ವಿಷಯಕ್ಕೆ ಹೋಗು

ಕರ್ನಾಟಕ ಲೋಕಸಭಾ ಚುನಾವಣೆ, ೧೯೬೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕದಲ್ಲಿ 1967ರ ಲೋಕಸಭಾ ಚುನಾವಣೆ
ಭಾರತ
1962 ←
17–21 ಫೆಬ್ರವರಿ 1967 → 1971

 
ಇಂದಿರಾ ಗಾಂಧಿ
()

ಸಿ. ರಾಜಗೋಪಾಲಾಚಾರಿ
(ಯಾವುದೂ ಇಲ್ಲ)
ಪಾರ್ಟಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
(283)
ಸ್ವತಂತ್ರ ಪಾರ್ಟಿ
(27)


ಪ್ರಧಾನಮಂತ್ರಿ (ಚುನಾವಣೆಗೆ ಮುನ್ನ)

ಇಂದಿರಾ ಗಾಂಧಿ
ಕಾಂಗ್ರೆಸ್

ನೂತನ ಪ್ರಧಾನಮಂತ್ರಿ

ಇಂದಿರಾ ಗಾಂಧಿ
ಕಾಂಗ್ರೆಸ್

ಚುನಾವಣಾ ವಿವರಗಳು[ಬದಲಾಯಿಸಿ]

1967ರ ಲೋಕಸಭಾ ಚುನಾವಣೆ, ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಿಗೆ ಹೋಲಿಸಿದರೆ ವಿಭಿನ್ನವಾಗಿತ್ತು. ಲೋಕಸಭಾ ಕ್ಷೇತ್ರಗಳ ಸಂಖ್ಯೆ 494ರಿಂದ 520ಕ್ಕೆ ಏರಿಕೆಯಾಯಿತು[೧]. ಭಾರತದ ಮೊದಲ ಇಬ್ಬರು ಪ್ರಧಾನಮಂತ್ರಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಇವರಿಬ್ಬರ ಸ್ಥಾನವನ್ನು ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಸಮರ್ಥವಾಗಿ ತುಂಬಿದ್ದರಾದರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಾಧನೆ ಈ ಚುನಾವಣೆಯಲ್ಲಿ ಸ್ವಲ್ಪ ಕೆಳಮುಖವಾಗಿತ್ತು. ಜೊತೆಗೆ ಕಾಂಗ್ರೆಸ್ ಪಕ್ಷದ ಭದ್ರನೆಲೆಗಳಾಗಿದ್ದ ಮದ್ರಾಸ್ ರಾಜ್ಯ ಮತ್ತು ಗುಜರಾತ್ ರಾಜ್ಯಗಳಲ್ಲಿ ಪಕ್ಷ ಗಮನಾರ್ಹ ಸೋಲು ಕಂಡಿತು. ಸಿ. ರಾಜಗೋಪಾಲಾಚಾರಿಯವರು ಸ್ಥಾಪಿಸಿದ ಸ್ವತಂತ್ರ ಪಾರ್ಟಿ ಗುಜರಾತ್, ಮದ್ರಾಸ್, ಒರಿಸ್ಸಾ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಿ ಗೆದ್ದು ಬೀಗಿತು. ರಾಜಧಾನಿ ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳು ಭಾರತೀಯ ಜನಸಂಘಕ್ಕೆ, ಉಳಿದ ಏಕೈಕ ಕ್ಷೇತ್ರ ಕಾಂಗ್ರೆಸ್ ಪಕ್ಷದ ಪಾಲಾಯಿತು.


ಸಂಸದರ ಪಟ್ಟಿ[ಬದಲಾಯಿಸಿ]

ಕ್ರಮ ಸಂಖ್ಯೆ ಕ್ಷೇತ್ರದ ಹೆಸರು ಸದಸ್ಯರ ಹೆಸರು ಪಕ್ಷ ಅಧಿಕಾರಾವಧಿ
1 ಬೀದರ್ ರಾಮಚಂದ್ರ ವೀರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
2 ಗುಲಬರ್ಗಾ ಎಂ. ಯಶವಂತಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
3 ರಾಯಚೂರು ಆರ್. ವಿ. ನಾಯಕ್ ಸ್ವತಂತ್ರ ಪಾರ್ಟಿ 1967-1971
4 ಕೊಪ್ಪಳ ಎ. ಸಂಗಣ್ಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
5 ಬಳ್ಳಾರಿ ವಿ. ಕೆ. ಆರ್. ವಿ. ರಾವ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
6 ಚಿತ್ರದುರ್ಗ ಜೆ. ಎಂ. ಇಮಾಂ ಸ್ವತಂತ್ರ ಪಾರ್ಟಿ 1967-1971
7 ತುಮಕೂರು ಕೆ. ಲಕ್ಕಪ್ಪ ಪ್ರಜಾ ಸೋಷಿಯಲಿಸ್ಟ್ ಪಕ್ಷ 1967-1971
8 ಮಧುಗಿರಿ ಮಾಲಿ ಮರಿಯಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
9 ಕೋಲಾರ ಜಿ. ವೈ. ಕೃಷ್ಣನ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
10 ಹೊಸಕೋಟೆ ಎಂ. ವಿ. ಕೃಷ್ಣಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
11 ಬೆಂಗಳೂರು ಕೆಂಗಲ್ ಹನುಮಂತಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
12 ಕನಕಪುರ ಎಂ. ವಿ. ರಾಜಶೇಖರನ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
13 ಮಂಡ್ಯ ಎಂ. ಕೆ. ಶಿವನಂಜಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
14 ಚಾಮರಾಜನಗರ ಎಸ್. ಎಂ. ಸಿದ್ದಯ್ಯ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
15 ಮೈಸೂರು ಎಚ್. ದಾಸಪ್ಪ ತುಳಸೀದಾಸ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
16 ಮಂಗಳೂರು ಸಿ. ಎಂ. ಪೂಣಚ್ಚ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
17 ಉಡುಪಿ ಜೆ. ಎಂ. ಎಲ್. ಪ್ರಭು ಸ್ವತಂತ್ರ ಪಾರ್ಟಿ 1967-1971
18 ಹಾಸನ ಎನ್. ಶಿವಪ್ಪ ಸ್ವತಂತ್ರ ಪಾರ್ಟಿ 1967-1971
19 ಚಿಕ್ಕಮಗಳೂರು ಎಂ. ಹುಚ್ಚೇಗೌಡ ಪ್ರಜಾ ಸೋಷಿಯಲಿಸ್ಟ್ ಪಕ್ಷ 1967-1971
20 ಶಿವಮೊಗ್ಗ ಜೆ. ಎಚ್. ಪಟೇಲ್ ಸಂಯುಕ್ತ ಸೋಷಿಯಲಿಸ್ಟ್ ಪಕ್ಷ 1967-1971
21 ಕೆನರಾ ಡಿ. ಡಿ. ದತ್ತಾತ್ರೇಯ ಪಕ್ಷೇತರ 1967-1971
22 ಧಾರವಾಡ ದಕ್ಷಿಣ ಎಂ. ಎಫ್. ಹುಸೇನ್‌ಸಾಬ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
23 ಧಾರವಾಡ ಉತ್ತರ ಸರೋಜಿನಿ ಮಹಿಷಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
24 ಬೆಳಗಾವಿ ಎನ್. ಎಂ. ನಬೀಸಾಬ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
25 ಚಿಕ್ಕೋಡಿ ಬಿ. ಶಂಕರಾನಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
26 ಬಾಗಲಕೋಟ ಎಸ್. ಬಿ. ಪಾಟೀಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967-1971
27 ಬಿಜಾಪುರ ಜಿ. ಡಿ. ಪಾಟೀಲ ಸ್ವತಂತ್ರ ಪಾರ್ಟಿ 1967-1971

ಉಲ್ಲೇಖಗಳು[ಬದಲಾಯಿಸಿ]

  1. "General Election of India 1967, 4th Lok Sabha" (PDF). Election Commission of India. p. 5. Archived from the original (PDF) on 18 ಜುಲೈ 2014. Retrieved 13 ಜನವರಿ 2010.

ಕೊಂಡಿಗಳು[ಬದಲಾಯಿಸಿ]