ವಿಷಯಕ್ಕೆ ಹೋಗು

ಚನ್ನಬಸವೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹನ್ನೆರಡನೆಯ ಶತಮಾನದ ಶರಣ ಸಮೂಹದಲ್ಲಿ ಅಗ್ರಗಣ್ಯವಾದ ಹೆಸರುಗಳಲ್ಲಿ , ಚನ್ನಬಸವಣ್ಣನವರದು ಬಹು ಪ್ರಮುಖವಾದುದು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆ ; ಚನ್ನಬಸವಣ್ಣನವರು ಬದುಕಿದ್ದುದು ಕೇವಲ ಇಪ್ಪತ್ತುನಾಲ್ಕು ವರ್ಷಗಳು ಮಾತ್ರ. ಹನ್ನೆರಡನೆ ಯ ಶತಮಾನದ ಯುಗಪುರುಷನೂ; ಸಾಮಾಜಿಕ ಬದಲಾವಣೆಗಳ ಹರಿಕಾರನೂ ; ಅಸಮಾನತೆಯ ವಿರುದ್ದ ದನಿಯೆತ್ತಿ ,ವ್ಯವಸ್ಠೆಯ ಆಕ್ರೋಶಕ್ಕೆ ಗುರಿಯಾದ , ಬಸವಣ್ಣನವರ ಸೋದರಳಿಯ ಚನ್ನಬಸವಣ್ಣ . ಬಸವಣ್ಣನವರ ಸೋದರಳಿಯನೆಂಬುದಕ್ಕಿಂತಲೂ, ಸ್ವ ಸಾಮರ್ಥ್ಯ ಮತ್ತು ಸಾಧನೆಗಳಿಂದ ಕೀರ್ತಿವಂತವಾದ ವ್ಯಕ್ತಿತ್ವ ಚನ್ನಬಸವಣ್ಣನದು.

ಪರಿಚಯ

[ಬದಲಾಯಿಸಿ]
  • ಚನ್ನ ಬಸವಣ್ಣನವರ ತಾಯಿ ಅಕ್ಕನಾಗಾಯಿ ಅಥವಾ ನಾಗಲಾಂಬಿಕೆಸ್ವತಃ ಚನ್ನಬಸವಣ್ಣನವರ ವಚನಗಳಿಂದ, ಇತರ ವಚನಕಾರರ ಉಕ್ತಿಗಳಿಂದ ಮತ್ತು ಪುರಾಣಗಳಿಂದ ಚನ್ನಬಸವಣ್ಣನವರ ತಾಯಿಯ ಬಗ್ಗೆ ವಿವರಗಳು ಸಾಕಷ್ಟು ದೊರಕುತ್ತವೆ. ಆದರೆ ಚನ್ನಬಸವಣ್ಣನವರ ತಂದೆಯ ಬಗ್ಗೆ ಸಿಗುವ ವಿವರಗಳು, ಹೆಚ್ಚು ಕಾಲ್ಪನಿಕವಾಗಿವೆ. ಕ್ರಿ.ಶ. ೧೪೨೫ ರ ವರೆಗೆ ಚನ್ನಬಸವಣ್ಣನವರ ಜನನದ ಬಗ್ಗೆ ಸರಿಯಾದ ವಿವರಗಳಿಲ್ಲ. ಸು. ೧೪೨೫ರಲ್ಲಿ ಲಕ್ಕಣ್ಣ ದಂಡೇಶನು ತನ್ನ ಶಿವ ತತ್ವ ಚಿಂತಾಮಣಿಯಲ್ಲಿ ಶರಣರ ಪ್ರಸಾದ ಸೇವನೆಯಿಂದ ನಾಗಲಾಂಬಿಕೆ ಗರ್ಭ ಧರಿಸುತ್ತಾಳೆ ಎಂದು ಬರೆಯುತ್ತಾನೆ.
  • ಇನ್ನೂ ಹಲವರು ಬಸವನ ಒಕ್ಕುಮಿಕ್ಕ ಪ್ರಸಾದದಿಂದ, ಇನ್ನೂ ಹಲವರು ಡೋಹರ ಕಕ್ಕಯ್ಯನ ಒಕ್ಕು ಮಿಕ್ಕ ಪ್ರಸಾದದಿಂದ ಚನ್ನಬಸವಣ್ಣನ ಜನ್ಮ
  • ವಾಯಿತೆಂದೂ ಕಲ್ಪಿಸುತ್ತಾರೆ. ಕಾಲಮಾನಗಳು ಶರಣರ ಜೀವಿತಾವಧಿಗಳಿಗೆ ಇವಾವೂ ಸಹ ಐತಿಹಾಸಿಕ ವಾಗಿ ಹೊಂದಿಕೆಯಾಗುವುದಿಲ್ಲ. ಒಕ್ಕು ಮಿಕ್ಕ ಪ್ರಸಾದದ ಕಥೆಗಳನ್ನು ನಂಬುವುದಾದರೆ ಚನ್ನಬಸವಣ್ಣನ ಜನನ ಕಲ್ಯಾಣದಲ್ಲಿ ಸಂಭವಿಸಿತೆಂದು ಒಪ್ಪಬೇಕಾಗುತ್ತದೆ. ಇದಕ್ಕೆ ಕಾಲದ ಹೊಂದಾಣಿಕೆಯಾಗುವುದಿಲ್ಲ. ಬಸವಣ್ಣನು ಕಲ್ಯಾಣಕ್ಕೆ ಬರುವ ವೇಳೆಗೆ ಚನ್ನಬಸವಣ್ಣನಿಗೆ ಕನಿಷ್ಟ ೧೦-೧೨ ವರ್ಷಗಳಾದರೂ ಆಗಿರಲೇಬೇಕಾಗುತ್ತದೆ.
  • ಅಂದರೆ ಚನ್ನಬಸವಣ್ಣನ ಜನನ ಕೂಡಲ ಸಂಗಮದಲ್ಲಿಯೇ ಆಗಿರುವುದು ಸಹಜವಾಗಿ ಖಚಿತಪಡುತ್ತದೆ. ಸುಮಾರು ಕ್ರಿ.ಶ. ೧೫೦೦ರರಲ್ಲಿ ರಚನೆಯಾದ ಸಿಂಗಿರಾಜಸಿಂಗಿರಾಜಪುರಾಣದಲ್ಲಿ ಚನ್ನಬಸವೇಶ್ವರನ ತಂದೆಶಿವಸ್ವಾಮಿ ಅಥವಾ ಶಿವದೇವ ಇಂಗಳೇಶ್ವರ ಗ್ರಾಮ ಎಂದು ಸ್ಪಷ್ಟವಾಗಿ ಬರುತ್ತದೆ. ಸಾಮಾನ್ಯವಾಗಿ ಉಳಿದ ಲಿಂಗಾಯತ ಪುರಾಣಕಾರರಿಗಿಂತ ಸಿಂಗಿರಾಜನು ಐತಿಹಾಸಿಕ ವಿಷಯಗಳಲ್ಲಿ ಕಲ್ಪನೆಗಳಿಗಿಂತ ವಾಸ್ತವಕ್ಕೆ ಹೆಚ್ಚು ನಿಷ್ಟನಾಗಿರುವುದರಿಂದ, ಸಿಂಗಿರಾಜ ಪುರಾಣದ ವಿವರಣೆಗೆ ಬಲ ಬರುತ್ತದೆ.
  • ಕಾಲಜ್ಞಾನದ ವಚನಗಳ ಪ್ರಕಾರ , ಚನ್ನಬಸವಣ್ಣನ ಜನನ , ನಂದನ ನಾಮ ಸಂವತ್ಸರದ ವೈಶಾಖ ಶುದ್ದ ಪಾಡ್ಯ ಮಂಗಳವಾರ ಪ್ರಾತಃಕಾಲ ಕೃತ್ತಿಕಾ ನಕ್ಷತ್ರದಲ್ಲಿ (ಕ್ರಿ.ಶ. ೧೧೪೪) ಎಂದು ತಿಳಿದು ಬರುತ್ತದೆ .ರಾಕ್ಷಸ ನಾಮ ಸಂವತ್ಸರದ ಕಾರ್ತೀಕ ಮಾಸದಲ್ಲಿ ಉಳವಿ ಯಲ್ಲಿ ಲಿಂಗೈಕ್ಯ (ಕ್ರಿ.ಶ.೧೧೬೮)ಈ ಎರಡರ ನಡುವಣ ಕಾಲಾವಧಿ ಕೇವಲ ೨೪ ವರ್ಷಗಳು.
  1. ಅಕ್ಕನಾಗಮ್ಮಳನ್ನು ಇಂಗಳೇಶ್ವರ ಮಾದಲಾಂಬಿಕೆಯ ಸಹೋದರ ಶಿವಸ್ವಾಮಿಯವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಲ್ಯಾಣಕ್ಕೆ ಹೋಗುವ ಮುನ್ನ ಚನ್ನಬಸವಣ್ಣ ಇದೇ ಇಂಗಳೇಶ್ವರದಲ್ಲಿ ಜನಿಸಿದ್ದರು

ಇತಿವೃತ್ತ

[ಬದಲಾಯಿಸಿ]

"ಚನ್ನಬಸವಣ್ಣ"ನವರು ಸು ಕ್ರಿ.ಶ. ೧೧೫೬ರಲ್ಲಿ ಸ್ಥಾಪಿಸಲಾದ ಶಿವಾನುಭವ ಮಂಟಪದಲ್ಲಿ ಸಕ್ರಿಯವಾಗಿ ಪಾತ್ರ ವಹಿಸುತ್ತಾರೆ ,ಆಗ ಅವರಿಗೆ ಕೇವಲ ಹನ್ನೆರಡು ವರ್ಷ ಇರಬಹುದು .ಲಿಂಗಾಯತ ಧರ್ಮದ ಸಾಂಪ್ರದಾಯಕ ವಚನಗಳನ್ನು ಪರಿಷ್ಕರಿಸಿ , [[ಷಟ್ ಸ್ಥಲಾಸುಸಾರವಾಗಿ ನೆಲೆಯನ್ನು ಕಲ್ಪಿಸಿದ ಪ್ರಮುಖರಲ್ಲಿ, ಚನ್ನಬಸವಣ್ಣನವರ ಹೆಸರು ಮೊದಲನೆಯದು .ಚೆನ್ನ ಬಸವಣ್ಣನವರ ವಚನಗಳೂ ಸಹ ತುಂಬಾ ಅನುಭಾವಪೂರ್ಣವಾಗಿ, ಲಿಂಗಾಯತ ಧರ್ಮ ಸಿದ್ದಾಂತವನ್ನು ವಿವರಿಸುತ್ತವೆ .

  • ಕಲ್ಯಾಣದ ಕ್ರಾಂತಿಯ ನಂತರ ಕಲ್ಯಾಣದಲ್ಲಿದ್ದ ಶರಣರಿಗೆ ನೆಲೆ ತಪ್ಪಿ, ದಿಕ್ಕು ದಿಕ್ಕಿಗೆ ಚದುರಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸೊನ್ನಲಾಪುರಕ್ಕೆ, ಶ್ರೀಶೈಲಕ್ಕೆ ಹೀಗೆ ವಿವಿಧ ಸ್ಥಳಗಳಿಗೆ, ತಂಡಗಳು ತೆರಳಿದವು. ಶರಣರ ಬಹು ದೊಡ್ಡ ಗುಂಪು, ಚನ್ನಬಸವಣ್ಣನವರ ನೇತೃತ್ವದಲ್ಲಿ, ಉಳವಿಯ ಕಡೆಗೆ ಹೊರಟಿತು. ಚಿಕ್ಕ ವಯಸ್ಸಿನ ಚನ್ನಬಸಣ್ಣನವರ ಹೆಗಲ ಮೇಲೆ ಇಂಥ ಗುರುತರವಾದ ಹೊಣೆಗಾರಿಕೆ ಬಿದ್ದುದನ್ನು, ತುಂಬಾ ಕಷ್ಟದಿಂದ ಅವರು ನಿಭಾಯಿಸಿದರು.
  • ಮಾರ್ಗ ಮಧ್ಯದಲ್ಲಿ ,ಕಲ್ಯಾಣದ ಸೈನ್ಯ ಶರಣರನ್ನು ಅಡ್ಡಗಟ್ಟಿ ಮಾರಣ ಹೋಮವನ್ನು ನಡೆಸಿತು .ಆಗ ಶರಣರಿಗೆ ಅನಿರೀಕ್ಶಿತವಾದ ಸಹಾಯ ಒದಗಿ ,ಘೋರ ಯುದ್ದದಲ್ಲಿ ಕಲ್ಯಾಣದ ಸೈನ್ಯ ಸೋತು ಹಿಮ್ಮೆಟ್ಟಿತು .ಆ ಅನಿರೀಕ್ಷಿತ ಸಹಾಯ ಯಾರಿಂದ ದೊರಕಿತೆಂಬುದರ ಬಗ್ಗೆ , ವಿವರಣೆಗಳು ಲಭ್ಯವಿಲ್ಲ.
  • ಡಾ.ಎಚ್ .ತಿಪ್ಪೇರುದ್ರಸ್ವಾಮಿಯವರು ತಮ್ಮ ಅಳಿವಿನಿಂದ ಉಳಿವಿಗೆ ಕಾದಂಬರಿಯಲ್ಲಿ ಕೆಲವು ವಿವರಣೆಗಳನ್ನು ಒದಗಿಸಲು ಪ್ರಯತ್ನಿಸಿದ್ದಾರೆ. ನಂತರ ಚನ್ನಬಸವಣ್ಣನವರು ಹೆಚ್ಚುಕಾಲ ಬದುಕಲಿಲ್ಲ ಉಳವಿಯಲ್ಲಿಯೇ (ಇಚ್ಛಾಮರಣಿ) ಲಿಂಗೈಕ್ಯ ಹೊಂದಿದರು. ಹೀಗೆ ಚನ್ನಬಸವಣ್ಣನವರು ಬದುಕಿದ್ದು ಸ್ವಲ್ಪ ಕಾಲವೇ ಆದರೂ; ಸಾಧಿಸಿದ್ದು, ಕೀರ್ತಿಶಾಲಿಯಾದದ್ದು ತುಂಬಾ ಹೆಚ್ಚು.[]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: