ಲಂಕೇಶ್ ಪತ್ರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದ ಪತ್ರಿಕಾ ರಂಗದಲ್ಲಿ 'ಕ್ರಾಂತಿ' ಮಾಡಿದ ಪತ್ರಿಕೆಗಳಲ್ಲೊಂದು. ಬೆಂಗಳೂರಿನ ಬಸವನಗುಡಿಯಿಂದ ಪ್ರಕಾಶಿಸಲ್ಪಡುತ್ತಿದೆ. ಕನ್ನಡದ ಪ್ರಮುಖ ಕತೆಗಾರ ಮತ್ತು ಸಿನಿಮಾ ನಿರ್ದೇಶಕರಾದ ಪಿ.ಲಂಕೇಶ್ ಅವರು ಇದರ ಸ್ಥಾಪಕ ಸಂಪಾದಕರು. ಜಾಹೀರಾತುಗಳಿಲ್ಲದೆಯೇ ಪ್ರತಿ ವಾರ ಪ್ರಕಟವಾಗುತ್ತಿರುವುದು ಇದರ ಹೆಗ್ಗಳಿಕೆ. ಈಗ ಕನ್ನಡ ಚಲನಚಿತ್ರ ನಿರ್ದೇಶಕರೂ ಆಗಿರುವ ಲಂಕೇಶ್ ಅವರ ಪುತ್ರ ಇಂದ್ರಜಿತ್ ಲಂಕೇಶ್ ಈ ಪತ್ರಿಕೆಯ ಪ್ರಕಾಶಕರಾಗಿದ್ದಾರೆ.

ಜಾಣ ಜಾಣೆಯರ ಪತ್ರಿಕೆ ಎಂಬುದು ಈ ಪತ್ರಿಕೆಯ ಮುಖಪುಟದಲ್ಲಿನ ತಲೆಬರಹ.