ಯೆಡಿಯೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೆಡಿಯೂರು ಕರ್ನಾಟಕತುಮಕೂರು ಜಿಲ್ಲೆಯ ಒಂದು ಊರು. ಬೆಂಗಳೂರಿನಿಂದ ಸುಮಾರು ೯೫ ಕಿ.ಮಿ. ದೂರದಲ್ಲಿದೆ. ಯೆಡಿಯೂರಿನಲ್ಲಿ ವೀರಶೈವರ ಪ್ರಮುಖ ಪುಣ್ಯಕ್ಷೇತ್ರವಾದ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ದೇವಸ್ಥಾನವಿದೆ. ಇದು ದೇವಸ್ಥಾನವೆಂದು ಕರೆಯಲ್ಪಟ್ಟರೂ, ಇಲ್ಲಿರುವುದು ಶ್ರೀ ತೊಂಟದ ಸಿದ್ಧಲಿಂಗರವರ ನಿರ್ವಿಕಲ್ಪ ಶಿವಯೋಗ ಸಮಾಧಿ (ಗದ್ದಿಗೆ), ಈ ಸ್ಥಳವನ್ನು ಯಡಿಯೂರು, ಎಡೆಯೂರು ಎಂದೂ ಸಹ ಕರೆಯುವರು. ಇಲ್ಲಿ ೧೫ನೇ ಶತಮಾನದಲ್ಲಿ ಜೀವಿಸಿದ್ದರು ಎಂದು ಜನಮನವು ಸ್ಥಿರವಾಗಿ ನಂಬಿರುವ ಶ್ರೀ ಯಡಿಯೂರು ಸಿದ್ಧಲಿಂಗ ಯತೀಶ್ವರರ ಗದ್ದುಗೆ ಇದ್ದು, ಈಗ ಈ ಸ್ಥಳವು ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯ ಎಂದು ಕರ್ನಾಟಕದಾದ್ಯಂತ ಪ್ರಸಿದ್ಧವಾಗಿದೆ. ಇಲ್ಲಿ ದ್ರಾವೀಡ ಶೈಲಿಯಲ್ಲಿ ಕಾಲಾನುಕ್ರಮೇಣ (೧೫ ಅಥವಾ ೧೬ ನೇ ಶತಮಾನದಲ್ಲಿ ನಿರ್ಮಿತವಾದ ಕಲ್ಲುಮಠದಿಂದ ೧೯೭೧ರಲ್ಲಿ ನಿರ್ಮಿತವಾದ ರಾಜಗೋಪುರದವರೆಗೆ) ವಿಸ್ತಾರಗೊಂಡ ಸುಂದರ ವಿಶಾಲ ದೇವಾಲಯವಿದ್ದು, ಇಲ್ಲಿ ತ್ರಿಕಾಲ ರುದ್ರಾಭಿಷೇಕಾದಿ ಪೂಜೆ ಪುನಸ್ಕಾರಗಳಿಂದ ಭಕ್ತಾದಿಗಳು ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಯವರನ್ನು ಆರಾಧಿಸುತ್ತಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]