ಬಸವಕಲ್ಯಾಣ
Basavakalyan ಬಸವಕಲ್ಯಾಣ |
|
— town — | |
World's tallest Statue of Basavanna, 108 feet (33 m) | |
Location in Karnataka, India | |
ರೇಖಾಂಶ: 17°52′22″N 76°56′59″E / 17.87278°N 76.94972°E | |
ದೇಶ | ![]() |
---|---|
State | ಕರ್ನಾಟಕ |
District | ಬೀದರ್ |
ಎತ್ತರ | ೬೨೧ ಮೀ (೨,೦೩೭ ಅಡಿ) |
ಜನಸಂಖ್ಯೆ (2011) | |
- ಒಟ್ಟು | ೬೯,೭೧೭[೧] |
- ಸಾಂದ್ರತೆ | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ""./ಚದರ ಕಿಮಿ (Expression error: Unexpected < operator./ಚದರ ಮೈಲಿ) |
{{{language}}} | {{{ಭಾಷೆ}}} |
PIN | 585 327 |
ದೂರವಾಣಿ ಕೋಡ್ | 08481 |
ಬಸವಕಲ್ಯಾಣ ನಗರವು ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯಲ್ಲಿದೆ. ಬೀದರ್ ನಗರದಿಂದ ಸುಮಾರು 80 ಕಿಲೊಮೀಟರ್ ದೂರದಲ್ಲಿ ಇರುವ ಇದು ರಾಜ್ಯದ ಅತ್ಯಂತ ಐತಿಹಾಸಿಕ ನಗರಗಳಲ್ಲಿ ಒಂದು.
ಚರಿತ್ರೆ[ಬದಲಾಯಿಸಿ]
ಹನ್ನೆರಡನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಪಟ್ಟಣವೇ ಇಂದಿನ ಬಸವ ಕಲ್ಯಾಣ. ಬೀದರ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿರುವ ಈ ಊರಿನ ಜನಸಂಖ್ಯೆ ೫೮,೭೪೨ (೨೦೦೧ರ ಭಾರತದ ಜನಗಣತಿಯ ಪ್ರಕಾರ).ಕಲ್ಯಾಣ ಚಾಲುಕ್ಯರ ರಾಜಧಾನಿಯಾಗಿ ಮೆರೆದಿದ್ದ ಕಲ್ಯಾಣದಿ೦ದ ಸುಮಾರು ೨೫೦ ವರುಷಗಳವರೆಗೆ ಆಳ್ವಿಕೆ ನಡೆಸಿದರು.
ಉಮಾಪೂರ ಮಂದಿರ[ಬದಲಾಯಿಸಿ]
ಇದು ಕೂಡ ಬಸವಕಲ್ಯಾಣದಿಂದ 15 ಕಿ.ಮೀ. ದೂರ ಪಶ್ಚಿಮ ದಿಕ್ಕಿಗಿದೆ. ಇಲ್ಲಿ ಉಮಾಮಹೇಶ್ವರ ದೇಗುಲದ ಸಂಕೀರ್ಣವು ಕಾಣಬಹುದಾಗಿದ್ದು ಪೂರ್ತಿ ಜರ್ಝರಿತವಾಗಿದೆ. ಇದು ಕೂಡ ಕಲಾಶಿಲ್ಪ ವೈಭವಕ್ಕೆ ಸಾಕ್ಷಿಯಾಗಿದೆ. (ಶಿಲ್ಪ ಕಲಾ ವೈಭವಕ್ಕೆ ಸಾಕ್ಷಿಯಾಗಿ ನಿಂತಿರು ಉಮಾಮಹೇಶ್ವರ ದೇಗುಲ ಸಂಕೀರ್ಣ )
ಬಸವೇಶ್ವರ ದೇವಾಲಯ[ಬದಲಾಯಿಸಿ]
ಬಸವಣ್ಣನವರು ಮಾಂಡಲಿಕ ಬಿಜ್ಜಳನೊಂದಿಗೆ ಮಂಗಳವೇಡೆಯಿಂದ ಕಲ್ಯಾಣಪುರಕ್ಕೆ ಬಂದು ಅದನ್ನು ತಮ್ಮ ಕರ್ಮಭೂಮಿಯನ್ನಾಗಿಸಿ ಕೊಂಡರು. ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ನಡೆಸಿದರು. ಕಲ್ಯಾಣ ಶರಣರ ನಾಡು, ಭಕ್ತಿಯ ಬೀಡು ಆಯಿತು. ಬಲದೇವ ಮಂತ್ರಿಯ ನಂತರ ಬಸವಣ್ಣನವರಿಗೆ ಪ್ರಧಾನಿ ಹುದ್ದೆಯನ್ನು ನೀಡಲಾಯಿತು. ಅವರು ಬಿಜ್ಜಳ ಅರಸರ ಭಾಂಡಾರಿಯಷ್ಟೇ ಆಗಿರದೆ ಭಕ್ತಿ ಭಾಂಡಾರಿಯೂ ಆದರು. ನೆಲ ಪಾವನವಾಯಿತು. ಜನಮನ ನೆಲೆ ಕಂಡಿತು. ಈ ಆಧುನಿಕ ದೇವಾಲಯ ಸಾಂಸ್ಕೃತಿಕ ಕೇಂದ್ರವೂ ಆಗಿದೆ. (ಚಿತ್ರದಲ್ಲಿ ಕಾಣುತ್ತಿರುವದು ಬೊಮ್ಮಗೊಂಡೇಶ್ವರ ಕೆರೆ)
ಪರುಷಕಟ್ಟೆ[ಬದಲಾಯಿಸಿ]
ಬಸವೇಶ್ವರ ದೇವಾಲಯದ ಸಮೀಪ ಇರುವ ಈ ಸ್ಮಾರಕ ಕಟ್ಟೆಯೊಂದರ ರೂಪದಲ್ಲಿದೆ. ಇದರ ಸಂಬಂಧ ಬಸವಣ್ಣನವರೊಂದಿಗೆ ಇದ್ದಿತೆಂದು ತಿಳಿದುಬರುತ್ತದೆ.
ಬಸವಣ್ಣನವರ ಅರಿವಿನ ಮನೆ[ಬದಲಾಯಿಸಿ]
ಬಸವ ಕಲ್ಯಾಣದ ಹೊರವಲಯದಲ್ಲಿರುವ ಇದು ಸ್ಮಾರಕ ಗುಹೆಯ ಮಾದರಿಯಲ್ಲಿದೆ. ಬಸವಣ್ಣನವರ ಮಹಾಮನೆ ಎಂದೇ ಜನರು ಇದನ್ನು ಕಾಣುತ್ತಾರೆ.
ಹಡಪದ ಅಪ್ಪಣನವರ ಗುಹೆ[ಬದಲಾಯಿಸಿ]
ಅರಿವಿನ ಮನೆಯ ಪಕ್ಕದಲ್ಲಿಯೇ ಈ ಗುಹೆ ಇದ್ದು , ತಂಪಾದ ನೆಲೆಯಾಗಿದೆ. ಹಡಪದ ಅಪ್ಪಣನವರು ಬಸವಣ್ಣನವರ ನಿಕಟವರ್ತಿಗಳಾಗಿದ್ದರು. ತಾಂಬೂಲವನ್ನು ಸಲ್ಲಿಸುವ ಕಾಯಕ ಅವರದ್ದಾಗಿತ್ತೆಂದು ತಿಳಿದುಬರುತ್ತದೆ.
ಅಕ್ಕ ನಾಗಮ್ಮ - ನೀಲಮ್ಮನವರ ಗವಿಗಳು[ಬದಲಾಯಿಸಿ]
ಈ ಎರಡೂ ಗವಿಗಳು ಅಕ್ಕಪಕ್ಕದಲ್ಲಿವೆ. ಚೆನ್ನಬಸವಣ್ಣನವರು ತಮ್ಮ ಬಾಲ್ಯದ ದಿನಗಳನ್ನು ಕಳೆದದ್ದು ಇಲ್ಲಿಯೇ ಎಂಬುದು ಅಭಿಪ್ರಾಯ. ಈ ಗವಿಗಳು ಹನ್ನೆರಡನೇ ಶತಮಾನದ ಮಹಿಳೆಯರ ಆಧ್ಯಾತ್ಮಿಕ ಸಾಧನೆಯ ಕುರುಹುಗಳು.ಐತಿಹಾಸಿಕ ಬಸವಕಲ್ಯಾಣ
ಉಲ್ಲೇಖಗಳು[ಬದಲಾಯಿಸಿ]
![]() |
ವಿಕಿಮೀಡಿಯ ಕಣಜದಲ್ಲಿ Basavakalyana ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |