ಸಪೋಟ
ಸಪೋಟ | |
---|---|
ಸಪೋಟ ಮರ | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | M. zapota
|
Binomial name | |
ಮಣಿಕರ ಙಪೋಟ (L.) P. Royen
|
ಸಪೋಟ ಇದು ಒಂದು ಪ್ರಮುಖ ಹಣ್ಣಿನ ಮರ.ಮೂಲತಃ ವೆಸ್ಟ್ ಇಂಡೀಸ್ ಹಾಗೂ ಮೆಕ್ಸಿಕೋಮೂಲಸ್ಥಾನ.ಕರ್ನಾಟಕದಲ್ಲಿ ಕರಾವಳಿ ಹಾಗೂ ಒಳನಾಡಿನಲ್ಲಿ ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಯೂರೋಪಿಯನ್ನರು, ಅದರಲ್ಲೂ ಪೋರ್ಚುಗೀಸರು ಭಾರತಕ್ಕೆ ಬಂದಾಗ ಹಲವಾರು ತರಕಾರಿ ಹಣ್ಣುಗಳ ಬೀಜಗಳನ್ನು ತಂದು ನೆಟ್ಟರು. ಅವುಗಳಲ್ಲಿ ಆಲ್ಫಾನ್ಸೋ ಮಾವಿನ ಹಣ್ಣು, ಅನಾನಸ್, ಆಲೂಗೆಡ್ಡೆ, ಮೆಣಸಿನಕಾಯಿ, ಸಪೋಟ, ಮುಖ್ಯವಾದವುಗಳು. ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಬೆಳೆಯುವ ಉತ್ಕೃಷ್ಟ ಮಟ್ಟದ ವಿಶ್ವ ಪ್ರಸಿದ್ಧ 'ಹಾಪೂಸ್ ಮಾವಿನಹಣ್ಣು'ಗಳ ಗುಣಮಟ್ಟವನ್ನು ಸುಧಾರಿಸಿದ ಖ್ಯಾತಿ ಅವರಿಗೆ ಸೇರಬೇಕು.
ಸಸ್ಯಶಾಸ್ತೀಯ ವರ್ಗೀಕರಣ
[ಬದಲಾಯಿಸಿ]ಇದು ಸಪೋಟೆಸಿ ಕುಟುಂಬಕ್ಕೆ ಸೇರಿದ್ದು,ಮಣಿಕರ ಙಪೋಟ (Manikara zapota)ಎಂದು ಸಸ್ಯಶಾಸ್ತ್ರೀಯ ಹೆಸರು. ಮಹಾರಾಷ್ಟ್ರ ರಾಜ್ಯದಲ್ಲಿ ಈ ಹಣ್ಣನ್ನು 'ಚಿಕ್ಕು' ಎಂಬ ಹೆಸರಿನಿಂದ ಗುರುತಿಸುತ್ತಾರೆ.
ಸಸ್ಯದ ಗುಣಲಕ್ಷಣಗಳು
[ಬದಲಾಯಿಸಿ]ಇದು ಮದ್ಯಮಗಾತ್ರದ ಮರ.ಅಲಂಕಾರಿಕವಾದ ತಿಳಿ ಹಸಿರು ಬಣ್ಣದ ಎಲೆಗಳಿವೆ.ಬಟಾಟೆಯಾಕಾರದ ಕಾಯಿ.ರುಚಿಯಾದ ಹಣ್ಣು.ಹಣ್ಣಿನಲ್ಲಿ ೨ ರಿಂದ ೬ ರವರೇಗೆ ಕಪ್ಪು ಬಣ್ಣದ ಬೀಜಗಳಿರುತ್ತದೆ.ಒಳಗಿನ ಹಣ್ಣು ತಿಳಿ ಹಳದಿ ಬಣ್ಣದಿಂದ ಕಂದು ಬಣ್ಣದ್ದಾಗಿರುತ್ತದೆ.
ಉಪಯೋಗಗಳು
[ಬದಲಾಯಿಸಿ]ಇದರ ಹಣ್ಣು ರುಚಿಯಾಗಿರುತ್ತದೆ.ವಿಟಮಿನ್ ಸಿ ಯುಕ್ತವಾಗಿದೆ.ಇದರ ಹಲವಾರು ತಳಿಗಳು ಬಳಕೆಯಲ್ಲಿದೆ.
ಆಧಾರ ಗ್ರಂಥಗಳು
[ಬದಲಾಯಿಸಿ]೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ