ವಡಗೇರಾ
ವಡಗೇರಾ
ವಡಗೇರಾ | |
|---|---|
village | |
| ಜನಸಂಖ್ಯೆ (೨೦೧೨) | |
• ಒಟ್ಟು | ೧೫೦೦೦ |
ವಡಗೇರಾ ಗ್ರಾಮವು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿದೆ.
ಭೌಗೋಳಿಕ
[ಬದಲಾಯಿಸಿ]ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಹವಾಮಾನ
[ಬದಲಾಯಿಸಿ]- ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ (ಏಪ್ರಿಲಿನಲ್ಲಿ), ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರಿನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು
- ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
- ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
- ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
ಜನಸಂಖ್ಯೆ
[ಬದಲಾಯಿಸಿ]ಗ್ರಾಮದಲ್ಲಿ ಜನಸಂಖ್ಯೆ ಸುಮಾರು 5000 ಇದೆ. ಅದರಲ್ಲಿ 2600 ಪುರುಷರು ಮತ್ತು 2400 ಮಹಿಳೆಯರು ಇದ್ದಾರೆ.
ಸಾಂಸ್ಕೃತಿಕ
[ಬದಲಾಯಿಸಿ]ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಕಲೆ ಮತ್ತು ಸಂಸ್ಕೃತಿ
[ಬದಲಾಯಿಸಿ]ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಧರ್ಮ
[ಬದಲಾಯಿಸಿ]ಭಾಷೆ
[ಬದಲಾಯಿಸಿ]ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.
ಮಸೀದಿ
[ಬದಲಾಯಿಸಿ]ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿ
[ಬದಲಾಯಿಸಿ]ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ, ದ್ರಾಕ್ಷಿ, ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕೃಷಿ ಮತ್ತು ತೋಟಗಾರಿಕೆ
[ಬದಲಾಯಿಸಿ]ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.
ಆರ್ಥಿಕತೆ
[ಬದಲಾಯಿಸಿ]ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.
ಉದ್ಯೋಗ
[ಬದಲಾಯಿಸಿ]ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ, ಕುರಿ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬೆಳೆ
[ಬದಲಾಯಿಸಿ]ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ, ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಸ್ಯ
[ಬದಲಾಯಿಸಿ]ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿ
[ಬದಲಾಯಿಸಿ]ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ಹಬ್ಬ
[ಬದಲಾಯಿಸಿ]ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣ
[ಬದಲಾಯಿಸಿ]- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಡಗೇರಾ
ಸಾಕ್ಷರತೆ
[ಬದಲಾಯಿಸಿ]ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
ಬ್ಯಾಂಕ್
[ಬದಲಾಯಿಸಿ]- ವಿಜಯ ಬ್ಯಾಂಕ್, ವಡಗೇರಾ
ಗ್ರಾಮ ಪಂಚಾಯತಿ
[ಬದಲಾಯಿಸಿ]- ಗ್ರಾಮ ಪಂಚಾಯತಿ, ವಡಗೇರಾ
ದೂರವಾಣಿ ವಿನಿಮಯ ಕೇಂದ್ರ
[ಬದಲಾಯಿಸಿ]- ದೂರವಾಣಿ ವಿನಿಮಯ ಕೇಂದ್ರ, ವಡಗೇರಾ
ಅಂಚೆ ಕಚೇರಿ
[ಬದಲಾಯಿಸಿ]- ಅಂಚೆ ಕಚೇರಿ, ವಡಗೇರಾ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
[ಬದಲಾಯಿಸಿ]- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ವಡಗೇರಾ
ಹಾಲು ಉತ್ಪಾದಕ ಸಹಕಾರಿ ಸಂಘ
[ಬದಲಾಯಿಸಿ]- ಹಾಲು ಉತ್ಪಾದಕ ಸಹಕಾರಿ ಸಂಘ, ವಡಗೇರಾ
ಪ್ರಾಥಮಿಕ ಆರೋಗ್ಯ ಕೇಂದ್ರ
[ಬದಲಾಯಿಸಿ]- ಪ್ರಾಥಮಿಕ ಆರೋಗ್ಯ ಕೇಂದ್ರ, ವಡಗೇರಾ
ರೈತ ಸಂಪರ್ಕ ಕೇಂದ್ರ
[ಬದಲಾಯಿಸಿ]- ರೈತ ಸಂಪರ್ಕ ಕೇಂದ್ರ, ವಡಗೇರಾ
ಕಂದಾಯ ಕಚೇರಿ
[ಬದಲಾಯಿಸಿ]- ಕಂದಾಯ ಕಚೇರಿ, ವಡಗೇರಾ
ನಾಡ ಕಚೇರಿ
[ಬದಲಾಯಿಸಿ]- ನಾಡ ಕಚೇರಿ, ವಡಗೇರಾ
ನೆಮ್ಮದಿ (ಹೋಬಳಿ) ಕೇಂದ್ರ
[ಬದಲಾಯಿಸಿ]- ನೆಮ್ಮದಿ ಕೇಂದ್ರ, ವಡಗೇರಾ
ಪಶು ಚಿಕಿತ್ಸಾಲಯ
[ಬದಲಾಯಿಸಿ]- ಪಶು ಚಿಕಿತ್ಸಾಲಯ, ವಡಗೇರಾ
ಉಚಿತ ಪ್ರಸಾದನಿಲಯ
[ಬದಲಾಯಿಸಿ]- ಮೆಟ್ರಿಕ್ ಪುರ್ವ ಉಚಿತ ಪ್ರಸಾದನಿಲಯ, ವಡಗೇರಾ
ರೈತ ಸಂಪರ್ಕ ಕೇಂದ್ರ
[ಬದಲಾಯಿಸಿ]- ರೈತ ಸಂಪರ್ಕ ಕೇಂದ್ರ, ವಡಗೇರಾ
ಗಡ್ಡೇಸುಗೂರು ಗ್ರಾಮ
[ಬದಲಾಯಿಸಿ]ಗಡ್ಡೇಸುಗೂರು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನಲ್ಲಿರುವ ಒಂದು ಗ್ರಾಮ. 2011ರ ಭಾರತದ ಜನಗಣತಿ ದಾಖಲೆಗಳಲ್ಲಿ ಗಡ್ಡೇಸುಗೂರು ಗ್ರಾಮವು ಆಗಿನ ಶಹಾಪುರ ತಾಲ್ಲೂಕಿನ ಅಡಿಯಲ್ಲಿ ದಾಖಲಾಗಿದ್ದು, ಇದರ ಜನಗಣತಿ ಗ್ರಾಮ ಕೋಡ್ 621154 ಆಗಿದೆ. ವಡಗೇರಾ ತಾಲ್ಲೂಕು ರಚನೆಯ ನಂತರ ಗಡ್ಡೇಸುಗೂರು ವಡಗೇರಾ ತಾಲ್ಲೂಕಿನ ವ್ಯಾಪ್ತಿಗೆ ಸೇರಿದೆ.[1][2]
ಭೌಗೋಳಿಕ ಸ್ಥಾನ
[ಬದಲಾಯಿಸಿ]ಗಡ್ಡೇಸುಗೂರು ಯಾದಗಿರಿ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ಗ್ರಾಮವಾಗಿದೆ. ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣವು 2011ರ ದಾಖಲೆಗಳ ಪ್ರಕಾರ ಸುಮಾರು 1,380.96 ಹೆಕ್ಟೇರ್ ಆಗಿದೆ. ಗ್ರಾಮದ ಅಂಚೆ ಪಿನ್‌ಕೋಡ್ 585202.[2][3]
ಯಾದಗಿರಿ ನಗರವು ಗಡ್ಡೇಸುಗೂರಿಗೆ ಸಮೀಪದ ಪ್ರಮುಖ ನಗರವಾಗಿದ್ದು, ಲಭ್ಯವಿರುವ ಗ್ರಾಮ ನಿರ್ದೇಶಿಕೆ ಮಾಹಿತಿಯ ಪ್ರಕಾರ ಇದು ಸುಮಾರು 9 ಕಿ.ಮೀ. ದೂರದಲ್ಲಿದೆ.[2]
ಆಡಳಿತ
[ಬದಲಾಯಿಸಿ]ಗಡ್ಡೇಸುಗೂರು ಪ್ರಸ್ತುತ ಯಾದಗಿರಿ ಜಿಲ್ಲೆ ಮತ್ತು ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿದೆ. ಗ್ರಾಮವು ಹಾಲಗೇರ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುತ್ತದೆ. ಹಳಗೇರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗಡ್ಡೇಸುಗೂರು ಸೇರಿದಂತೆ ಹಳಗೇರ, ಅರ್ಜುಂಗಿ, ಗೋದಿಹಾಳ ಮತ್ತು ಕುಮ್ನೂರು ಗ್ರಾಮಗಳು ಸೇರಿವೆ.[4]
2011ರ ಜನಗಣತಿ ಸಂದರ್ಭದಲ್ಲಿ ಗಡ್ಡೇಸುಗೂರು ಶಹಾಪುರ ತಾಲ್ಲೂಕಿನ ಜನಗಣತಿ ಉಪಜಿಲ್ಲೆಯ ವ್ಯಾಪ್ತಿಯಲ್ಲಿ ದಾಖಲಾಗಿತ್ತು. ಜನಗಣತಿ ದಾಖಲೆಗಳಲ್ಲಿ ಇದರ ಗ್ರಾಮ ಕೋಡ್ 621154 ಎಂದು ನಮೂದಿಸಲಾಗಿದೆ.[1]
ಜನಸಂಖ್ಯೆ
[ಬದಲಾಯಿಸಿ]2011ರ ಭಾರತದ ಜನಗಣತಿಯ ಪ್ರಕಾರ ಗಡ್ಡೇಸುಗೂರಿನ ಒಟ್ಟು ಜನಸಂಖ್ಯೆ 1,725. ಇದರಲ್ಲಿ 864 ಪುರುಷರು ಮತ್ತು 861 ಮಹಿಳೆಯರು ಇದ್ದರು. ಒಟ್ಟು 293 ಕುಟುಂಬಗಳು ಗ್ರಾಮದಲ್ಲಿ ವಾಸಿಸುತ್ತಿದ್ದವು.[1][2]
ವಿವರ| ಸಂಖ್ಯೆ ಒಟ್ಟು ಜನಸಂಖ್ಯೆ| 1,725 ಪುರುಷರು| 864 ಮಹಿಳೆಯರು| 861 ಕುಟುಂಬಗಳು| 293 ಜನಗಣತಿ ಗ್ರಾಮ ಕೋಡ್| 621154 ವಿಸ್ತೀರ್ಣ| 1,380.96 ಹೆಕ್ಟೇರ್ ಪಿನ್‌ಕೋಡ್| 585202
2011ರ ಜನಗಣತಿ ಆಧಾರದ ಮೇಲೆ ಗ್ರಾಮದ ಲಿಂಗಾನುಪಾತವು 1,000 ಪುರುಷರಿಗೆ ಸುಮಾರು 997 ಮಹಿಳೆಯರು ಆಗಿದೆ.[2]
ಸಾಮಾಜಿಕ ರಚನೆ
[ಬದಲಾಯಿಸಿ]2011ರ ಜನಗಣತಿ ಆಧಾರಿತ ಗ್ರಾಮ ಮಾಹಿತಿಯ ಪ್ರಕಾರ ಗಡ್ಡೇಸುಗೂರಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಯೂ ದಾಖಲಾಗಿದೆ. ಜನಗಣತಿ ಆಧಾರಿತ ಮಾಹಿತಿಯ ಪ್ರಕಾರ ಪರಿಶಿಷ್ಟ ಜಾತಿಯ ಜನಸಂಖ್ಯೆ 278 ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ 525 ಆಗಿದೆ.[2]
ಕೃಷಿ ಮತ್ತು ಆರ್ಥಿಕತೆ
[ಬದಲಾಯಿಸಿ]ಗಡ್ಡೇಸುಗೂರಿನ ಗ್ರಾಮೀಣ ಆರ್ಥಿಕತೆಯಲ್ಲಿ ಕೃಷಿಯು ಪ್ರಮುಖ ಸ್ಥಾನವನ್ನು ಹೊಂದಿದೆ. ಲಭ್ಯವಿರುವ ಗ್ರಾಮ ಮಾಹಿತಿಯ ಪ್ರಕಾರ ಗ್ರಾಮದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಸುಮಾರು 1,096.38 ಹೆಕ್ಟೇರ್ ಪ್ರದೇಶವು ನಿವ್ವಳ ಬಿತ್ತನೆ ಪ್ರದೇಶವಾಗಿದೆ. ನೀರಾವರಿ ಹೊಂದಿರುವ ಪ್ರದೇಶವು ಸುಮಾರು 64.75 ಹೆಕ್ಟೇರ್ ಮತ್ತು ನೀರಾವರಿ ರಹಿತ ಪ್ರದೇಶವು ಸುಮಾರು 1,031.63 ಹೆಕ್ಟೇರ್ ಎಂದು ದಾಖಲಾಗಿದೆ.[2]
ಗ್ರಾಮದಲ್ಲಿ ಬೇಳೆಕಾಳುಗಳು ಮತ್ತು ಸಜ್ಜೆ (Pearl Millet) ಪ್ರಮುಖ ಬೆಳೆಗಳಾಗಿ ದಾಖಲಾಗಿವೆ.[2]
ಸಾರಿಗೆ
[ಬದಲಾಯಿಸಿ]ಗಡ್ಡೇಸುಗೂರಿನಲ್ಲಿ ಸಾರ್ವಜನಿಕ ಬಸ್ ಸೇವೆ ಲಭ್ಯವಿರುವುದಾಗಿ ಗ್ರಾಮ ನಿರ್ದೇಶಿಕೆ ಮಾಹಿತಿಯಲ್ಲಿ ದಾಖಲಾಗಿದೆ. ಸಮೀಪದ ಪ್ರಮುಖ ನಗರವಾದ ಯಾದಗಿರಿಯೊಂದಿಗೆ ರಸ್ತೆ ಸಂಪರ್ಕವಿದೆ.[2][3]
2011ರ ಗ್ರಾಮಮಟ್ಟದ ಮಾಹಿತಿಯ ಪ್ರಕಾರ ಸಮೀಪದ ರೈಲು ಸಂಪರ್ಕವು ಗ್ರಾಮದ ಹೊರವಲಯದಲ್ಲಿ ಲಭ್ಯವಿದ್ದು, ಯಾದಗಿರಿ ಪ್ರದೇಶವು ಪ್ರಮುಖ ರೈಲು ಸಂಪರ್ಕ ಕೇಂದ್ರವಾಗಿದೆ.[3]
ಶಿಕ್ಷಣ
[ಬದಲಾಯಿಸಿ]ಗಡ್ಡೇಸುಗೂರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಸೌಲಭ್ಯವಿರುವುದಾಗಿ ಗ್ರಾಮಮಟ್ಟದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.[2] ಹೆಚ್ಚಿನ ಮತ್ತು ಉನ್ನತ ಶಿಕ್ಷಣಕ್ಕಾಗಿ ಸುತ್ತಮುತ್ತಲಿನ ಪಟ್ಟಣಗಳು ಹಾಗೂ ಯಾದಗಿರಿ ನಗರದ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸುವ ಸಾಧ್ಯತೆ ಇದೆ.
ಅಂಚೆ ಮತ್ತು ಸಂಪರ್ಕ
[ಬದಲಾಯಿಸಿ]ಗಡ್ಡೇಸುಗೂರಿನ ಪಿನ್‌ಕೋಡ್ 585202. ಅಂಚೆ ಸೇವೆಯು ಹಾಲಗೇರ ಅಂಚೆ ಕಚೇರಿ ಸೇರಿದಂತೆ ಈ ಪಿನ್‌ಕೋಡ್ ವ್ಯಾಪ್ತಿಯ ಅಂಚೆ ವ್ಯವಸ್ಥೆಯ ಮೂಲಕ ನಡೆಯುತ್ತದೆ.[3]
ಇತಿಹಾಸ ಮತ್ತು ಆಡಳಿತಾತ್ಮಕ ಬದಲಾವಣೆ
[ಬದಲಾಯಿಸಿ]ಗಡ್ಡೇಸುಗೂರಿನ ಆಡಳಿತಾತ್ಮಕ ದಾಖಲಾತಿಗಳಲ್ಲಿ 2011ರ ಜನಗಣತಿಯ ಸಂದರ್ಭದಲ್ಲಿ ಇದು ಶಹಾಪುರ ತಾಲ್ಲೂಕಿನ ಭಾಗವಾಗಿತ್ತು. 2017ರಲ್ಲಿ ವಡಗೇರಾ ತಾಲ್ಲೂಕು ರಚನೆಯಾದ ನಂತರ ಈ ಪ್ರದೇಶವು ವಡಗೇರಾ ತಾಲ್ಲೂಕಿನ ಆಡಳಿತ ವ್ಯಾಪ್ತಿಗೆ ಸೇರಿತು. ಆದ್ದರಿಂದ ಹಳೆಯ ಜನಗಣತಿ ದಾಖಲೆಗಳಲ್ಲಿ ಗಡ್ಡೇಸುಗೂರನ್ನು ಶಹಾಪುರ ತಾಲ್ಲೂಕಿನ ಗ್ರಾಮವೆಂದು ಕಾಣಬಹುದು.[1][5]
ಜನಗಣತಿ ಮಾಹಿತಿ
[ಬದಲಾಯಿಸಿ]ಭಾರತದ ಜನಗಣತಿ ಇಲಾಖೆಯ 2011ರ ದಾಖಲೆಗಳಲ್ಲಿ ಗಡ್ಡೇಸುಗೂರು ಗ್ರಾಮವು ಈ ಕೆಳಗಿನ ಗುರುತಿನ ಸಂಖ್ಯೆಗಳೊಂದಿಗೆ ದಾಖಲಾಗಿದೆ:
- ರಾಜ್ಯ ಕೋಡ್: 29
- ಜಿಲ್ಲೆ ಕೋಡ್: 580
- ಜನಗಣತಿ ಉಪಜಿಲ್ಲೆ/ತಾಲ್ಲೂಕು ಕೋಡ್: 05588
- ಗ್ರಾಮ ಕೋಡ್: 621154
2011ರ ಜನಗಣತಿ ಪಟ್ಟಿಯಲ್ಲಿ ಗಡ್ಡೇಸುಗೂರು ಗ್ರಾಮದ ಹೆಸರು ಅಧಿಕೃತವಾಗಿ ದಾಖಲಾಗಿದೆ.[1]
ಉಲ್ಲೇಖಗಳು
[ಬದಲಾಯಿಸಿ][1] ಭಾರತದ ಜನಗಣತಿ, 2011 — ಕರ್ನಾಟಕ, ಯಾದಗಿರಿ ಜಿಲ್ಲೆ, Primary Census Abstract, Village Code 621154.
[2] ಗಡ್ಡೇಸುಗೂರು ಗ್ರಾಮ — ಜನಗಣತಿ 2011 ಆಧಾರಿತ ಗ್ರಾಮಮಟ್ಟದ ಮಾಹಿತಿ.
[3] ಗಡ್ಡೇಸುಗೂರು ಗ್ರಾಮದ ಅಂಚೆ ಮತ್ತು ಭೌಗೋಳಿಕ ಮಾಹಿತಿ.
[4] ಹಾಲಗೇರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಪಟ್ಟಿ.
[5] ವಡಗೇರಾ ತಾಲ್ಲೂಕಿನ ಆಡಳಿತಾತ್ಮಕ ರಚನೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಭಾರತದ ಜನಗಣತಿ ಇಲಾಖೆಯ ಅಧಿಕೃತ ವೆಬ್‌ಸೈಟ್
- ಯಾದಗಿರಿ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
- Pages with non-numeric formatnum arguments
- Pages using infobox mapframe with missing coordinates
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Articles lacking sources
- All articles lacking sources
- Pages needing interwikilinks