ಸಿಂದಗಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಿಂದಗಿ
India-locator-map-blank.svg
Red pog.svg
ಸಿಂದಗಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ವಿಜಯಪುರ
ನಿರ್ದೇಶಾಂಕಗಳು 16.1833° N 75.7000° E
ವಿಸ್ತಾರ
 - ಎತ್ತರ
೧೨೦೦ km²
 - 770 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೧೨)
 - ಸಾಂದ್ರತೆ
೩೫,೦೦೦
 - ೧೫೦/ಚದರ ಕಿ.ಮಿ.
ಅಂತರ್ಜಾಲ ತಾಣ: www.sindagitown.gov.in

ಸಿಂದಗಿ ಒಂದು ನಗರ ಹಾಗೂ ತಾಲ್ಲೂಕು ಕೇಂದ್ರ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ಸಿಂದಗಿ ಪಟ್ಟಣವು ವಿಜಯಪುರ - ಗುಲ್ಬರ್ಗಾ ರಾಷ್ಟ್ರಿಯ ಹೆದ್ದಾರಿ - ೨೧೮ ರಲ್ಲಿ ಇದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೫೦ ಕಿ. ಮಿ. ದೂರ ಇದೆ.

ಪರಿವಿಡಿ

ಚರಿತ್ರೆ[ಬದಲಾಯಿಸಿ]

ಸಿಂದಗಿ ನಕಾಶೆ

ದೇವರನಾವದಗಿ

ಸಿಂದಗಿ ತಾಲೂಕಿನಲ್ಲಿ ಕೆಲವು ಇತಿಹಾಸ ಪ್ರಸಿದ್ಧ ಸ್ಥಳಗಳಲ್ಲಿ ದೇವರನಾವದಗಿ ಗ್ರಾಮ ಕೂಡ ಒಂದು. ಇದು ಭೀಮಾನದಿಯಿಂದ ೩ ಕಿ.ಮೀ.ದೂರದಲ್ಲಿದೆ. ಈ ಗ್ರಾಮದ ಮುಖ್ಯ ಆಕರ್ಷಣೆ ಮಲ್ಲಿಕಾರ್ಜುನ ದೇವಾಲಯ. ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪಡಖೇ ಈ ದೇವಾಲಯದಲ್ಲೇ ಸೆರೆ ಸಿಕ್ಕರು.

ಸಿಂದಗಿ ತಾಲೂಕಿನಲ್ಲಿ ಸಿಂದಗಿ ನಗರದ ಐತಿಹಾಸಿಕ ದೇವಸ್ಥಾನವಾದ ಶ್ರೀ ಸಂಗಮೇಶ್ವರ ದೇವಸ್ಥಾನವಿದೆ ಇದು ಶಾಸನಗಳ ಪ್ರಕಾರ ೧೨ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಲಟ್ಟಿವೆ ಮುಖ್ಯ ದೇವಾಲಯದ ಪ್ರವೇಶ ದ್ವಾರಗಳು ಒಂದು ಪೂರ್ವಾಭಿಮುಖ ಇನ್ನೊಂದು ಉತ್ತರಾಭಿಮುಖವಾಗಿವೆ ಪೂರ್ವಭಿಮುಖ ಪ್ರವೇಶ ದ್ವಾರದ ಮುಂದೆ ಭೃಹತ್ ದೀಪ ಗಂಭ ಅಥವಾ ಮಾಲಗಂಬ ಇದೆ. ದ್ವಾರ ಪ್ರವೇಶದ ನಂತರ ವಿಶಾಲವಾದ ಪ್ರಾಂಗಣ ಒಳಗೊಂಡಿದೆ ಅಲ್ಲಿ ಪೂರ್ವ ದ್ವಾರದ ಎಡಕ್ಕೆ ಶಾಖಾಂಭರಿ ಮಂಟಪ ಪಶ್ಚಮಕ್ಕೆ ಕಾಳಿಕಾ ಮಾತಾ ದಕ್ಷಿಣದಲ್ಲಿ ಉತ್ತಾರಾಭಿಕವಾಗಿ ಗಣಪತಿ ಮಂಟಪ ಇದೆ ಮದ್ಯದಲ್ಲಿ ವಿಶಾಲವಾದ ಗೊಪುರ ಒಳಗೊಂಡ ಶೈವ ಧರ್ಮೀಯ ವಿಶಾಲ ಹಾಗೂ ಪ್ರಾಂಗಣ ಒಳಗೊಂಡ ಸುಂದರ ಶಿವಲಿಂಗ ಮೂರ್ತಿ ಹೊಂದಿದೆ. ಇದರ ಹಿಂದುಗಡೆ ತಾಯಿ ಬೌರಮ್ಮ ದೇವಿಯ ಅಮೃತ ಶಿಲೆಯ ನಿಂತ ಸುಂದರವಾದಂತಹ ವಿಗ್ರಹ ವಿದೆ

ಸ್ಮಾರಕ ಭವನ

ಹೈದರಾಬಾದ ಕರ್ನಾಟಕ ವಿಮೋಚನಾ ಹೋರಾಟ ಮತ್ತು ಭಾರತದ ಸ್ವತಂತ್ಯ ಹೋರಾಟದ ಸೇನಾನಿಗಾಗಿ ಶ್ರಮಿಸಿದಂತಹ ಪ್ರಮುಖರಲ್ಲಿ ಶ್ರೀಯುತರಾದಂತಹ ರಮಾನಂದ ತೀರ್ಥರ ಜನ್ಮಸ್ಥಳವಾಗಿದೆ. ಇವರ ಸ್ಮರಣಾರ್ಥ ಇವರ ಮನೆಯನ್ನು ಸ್ಮಾರಕ ಭವನವಾಗಿ ಬದಲಾಯಿಸಲಾಗಿದೆ.

ಶ್ರೀ ಬಸವೇಶ್ವರ ಪುತ್ಠಳಿ

ಸಿಂದಗಿ ನಗರವನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿ ನಿಮಗೆ ಭಾರತದಲ್ಲಿಯೆ ಅತಿ ಎತ್ತರವಾದ, ಅತಿ ಸುಂದರವಾದ .ಕಾಯಕವೇ ಕೈಲಾಸ ಎಂದು ಹೆಳಿದ ೧೨ನೇ ಶತಮಾನದ ಸಮಾಜ ಸೇವಕರು ಹಾಗೂ ವೀರಶೈವ ಮತದಸ್ಠಾಪಕರು ಆದಂತಹ ಶ್ರೀ ಬಸವೇಶ್ವರ ಅವರ (ಬಸವಣ್ಣನವರ)ಸುಂದರವಾದಂತಹ ಪುತ್ಠಳಿ ಯನ್ನು ಸ್ಠಾಪಿಸಲಾಗಿದೆ.ಇದು ಸಿಂದಗಿ ನಗರಕ್ಕೆ ಬರುವ ಸಮಸ್ತ ಮನುಕುಲದವರನ್ನು ಸದಾ ಸ್ವಾಗತಿಸುತ್ತದೆ .

ಸಿಂದಗಿಯು ತಾಲೂಕಾ ಸ್ಥಳವಾಗಿದೆ. ಇದು ವಿಜಾಪುರದಿಂದ ಪೂರ್ವಕ್ಕೆ ೬೦ ಕಿ.ಮೀ. ದೂರದಲ್ಲಿದೆ. ಸಿಂದಗಿಯನ್ನು ಕ್ರಿ.ಶ. ೧೨೦೦ರಲ್ಲಿ ಸಿಂದು ಬಲ್ಲಾಳ ಎಂಬ ಸಾಮಂತ ಅರಸನು ಕಟ್ಟಿದನೆಂಬ ಪ್ರತೀತಿ ಇದೆ. ಆದ್ದರಿಂದ ಈ ಊರಿಗೆ ಸಿಂದಗಿ ಎಂಬ ಹೆಸರು ಬಂದಿದೆ. ಇಲ್ಲಿರುವ ಸಂಗಮೇಶ್ವರ ದೇವಾಲಯವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಿತವಾಗಿದೆ. ದೇವಾಲಯದ ಗರ್ಭಗೃಹದ ಮೇಲೆ ಕದಂಬ ನಾಗರ ಶೈಲಿಯ ಶಿಖರ ಭಾಗವಿದೆ. ನವರಂಗದಲ್ಲಿ ಕಲ್ಯಾಣ ಚಾಲುಕ್ಯರ ನಾಲ್ಕು ಸ್ತಂಭಗಳಿವೆ. ಗೋಡೆಗಳಲ್ಲಿ ದೇವ ಕೋಷ್ಠಗಳಿರುತ್ತವೆ. ಬಿಡಿ ಲಿಂಗ, ವೇಣುಗೋಪಾಲ, ವಿಷ್ಣು ಅಥವಾ ನಾರಾಯಣ, ಭಕ್ತ ದಂಪತಿಗಳು ಮೊದಲಾದ ಬಿಡಿ ಶಿಲ್ಪಗಳು ಕಂಡುಬರುತ್ತವೆ.

ದೇವಾಲಯದ ಎದುರಿಗೆ ತೆರೆದ ಮಂಟಪದಲ್ಲಿ ಶಿವಲಿಂಗಗಳೂ, ಎರಡು ನಂದಿಗಳು, ಮಹಿಷ ಮರ್ಧಿನಿಯರ ಶಿಲಾಕೃತಿಗಳಿವೆ. ಸುತ್ತಲೂ ವಿಶಾಲವಾದ ಪ್ರಾಂಗಣವಿದೆ. ಪ್ರಾಂಗಣದಲ್ಲಿ ಮೂರು ಜನ ಯತಿಗಳು, ಪಾರ್ವತಿ, ಭೈರವ ಮೊದಲಾದ ವಿಜಯನಗರೋತ್ತರ ಶೈಲಿಯ ಬೃಹತ್ ಶಿಲ್ಪಗಳಿವೆ. ಪ್ರತಿ ವರ್ಷ ಸಂಕ್ರಮಣಕ್ಕೆ ಈ ದೇವಾಲಯದಲ್ಲಿ ಜಾತ್ರೆ ನಡೆಯುತ್ತದೆ.

ದೇವಾಲಯದ ಒಳ ಪ್ರಾಕಾರವು ವಿಶಾಲವಾಗಿದೆ. ಪ್ರದಕ್ಷಿಣಾ ಪಥದ ಬಲಭಾಗದಲ್ಲಿ ಪ್ರತ್ಯೇಕವಾದ ಭ್ರಮರಾಂಬಿಕಾ ದೇವಾಲಯವಿದೆ. ನರಸಿಂಹ ಮತ್ತು ಬನಶಂಕರಿಯ ಚಿಕ್ಕ ಗುಡಿಗಳು ಇರುತ್ತವೆ. ಅನೇಕ ಬಿಡಿ ವಿಗ್ರಹಗಳು ಈ ದೇವಾಲಯದಲ್ಲಿ ಇರುತ್ತವೆ.

ಸಿಂದಗಿ ಪುರಸಭೆ

ಭೌಗೋಳಿಕ[ಬದಲಾಯಿಸಿ]

ಲಂಬಾಣಿ ಜನಾಂಗದ ಮಹಿಳೆ, ವಿಜಯಪುರ
ಉತ್ತರ ಕರ್ನಾಟಕದ ಊಟ

ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿ ತಾಲ್ಲೂಕವು ಉತ್ತರಕ್ಕೆ ಗುಲ್ಬರ್ಗಾ ಜಿಲ್ಲೆ , ಪಶ್ಚಿಮಕ್ಕೆ ಇಂಡಿ ತಾಲ್ಲೂಕು ಮತ್ತು ವಿಜಯಪುರ ತಾಲ್ಲೂಕು, ದಕ್ಷಿಣಕ್ಕೆ ಮುದ್ದೇಬಿಹಾಳ ತಾಲ್ಲೂಕು ಮತ್ತು ಪೂರ್ವಕ್ಕೆ ಗುಲ್ಬರ್ಗಾ ತಾಲ್ಲೂಕುಗಳಿವೆ. ಈ ತಾಲ್ಲೂಕದ ವಿಸ್ತೀರ್ಣ ೨೨೨೫ ಚ.ಕಿಮೀ ಮತ್ತು ವಾರ್ಷಿಕ ಮಳೆ ೫೯.೫ ಸೆ.ಮೀ. ಇದೆ. ಸಿಂದಗಿ ತಾಲ್ಲೂಕವು ೧೪೩ ಹಳ್ಳಿಗಳು, ೪೦ ಗ್ರಾಮ ಪಂಚಾಯತಗಳು, ಮತ್ತು ೩ ಹೊಬಳ್ಳಿಗಳನ್ನೊಳಗೊಂಡಿದೆ.

ಕರ್ನಾಟಕ ಸರ್ಕಾರವು ಫೆಬ್ರುವರಿ ೮, ೨೦೧೩ ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ ದೇವರ ಹಿಪ್ಪರಗಿ ನಗರವನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.

ಕೃಷಿ[ಬದಲಾಯಿಸಿ]

ಕೃಷಿ ಸಿಂದಗಿ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಭೀಮಾ ನದಿ ಮತ್ತು ಆಲಮಟ್ಟಿಯಲ್ಲಿನ ಕೃಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು.

ದೇವಾಲಯಗಳು[ಬದಲಾಯಿಸಿ]

ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.

ಧಾರ್ಮಿಕ ಕೇಂದ್ರಗಳು[ಬದಲಾಯಿಸಿ]

 • ಆಲಮೇಲ - ಬಿಜ್ಜಳ ರಾಜ ಕಲಾಚಾರಿಯು 1157-1167ರಲ್ಲಿ ರಾಮಲಿಂಗ ದೇವಾಲಯವನ್ನು ಸ್ಥಾಪಿಸಿದ್ದಾನೆ.

ಮಸೀದಿಗಳು[ಬದಲಾಯಿಸಿ]

ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿಗಳು ಇವೆ.

ನೀರಾವರಿ[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ಪ್ರತಿಶತ ೩೦ ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಹಬ್ಬಗಳು[ಬದಲಾಯಿಸಿ]

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ[ಬದಲಾಯಿಸಿ]

ಪ್ರಮುಖ ಶಿಕ್ಷಣ ಸಂಸ್ಥೆಗಳು

 • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಸಿಂದಗಿ
 • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಸಿಂದಗಿ
 • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಸಿಂದಗಿ
 • ಸರಕಾರಿ ಉರ್ದು ಪ್ರೌಡ ಶಾಲೆ, ಸಿಂದಗಿ
 • ಲಯನ್ಸ್ ಶಾಲೆ, ಸಿಂದಗಿ
 • ಆರ್.ಡಿ.ಪಾಟೀಲ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
 • ಎಚ್.ಜಿ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
 • ಅಂಜುಮನ್ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
 • ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಸಿಂದಗಿ
 • ಶ್ರೀ ಜಗದಂಬಾ ಕಲಾ ಮತ್ತು ವಿಜ್ಣಾನ ಮಹಾವಿದ್ಯಾಲಯ, ಹಿಟ್ಟಿನಹಳ್ಳಿ , ಸಿಂದಗಿ
 • ಜೆ.ಪಿ.ಪೋರವಾಲ್ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
 • ಜೆ.ಪಿ.ಪೋರವಾಲ್ ಬಿ.ಸಿ.ಎ. ಮಹಾವಿದ್ಯಾಲಯ, ಸಿಂದಗಿ
 • ಸಿ.ಎಮ್.ಮನಗೂಳಿ ಕಲಾ ಮಹಾವಿದ್ಯಾಲಯ, ಸಿಂದಗಿ
 • ಜೆ.ಜೆ ಕಲಾ ಮಹಾವಿದ್ಯಾಲಯ, ಕಲಕೇರಿ, ಸಿಂದಗಿ
 • ಶ್ರೀ ಸಿದ್ರಾಮೇಶ್ವರ ಕಲಾ ಮಹಾವಿದ್ಯಾಲಯ, ಮೊರಟಗಿ, ಸಿಂದಗಿ
 • ಶ್ರೀ ನೂರೊಂದೇಶ್ವರ ಕೈಗಾರಿಕಾ ತರಬೇತಿ ಕೇಂದ್ರ,ಲೋಣಿ, ಸಿಂದಗಿ
 • ಶ್ರೀ ಸಂಗಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ,ಲಚ್ಯಾಣ, ಸಿಂದಗಿ
 • ಇಂದಿರಾ ಕೈಗಾರಿಕಾ ತರಬೇತಿ ಕೇಂದ್ರ,ಲೋಣಿ, ಸಿಂದಗಿ
 • ಗ್ರಾಮೀಣ ವಿದ್ಯಾಭಿವೃದ್ದಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಆಲಮೇಲ, ಸಿಂದಗಿ
 • ಸಿಂದಗಿ ತಾಲ್ಲೂಕಾ ಗಂಗಮತಸ್ಥರ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಸಿಂದಗಿ
 • ಶ್ರೀ ಫೂಲಸಿಂಗ್ ನಾರಾಯಣ ಚವ್ಹಾಣ ಸ್ಮಾರಕ ಶಿಕ್ಷಣ ಮಹಾವಿದ್ಯಾಲಯ, ಹಿಟ್ಟಿನಹಳ್ಳಿ, ಸಿಂದಗಿ
 • ಶ್ರೀ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯ, ಸಿಂದಗಿ
 • ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ, ಸಿಂದಗಿ

ಕವಿಗಳು[ಬದಲಾಯಿಸಿ]

 • ವಾಸುದೇವ ಬಲವಂತರಾಯ

ಸಂಗೀತಗಾರರು[ಬದಲಾಯಿಸಿ]

 • ರವೀಂದ್ರ ಹಂದಿಗನೂರ

ರಾಜಕೀಯ[ಬದಲಾಯಿಸಿ]

ಸಿಂದಗಿ ನಗರವು ವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರವಾಗಿದೆ.

ಆರೋಗ್ಯ[ಬದಲಾಯಿಸಿ]

ಸಿಂದಗಿ ನಗರದಲ್ಲಿ ಸರಕಾರಿ ತಾಲ್ಲೂಕು ಆಸ್ಪತ್ರೆಯಿದೆ.

ವಿದ್ಯುತ್ ಪರಿವರ್ತನಾ ಕೇಂದ್ರಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು

 • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಸಿಂದಗಿ
 • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಆಲಮೇಲ
 • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ದೇವರ ಹಿಪ್ಪರಗಿ
 • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕಲಕೇರಿ
 • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕೊರವಾರ
 • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮೊರಟಗಿ
 • ೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕಡ್ಲೇವಾಡ
 • ೩೩ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಗೊಲಗೇರಿ
 • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಆಲಮೇಲ
 • ೩೩ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ದೇವರ ಹಿಪ್ಪರಗಿ

ಬ್ಯಾಂಕಗಳು [ಬದಲಾಯಿಸಿ]

 • ಯೂನಿಯನ್ ಬ್ಯಾಂಕ, ಸಿಂದಗಿ
 • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ, ಸಿಂದಗಿ
 • ಡಿ.ಸಿ.ಸಿ. ಬ್ಯಾಂಕ, ಸಿಂದಗಿ
 • ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ, ಸಿಂದಗಿ
 • ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ, ಸಿಂದಗಿ
 • ಸಿಂಡಿಕೇಟ್ ಬ್ಯಾಂಕ, ಸಿಂದಗಿ
 • ಕಾರ್ಪೋರೇಶನ್ ಬ್ಯಾಂಕ, ಸಿಂದಗಿ
 • ಕೆನರಾ ಬ್ಯಾಂಕ, ಸಿಂದಗಿ
 • ಸ್ಟೇಟ್ ಬ್ಯಾಂಕ್ ಆಫ್ ಮೈಸೂರ, ಸಿಂದಗಿ
 • ಪ್ರಗತಿ ಸಹಕಾರಿ ಬ್ಯಾಂಕ್, ದೇವರ ಹಿಪ್ಪರಗಿ, ಸಿಂದಗಿ, ಬಿಜಾಪೂರ
 • ಸಿಂದಗಿ ಅರ್ಬನ್ ಸಹಕಾರಿ ಬ್ಯಾಂಕ್, ಸಿಂದಗಿ, ಬಿಜಾಪೂರ
 • ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್, ಸಿಂದಗಿ, ಬಿಜಾಪೂರ
 • ಆಲಮೇಲ ಅರ್ಬನ್ ಸಹಕಾರಿ ಬ್ಯಾಂಕ್, ಆಲಮೇಲ, ಸಿಂದಗಿ, ಬಿಜಾಪೂರ


ಖಜಾನೆ ಕಚೇರಿಗಳು

 • ಸಿಂದಗಿ

ಸಿಂದಗಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು[ಬದಲಾಯಿಸಿ]

ಆಹೇರಿ, ಆಲಹಳ್ಳಿ, ಆಲಗೂರ, ಆಲಮೇಲ, ಅಂಬಳನೂರ, ಆನೆಮಡು, ಅಂತರಗಂಗಿ, ಆಸಂಗಿಹಾಳ, ಅಸಂತಾಪೂರ, ಅಸ್ಕಿ, ಬಬಲೇಶ್ವರ, ಬಾಗಲೂರ, ಬಳಗಾನೂರ, ಬನಹಟ್ಟಿ ಪಿ.ಎ., ಬಂದಾಳ, ಬನಹಟ್ಟಿ ಪಿ.ಟಿ., ಬಸ್ತಿಹಾಳ, ಬೆಕಿನಾಳ, ಬಂಕಲಗಿ, ಬಂಟನೂರ, ಬಿ.ಬಿ.ಇಂಗಳಗಿ, ಬಿಂಜಳಭಾವಿ, ಬಿಸನಾಳ, ಬೊಮ್ಮನಹಳ್ಳಿ, ಬೊಮ್ಮನಜೋಗಿ, ಬೊರಗಿ, ಬ್ರಹ್ಮದೇವನಮಡು, ಬೂದಿಹಾಳ ಡೋಣ, ಬೂದಿಹಾಳ ಪಿ.ಎಚ್., ಬೂದಿಹಾಳ ಪಿ.ಟಿ., ಬ್ಯಾಡಗಿಹಾಳ, ಬ್ಯಾಕೋಡ, ಬ್ಯಾಲ್ಯಾಳ, ಚಾಂದಕವಟೆ, ಚಂದನಗರ, ಚಟ್ನಳ್ಳಿ, ಚಟ್ಟರಕಿ, ಚಿಕ್ಕ ಆಲ್ಲಾಪೂರ, ಚಿಕ್ಕ ರೂಗಿ, ಚಿಕ್ಕ ಸಿಂದಗಿ, ಡಂಬಳ, ದೇವಣಗಾಂವ, ದೇವರಹಿಪ್ಪರಗಿ, ದೇವರನಾವದಗಿ, ದೇವೂರ, ಢವಲಾರ, ಗಬಸಾವಳಗಿ, ಗಂಗನಳ್ಳಿ, ಗಣಿಹಾರ, ಗೋಲಗೇರಿ, ಗೊರವಗುಂಡಗಿ, ಗುಬ್ಬೆವಾಡ, ಗುಡ್ಡಳ್ಳಿ, ಗುಂಡಗಿ, ಗುತ್ತರಗಿ, ಹಚ್ಯಾಳ, ಹಡಗಿನಾಳ, ಹಲಗುಂಡಕನಾಳ, ಹಂಚಳಿ, ಹಂಚಿನಾಳ, ಹಂದಿಗನೂರ, ಹರನಾಳ, ಹಾವಳಗಿ, ಹಿಕ್ಕನಗುತ್ತಿ, ಹಿಟ್ಟಿನಹಳ್ಳಿ, ಹೊನ್ನಳ್ಳಿ, ಹುಣಶ್ಯಾಳ, ಹೂವಿನಹಳ್ಳಿ, ಇಬ್ರಾಹಿಮಪೂರ, ಜಲಪೂರ, ಜಲವಾಡ, ಜತ್ನಾಳ, ಕಡಣಿ, ಕಡ್ಲೇವಾಡ ಪಿ.ಎ., ಕಡ್ಲೇವಾಡ ಪಿ.ಸಿ.ಎಚ್., ಕದ್ರಾಪೂರ, ಕಕ್ಕಳಮೇಲಿ, ಕಲಹಳ್ಳಿ, ಕಲಕೇರಿ, ಕಣ್ಣ ಗೂಡಿಹಾಳ, ಕನ್ನೊಳ್ಳಿ, ಕರವಿನಾಳ, ಕೆರೂರ, ಕೆರುಟಗಿ, ಕೆಸರಹಟ್ಟಿ, ಖೈನೂರ, ಖಾನಾಪೂರ, ಕೊಕಟನೂರ, ಕೊಂಡಗೂಳಿ, ಕೊರಹಳ್ಳಿ, ಕೊರವಾರ, ಕುಬರಗೊಂಡ, ಕುಳೇಕುಮಟಗಿ, ಕುಮಸಗಿ, ಕುರಬತಹಳ್ಳಿ, ಮಾಡಬಾಳ, ಮಾದನಹಳ್ಳಿ, ಮದರಿ, ಮಲಘಾಣ, ಮಂಗಳೂರ, ಮನ್ನಾಪೂರ, ಮಣ್ಣೂರ, ಮೊರಟಗಿ, ಮುಳಸಾವಳಗಿ, ಮುರಡಿ, ನಾಗರಾಳ ಡೋಣ, ನಾಗರಹಳ್ಳಿ, ನಾಗಾವಿ ಬಿ.ಕೆ., ನಾಗಾವಿ ಕೆ.ಡಿ., ನಂದಗೇರಿ, ನೀರಲಗಿ, ನಿವಾಳಖೇಡ, ಓತಿಹಾಳ, ಪಡಗಾನೂರ, ಪುರದಾಳ, ರಾಮನಹಳ್ಳಿ, ರಾಂಪೂರ ಪಿ.ಎ., ರಾಂಪೂರ ಪಿ.ಟಿ., ಸಲಾದಹಳ್ಳಿ, ಸಸಬಾಳ, ಸಲಾದಹಳ್ಳಿ, ಶಂಬೇವಾಡ, ಶಿರಸಗಿ, ಸೋಮಜಾಳ, ಸೋಮಾಪುರ, ಸುಂಗಠಾಣ, ಸುರಗಿಹಳ್ಳಿ, ತಾರಾಪೂರ, ತಾವರಖೇಡ, ತೋಂಟಾಪೂರ, ತಿಳಗೂಳ, ತಿರುಪತಿನಗರ, ತುರಕನಗೇರಿ, ಉಚಿತ ನಾವದಗಿ, ವರ್ಕನಳ್ಳಿ, ವಿಭೂತಿಹಳ್ಳಿ, ವಣಕಿನಾಳ, ವಂದಾಲ, ವರ್ಕನಹಳ್ಳಿ, ಯಲಗೋಡ, ಯಂಕಂಚಿ, ಯರಗಲ್ಲ ಬಿ.ಕೆ., ಯರಗಲ ಕೆ.ಡಿ..

ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು[ಬದಲಾಯಿಸಿ]

ಆಲಮೇಲ, ಅಸ್ಕಿ, ಬಾಗಲೂರ, ಬಳಗಾನೂರ, ಬೊಮ್ಮನಹಳ್ಳಿ, ಬಂದಾಳ, ಬೆಕಿನಾಳ, ಬ್ಯಾಕೋಡ, ಚಾಂದಕವಠೆ, ಚಟ್ಟರಕಿ, ಚಿಕ್ಕರೂಗಿ, ದೇವರಹಿಪ್ಪರಗಿ, ದೇವಣಗಾಂವ, ದೇವರನಾವದಗಿ, ಗಬಸಾವಳಗಿ, ಗೊಲಗೇರಿ, ಗುಬ್ಬೇವಾಡ, ಹಂದಿಗನೂರ, ಹರನಾಳ, ಹಿಟ್ನಳ್ಳಿ , ಹೊನ್ನಳ್ಳಿ, ಹುಣಶ್ಯಾಳ, ಜಲವಾಡ, ಕಡಣಿ, ಕಲಕೇರಿ, ಕನ್ನೊಳ್ಳಿ, ಕೆರುಟಗಿ, ಕೊಕಟನೂರ, ಕೊಂಡಗೂಳಿ, ಕೋರಹಳ್ಳಿ, ಕೊರವಾರ, ಮಲಘಾಣ, ಮಣ್ಣೂರ, ಮೊರಟಗಿ, ಮುಳಸಾವಳಗಿ, ರಾಂಪೂರ, ಸುಂಗಠಾಣ, ಯರಗಲ್ಲ ಬಿ.ಕೆ., ಯಲಗೋಡ, ಯಂಕಂಚಿ.

ಸಿಂದಗಿ ತಾಲ್ಲೂಕಿನ ಪಿನಕೋಡ್ ಸಂಕೇತಗಳು[ಬದಲಾಯಿಸಿ]

ದೇವರಹಿಪ್ಪರಗಿ - ೫೮೬೧೧೫,ಕಲಕೇರಿ - ೫೮೬೧೧೮, ಕೊರವಾರ - ೫೮೬೧೨೦, ಮೊರಟಗಿ - ೫೮೬೧೨೩, ಆಲಮೇಲ - ೫೮೬೨೦೨, ಸಾಲೋಟಗಿ - ೫೮೬೨೧೭.

ಸಿಂದಗಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು[ಬದಲಾಯಿಸಿ]

ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ.

ನಾಡ ಕಚೇರಿಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ನಾಡ ಕಚೇರಿಗಳು

ದೇವರ ಹಿಪ್ಪರಗಿ, ಆಲಮೇಲ.

ಕಂದಾಯ ಕಚೇರಿಗಳು[ಬದಲಾಯಿಸಿ]

ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ.

ತಾಲ್ಲೂಕು ಪಂಚಾಯತಿಗಳು[ಬದಲಾಯಿಸಿ]

 • ತಾಲ್ಲೂಕು ಪಂಚಾಯತ, ಸಿಂದಗಿ

ಸಿಂದಗಿ ತಾಲ್ಲೂಕಿನಲ್ಲಿ ಒಟ್ಟು 30 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.

ಸಿಂದಗಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು

ಜಿಲ್ಲಾ ಪಂಚಾಯತ[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ಜಿಲ್ಲಾ ಪಂಚಾಯತ ಚುನಾವಣಾ ಕ್ಷೇತ್ರಗಳು

ಉಚಿತ ಪ್ರಸಾದನಿಲಯಗಳು[ಬದಲಾಯಿಸಿ]

ಸಿಂದಗಿ,ಆಲಮೇಲ, ಬಳಗಾನೂರ, ಮಲಘಾಣ, ಬಿ.ಬಿ.ಇಂಗಳಗಿ, ಅಸ್ಕಿ, ಕಲಕೇರಿ, ದೇವರಹಿಪ್ಪರಗಿ, ಮುಳಸಾವಳಗಿ, ಹಿಟ್ನಳ್ಳಿ, ಜಲವಾಡ

ದೂರವಾಣಿ ಸಂಕೇತಗಳು[ಬದಲಾಯಿಸಿ]

 • ಸಿಂದಗಿ - 08488

ದೂರವಾಣಿ ವಿನಿಮಯ ಕೇಂದ್ರಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕಿನಲ್ಲಿರುವ ಬಿ.ಎಸ್.ಎನ್.ಎಲ್ ದೂರವಾಣಿ ವಿನಿಮಯ ಕೇಂದ್ರಗಳು

ಆಲಮೇಲ, ಬಾಗಲೂರ, ದೇವರಹಿಪ್ಪರಗಿ, ದೇವಣಗಾಂವ, ಗೊಲಗೇರಿ, ಹೊನ್ನಳ್ಳಿ, ಜಲವಾಡ, ಕಲಕೇರಿ, ಕನ್ನೊಳ್ಳಿ, ಕೊರವಾರ, ಮೊರಟಗಿ, ರಾಂಪುರ, ಸಿಂದಗಿ, ಯರಗಲ್ಲ ಬಿ.ಕೆ., ಯಂಕಂಚಿ.

ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು[ಬದಲಾಯಿಸಿ]

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)

ಆಲಗೂರ, ಆಲಮೇಲ, ಅಸಂತಾಪುರ, ಅಸ್ಕಿ, ಬಬಲೇಶ್ವರ, ಬಾಗಲೂರ, ಬಂಟನೂರ, ಬಿ.ಬಿ.ಇಂಗಳಗಿ, ಬಿಂಜಳಭಾವಿ, ಬೊಮ್ಮನಹಳ್ಳಿ, ಬೊಮ್ಮನಜೋಗಿ, ಬೊರಗಿ, ಬ್ಯಾಕೋಡ, ಬೆಕಿನಾಳ, ಚಾಂದಕವಟೆ, ಚಟ್ಟರಕಿ, ಚಿಕ್ಕ ರೂಗಿ, ಚಿಕ್ಕ ಸಿಂದಗಿ, ದೇವಣಗಾಂವ, ದೇವರಹಿಪ್ಪರಗಿ, ದೇವರನಾವದಗಿ, ಗಬಸಾವಳಗಿ, ಗಣಿಹಾರ, ಗೋಲಗೇರಿ, ಗುಂಡಗಿ, ಗುತ್ತರಗಿ, ಗುಬ್ಬೇವಾಡ, ಹಂದಿಗನೂರ, ಹಲಗುಣಕಿ, ಹಿಕ್ಕನಗುತ್ತಿ, ಹಿಟ್ಟಿನಹಳ್ಳಿ, ಜಲವಾಡ, ಕಡಣಿ, ಕಲಕೇರಿ, ಕನ್ನೊಳ್ಳಿ, ಖೈನೂರ, ಕೊಂಡಗೂಳಿ, ಕೊರಹಳ್ಳಿ, ಕೊರವಾರ,ಮಾಡಬಾಳ, ಮಣ್ಣೂರ, ಮೊರಟಗಿ, ಮುಳಸಾವಳಗಿ, ಮಲಘಾಣ, ಓತಿಹಾಳ, ಪಡಗಾನೂರ, ಸಿಂದಗಿ, ಸೋಮಜಾಳ, ಸುಂಗಠಾಣ, ಸುರಗಿಹಳ್ಳಿ, ತಿಳಗೂಳ, ಯಲಗೋಡ, ಯಂಕಂಚಿ, ಯರಗಲ್ಲ ಬಿ.ಕೆ., ಯರಗಲ ಕೆ.ಡಿ..

ಕೆರೆಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ಕೆರೆಗಳು

ಕಡ್ಲೇವಾಡ, ದೇವೂರ-ಹಾಳಯರನಾಳ, ಕುದರಗೊಂಡ, ಹುಣಶ್ಯಾಳ, ಬೂದಿಹಾಳ, ಅಸ್ಕಿ, ಯಕ್ಕಂಚಿ, ಇಂಗಳಗಿ, ಪುರದಾಳ, ಬೊಮ್ಮನಜೋಗಿ.

ಸಿಂದಗಿ ತಾಲ್ಲೂಕಿನ ಜಿನುಗು ಕೆರೆಗಳು

ದೇವರಹಿಪ್ಪರಗಿ-1, ದೇವರಹಿಪ್ಪರಗಿ-2, ದೇವರಹಿಪ್ಪರಗಿ-3, ಮುಳಸಾವಳಗಿ, ಚಿಕ್ಕ ರೂಗಿ, ಪಡಗಾನೂರ -1, ಪಡಗಾನೂರ ರಾಮತೀರ್ಥ, ಗುಬ್ಬೆವಾಡ - ಸಾಸಬಾಳ, ಮಣ್ಣೂರ.

ಕಾಲುವೆಗಳು[ಬದಲಾಯಿಸಿ]

 • ತಾರಾಪುರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
 • ಕಡ್ಲೇವಾಡ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
 • ದೇವಣಗಾಂವ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
 • ಬಗಲೂರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.

ಕೃಷಿ ಮಾರುಕಟ್ಟೆಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು

 • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಿಂದಗಿ
 • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ದೇವರ ಹಿಪ್ಪರಗಿ
 • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮೊರಟಗಿ
 • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಆಲಮೇಲ

ರೈತ ಸಂಪರ್ಕ ಕೇಂದ್ರಗಳು[ಬದಲಾಯಿಸಿ]

 • ಸಿಂದಗಿ - ಆಲಮೇಲ, ದೇವರಹಿಪ್ಪರಗಿ.

ಹಾಲು ಉತ್ಪಾದಕ ಘಟಕಗಳು[ಬದಲಾಯಿಸಿ]

ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಭೂತನಾಳ, ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.

ಸಿಂದಗಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು

ಆಲಮೇಲ, ಪಡಗಾನೂರ, ಯಂಕ್ಕಂಚಿ, ತಾರಾಪುರ, ಮೊರಟಗಿ, ಮಂಗಳೂರ, ಮಲಘಾಣ, ಖಾನಾಪುರ, ದೇವನಗಾಂವ, ಚಿಕ್ಕಸಿಂದಗಿ, ಬೂದಿಹಾಳ, ಬ್ಯಾಕೋಡ, ಆಹೇರಿ, ಕೊರಳ್ಳಿ.

ಆರಕ್ಷಕ (ಪೋಲಿಸ್) ಠಾಣೆ[ಬದಲಾಯಿಸಿ]

ಸಿಂದಗಿ ನಗರದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು ೫೦ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.

ಸಿಂದಗಿ ತಾಲ್ಲೂಕಿನ ಪೋಲಿಸ್ ಠಾಣೆಗಳು[ಬದಲಾಯಿಸಿ]

ಸಕ್ಕರೆ ಕಾರ್ಖಾನೆಗಳು[ಬದಲಾಯಿಸಿ]

ಪ್ರಾಥಮಿಕ ಆರೋಗ್ಯ ಕೇಂದ್ರಗಳು[ಬದಲಾಯಿಸಿ]

ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು

ಆಲಮೇಲ, ಕಲಕೇರಿ, ದೇವರಹಿಪ್ಪರಗಿ, ಮೊರಟಗಿ, ಯಂಕಂಚಿ, ಅಸ್ಕಿ, ಬಳಗಾನೂರ, ಚಾಂದಕವಠೆ, ಕೊರವಾರ, ಮಲಘಾಣ, ಗೊಲಗೇರಿ.

ಪಶು ಆಸ್ಪ ತ್ರೆಗಳು[ಬದಲಾಯಿಸಿ]

ಪಶು ಚಿಕಿತ್ಸಾಲಯಗಳು

ಕೊರವಾರ, ಮೊರಟಗಿ, ಯಂಕಂಚಿ, ಕಲಕೇರಿ, ಕನ್ನೊಳ್ಳಿ , ಹೊನ್ನಳ್ಳಿ , ದೇವಣಗಾಂವ.

ಪ್ರಾಥಮಿಕ ಪಶು ಚಿಕಿತ್ಸಾಲಯಗಳು

ಸುಂಗಠಾಣ, ಗುಬ್ಬೇವಾಡ, ಗುಟ್ಟರಗಿ, ಕಕ್ಕಳಮೇಲಿ, ದೇವರನಾವದಗಿ, ಮಲಘಾಣ, ಮುಳಸಾವಳಗಿ, ಯಲಗೋಡ, ಅಸ್ಕಿ, ಕೊಂಡಗೂಳಿ, ಗೊಲಗೇರಿ, ತಿಳಗೋಳ.

ಕೈಗಾರಿಕೆಗಳು[ಬದಲಾಯಿಸಿ]

ಸಕ್ಕರೆ ಕಾರ್ಖಾನೆಗಳು

 • ಕೆ.ಪಿ.ಆರ್.ಸಕ್ಕರೆ ಕಾರ್ಖಾನೆ, ಆಲಮೇಲ, ತಾ|| ಸಿಂದಗಿ, ಜಿ|| ವಿಜಯಪುರ.
 • ಮನಾಲಿ ಸಕ್ಕರೆ ಕಾರ್ಖಾನೆ, ಮಲಘಾಣ, ತಾ|| ಸಿಂದಗಿ, ಜಿ|| ವಿಜಯಪುರ.
 • ಸರ್ವಭೌಮ ಸಕ್ಕರೆ ಕಾರ್ಖಾನೆ,ಚಟ್ಟರಕಿ ತಾ|| ಸಿಂದಗಿ, ಜಿ|| ವಿಜಯಪುರ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು[ಬದಲಾಯಿಸಿ]

ರಾಷ್ಟ್ರೀಯ ಹೆದ್ದಾರಿಗಳು

ರಾಷ್ಟ್ರೀಯ ಹೆದ್ದಾರಿ - 218 => ಹುಬ್ಬಳ್ಳಿ - ನವಲಗುಂದ - ನರಗುಂದ - ಬಾಗಲಕೋಟ (ಗದ್ದನಕೇರಿ ಕ್ರಾಸ್) - ಬೀಳಗಿ(ಕ್ರಾಸ್) - ವಿಜಯಪುರ - ಸಿಂದಗಿ - ಜೇವರ್ಗಿ - ಗುಲಬುರ್ಗಾ - ಹುಮನಾಬಾದ.

ರಾಜ್ಯ ಹೆದ್ದಾರಿಗಳು

ರಾಜ್ಯ ಹೆದ್ದಾರಿ - 16 => ಸಿಂದಗಿ - ಶಹಾಪುರ - ಯಾದಗಿರ - ಗುರಮಟ್ಕಲ್.

ರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ.

ರಾಜ್ಯ ಹೆದ್ದಾರಿ - 124 => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.

ಚಿತ್ರ ಮಂದಿರಗಳು[ಬದಲಾಯಿಸಿ]

ಸಿಂದಗಿ

 • 1. ಪ್ರಶಾಂತ ಚಿತ್ರ ಮಂದಿರ
 • 2. ವಿನಾಯಕ ಚಿತ್ರ ಮಂದಿರ
 • 3. ಆನಂದ ಚಿತ್ರ ಮಂದಿರ
"https://kn.wikipedia.org/w/index.php?title=ಸಿಂದಗಿ&oldid=674888" ಇಂದ ಪಡೆಯಲ್ಪಟ್ಟಿದೆ