ಬಾಳೆ ಹಣ್ಣು
ಬಾಳೆಹಣ್ಣು
ಬಾಳೆಹಣ್ಣು ಬೆಳೆಯುವ ರಾಜ್ಯಗಳು
[ಬದಲಾಯಿಸಿ]ಬಾಳೆಹಣ್ಣಿಗೆ ಉಗಮಸ್ಥಾನ, ಭಾರತ. ಭಾರತದ ಎಲ್ಲ ರಾಜ್ಯಗಳಲ್ಲೂ ಬಾಳೆಹಣ್ಣು ಬೆಳೆಯುತ್ತಾರೆ. ಹೆಚ್ಚಾಗಿ, ಕರ್ನಾಟಕ, ಕೇರಳ, ಅಸ್ಸಾಂ, ತಮಿಳುನಾಡು, ಆಂಧ್ರ, ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಯೂರೋಪಿಯನ್ನರಲ್ಲಿ ಅಲೆಗ್ಸಾಂಡರ್, ಬಾಳೆಹಣ್ಣನ್ನು ಸವಿದ ಪ್ರಥಮನು. ಅವನು ತನ್ನ ದೇಶಕ್ಕೆ, ಬಾಳೆಹಣ್ಣನ್ನು ಪರಿಚಯಿಸಿದ.ಆಫ್ರಿಕ, ಇಜಿಪ್ಟ್ ನಿಂದ ಅರಬ್ ವರ್ತಕರು, ವಿಶ್ವದಾದ್ಯಂತ ಬಾಳೆಯನ್ನು ಮಾರಾಟಮಾಡಿ ಪ್ರಸಿದ್ಧಪಡಿಸಿದರು
ಬಾಳೆ ತಳಿಯ ವಿದಗಳು
[ಬದಲಾಯಿಸಿ]- ಪುಟ್ಟಬಾಳೆ, ಅಥವಾ ಪುಟ್ಟ ಬಿಳೀ ನಂಜನಗೂಡಿನ ರಸಬಾಳೆ:(ಬಿಸ್ ಸುಗಂಧಿ,ಹೂ ಬಾಳೆ):ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ. ನಾಟಿ ಮಾಡಿದ ೧೫ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ.
- ಪಚ್ಚ ಬಾಳೆ:(ಬಸರಾಯಿ ಬಾಳೆ,ಪಚ್ಛ ಬಾಳೆ,ಕ್ಯಾವಂಡಿಷ್): ಈ ತಳಿಯ ಕಾಯಿಗಳು ಹಣ್ಣಾದರೂ ಹಸಿಯಾಗಿಯೇ ಇರುವುದರಿಂದ 'ಪಚ್ಛ ಬಾಳೆ' ಅಂತಲೂ ಕರೆಯುತ್ತಾರೆ.ಇದು ತಿಡ್ದ ತಳಿಯಾದುದರಿಂದ ಆಧರ ಬೇಕಿಲ್ಲ.
- ಏಲಕ್ಕಿ ಬಾಳೆ.
- ನೇಂದ್ರಬಾಳೆ: ಗಿಡಗಳು ಮದ್ಯಮ ಎತ್ತರ,ನಾಟಿ ಮಾಡಿದ ೧೩ ತಿಂಗಳಲ್ಲಿ ಕೊಯ್ಲಿಗೆ ಬರುತ್ತವೆ. ಇದು ಒಂದು ಅಡುಗೆಗೆ ಬಳಸುವ ತಳಿ.
- ಕದಳಿ ಬಾಳೆ.
- ಕಲ್ಲುಬಾಳೆ
- ಬೂದುಬಾಳೆ.
- ಗಾಳಿ ಬಾಳೆ.
- ಮೈಸೂರು ಬಾಳೆ.
- ಪೂವನ್: ಈ ತಳಿಯ ಗಿಡಗಳು ನೀಳವಾಗಿದ್ದು,ಹಣ್ಣುಗಳು ತಿಳಿಹಳದಿ ಮತ್ತು ತೆಳು ಸಿಪ್ಪೆ ಹೊಂದಿರುತ್ತವೆ.
- ರೊಬಸ್ಟಾ: ಈ ತಳಿಯ ಗೊನೆ ಭಾರವಾಗಿದ್ದು ಹೆಚ್ಚು ಇಳ್ಯುವರಿ ಕೊಡುವ ಈ ತಳಿ ಕೊಯ್ಲಿಗೆ ಬರಲು ೧೩ ತಿಂಗಳು ತೆಗೆದುಕೊಳ್ಳುತ್ತದೆ.
- ಕರಿಬಾಳೆ: ಇದು ಕರ್ನಾಟಕದ ಎಲ್ಲೆಡೆ ಬೆಳೆಯುವ ತಳಿ. ಇವು ರಸಭರಿತವಾಗಿದ್ದು, ತಿರುಳು ರುಚಿಯಾಗಿ ಸುವಾಸನೆಯಾಗಿರುತ್ತದೆ .
- ಕ್ಯಾಂಡಿಸ್.
- ಏಲಕ್ಕಿ ಬಾಳೆ
- ಚಂದ್ರ ಬಾಳೆ
- ಬೆಂಗೂರು ಬೂದಿ
- ಅವುಂಡೆ ಬಾಳೆ
- ರಾಜ ಬಾಳೆ
- ಸಾವಿರ ಕದಳಿ
- ಉದಯಂ ಬಾಳೆ
- ಮೈಸೂರು ಬಾಳೆ
- ಕರಿಬಾಳೆ
- ಬೆಂಕದಳಿ ಕಪ್ಪು
- ಕೆಂಪುಬಾಳೆ
ಭಾರತದ ಉತ್ಪಾದನೆ
[ಬದಲಾಯಿಸಿ]- ನಮ್ಮ ದೇಶದ ಉತ್ಪಾದನೆಯಲ್ಲಿ ಎರಡನೆಯ ಸ್ಥಾನ ಪಡೆದಿರುವ ಹಣ್ಣು ಬಾಳೆ (ಮಾವು ಪ್ರಥಮ ಸ್ಥಾನ). ಭಾರತದಲ್ಲಿ ವಾರ್ಷಿಕ ಸುಮಾರು 29.7 ಮಿಲಿಯನ್ ಮೆಟ್ರಿಕ್ ಟನ್ ಬಾಳೆ ಹಣ್ಣು ಉತ್ಪಾದನೆಯಾಗುತ್ತದೆ.ಇದು ವರ್ಷವಿಡೀ ಲಭ್ಯ ಮಾತ್ರವಲ್ಲದೇ ಅನೇಕ ಔಷಧೀಯ ಗುಣಗಳನ್ನು ಇದು ಹೊಂದಿರುವುದು ವಿಶೇಷ.(ಇಂಗ್ಲಿಷ್-ತಾಣ, ಪ್ರಜಾವಾಣಿ/೧೬/೧೨/೨೦೧೪)
- ಇದು ವಿಶ್ವಾದ್ಯಂತದ ಬೆಳೆಗೆ ಭಾರತವು ಸುಮಾರು 20% ಬಾಳೆಹಣ್ಣು ಬೆಳೆದು, ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನಪಡೆದಿದೆ. ಉಗಾಂಡಾ ಸುಮಾರು 8% ಬೆಳೆದು ಎರಡನೇ ತಯಾರಿಕೆಯ ದೇಶವಾಗಿದೆ.
ವಿಶ್ವದ ಉತ್ಪಾದನೆ
[ಬದಲಾಯಿಸಿ]- ಶ್ರೇಣೀಕೃತ ಕ್ರಮಾಂಕದಲ್ಲಿ ವಿಶ್ವದಲ್ಲಿ ಬಾಳೆಹಣ್ಣು ಉತ್ಪಾದನೆ
ಉತ್ಪಾದನೆ ಮತ್ತು ದೇಶದ (2011) ಮೂಲಕ ಬಾಳೆಹಣ್ಣುಗಳು - ಉತ್ಪಾದನೆ | ||||||||||||||
---|---|---|---|---|---|---|---|---|---|---|---|---|---|---|
ಕ್ರ.ಸಂ | ದೇಶ | ಟನ್-ದಶಲಕ್ಷ | ವಿಶ್ವದ ಶೇಕಡಾವಾರು | . | ಕ್ರ.ಸಂ. | ದೇಶ | ಟನ್-ದಶಲಕ್ಷ | ವಿಶ್ವದ ಶೇಕಡಾವಾರು | ||||||
1 | ಭಾರತ | 29.7 | 20% | 7 | ಇಂಡೋನೇಷ್ಯಾ | 6.1 | 4% | |||||||
2 | ಉಗಾಂಡಾ | 11.1 | 8% | 8 | ಕೊಲಂಬಿಯಾ | 5.1 | 4% | |||||||
3 | ಚೀನಾ | 10.7 | 7% | 9 | ಕ್ಯಾಮರೂನ್ | 4.8 | 3% | |||||||
4 | ಫಿಲಿಪ್ಪೀನ್ಸ್ | 9.2 | 6% | 10 | ಟಾಂಜಾನಿಯಾ | 3.9 | 3% | |||||||
5 | ಈಕ್ವೆಡಾರ್ | 8.0 | 6% | 11 | ಇತರೆ ದೇಶಗಳ -ಒಟ್ಟು | 49.6 | 34% | |||||||
6 | ಬ್ರೆಜಿಲ್ | 7.3 | 5% | 12 | ಒಟ್ಟು ವಿಶ್ವದ ಬೆಳೆ | 145.4 | 100% |
ಬಾಳೆ ಹಣ್ಣಿನಲ್ಲಿರುವ ಆಹಾರಾಂಶಗಳು
[ಬದಲಾಯಿಸಿ]- ಬಾಳೆಹಣ್ಣುಗಳು, ಕಚ್ಚಾ (ಸಾಮಾನ್ಯ ದೈನಂದಿನ ಮೌಲ್ಯ --- ಪ್ರತಿ 100 ಗ್ರಾಂ ನಲ್ಲಿ ಪೌಷ್ಟಿಕಾಂಶಗಳು(3.5 ಔನ್ಸ್)
1.ಶಕ್ತಿ 371 kJ (89 kcal | ಜೀವಸತ್ವಗಳು(ವಿಟಮಿನ್ಸ್) | (ಟ್ರೇಸ್) ಲೋಹಾಂಶಗಳು | ಇತರ ಅಂಶಗಳು |
---|---|---|---|
ಶಕ್ತಿ 371 kJ (89 kcal)
1.ಕಾರ್ಬೋಹೈಡ್ರೇಟ್‍ಗಳು 22,84 ಗ್ರಾಂ 2.ಸಕ್ಕರೆ 12,23 ಗ್ರಾಂ 3.ಆಹಾರದ ಫೈಬರ್ 2.6 ಗ್ರಾಂ 4.ಫ್ಯಾಟ್ 0.33 ಗ್ರಾಂ 5.ಪ್ರೋಟೀನ್ 1.09 ಗ್ರಾಂ |
1.ಥಿಯಾಮೈನ್ (ಬಿ 1) (3%) 0.031 ಮಿಗ್ರಾಂ
2.ರಿಬೋಫ್ಲಾವಿನ್ (B2) (6%) 0.073 ಮಿಗ್ರಾಂ 3.ನಿಯಾಸಿನ್ (B3) (4%) 0.665 ಮಿಗ್ರಾಂ 4.ಪಾಂಟೊಥೆನಿಕ್ ಆಮ್ಲ (ಬಿ 5) (7%) 0.334 ಮಿಗ್ರಾಂ 5.ಜೀವಸತ್ವ B6 (31%) 0.4 ಮಿಗ್ರಾಂ 6.ಫೋಲೇಟ್ (B9) (5%) 20 ಮಿಕ್ರೋಗ್ 7.ಕೋಲೀನ್ (2%) 9.8 ಮಿಗ್ರಾಂ 8.ವಿಟಮಿನ್ ಸಿ (10%) 8.7 ಮಿಗ್ರಾಂ |
1.ಐರನ್ (2%) 0.26 ಮಿಗ್ರಾಂ
2.ಮೆಗ್ನೀಸಿಯಮ್ (8%) 27 ಮಿಗ್ರಾಂ 3.ಮ್ಯಾಂಗನೀಸ್ (13%) 0.27 ಮಿಗ್ರಾಂ 4.ರಂಜಕ (3%) 22 ಮಿಗ್ರಾಂ 5.ಪೊಟ್ಯಾಸಿಯಮ್ (8%) 358 ಮಿಗ್ರಾಂ 6.ಸೋಡಿಯಂ (0%) 1 ಮಿಗ್ರಾಂ 7.ಸತು (2%) 0.15 ಮಿಗ್ರಾಂ |
1.ಫ್ಲೋರೈಡ್ 2.2 ಮಿಕ್ರೋಗ್ |
ಆಹಾರ ಸಂಶೋಧನಾಲಯಗಳ ವರದಿಗಳು
[ಬದಲಾಯಿಸಿ]ಇತ್ತೀಚಿನ ಸಂಶೋಧನೆಗಳ ಪ್ರಕಾರ, ೯೦ ನಿಮಿಷಗಳ ಶ್ರಮದಾಯಕ ಕೆಲಸಕ್ಕೆ ಬೇಕಾಗುವ ಶಕ್ತಿಯನ್ನು ಪೂರೈಸಲು, ಎರಡು ಬಾಳೇಹಣ್ಣುಗಳು ಸಾಕು. ಈ ಹಣ್ಣಿನಲ್ಲಿ ಶಕ್ತಿಯಜೊತೆಗೆ, ನಾರಿನಂಶ, ಹಾಗೂ ೩ ವಿಧದ ಪ್ರಾಕೃತಿಕ ಸಕ್ಕರೆಗಳಿವೆ.
ಪ್ರತಿದಿನ ಇದರ ಸೇವನೆಯಿಂದ, ಅನಾರೋಗ್ಯ ಸಂಬಂಧೀ ಹತ್ತು ಹಲವು ಸಮಸ್ಯೆಗಳಿಂದ ದೂರವಿರಬಹುದಂತೆ.
ನಿತ್ಯದ ಜೀವನದಲ್ಲಿ ಬಳೆಹಣ್ಣಿನ ಉಪಯೋಗದಿಂದ ನಾವು ಉತ್ತಮ ಆರೋಗ್ಯವನ್ನು ಪಡೆಯಬಹುದು
[ಬದಲಾಯಿಸಿ]- ಖಿನ್ನತೆ :
'ಮೈಂಡ್ ಸಂಸ್ಥೆ,,' ಇತ್ತೀಚೆಗೆ ನಡೆಸಿದ, ಸರ್ವೇಕ್ಷಣೆಯ ಪ್ರಕಾರ, ಖಿನ್ನತೆಗೆ ಒಳಗಾದವರು ಒಂದು ಬಾಳೆಹಣ್ಣನ್ನು ಸೇವಿಸಿದ ಬಳಿಕ, ಹೆಚ್ಚಿನವರಲ್ಲಿ ಸುಧಾರಣೆ ಕಂಡುಬಂದಿದೆ. ಟ್ರಿಪ್ಟೋಪ್ಯಾನ್ ಎಂಬ ಪ್ರೋಟೀನ್ ಇದಕ್ಕೆ ಕಾರಣ. ನಮ್ಮ ದೇಹ ಈ ಪ್ರೋಟೀನ್ ನನ್ನು ಸೆರೋಟಿನ್ ಆಗಿ ಪರಿವರ್ತಿಸುತ್ತದೆ. ಇದರಿಂದ ಉದ್ವೇಗಶಮನಗೊಂಡು ಪ್ರಪುಲ್ಲಚಿತ್ತರನ್ನಾಗಿಸುವ ಅಂಶವೆಂದು ಪರಿಗಣಿತವಾಗಿದೆ. ಕಾಡುವ ನಮ್ಮೆಲ್ಲರ ಖಿನ್ನತೆಗೆ ಮಾತ್ರೆಗಳ ಮೊರೆಹೋಗುವಬದಲು, ದಿನಕ್ಕೊಂದು ಬಾಳೆಹಣ್ಣಿನ ಸೇವನೆಯಿಂದ ಉಪಶಮನಪಡೆಯಬಹುದು. ಬಾಳೆಹಣ್ಣಿನಲ್ಲಿರುವ ಬಿ-೬ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಸಮಸ್ಥಿತಿಯಲ್ಲಿರಿಸಿ, ನಮ್ಮ ಮನಸ್ಥಿತಿಯ ಮೇಲೆ ಪರಿಣಾಮವನ್ನುಂಟುಮಾಡುತ್ತದೆ. ಬಾಳೆಹಣ್ಣು ನಮ್ಮ ದೇಹದಲ್ಲಿ ತ್ವರಿತ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಗ್ಲೂಕೋಸ್ ಮಟ್ಟವು ತುಂಬಾ ಹೆಚ್ಚಾಗಿದೆ, ಇದರಿಂದಾಗಿ ನಮ್ಮ ದೇಹವು ಶಕ್ತಿಯನ್ನು ಪಡೆಯುತ್ತದೆ. ಆದ್ದರಿಂದ, ಪ್ರತಿದಿನ ತಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿದರೆ, ಉತ್ತಮ ಶಕ್ತಿ ಮಟ್ಟವನ್ನು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು[೧]. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ರಕ್ತಹೀನತೆ :
ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ, ರಕ್ತಹೀನತೆಯನ್ನು ನೀಗಿಸುತ್ತದೆ.
- ರಕ್ತದೊತ್ತಡ:
ಪೊಟಾಷಿಯಮ್, ಲವಣ ಸಮೃದ್ಧಿಯಾಗಿದ್ದು, ಉಪ್ಪಿನ ಅಂಶ ತೀರಾ ಕಡಿಮೆ. ಇದರಿಂದ ಬಾಳೆಹಣ್ಣು ರಕ್ತದೊತ್ತಡವನ್ನು ತಡೆಗಟ್ಟಲು ಸೂಕ್ತ ಅಸ್ತ್ರ. "ಅಮೆರಿಕದ ಆಹಾರ ಮತ್ತು ಔಷಧಿಗಳ ಆಡಳಿತ ಮಂಡಲಿ" ಕೂಡ ಇತ್ತೀಚೆಗೆ ಅಧಿಕೃತವಾಗಿ ಜಾಹೀರುಗೊಳಿಸಲು, ಅನುಮತಿ ನೀಡಿದೆ.
- ಬುದ್ಧಿಮತ್ತೆ :
ಅಧ್ಯಯನದ ಪ್ರಕಾರ, ಪೊಟಾಷಿಯಮ್ ಜಾಗೃತಗೊಳಿಸುವ ಕೆಲಸದಲ್ಲಿ ನೆರವಾಗಿದೆ.
- ಮಲಬದ್ಧತೆ :
ನಾರಿನ ಅಂಶ ಯತೇಚ್ಛ. ಕೃತಕ ವಿರೇಚಕಗಳಿಲ್ಲದೆ, ಮಲಬದ್ಧತೆಯ ಸಮಸ್ಯೆಯನ್ನು, ಹೋಗಲಾಡಿಸಲು ಅತ್ಯಂತ ಸಹಾಯಕಾರಿ.
- ಜಡತೆ, ಹಾಗೂ ಆಲಸ್ಯ :
ಜೇನುತುಪ್ಪವನ್ನು ಸೇರಿಸಿದ ಬಾಳೆಹಣ್ಣಿನ ಮಿಲ್ಕ್ ಶೇಕ್ ಒಂದು ದಿವ್ಯ ಪಾನಕ. ತಣ್ಣಗಾಗಿಸುವ ಕ್ರಿಯೆ ಬಾಳೆಹಣ್ಣು ಮಾಡಿದರೆ, ಜೇನುತುಪ್ಪ, ರಕ್ತದ ಸಕ್ಕರೆ ಪ್ರಮಾಣವನ್ನು ಸರಿದೂಗಿಸುತ್ತದೆ.
- ಎದೆಯುರಿ :
ಜಠರದಲ್ಲಿ, ಸಹಜ ಪ್ರತ್ಯಾಮ್ಲೀಯಪರಿಣಾಮವನ್ನುಂಟುಮಾಡಿ . ಎದೆಯುರಿಯಿಂದ ಪರಿತಪಿಸುತ್ತಿರುವವರಿಗೂ ಬಾಳೆಹಣ್ಣು ದಿವ್ಯೌಷಧ.
- ಬೆಳಗಿನ ಆನಾರೋಗ್ಯ :
ಎರಡು ಊಟಗಳ ಮಧ್ಯೆ ಒಂದು ಬಾಳೆಹಣ್ಣನ್ನು ಗರ್ಭಿಣಿಸ್ತ್ರೀಯರಿಗೆ ಕೊಡುವುದರಿಂದ ವಾಕರಿಕೆ, ವಾಂತಿ ತಡೆಗಟ್ಟಬಹುದು. ಈ ಹಣ್ಣು, ಬೆಳಗಿನ ಆರೋಗ್ಯದ ಏರುಪೇರುಗಳನ್ನು ನಿಯಂತ್ರಣದಲ್ಲಿಡುತ್ತದೆ.
- ಸೊಳ್ಳೆಕಡಿತ :
ಸಿಪ್ಪೆಯ ಒಳಭಾಗವನ್ನು ಸೊಳ್ಳೆ ಕಡಿದ ಜಾಗಕ್ಕೆ ಚೆನ್ನಾಗಿ ಉಜ್ಜಿ,
- ನರವ್ಯೂಹ :
ಬಿ ವಿಟಮಿನ್ ಸಮೃದ್ಧಿಯಾಗಿರುವುದರಿಂದ ನರವ್ಯೂಹದ ಶಾಂತತೆ ಕಾಪಾಡುವುದರಲ್ಲಿ ಸಹಕಾರಿ.
- ಬೊಜ್ಜು :
ಅತೀವ ಒತ್ತಡದಲ್ಲಿ ಕೆಲಸಮಾಡುವವರು, ಬೊಜ್ಜಿನ ಸಮಸ್ಯೆಗೆ ಹೆಚ್ಚಾಗಿ ಒಳಗಾಗುವರು. ಸುಮಾರು , ೫೦೦೦ ಒಳರೋಗಿಗಳ ಆರೋಗ್ಯಸಮೀಕ್ಷೆಯಿಂದ ದ್ರಡ ಪಟ್ಟಿದೆ. ಹೆಚ್ಚುಒತ್ತಡದಲ್ಲಿ ಕೆಲಸಮಾಡುವವರಿಗೆ, ಊಟಸೇರುವುದಿಲ್ಲ. ಅದಕ್ಕಾಗಿ ಅವರು ಜಂಕ್ ಫುಡ್ (ಕುರುಕಲು ತಿಂಡಿಗಳನ್ನು) ಎಂದು ಕರೆಯಲಾಗುವ, ಚಿಪ್ಸ್, ಚಾಕೊಲೆಟ್, ಮುಂತಾದ ಅಡ್ಡತಿಂಡಿಗಳನ್ನು ತಿನ್ನುತ್ತಾರೆ. ಇದರಿಂದ ಬೊಜ್ಜುಬೆಳೆಯಲು ಸಹಾಯವಾಗುತ್ತದೆ. ಕಾರ್ಬೋಹೈಡ್ರೇಟ್ ಹೆಚ್ಚಾಗಿರುವ ಹಣ್ಣುಗಳ ಸೇವನೆಯಿಂದ ರಕ್ತದ ಸಕ್ಕರೆಯ ಪ್ರಮಾಣವನ್ನು ಕಾಯ್ದುಕೊಂಡು ಅಂತಹ ಅಡ್ಡತಿಂಡಿಗಳ ವಾಂಛೆಯಿಂದ ಮುಕ್ತರಾಗಬಹುದು.
- ಅಲ್ಸರ್ :
ಆಮ್ಲೀಯತೆಯನ್ನು ತಗ್ಗಿಸುತ್ತದೆ. ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ, ಅಲ್ಸರ್ ತೊಂದರೆಯನ್ನು ಶಮನಗೊಳಿಸುತ್ತದೆ.
- ಉಷ್ಣ ನಿಯಂತ್ರಕ :
ದೇಹಕ್ಕೆ ತಂಪು, ಎಂಬ ನಂಬಿಕೆ ವಿಶ್ವದ ಬಹುತೇಕ ಜನಾಂಗಗಳಲ್ಲಿ ಇದೆ. ಥಾಯ್ ಲ್ಯಾಂಡ್ ನಲ್ಲಿ ಗರ್ಭಿಣಿ ಸ್ತ್ರೀಯರು ಬಾಳೆಹಣ್ಣಿನ ಸೇವನೆಯನ್ನು ಮಾಡುವುದು ಸಾಮಾನ್ಯ. ಇದರಿಂದ ಅವರ ದೇಹ ಮತ್ತು ಮನಸ್ಸುಗಳೆರಡರ ಉಷ್ಣತೆ ಕಡಿಮೆಯಾಗಿ, ಹುಟ್ಟಿದ ಮಗುವಿನ ದೇಹಮತ್ತು-ಮನಸ್ಸುಗಳು ಶಾಂತವಾಗಿರಲೆಂಬ ನಂಬಿಕೆ ಇದೆ.
- ಧೂಮಪಾನ ಹಾಗೂ ತಂಬಾಕುಸೇವನೆ :
ಬಿ-೬, ಬಿ-೧೨ ವಿಟಮಿನ್ ಗಳು ಹಾಗೂ ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳು, ನಿಕೊಟಿನ್ನ ಸೆಳೆತದಿಂದ ಹೊರಬರುವಾಗ, ದೇಹದ ಮೇಲಾಗುವ ಪರಿಣಾಮಗಳನ್ನು ನಿಭಾಯಿಸಲು ದೇಹಕ್ಕೆ ಸಹಾಯಮಾಡುತ್ತವೆ.
- ಒತ್ತಡ:
ಪೊಟಾಸಿಯಂ ಪ್ರಮುಖ ಖನಿಜ. ಹೃದಯದ ಬಡಿತವನ್ನು ನಿಯಂತ್ರಿಸುತ್ತದೆ. ಮೆದುಳಿಗೆ ಆಮ್ಲಜನಕವನ್ನು ಪೂರೈಸುತ್ತದೆ. ದೇಹದ ನೀರಿನ ಪ್ರಮಾಣವನ್ನು ಸರಿದೂಗಿಸುತ್ತದೆ. ಪ್ರಪಂಚದ ಮಂಚೂಣಿಯಲ್ಲಿರುವ ಕ್ರೀಡಾಳುಗಳ ಪ್ರಥಮ ಆದ್ಯತೆ- ಸೇಬು. ನಂತರ ಬಾಳೆಹಣ್ಣು. ಇದರಲ್ಲಿ, ೪ ರಷ್ಟು ಪ್ರೋಟಿನ್, ಎರಡುಪಟ್ಟು ಕಾರ್ಬೊ ಹೈಡ್ರೇಟ್, ೩ ಪಟ್ಟು ಫಾಸ್ಫರಸ್, ೫ ಪಟ್ಟು ವಿಟಮಿನ್ ಎ, ಮತ್ತು ಕಬ್ಬಿಣಾಂಶ ಹಾಗೂ ಎರಡುಪಟ್ಟು ಇತರ ವಿಟಮಿನ್, ಹಾಗೂ ಖನಿಜಗಳಿವೆ. ಪೊಟಾಷಿಯಮ್ ಅಂಶಕೂಡ ಸಮೃದ್ಧವಾಗಿದೆ. "ಹೊತ್ತಲ್ಲದ ಹೊತ್ತಿನಲ್ಲಿ ಅದೂ-ಇದು ತಿನ್ನುವಬದಲು ಬಾಳೆಹಣ್ಣಿನಸೇವನೆ ಮಾಡಿದರೆ ಖಂಡಿತವಾಗಿಯೂ ನಮ್ಮ ದೇಹ, ಸುಸ್ಥಿತಿಯಲ್ಲಿರುವುದು ಎಂದು ವೈದ್ಯರು ಹೇಳುತ್ತಾರೆ.
ಕರ್ನಾಟಕದಲ್ಲಿ ಬಾಳೆ
[ಬದಲಾಯಿಸಿ]- ಇಡೀ ದೇಶದ ಬಾಳೆಹಣ್ಣು ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿರುವ ರಾಜ್ಯದಲ್ಲಿ ವರ್ಷಕ್ಕೆ 1,277 ದಶಲಕ್ಷ ಟನ್ ಬಾಳೆ ಉತ್ಪಾದನೆಯಾಗುತ್ತಿದೆ.ಇಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗುವ ಬಾಳೆಯನ್ನು ರಾಜ್ಯವೂ ಸೇರಿದಂತೆ ಹೊರರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಬಾಳೆಯನ್ನು ತೂಕದ ಲೆಕ್ಕದಲ್ಲಿ ಮಾರುವುದು ಹೌದಾದರೂ, ಅದರ ಸಿಪ್ಪೆಗೆ ಬೆಲೆಯೇನೂ ಇಲ್ಲ. ಸುಲಿದು ಬಿಸಾಡುವ ವಸ್ತು. ಗೊಬ್ಬರಕ್ಕೆ ಬಳಸ ಬಹುದಾದ ಸಾಧ್ಯತೆ ಇದೆಯಾದರೂ, ಒಟ್ಟಿಗೆ ಒಂದೆಡೆ ಸಿಪ್ಪೆ ಸೇರಿಸುವ ಸಾಧ್ಯತೆ ಕಡಿಮೆ.
- ಆದರೆ, ಬಾಳೆಯನ್ನು ಬಳಸಿಕೊಂಡು ಜ್ಯೂಸ್, ತಿಂಡಿಯನ್ನು ತಯಾರಿಸುವ ಕಾರ್ಖಾನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಪ್ಪೆ ಸಂಗ್ರಹವಾಗುತ್ತದೆ. ಈ ಸಿಪ್ಪೆಯನ್ನು ಸಾಮಾನ್ಯವಾಗಿ ಬಿಸಾಡಲಾಗುತ್ತದೆ. ಆದರೆ, ಅದೇ ಕಾರ್ಖಾನೆಯಲ್ಲಿ ಅದೇ ಬಾಳೆಹಣ್ಣು ಸಿಪ್ಪೆಯನ್ನು ಬಳಸಿಕೊಂಡು ಜ್ಯೂಸ್ ತಯಾರಿಸುವ ತಂತ್ರಜ್ಞಾನವನ್ನು ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ವಿಜ್ಞಾನಿಗಳು ತಯಾರಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ರುಚಿಕರವಾದ, ನಾರುಯುಕ್ತವಾದ ಆರೋಗ್ಯಕರ ಆಹಾರ ಸೇವನೆಯೂ ಆದಂತೆ ಆಗುತ್ತದೆ.
ಬಾಳೆಹಣ್ಣು ಸಿಪ್ಪೆಯ ಜ್ಯೂಸ್
[ಬದಲಾಯಿಸಿ]- ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ) ವಿಜ್ಞಾನಿಗಳು, ಸಂಸ್ಥೆಯ ‘ತ್ಯಾಜ್ಯ ಪುನರ್ ಬಳಕೆ ತಂತ್ರಜ್ಞಾನ ಯೋಜನೆ’ ಯ ಅಡಿಯಲ್ಲಿ ಈ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಬಾಳೆಯ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶ ಇರುತ್ತದೆ. ಈ ನಾರಿನ ಅಂಶ ದೇಹಕ್ಕೆ ಒಳ್ಳೆಯದು. ಅದರಲ್ಲೂ ಮುಖ್ಯವಾಗಿ ಪಚನ ಕ್ರಿಯೆಗೆ ಅತ್ಯಗತ್ಯವಾದ ಅಂಶ. ಈ ನಾರಿನ ಅಂಶವುಳ್ಳ ಪಾನೀಯವನ್ನು ಸೇವಿಸಿದರೆ ಜೀರ್ಣಾಂಗದ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ಉದ್ದೇಶವನ್ನೇ ಮುಖ್ಯವಾಗಿ ಗಮನದಲ್ಲಿ ಇರಿಸಿಕೊಂಡು ಈ ತಂತ್ರಜ್ಞಾನ ಅಭಿವೃದ್ಧಿಯಾಗಿದೆ.
- ಬಾಳೆಯ ಸಿಪ್ಪೆಯನ್ನು ಸಂಸ್ಕರಿಸಿ ಮೃದು ಭಾಗವನ್ನು ಬೇರ್ಪಡಿಸಲಾಗುತ್ತದೆ. ನಂತರ ಅದಕ್ಕೆ ಕೆಲವು ಆಹಾರ ರಾಸಾಯನಿಕಗಳನ್ನು ಸೇರಿಸಿ ಪಾನೀಯ ಸಿದ್ಧಪಡಿಸಲಾಗುತ್ತದೆ. ಅತಿ ಹೆಚ್ಚು ಕಾಲ ಕೆಡದಂತೆ ಸಾಮಾನ್ಯ ವಾತಾವರಣ ಪರಿಸ್ಥಿತಿಯಲ್ಲೂ ಇರುವಂತೆ ಈ ತಂತ್ರ ಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
- ಬಾಳೆಹಣ್ಣು ಮತ್ತು ಬಾಳೆಹಣ್ಣಿನ ಸಿಪ್ಪೆಗಳು ಅವುಗಳ ಪಕ್ವತೆಯ ಮಟ್ಟವನ್ನು ಅವಲಂಬಿಸಿ ವಿಭಿನ್ನ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪಕ್ವವಾಗದ, ಹಸಿರು ಬಾಳೆಹಣ್ಣುಗಳು ಜೀರ್ಣಕಾರಿ ಸಮಸ್ಯೆಗಳ ಚಿಕಿತ್ಸೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ, ಜೊತೆಗೆ ಪಕ್ವ ಬಾಳೆಹಣ್ಣುಗಳು ಬಿಳಿ ರಕ್ತ ಕಣಗಳು ರೋಗ ಮತ್ತು ಸೋಂಕಿನಿಂದ ಹೋರಾಡಲು ಸಹಾಯ ಮಾಡುತ್ತವೆ.[೨]
- ಕಿಡ್ನಿಯಲ್ಲಿ ಕಲ್ಲು ಕರಗಿಸುವುದು ಹಾಗೂ ತೂಕ ಇಳಿಸಿಕೊಳ್ಳಲು ಈ ಬಾಳೆ ಸಿಪ್ಪೆಯ ಜ್ಯೂಸ್ ಸಹಕಾರಿ. ಈ ಜ್ಯೂಸ್ ಅನ್ನು ನಿತ್ಯ ಸೇವಿಸುವ ಮೂಲಕ ಆರೋಗ್ಯವನ್ನು ಉತ್ತಮವಾಗಿ ಇಟ್ಟು ಕೊಳ್ಳಲು ಸಾಧ್ಯವಿದೆ ಎಂದು ಸಂಸ್ಥೆಯ ವಿಜ್ಞಾನಿಗಳು ಪ್ರತಿಪಾದಿಸುತ್ತಾರೆ. (ಸಿಪ್ಪೆಗೂ ಸೇರಿದಂತೆ ಹಣ ಪಡೆಯುವ ಸಾಧ್ಯತೆ ಇನ್ನುಮುಂದೆ ಬರ ಬಹುದು. ಹಾಗಾಗಿ, ರೈತರ ಸಬಲೀ ಕರಣಕ್ಕೂ ಈ ತಂತ್ರಜ್ಞಾನ ಅನುಕೂಲ ಕಾರಿಯಾಗಲಿದೆ ಎಂದು ಸಂಸ್ಥೆಯ ನಿರ್ದೇಶಕ ರಾಮ್ ರಾಜಶೇಖರನ್ ತಿಳಿಸಿದ್ದಾರೆ.[[೩]
ಉಲ್ಲೇಖ
[ಬದಲಾಯಿಸಿ]- ಭಾರತದ ಉತ್ಪಾದನೆ&ವಿಶ್ವದ ಉತ್ಪಾದನೆ-ಆಹಾರಾಂಶ:https://en.wikipedia.org/wiki/Banana
- ↑ "ಬಾಳೆಹಣ್ಣಿನ ಆರೋಗ್ಯ ಪ್ರಯೋಜನಗಳು". kannadanews.today.
- ↑ "ಬಾಳೆಹಣ್ಣು ಸಿಪ್ಪೆ ಪ್ರಯೋಜನಗಳು". kannadanews.today.
- ↑ http://www.prajavani.net/news/article.php?data=2016_11_14/451969[ಶಾಶ್ವತವಾಗಿ ಮಡಿದ ಕೊಂಡಿ] ಬಾಳೆ ಸಿಪ್ಪೆಯಿಂದಲೂ ಜ್ಯೂಸ್ ತಯಾರಿ!;ನೇಸರ ಕಾಡನಕುಪ್ಪೆ;14 Nov, 2016]