ವಿಷಯಕ್ಕೆ ಹೋಗು

ಕರ್ನಾಟಕ ಲೋಕಸಭಾ ಚುನಾವಣೆ, ೧೯೫೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕದಲ್ಲಿ 1951-52ರ ಲೋಕಸಭಾ ಚುನಾವಣೆ
ಭಾರತ
25 ಅಕ್ಟೋಬರ್ 1951ರಿಂದ 21 ಫೆಬ್ರವರಿ 1952 → 1957

 
ಜವಾಹರಲಾಲ್ ನೆಹರು
(ಅಲಹಾಬಾದ್)

ಎ. ಕೆ. ಗೋಪಾಲನ್
(ಕಣ್ಣೂರು)
ಪಾರ್ಟಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
(364)
ಭಾರತೀಯ ಕಮ್ಯುನಿಸ್ಟ್ ಪಕ್ಷ
(16)


ಪ್ರಧಾನಮಂತ್ರಿ (ಚುನಾವಣೆಗೆ ಮುನ್ನ)

ಜವಾಹರಲಾಲ್ ನೆಹರು
ಕಾಂಗ್ರೆಸ್

ನೂತನ ಪ್ರಧಾನಮಂತ್ರಿ

ಜವಾಹರಲಾಲ್ ನೆಹರು
ಕಾಂಗ್ರೆಸ್


ಚುನಾವಣಾ ವಿವರಗಳು

[ಬದಲಾಯಿಸಿ]

ಸ್ವತಂತ್ರ ಭಾರತದಲ್ಲಿ ಮೊತ್ತಮೊದಲ ಲೋಕಸಭಾ ಚುನಾವಣೆ ನಡೆದದ್ದು 25 ಅಕ್ಟೋಬರ್ 1951ರಿಂದ 21 ಫೆಬ್ರವರಿ 1952ರವರೆಗೆ[][][]. ದೇಶದ ಉದ್ದಗಲಕ್ಕೂ ಇದ್ದ 489 ಕ್ಷೇತ್ರಗಳಲ್ಲಿ 1949 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂದಿನ ಭಾರತದ ಜನಸಂಖ್ಯೆಯ 360 ಮಿಲಿಯನ್ ಮಂದಿಯ ಪೈಕಿ 173 ಮಿಲಿಯನ್ ಮಂದಿಗೆ ಮತದಾನದ ಹಕ್ಕು ಲಭಿಸಿತ್ತು[]. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು 489 ಲೋಕಸಭಾ ಕ್ಷೇತ್ರಗಳ ಪೈಕಿ 364 ಕ್ಷೇತ್ರಗಳನ್ನು ಗೆದ್ದು ಅಭೂತಪೂರ್ವ ಗೆಲುವು ಸಾಧಿಸಿತ್ತು. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಭಾರತದ ಮೊದಲ ಪ್ರಧಾನಮಂತ್ರಿ ಎಂಬ ಹೆಗ್ಗಳಿಕೆಗೆ ಜವಾಹರಲಾಲ್ ನೆಹರು ಪಾತ್ರರಾದರು.

ಆಯ್ಕೆಯಾದ ಸಂಸದರ ಪಟ್ಟಿ

[ಬದಲಾಯಿಸಿ]
ಕ್ರಮ ಸಂಖ್ಯೆ ಕ್ಷೇತ್ರದ ಹೆಸರು ಸದಸ್ಯರ ಹೆಸರು ಪಕ್ಷ ಅಧಿಕಾರಾವಧಿ
1 ಬೆಳಗಾವಿ ಉತ್ತರ
(ಅಂದಿನ ಬಾಂಬೆ ರಾಜ್ಯಕ್ಕೆ ಸೇರಿತ್ತು)
ಬಲವಂತರಾವ್ ನಾಗೇಶರಾವ್ ದಾತಾರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
2 ಬೆಳಗಾವಿ ದಕ್ಷಿಣ
(ಅಂದಿನ ಬಾಂಬೆ ರಾಜ್ಯಕ್ಕೆ ಸೇರಿತ್ತು)
ಶಂಕರಗೌಡ ವೀರನಗೌಡ ಪಾಟೀಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
3 ಬಿಜಾಪುರ ಉತ್ತರ
(ಅಂದಿನ ಬಾಂಬೆ ರಾಜ್ಯಕ್ಕೆ ಸೇರಿತ್ತು)
ರಾಜಾರಾಂ ಗಿರಿಧರ್‌ಲಾಲ್ ದುಬೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
4 ಬಿಜಾಪುರ ದಕ್ಷಿಣ
(ಅಂದಿನ ಬಾಂಬೆ ರಾಜ್ಯಕ್ಕೆ ಸೇರಿತ್ತು)
ರಾಮಪ್ಪ ಬಾಳಪ್ಪ ಬಿದರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
5 ಧಾರವಾಡ ಉತ್ತರ
(ಅಂದಿನ ಬಾಂಬೆ ರಾಜ್ಯಕ್ಕೆ ಸೇರಿತ್ತು)
ದತ್ತಾತ್ರಯ ಪರಶುರಾಮರಾವ್ ಕರಮಾಕರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
6 ಧಾರವಾಡ ದಕ್ಷಿಣ
(ಅಂದಿನ ಬಾಂಬೆ ರಾಜ್ಯಕ್ಕೆ ಸೇರಿತ್ತು)
ತಿಮ್ಮಪ್ಪ ರುದ್ರಪ್ಪ ನೇಸ್ವಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
7 ಕೆನರಾ
(ಅಂದಿನ ಬಾಂಬೆ ರಾಜ್ಯಕ್ಕೆ ಸೇರಿತ್ತು)
ಜೋಕಿಂ ಆಳ್ವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
8 ಹಾಸನ-ಚಿಕ್ಕಮಗಳೂರು ಎಚ್. ಸಿದ್ದನಂಜಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
9 ಕೂರ್ಗ್
(ಕೊಡಗು)
(ಅಂದಿನ ಕೂರ್ಗ್ ರಾಜ್ಯಕ್ಕೆ ಸೇರಿತ್ತು)
ಎನ್. ಸೋಮಣ್ಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
10 ಕುಷ್ಟಗಿ
(ಅಂದಿನ ಹೈದರಾಬಾದ್ ರಾಜ್ಯಕ್ಕೆ ಸೇರಿತ್ತು)
ಶಿವಮೂರ್ತಿ ಸ್ವಾಮಿ ಸ್ವತಂತ್ರ 1952-1957
11 ಯಾದಗಿರಿ
(ರಾಯಚೂರು)
(ಅಂದಿನ ಹೈದರಾಬಾದ್ ರಾಜ್ಯಕ್ಕೆ ಸೇರಿತ್ತು)
ಕೃಷ್ಣಾಚಾರ್ಯ ಜೋಶಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
12 ಸೌತ್ ಕೆನರಾ ಉತ್ತರ
(ಉಡುಪಿ)
(ಅಂದಿನ ಮದ್ರಾಸ್ ರಾಜ್ಯಕ್ಕೆ ಸೇರಿತ್ತು)
ಯು. ಶ್ರೀನಿವಾಸ ಮಲ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
13 ಸೌತ್ ಕೆನರಾ ದಕ್ಷಿಣ
(ಅಂದಿನ ಮದ್ರಾಸ್ ರಾಜ್ಯಕ್ಕೆ ಸೇರಿತ್ತು)
ಬೆನೆಗಲ್ ಶಿವರಾವ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
14 ಚಿತಾಲದುರ್ಗ
(ಚಿತ್ರದುರ್ಗ)
ಎಸ್. ನಿಜಲಿಂಗಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
15 ಬೆಂಗಳೂರು ಉತ್ತರ ಕೇಶವ ಅಯ್ಯಂಗಾರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
16 ಬೆಂಗಳೂರು ದಕ್ಷಿಣ ಟಿ. ಮಾದಯ್ಯ ಗೌಡ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
17 ಬಳ್ಳಾರಿ
(ಅಂದಿನ ಮದ್ರಾಸ್ ರಾಜ್ಯಕ್ಕೆ ಸೇರಿತ್ತು)
ಟಿ. ಸುಬ್ರಹ್ಮಣ್ಯಂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
18 ಬೀದರ್
(ಅಂದಿನ ಹೈದರಾಬಾದ್ ರಾಜ್ಯಕ್ಕೆ ಸೇರಿತ್ತು)
ಶೌಕತ್ ಉಲ್ಲಾ ಅನ್ಸಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
19 ಗುಲಬರ್ಗಾ
(ಅಂದಿನ ಹೈದರಾಬಾದ್ ರಾಜ್ಯಕ್ಕೆ ಸೇರಿತ್ತು)
ಸ್ವಾಮಿ ರಮಾನಂದ ತೀರ್ಥ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
20 ಕೋಲಾರ ಎಂ. ವಿ. ಕೃಷ್ಣಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
ದೊಡ್ಡ ತಿಮ್ಮಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
21 ಮಂಡ್ಯ ಎಂ. ಕೆ. ಶಿವನಂಜಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
22 ಮೈಸೂರು ಎನ್. ರಾಚಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
ಎಂ. ಎಸ್. ಗುರುಪಾದಸ್ವಾಮಿ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ 1952-1957
22 ತುಮಕೂರು ಸಿ. ಆರ್. ಬಸಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957
23 ಶಿವಮೊಗ್ಗ ಕೆ. ಜಿ. ಒಡೆಯರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1952-1957

ಉಲ್ಲೇಖಗಳು

[ಬದಲಾಯಿಸಿ]
  1. "Lok Sabha Results 1951-52". Election Commission of India. Archived from the original on 2016-10-17. Retrieved 2020-02-25.
  2. "Statistical Report on Lok Sabha Elections 1951-52" (PDF). Election Commission of India. Archived from the original (PDF) on 2012-01-11. Retrieved 2020-02-25.
  3. "Lok Sabha Elections Stats Summary 1951-52" (PDF). Election Commission of India. Archived from the original (PDF) on 2016-03-05. Retrieved 2020-02-25.
  4. India has nearly 83 crore voters: Brahma

ಕೊಂಡಿಗಳು

[ಬದಲಾಯಿಸಿ]