ವಿಷಯಕ್ಕೆ ಹೋಗು

ಹುಮ್ನಾಬಾದ್

ನಿರ್ದೇಶಾಂಕಗಳು: 17°46′N 77°08′E / 17.77°N 77.13°E / 17.77; 77.13
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುಮ್ನಾಬಾದ್
ನಗರ
ಹುಮ್ನಾಬಾದ್ is located in Karnataka
ಹುಮ್ನಾಬಾದ್
ಹುಮ್ನಾಬಾದ್
ಕರ್ನಾಟಕ, ಭಾರತದಲ್ಲಿರುವ ರಾಜ್ಯ
Coordinates: 17°46′N 77°08′E / 17.77°N 77.13°E / 17.77; 77.13
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಬೀದರ್ ಜಿಲ್ಲೆ
Regionಕಲ್ಯಾಣ-ಕರ್ನಾಟಕ
Founded byಜಯಸಿಂಹ
Government
 • Typeಟೌನ್ ಮುನ್ಸಿಪಲ್ ಕೌನ್ಸಿಲ್ (ಟಿಎಮ್‌ಸಿ)
 • Bodyಹುಮನಾಬಾದ್ ಟೌನ್ ಮುನ್ಸಿಪಲ್ ಕೌನ್ಸಿಲ್
 • ಎಮ್‌ಎಲ್‌ಎಸಿದ್ದು ನಾಗಭೂಷಣ ಪಾಟೀಲ್
 • ನಗರಸಭೆ ಅಧ್ಯಕ್ಷರುಕಸ್ತೂರಬಾಯಿ ನರಸಿಂಗ್
 • ನಗರಸಭೆ ಉಪಾಧ್ಯಕ್ಷರುಸತ್ಯವತಿ ಸೋಮಯ್ಯ
Area
 • Total೬.೮ km (೨.೬ sq mi)
Elevation
೬೩೮ m (೨,೦೯೩ ft)
Population
 (2015)
 • Total೯೫,೭೩೫
 • Density೧೪,೧೧೨/km (೩೬,೫೫೦/sq mi)
Demonym(s)ಎಚ್‌ಬಿಡಿಯನ್ಸ್, ಹುಮ್ನಬಡ್ನಿವರು
ಭಾಷೆಗಳು
 • ಅಧಿಕೃತ ಭಾಷೆಕನ್ನಡ
ಭಾಷೆಗಳು
 • ಇತರಹಿಂದಿ ಮತ್ತು ಮರಾಠಿ, ತೆಲುಗು
Time zoneUTC+5:30 (ಐಎಸ್‌ಟಿ)
Pin code
೫೮೫೩೩೦
Vehicle registrationಕೆ‌ಎ-೩೯
ಹತ್ತಿರದ ನಗರಬೀದರ್
ಪ್ರಮುಖ ಹೆದ್ದಾರಿಗಳು NH 65
NH 50
Websitehumnabadtown.mrc.gov.in

ಹುಮ್ನಾಬಾದ್ ಭಾರತದ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಒಂದು ನಗರ ಮತ್ತು ಪುರಸಭೆಯಾಗಿದ್ದು, ಹುಮ್ನಾಬಾದ್ ತಾಲೂಕಿನ ಪ್ರಧಾನ ಕಛೇರಿಯಾಗಿದೆ. ಇದು ವೀರಭದ್ರೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಹಾಗೂ ಬೀದರ್ ಮತ್ತು ಕಲಬುರ್ಗಿ ಜಿಲ್ಲೆಯ ಮಧ್ಯಭಾಗದಲ್ಲಿದೆ. ಇದು ಎರಡೂ ಜಿಲ್ಲೆಗಳಿಂದ ೬೦ ಕಿಮೀ ದೂರದಲ್ಲಿದೆ. ಇದು ರಸ್ತೆಮಾರ್ಗಗಳು ಮತ್ತು ರೈಲ್ವೆ ಜಾಲದಿಂದ ಉತ್ತಮ ಸಂಪರ್ಕವನ್ನು ಹೊಂದಿದೆ. ಎರಡು ರಾಷ್ಟ್ರೀಯ ಹೆದ್ದಾರಿಗಳು ಎನ್‌ಎಚ್-೫೦ ಮತ್ತು ಎನ್‌ಎಚ್-೬೫ ಮೂಲಕ ಸಂಪರ್ಕ ಹೊಂದಿದೆ.[]

ಭೂಗೋಳಶಾಸ್ತ್ರ

[ಬದಲಾಯಿಸಿ]

ಹುಮ್ನಾಬಾದ್ 17.77°N 77.13°E ನಿರ್ದೇಂಶಾಕವನ್ನು ಹೊಂದಿದ್ದು,[] ಸರಾಸರಿ ೬೩೮ ಮೀಟರ್ (೨೦೯೩ ಅಡಿ) ಎತ್ತರದಲ್ಲಿದೆ. ಹುಮ್ನಾಬಾದ್ ೧೧೨ ಗ್ರಾಮಗಳು ಮತ್ತು ೩೪ ಪಂಚಾಯಿತಿಗಳನ್ನು ಒಳಗೊಂಡಿದೆ.

ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

೨೦೧೯ ರಲ್ಲಿ, ಹುಮ್ನಾಬಾದ್ ೩,೩೨,೩೬೨ ಜನಸಂಖ್ಯೆಯನ್ನು ಹೊಂದಿತ್ತು.[] ಜನಸಂಖ್ಯೆಯಲ್ಲಿ ಪುರುಷರು ೫೧% ಮತ್ತು ಮಹಿಳೆಯರು ೪೯% ರಷ್ಟಿದ್ದಾರೆ. ಹುಮ್ನಾಬಾದ್‌ನಲ್ಲಿ ಕನ್ನಡ ಹೆಚ್ಚು ಮಾತನಾಡುವ ಭಾಷೆಯಾಗಿದೆ.

ಹುಮನಾಬಾದ್‌ನಲ್ಲಿರುವ ಧರ್ಮಗಳು
ಧರ್ಮ ಶೇಕಡ
ಹಿಂದೂ
  
64.32%
ಮುಸ್ಲಿಂ
  
33.48%
ಕ್ರಿಶ್ಚಿಯನ್ನರು
  
0.60%
ಸಿಖ್
  
0.03%
ಬೌದ್ಧ
  
0.26%
ಜೈನ್
  
0.02%
ಇತರರು†
  
0.01%

ಮಹತ್ವ

[ಬದಲಾಯಿಸಿ]

ಹುಮ್ನಾಬಾದ್ ದೇವಾಲಯಗಳ ಶ್ರೀಮಂತ ಪರಂಪರೆಯಾಗಿದ್ದು, ತೆಲಂಗಾಣ ಮತ್ತು ಮಹಾರಾಷ್ಟ್ರದ ಸಾಮೀಪ್ಯಕ್ಕೆ ಹೆಸರುವಾಸಿಯಾಗಿದೆ. ಇದು ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.[] ಜೈ ಭವಾನಿ ದೇವಾಲಯ, ಶ್ರೀ ಮಾಣಿಕ್ ಪ್ರಭು ದೇವಸ್ತಾನಂ ದೇವಾಲಯವು ಮಹಾನ್ ಸನ್ಯಾಸಿಗೆ ಸಮರ್ಪಿತವಾಗಿದೆ.

ಧಾರ್ಮಿಕ ಕೇಂದ್ರಗಳು

[ಬದಲಾಯಿಸಿ]

ಮಾಣಿಕ್ ಪ್ರಭು ದೇವಾಲಯವು ನಂದಗಾಂವ್ ಗ್ರಾಮದಲ್ಲಿ ವಿರಾಜ ಮತ್ತು ಗುರು ಗಂಗಾ ಎಂಬ ಎರಡು ಪವಿತ್ರ ನದಿಗಳ ಸಂಗಮದಲ್ಲಿದೆ.[] ಪ್ರತಿ ವರ್ಷ ಜನವರಿ ೨೬ ರಂದು, ೧೨ ದಿನಗಳ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಇಲ್ಲಿಗೆ ಉತ್ತರ ಕರ್ನಾಟಕ, ಮಹಾರಾಷ್ಟ್ರ (ಎಂಎಚ್), ಆಂಧ್ರ, ತೆಲಂಗಾಣದಿಂದ ಅನೇಕ ಜನರು ಬರುತ್ತಾರೆ.[]

ಸಾರಿಗೆ

[ಬದಲಾಯಿಸಿ]

ಹುಮ್ನಾಬಾದ್ ಎರಡು ರಾಷ್ಟ್ರೀಯ ಹೆದ್ದಾರಿಗಳಾದ ಎನ್ಎಚ್-೬೫ ಮತ್ತು ರಾಜ್ಯ ಹೆದ್ದಾರಿ ಎನ್ಎಚ್-೨೧೮ ಮೂಲಕ ಸಂಪರ್ಕ ಹೊಂದಿದೆ. ವಾಸ್ತವವಾಗಿ, ಎನ್ಎಚ್-೨೧೮ ಹುಮ್ನಾಬಾದ್‌ನಿಂದಲೇ ಪ್ರಾರಂಭವಾಗುತ್ತದೆ. ಈಗ ಎನ್ಎಚ್-೯ ಅನ್ನು ಎನ್ಎಚ್-೬೫ ಎಂದು ಮರುನಾಮಕರಣ ಮಾಡಲಾಗಿದೆ. ಅಲ್ಲದೆ, ಬೀದರ್‌ನಿಂದ ಗುಲ್ಬರ್ಗಾಕ್ಕೆ ಹೊಸ ರೈಲು ಮಾರ್ಗವನ್ನು ಹಾಕಲಾಗಿದೆ ಮತ್ತು ಬೀದರ್‌ನಿಂದ ಹುಮನಾಬಾದ್ ಮೂಲಕ ಗುಲ್ಬರ್ಗಾಕ್ಕೆ ನಿಯಮಿತ ರೈಲು ಸೇವೆಗಳು ಪ್ರಾರಂಭವಾಗಿವೆ.[][]

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. District Census Handbook, Series 14, Mysore: Bidar. Govt. Press, 1973.
  2. Falling Rain Genomics, Inc - Homnabad
  3. "District Statistics | Bidar District, Government of Karnataka | India".
  4. "ವೀರಭದ್ರನ ಐತಿಹಾಸಿಕ ರಥೋತ್ಸವ". vijayavani.net. Retrieved 4 March 2018.
  5. "Amit Shah emulates Rahul Gandhi's temple run, visits religious places - Times of India". The Times of India. Retrieved 2018-04-07.
  6. "ವೀರಭದ್ರೇಶ್ವರ ಜಾತ್ರೆಗೆ ಸಂಭ್ರಮದ ಚಾಲನೆ - Vijaykarnataka". Vijaykarnataka. 2015-01-17. Retrieved 2018-04-07.
  7. "South Central Railways to chug on electricity". Deccan Chronicle. Retrieved 4 March 2018.
  8. "Bidar, Gulbarga DEMU train service from Monday". thehindu.com. Retrieved 4 March 2018.


ಬಾಹ್ಯ ಕೊಂಡಿಗಳು

[ಬದಲಾಯಿಸಿ]