ಟಿ. ಮಾದಯ್ಯ ಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿ. ಮಾದಯ್ಯ ಗೌಡ
ಟಿ. ಮಾದಯ್ಯ ಗೌಡ

ಉತ್ತರಾಧಿಕಾರಿ H. C. ದಾಸಪ್ಪ
ಅಧಿಕಾರದ ಅವಧಿ
1962 – 1967
ಪೂರ್ವಾಧಿಕಾರಿ ಕೆಂಗಲ್ ಹನುಮಂತಯ್ಯ
ಉತ್ತರಾಧಿಕಾರಿ B. R. ಧನಂಜಯ

ಜನನ (೧೮೯೬-೦೩-೧೭)೧೭ ಮಾರ್ಚ್ ೧೮೯೬
ಚನ್ನಪಟ್ಟಣ, British India (Now ಕರ್ನಾಟಕ ,India)
ಮರಣ ಮೇ 24, 1971(1971-05-24)
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಜೀವನಸಂಗಾತಿ ಶ್ರೀಮತಿ ಶರದಮ್ಮ

ತಿಮ್ಮಸಂದ್ರ ಮಾದಯ್ಯ ಗೌಡಅವರು ಒಬ್ಬಭಾರತೀಯ ರಾಜಕಾರಣಿ.ಅವರು ಲೋಕಸಭೆಯ ಕೆಳಮನೆ ಯಿಂದ ಲೋಕಸಭೆಯ ಸದಸ್ಯರಾಗಿಬೆಂಗಳೂರು ದಕ್ಷಿಣ ಆಯ್ಕೆಯಾಗಿದರು.ಇವರು 1952 ಮತ್ತು 1957 ರ ನಡುವೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಿಂದ 1ನೇ ಲೋಕಸಭೆ ಚುನಾವಣೆಯಲ್ಲಿ ಸಂಸತ್ ಸದಸ್ಯರಾಗಿದ್ದರು.ಮಾದಯ್ಯ ಗೌಡರು 1962 ಮತ್ತು 1967 ರ ನಡುವೆ ರಾಮನಗರ (ವಿಧಾನಸಭಾ ಕ್ಷೇತ್ರ)ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿದ್ದರು. [೧]

ಜನನ ಹಾಗೂ ಶಿಕ್ಷಣ[ಬದಲಾಯಿಸಿ]

ಮಾದಯ್ಯ ಗೌಡರು 1896 ರ ಮಾರ್ಚ್ 17 ರಂದು ಚನ್ನಪಟ್ಟಣ ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ಮೈಸೂರು ಸಾಮ್ರಾಜ್ಯದ (ಇಂದಿನ ಭಾರತೀಯ ರಾಜ್ಯ ಕರ್ನಾಟಕದಲ್ಲಿ ) ಜನಿಸಿದರು. ಅವರ ತಂದೆಯ ಹೆಸರು ಅಂಕೆ ಗೌಡ.

ಚನ್ನಪಟ್ಟಣದ ಸರ್ಕಾರಿ ಮಧ್ಯಮ ಶಾಲೆ ಮತ್ತು ಸರ್ಕಾರಿ ಪ್ರೌಢ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು, ನಂತರ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಕಲೆಗಳಲ್ಲಿ ಪದವಿ ಪಡೆದರು ಮತ್ತು ಪೂನಾದ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು. ಅವರು 1935 ರಲ್ಲಿ ಶ್ರೀಮತಿ ಶರದಮ್ಮ ಅವರನ್ನು ವಿವಾಹವಾದರು. [೨]

ರಾಜಕೀಯ ವೃತ್ತಿ[ಬದಲಾಯಿಸಿ]

ಮಾದಯ್ಯ ಗೌಡರು ಕಾನೂನು ಪದವಿ ಮುಗಿಸಿದ ನಂತರ ವಕೀಲ ವೃತ್ತಿಯಲ್ಲಿ ತೊಡಗಿದರು. ಅವರು ಮೈಸೂರು ಯೂನಿವರ್ಸಿಟಿ ಕೌನ್ಸಿಲ್, ಯೂನಿವರ್ಸಿಟಿ ಸೆನೆಟ್, ಸೆಕೆಂಡರಿ ಎಜುಕೇಶನ್ ಬೋರ್ಡ್, ಸ್ಕೂಲ್ ಬೋರ್ಡ್ ಆಫ್ ವಯಸ್ಕರ ಶಿಕ್ಷಣ ಮಂಡಳಿ, ಗ್ರಾಮೀಣಾಭಿವೃದ್ಧಿ ಸಮಿತಿಗಳು, ಸಹಕಾರಿ ಸಂಘಗಳ ಭಾಗವಾಗಿದ್ದರು ಮತ್ತು ಅವರು ಅನೇಕ ಸೆಮಿನಾರ್ಗಳು, ಕೃಷಿ ಮತ್ತು ಪ್ರಾಯೋಗಿಕ ಒಕ್ಕೂಟ, ಸರ್ ಎಂ ವಿಶ್ವೇಶ್ವರಯ್ಯ ಗ್ರಾಮೀಣ ಕೈಗಾರಿಕಾ ಯೋಜನೆ ಮತ್ತು ಕಾಟೇಜ್ ಇಂಡಸ್ಟ್ರೀಸ್ ಕಾರ್ಯಕ್ರಮಗಳು ಯೋಜನೆಗಳಲ್ಲಿ ಭಾಗವಹಿಸಿದ್ದಾರೆ. ಅವರು ಮೈಸೂರು ಪ್ರತಿನಿಧಿ ಸಭೆ, ವಿಧಾನ ಪರಿಷತ್ತು, ಮೈಸೂರು ಸಂವಿಧಾನ ಸಭೆ, ಮೈಸೂರು ವಿಧಾನಸಭೆಯಲ್ಲೂ ಸೇವೆ ಸಲ್ಲಿಸಿದರು. ಅವರು ರಾಮನಗರ ಪುರಸಭೆ, ಬೆಂಗಳೂರು ಜಿಲ್ಲಾ ಮಂಡಳಿ, ಬೆಂಗಳೂರು ಸ್ಥಳೀಯ ಶಿಕ್ಷಣ ಮಂಡಳಿಯ ಭಾಗವಾಗಿದ್ದರು. ಅವರು 1947 ರಿಂದ ಮೈಸೂರು ರಾಜ್ಯ ವಯಸ್ಕರ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿದ್ದರು. ಅವರು ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ನಂತರ ಬೆಂಗಳೂರು ಗ್ರಾಮೀಣ ಜಿಲ್ಲೆಯ ಅಧ್ಯಕ್ಷರಾದರು. ಬೆಂಗಳೂರು ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಮಿತಿಯ ಸದಸ್ಯರೂ ಆಗಿದ್ದರು. [೩] [೨]

ಮಾದಯ್ಯ ಗೌಡರು ಭಾರತದ ಎರಡನೇ ರಾಷ್ಟ್ರಪತಿ  ಶ್ರೀ ಸರ್ವಪಲ್ಲಿ ರಾಧಾಕೃಷ್ಣನ್ ಅವರೊಂದಿಗೆ .
ಮಾದಯ್ಯ ಗೌಡರು ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ಅವರೊಂದಿಗೆ

ಉಲ್ಲೇಖಗಳು[ಬದಲಾಯಿಸಿ]

  1. "Ramanagaram Election and Results 2018, Candidate list, Winner, Runner-up, Current MLA and Previous MLAs". www.elections.in. Archived from the original on 2019-10-27. Retrieved 2019-10-27.
  2. ೨.೦ ೨.೧ "Members Bioprofile". loksabhaph.nic.in. Retrieved 2019-10-27.
  3. Basavaraju, Dr M G (2018). Parahitha Chinthaka T Madiah Gowda. Mandya: Vikasana. p. 168.

ಉಲ್ಲೇಖ[ಬದಲಾಯಿಸಿ]