ಸುರಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೊರಾಪುರ
ಸುರಪುರ
ಪಟ್ಟಣ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಯಾದಗಿರಿ
ಲೋಕ ಸಭೆ ಚುನಾವಣಾ ಕ್ಷೇತ್ರರಾಯಚೂರು
Elevation
೪೭೨ m (೧,೫೪೯ ft)
Population
 (2011)
 • Total೫೧,೩೯೮
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
Vehicle registrationKA 33
Websitewww.surpurcity.mrc.gov.in

ಶೋರಾಪುರ (ಸುರಪುರ) ಯಾದಗಿರಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದರ ಮೂಲ ಹೆಸರು ಸುರಪುರ. ಇದು ಒಂದು ಐತಿಹಾಸಿಕ ಸ್ಥಳ.ಈ ತಾಲೂಕಿಗೆ ದೊಡ್ಡ ಇತಿಹಾಸವಿದೆ. ಹಿಂದೆ ರಾಜವೆಂಕಟಪ್ಪನಾಯಕ ಸಾತಂತ್ರ್ಯಕ್ಕಾಗಿ ಹೋರಾಡಿ ತನ್ನ ಪ್ರಾಣವನ್ನೆ ತ್ಯಾಗ ಮಾಡಿದನು.

ಜನ ಸಂಖ್ಯೆ[ಬದಲಾಯಿಸಿ]

೨೦೧೧ ರ ಭಾರತದ ಜನಗಣತಿಯ ಪ್ರಕಾರ ಸುರಪುರ 51398 ಜನಸಂಖ್ಯೆಯನ್ನು ಹೊಂದಿದ್ದು, 25,770 ಪುರುಷರು ಮತ್ತು 25,628 ಮಹಿಳೆಯರು ಇದ್ದಾರೆ.[೧]

ಸುರಪುರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

  • ಕೊಡೇಕಲ್ ದೇವಸ್ಥಾನ : ಕೊಡೇಕಲ್ ತಾಲೂಕ್ ಕೇಂದ್ರವಾದ ಸುರಪುರದಿಂದ ನೈಋತ್ಯಕ್ಕೆ ೪೨ ಕಿ.ಮೀ. ದೂರದಲ್ಲಿದೆ. ಸುಮಾರು ೧೫ನೇ ಶತಮಾನದಲ್ಲಿದ್ದ ಅರೂಢ ಸಂಪ್ರದಾಯದ ಕೊಡೇಕಲ್ ಬಸವಣ್ಣ ಇಲ್ಲಿ ನೆಲೆ ನಿಂತು ಕಾಲಜ್ಞಾನ ರಚಿಸಿ, ಹಿಂದೂ – ಮುಸ್ಲಿಂ ಭಾವೈಕ್ಯತೆಗಾಗಿ ದುಡಿದು ದೇಹ ತ್ಯಜಿಸಿದ ಪುಣ್ಯ ಸ್ಥಳವಾಗಿದ್ದು, ಅದರಿಂದಾಗಿ ಇದಕ್ಕೆ ಅಮರ ಕಲ್ಯಾಣವೆಂದೂ ಕರೆಯುವ ವಾಡಿಕೆಯಿದೆ.ಕೊಡೇಕಲ್ ನಲ್ಲಿ ಬಸವಣ್ಣನ ಎರಡು ಗುಡಿಗಳಿದ್ದು, ಪೇಟೆ ಬಸವಣ್ಣನ ಗುಡಿಯು ಕೊಡೇಕಲ ಬಸವಣ್ಣ ಕುಳಿತು ಕಾಲಜ್ಞಾನ ಬರೆದಂತಹ ಸ್ಥಳವಾದರೆ, ಊರ ಬಸವಣ್ಣನ ಗುಡಿಯು ಇವನು ಐಕ್ಯ ಹೊಂದಿದ ಸ್ಥಳವಾಗಿದೆ. ಈ ಎರಡೂ ಗುಡಿಗಳು ಮುಸ್ಲಿಂ ವಾಸ್ತು ಶೈಲಿಯ ರಚನೆಗಳಾಗಿದ್ದು, ಸುಂದರವಾಗಿವೆ[೨]
  • ದೇವರ ಗೋನಾಳ : ದೇವರ ಗೋನಾಳ ತಾಲೂಕ ಕೇಂದ್ರವಾದ ಸುರಪೂರದಿಂದ ವಾಯುವ್ಯಕ್ಕೆ ೧೦ ಕಿ.ಮೀ. ದೂರದಲ್ಲಿದ್ದು ಪವಾಡ ಪುರುಷ ತಿಂಥಿಣಿ ಮೌನೇಶ್ವರರ ಹುಟ್ಟೂರಾಗಿರುವುದರಿಂದ ಮಹತ್ವ ಪಡೆದಿದೆ. ಗ್ರಾಮ ಪಂಚಾಯಿತಿ ಕಛೇರಿ ಮುಂದಿರುವ ಎರಡು ಶಿಲಾ ಶಾಸನಗಳಿಂದ ಈ ಊರಿನ ಪ್ರಾಚೀನತೆಯನ್ನು ಸುಮಾರು ೧೧ -೧೨ ನೇ ಶತಮಾನದಷ್ಟು ಹಿಂದಕ್ಕೆ ಗುರುತಿಸಬಹುದಾಗಿದೆ. ಇವುಗಳಲ್ಲಿ ಸುಮಾರು ೧೧೦೬ ರ ಪ್ರಾಚೀನ ಶಾಸನವು ಕಲ್ಯಾಣದ ಚಾಳುಕ್ಯ ಅರಸ ಆರನೆಯ ವಿಕ್ರಮಾದಿತ್ಯನ ಕಾಲಕ್ಕೆ ಸೇರಿದ್ದು, ಮಹಾಮಂಡಳೇಶ್ವರ ದೇವರಸ, ಭೋಗರಸ, ದಂಡನಾಯಕರು ಹಾಗೂ ಚಕ್ರವರ್ತಿಯ ರಾಣಿ ಧಾರಲ ದೇವಿಯ ಬಗ್ಗೆ ಪ್ರಸ್ತಾಪಿಸುತ್ತಿದ್ದು ಮುಂದಿನ ಭಾಗ ಹಾಳಾಗಿರುವುದರಿಂದ ಹೆಚ್ಚಿನ ವಿವರ ಲಭಿಸುವುದಿಲ್ಲ.
  • ತಿಂಥಿಣಿ ಶ್ರೀ ಮೌನೇಶ್ವರ : ಕೃಷ್ಣಾ ನದಿಯ ಎಡ ದಂಡೆಯ ಮೇಲಿರುವ ಹಿಂದೂ – ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಧಾರ್ಮಿಕ ಕೇಂದ್ರವಾಗಿದೆ. ಸುಮಾರು ೧೭ ನೇ ಶತಮಾನದಲ್ಲಿ ಜೀವಿಸಿದ್ದ ಸಂತ ಮೌನಪ್ಪಯ್ಯನ ಗದ್ದುಗೆ ಇಲ್ಲಿದ್ದು ಹಿಂದೂಗಳು ಇವರನ್ನು ಮೌನೇಶ್ವರ ನೆಂದೂ ಮತ್ತು ಮುಸ್ಮಿಮರು ಮೌನುದ್ದೀನ್ ರೆಂದೂ ಭಕ್ತಿಯಿಂದ ಆರಾಧಿಸುತ್ತಾರೆ.
  • ಟೈಲರ್ಸ್ ಬಂಗ್ಲಾ: ಹೈದ್ರಾಬಾದ್ ನಿಜಾಮರ ಆಳ್ವಿಕೆಯಲ್ಲಿ ಸುರಪೂರ ಸಂಸ್ಥಾನದಲ್ಲಿ ಕಮಿಷನರ್ ಆಗಿ ೧೮೪೦ ರಿಂದ ರಾಜಾ ವೆಂಕಟಪ್ಪನಾಯಕನನ್ನು ಸಿಂಹಾಸನದಲ್ಲಿ ಕೂಡಿಸಿ ಅಧಿಕಾರ ನಡೆಸಿದ ಮೇಡೋಸ್ ಟೈಲರನು ಇಲ್ಲಿ ನಿರ್ಮಿಸಿರುವ ಬಂಗಲೆಯು ಭವ್ಯವಾಗಿದ್ದು ಅತ್ಯುತ್ತಮ ತಾಂತ್ರಿಕತೆಗೆ ಹೆಸರಾಗಿದ್ದು ವೀಕ್ಷಕರಲ್ಲಿ ವಿಸ್ಮಯವನ್ನುಂಟು ಮಾಡುತ್ತಿದ್ದು, ಇಂದು ಇದು ವಿಶ್ರಾಂತಿಯ ಗೃಹವಾಗಿ ಬಳಸಲ್ಪಡುತ್ತಿದೆ. ಗುಲಬರ್ಗಾದ ಹಲವು ಐತಿಹಾಸಿಕ ನೆಲೆಗಳನ್ನು ಬೆಳಕಿಗೆ ತಂದ ಕೀರ್ತಿ ಮೆಡೋಸ್ ಟೈಲರನಿಗೆ ಸಲ್ಲುತ್ತದೆ.


ಉಲ್ಲೇಖಗಳು[ಬದಲಾಯಿಸಿ]

  1. ಸುರಪುರ 2011ರ ಜನಗಣತಿ
  2. "ಸುರಪುರ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು ,http://kanaja.in". Archived from the original on 2020-11-30. Retrieved 2018-06-06. {{cite web}}: External link in |title= (help)
"https://kn.wikipedia.org/w/index.php?title=ಸುರಪುರ&oldid=1163895" ಇಂದ ಪಡೆಯಲ್ಪಟ್ಟಿದೆ