ಪಿ.ಲಂಕೇಶ್
ಪಿ.ಲಂಕೇಶ್ | |
---|---|
ಜನನ | ಪಾಳ್ಯದ ಲಂಕೇಶಪ್ಪ ೮ ಮಾರ್ಚ್ ೧೯೩೫ ನಿಟ್ಟೂರು, ಶಿವಮೊಗ್ಗ ಜಿಲ್ಲೆ |
ಮರಣ | 25 January 2000 ಬೆಂಗಳೂರು, ಕರ್ನಾಟಕ, ಭಾರತ | (aged 64)
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ಲೇಖಕ, ಸಂಪಾದಕ, ನಿರ್ಮಾಪಕ, ಕವಿ, ನಾಟಕಕಾರ, ಅಧ್ಯಾಪಕ,ನಟ |
ಹೆಸರಾಂತ ಕೆಲಸಗಳು | ಕೆರೆಯ ನೀರನು ಕೆರೆಗೆ ಚೆಲ್ಲಿ (೧೯೬೦) ಮುಸ್ಸಂಜೆಯ ಕಥಾ ಪ್ರಸಂಗ (೧೯೭೮) ಕಲ್ಲು ಕರಗುವ ಸಮಯ (೧೯೯೦) |
ಸಂಗಾತಿ | ಇಂದಿರಾ ಲಂಕೇಶ್ |
ಮಕ್ಕಳು | ಗೌರಿ ಲಂಕೇಶ್, ಕವಿತಾ ಲಂಕೇಶ್, ಇಂದ್ರಜಿತ್ ಲಂಕೇಶ್ |
ಪ್ರಶಸ್ತಿಗಳು | ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೩) ರಾಷ್ಟ್ರಪ್ರಶಸ್ತಿ - ಅತ್ಯುತ್ತಮ ನಿರ್ದೇಶಕ |
ಪಾಳ್ಯದ ಲಂಕೇಶ್, ಅಥವಾ ಪಿ. ಲಂಕೇಶ್ ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರು.[೧] ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ನಟ, ನಿರ್ದೇಶಕ -ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಇದು ಪತ್ರಿಕೋದ್ಯೋಗಿಯಾಗಿ ಹೆಸರು ಮಾಡಿರುವ ಲಂಕೇಶರು ಪ್ರಸಿದ್ದಿ ಪಡೆದದ್ದು ನಾಟಕಕಾರರಾಗಿ. ನಾಟಕ ಕ್ಷೇತ್ರಕ್ಕೆ ಅವರು ಕೊಟ್ಟಿರುವ ನಾಟಕಗಳು ಅನೇಕ.
ಜನನ, ವಿದ್ಯಾಭ್ಯಾಸ
[ಬದಲಾಯಿಸಿ]ಇವರು ಮಾರ್ಚ್ ೮, ೧೯೩೫ ರಂದು ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲೂಕಿನ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು. ಶಿವಮೊಗ್ಗದಲ್ಲಿ ಪ್ರೌಢಶಾಲೆ ಹಾಗೂ ಇಂಟರ್ ಮೀಡಿಯೇಟ್ (ಸಹ್ಯಾದ್ರಿ ಕಾಲೇಜ್) ಓದಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ( ಆನರ್ಸ್ ) ಪದವಿಯನ್ನು ಹಾಗು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿಯನ್ನು ಪಡೆದರು.
ವೃತ್ತಿ ಜೀವನ
[ಬದಲಾಯಿಸಿ]ಸಹ್ಯಾದ್ರಿ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ೧೯೫೯ರಲ್ಲಿ ವೃತ್ತಿಜೀವನ ಪ್ರಾರಂಭಿಸಿದರು.[೨] ೧೯೬೨ರ ವರೆಗೆ ಅಲ್ಲಿಯೇ ಮುಂದುವರೆಸಿರಿದರು. ೧೯೬೨ ರಿಂದ ೧೯೬೫ರವರೆಗೆ ಬೆಂಗಳೂರು ಸೆಂಟ್ರೆಲ್ ಕಾಲೇಜ್ ಮತ್ತು ಸರ್ಕಾರಿ ಕಾಲೇಜಿನಲ್ಲಿ, ೧೯೬೬ರಿಂದ ೧೯೭೮ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ೧೯೭೯ರ ಸುಮಾರಿಗೆ ಲಂಕೇಶರು ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ತಮ್ಮದೆ ಆದ ಲಂಕೇಶ್ ಪತ್ರಿಕೆ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು.ಇಂದು ಪತ್ರಿಕೋದ್ಯೋಗಿಯಾಗಿ ಹೆಸರು ಮಾಡಿರುವ ಲಂಕೇಶರು ಪ್ರಸಿದ್ದಿ ಪಡೆದದ್ದು ನಾಟಕಕಾರರಾಗಿ. ನಾಟಕ ಕ್ಷೇತ್ರಕ್ಕೆ ಅವರು ಕೊಟ್ಟಿರುವ ನಾಟಕಗಳು ಅನೇಕ. ಗ್ರೀಕ್ ರಂಗಭೂಮಿಯ ರುದ್ರನಾಟಕ ‘’ಈಡಿಪಸ್’’ ಕಲಾಕ್ಷೇತ್ರದ ಬಯಲು ರಂಗಭೂಮಿಯಲ್ಲಿ ಅತ್ಯಂತ ಯಶಸ್ವಿಯಾಗಿದ್ದಕ್ಕೆ ಅವರ ಸಮರ್ಥ ಭಾಷಾಂತರವೂ ಒಂದು ಕಾರಣ. ಅಲ್ಲದೆ,ಅವರದೇ ಸ್ವಂತ ನಾಟಕಗಳಾದ ‘’ತೆರೆಗಳು’’, ’’ಸಂಕ್ರಾಂತಿ’’,ಇವು ನಾಟಕ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲು.ಶ್ರೀಯುತರ ಪ್ರತಿಭೆ ಕೇವಲ ನಾಟಕ ಕ್ಷೇತ್ರಕ್ಕೆ ಮೀಸಲಾದದ್ದಲ್ಲ. ‘ಮುಸ್ಸಂಜೆಯ ಕಥಾ ಪ್ರಸಂಗ’ ಹಾಗೂ ‘ಬಿರಿಕು’ ಅವರ ಕಾದಂಬರಿಗಳು. ‘’ಬಿರುಕು’’ ನಾಟಕವೂ ಆಯಿತು.’’ಅಕ್ಷರ ಹೊಸ ಕಾವ್ಯ’’ ಅವರು ಸಂಪಾದಿಸಿದ ಅಧುನಿಕ ಕಾವ್ಯಗಳ ಸಂಕಲನ. ‘ಪಲ್ಲವಿ’,’ಅನುರೂಪ’,’ಎಲ್ಲಿಂದಲೋ ಬಂದವರು’ ಇವು ಅವರು ನಿರ್ದೇಶಿಸಿದ ಚಿತ್ರಗಳು.ಯಶಸ್ವಿ ಸಣ್ಣ ಕಥೆಗಳನ್ನು,ಬಿಚ್ಚುಮನಸಿನ ಹಾಗೂ ಮೊನಚಿನ ವಿಮರ್ಶಾ ಲೇಖನಗಳನ್ನು ಲಂಕೇಶರು ಬರೆದಿದ್ದಾರೆ. ''ಪಲ್ಲವಿ'' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. ''ಅನುರೂಪ''ಕ್ಕೆಪ್ರಾಂತೀಯ ಪ್ರಶಸ್ತಿ ಲಭಿಸಿದೆ. ಇವರು ಉತ್ತಮ ಬರಹಗಾರರು ಮತ್ತು ನಾಟಕ ಕಾರರು .
ಲಂಕೇಶ್ ಪತ್ರಿಕೆ
[ಬದಲಾಯಿಸಿ]ವಿಮರ್ಶೆಗಳು, ಅಂಕಣಗಳು ಮುಂತಾದ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಈ ಟ್ಯಾಬ್ಲಾಯ್ಡ್ ವಾರಪತ್ರಿಕೆ ಜನಪ್ರಿಯವಾಯಿತು. ಹೊಸ ಸಾಹಿತಿಗಳ ಸೃಷ್ಟಿಗೆ ಲಂಕೇಶ್ ಪತ್ರಿಕೆ ಕೊಡುಗೆ ನೀಡಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಡಾ. ಸಿ ಎಸ್ ದ್ವಾರಕಾನಾಥ್, ರವೀಂದ್ರ ರೇಷ್ಮೆ, ಸಿರೂರು ರೆಡ್ಡಿ, ಪ್ರೊ. ಬಿ ವಿ ವೀರಭದ್ರಪ್ಪ, ಬಿ. ಕೃಷ್ಣಪ್ಪ, ಪುಂಡಲೀಕ ಶೇಠ್, ಕೋಟಗಾನಹಳ್ಳಿ ರಾಮಯ್ಯ, ಅಬ್ದುಲ್ ರಶೀದ್, ನಟರಾಜ್ ಹುಳಿಯಾರ್,, ಹೆಚ್.ಎಲ್. ಕೇಶವಮೂರ್ತಿ, ಬಿ.ಚಂದ್ರೇಗೌಡ, ಬಾನು ಮುಸ್ತಾಕ್, ವೈದೇಹಿ, ಸಾರಾ ಅಬೂಬುಕರ್, ಇನ್ನೂ ಅನೇಕರು ಲಂಕೇಶ್ ಪತ್ರಿಕೆಯ ಕೊಡುಗೆ.
ಕೃತಿಗಳು
[ಬದಲಾಯಿಸಿ]ಲಂಕೇಶರ ಮೊದಲ ಕಥಾಸಂಕಲನ ಕೆರೆಯ ನೀರನು ಕೆರೆಗೆ ಚೆಲ್ಲಿ ೧೯೬೩ರಲ್ಲಿ ಪ್ರಕಟವಾಯಿತು
ನಾಟಕಗಳು
[ಬದಲಾಯಿಸಿ]- ಬಿರುಕು (೧೯೭೩)
- ಈಡಿಪಸ್ ಮತ್ತು ಅಂತಿಗೊನೆ (೧೯೭೧)
- ಗುಣಮುಖ (೧೯೯೩)
- ನನ್ನ ತಂಗಿಗೊಂದು ಗಂಡು ಕೊಡಿ (೧೯೬೩)
- ತೆರೆಗಳು (೧೯೬೪)
- ಟಿ. ಪ್ರಸನ್ನನ ಗೃಹಸ್ಥಾಶ್ರಮ (೧೯೬೪)
- ಕ್ರಾಂತಿ ಬಂತು ಕ್ರಾಂತಿ (೧೯೬೫)
- ಸಂಕ್ರಾಂತಿ (೧೯೭೧)
ಕಥಾ ಸಂಗ್ರಹ
[ಬದಲಾಯಿಸಿ]- ಕೆರೆಯ ನೀರನು ಕೆರೆಗೆ ಚೆಲ್ಲಿ ೧೯೬೩
- ನಾನಲ್ಲ ೧೯೭೦
- ಉಮಾಪತಿ ಯ ಸ್ಕಾಲರ್ ಶಿಪ್ ಯಾತ್ರೆ ೧೯೭೩
- ಕಲ್ಲು ಕರಗುವ ಸಮಯ ೧೯೯೦
- ಉಲ್ಲಂಘನೆ ೧೯೯೬
- ಮಂಜು ಕವಿದ ಸಂಜೆ ೨೦೦೧
- ಸಮಗ್ರ ಕಥೆಗಳು (ಸಮಗ್ರ ಸಂಕಲನ)
ಕಾದಂಬರಿಗಳು
[ಬದಲಾಯಿಸಿ]- ಬಿರುಕು (೧೯೬೭)
- ಮುಸ್ಸಂಜೆಯ ಕಥಾಪ್ರಸಂಗ (೧೯೭೮)
- ಅಕ್ಕ (೧೯೯೧)
ಅಂಕಣ ಬರಹಗಳ ಸಂಗ್ರಹ
[ಬದಲಾಯಿಸಿ]- ಪ್ರಸ್ತುತ (೧೯೭೦)
- ಕಂಡದ್ದು ಕಂಡಹಾಗೆ (೧೯೭೫)
- ಟೀಕೆ ಟಿಪ್ಪಣಿ - ೧ (೧೯೯೭)
- ಟೀಕೆ ಟಿಪ್ಪಣಿ - ೨ (೧೯೯೭)
- ಟೀಕೆ ಟಿಪ್ಪಣಿ - ೩ (೨೦೦೮)
- ರೂಪಕ ಲೇಖಕರು (೨೦೦೮)
- ಸಾಹಿತಿ ಸಾಹಿತ್ಯ ವಿಮರ್ಶೆ (೨೦೦೮)
- ಮರೆಯುವ ಮುನ್ನ - ಸಂಗ್ರಹ ೧ (೨೦೦೯)
- ಈ ನರಕ ಈ ಪುಲಕ (೨೦೦೯)
- ಮರೆಯುವ ಮುನ್ನ - ಸಂಗ್ರಹ ೨ (೨೦೧೦)
- ಮರೆಯುವ ಮುನ್ನ - ಸಂಗ್ರಹ ೩
- ಮನಕೆ ಕಾರಂಜಿಯ ಸ್ಪರ್ಶ (೨೦೧೦)
- ಆಟ-ಜೂಜು-ಮೋಜು!
- ಪಾಂಚಾಲಿ
ಕವನ ಸಂಗ್ರಹಗಳು
[ಬದಲಾಯಿಸಿ]- ಬಿಚ್ಚು
- ನೀಲು ಕಾವ್ಯ - ಸಂಗ್ರಹ ೧
- ನೀಲು ಕಾವ್ಯ - ಸಂಗ್ರಹ ೨
- ನೀಲು ಕಾವ್ಯ - ಸಂಗ್ರಹ ೩
- ಚಿತ್ರ ಸಮೂಹ (ಸಮಗ್ರ ಸಂಕಲನ)
- ಅಕ್ಷರ ಹೊಸ ಕಾವ್ಯ
- ಪಾಪದ ಹೂಗಳು
- ತಲೆಮಾರು
ಆತ್ಮಕಥೆ
[ಬದಲಾಯಿಸಿ]- ಹುಳಿ ಮಾವಿನಮರ (ಇದರಲ್ಲಿ ಮಾವಿನ ಮರದ ಜೀವನ ಘಟ್ಟಗಳಂತೆ ತಮ್ಮ ಜೀವನ ಕಥನವನ್ನು ನಿರೂಪಿಸಿದ್ದಾರೆ)
ಚಲನಚಿತ್ರ ರಂಗ
[ಬದಲಾಯಿಸಿ]ನಿರ್ದೇಶಕನಾಗಿ
[ಬದಲಾಯಿಸಿ]- ಪಲ್ಲವಿ, ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ 'ಅತ್ಯುತ್ತಮ ನಿರ್ದೇಶಕ' ಎಂದು ಪ್ರಶಸ್ತಿ ಲಭಿಸಿದೆ.
- ಅನುರೂಪ
- ಖಂಡವಿದೆ ಕೊ ಮಾಂಸವಿದೆ ಕೊ
- ಎಲ್ಲಿಂದಲೊ ಬಂದವರು
- ಮುಸ್ಸಂಜೆಯ ಕಥಾ ಪ್ರಸಂಗ.
ನಟನಾಗಿ
[ಬದಲಾಯಿಸಿ]ಲಂಕೇಶ್ ಅವರು ಸಂಸ್ಕಾರ ಚಲನಚಿತ್ರದಲ್ಲಿ ನಾರಣಪ್ಪನ ಪಾತ್ರವನ್ನು ಅಭಿನಯಿಸಿದ್ದಾರೆ. ಜೊತೆಗೆ 'ಎಲ್ಲಿಂದಲೋ ಬಂದವರು' [೩] ಚಲನಚಿತ್ರದಲ್ಲೂ ನಟಿಸಿದ್ದಾರೆ.[೪]
ಪ್ರಶಸ್ತಿ/ಪುರಸ್ಕಾರ
[ಬದಲಾಯಿಸಿ]- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೩ -'ಕಲ್ಲು ಕರಗುವ ಸಮಯ' - ಸಣ್ಣ ಕತೆಗಳ ಸಂಗ್ರಹ
- ಪಲ್ಲವಿ- ಕನ್ನಡ ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ 'ಅತ್ಯುತ್ತಮ ನಿರ್ದೇಶಕ' ಎಂದು ರಾಷ್ಟ್ರಪ್ರಶಸ್ತಿ ಲಭಿಸಿದೆ (೧೯೭೭).
- ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ೧೯೮೬
- ಬಿ.ಎಚ್. ಶ್ರೀಧರ ಪ್ರಶಸ್ತಿ
- ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ
- ಆರ್ಯಭಟ ಸಾಹಿತ್ಯ ಪ್ರಶಸ್ತಿ
ಉಲ್ಲೇಖಗಳು
[ಬದಲಾಯಿಸಿ]- ↑ E0%B2%95%E0%B3%87% E0%B2 %B6%E0%B3%8D ಕಣಜ, ೦೫-೦೧-೨೦೦೦
- ↑ "ಲಂಕೇಶ್, 'ಕವನ ಸಂಗ್ರಹ',". Archived from the original on 2012-04-26. Retrieved 2014-03-06.
- ↑ http://cinibuzz.in/ಲಂಕೇಶ್-ಮತ್ತು
- ↑ 'ಪಿ.ಲಂಕೇಶ್ ಎಂಬ ಹೆಸರೇ ವಿಸ್ಮಯ,' One India, (kannada), ಜನವರಿ,೨೫,೨೦೧೦