ಶಹಾಪುರ
ಶಹಾಪುರ ಸಗರನಾಡು | |
---|---|
ನಗರ | |
ದೇಶ | ![]() |
ರಾಜ್ಯ | ಕರ್ನಾಟಕ |
ಜಿಲ್ಲೆ | ಯಾದಗಿರಿ |
ಲೋಕ ಸಭೆ ಚುನಾವಣಾ ಕ್ಷೇತ್ರ | ರಾಯಚೂರು |
Elevation | ೪೨೮ m (೧,೪೦೪ ft) |
ಜನಸಂಖ್ಯೆ (೨೦೧೧) | |
• ಒಟ್ಟು | ೫೩,೩೬೬ |
ಭಾಷೆಗಳು | |
• ಅಧಿಕೃತ | ಕನ್ನಡ |
ಸಮಯ ವಲಯ | ಯುಟಿಸಿ+5:30 (IST) |
PIN | 585223 |
ದೂರವಾಣಿ ಕೋಡ್ | 08479 |
ವಾಹನ ನೋಂದಣಿ | ka 33 |
ಜಾಲತಾಣ | http://www.shahapuracity.mrc.gov.in |
ಶಹಾಪುರ ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿರುವ ನಗರ ಮತ್ತು ತಾಲೂಕು ಕೇಂದ್ರ. ಈ ಹಿಂದೆ ಗುಲಬಗಾ೯ ಜಿಲ್ಲೆಯಲ್ಲಿ ಇದ್ದು, ಜಿಲ್ಲಾ ವಿಭಜನೆಯ ನಂತರ ಈಗ ಇದು ಯಾದಗಿರಿ ಜಿಲ್ಲೆಗೆ ಸೇರಿರುತ್ತದೆ. ಈ ನಗರದ ಜನಸಂಖ್ಯೆ ೫೩,೩೬೬. ರಾಜ್ಯದ ರಾಜಧಾನಿ ಬೆಂಗಳೂರು 597 ಕಿ.ಮೀ.ಇರುತ್ತದೆ. ಕಲಬುರ್ಗಿ 80 ಕಿ.ಮೀ, ಯಾದಗಿರಿ 35 ಕಿ.ಮೀ. ಹಾಗು ಹೈದರಾಬಾದ ನಗರವು 210 ಕಿ.ಮೀ. ಇರುತ್ತದೆ.
ಇತಿಹಾಸ[ಬದಲಾಯಿಸಿ]
ಈ ನಗರದ ಹಳೆಯ ಹೆಸರು " ಸಗರ"ಎೆಂದು ತಿಳಿದು ಬರುತ್ತದೆ. ವಿಜಯನಗರದ ಕೊನೆಯ ಅರಸು ರಾಮರಾಯ (ಶ್ರೀ ಕೃಷ್ಣದೇವರಾಯನ ಅಳಿಯ) ನಿಗೆ ಸಗರ ಸಂಕ್ರಮಣರಾಯ ವೆಂಬ ಬಿರುದು ಇದ್ದಿರುತ್ತದೆ. ಮುಸ್ಲಿೆಂ ಅರಸರ ಕಾಲಕ್ಕೆ ಈ ನಗರದ ಹೆಸರು"ನಸ್ರತಾಬಾದ್","ಶಹಪುರ" ವೆಂದು ಬದಲಾವಣೆಯಾಗಿರುತ್ತದೆ. ಮುಸ್ಲಿೆಂ ಅರಸರ ಆಕ್ರಮಣವಾದಾಗ ಈ ನಗರ ಬೆಟ್ಟಗಳ ಆಚೆ ದೂರದ ಬಯಲು ಪ್ರದೇಶದಲ್ಲಿ ಸ್ಥಳಂತರವಾಗತ್ತು. ಹಾಳುಬಿದ್ದ ಈಗಿನ ನಗರದ "ಹಳೆಸಗರ" ಭಾಗವಾಗಿರುತ್ತದೆ. ಹಾಗೆಯೇ ಇತಿಹಾಸದ ಪುಟಗಳನ್ನು ಶೋಧಿಸಿದಾಗ "ಕೃಷ್ಣ ಮತ್ತು ಭೀಮಾ ನದಿಗಳ ನಡುವಿನ ( ಜೇವರಗಿ,ಶಹಪುರ,ಸುರಪುರ ತಾಲೂಕಗಳ) ಪ್ರದೇಶವನ್ನು ಸಗರನಾಡು ಎೆಂದು ಗುರುತಿಸಲ್ಪಟ್ಟಿರುತ್ತದೆ. ಶಹಪುರದ ಕೋಟೆಯು ಕ್ರಿ.ಶ.950-1150ರ ಮಧ್ಯದಲ್ಲಿ ನಿರ್ಮಿಸಲ್ಪಟ್ಟಿರಬಹುದೆಂದು ಇತಿಹಾಸಕಾರರು ಅಭಿಪ್ರಾಯಪಟ್ಟಿರತ್ತಾರೆ.ಈ ಕೋಟೆಯಲ್ಲಿ 7 ಮಹಾದ್ವಾರಗಳು, 7 ಉಕ್ಕಿನ ತೋಪುಗಳನ್ನು ಕಾಣಸಿಗುತ್ತವೆ.ಹಾಗೂ1 ಹಳೆಗನ್ನಡ 1 ಪರ್ಶಿಯನ್ , 1 ಅರೇಬಿಕ್ ಶಾಸನಗಳನ್ನು ಕೂಡ ನೋಡಬಹುದು. ಹಳೆಗನ್ನಡದ ಶಾಸನದ ಪ್ರಕಾರ ಈ ನಗರದ ಇತಿಹಾಸವು ಸಾವಿರ ವರ್ಷದಷ್ಟು ಹಳೆಯದ್ದೆಂದು ತಿಳಿದುಬರುತ್ತದೆ.
ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]
ಶಹಾಪುರ ನಗರದಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ.
- ಶಹಾಪುರ ಕೋಟೆ
- ಬುದ್ಧ ಮಲಗಿದ ದ್ರಶ್ಯ (ಬೆಟ್ಟ)
- ಮೌನೇಶ್ವರ ಬೆಟ್ಟ
- ಭೀಮರಾಯನಗುಡಿ
- ದಿಗ್ಗಿ ಸಂಗಮೇಶ್ವರಗುಡಿ
- ಚರಬಸವೇಶ್ವರ ಗುಡಿ
- ಮಂದಾಕಿನಿ ತೀರ್ಥ
- ಆನೆಸೊಂಡಿ ಬಾವಿ (ಕೋಟೆ)
- ತಾವರಕೆರೆ
- ಮೇಲಗಿರಿ ಮಲ್ಲಿಕಾರ್ಜುನ ಬೆಟ್ಟ (ಪರ್ವತ)
- ವಿಶ್ವಮಾತಾ ಗುರುಕುಲ ಗೋಶಾಲೆ
(28 ಭಾರತೀಯ ದೇಸಿ ಗೋವುಗಳ ರಕ್ಷಣೆ,ಸಂವರ್ಧನೆ, ಅಭಿವೃದ್ಧಿ ಕೇಂದ್ರ )
- ವಿಭೂತಿ ಹಳ್ಳಿ
ದೊರನಹಳ್ಳಿ ಮಾಹಂತೆಶ್ವರ ಗುಡ್ಡ
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- http://www.shahapuratown.gov.in/ Archived 2009-08-27 ವೇಬ್ಯಾಕ್ ಮೆಷಿನ್ ನಲ್ಲಿ.
- http://ibnlive.in.com/news/karnataka-uranium-mining-in-gogi-cleared/182896-60-115.html Archived 2012-10-17 ವೇಬ್ಯಾಕ್ ಮೆಷಿನ್ ನಲ್ಲಿ.
- http://www.bhorukapower.com/shahapur.htm
- http://www.hindu.com/2010/07/30/stories/2010073052480300.htm Archived 2010-12-28 ವೇಬ್ಯಾಕ್ ಮೆಷಿನ್ ನಲ್ಲಿ.