ನುಗ್ಗೆಕಾಯಿ



ನುಗ್ಗೆಕಾಯಿ ಮತ್ತು ನುಗ್ಗೆಸೊಪ್ಪು ಉತ್ತಮ ಔಷಧೀಯ ಗುಣಗಳ್ಳುಳ್ಳ ಕಾಯಿಪಲ್ಲೆ. ಇದು ಆರೋಗ್ಯವರ್ಧಕ ತರಕಾರಿ. ಎಳೆ ನುಗ್ಗೆಕಾಯಿಗಳನ್ನು ತುಂಡು ತುಂಡು ಮಾಡಿ ತೊಗರಿ ಬೇಳೆಯೊಂದಿಗೆ ಬೇಯಿಸಿ ರುಚಿಕರವಾದ ಹುಳಿ ಅಥವಾ ಸಾರು ತಯಾರಿಸಬಹುದು. ನಿಂಬೆಕಾಯಿ ಉಪ್ಪಿನಕಾಯಿಗೆ ನುಗ್ಗೆಕಾಯಿ ತುಂಡು ಮಾಡಿ ಸೇರಿಸಬಹುದು. ಪಕ್ವವಾದ ನಂತರ ಈ ನುಗ್ಗೆಕಾಯಿ ತಿನ್ನಲು ರುಚಿ. ನುಗ್ಗೆಕಾಯಿಯನ್ನು ಯಾವ ರೀತಿಯಲ್ಲಿ ಸೇವಿಸಿದರೂ ಸರಿಯೇ ಅದು ದೇಹಾರೋಗ್ಯವನ್ನು ಉತ್ತಮಪಡಿಸುತ್ತದೆ.ನುಗ್ಗೆಕಾಯಿಯಿಂದ ಸಾರು, ಪಲ್ಯಗಳನ್ನು ಮಾಡಬಹುದು
ಅಡಿಗೆ ಮಾಡುವ ವಿಧಾನ[ಬದಲಾಯಿಸಿ]
ಎರಡು ಬಟ್ಟಲು ಕುದಿಯುವ ನೀರಿಗೆ ಒಂದು ಹಿಡಿ ನುಗ್ಗೆಸೊಪ್ಪು ಹಾಕಿ ಪಾತ್ರೆಯ ಬಾಯಿ ಮುಚ್ಚಿ ಐದು ನಿಮಿಷ ಬೇಯಿಸಿ, ಬಳಿಕ ಆ ಪಾತ್ರೆಯನ್ನು ತಣ್ಣೀರಿನಲ್ಲಿಟ್ಟು, ಸೊಪ್ಪಿನ ರಸವನ್ನು ತಂಪು ಮಾಡಿ, ಬಸಿಯಬೇಕು. ಆ ರಸಕ್ಕೆ ಸ್ವಲ್ಪ ಅಡಿಗೆ ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ನಿಂಬೆ ರಸ ಸೇರಿಸಬೇಕು. ಹೀಗೆ ತಯಾರಿಸಿದ ಒಂದು ಬಟ್ಟಲು ರಸ ಪ್ರತಿದಿನ ಬೆಳಿಗ್ಗೆ ಸೇವಿಸುತ್ತಿದ್ದರೆ ದೈಹಿಕ ಶಕ್ತಿ ನಾಶ, ಸಂಭೋಗ ಸಾಮಥ್ರ್ಯದ ಅಭಾವ, ನರ ದೌರ್ಬಲ್ಯ, ಉಬ್ಬಸ, ನೆಗಡಿ, ಪುಪ್ಪುಸ ನಳಿಕಾದಾಹ, ಕ್ಷಯ, ಅಪೌಷ್ಟಿಕತೆ, ಅರಕ್ತತೆ ಇತ್ಯಾದಿ ವ್ಯಾಧಿಗಳಲ್ಲಿ ಗಮನಾರ್ಹ ಪರಿಹಾರ ಲಭಿಸುತ್ತದೆ.
ಸೊಪ್ಪಿನ ಬಳಕೆ[ಬದಲಾಯಿಸಿ]
- ಸೊಪ್ಪು ಬೇಯಿಸಿ ತೆಗೆದ ನುಗ್ಗೆ ಸೊಪ್ಪಿನ ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂಗ ರಕ್ತಶುದ್ದಿಯಾಗಿ, ಆರೋಗ್ಯ ವೃದ್ದಿಯಾಗುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸುತ್ತದೆ.
- ನುಗ್ಗೆಸೊಪ್ಪಿನ ಸಾರು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ಮಾತೆಯರಿಗೆ ಉತ್ತಮ ಪೋಷಕಾಂಶಗಳಿಂದ ಕೂಡಿದ ಆಹಾರ. ಈ ಸಾರನ್ನು ಅಬಾಲವೃದ್ದಿಯಾದಿಯಾಗಿ ಬಳಸಬಹುದು.
- ಬೇಯಿಸಿ ಬಸಿದ ನುಗ್ಗೆಸೊಪ್ಪಿನ ರಸಕ್ಕೆ ನಿಂಬೆ ರಸ ಹಿಂಡಿ ಸೇವಿಸಬೇಕು. ಒಂದು ವಾರ ಕಾಲ ಪ್ರತಿದಿನ ಬೆಳಿಗ್ಗೆ ಒಂದು ಬಟ್ಟಲು ರಸ ಸೇವಿಸುತ್ತಿದ್ದರೆ. ತಲೆ ಸುತ್ತುವಿಕೆ ನಿವಾರಣೆಯಾಗುತ್ತದೆ.
- ಒಂದೇ ಪಾಶ್ರ್ವದಲ್ಲಿ ತಲೆ ನೋಯುತ್ತಿದ್ದರೆ, ನಾಲ್ಕೈದು ತೊಟ್ಟು ನುಗ್ಗೆ ಸೊಪ್ಪಿನ ರಸವನ್ನು ಎಡ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಬಲ ಕಿವಿಗೂ, ಬಲ ಪಾಶ್ರ್ವದಲ್ಲಿ ತಲೆ ನೋವಿದ್ದರೆ ಎಡಕಿವಿಗೂ ಬಿಡುವುದರಿಂದ ಗುಣಮುಖ ಕಂಡುಬರುತ್ತದೆ. ಈ ಕ್ರಮವನ್ನು ದಿನಕ್ಕೆ ಒಂದಾವರ್ತಿಯಂತೆ ಮೂರು ದಿನಗಳವರೆಗೆ ಮಾಡುವುದು ಅಗತ್ಯ.
- ಎಕ್ಕ ಮತ್ತು ನುಗ್ಗೆಯ ಎಲೆಗಳನ್ನು ನುಣ್ಣಗೆ ಅರೆದು ಮೂಲವ್ಯಾಧಿಯಲ್ಲಿ ಕಾಣಿಸಿಕೊಳ್ಳುವ ಮೊಳಕೆಗಳಿಗೆ ಹಚ್ಚಿದರೆ ಅದು ನಾಶವಾಗುತ್ತದೆ.
- ಪೆಟ್ಟು ಬಿದ್ದು ಊದಿಕೊಂದಿರುವಾಗ ಹುರಿದ ನುಗ್ಗೆ ಸೊಪ್ಪನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಊದಿಕೊಂಡಿರುವ ಭಾಗಕ್ಕೆ ಬಿಸಿಬಿಸಿಯಾಗಿ ಶಾಖ ಕೊಟ್ಟರೆ, ಊತ ಕಡಿಮೆಯಾಗುತ್ತದೆ ಮತ್ತು ನೋವು ಇಳಿಮುಖವಾಗುತ್ತದೆ.
- ನುಗ್ಗೆಸೊಪ್ಪಿನ ರಸದಲ್ಲಿ ಒಂದೆರಡು ಮೆಣಸುಕಾಳು ಅರೆದು ಕಪಾಲಗಲ ಮೇಲೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ.
- ನುಗ್ಗೆಸೊಪ್ಪಿನೊಂದಿಗೆ ಹೂವನ್ನು ಬಳಸಬಹುದು. ಹೂವನ್ನು ಹಾಲಿನಲ್ಲಿ ಚೆನ್ನಾಗಿ ಬೇಯಿಸಿ ಅದಕ್ಕಿ ಜೇನುತುಪ್ಪ ಸೇರಿಸಿ, ಸೇವಿಸುವುದರಿಂದ ಲೈಂಗಿಕ ಕ್ರಿಯಾಶಕ್ತಿ ಹೆಚ್ಚಾಗುತ್ತದೆ.
- ನುಗ್ಗೆಕಾಯಿ ಊಟ ಮಾಡುವುದರಿಂದ ಸಂಧಿವಾತ, ನಿರ್ವೀರ್ಯತೆ, ನರಗಳ ದೌರ್ಬಲ್ಯ ಮಲಬದ್ದತೆ ಇತ್ಯಾದಿ ರೋಗಗಳು ಗುಣವಾಗುತ್ತವೆ.
- ಜಂತು ಹುಳುಗಳಿಂದ ಉಂಟಾಗುವ ಹಾನಿಯನ್ನು ನಿವಾರಿಸಲು ನುಗ್ಗೆ ಕಾಯಿಯನ್ನು ಆಗಾಗ್ಗೆ ಊಟದಲ್ಲಿ ಉಪಯೋಗಿಸುವುದು ಲೇಸು.
ನುಗ್ಗೆ ಸೊಪ್ಪು-ಆಹಾರಾಂಶ[ಬದಲಾಯಿಸಿ]
- ಕಿತ್ತಳೆ ಹಣ್ಣಿಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ
- ಹಾಲಿಗಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ
- ಬಾಳೆಹಣ್ಣಿಗಿಂತ 3 ಪಟ್ಟು ಹೆಚ್ಚು ಪೊಟಾಷಿಯಂ
- ಕ್ಯಾರೆಟ್‌ಗಿಂತ 4 ಪಟ್ಟು ಹೆಚ್ಚು ವಿಟಮಿನ್ ಎ
- ಪಾಲಾಕ್‌ಗಿಂತ 3 ಪಟ್ಟು ಹೆಚ್ಚು ವಿಟಮಿನ್ ಇ
- ಬಾದಾಮಿಗಿಂತ 3 ಪಟ್ಟು ಹೆಚ್ಚು ವಿಟಮಿನ್ ಇ
- ಮೊಟ್ಟೆಯ ಬಿಳಿಯ ಭಾಗಕ್ಕಿಂತ 2 ಪಟ್ಟು ಹೆಚ್ಚು ಪ್ರೊಟೀನ್[೧]
ಆಹಾರಾಂಶ[ಬದಲಾಯಿಸಿ]
ಪ್ರೊಟೀನ್ | 9.4gm |
ವಿಟಮಿನ್ ಎ | 151 % |
ವಿಟಮಿನ್ ಸಿ | 86 % |
ಕ್ಯಾಲ್ಸಿಯಮ್ | 18 % |
ಕಬ್ಬಿಣ | 22 % |
[೧]
ಅತಿಯಾದರೆ ಅಪಾಯ[ಬದಲಾಯಿಸಿ]
- ನುಗ್ಗೆಸೊಪ್ಪಿನಲ್ಲಿ ಅಧಿಕ ಔಷಧೀಯ ಗುಣವಿದೆ ಎಂದು ಅದನ್ನು ಮಿತಿಮೀರಿ ಸೇವಿಸದಂತೆ ವೈದ್ಯರು ಎಚ್ಚರಿಸುತ್ತಾರೆ. ಇದು ಅತಿಯಾದ ವಿರೇಚಕ ಗುಣ ಹೊಂದಿರುವ ಕಾರಣ, ಹೊಟ್ಟೆನೋವು, ಬೇಧಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
- ನುಗ್ಗೆಕಾಯಿಯನ್ನು ನೇರವಾಗಿ ತೆಗೆದುಕೊಳ್ಳುವುದು ಕೂಡ ಅಪಾಯಕರ. ಇದು ಎದೆಯುರಿಗೆ ಕಾಣವಾಗಬಲ್ಲುದು.
- ಸಾವಯವದಲ್ಲಿ ಬೆಳೆದ ನುಗ್ಗೆಯಿಂದ ಯಾವುದೇ ಹಾನಿಯಿಲ್ಲ. ಒಂದು ವೇಳೆ ರಾಸಾಯನಿಕ ಸಿಂಪರಣೆ ಮಾಡಿ ಬೆಳೆದ ಗಿಡಗಳ ಬೇರನ್ನು ಸೇವಿಸಿದರೆ ಗರ್ಭಸ್ರಾವ ಆಗುವ ಸಾಧ್ಯತೆ ಇದೆ.
ನುಗ್ಗೆ ರಫ್ತಿನಲ್ಲಿ ವಿಶ್ವದಲ್ಲಿ ಭಾರತಕ್ಕೆ ನಂ.1 ನೇ ಸ್ಥಾನ[ಬದಲಾಯಿಸಿ]
- ನುಗ್ಗೇ ಪದಾರಥ ರಫ್ತು:
- ಭಾರತ : 80%
- ಏಷಿಯಾ ಪೆಸಿಫಿಕ್ : 9%
- ಆಫ್ರಿಕಾ :8%
- ಅಮೇರಿಕ :3%
ಉಲ್ಲೇಖಗಳು[ಬದಲಾಯಿಸಿ]
- ↑ 30 Aug, 2016-ಬೇಕು ನುಗ್ಗೆ...[ಶಾಶ್ವತವಾಗಿ ಮಡಿದ ಕೊಂಡಿ]