲವು ಕಡೆ ಎಲ್ಲ ದಿನಗಳಲ್ಲೂ, ಇನ್ನು ಕೆಲವು ಕಡೆ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಹಾರಿಸಲಾಗುತ್ತದೆ.
  4. ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಮತ್ತು ಗಾಂಧಿಜಯಂತಿ ಹಾಗೂ ರಾಷ್ಟ್ರೀಯ ವಿಶೇಷ ದಿನಗಳ ಜೊತೆಗೆ ಸರಕಾರದ ನಿರ್ದೇಶನದ ಮೇರೆಗೆ ರಾಷ್ಟ್ರಮಟ್ಟದ ಆಚರಣೆಯ ಸಂದರ್ಭಗಳಲ್ಲಿ ರಾಷ್ಟ್ರದ್ವಜವನ್ನು ಹಾರಿಸಬಹುದು.
  5. ದ್ವಜ ಏರಿಸುವಾಗ ದ್ವಜದ ಹಸಿರು ಬಣ್ಣ ಕೆಳಗೆ ಇರುವಂತೆ ಕೇಸರಿ ಬಣ್ಣ ಮೇಲೆ ಇರುವಂತೆ ಹಾರಿಸತಕ್ಕದ್ದು.
  6. ರಾಷ್ಟ್ರದ್ವಜವನ್ನು ಉರಿಸುವುದಾಗಲಿ, ಕೆಡಿಸುವುದಾಗಲಿ, ಕಾಲಡಿಯಲ್ಲಿ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸಲಾಗುವುದು.
  7. ಹವಾಮಾನದ ವೈಪರೀತ್ಯದಿಂದ ಧ್ವಜವು ಹಾಳಾಗದಂತೆ ಹಾರುತ್ತಿರುವ ದ್ವಜವನ್ನು ಕಾಪಾಡಬೇಕು.
  8. ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಧ್ವಜ ಕೋಲಿನಿಂದ ಅದನ್ನು ಹಾರಿಸತಕ್ಕದು
  9. ಸಮ್ಮೇಳನಗಳು ಇತರ ಕಾರ್ಯಕ್ರಮಗಳು ನಡೆಯುವಾಗ ವೇದಿಕೆಯ ಮೇಲಿರುವ ಅಧ್ಯಕ್ಷ ಸ್ಥಾನಕ್ಕಿಂತ ಎತ್ತರದಲ್ಲಿ ನಮ್ಮ ರಾಷ್ಟ್ರದ್ವಜ ಹಾರಾಡತಕ್ಕದ್ದು
  10. ಶಾಲೆ ಕಾಲೇಜುಗಳು, ಕ್ರೀಡಾ ಶಿಬಿರಗಳು, ಸ್ಕೌಟ್ಸ್ ಶಿಬಿರಗಳು ನಂತರ ವಿಶೇಷ ಸಂದರ್ಭಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಶೇಷ ಗೌರವ ಮೂಡಿಸಲು ರಾಷ್ಟ್ರದ್ವಜ ಹಾರಿಸಬಹುದು.[]

ಉಲ್ಲೇಖಗಳು

[ಬದಲಾಯಿಸಿ]
  1. भारत का राष्ट्रीय ध्वज: इतिहास, रंगों और प्रतीकों का अर्थ, दिलचस्प तथ्य
  2. "Flag Code of India". Ministry of Home Affairs, Government of India. 25 January 2006. Archived from the original on 10 January 2006. Retrieved 11 October 2006.
  3. "IS 1 (1968): Specification for The National Flag of India (Cotton Khadi, PDF version)" (PDF). Government of India. Archived from the original (PDF) on 22 October 2016. Retrieved 9 October 2016.
  4. ೪.೦ ೪.೧ ಉಲ್ಲೇಖ ದೋಷ: Invalid <ref> tag; no text was provided for refs named IS11968
  5. ೫.೦ ೫.೧ Bureau of Indian Standards (1979). IS 1 : 1968 Specification for the national flag of India (cotton khadi), Amendment 2. Government of India.
  6. ೬.೦ ೬.೧ ಉಲ್ಲೇಖ ದೋಷ: Invalid <ref> tag; no text was provided for refs named Code2002
  7. National Portal of India-Government of India
  8. "The Prevention of Insults To National Honour Act, 1971" (PDF). Ministry of Home Affairs, Government of India. Archived from the original (PDF) on 23 January 2017. Retrieved 30 August 2015.
  9. Flag Code of India – All You Need To Know;Published on: January 26, 2017 | Updated on: July 19, 2017

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]


ಉಲ್ಲೇಖ ದೋಷ: <ref> tags exist for a group named "N", but no corresponding <references group="N"/> tag was found