ಆಳಂದ (ಕರ್ನಾಟಕ)
ಆಳಂದ Aland | |
---|---|
Town | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ಕಲಬುರಗಿ |
ಕ್ಷೇತ್ರಫಲ | |
• ಒಟ್ಟು | ೮ km೨ (೩ sq mi) |
Elevation | ೪೮೦ m (೧,೫೭೦ ft) |
ಜನಸಂಖ್ಯೆ (2011) | |
• ಒಟ್ಟು | ೪೨,೩೭೧ |
• ಸಾಂದ್ರತೆ | ೪,೪೧೩.೫/km೨ (೧೧,೪೩೧/sq mi) |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
ಪಿನ್ ಕೋಡ್ | 585 302 |
Telephone code | 08477 |
ವಾಹನ ನೋಂದಣಿ | KA-32 |
ಲೋಕ ಸಭೆ | ಬೀದರ್ (ಲೋಕ ಸಭೆ) |
ವಿಧಾನ ಸಭೆ | ಆಳಂದ |
ಜಾಲತಾಣ | www.alandatown.mrc.gov.in |
ಆಳಂದ ಕರ್ನಾಟಕ ರಾಜ್ಯದ , ಕಲಬುರ್ಗಿ ಜಿಲ್ಲೆಯ ಒಂದು ಪಂಚಾಯತಿ ಪಟ್ಟಣ ಮತ್ತು ತಾಲೂಕು ಕೇಂದ್ರ.
ಭೌಗೋಲಿಕ ವಿವರಗಳು[ಬದಲಾಯಿಸಿ]
- ಅಕ್ಷಾಂಶ / ರೇಖಾಂಶ : ೧೭.೫೭ ಡಿಗ್ರಿ ಉತ್ತರ ಮತ್ತು ೭೬.೫೭ ಡಿಗ್ರಿ ಉತ್ತರ,ಸಮುದ್ರಮಟ್ಟದಿಂದ ಸರಾಸರಿ ಎತ್ತರ : ೪೮೦ ಮೀಟರುಗಳು,ಕ್ಷೇತ್ರಫಲ : ೮ ಚದರ ಕಿ.ಮೀ
- ಅಕ್ಕಪಕ್ಕದ ತಾಲೂಕುಗಳು : ಗುಲ್ಬರ್ಗ ಪೂರ್ವಕ್ಕೆ, ಅಫಜಲ್ಪುರ ತಾಲೂಕು ದಕ್ಷಿಣಕ್ಕೆ ,ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣ ಉತ್ತರ-ಪಶ್ಷಿಮಕ್ಕೆ, ಮಹಾರಾಷ್ಟ್ರದ ಅಕ್ಕಲಕೋಟೆ ಪಶ್ಚಿಮಕ್ಕೆ ಮತ್ತು ಮಹಾರಾಷ್ಟ್ರದ ಉಮರ್ಗಾ ಉತ್ತರಕ್ಕೆ.ಅಮರ್ಗಾ.
ಜನಸಂಖ್ಯಾ ಅಂಕಿ ಅಂಶ[ಬದಲಾಯಿಸಿ]
೨೦೧೧ರ ಜನಗಣತಿ ಯ ಪ್ರಕಾರ ಆಳಂದಿನ ಜನಸಂಖ್ಯೆ ೪೨,೩೭೧.[೧] ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೪೯.೪% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೬%ರಷ್ಟಿದ್ದಾರೆ.
ಪ್ರಮುಖ ಬೆಳೆಗಳು[ಬದಲಾಯಿಸಿ]
ಕೃಷಿ ಇಲ್ಲಿನ ಪ್ರಮುಖ ಕಸುಬಾಗಿದೆ, ಪ್ರಮುಖ ಬೆಳೆಗಳೆಂದರೆ ತೊಗರಿ, ಜೋಳ, ಉದ್ದು, ಕಬ್ಬು, ಶೆಂಗಾ, ಗೋದಿ ಇತ್ಯಾದಿ . ಇದೀಗ ರೇಷ್ಮೇ ಬೆಳೆಯುತ್ತಿದ್ದಾರೆ.ಈಗ, ಸಕ್ಕರೆ ಖರ್ಖಾನೆ ಆಗಿರುವದರಿಂದ ಕಬ್ಬು ಪ್ರಮುಖ ಬೆಳೆ ಆಗಿದೆ
ಆಳಂದ ತಾಲ್ಲೂಕಿನ ಪ್ರಮುಖ ಹೊಬಳಿಗಳು[ಬದಲಾಯಿಸಿ]
- ಆಳಂದ ಕಸಬಾ
- ಮಾದನ ಹಿಪ್ಪಾರಗಾ
- ಖಜ್ಜುರಗಿ
- ನರೋಣಾ
- ನಿಂಬರಗಾ
- ಮಾಡಿಯಾಳ
ಮಾದನ ಹಿಪ್ಪಾರಗಾ ಹೋಬಳಿಯಲ್ಲಿ ಶ್ರೀ ಶೀವಲಿಂಗೇಶ್ವರ ವಿರಕ್ತ ಮಠ ಸುಂದರವಾಗಿದೆ. ಝಲಕಿ(ಕೆ) ಎಂಬ ಗ್ರಾಮದಲ್ಲಿ ಶ್ರೀ ಭಿಮಾಶಂಕರ ದೇವಾಲಯ ನೋಡಲು ಸುಂದರವಾಗಿದೆ. ಆಳಂದ ತಾಲ್ಲೂಕಿನ ಚಲಗೇರಾ ಗ್ರಾಮದಲ್ಲಿ ಹನುಮಾನ ದೇವಾಲಯ ಸುಂದರವಾಗಿದೆ ಮತ್ತು ಸಿದ್ದಲಿಂಗ ಕಲ್ಯಾಣ ಮಂಟಪ ನೋಡುವಹಾಗಿದೆ. ಅಳಂದ ತಾಲೂಕಿನ ಧೂತ್ತರಗಾಂವ ಗ್ರಾಮದಲ್ಲಿ ಅತೀ ಹಳೆಯ ವೀರೇಶ್ವರ ದೇವಾಲಯವಿದೆ.ಧಂಗಾಪುರ ಗ್ರಾಮ ಚೆನ್ನಾಗಿದೆ