ಹುಣಸಗಿ

Coordinates: 16°27′27″N 76°31′26″E / 16.45750°N 76.52389°E / 16.45750; 76.52389
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hunsgi
ಹುಣಸಗಿ
Town
Hunsgi is located in Karnataka
Hunsgi
Hunsgi
Hunsgi is located in India
Hunsgi
Hunsgi
Coordinates: 16°27′27″N 76°31′26″E / 16.45750°N 76.52389°E / 16.45750; 76.52389
Country ಭಾರತ
Stateಕರ್ನಾಟಕ
DistrictYadgir district
TalukaShorapur
Population
 (2011)[೧]
 • Total೧೫,೦೦೦+
Languages
 • OfficialKannada
Time zoneUTC+5:30 (IST)
PIN
585215
Telephone code08444
ISO 3166 codeIN-KA
Vehicle registrationKA33
Websitekarnataka.gov.in

ಹುಣಸಗಿ ಭಾರತದ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಸುರಪುರ ತಾಲ್ಲೂಕಿನ ಒಂದು ಗ್ರಾಮ; ಕರ್ನಾಟಕದ ಪ್ರಾಗೈತಿಹಾಸಿಕ ನೆಲೆಗಳಲ್ಲೊಂದು. ದೇವದುರ್ಗಕ್ಕೆ 27 ಕಿಮೀ ದೂರದಲ್ಲಿದೆ.

ಪ್ರಾಗೈತಿಹಾಸಿಕ ಮಹತ್ವ[ಬದಲಾಯಿಸಿ]

ಈ ಭಾಗದಲ್ಲಿ ಕೆ. ಪದ್ದಯ್ಯನವರು ಅನ್ವೇಷಣೆ ನಡೆಸುತ್ತಿದ್ದಾಗ 1974ರಲ್ಲಿ ಲೋಕೋಪಯೋಗಿ ಇಲಾಖೆಯವರು ನೀರಾವರಿ ಅಣೆಕಟ್ಟಿಗಾಗಿ ಅಗೆದ ಒಂದು ಗುಂಡಿಯಲ್ಲಿ ಆದಿ ಹಳೆಯ ಶಿಲಾಯುಗದ ಅನೇಕ ಶಿಲಾಯುಧಗಳು ದೊರಕಿದವು. ಅನ್ವೇಷಣೆಯನ್ನು ಮುಂದುವರಿಸಿ ದಾಗ ಇಂಥ 5 ನೆಲೆಗಳು ಶೋಧವಾದವು. 1975-76ರ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಈ ಊರಿನ ಈಶಾನ್ಯ ದಿಕ್ಕಿಗೆ ಸು. 200 ಮೀ ದೂರದಲ್ಲಿರುವ 5ನೆಯ ನೆಲೆಯಲ್ಲಿ ಉತ್ಖನನ ನಡೆಸಲಾಯಿತು. ಒಂದು ಹಳ್ಳದ ಬದಿಯಲ್ಲಿ ತೋಡಿದ ಒಂದು ಚಮೀ. ಗುಂಡಿಗಳಲ್ಲಿ ಸುಣ್ಣಕಲ್ಲು ಮತ್ತು ಕಣಶಿಲೆಯ ಚೂರುಗಳಿಂದ ಮಿಶ್ರಿತವಾದ ಗರಸು ಮಣ್ಣು ಇದ್ದು, ಸು. 0.75 ಸೆಂಮೀ ಆಳದಿಂದ ಕೆಳಗೆ ಶಿಲಾಯುಧಗ ಳಿದ್ದುದು ಕಂಡುಬಂತು. ದೊರೆತ ಅವಶೇಷಗಳಿಂದ ಆ ಭಾಗದಲ್ಲಿ ಶಿಲಾಯುಗ ಮಾನವನು ನೆಲೆಸಿದ್ದಿರಬಹುದೆಂಬ ಸೂಚನೆ ಕಂಡುಬಂದದ್ದ ರಿಂದ ಆ ಗುಂಡಿಯನ್ನು 9x7 ಮೀ ಕ್ಷೇತ್ರದಷ್ಟು ವಿಸ್ತರಿಸಲಾಯಿತು. ಸು. 10 ರಿಂದ 30 ಸೆಂಮೀ ದಪ್ಪನೆಯ ಪದರದಲ್ಲಿ ಶಿಲಾಯುಧಗಳಲ್ಲದೆ ಸುಣ್ಣಕಲ್ಲು ಬಂಡೆಗಳು (25 ಸೆಂಮೀ) ನೀರಿನಿಂದ ಸವೆದ ಸುಣ್ಣಕಲ್ಲು, ಕಲ್ಲಿನ ತುಂಡುಗಳು, ಕಣಶಿಲೆಯ ಗುಂಡುಗಳು, ಸ್ಥಳದಲ್ಲೇ ಕ್ರಮೇಣ ಮರಳಾದ ಗ್ರಾನೈಟ್ ಗರಸಿ ಗಟ್ಟಿಯಾಗಿ ಅಂಟಿಕೊಂಡಿತ್ತು. ಶಿಲಾಯುಧ ಗಳು ಉತ್ಖನನ ಮಾಡಿದ ನೆಲದ ಮೇಲೆಲ್ಲ ಹರಡಿದ್ದವು. ಈ ನೆಲದ ಮಧ್ಯದಲ್ಲಿ ಎರಡು ಕಣಶಿಲೆಯ ಗುಂಡುಗಳ ನಡುವೆ ಶಿಲಾಯುಧಗಳು ದಟ್ಟವಾಗಿ ಹರಡಿಕೊಂಡಿದ್ದವು. ಆದಿಮಾನವನು ಶಿಲಾಯುಧಗಳ ತಯಾರಿಕೆಯಲ್ಲಿ ತೊಡಗಿದಾಗ ಈ ಗುಂಡುಗಳನ್ನು ಆಸರೆಯ ಪೀಠವನ್ನಾಗಿ ಉಪಯೋಗಿಸಿರಬಹುದು ಎಂದು ಊಹಿಸಲಾಗಿದೆ. ಗುಂಡಿಯ ಉತ್ತರ ಮತ್ತು ದಕ್ಷಿಣದ ಅಂಚಿನಲ್ಲಿ ಶಿಲಾಯುಧಗಳು ಕಡಿಮೆ ಪ್ರಮಾಣದಲ್ಲಿ ಇದ್ದವು. ಇದು ವಾಸ್ತವ್ಯ ನೆಲೆಯ ವಿಸ್ತಾರವನ್ನು ಸೂಚಿಸುತ್ತದೆ. ಈ ನೆಲೆಯ ಉತ್ತರಕ್ಕೆ ಸುಮಾರು ಎಂಟು ಹತ್ತು ಕಣಶಿಲೆಯ ಗುಂಡುಗಳನ್ನು ಸಾಲಾಗಿಡಲಾಗಿದ್ದು ಇದನ್ನು ಚಳಿಗಾಳಿಗಳ ಹೊಡೆತವನ್ನು ತಡೆಯಲು ಮಾಡಿದ ಮೊಟ್ಟಮೊದಲನೆಯ ಮಾನವ ನಿರ್ಮಿತ ಒಡ್ಡು ಎಂದು ಊಹಿಸಬಹುದಾಗಿದೆ. ನೆಲೆಯ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ನೈಸರ್ಗಿಕವಾಗಿರುವ ಕಣಶಿಲೆಯ ಗುಂಡುಗಳು ಇದ್ದವು. ಒಟ್ಟಿನಲ್ಲಿ ಈ ನೆಲೆ ತಳವಿನ್ಯಾಸದಲ್ಲಿ ಅಂಡಾಕಾರವಾಗಿದ್ದು ಕಣಶಿಲೆಯ ಗುಂಡುಗಳಿಂದ ಪರಿಧಿಯನ್ನು ಹೊಂದಿತ್ತು ಎಂದು ಹೇಳಬಹುದು. ಇದರ ಕ್ಷೇತ್ರಫಲ ಸುಮಾರು 60 ಚಮೀ. ಈ ನೆಲದ ಗರಸಿನಲ್ಲಿ ದೊರೆತ ಸಸ್ಯಪರಾಗಗಳನ್ನು ಪರಿಶೀಲಿಸಿದ ಹಾಲೆಂಡಿನ ಪ್ರಾಚೀನ ಸಸ್ಯಶಾಸ್ತ್ರಜ್ಞರು ಈ ಸ್ಥಳದಲ್ಲಿ ಈಗಿನಂತೆಯೇ ಆದರೆ ಅತಿ ದಟ್ಟವಾದ, ಜಾಲಿ ಮತ್ತು ಬೋರೆಗಿಡಗಳ ಅಡವಿ ಹಬ್ಬಿತ್ತೆಂದು ಅಭಿಪ್ರಾಯಪಟ್ಟಿದ್ದಾರೆ. ಉತ್ಖನನದಿಂದ ಹೊರತೆಗೆದ ಶಿಲಾಯುಧಗಳು ಸು. 800. ಎಲ್ಲವೂ ಸಣ್ಣಕಲ್ಲಿನವು. ಆದಿಮಾನವನು ಸುತ್ತಲಿನ ಪ್ರದೇಶದಲ್ಲಿ ದೊರಕುವ ಸುಣ್ಣಕಲ್ಲನ್ನು ತಂದು ಇದೇ ಸ್ಥಳದಲ್ಲಿ ಆಯುಧಗಳನ್ನು ತಯಾರಿಸಿನೆಂದು, ಇನ್ನೂ ಉಪಯೋಗಿಸದ ಶಿಲಾಯುಧಗಳು, ಸುಣ್ಣಕಲ್ಲಿನ ಚೂರುಗಳು ಮತ್ತು ಅಂಗೈಗಾತ್ರದ ಗುಂಡುಗಳು ಒಟ್ಟಾಗಿ ಹರಡಿ ಕೊಂಡಿದ್ದರಿಂದ ಹೇಳಬಹುದಾಗಿದೆ. ಮೃದುವಾದ ಸುಣ್ಣಕಲ್ಲಿನಿಂದ ಕೊಡಲಿಯನ್ನು ಮಾಡಿರುವುದು ಈ ನೆಲೆಯ ಒಂದು ವೈಶಿಷ್ಟ್ಯವೆಂದೇ ಹೇಳಬಹುದು. ಆ ಬಗೆಯ ಕೈಕೊಡಲಿಗಳು ಹೆಚ್ಚಾಗಿ ಕಂಡುಬಂದವು. ಇದರ ಕಾರ್ಯಸಾಮಥ್ರ್ಯ ಬೆರಗುಗೊಳಿಸುವಂಥದು (ಒಂದು ಚೂಪಾದ ಕೊಡಲಿಗೆ 70 ಸೆಂಮೀ ಉದ್ದನೆಯ ಕಟ್ಟಿಗೆಯ ಹಿಡಿ ಹಾಕಿ ಒಂದು ಜಾಲಿಯ ಮರವನ್ನು ಕಡಿದು ಕೆಡವಲು ಕೇವಲ ಹದಿನೈದು ನಿಮಿಷಗಳು ಸಾಕಾದವು. ಈ ಆಯುಧದ ಮೇಲಿನ ಭಾಗ ಸವೆದರೂ ಕತ್ತರಿಸುವ ಬಾಯಿ ಕೆಡದೆ ಉಳಿಯಿತು). ಇಲ್ಲಿಯ ಮಾನವನು ಕಲೆಯ ಸಂಪ್ರದಾಯವನ್ನಿಟ್ಟು ಕೊಂಡಿದ್ದನೆಂಬ ಸಂಗತಿ ವಾಸಸ್ಥಳದ ಪದರದಲ್ಲಿ ದೊರೆತ ಹೆಮಟೈಟ್ ವರ್ಣದ್ರವ್ಯದಿಂದ ತಿಳಿದುಬರುತ್ತದೆ. ಈ ದ್ರವ್ಯ ಇಲ್ಲಿಂದ 25 ಕಿಮೀ ದೂರದಲ್ಲಿ ದೊರಕುತ್ತದೆ. ಅಲೆಮಾರಿ ಅಷೂಲಿಯನ್ ಮಾನವನು ಇಲ್ಲಿಂದ ದೂರ ಹೋಗಿ ತಂಗಿರಲು ಸಾಧ್ಯ. ಇಂಥ ಕುರುಹು ದೇಶದ ಬೇರಾವ ನೆಲೆಗಳಲ್ಲೂ ದೊರೆತಿಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. ಉಲ್ಲೇಖ ದೋಷ: Invalid <ref> tag; no text was provided for refs named censusindia
"https://kn.wikipedia.org/w/index.php?title=ಹುಣಸಗಿ&oldid=1016296" ಇಂದ ಪಡೆಯಲ್ಪಟ್ಟಿದೆ