ಅಫಜಲ್ಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಫಜಲಪುರ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲೂಕು ಕೇಂದ್ರ.

ಭೌಗೋಳಿಕ ವಿವರಗಳು[ಬದಲಾಯಿಸಿ]

ಭೀಮಾ ಮತ್ತು ಅಮರ್ಜಾ ನದಿಗಳು ಈ ತಾಲೂಕಿನಲ್ಲಿ ಹರಿಯುತ್ತವೆ.

  • ಪ್ರಮುಖ ಬೆಳೆಗಳು: ಕಬ್ಬು, ತೊಗರಿ, ಜೋಳ, ಸೂರ್ಯಕಾಂತಿ, ಕುಸುಬೆ, ಕಡಲೆ, ಶೇಂಗಾ, ಹೆಸರು.

ಪ್ರಮುಖ ಕಾರ್ಖಾನೆಗಳು[ಬದಲಾಯಿಸಿ]

  • ಶ್ರೀ ರೇಣುಕಾ ಶುಗರ್ಸ್, ಹಾವಳಗಾ. ಅಫಜಲಪುರ.

ಜನಸಂಖ್ಯಾ ಅಂಕಿ ಅಂಶ[ಬದಲಾಯಿಸಿ]

೨೦೦೧ರ ಜನಗಣತಿ ಯ ಪ್ರಕಾರ ಅಫಜಲ್ಪುರದ ಜನಸಂಖ್ಯೆ ೧೯,೧೧೪. ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೫೪% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೫%ರಷ್ಟಿದ್ದಾರೆ.

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

  • ಘತ್ತರ್ಗಾ- ಶ್ರೀ ಭಾಗ್ಯವ೦ತಿ,ದೇವಾಲಯ
  • ರೇವೂರ..ಶ್ರೀಬಮ್ಮಲಿಂಗೇಶ್ವರ - ಶ್ರೀರೇವಣಸಿದ್ದೇಶ್ವರ ದೇವಾಲಯ,
  • ಚಿನ್ನಮಳ್ಳಿಯ -ಶ್ರೀ ಮಲ್ಲಿಕಾರ್ಜುನ,ದೇವಾಲಯ,
  • ಅಫಜಲಪುರ: ಶ್ರೀ ಸಿದ್ಫರಾಮೇಶ್ವರ ಜಾತ್ರೆ ,ಶ್ರೀ ಸೋಂದೇಸಾಹೇಬ್ ದರ್ಗಾ, ಶ್ರೀ ಕಾಳಿಕಾದೇವಿ ಜಾತ್ರೆ, ಶ್ರೀ ಅಂಬಾಭವಾನಿ ಜಾತ್ರೆ, ಶ್ರೀ ಲಕ್ಷ್ಮಿದೇವಾಲಯ,
  • ಸಂಗಾಪುರದ: ಶ್ರೀ ಸಂಗಮೇಶ್ವರ ದೇವಾಲಯ,
  • ಮಣ್ಣೂರದ-ಶ್ರೀ ಯಲ್ಲಮ್ಮಾದೇವಾಲಯ,
  • ಅತನೂರ,ಗೂಬುರ,ಇಲ್ಲಿ ಪ್ರಾಚೀನ ಗೂಡೇಗಳಿವೆ ಅವಶೇಷಗಳಿವೆ.
  • ಮರ್ಜಿ ಪೀರ್‍ ದರ್ಗಾ (ಭೀಮಾ ಮತ್ತು ಅಮರ್ಜಾ ನದಿಗಳ ಸಂಗಮದಲ್ಲಿದೆ
  • ಉಡಚಣ, ಗೌರ(ಬಿ), ಅಳ್ಳಗಿ (ಬಿ),ಗಳ ಪವಾಡ ಪುರು‌ಷ :ಶ್ರೀ ಹುಚ್ಚಲಿಂಗೇಶ್ವರರ ಜಾತ್ರೆ.
  • ಮಲ್ಲಾಬಾದ: ಶ್ರೀ ಲಕ್ಷ್ಮಿ ದೇವಾಲಯ,
  • ಬಳೂರ್ಗಿ: ಶ್ರೀ ಬಸವೇಶ್ವರ ದೇವಾಲಯ,
  • ಬಡದಾಳ:ಚನ್ನಮಲ್ಲೇಶ್ವರ ಮಠ
  • ಬಂದರವಾಡ: ಶ್ರೀ ಲಲಿತಾದೇವಿ ದೇವಾಲಯ
  • ದೇವಲ ಗಾಣಗಾಪೂರ: ತ್ರಿಮೂರ್ತಿ ಶ್ರೀ ದತ್ತಾತ್ರೇಯ
  • ಗುಡ್ಡೆವಾಡಿ:- ಭೀಮಾ ತೀರದ ಉದ್ಭವಲಿಂಗ ಶ್ರೀ ಬ್ರಹ್ಮಲಿಂಗಶ್ವರ ದೇವಾಲಯ ತಾಲ್ಲೂಕಿನ ಹೆಮ್ಮೆಯ ಅತ್ಯಂತ ಪವಿತ್ರವಾದ ಸ್ಥಳವಾಗಿದೆ ಈ ಸ್ಥಳವು ಗಾಣಗಾಪುರ & ಘತ್ತರಗಿ ಹಾದು ಹೋಗುವ ರಸ್ತೆಯಲ್ಲಿ ಬರುತ್ತದೆ
  • ಹೈದ್ರಾ: ಶ್ರೀ ಖಾಜಾ ಬಂದೇನವಾಜ ದರ್ಗಾ
  • ನಂದರ್ಗಾ: ಶ್ರೀ ರೇವಣಸಿದ್ದೇಶ್ವರ.
  • ಗೌಡಗಾಂವ:ಶ್ರೀ ಮಲ್ಲಿಕಾರ್ಜುನ ದೇವಸ್ಥಾನ
  • ಹೊಸೂರು: ಅಂಭಾಭವಾನಿ ದೇವಿ, ಭೀರಲಿಂಗೇಶ್ವರ ದೇವಸ್ಥಾನ

ಅಂಕಲಗಾ: ಮಲ್ಲಿಕಾರ್ಜುನ ದೇವಸ್ಥಾನ, ಭಾಗ್ಯವಂತಿ ದೇವಸ್ಥಾನ, ಹಜರತ್ ಜಿಂದಾಶಾ ಮಾದರಸಾಹೇಬ ದರ್ಗಾ


ಅಫಜಲ ಖಾನ[ಬದಲಾಯಿಸಿ]

ಅಫಜಲ ಖಾನ ಎನ್ನುವವರು ಔರಂಗಜೇಬನನ್ನು ಕೊಂದನು.ಇದರ ಸವಿ ನೆನಪಿಗಾಗಿ ಅಫಜಲಪುರ ಎಂದು ನಾಮಕರಣ ಮಾಡಲಾಗಿದೆ. ಅಫಜಲ ಖಾನ ಒಬ್ಬ ವೀರ.