ಪಿಂಗಳಿ ವೆಂಕಯ್ಯ

ವಿಕಿಪೀಡಿಯ ಇಂದ
Jump to navigation Jump to search
ಪಿಂಗಲಿ ವೆಂಕಯ್ಯ
Pingali Venkayya
ಜನ್ಮನಾಮ
ಪಿಂಗಲಿ ವೆಂಕಯ್ಯ

2 August 1876
ಭಲ್ತಾಪೆನ್ಮುರುರು ಗ್ರಾಮ, ಮೊವ್ವಾ ಮಂಡಲಮ್,ಕೃಷ್ಣ ಜಿಲ್ಲೆ, ಆಂಧ್ರ ಪ್ರದೇಶ.
ಮರಣ4 July 1963
ಭರತ
ರಾಷ್ಟ್ರೀಯತೆಭಾರತಿಯ
ಹೆಸರುವಾಸಿಯಾದದ್ದುಭಾರತೀಯ ರಾಷ್ಟ್ರೀಯ ಧ್ವಜದ ವಿನ್ಯಾಸ


ಪಿಂಗಳಿ ವೆಂಕಯ್ಯ ಅವರು ಭಾರತ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು ಮತ್ತು ಭಾರತದೇಶದ ಧ್ವಜವನ್ನು ಸ್ಥೂಲಕಲ್ಪಿಸಿದರು.ಇವರನ್ನು ಪತ್ತಿ ವೆಂಕಯ್ಯ ಅಂತ ಕರೆಯುತ್ತಿದ್ದರು.ಇವರು ಆಗಸ್ಟ್ ೨, ೧೮೭೬ನೇ ಇಸ್ವಿಯಲ್ಲಿ, ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದರು.ಇವರ ತಂದೆ ಹನುಮಂತರಾಯುರು, ಇವರ ತಾಯಿಯ ಹೆಸರು ವೆಂಕಟರತ್ನಮ್ಮ.ಪ್ರಾಧಮಿಕ ವಿದ್ಯಾಭ್ಯಾಸವನ್ನು ಚಲ್ಲಪಲ್ಲಿಯಲ್ಲಿ ಮತ್ತು ಮಚಿಲೀಪಟ್ನಮಿನ ಹಿಂದು ಶಾಲೆಯಲ್ಲಿ ಮುಗಿಸಿದನಂತರ ಇವರು ಹಿಚ್ಚಿನ ಶಿಕ್ಷಣಕಾಗಿ ಕೊಲೊಂಬೊಗೆ ಹೋದರು.ಭಾರತಕ್ಕೆ ಹಿಂದಿರುಗಿದನಂತರ ಇವರು ರೈಲ್ವೇ ಸಿಬ್ಬಂದಿಯ ಉದ್ಯೋಗ,ಮತ್ತು ಸರ್ಕಾರಿ ಜೀತಗಾರರಾಗಿ ಬಳ್ಳಾರಿಯಲ್ಲಿ ಮಾಡಿದರು.ದೇಶಭಕ್ತಿಯನ್ನು ನರನರಗಳಲ್ಲು ತುಂಬಿಕೊಂಡಿದ್ದ ಇವರಿಗೆ ಒಂದು ಶಾಶ್ವತ ಕೆಲಸದಲ್ಲಿ ಒಳಗೊಂಡಿರುವುದಕ್ಕೆ ಇಷ್ಟವಾಗಿರಲಿಲ್ಲ,ಸತ್ಯಾನ್ವೇಷಿಯಾಗಿದ್ದ ಇವರು ಲಾಹೋರಿನ ಆಂಗ್ಲೂ-ವೈದಿಕ ಕಳಾಶಾಲೆಯಲ್ಲಿ ಇತಿಹಾಸ,ಸಂಸ್ಕೃತ ಮುಂತಾದ ವಿಷಯಗಲಳ ಬಗ್ಗೆ ಶೋಧನೆ ಮಾಡಿದರು.ಭೂವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳಾವಾರಾಗಿದ್ದೂ ಮತ್ತು ಅದೇ ವಿಷಯದಲ್ಲಿ ಪದವೀಕೃತರಾದರು.