ವಿಷಯಕ್ಕೆ ಹೋಗು

ಮಿಝೋರಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮಿಜೋರಮ್ ಇಂದ ಪುನರ್ನಿರ್ದೇಶಿತ)
ಮಿಝೋರಂ
Map of India with the location of ಮಿಝೋರಂ highlighted.
Map of India with the location of ಮಿಝೋರಂ highlighted.
ರಾಜಧಾನಿ
 - ಸ್ಥಾನ
ಐಝ್ವಾಲ್
 - 23.36° N 90.0° E
ಅತಿ ದೊಡ್ಡ ನಗರ ಐಝ್ವಾಲ್
ಜನಸಂಖ್ಯೆ (2001)
 - ಸಾಂದ್ರತೆ
888,573 (27th)
 - 42/km²
ವಿಸ್ತೀರ್ಣ
 - ಜಿಲ್ಲೆಗಳು
21,081 km² (24th)
 - 11
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಫೆಬ್ರುವರಿ ೨೦,೧೯೮೭
 - ಎಂ. ಎಂ. ಲಖೇರ
 - ಪು ಜೋರಮ್ತಂಗ
 - Unicameral (40)
ಅಧಿಕೃತ ಭಾಷೆ(ಗಳು) ಮೀಜೊ, ಆಂಗ್ಲ
Abbreviation (ISO) IN-MZ
ಅಂತರ್ಜಾಲ ತಾಣ: mizoram.gov.in

ಮಿಝೋರಂ ರಾಜ್ಯದ ಮುದ್ರೆ

ಮಿಝೋರಂ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ೨೦೦೧ದ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೮,೮೮,೫೭೩ ಇತ್ತು. ೯೦.೨೭ ಪ್ರತಿಶತ ಸಾಕ್ಷರತೆಯನ್ನು ಹೊಂದಿರುವ ಮಿಝೋರಂ ಸಾಕ್ಷರತೆ ಪ್ರಮಾಣದಲ್ಲಿ ಕೇರಳದ ನಂತರ ಎರಡನೇ ಸ್ಥಾನದಲ್ಲಿದೆ.

ಈ ರಾಜ್ಯವನ್ನು ಉತ್ತರದಲ್ಲಿ ಭಾರತದ ಅಸ್ಸಾಮ ಮತ್ತು ಮಣಿಪುರ ರಾಜ್ಯಗಳು, ಪೂರ್ವ ದಕ್ಷಿಣಗಳಲ್ಲಿ ಬರ್ಮ, ಪಶ್ಚಿಮದಲ್ಲಿ ಬಾಂಗ್ಲಾದೇಶ ಮತ್ತು ಭಾರತದ ತ್ರಿಪುರಾ ರಾಜ್ಯ ಸುತ್ತುವರೆದಿವೆ. ಮೀಜೊರಮ್‍ನ ವಿಸ್ತೀರ್ಣ 21,081 ಚ.ಕಿಮೀ. ರಾಜಧಾನಿ ಐಝ್ವಾಲ್.

ಭೌತಲಕ್ಷಣ

[ಬದಲಾಯಿಸಿ]

ಮೀಜೊರಮ್ ಬೆಟ್ಟಗಳ ಪ್ರದೇಶ. ಮೀಜೊ ಭಾಷೆಯಲ್ಲಿ ಮೀಜೊರಮ್ ಎಂದರೆ ಬೆಟ್ಟಗಳ (ಜೋ) ಜನ (ಮೀ) ಇರುವ ಪ್ರದೇಶ ಎಂದು ಅರ್ಥ. ಇಲ್ಲಿಯ ಬೆಟ್ಟಗಳ ದಕ್ಷಿಣೋತ್ತರವಾಗಿ ಹಬ್ಬಿವೆ. ಇವುಗಳ ಸರಾಸರಿ ಎತ್ತರ ಸಮುದ್ರ ಮಟ್ಟದಿಂದ 900 ಮೀ. ಅತ್ಯುನ್ನತ ಬ್ಲ್ಯೂಶಿಖರ 2.165 ಮೀ ಎತ್ತರವಾಗಿದೆ.

ಮೀಜೊರಮ್‍ನ ಉತ್ತರಭಾಗದಲ್ಲಿ ಹರಿಯುವ ಮುಖ್ಯ ನದಿಗಳು ಧಾಲೇಶ್ವರಿ (ತ್ಲಾವೆಂಗ್) ಸೊನಾಯ್ ಮತ್ತು ತುಯಿವಾವ್ಲ್ ಇವು ಬಾರಾಕ್ ನದಿಯನ್ನು ಸೇರುತ್ತವೆ. ದಕ್ಷಿಣದಲ್ಲಿ ಕೋಲದೀನದಿ ಮತ್ತು ಅದರ ಉಪನದಿಗಳು ಹರಿಯುತ್ತವೆ. ಪಶ್ಚಿಮದ ಮುಖ್ಯ ನದಿ ಕರ್ಣಪುಲಿ. ಇದು ಬಾಂಗ್ಲಾದೇಶದಲ್ಲಿ ಮುಂದುವರಿಯುತ್ತದೆ.

ವಾಯುಗುಣ

[ಬದಲಾಯಿಸಿ]

ಮೀಜೊರಮ್‍ನ ಕಣಿವೆಗಳು ಮಳೆಗಾಲದಲ್ಲಿ ನೀರಿನಿಂದ ಕೂಡಿದ್ದು ವಾಸಕ್ಕೆ ಯೋಗ್ಯವೆನಿಸವು ಮತ್ತು ಅನಾರೋಗ್ಯಕರವೆನಿಸಿವೆ. ಇಲ್ಲಿಯ ಎತ್ತರ ಪ್ರದೇಶ ಹಿತಕರವಾದ ವಾಯುಗುಣದಿಂದ ಕೂಡಿದೆ. ಮೀಜೊರಮ್‍ನ ವಾರ್ಷಿಕ ಸರಾಸರಿ ಮಳೆ 254 ಸೆಂಮೀ. ಉತ್ತರದಲ್ಲಿ ಐಜಾವ್ಲ್‍ನಲ್ಲಿ ಬೀಳುವ ಮಳೆ 208 ಸೆಂಮೀ, ದಕ್ಷಿಣದ ಲುಂಗ್ಲೇನಲ್ಲಿ 350 ಸೆಂಮೀ ಮಳೆಯಾಗುತ್ತದೆ.

ಆರ್ಥಿಕತೆ

[ಬದಲಾಯಿಸಿ]

ಕೃಷಿ ಇಲ್ಲಿಯ ಮುಖ್ಯ ಅರ್ಥಿಕ ಜೀವಾಳ. ಕಾಡು ಕಡಿದು ಸುಟ್ಟು ಬರಿದಾದ ನೆಲದಲ್ಲಿ ಬೆಳೆ ತೆಗೆಯುವ ಅತ್ಯಂತ ಹಿಂದುಳಿದ `ಜೂಮ್ ಬೇಸಾಯ ಪದ್ದತಿ ಸಾಮಾನ್ಯ. ವೈಜ್ಞಾನಿಕವಾದ ಆಧುನಿಕ ಕೃಷಿ ಪದ್ದತಿಗಳನ್ನು ಜಾರಿಗೆ ತರಲು ಸರ್ಕಾರ ಯತ್ನಿಸುತ್ತಿದೆ, ಬತ್ತ ಪ್ರಮುಖ ಆಹಾರಧಾನ್ಯ. ಮುಸುಕಿನ ಜೋಳ ಶುಂಠಿ ಬೆಳೆಯುತ್ತಾರೆ. ಬೆಟ್ಟಗಳ ಇಳಿಜಾರುಗಳಲ್ಲಿ ಮೆಟ್ಟಲು ಮೆಟ್ಟಲಾಗಿ ನೆಲವನ್ನು ಕಡಿದು ಈ ಬೆಳೆಗಳನ್ನು ಬೆಳೆಯಲಾಗುತ್ತದೆ. ರಬ್ಬರ್, ಕಾಫಿ, ಚಹಾ ಮುಂತಾದ ತೋಟದ ಬೆಳೆಗಳನ್ನು ಬೆಳೆಯಲು ಪ್ರಯತ್ನಗಳು ನಡೆದಿದೆ.

ಮೀಜೊರಮ್‍ನಲ್ಲಿ ದೊಡ್ಡ ಕೈಗಾರಿಕೆಗಳು ಇಲ್ಲ. ಕೈಮಗ್ಗ ಮತ್ತು ಕರಕುಶಲ ಕೈಗಾರಿಕೆಗಳಿವೆ. ರೇಷ್ಮೆ ಉದ್ಯಮವೂ ಹಳೆಯದು. ಶುಂಠಿರಸ ತೆಗೆಯುವುದು. ಎಣ್ಣೆ ಉತ್ಪಾದನೆ, ಫಲಸಾರ ಮುದ್ರಣ ಮರಕೊಯ್ಯುವುದು. ಇಟ್ಟಿಗೆ, ಸಾಬೂನು ತಯಾರಿಕೆ ಮುಂತಾದ ಸಣ್ಣ ಕೈಗಾರಿಕೆಗಳಿವೆ.

ಆಡಳಿತ

[ಬದಲಾಯಿಸಿ]

ಮೀಜೊರಮ್ ರಾಜ್ಯದ ಜಿಲ್ಲೆಗಳು ಐಜಾವ್ಲಾ ಲುಂಗ್ಲೈ ಮತ್ತು ಛಿಮ್ಟುಟಿಪುಯಿ. ಐಜಾವ್ಲಾ ರಾಜಧಾನಿ. ರಾಜ್ಯದಲ್ಲಿ ಒಟ್ಟು ಎಂಟು ಪಟ್ಟಣಗಳಿವೆ. ಐಜಾವ್ಲಾ ಜಿಲ್ಲೆಯ ವಿಸ್ತೀರ್ಣ 12,589 ಚ.ಕಿಮೀ. ಜನಸಂಖ್ಯೆ 3,40,826 (1981). ಮುಖ್ಯ ಪಟ್ಟಣ ಐಝ್ವಾಲ್.. ಲುಂಗ್ಲೈ ಜಿಲ್ಲೆ 4,536 ಚಕಿಮೀ ವಿಸ್ತಾರವಾಗಿದೆ. ಇದರ ಜನಸಂಖ್ಯೆ 86,511 (1981). ಜಿಲ್ಲೆಯ ಆಡಳಿತ ಕೇಂದ್ರ ಲುಂಗ್ಲೈ. ಛಿಮ್ಟುಟಿಪುಯಿ ಜಿಲ್ಲೆಯ ವಿಸ್ತೀರ್ಣ 3,957 ಚಕಿಮೀ ಜನಸಂಖ್ಯೆ 66,420 (1981). ಆಡಳಿತ ಕೇಂದ್ರ ಛಿಮ್ಟುಟಿಪುಯಿ. ಮೀಜೊರಮ್‍ನ ಭಾಷೆಗಳು ಮೀಜೊ ಮತ್ತು ಇಂಗ್ಲಿಷ್. ಇಲ್ಲಿ ಶೇಕಡಾ 60ರಷ್ಟು ಮಂದಿ ಅಕ್ಷರಸ್ಥರು.

ಇತಿಹಾಸ

[ಬದಲಾಯಿಸಿ]

ಮೀಜೊ ಜನಗಳು ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರು. ಇಲ್ಲಿಗೆ ಬರುವ ಮೊದಲು ಇವರು ಬರ್ಮದ ಷಾನ್ ರಾಜ್ಯದ ಪ್ರದೇಶದಲ್ಲಿ ನೆಲಸಿದ್ದರು. ಬರ್ಮವನ್ನು ಬಿಟ್ಟು ಇವರು ಪಶ್ಚಿಮಾಭಿಮುಖವಾಗಿ ಸಾಗಿ ಲುಷಾಯಿ ಬೆಟ್ಟಗಾಡು ಪ್ರದೇಶವನ್ನು ಆಕ್ರಮಿಸಿಕೊಂಡರು. ಬ್ರಿಟಿಷ್ ಅಡಳಿತ ಇದ್ದಕಾಲದಲ್ಲಿ ಮೀಜೊ ಜನರು ಬ್ರಿಟಿಷ್ ಅಕ್ರಮಿತ ಪ್ರದೇಶಗಳ ಮೇಲೆ ಪದೇ ಪದೇ ಧಾಳಿ ಮಾಡುತ್ತಿದ್ದರು. ಬ್ರಿಟಿಷ್ ಸೇನಾ ನೆಲೆಗಳ ಮೇಲೂ ಏರಿಬರುತ್ತಿದ್ದರು. ಬ್ರಿಟಷ್ ಸೇನೆ ಮೀಜೋಗಳ ಮೇಲೆ ಯುದ್ದ ಮಾಡಿ ಅವರ ನೆಲವನ್ನು ವಶಪಡಿಸಿಕೊಂಡು 1891ರಲ್ಲಿ ಅದನ್ನು ಬ್ರಿಟಿಷ್ ಭಾರತಕ್ಕೆ ಸೇರಿಸಿತು.

1898ರಲ್ಲಿ ಇಡೀ ಮೀಜೋ ಪ್ರದೇಶವನ್ನು ಒಂದು ಜಿಲ್ಲೆಯಾಗಿ ರೂಪಿಸಿ ಮೀಜೊ ಬೆಟ್ಟ ಜಿಲ್ಲೆ ಎಂದು ಕರೆಯಲಾಯಿತು. ಹಾಗೂ ಅಸ್ಸಾಮ್ ಪ್ರಾಂತ್ಯಕ್ಕೆ ಇದನ್ನು ಸೇರಿಸಲಾಯಿತು. ಹೀಗೆ ಮೀಜೊಗಳು ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದರೂ ಅವರ ಗ್ರಾಮಾಡಳಿತದಲ್ಲಿ ಬ್ರಿಟಿಷರು ಪ್ರವೇಶಿಸಲಿಲ್ಲ. ಮೀಜೋ ಗುಂಪುಗಳ ನಾಯಕರು ಹಿಂದಿನಿಂದ ಬಂದ ಪದ್ಧತಿಯಲ್ಲೇ ದಿನ ದಿನದ ಆಡಳಿತ ನಡೆಸುತ್ತಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಮೀಜೊರಮ್ ಅಸ್ಸಾಮ್ ರಾಜ್ಯದ ಒಂದು ಜಿಲ್ಲೆಯಾಗಿ ಮುಂದುವರಿಯಿತು. 1964ರಲ್ಲಿ ಸಂಸತ್ತು ಸ್ವೀಕರಿಸಿದ ಒಂದು ಅಧಿನಿಯವಂದ ಪ್ರಕಾರ ಇದರ ಹೆಸರನ್ನು ಲುಷಾಯಿ ಬೆಟ್ಟ ಜಿಲ್ಲೆ ಎಂಬುದರಿಂದ ಮೀಜೊ ಬೆಟ್ಟ ಜಿಲ್ಲೆ ಎಂದು ಬದಲಾಯಿಸಲಾಯಿತು.

ಭಾರತ ಸರ್ಕಾರದ ಅಡಿಯಲ್ಲಿ ತಮ್ಮ ಪುರೋಭಿವೃದ್ಧಿ ಆಗುತ್ತಿಲ್ಲವೆಂಬ ಭಾವನೆಯಿಂದ ಅನೇಕ ಮೀಜೊಗಳು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ನಡೆಸತೊಡಗಿದ್ದರು. ಇವರಿಗೆ ಅನ್ಯ ದೇಶಗಳ ಬೆಂಬಲ ಪ್ರೋತ್ಸಾಹಗಳು ದೊರಕುತ್ತಿದ್ದುವು. ದಂಗೆಕೋರರನ್ನಡಗಿಸಲು ಸರ್ಕಾರ ಸೈನಿಕ ಕಾರ್ಯಾಚರಣೆ ನಡೆಸಬೇಕಾಯಿತು. ಸರ್ಕಾರ ಇದನ್ನು ಗಲಭೆಗೊಳಗಾದ ಪ್ರದೇಶವೆಂದು ಸಾರಿತು. ಮೀಜೊರಮ್‍ನಲ್ಲಿ ಶಾಂತಿ ಸ್ಥಾಪಿಸಲು ನಡಸಿದ ಯತ್ನಗಳು ಯಶಸ್ವಿಯಾಗಲಿಲ್ಲ. 1972ರಲ್ಲಿ ಇದಕ್ಕೆ ಮೀಜೊರಮ್ ಎಂದು ಹೆಸರು ನೀಡಿ ಕೇಂದ್ರ ಶಾಸಿತ ಪ್ರದೇಶವಾಗಿ ಮಾಡಿ ಅಸ್ಸಾಮಿನಿಂದ ಪ್ರತ್ಯೇಕಗೊಳಿಸಿದರು, ಅದರಿಂದಲೂ ದಂಗೆಕೋರರಿಗೆ ತೃಪ್ತಿಯಾಗಲಿಲ್ಲ.

1986ರ ಜೂನ್ 30ರಂದು ಭಾರತ ಸರ್ಕಾರಕ್ಕೂ ಮೀಜೊ ರಾಷ್ಟ್ರೀಯ ರಂಗಕ್ಕೂ ಶಾಂತಿ ಒಡಂಬಡಿಕೆಯಾಯಿತು. ಎರಡು ದಶಕಗಳಿಗೂ ಹೆಚ್ಚು ಕಾಲದ ಹೋರಾಟ ಕೊನೆಗೊಂಡಿತು. ಮೀಜೊ ಈಗ ಭಾರತದ ಒಂದು ರಾಜ್ಯವಾಗಿದೆ.

ಮೀಜೊಗಳಲ್ಲಿ ಲುಷಾಯಿ, ಪಾವಿ, ಸೈಥೆ, ರಾಲ್ಟೆ. ಪಾಂಗ್ ಹ್ಮಾರ್. ಕುಕಿ. ಮರಾ ಲಾಖೆರ್ ಮುಂತಾದ ಅನೇಕ ಬುಡಕಟ್ಟುಗಳಿವೆ. 19ನೆಯ ಶತಮಾನದಲ್ಲಿ ಕ್ರೈಸ್ತ ಮಿಷನರಿಗಳ ಪ್ರಭಾವಕ್ಕೆ ಒಳಪಟ್ಟು ಅನೇಕರು ಕ್ರೈಸ್ತರಾಗಿ ಮತಾಂತರಗೊಂಡಿದ್ದಾರೆ. ಮೀಜೊ ಭಾಷೆಗೆ ಅದರದೇ ಲಿಪಿ ಇರಲಿಲ್ಲ. ಪಾದ್ರಿಗಳು ರೋಮನ್ ಲಿಪಿಯನ್ನು ಬಳಕೆಗೆ ತಂದರಲ್ಲದೆ ಅಲ್ಲಿಯ ಜನಕ್ಕೆ ಇಂಗ್ಲಿಷ್ ಬೋಧಿಸತೊಡಗಿದರು. ಇದರ ಫಲವಾಗಿ ಅಲ್ಲಿ ಅಕ್ಷರಸ್ಥರ ಪ್ರಮಾಣ ಹೆಚ್ಚಿತು. ಇಂದು ಅಲ್ಲಿ ಕ್ರೈಸ್ತರು ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಅವರು ಇಂಗ್ಲಿಷ್ ಮೀಜೊ ಎರಡೂ ಭಾಷೆಗಳನ್ನಾಡುತ್ತಾರೆ. ಗಡಿ ಪ್ರದೇಶದಲ್ಲಿರುವ ಚಕ್ಮಾ ಮುಂತಾದ ಬುಡಕಟ್ಟುಗಳ ಜನರು ಬೌದ್ಧರು. ಅವರ ಭಾಷೆ ಬಂಗಾಲಿ.

ರಾಜಕೀಯ ಮತ್ತು ಸರ್ಕಾರ

[ಬದಲಾಯಿಸಿ]
  • ಮಿಜೋರಾಮ್ ಶಾಸನಸಭೆಯ ಮೊದಲ ಚುನಾವಣೆ 16 ಫೆಬ್ರವರಿ 1987 ರಂದು ನಡೆಯಿತು. [26] ಇಂದಿನಿಂದಲೂ ಚುನಾವಣೆಗಳು 5 ವರ್ಷಗಳಲ್ಲಿ ನಡೆಯುತ್ತವೆ. ಇತ್ತೀಚಿನ ಮಿಜೋರಾಂ ಚುನಾವಣೆಯು 28 ನವೆಂಬರ್ 2018 ರಂದು ಶಾಸನ ಸಭೆಯ 40 ಸ್ಥಾನಗಳಿಗೆ ನಡೆಯಿತು. ಮತದಾರರ ಮತದಾನವು 80% ಆಗಿತ್ತು. ಝೊರಾಮ್ತಂಗ ನೇತೃತ್ವದಲ್ಲಿ ಮಿಜೊ ನ್ಯಾಶನಲ್ ಫ್ರಂಟ್ ಅಧಿಕಾರಕ್ಕೆ ಆಯ್ಕೆಯಾದರು. [70] ಶ್ರೀ ಕುಮ್ಮಮಾನಂ ರಾಜಶೇಖರನ್ ಅವರು ಮಿಜೋರಾಮ್ನ ಪ್ರಸ್ತುತ ರಾಜ್ಯಪಾಲರಾಗಿದ್ದಾರೆ.[]

೨೦೧೩ರ ವಿಧಾನ ಸಭಾ ಚುನಾವಣಾ ಫಲಿತಾಂಶ

[ಬದಲಾಯಿಸಿ]
  • ಪು ಲಾಲ್ ತನ್ಹವಾಲ ಅರು ನಾಲ್ಕನೇಬಾರಿ ಮುಖ್ಯಮಂತ್ರಿಯಾಗಿ ದಿ.೧೨-೧೨-೨೦೧೩ ರಂದು ಪ್ರಮಾಣವಚನ ಸ್ವೀಕರಿಸಿದರು.
ದಿ.೮-೧೨-೨೦೧೩ ರಂದು ಎಣಿಕೆ. ಆವರಣದಲ್ಲಿರುವ ಸಂಖ್ಯೆ ೨೦೦೮ ರ ಫಲಿತಾಂಶ []
ವರ್ಷ ಸ್ಥಾನ ಮತದಾನ ಶೇ. ಕಾಂಗ್ರೆಸ್ ಎಂ.ಎನ,ಎಫ್ ಬಿಎಸ್.ಪಿ ಇತರೆ
೨೦೧೩ 40 81.02% 31 8 1
೨೦೦೮ 40 32 14 5 2

೨೦೧೮ರ ಚುನಾವಣೆ ಫಲಿತಾಂಶ

[ಬದಲಾಯಿಸಿ]
  • ಮುಖ್ಯಮಂತ್ರಿ (ಭಾರತ) ಜೋರಂಥಂಗ:ಅವರು ಐಜಾಲ್ ಈಸ್ಟ್-ಐ ಕ್ಷೇತ್ರದ 2018 ರ ಚುನಾವಣೆಯಲ್ಲಿ ಶಾಸಕಸಭೆ ಸದಸ್ಯರಾಗಿ ಪುನಃ ಚುನಾಯಿಸಲ್ಪಟ್ಟರು ಮತ್ತು ಮಿಝೋರಾಮ್‍ನ ಮುಖ್ಯಮಂತ್ರಿಯಾದರು (15 ಡಿಸೆಂಬರ್ 2018 ರಿಂದ).[] ಮಿಜೋರಾ ರಾಷ್ಟ್ರೀಯ ಮುಂಭಾಗ (ಎಂಎನ್ಎಫ್) ಅಧ್ಯಕ್ಷ ಜೋರಂಥಂಗ ಶನಿವಾರ ಮಿಜೋರಾಮ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.(15th December 2018)[]
ಭಾರತೀಯ ಜನತಾ ಪಕ್ಷ -1 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ -5 ಮಿಜೊ ನ್ಯಾಶನಲ್ ಫ್ರಂಟ್ -26 ಸ್ವತಂತ್ರ -8 ಶಿರೋಲೇಖ ಒಟ್ಟು -40

[]

ಭಾರತದ ಸಾರ್ವತ್ರಿಕ ಚುನಾವಣೆ, ೨೦೦೯
೨೦೧೩ ರ ಭಾರತದ ಸಾರ್ವತ್ರಿಕ ಚುನಾವಣಾ ಫಲಿತಾಂಶ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

[ಬದಲಾಯಿಸಿ]
  1. Michael Sailo (2006), Administration of Justice in Mizoram,
  2. "Election Commission of India;Assembly Elections December 2013 Results". Archived from the original on 2013-12-15. Retrieved 2013-12-12.
  3. "Election Result : Fifth Time Congress comes on power in Mizoram". GloFocus. 9 December 2013. Retrieved 20 January 2014.
  4. MNF chief Zoramthanga sworn in as new Mizoram Chief Minister
  5. "Election Commission of India Assembly Elections December 2013 Results". Archived from the original on 2013-12-15. Retrieved 2013-12-12.


"https://kn.wikipedia.org/w/index.php?title=ಮಿಝೋರಂ&oldid=1252023" ಇಂದ ಪಡೆಯಲ್ಪಟ್ಟಿದೆ