ವಿಷಯಕ್ಕೆ ಹೋಗು

ಸಂಸ್ಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಸ್ಕಾರಗಳು ಹಿಂದೂ ಧರ್ಮ (ವೈದಿಕ), ಜೈನಧರ್ಮ ಮತ್ತು ಬೌದ್ಧಧರ್ಮದಲ್ಲಿನ ಕೆಲವು ತತ್ವ,ಸಿದ್ಧಾಂತದ ಧಾರ್ಮಿಕ ಅನುಯಾಯಿಗಳಲ್ಲಿ ಬದಲಾಗುವ ಸ್ವೀಕೃತಿಯನ್ನು ಪಡೆಯುವ ಸರಿಯುವಿಕೆಯ ವಿಧಿಗಳು. ಆಧುನಿಕ ನುಡಿಯಲ್ಲಿ ಸಂಸ್ಕಾರವು ಸಾಂಸ್ಕೃತಿಕ ಪರಂಪರೆ ಮತ್ತು ಲಾಲನೆ-ಪಾಲನೆಯನ್ನು ಸೂಚಿಸುತ್ತದೆ. ಸಂಸ್ಕಾರಗಳು ಪವಿತ್ರ ವಿಧಿಗಳು, ತ್ಯಾಗಗಳು ಮತ್ತು ಧಾರ್ಮಿಕ ಕ್ರಿಯಾವಿಧಿಗಳ ಒಂದು ಸರಣಿ ಮತ್ತು ಮಾನವ ಜೀವನದ ವಿವಿಧ ಘಟ್ಟಗಳನ್ನು ಗುರುತುಮಾಡುತ್ತವೆ ಮತ್ತು ಒಂದು ನಿರ್ದಿಷ್ಟ ಆಶ್ರಮಕ್ಕೆ ಪ್ರವೇಶವನ್ನು ಸೂಚಿಸುತ್ತವೆ.

ಪೀಠಿಕೆ

[ಬದಲಾಯಿಸಿ]
ಸಂಸ್ಕಾರಗಳು
ಸಂಸ್ಕಾರ-(ಸಂಸ್ಕೃತ:संस्कार) ; ಧರ್ಮ ಮಾರ್ಗದಲ್ಲಿ ನಡೆಯಲು ಅರ್ಹತೆ ಪಡೆಯಲು ಒಂದು ವ್ಯಕ್ತಿಗೆ ಮಾಡುವ ಧಾರ್ಮಿಕ ಕ್ರಿಯೆಗಳು ಧಾರ್ಮಿಕ ಹಿಂದೂಧರ್ಮ (ವೈದಿಕ), ಜೈನಧರ್ಮ ಅನುಯಾಯಿಗಳು ಮತ್ತು ಬೌದ್ಧ ವಿಚಾರಧಾರೆಯ ಕೆಲವು ಪಂಥಗಳಲ್ಲಿ ವೈವಿಧ್ಯಮಯ ಧಾರ್ಮಿಕ ಕ್ರಿಯೆಗಳು ಇವೆ.
ಸಂಸ್ಕಾರ ಪದವು ಸಾಮಾನ್ಯವಾಗಿ ಆಧುನಿಕ ವಿಚಾರದಲ್ಲಿ "ಸಾಂಸ್ಕೃತಿಕ ಪರಂಪರೆ ಮತ್ತು ಅಭಿವೃದ್ಧಿ" ಯನ್ನು ಸೂಚಿಸುತ್ತದೆ. ಉತ್ತಮ ನಡತೆ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಸಂಸ್ಕಾರ ವಂತ/ಸಂಸ್ಕಾರ ಉಳ್ಳವನು ಎಂಬುದು, ಸಾರ್ವತ್ರಿಕವಾಗಿ, ಸರಿಯಾದ ನಡತೆ ಮತ್ತು ವರ್ತನೆಯನ್ನು ಹೊಂದಿರುವ ಯಾರನ್ನಾದರೂ ಸೂಚಿಸುತ್ತದೆ. ಸಭ್ಯ -ಸರಿಯಾದ ನಡತೆಯುಳ್ಳವ- ಎನ್ನುವುದಕ್ಕೆ ಸಾಮಾನ್ಯವಾಗಿ ಈ ಪದ ಬಳಸಲಾಗುತ್ತದೆ.
ಹಿಂದೂ ಧರ್ಮ/ವೈದಿಕ ಧರ್ಮ
ಸಂಸ್ಕಾರ (samskāra -sanskaar) )ವು ಅನೇಕ ಪವಿತ್ರ ವಿಧಿಗಳನ್ನು, ವೈದಿಕ ಬಲಿಗಳನ್ನು /ತ್ಯಾಗ ಮತ್ತು ಮಾನವ ಜೀವನದ ವಿವಿಧ ಹಂತಗಳಲ್ಲಿ ಗುರುತಿಸಲು ಮತ್ತು ನಿರ್ದಿಷ್ಟ ಆಶ್ರಮಕ್ಕೆ ಪ್ರವೇಶಕ್ಕೆ ಅಧಿಕಾರವನ್ನು ಪಡೆಯಲು ಅಥವಾ (ಜೀವನದ ಹಂತವನ್ನು) ಸೂಚಿಸುವುದಕ್ಕಾಗಿ ನಡೆಸುವ ಆಚರಣೆಗಳಲ್ಲಿ ಒಂದು. ಈ ಸಂಸ್ಕಾರ ಸರಣಿಯು. ಎಲ್ಲಾ ಮಾನವರು ಒಂದು / ಅನೇಕ ಧಾರ್ಮಿಕವಾದ ಸದ್ಗುಣವನ್ನು, ವೇದ ಸೂತ್ರವೊಂದರ ಅನುಗುಣವಾಗಿ, ದೇವರುಗಳ, ಪೂರ್ವಜರ ಮತ್ತು ಪಾಲಕರಿಗಾಗಿ ಅರ್ಪಿಸುವ ಕರ್ತವ್ಯದ ಜೊತೆ ಧಾರ್ಮಿಕ ಕ್ರಿಯೆಗಳನ್ನು ನಿರ್ವಹಿಸಲು ಮತ್ತು ದ್ವಿಜನಾಗಲು ಅಥವಾ ಈ ಕ್ರಿಯೆಗಳ ಆಚರಣೆಯನ್ನು ಪಾಲಿಸಲು (ದ್ವಿಜ =ಎರಡನೇ ಬಾರಿ ಹುಟ್ಟಿದಂತೆ ಆಗಲು) ಈ ಸಂಸ್ಕಾರಗಳ ಕ್ರಿಯೆ ನೆಡೆಸುವ/ಮಾಡುವ ಅಗತ್ಯವಿದೆ. ಮೂಲತಃ ಈ ಎಲ್ಲಾ ಆಚರಣೆಗಳನ್ನು ವ್ಯಕ್ತಿಯ ಪ್ರಕೃತಿಯ (ದೇಹ, ಮನಸ್ಸು, ಇಂದ್ರಿಯಗಳು-ಅಂತರಂಗ) ಶುದ್ಧೀಕರಣದ ಮತ್ತು / ಅಥವಾ ಉತ್ತಮ ಗುಣಗಳನ್ನು ಪಡೆಯಲು /ಕೊಡಲು, ವ್ಯಕ್ತಿಗೆ ಧಾರ್ಮಿಕ-ಆಧ್ಯಾತ್ಮಿಕ ಜ್ಞಾನ ಮತ್ತು ಧಾರ್ಮಿಕ-ಆಚರಣೆಗಳನ್ನು ಅಭ್ಯಾಸ ಮಾಡುವ/ ಆಚರಣೆ ಮಾಡುವ , ಅದರ ನಡುವಿನ ಸಂಬಂಧವನ್ನು ಬೆಳೆಸುವ ಕ್ರಿಯೆ. ಇದು ಆಳವಾದ ಧಾರ್ಮಿಕ ಆಧ್ಯಾತ್ಮಿಕ ಜ್ಞಾನವನ್ನು ವ್ಯಕ್ತಿಯೊಬ್ಬನಿಂದ ಅಥವಾ ವೇದ ಪ್ರಣೀತ ಧಾರ್ಮಿಕ ಪ್ರಕ್ರಿಯೆಯು ನಡೆಯುವುದರಿಂದ ಪಡೆಯುವುದು ಇರಬಹುದು/ ಕೊಡುವುದು ಇರಬಹುದು. ಈ ಆಚರಣೆಗಳಲ್ಲಿ ನಿರತನಾಗಿರುವ ವ್ಯಕ್ತಿಯು/ಸಂಸ್ಕಾರ ಪಡೆಯುವ ವ್ಯಕ್ತಿಯು ಧಾರ್ಮಿಕ ಕ್ರಿಯಾವಿಧಿ ಜ್ಞಾನವನ್ನು ಹೊಂದಿರದೇ ಇರಬಹುದು. [1]
ಮಂತ್ರೋಕ್ತವಾದ ಧಾರ್ಮಿಕ ವಿಧಿಪೂರ್ವಕ ಮಾಡುವ ಸಂಸ್ಕಾರ ಕ್ರಿಯೆಗಳನ್ನು- ಧಾರ್ಮಿಕ ಸಂಸ್ಕಾರ ಅಥವಾ ವೈದಿಕ ಸಂಸ್ಕಾರ ಎಂದು ಹೇಳುತ್ತಾರೆ.
ಹೆಚ್ಚಿನ ವೈದಿಕ ಆಚರಣೆಗಳು ಹೋಮವನ್ನು ಒಳಗೊಂಡಿರುತ್ತವೆ - ನಿರ್ದಿಷ್ಟ ದೇವತೆಯ ಅಥವಾ ದೇವರ ಗೌರವಾರ್ಥವಾಗಿ ಅರ್ಹ ಪುರೋಹಿತರು (ವೇದ ಮಂತ್ರ ಪ್ರಯೋಗ ಬಲ್ಲವರು) ವೇದಗಳ ಪಠಣದ ಜೊತೆಗೆ ವಿಸ್ತಾರವಾದ ಮತ್ತು ನಿರ್ದಿಷ್ಠ ವಿನ್ಯಾಸಗಳ ನಕ್ಷೆಯ ಮಂಡಲ ಮತ್ತು ಹೋಮ ಕುಂಡಗಳಲ್ಲಿ, ವೈದಿಕ ಕ್ರಿಯೆಯ ಸಂಕೀರ್ಣ ವಿಧಾನದಲ್ಲಿ ಹೋಮದ ಅಗ್ನಿಗೆ (ಬೆಂಕಿ)ಅಹುತಿಗಳನ್ನು ಅರ್ಪಣೆಮಾಡಲಾಗುವುದು. ಈ ಸಂದರ್ಭದಲ್ಲಿ ಹಿರಿಯರ ಅನುಗ್ರಹಕ್ಕೆ ದಾನ ನೀಡಲಾಗುವುದು; ಉಡುಗೊರೆಗಳನ್ನು ಕೊಡಲಾಗುವುದು. ಪರಿಶುದ್ಧ ತ್ಯಾಗದ ಆಧಾರ ದಲ್ಲಿ, ಪವಿತ್ರ ಗಿಡಮೂಲಿಕೆಗಳ ಸಮಿತ್ತು ಮತ್ತು ತುಪ್ಪ ಮೊದಲಾದವುಗಳನ್ನು ಅಗ್ನಿಗೆ ಮಂತ್ರೋಕ್ತವಾಗಿ ಅರ್ಪಿಸಲಾಗುವುದು. ಈ ಸಂಸ್ಕಾರಗಳು ಮಾನವ ಜೀವನದ ಪ್ರಮುಖ ಮೈಲಿಗಲ್ಲುಗಳಾಗಿವೆ. ಪ್ರತಿ ಮೈಲಿಗಲ್ಲು ಮಹತ್ವದ್ದಾಗಿದ್ದು, ಶಾಸ್ತ್ರೀಯವಾಗಿ ನಿರ್ದಿಷ್ಟ ರೀತಿಯಲ್ಲಿ ಸಂಸ್ಕಾರ ಕ್ರಿಯೆ ನಡೆಸಲಾಗುತ್ತದೆ .

ಇತಿಹಾಸ ಮತ್ತು ಮೂಲಗಳು

[ಬದಲಾಯಿಸಿ]
ಸಂಸ್ಕಾರಗಳ ವಿಚಾರ ಅತ್ಯಂತ ಹಳೆಯದಾದ ಋಗ್ವೇದದಲ್ಲೂ ಕಂಡು ಬರುತ್ತವೆ. ಈಗ ಮದುವೆ, ಗರ್ಭಾದಾನ, ಅಂತ್ಯೇಷ್ಠಿ ಮತ್ತು ಇತರೆ ಸಂಸ್ಕಾರ ಆಚರಣೆಗಳಲ್ಲಿ ಋಗ್ವೇದದ ಮಂತ್ರಗಳನ್ನು ಬಳಸಲಾಗುತ್ತದೆ. ಈ ವೇದದ ಮಂತ್ರಗಳು ಸಾಮಾನ್ಯವಾಗಿ ಎಲ್ಲಾ ಧಾರ್ಮಿಕ ಆಚರಣೆಗಳ ಸಮಯದಲ್ಲಿ ಉಪಯೋಗಿಸುವುದನ್ನು ಕಾಣಬಹುದು.
ಯಜುರ್ವೇದದಲ್ಲಿ ನಾವು ಆಚರಿಸುವ ಕ್ಷೌರಕರ್ಮ ಸಮಾರಂಭದ ಉಲ್ಲೇಖವಿದೆ. ಈ ಶ್ರೌತ ಅಥವಾ ಯಾಗದ ಆಚರಣೆಗಳಿಗೆ ಈ ವೇದ ಮಂತ್ರಗಳು. ಸಾಮಾನ್ಯವಾಗಿದೆ.
ಅಥರ್ವಣವೇದವು , ಮದುವೆ, ಉಪನಯನ , ಅಂತ್ಯಕ್ರಿಯೆ, ವೈದಿಕಶಿಕ್ಷಣ ಆರಂಭ ಇತ್ಯಾದಿ ದೀಕ್ಷಾ ರೀತಿಯ ಸಂಸ್ಕಾರಗಳಲ್ಲಿ ಉಪಯೋಗಿಸುವ ಸಂಸ್ಕಾರಗಳಿಗೆ ಸಂಬಂಧಿಸಿದ ಹಲವಾರು ಮಂತ್ರಗಳಿವೆ.
“ಬ್ರಾಹ್ಮಣಗಳ” ಅವಧಿಯಲ್ಲಿ ಕೆಳಗೆ ಬರುವ, ಗೋಪಥ-ಬ್ರಾಹ್ಮಣ ಉಪನಯನದ ಉಲ್ಲೇಖಗಳನ್ನು ಒಳಗೊಂಡಿದೆ. ಪದ ಬ್ರಹ್ಮಚರ್ಯೆ ಶತಪಥ ಬ್ರಾಹ್ಮಣದಲ್ಲಿ ಕಂಡುಬರುತ್ತದೆ.
ತೈತ್ತಿರೀಯ ಅರಣ್ಯಕ ಅಂತ್ಯಕ್ರಿಯೆಯ ಮಂತ್ರಗಳ ಹೊಂದಿದೆ.
ಚಾಂದೋಗ್ಯ ಉಪನಿಷತ್ತು ಒಂದು ಬ್ರಹ್ಮಚಾರಿಯು ಗುರು-ಕುಲ (ಬೋರ್ಡಿಂಗ್ ಶಾಲೆ) ಕ್ಕೆ ಪ್ರವೇಶ ಪಡೆಯುವ ಬಗೆಗೆ ಸಂಬಂಧಿಸಿದೆ.
ಗಾಯತ್ರಿ ಮಂತ್ರ ಕುರಿತಾದ ವಿಷಯ ಬೃಹದಾರಣ್ಯಕ ಮತ್ತು ಇತರ ಉಪನಿಷತ್ ಗಳಲ್ಲಿ ಕಾಣಿಸುತ್ತದೆ
ತೈತ್ತರೀಯ ಉಪನಿಷತ್ ಪ್ರಸಿದ್ಧ ಘಟಿಕೋತ್ಸವ ಪ್ರವಚನ ಹೊಂದಿದೆ. ಈ ಉಪನಿಷತ್ ಒಂದು ವಿದ್ವತ್ತಿನ ಮಗನನ್ನು ಪಡೆಯಲು, ಮತ್ತು ಅಂತ್ಯಕ್ರಿಯೆಯ ಆಚರಣೆಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಹೊಂದಿದೆ2.

ಆಧಾರ ಗ್ರಂಥಗಳು

[ಬದಲಾಯಿಸಿ]
ಬ್ರಾಹ್ಮಣಗಳು ಒಳಗೊಂಡಿರುವ ಆಚರಣೆಗಳ ನಿಯಮ- ಕಲ್ಪ--ಸೂತ್ರಗಳು ಎಂದು ಕರೆಯುವ ಇವು ವ್ಯವಸ್ಥಿತ ಕಾರ್ಯಸೂಚಿ ಹೊಂದಿವೆ. ಇವು ವೇದಗಳ ವಿಸ್ತರಣೆಗೆ ಸೇರಿದ ಗ್ರಂಥಗಳು. ಸಣ್ಣ ಕೈಪಿಡಿಗಳು. ತಮ್ಮ ದೈನಂದಿನ ಧಾರ್ಮಿಕ ಕ್ರಿಯೆಗೆ ಪುರೋಹಿತರಿಗೆ/ಅರ್ಚಕರಿಗೆ ಒಂದು ಅಗತ್ಯ ಕ್ರಿಯೆಯ ಸೂಚಿ ಗ್ರಂಥ. ಏಕೆಂದರೆ ಅವರಿಗೆ ದೈನಂದಿನ ಧಾರ್ಮಿಕ ಕ್ರಿಯೆಯ ಕ್ರಮದ ವಿವರಣೆಯ ಅಗತ್ಯ ಹುಟ್ಟಿಕೊಂಡಿತು. ಈ ಗ್ರಂಥಗಳಲ್ಲಿ ವೈದಿಕ ಬಲಿಗಳನ್ನು ಕೊಡುವ ವಿಷಯಕ್ಕೆ ಶ್ರೌತ-ಸೂತ್ರಗಳು ಎಂದು ಕರೆಯಲಾಗುತ್ತದೆ ಮತ್ತು ದೈನಂದಿನ ಗೃಹಸ್ತ-ಧರ್ಮ ದ, ನಿತ್ಯ ನೈಮಿತ್ತಿಕ ಕರ್ಮಗಳ ವಿಧಿ ವಿಧಾನಗಳನ್ನು ವಿವರಿಸುವದು ಗೃಹ್ಯ-ಸೂತ್ರಗಳು. ಇವುಗಳಲ್ಲಿ ಸಾಹಿತ್ಯದ ಮೌಲ್ಯವಿಲ್ಲದಿದ್ದರೂ, ಇದರಲ್ಲಿರುವ ವಾಕ್ಯದ ತುಣುಕುಗಳು ಅಂದಿನ ಕಾಲದ ಜಾನಪದ ದಾಖಲೆಯಾಗಿ ಬೆಲೆಯುಳ್ಳವುಗಳು ಎಂದು ಹೇಳಲಾಗುತ್ತದೆ. ಅಂದಿನ ಆಚರಣೆಗಳ ಪ್ರಾಚೀನ ಭಾರತದ (ದೇಶೀಯ) "ಜಾನಪದ-ಜೀವನ" ದ ಕಡತಗಳಾಗಿ ಇನ್ನೂ ಅಮೂಲ್ಯವಾದುದು . ಅವು ಪ್ರಾಚೀನ ಭಾರತದ ಸಾಮಾಜಿಕ ಸುಳ್ಳು ಸಂಪ್ರರದಾಯ (ಮೂಢನಂಬುಗೆ), ಜನಪ್ರಿಯ ಸಂಪ್ರದಾಯ ಮತ್ತು ಬಳಕೆಯ ನಿಖರವಾದ ಚಿತ್ರ ಚಿತ್ರಿಸುತ್ತದೆ.
ಕೆಲವು ಪ್ರಮುಖ ಗೃಹ್ಯ ಸೂತ್ರಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ:

1.ಆಪಸ್ತಂಬ ; 2.ಅಶ್ವಲಾಯನ ; 3.ಬೋಧಾಯನ ; 4.ಭರದ್ವಾಜ ; 5.ಗೋಬಿಲ ; 6.ಹಿರಣ್ಯಕೇಶೀಯ ; 7.ಜೈಮಿನೀಯ ; 8.ಖದಿರಾ (ಖಾದಿರ) ;9.ಮಾನವ ; 10.ಪರಾಸ್ಕರ ; 11. ಸಾಂಖ್ಯಾಯನ ;12.ವರಾಹ ಗೃಹ್ಯ ಸೂತ್ರಗಳು

ಸಾಂಖ್ಯಾಯನ, ಆಶ್ವಲಾಯನ, ಸಾಂಖ್ಯಾನ್ಯ, ಕೌಶೀತಕಿ-ಇವು ಋಗ್ವೇದಕ್ಕೆ ಸೇರಿದುವು. ಗೋಭಿಲ, ಖಾದೀರ, ಜೈಮಿನಿ-ಇವು ಸಾಮವೇದಕ್ಕೆ ಸೇರಿದುವು. ಆಪಸ್ತಂಬ, ಹಿರಣ್ಯಕೇಶಿ, ಭಾರದ್ವಾಜ, ಬೌಧಾಯನ, ಮಾನವ, ಕಾಥಕ, ವೈಖಾನಸ-ಇವು ಕೃಷ್ಣ ಯಜುರ್ವೇದಕ್ಕೆ ಸೇರಿದುವು. ಕಾತ್ಯಾಯನ ಗೃಹ್ಯಸೂತ್ರ ಶುಕ್ಲ ಯಜುರ್ವೇದಕ್ಕೂ ಕೌಶಿಕ ಗೃಹ್ಯಸೂತ್ರ ಅಥರ್ವ ವೇದಕ್ಕೂ ಸೇರಿವೆ.
ಗೃಹ್ಯ ಸೂತ್ರಗಳ ವಿಸ್ತರಣೆಯಾಗಿ ಧರ್ಮಸೂತ್ರಗಳಿವೆ.
ಈ ಪಠ್ಯಗಳು ಆಶ್ರಮಗಳಿಗೆ ಸಂಬಂಧಿಸಿದ ಜಾತ್ಯತೀತ ಮತ್ತು ಧಾರ್ಮಿಕ ನಿಯಮಗಳೊಂದಿಗೆ ಮುಖ್ಯವಾಗಿ ವ್ಯವಹರಿಸುತ್ತದೆ.

ಇದಕ್ಕೆ ಮತ್ತೆ ಪರಿಶಿಷ್ಟಗಳಿವೆ. ಇವಕ್ಕೆ ಭಾಷ್ಯ ಅಥವಾ ಟೀಕೆಗಳಿವೆ. ಅವು 25 ಇವೆ ; ಪ್ರಯೋಗ ವಿಚಾರವಾಗಿ 24 ಗ್ರಂಥಗಳಿವೆ. ಹನ್ನೆರಡು ಕಾರಿಕೆ (ಅರ್ಥ ವಿವರಣೆ) ಗಳಿವೆ. ಅವು ವೈಯಕ್ತಿಕ ಸಂಸ್ಕಾರದ ನಿಯಮಗಳ ಬಗೆಗೆ ವಿಶೇಷ ಟೀಕೆಗಳನ್ನೊಳಗೊಂಡಿವೆ. ಈ ಜೊತೆಗೆ ಆಪ್ತ-ವಾಕ್ಯಗಳಿವೆ. ಅವು ಜ್ಞಾನಿಗಳು, ಋಷಿ ಮುನಿಗಳು ಸನಾತನ ಧರ್ಮ (ವೈದಿಕ ಧರ್ಮದಲ್ಲಿ) ಬಗೆಗೆ ಹೇಳದ ಉಕ್ತಿಗಳು. ಧರ್ಮಾನುಸರಣೆಯಲ್ಲಿ ಅನುಮಾನ ಬಂದ ಸಂದರ್ಭಗಳಲ್ಲಿ ಈ ವಚನಗಳು -ಆಪ್ತವಾಕ್ಯಗಳು ಸ್ಮೃತಿಗಳಷ್ಟೇ ಪಾವಿತ್ರ್ಯತೆ ಹೊಂದಿವೆ. (ಸಂತರು ಮತ್ತು ಬುದ್ಧಿವಂತರ/ಜ್ಞಾನಿಗಳ ಹೇಳಿಕೆಗಳು.-ಆಪ್ತವಾಕ್ಯಗಳು) ಹಿಂದೆ ಮತ್ತು ಈಗ ಈ ಸಂಸ್ಕಾರಗಳು ಹೇಗೆ ಪ್ರಮುಖವಾಗಿದೆ ಎಂಬುದಕ್ಕೆ ಈ ವಿಷಯದ ಕೃತಿಗಳ ಸಂಖ್ಯೆಯ ಮೇಲೆ ಊಹಿಸಬಹುದು2.

ಹಿಂದೂಧರ್ಮ-ವೈದಿಕ ಧರ್ಮದ ಸಂಸ್ಕಾರಗಳು

[ಬದಲಾಯಿಸಿ]
16 ಸಂಸ್ಕಾರಗಳು
ಬಹುತೇಕ ಬ್ರಾಹ್ಮಣರ ಸಮುದಾಯಗಳು , ಗರ್ಭಾವಸ್ಥೆ, ಜನನ , ಶಿಕ್ಷಣ, ಮದುವೆ, ಮತ್ತು ಸಾವಿನಲ್ಲಿ - ಹೀಗೆ ತಮ್ಮ ಜೀವನದಲ್ಲಿ ಪ್ರಮುಖ ಘಟನೆಗಳಿಗೆ , ಸಂಬಂಧಿಸಿದಂತೆ ಸಂಕೀರ್ಣ ಆಚರಣೆಗಳನ್ನು(ಧಾರ್ಮಿಕ ವಿಧಿಗಳನ್ನು) ಅನುಸರಿಸಲು ಸಂಸ್ಕಾರಗಳನ್ನು ಬಳಸಲಾಗುತ್ತದೆ. [2] ಸಾಮಾನ್ಯ ವಾಗಿ ಷೋಡಶ ಸಂಸ್ಕಾರ ಎಂದು ಕರೆಯಲಾಗುತ್ತದೆ,
ಸಂಖ್ಯೆ
ಪ್ರಮುಖ ಸಂಸ್ಕಾರಗಳ ಸಂಖ್ಯೆಯು ಗೃಹ್ಯ ಸೂತ್ರಗಳ ಪ್ರಕಾರ 12 ಮತ್ತು 18 ಏರಿಳಿತಗಳ ನಡುವೆ ಇದೆ ; ಆದರೂ, ನಂತರ ಇದು 16 ಸಂಸ್ಕಾರಗಳೆಂದು (ಸೋಲಾ ಹಿಂದಿ) ಪ್ರಸಿದ್ಧಿಯಾಗಿದೆ.

ಧಾರ್ಮಿಕ ಸಂಸ್ಕಾರಗಳು

[ಬದಲಾಯಿಸಿ]
ಧಾರ್ಮಿಕ ಸಂಸ್ಕಾರಗಳ ಕ್ರಮದಲ್ಲೂ ಒಮ್ಮತವಿಲ್ಲ.
ಷೋಡಶ ಸಂಸ್ಕಾರಗಳು
ಮೊದಲ ಬಗೆ:1.ಗರ್ಭಾಧಾನ ಗರ್ಭ + ಆಧಾನ ಗರ್ಭದಲ್ಲಿ ಶಕ್ತಿಯನ್ನು ನಿಕ್ಷೇಪಿಸುವ ಕರ್ಮ., 2.ಪುಂಸವನ, 3.ಸೀಮಂತ, 4.ಜಾತಕರ್ಮ, 5.ನಾಮಕರಣ (ಮತ್ತು ನಿಷ್ಕ್ರಮಣ), 6.ಅನ್ನಪ್ರಾಶನ, 7.ಚೌಲ; ಚೂಡಾಕರ್ಮ, 8.ಉಪನಯನ, 9,ಉಪಾಕರ್ಮ, 10.ಉತ್ಸರ್ಜನ, 11.ವೇದವ್ರತ, 12.ಗೌದಾನಿಕ, 13.ಸ್ನಾತಕ, 14.ವಿವಾಹ, 15.ಸ್ಮಾರ್ತಾಗ್ನಿ ಹೋತ್ರ, 16.ಔರ್ಧ್ವದೇಹಿಕ ಅಥವಾ ಅಂತ್ಯೇಷ್ಟಿ ಅಥವಾ ಅಂತ್ಯಕ್ರಿಯೆ.;
ಷೋಡಶ ಇನ್ನೊಂದು ಬಗೆ - (ಪೂರ್ವ ಶೋಡಶ (ಬೋಧಾಯನ -ತೂದೂರು ತುಂಗಭದ್ರಾ ತಟ ಶಂಕರ ಸಾನ್ಯಿಧ್ಯ (ವಾಸಿ)- ಮರಿಯಪ್ಪ ಬಾಲನಾಮಾಖ್ಯ / ವೆಂಕಟಪತಿ - ನಿತ್ಯಕರ್ಮ ದೀಪಿಕಾ) :
1.ಗರ್ಭಾದಾನ, 2.ಪುಂಸವನ, 3.ಸೀಮಂತ, 4 ವಿಷ್ಣುಬಲಿ, 5.ಜಾತಕರ್ಮ, 6 .ನಾಮಕರಣ, 7, ಉಪನಿಷ್ಕ್ರಮಣ 8,.ಅನ್ನಪ್ರಾಶನ, 9,.ಚೌಲ, (ಕರ್ಣವೇಧನ?)10,.ಉಪನಯನ, 11, ಹೋತೃ , 12. ಶುಕ್ರೀಯ 13, ಉಪನಿಷದ್, 14. ಗೋದಾನ, 15. ಸಮಾ ವರ್ತನ, 16. ವಿವಾಹ
ಷೋಡಶ ಮೂರನೆ ಬಗೆ :1]ಗರ್ಭಾದಾನ, 2]ಪುಂಸವನ, 3)ಸೀಮಂತೋನ್ನಯನ; 4]ವಿಷ್ಣು ಬಲಿ, 5]ಜಾತಕರ್ಮ, 6]ನಾಮಕರಣ, 7]ನಿಷ್ಕ್ರಮಣ, 8] ಅನ್ನಪ್ರಾಶನ, 9]ಚೌಲ, (9.ಕರ್ಣವೇಧನ? 10. ವಿದ್ಯಾರಂಭ) 10]ಉಪನಯನ , 10]ಮಹಾನಾಮ್ನೀ ,12] ಮಹಾವೃತ(12.ಪ್ರೈಶಾರ್ಥ?), 13]ಉಪನಿಷತ್ ವ್ರತ (13.ಕೇಶಾಂತ ರಿತುಸಿದ್ಧಿ ), 14] ಗೋದಾನ ವ್ರತ, 15] ಸಮಾವರ್ತನ, 16]ವಿವಾಹ, (16. ಅಂತ್ಯೇಷ್ಟಿ
ಷೋಡಶ ನಾಲ್ಕನೇ ಬಗೆ(ಇಂಗ್ಲಿಷ್ ತಾಣ):1]ಗರ್ಭಾದಾನ 2]ಪುಂಸವನ 3)ಸೀಮಂತೋನ್ನಯನ; 4]ಜಾತಕರ್ಮ 5]ನಾಮಕರಣ ,6]ನಿಷ್ಕ್ರಮಣ 7] ಅನ್ನಪ್ರಾಶನ, 8]ಚೌಲ/ಚೂಡಾಕರ್ಮ, 9.ಕರ್ಣವೇಧನ. 10. ವಿದ್ಯಾರಂಭ 11]ಉಪನಯನ , 12.ಪ್ರೈಶಾರ್ಥ, 13] ಕೇಶಾಂತ ಮತ್ತು ಋತುಸಿದ್ಧಿ (ಉಪನಿಷತ್ ವ್ರತ?) ,14]ಸಮಾವರ್ತನ, 15]ವಿವಾಹ, 16.ಅಂತ್ಯೇಷ್ಟಿ-ಅಂತಿಮ ಸಂಸ್ಕಾರ--ಉತ್ತರಕ್ರಿಯೆ

ಸಂಸ್ಕಾರಗಳಲ್ಲಿ ಮತ್ತೊಂದು ವಿಧ2:

[ಬದಲಾಯಿಸಿ]
  • 1]. ಗರ್ಭಾದಾನ (ಪತ್ನಿಯನ್ನು, ದೇಹ ಸಂಬಂಧದಿಂದ ಗರ್ಭವತಿಯನ್ನಾಗಿ ಮಾಡುವುದು)
  • 2]. ಪುಂಸವನ (ಗರ್ಭಧಾರಣೆಯ ಎರಡನೇ ಅಥವಾ ಮೂರನೇ ತಿಂಗಳಲ್ಲಿ ನಡೆಸುವ ಕ್ರಿಯೆ)
  • 3]. ಸೀಮಂತೋನ್ನಯನ : (ಗರ್ಭಧಾರಣೆಯ ಐದನೇ ಮತ್ತು ಎಂಟನೇ ತಿಂಗಳ ನಡುವೆ ನಡೆಸುವ ಕ್ರಿಯೆ)
  • 4]. ಜಾತಕರ್ಮ (ಮಗುವಿನ ಜನನದ ಸಮಯದಲ್ಲಿ ಕ್ರಿಯೆ)
  • 5]. ನಾಮಕರಣ (ಮಗುವಿನ ನಾಮಕರಣ)
  • 6]. ನಿಷ್ಕ್ರಮಣ(ಮಗುವನ್ನು ಹೊರಗೆ ತರುವುದು 4ನೇ ತಿಂಗಳಲ್ಲಿ )
  • 7]. ಅನ್ನಪ್ರಾಶನ (ಆರು ತಿಂಗಳಲ್ಲಿ ಏಕದಳ ಮೊದಲ ಆಹಾರ)
  • 8]. ಚೌಲ/ಚೂಡಾಕರ್ಮ (ಕೂದಲು ಮೊದಲ ಬಾರಿಗೆ ಕತ್ತರಿಸುವುದು, 1 ವರ್ಷ ಅಥವಾ 3 ನೇ ವರ್ಷದಲ್ಲಿ )
  • 9]. ಕರ್ಣವೇಧನ (ಮೂರನೇ ಅಥವಾ ಐದನೇ ವರ್ಷದ ಕಿವಿ ಚುಚ್ಚುವ ಕ್ರಿಯೆ)
  • 10]. ಉಪನಯನ (8 ನೇ ವರ್ಷದಲ್ಲಿ ಪವಿತ್ರ ದಾರ- ಯಜ್ಞೋಪವೀತ ಧಾರಣೆ)
  • 11]. ಸಮಾವರ್ತನ (ಅಧ್ಯಯನಗಳು ಪೂರ್ಣಗೊಂಡಾಗ ಗೃಹಸ್ಥಾಶ್ರಮಕ್ಕೆ ಸಿದ್ಧತೆ)
  • 12]. ವಿವಾಹ ಸಂಸ್ಕಾರ (ಮದುವೆ ಸಮಾರಂಭ )
  • 13]. ಗೃಹಸ್ಥಾಶ್ರಮ (ಸಂಸಾರದಲ್ಲಿ ಗೃಹಸ್ಥ ನಾಗಿ ಅದಕ್ಕೆ ಸಂಬಂಧಿಸಿದ.ಕ್ರಿಯೆ)
  • 14]. ವಾನಪ್ರಸ್ಥ (ಗೃಹಸ್ಥ ಜೀವನ ತ್ಯಜಿಸುವ ಕ್ರಿಯೆ)
  • 15]. ಸಂನ್ಯಾಸ ಆಶ್ರಮ(ಸನ್ಯಾಸಿ ಜೀವನ -ತ್ಯಾಗದ/ವಿರಕ್ತ ಜೀವನ)
  • 16]. ಅಂತ್ಯೇಷ್ಟಿ (ಮರಣ ನಂತರ - ಅಂತಿಮ ಸಂಸ್ಕಾರ)ಹಿಂದೂ ಧಾರ್ಮಿಕ ಅಂತ್ಯೇಷ್ಟಿ

1.ಗರ್ಭಾದಾನ ಸಂಸ್ಕಾರ:

[ಬದಲಾಯಿಸಿ]

ಗರ್ಭಾದಾನ ಸಂಸ್ಕಾರವು, ಅಕ್ಷರಶಃ, ದೇಹ ಸಂಪರ್ಕದಿಂದ, ಪತ್ನಿಗೆ ಗರ್ಭಧಾರಣೆ ನೀಡುವುದು. ಇದು ಪ್ರತಿ ವೈವಾಹಿಕ ಒಕ್ಕೂಟದ ನಂತರ (ತಕ್ಷಣ) ಮೊದಲ ಪವಿತ್ರ ವಿಧಿ. ಇಬ್ಬರೂ ಕೂಡುವ ಮೊದಲು ಧಾರ್ಮಿಕ ವಿಧಿಗಳು ಹಲವಾರು ಇವೆ. ಮೊದಲ ಲೈಂಗಿಕ ಸಂಭೋಗ ಅಥವಾ ಗರ್ಭಧಾರಣೆ ಕ್ರಿಯೆಗೆ ‘ನಿಷೇಕ’ ಎಂದು ಕರೆಯಲಾಗುತ್ತದೆ. (,ಗರ್ಭಾದಾನ ಸಂಸ್ಕಾರ ಮನುಸ್ಮೃತಿ, 2.27 ಉಲ್ಲೇಖಿಸಲಾಗಿದೆ). ವಿವಿಧ ಗೃಹ್ಯ ಸೂತ್ರಗಳು ಬೇರೆ ಬೇರೆ ಕ್ರಮ ಹೇಳುತ್ತವೆ. ಗರ್ಭಾದಾನದ ಧಾರ್ಮಿಕ ವಿಧಿಯು, ಮಹಿಳೆಯ ಮೊದಲ ಹೆರಿಗೆಗೆ ಮಾತ್ರ ಎಂದಿದೆ. ಕೇವಲ ಒಮ್ಮೆ ಶುದ್ಧೀಕರಿಸಿದ ಗರ್ಭವು ಶುದ್ಧ ಕ್ಷೇತ್ರವಾಗಿ ಉಳಿದಿರುತ್ತದೆ, ಕೆಲವರ ದೃಷ್ಟಿಕೋನ ಭಿನ್ನವಾಗಿರುತ್ತವೆ. ಮೊದಲ ಪ್ರಕರಣದಲ್ಲಿ ಒಮ್ಮೆ, ಕ್ಷೇತ್ರವನ್ನು -ಸಂಸ್ಕಾರ ಮಾಡಿದ್ದರೂ, ಪ್ರತಿ ಗರ್ಭದಾರಣ ಸಮಯದಲ್ಲಿಯೂ /ಪ್ರತಿ ಬಾರಿಯೂ ಗರ್ಭ-ಸಂಸ್ಕಾರ ಅಗತ್ಯವಿದೆ ಎನ್ನುತ್ತಾರೆ.

  • 'ಮೊದಲ ಬಾರಿಯ ಧಾರ್ಮಿಕ ವಿಧಿಯು ಆಗದಿದ್ದಲ್ಲಿ ನಂತರ ಪ್ರತಿ ಗರ್ಭದಾರಣ ಸಮಯದಲ್ಲಿಯೂ ಗರ್ಭ-ಸಂಸ್ಕಾರ ಅಗತ್ಯವಿದೆ'.(<-ಧರ್ಮಸಿಂಧು(ಕನ್ನಡ)-ಶಂಭು ಶರ್ಮಾ ನಾಜಗಾರ-1970 ಪ್ರತಿ).
  • ಈ ಸಂಸ್ಕಾರಗಳ ಕ್ರಿಯೆಯಲ್ಲಿ ಉಚ್ಚರಿಸುವ ಮಂತ್ರಗಳು ದೇವರ ಕುರಿತು ಪ್ರಾರ್ಥನೆಗಳು. ಮೂಲಭೂತವಾಗಿ ವಧು ಉತ್ತಮ ಮಗನನ್ನು ಗರ್ಭ ಧರಿಸಲು ಸಹಾಯಕ. ಮಂತ್ರಗಳು. ಇಬ್ಬರೂ ಮಗು ಪಡೆಯಲು ಒಟ್ಟಿಗೆ ಕ್ರಿಯಾಶೀಲರಾಗುವ ಸಾಂದರ್ಭಿಕ ರೂಪಕಗಳು.
ಅವನ್ನು ಮುಕ್ತವಾಗಿ ಹೀಗೆ ಅನುವಾದಿಸಬಹುದು:
"ಬೆಂಕಿ ಘರ್ಷಣೆಯಿಂದ ಉತ್ಪತ್ತಿಯಾಗುತ್ತದೆ. ಅದೇ ರೀತಿ ನಾವು ಬಲಿಷ್ಟ ಮತ್ತು ಬಹುಕಾಲ ಬಾಳುವ ಮಕ್ಕಳನ್ನು ಸೃಷ್ಟಿಮಾಡೋಣ;. ನಾನು ದೇವರ ಭಾಗವಾಗಿದ್ದೇನೆ ಮತ್ತು ನನ್ನ ಪೂರ್ವಜರನ್ನು (ನರಕದಿಂದ) ಮುಕ್ತಗೊಳಿಸುವುದಕ್ಕೆ ನಾನು ಉತ್ತಮ ಪುತ್ರರನ್ನು ಸೃಷ್ಟಿಸು ತ್ತೇನೆ. ನಾವು, ಉತ್ತಮ ಮತ್ತು ಶ್ರೀಮಂತ ಮಕ್ಕಳನ್ನು ಪಡೆಯುತ್ತೇವೆ. ನಾವು ಧಾರಾಳವಾಗಿ ನಿರ್ಗತಿಕರಿಗೆ ದಾನ ನೀಡಿ ಮೋಕ್ಷವನ್ನು ಸಾಧಿಸೋಣ. ದೇವರು ನೀನು ಗರ್ಭ ಧರಿಸಲು, ನಿನ್ನನ್ನು ಯೋಗ್ಯಳನ್ನಾಗಿ ಮಾಡಲಿ. ದುಷ್ಟಶಕ್ತಿಗಳಿಂದ ನೀನು ಬಿಡುಗಡೆಹೊಂದಲಿ. ನಿನ್ನ ಮಗು ವಿಗೆ ಯಾವ ಊನವೂ ಇಲ್ಲದೆ, ಕಿವುಡುತನವಿಲ್ಲದೆ ಇರಲಿ. (ಕಿವುಡು ಇತ್ಯಾದಿ ದೋಷಗಳಿಂದ ಮುಕ್ತನಾಗಿರಬೇಕು.) ಹಾಗೆಯೇ ಮಗುವು ದೇವಲೋಕದ ಕಾಮಧೇನುವಿನ ಹಾಗೆ ಇರಲಿ."
  • ತಮ್ಮ ಪೂರ್ವಜರ ಋಣದ ಮರುಪಾವತಿಗಾಗಿ (ಅವರನ್ನು ಪುತ್ ನರಕದಿಂದ ಪಾರು ಮಾಡಲು-ಗಂಡು ಮಗು -ಪುತ್ರ) ಮಗುವನ್ನು ಪಡೆಯುವುದು ಹಿಂದೂಗಳಿಗೆ ಕರ್ತವ್ಯವಾಗಿದೆ.

ಕೆಲವು ಶಾಸ್ತ್ರವಿಧಿಗಳು

[ಬದಲಾಯಿಸಿ]

ಗ್ರಹ ಶಾಂತಿ ರ್ಪೂಕ ಭುವನೇಶ್ವರಿ ಶಾತಿಯನ್ನು (ಪೂಜೆ) ಹೋಮಪೂರ್ವಕ ಮಾಡಿಕೊಂಡ ನಂತರ ಇತರೆ ಕ್ರಿಯೆಗಳನ್ನು ಮಾಡಬೇಕೆಂದು ಹೇಳಿದೆ. (ಇಂದ್ರಾಣೀ, ಸವಿತೃ , ಇತ್ಯಾದಿ ಪಾರ್ಶದೇವತೆಗಳು)
ಎಲ್ಲಾ ಸಂಸ್ಕಾರ ಕಾರ್ಯಗಳನ್ನು ನಾಂದೀ ಶ್ರಾದ್ಧ (ನಾಂದೀ-ಸಂಕ್ಷಿಪ್ತ ವಿಧಿ ) ಕ್ರಿಯೆ ನಂತರ ಮಾಡಬೇಕೆಂದು ಹೇಳಿದೆ. (ನಾಂದೀ ಶ್ರಾದ್ಧದಲ್ಲಿ ಮೃತರಾದ ಪಿತೃಗಳನ್ನು ಕರೆದು ಅವರಿಗೆ ಅಹುತಿ ಕೊಟ್ಟು/ಆತಿಥ್ಯಮಾಡಿ ಅವರ ಆಶೀರ್ವಾದವಿದೆಯೆಂದು ಭಾವಿಸಿ ವೈದಿಕ/ಶ್ರೌತ/ಸ್ಮಾರ್ತ ಕ್ರಿಯೆ ಮಾಡುವುದು.)
ಸಂಕಲ್ಪ, ಪುಣ್ಯಾಹ, ಭ್ರಾಹ್ಮಣವರಣ ಭೂತನಿಃಸರಣ, ಪಂಚಗವ್ಯದಿಂದ ಭೂಶುದ್ಧಿ, ಮುಖ್ಯ ದೇವತಾಪೂಜೆ, ಅಗ್ನಿ ಪ್ರತಿಷ್ಠೆ , ಸೂರ್ಯಾದಿ ಗ್ರಹಸ್ಥಾಪನೆ , ಪೂಜನ, ದೇವತಾ ಅನ್ವದಾನ, ಪಾತ್ರ ಸಾಧನ, ಹವಿಸಂಸ್ಕಾರ, ಕ್ರಮಾನುಸಾರ ತ್ಯಾಗ, ಹೋಮ (ಗರ್ಭದಾನ ಹೋಮ); ಇವು ಪೂರ್ವಾಂಗಗಳು. ಪೂಜಾ ಸ್ವಿಷ್ಟಕೃತ್ , ನವ ಆಹುತಿಯಿಂದ ಬಲಿ, ಪೂರ್ಣಾಹುತಿ ,ಪೂರ್ಣಪಾತ್ರವಿಮೋಕ , ಅಗ್ನಿ ಅರ್ಚನ, ಕೊನೆಯಲ್ಲಿ ಅಭಿಷೇಕ “ಮಾನಸ್ತೋಕೇ” ಮಂತ್ರದಿಂದ ವಿಭೂತಿಗ್ರಹಣ, ದೇವಪೂಜೆ, ವಿಸರ್ಜನ, ಶ್ರೇಯೋಗ್ರಹಣ, ದಕ್ಷಿಣದಾನ, ಕರ್ಮೇಶ್ವರಾರ್ಪಣ ಇವು ಉತ್ತರಾಂಗಗಳು.
ಬೇರೆ ಬೇರೆ ಸೂತ್ರಗಳಿರುವುದರಿಂದ ಅವರವರು ತಮ್ಮ ಸೂತ್ರಗಳನ್ನು ಅನುಸರಿಸಿ ಈ ಸಂಸ್ಕಾರ ಕ್ರಿಯೆಗಳನ್ನು ಮಾಡುತ್ತಾರೆ.
ರಜೋದರ್ಶನದಿಂದ 16 ದಿನಕ್ಕೆ ಋತುಕಾಲ ಎನ್ನಲಾಗಿದೆ ; ಆ ಕಾಲದಲ್ಲಿ, ಪ್ರಥಮ 4 ದಿನ ಬಿಟ್ಟು ನಂತರ ಪತ್ನೀಗಮನ ಮಾಡಬೇಕೆಂದು ಹೇಳಿದೆ.
ಗರ್ಭಾದಾನಾಂಗವಾಗಿ ಪುಣ್ಯಾಹವಾಚನ, ಕ್ರತುದಕ್ಷಸಂಜ್ಞಕ, ವಿಶ್ವೇದೇವಯುತವಾದ ನಾಂದೀ ಶ್ರಾದ್ಧ ಇವುಗಳನ್ನು ಮಾಡಿ ಅರವರ ಶಾಖಾಸೂತ್ರಾನುಸಾರ ಗರ್ಭಾದಾನ ಸಂಸ್ಕಾರ ಮಾಡುವುದು. ಆಶ್ವಲಾಯನ ಸೂತ್ರದವರು ಗೃಹ್ಯಾಗ್ನಿಯಲ್ಲಿ ವಿಷ್ಣು, ಪ್ರಜಾಪತಿಗಾಗಿ ಹೋಮ ಮಾಡ ಬೇಕು. ಅದರ ನಂತರ ಮೂರುಬೆರಳಿನಿಂದ ಯೋನಿಯನ್ನು ಸ್ಪರ್ಶಿಸಿ “ವಿಷ್ಣುರ್ಯೋನಿಂಕಲ್ಪಯುತು” ಈ ಮಂತ್ರವನ್ನು ಜಪಸಿ ವೃತಸ್ಥನಾಗಿ ಗರ್ಭಾದಾನ ಮಾಡಬೇಕು. ಸ್ತ್ರೀಗಮನದಲ್ಲಿ ,”ಹಾಸಿಗೆಯಿಂದ ಎದ್ದ ಸ್ತ್ರೀಯು ಶುಚಿಯಾಗಿರುವಳು ; ಆದರೆ ಪುರುಷನು ಮಾತ್ರಾ ಅಶುಚಿಯಾಗಿರು ವನು”!!ಅವನಿಗೆ ಶುಚಿಗೆ ಆಚಮನ ಹೇಳಿದೆ. ಹೀಗೆಂದು ಶಾಸ್ತ್ರದ ಉಕ್ತಿ ಇದೆಯೆಂದು ಹೇಳಿದೆ.[೩]

2.ಪುಂಸವನ

[ಬದಲಾಯಿಸಿ]
ಪುಂಸವನ
ಈ ಸಮಾರಂಭ/ಕಾರ್ಯವನ್ನು ಗರ್ಭಧಾರಣೆಯ ಎರಡನೇ, ಮೂರನೇ ಅಥವಾ ನಾಲ್ಕನೇ ತಿಂಗಳಲ್ಲಿ ನಡೆಸಲಾಗುತ್ತದೆ. ಈ ಸಮಾರಂಭದ ಅರ್ಥ/ ಉದ್ದೇಶ, ಮಹಿಳೆಯಲ್ಲಿ "ಗಂಡು ಮಗುವಿನ ಪುರುಷತ್ವವನ್ನು ಹೆಚ್ಚಿಸುವುದೇ" ಆಗಿದೆ. ಪುಂಸವನವು ಒಂದು ಪುರುಷ ನಕ್ಷತ್ರದ ದಿನದಂದು ನಡೆಸಲಾಗುತ್ತದೆ. ಈ ಆಚರಣೆ ಸಂದರ್ಭದಲ್ಲಿ, ಆಲದ ಕಾಂಡದ ರಸದ ಕೆಲವು ಹನಿಗಳನ್ನು ಗರ್ಭಿಣಿ ಮಹಿಳೆ ಬಲಮೂಗಿನ ಹೊಳ್ಳೆಯೊಳಗೆ, ಒಬ್ಬ ಮಗ ಅಥವಾ ಒಂದು ಯೋಗ್ಯ ಮಗು ಜನನವಾಗಬೇಕೆಂಬ ಪ್ರಾರ್ಥನೆಯೊಂದಿಗೆ ಬಿಡಲಾಗುವುದು. ಇದನ್ನು ಆಘ್ರಾಣಿಸು ವಂತೆ ಹೇಳಲಾಗುತ್ತದೆ. ಮಹಾನ್ ಆಯುರ್ವೇದ ಲೇಖಕ ಸುಶ್ರುತನ ಪ್ರಕಾರ, ಆಲದ ಮರದ ರಸ ಗರ್ಭಾವಸ್ಥೆಯಲ್ಲಿನ ಎಲ್ಲಾ ತೊಂದರೆಗಳನ್ನು ನಿವಾರಿಸುವ ಗುಣಗಳನ್ನು ಹೊಂದಿದೆ.
ಪರಿಶುದ್ಧ ದಾರದಿಂದ ಗರ್ಭಿಣಿಗೆ ರಕ್ಷಣೆಗಾಗಿ ರಕ್ಷಾಬಂಧವನ್ನು ಮಂತ್ರ ಮೂಲಕ ಎಡಗೈ ಮಣಿಕಟ್ಟಿಗೆ ಕಟ್ಟಲಾಗುವುದು. ಮಂತ್ರಗಳ, ಮೂಲಕವಾಗಿ, ಪ್ರಾರ್ಥನೆ ಮಾಡಲಾಗುತ್ತದೆ. "ಈಶಾನ"ದೇವತೆಯು ನಮ್ಮ ಇಷ್ಟಾರ್ಥ ನೆರವೇರಿಸಲಿ. ; 'ದಾತಾ' ನೀನು ವಿಶ್ವವನ್ನು ಮಕ್ಕಳು ಮತ್ತು ಸಂಪತ್ತಿನಿಂದ ತುಂಬು; ಅವನು ಈ ಮನೆಯನ್ನೂ ಮಕ್ಕಳಿಂದ ತುಂಬುವಂತೆ ಆಶೀರ್ವಾದ ಮಾಡಲಿ. ಈ ಮನೆಯಲ್ಲಿ ಚಿರಂಜೀವಿಗಳು ಜೀವಿಸಲಿ. ಅಗ್ನಿಯು ನನಗೆ ಗಂಡು ಮಕ್ಕಳು ಆಗುವಂತೆ ಆಶೀರ್ವಾದ ಮಾಡಲಿ. ಇಂದ್ರನೂ ನನಗೆ ಮಕ್ಕಳು ಆಗುವಂತೆ ಆಶೀರ್ವಾದ ಮಾಡಲಿ. ನಾನು ಸುಂದರ ಮಕ್ಕಳನ್ನು ಪಡೆಯುವಂತಾಗಲಿ."
[ಸೂಚನೆ: ಈ ಕೆಳಗಿನ ವಿವರಣೆಗಳನ್ನು ಸ್ವಾಮಿ ದಯಾನಂದ ಸರಸ್ವತಿ ಅವರದು; (ಆರ್ಯ ಸಮಾಜದ ಸ್ಥಾಪಕ) ಬರಹಗಳು . ಅನುವಾದ] ಆಚಾರ್ಯ ವೈದ್ಯನಾಥ್ ಶಾಸ್ತ್ರಿ ಅವರದು.]
ತನ್ನ ಗರ್ಭಿಣಿ ಪತ್ನಿಯ ಗರ್ಭದ ಮೇಲೆ ಕೈ ಇರಿಸಿ ಕೆಳಗಿನ ಯಜುರ್ವೇದ ಮಂತ್ರ ಉಚ್ಚರಿಸಬೇಕು. ಕೆಳಗೆ ಅರ್ಥ ನೀಡಲಾಗಿದೆ (ಮಂತ್ರದಲ್ಲಿ 'ಅರ್ಥ'ವೆಂದರೆ,- ಪತಿ:)
"ಗರ್ಭದಲ್ಲಿರುವ ಓ ಆತ್ಮಾ! ನೀನು ಸಂತೋಷವನ್ನುಹೊಂದು; (ನೀನು) ಉತ್ತಮ ರೆಕ್ಕೆಯನ್ನುಳ್ಳ ಪಕ್ಷಿಯ ಚುರುಕಾದ ವೇಗವನ್ನು ಹೊಂದು. ನಿನ್ನ ತಲೆಯಲ್ಲಿ, ಚಿಂತನೆ(ವಿಚಾರ) ಮತ್ತು ಕಲಿಕೆಯ ಮೂರು ಶಕ್ತಿಗಳು ಹುಟ್ಟಿಕೊಳ್ಳಲಿ. ಗಾಯತ್ರಿಯು ನಿನ್ನ ಕಣ್ಣಾಗಿರಲಿ. ನಿನ್ನ ಪಕ್ಕೆಗಳು ಬೃಹತ್ ಮತ್ತು ರಥಂತರ (ಛಂದಸ್ಸು) ಆಗಿರಲಿ.; ಮತ್ತು ಋಗ್ವೇದವು ನಿಮ್ಮ ಆತ್ಮ, ಆಗಿರಲಿ. ನಿನ್ನ ಕೈ-ಕಾಲುಗಳು ಛಂದಸ್ಸಾಗಿರಲಿ. ಯಜುಃ ನಿನ್ನ ಹೆಸರು , ವಾಮದೇವ್ಯಾ ನಿನ್ನ ದೇಹ, ಮಾಡಬೇಕಾದ ಮತ್ತು ಮಾಡಬಾರದ ಕ್ರಿಯೆಗಳು ನಿನ್ನ ದೇಹದ ಹಿಂದಿನ ಭಾಗವಾಗಿದೆ. ಯಜ್ಞಗಳು ನಿನ್ನ ಅಡಿ (ಪಾದಗಳು). ನೀನು ಒಂದು ಉದಾತ್ತ ಆತ್ಮ!, ಉದಾತ್ತ ಗುಣಗಳನ್ನು ಪಡೆ, ನೀನು ಜ್ಞಾನವನ್ನೂ ಮತ್ತು ಜೀವನದಲ್ಲಿ ಹೆಚ್ಚಿನ ಸಂತೋಷವನ್ನೂ ಹೊಂದು. "
ಈ ನಂತರ ಗರ್ಭಿಣಿ ಮಹಿಳೆ ಶಿಸ್ತುಬದ್ಧ ರೀತಿಯಲ್ಲಿ ಜೀವಿಸಬೇಕು ಮತ್ತು ಸರಿಯಾದ (ನಿರ್ಬಂಧಿತ) ಆಹಾರ ಮತ್ತು ಸೀಮಿತ ಚಲನೆಯ ಒಂದು ಜೀವನವನ್ನುನಡೆಸಬೇಕು. ಅವರು ವನಸ್ಪತಿಯ ಹಾಲು (ಕೊಕ್ಯೂಲಸ್ ಜಿಲೋಯಿ) ಬ್ರಾಹ್ಮಿ ಮೂಲಿಕೆ, ಮತ್ತು ಒಣ ಶುಂಠಿ (ಸಣ್ಣ ಪ್ರಮಾಣದಲ್ಲಿ) ಹಾಲಿನೊಡನೆ ತಿನ್ನಲೇಬೇಕು (ಕಷಾಯ ಕುಡಿಯಬೇಕು). ಅವರು ತುಂಬಾ ಮಾತನಾಡಬಾರದು. ತುಂಬಾ ನಿದ್ರೆಯನ್ನೂ ಮಾಡಬಾರದು. ಉಪ್ಪು ಹೆಚ್ಚು ಉಪಯೋಗಿಸಬಾರದು. ಹುಳಿ, ಕಟು, ಕಹಿ ವಸ್ತುಗಳನ್ನು ತಪ್ಪಿಸಲು ಮತ್ತು (Termunallia Chebula (Haritaki- ಚೆಬ್ಯೂಲ)ಹರೀತಕಿದಂತಹ ವಿರೇಚಕಗಳನ್ನು ಸೇವಿಸಬಾರದು. ಕೋಪಗೊಳ್ಳಬಾರದು; ದುರಾಶೆ ಪಡಬಾರದು ಯಾವಾಗಲೂ ಆಹ್ಲಾದಕರ ಮತ್ತು ಸಂತೋಷದ ಮನಸ್ಸಿನವಳಾಗಿರಬೇಕು. ಅವರು(ಗರ್ಭಿಣಿಯರು) ಒಳ್ಳೆಯ ನಡತೆಯ ಜೀವನವನ್ನು ನಡೆಸ ಬೇಕು .
ಬೇರೆ ಪದ್ದತಿ

ಪುಂಸವನ : (ಅಕ್ಷರಶಃ,ಗರ್ಭದಲ್ಲಿ ಗಂಡುಮಗುವನ್ನಾಗಿ ಮಾಡುವುದಕ್ಕಾಗಿ) ಪುಂಸವನ ಪುಂ+ಸವನ , ಗರ್ಭಧಾರಣೆಯ ಮೂರನೆಯ ತಿಂಗಳಲ್ಲಿ ನಡೆಸುವ ಆಚರಣೆ. ಇದು ಮೊದಲ ಗರ್ಭಧಾರಣೆಯ, ನಾಲ್ಕನೇ ತಿಂಗಳಲ್ಲಿಯೂ ಮಾಡಬಹುದು. ಗರ್ಭಿಣಿಯ ಸ್ವಲ್ಪ ಮೊಸರು ಜೊತೆಗೆ, ಬಾರ್ಲಿಯ ಒಂದು ಕಾಳು, ಮತ್ತು ಕಪ್ಪು ಧಾನ್ಯದ ಎರಡು ಕಾಳುಗಳನ್ನು ಹೊಟ್ಟೆಗೆ ತೆಗೆದುಕೊಳ್ಳುತ್ತಾಳೆ. ಧಾರ್ಮಿಕ ಪಠಣವೂ ಇರುತ್ತದೆ. ( ಮೋನಿಯರ್ ವಿಲಿಯಮ್ಸ್ ಗೃಹ್ಯ ಸೂತ್ರದ ಉದಾಹರಣೆ.) ಪುಂಸವನ ಆಚರಣೆಯ ಸಮಯವನ್ನು ವಿವಿಧ ಗೃಹ್ಯ ಸೂತ್ರಗಳು ಭಿನ್ನವಾಗಿ ಹೇಳಿದೆ ಮತ್ತು ಕೆಲವುದರ ಪ್ರಕಾರ, ಗರ್ಭಾವಸ್ಥೆಯ ಎಂಟನೇ ತಿಂಗಳ ವರೆಗೆ ಅವಕಾಶವಿರುವುದು. ಕೆಲವು ಗೃಹ್ಯ ಸೂತ್ರಗಳು ಮೊದಲ ಗರ್ಭಧಾರಣೆಯಾದ ನಂತರ ಗರ್ಭಧಾರಣೆಯಾದಾಗ ಮೊದಲ ಕೆಲವು ತಿಂಗಳುಗಳಲ್ಲಿ ಗರ್ಭಧಾರಣೆಯ ಪ್ರಾಮುಖ್ಯತೆಯು ಕಡಿಮೆ ಎಂದು ನಂತರ ದಿನಗಳಲ್ಲಿ ಆಚರಿಸಬಹುದೆಂದು ಹೇಳೀರಬಹುದು

3.ಸೀಮಂತೋನ್ನಯನ

[ಬದಲಾಯಿಸಿ]
ಸೀಮಂತೋನ್ನಯನವು (ಅಕ್ಷರಶಃ, ಕೂದಲು ಬಾಚಿ ಬೈತಲೆ ಮಾಡುವುದು./ವಿಭಾಗಿಸುವುದು.) ಈ ಸಂಸ್ಕಾರವು ಮಹಿಳೆಯ ಮೊದಲ ಗರ್ಭಧಾರಣೆಯ ನಾಲ್ಕನೇ ಅಥವಾ ಐದನೇ ತಿಂಗಳಲ್ಲಿ ನಡೆಸಲಾಗುತ್ತದೆ. ಸೀಮಂತೋನ್ನಯನ ವು ಗರ್ಭಾವಸ್ಥೆಯ ನಿರ್ಣಾಯಕ ಅವಧಿಯಲ್ಲಿ ತಾಯಿ ರಕ್ಷಣೆಗಾಗಿ ನಡೆಸಲಾಗುತ್ತದೆ. ತಾಯಿ ಮತ್ತು ಮಗುವಿಗೆ ಇಬ್ಬರಿಗೂ ಹಾನಿ ತಪ್ಪಿಸಲು ಹಾಗೂ ಹುಟ್ಟುವ ಮಗುವಿಗೆ ಉತ್ತಮ ಆರೋಗ್ಯ, ಯಶಸ್ಸು ಮತ್ತು ಅಭ್ಯುದಯಗಳನ್ನು ಖಚಿತಪಡಿಸಿಕೊಳ್ಳಲು ಈ ಸಂಸ್ಕಾರ ಮಾಡಲಾಗುವುದು. ದೆವ್ವ ಹಾಗೂ ಪ್ರೇತಗಳಿಂದ, ತಾಯಿಯ ಗರ್ಭದಲ್ಲಿರುವ ಮಗುವಿನ ಮತ್ತು ತಾಯಿಯ ರಕ್ಷಣೆಗಾಗಿ ಈ ಧಾರ್ಮಿಕ ಕ್ರಿಯೆ ನಡೆಸಲಾಗುತ್ತದೆ.
ಪರಿಮಳಯುಕ್ತ ತೈಲವನ್ನು ಗರ್ಭಿಣಿಯ ತಲೆಗೆ ಸುರಿಯಲಾಗುವುದು. ತಲೆಯ ಕೂದಲಿನಲ್ಲಿ ಬೈತಲೆ. ರೇಖೆಯನ್ನು ಹಣೆಯ ಮೇಲು ಭಾಗದಿಂದ ಹಿಂಭಾಗದ ಕಡೆಗೆ ('ಕುಶ') ದರ್ಭೆ ಹುಲ್ಲಿನ ಮೂರು ಕಡ್ಡಿಗಳಿಂದ (ಮೂರು ಕಾಂಡ) ಗರ್ಭಿಣಿಯ ಕೂದಲು ಮೂಲಕ ಮೂರು ಬಾರಿ, ಪ್ರಣವ ಮಂತ್ರ ವಾದ ಓಂ ಮತ್ತು ವ್ಯಾಹೃತಿ (ಭೂರ್ ಭೂವಸ್ವಃ: ಮಂತ್ರ, ಭೂಃ ಭುವಃ, ಸುವಃ) ಎಂಬ ಪವಿತ್ರ ಪದಗಳನ್ನು ಪ್ರತಿ ಕಾರ್ಯಾಚರಣೆಯ ಸಂದರ್ಭದಲ್ಲಿ ಹೇಳಲಾಗುವುದು. (ಮಗು ಮೃತಜನನವಾದರೆ, ಮುಂದಿನ ಗರ್ಭಾವಸ್ಥೆಯಲ್ಲಿ ಇದನ್ನು ಪುನರಾವರ್ತಿತ ಮಾಡ ಬೇಕು. [1]

ಧರ್ಮಸಿಂಧು ಅನುಸಾರ

[ಬದಲಾಯಿಸಿ]
  • (೧೯೭೦ರ ಪ್ರತಿ-ಪುಟ೧೩೭)
  • ಈ ಸಂಸ್ಕಾರವು ಮಹಿಳೆಯ ಮೊದಲ ಗರ್ಭಧಾರಣೆಯಲ್ಲಿ ಮಾತ್ರಾ ನಡೆಸಲಾಗುತ್ತದೆ. (ಕಾತ್ಯಯನೀ ಸೂತ್ರದವರಿಗೆ ಪ್ರತಿ ಬಾರಿ ಮಾಡಲು ಹೇಳಿದೆ.) ಈ ಸಂಸ್ಕಾರಕ್ಕೆ ಪತಿಯೇ ಕರ್ತನು.
ಸಂಕಲ್ಪ
||ಮಮ ಅಸ್ಯಾಂ ಭಾರ್ಯಾಯಾಂ ಉತ್ಪತ್ಸ್ಯಮಾನ ಗರ್ಭಸ್ಯ ಗಾರ್ಭಿಕ ಬೈಜಿಕ ದೋಷ ಪರಿಹಾರ ಪುಂರೂಪತಾಸಿದ್ಧಿ , ಜ್ಞಾನೋದಯ ಪ್ರತಿರೋಧ ಪರಿಹಾರ ದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಸ್ತ್ರೀ ಸಂಸ್ಕಾರ ರೂಪಂ ಪುಂಸವನ ಮನವಲೋಭನಂ ಮಮ ಅಸ್ಯಾಯಾಂ ಭಾರ್ಯಾಯಾಂ ಗರ್ಭಾಭಿವೃದ್ಧಿ ಪರಿಪಂಥಿಪಿಶಿತರುದಿರಪ್ರಿಯಾSಲಕ್ಷ್ಮೀಭೂತ ರಾಕ್ಷಸೀಗಣ ದೂರನಿರಸನಕ್ಷಮ , ಸಕಲ ಸೌಭಾಗ್ಯ ನಿದಾನ ಮಹಾಲಕ್ಷ್ಮೀ ಸಮಾವೇಶನದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂಸ್ತ್ರೀ ಸಂಸ್ಕಾರರೂಪಂ ಸೀಮಂತೋನ್ನಯನಾಖ್ಯಂ ಕರ್ಮಕರಿಷ್ಯೆ||
  • ಈ ಸಂಕಲ್ಪದಿಂದ ಇದರ ಉದ್ದೇಶ ತಿಳಿಯುವುದು.
  • ನಾಂದೀಶ್ರಾದ್ಧದಲ್ಲಿ ಕ್ರತು> ದಕ್ಷಸಂಜ್ಞಕ ವಿಶ್ವೇದೇವತೆಗಳು; ಔಪಾಸನಾಗ್ನಿ/(೩ ಸಂಸ್ಕಾರ ಒಟ್ಟಿಗೆ ಮಾಡುವಾಗ) ಮಂಗಲನಾಮಕ ಅಗ್ನಿಯಲ್ಲಿ ಚರುವಿನಿಂದ(ಅನ್ನ)ಪ್ರಜಾಪತಿಯನ್ನು ಹೋಮಿಸಬೇಕು.
  • (ಸೀಮಂತದಲ್ಲಿ ಧಾತೃವನ್ನು ಮತ್ತು 'ರಾಕಾ'ವನ್ನೂ ಎರಡಾವರ್ತಿ, ವಿಷ್ಣುವನ್ನು ಮೂರಾವರ್ತಿ ಪ್ರರಜಾಪತಿಯನ್ನು ಒಂದಾವರ್ತಿ ಆಜ್ಯ(ತುಪ್ಪ)ದಿಂದ ಹೋಮಿಸತತಕ್ಕದ್ದು.
  • ಗರ್ಭಿಣಿಯ ಕೆಲವು ನಡವಳಿಕೆ ಬಗೆಗೆ ಎಚ್ಚರಿಕೆ : ಯಾವಾಗಲೂ ಮಲಗಿರಬಾರದು; ಅಮಂಗಲವಾಕ್ಯಗಳನ್ನು ನುಡಿಯಬಾರದು; ಕೋಳಿಯಂತೆ ಕಾಲುಗಳನ್ನು ಮಡಚಬಾರದು; ನಿತ್ಯದಲ್ಲೂ ಶುದ್ಧವಾದ ಆಚರಣೆಯನ್ನು ಮಾಡಿ ಗರ್ಭವನ್ನು ರಕ್ಷಿಸಿಕೊಳ್ಳಬೇಕು. ಶುದ್ಧವಾದ ಮನೆಯಲ್ಲಿ ವಾಸಮಾಡಬೇಕಯ ಅರಿಸಿನ, ಕುಂಕುಮ, ಹೂವು ಇತ್ಯಾದಿ ಶುಭವಸ್ತುಗಳನ್ನು ಉಪಯೋಗಿಸಬೇಕು. ೪,೬,೮ನೇ ತಿಂಗಳಲ್ಲಿ ತೀರ್ಥಯಾತ್ರೆ-ಪ್ರಯಾಣಗಳನ್ನು ಬಿಡಬೇಕು; ಆರು ತೀಂಗಳ ನಂತರ ಪ್ರಯಾಣಗಳನ್ನು ಮಾಡಬಾರದು.

ಉತ್ತರ ದೇಶದ ಕ್ರಮ2

[ಬದಲಾಯಿಸಿ]

ಸೀಮಂತೋನ್ನಯನ ಪೂರ್ವ ಪ್ರಸವ ಸಂಸ್ಕಾರ ಸರಣಿಯಲ್ಲಿ ಮೂರನೇಯದು, ಗರ್ಭಾವಸ್ಥೆಯ ಐದನೇ ಮತ್ತು ಎಂಟನೇ ತಿಂಗಳ ನಡುವಿನ ಅವಧಿಯಲ್ಲಿ ನಡೆಸಲಾಗುತ್ತದೆ. ಕೇವಲ ಹೆಂಗಸರು ಈ ಸಂಸ್ಕಾರ ಸಮಯದಲ್ಲಿ ಬಳಸುವ ನಿರ್ದಿಷ್ಟ ವಸ್ತುಗಳನ್ನು, ಒಂದು ಮುಳ್ಳುಹಂದಿ ಗರಿ ಯನ್ನು, ಮಾಗಿದ ಭತ್ತ ಕದಿರು ಮತ್ತು ಕೆಲವು ಔದುಂಬರ ಎಲೆಗಳು ಉಪಯೋಗಿಸಲ್ಪಡುತ್ತವೆ. ಆವಾಹಿಸುವ ದೇವತೆ ‘ರಿಕಾ’, ಇದು ಪೂರ್ಣ ಚಂದ್ರನ ಅಧಿದೇವತೆ. ಕ್ರಿಯೆಯ ಪರಿಣಾಮ ಗರ್ಭಧಾರಣೆಯ ಫಲಪ್ರದವಾಗಲಿ, ಎಂದು; ಮಗುವು (ಮುಳ್ಳುಹಂದಿ ಗರಿಯಂತಹ) ತೀಕ್ಷ್ಣ ವಾದ ಮತ್ತು ಚುರುಕಾದ ಬುದ್ಧಿಶಕ್ತಿ ಹೊಂದುವಂತೆ ಮಾಡಬೇಕು ಮತ್ತು ಮಗುವು ಪೂರ್ಣ ಚಂದ್ರನ ಹಾಗೆ ಸುಂದರವಾಗಿ ಇರಬೇಕು ಎಂದು. ಮಂತ್ರದ ಮುಖ್ಯಾಂಶ: "ನಾನು ದೇವತೆ ರಾಕಾಳನ್ನು ಬೇಡಿಕೊಳ್ಳುತ್ತೇನೆ ಏನೆಂದರೆ ಈ ಸಮಾರಂಭವು ದೋಷವಿಲ್ಲದಂತೆ ನೆಡೆಯಲಿ. ನನ್ನ ಮಗ ವಿಶೇಷ ಬುದ್ಧಿಮತ್ತೆ ಹೊಂದುವಂತೆ ಮಾಡಲಿ.
ಈ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ಇರುವುದು. ವಿಶೇಷವಾಗಿ ವೀಣೆ ನುಡಿಸಲಾಗುವುದು. ಇದು ಕೆಲವು ಮಾನಸಿಕ ಪ್ರಯೋಜನಗಳನ್ನು ಒದಗಿಸುತ್ತವೆ. ಜೊತೆಗೆ ತಾಯಿಯ ಎದೆಹಾಲು ಕೊಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಒಂದು ವೀರೋಚಿತ ಮಗುವನ್ನು ಸೃಷ್ಟಿಸಲು "ವೀರೋಚಿತ ಮಕ್ಕಳು ತಾಯಿ":ಯಾಗು ಎಂದು ಹೆಂಗಸರಿಗೆ ಹಾಡಲು ತಿಳಿಸಲಾಗುತ್ತದೆ. ತಾಯಿ ಮೌನವಾಗಿದ್ದು ನಕ್ಷತ್ರಗಳು ಗೋಚರಿಸಿಕೊಳ್ಳುವ ತನಕ ಉಪವಾಸವಿದ್ದು ರಾತ್ರಿ. ಸಮಾರಂಭದ ಸಮಾರೋಪದಲ್ಲಿ ಅವಳು ಗಂಡು ಕರು ಮುಟ್ಟಿದರೆ ಮಗನನ್ನು ಹೆರುವಳೆಂದು ಸಂಕೇತಿ ಸುತ್ತದೆ,.
[ಸೂಚನೆ: ಈ ಕೆಳಗಿನ ಸಂಕ್ಷಿಪ್ತ ವಿವರಣೆಗಳನ್ನು ಸ್ವಾಮಿ ದಯಾನಂದ ಸರಸ್ವತಿ (ಆರ್ಯ ಸಮಾಜದ ಸ್ಥಾಪಕ) ಬರಹಗಳಿಂದ ಆಯ್ದಿದೆ. ಅನುವಾದ ಆಚಾರ್ಯ ವೈದ್ಯನಾಥ್ ಶಾಸ್ತ್ರಿ ಆಗಿದೆ]].
"ನಾನು, ಪತಿ, ನಾನು ಹುಣ್ಣಿಮೆಯಂತೆ ಸುಂದರಳಿರುವ ನನ್ನ ಪತ್ನಿಯನ್ನು ಕರೆಯುತ್ತೇನೆ. ಅವಳು ಹೊಗಳಿಕೆಗೆ ಅರ್ಹಳಾಗಿದ್ದಾಳೆ; ಪ್ರಾರ್ಥನೆಯ ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸಲು ಕರೆ. ತನ್ನ ಅವಕಾಶ, ಮಹಿಳೆ ಉತ್ತಮ ಅದೃಷ್ಟ, ನನ್ನ ಮಾತುಗಳನ್ನು ಕೇಳಲಿ ಮತ್ತು ತನ್ನ ಚೈತನ್ಯದಿಂದ ಗ್ರಹಿಸಲಿ. ಆಕೆ ವಂಶಸ್ಥರ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ಅವಳು ಸೂಜಿ ಬೆರಳುಗಳನ್ನು ಚುಚ್ಚದಂತೆ ಬಟ್ಟೆಯನ್ನು ಹೊಲಿಗೆ ಮಾಡುವಂತೆ ಮಾಡಲಿ. ಅವಳು ನನಗೆ ಒಂದು ಕೆಚ್ಚೆದೆಯ ಮಗ ನೀಡಲಿ. ಇಲ್ಲಿ ಉಚ್ಚರಿಸಿದ ಯಾವುದೇ ಸತ್ಯವಾಗಿದೆ, ಎಂಬುದನ್ನು ಇತ್ಯಾದಿ;. ಇಲ್ಲಿ ನೀಡಿದ ನೈವೇದ್ಯ ದೇವತೆ ರಾಕಾಳಿಗೆ ಮಾತ್ರ ಮತ್ತು ಇದು ನನಗೆ ಅಲ್ಲ.
" ಓ, ಉದಾರಿಯಾದ ಪೂರ್ಣ ಚಂದ್ರನಂತಿರುವ ಸುಂದರ ಹೆಣ್ಣೇ. ಸಂತೋಷದಿಂದ, ವಿವಿಧ ದೈಹಿಕ ಮತ್ತು ಆಧ್ಯಾತ್ಮಿಕ ಸಂಪತ್ತುಗಳ ಜೊತೆಗೆ ನನ್ನ ಹತ್ತಿರ ಬಾ" ಸ್ವರೂಪ ಮತ್ತು ಯಾರು, ಓ ಅದೃಷ್ಟಶಾಲಿ ಸಂತಸದ ಹೃದಯದಿಂದ, ಮತ್ತು ಪ್ರಶಂಸಾರ್ಹವಾದ ನನಗೆ ಅದೃಷ್ಟ ನೀಡುವ ಸಾವಿರ ರೀತಿಯ ಸಂಪತ್ತುಗಳ ಜೊತೆಗೆ ಬಾ. ಇಲ್ಲಿ ಉಚ್ಚರಿಸಿದ ಯಾವುದೇ ವಿಚಾರದಲ್ಲಿ ಸತ್ಯವಾಗಿದೆ. ;..ಇಲ್ಲಿ ನೀಡಿದ ನೈವೇದ್ಯ ದೇವತೆ ರಾಕಾಳಿಗೆ ಮಾತ್ರ ಮತ್ತು ಇದು ನನಗೆ ಅಲ್ಲ.
“ಶೂರನಾದ ನನ್ನ ಗಂಡ ನನ್ನಲ್ಲಿ ಮಗನನ್ನು ಪಡೆಯುವ ಅಪೇಕ್ಷೆಯಿಂದ ಜೀವದ ಭ್ರೂಣವನ್ನು ಸ್ಥಾಪಿಸಿರುವನು. ಇಚ್ಛಿಸುವ ಅಥವಾ ಮಗುವಿನ ಯಾರು ದೆ. ಮೇ ನನ್ನ ಪತಿಯು ಎಲ್ಲಾ ಅನಿಷ್ಟದಿಂದ ಮುಕ್ತನಾಗಲಿ ಮತ್ತು ಉದಾತ್ತ ಮಗನೊಂದಿಗೆ ನನ್ನ ಜೊತೆಗೂಡಲಿ."

4.ಜಾತಕರ್ಮ

[ಬದಲಾಯಿಸಿ]

ಜಾತಕರ್ಮವು (ಅಕ್ಷರಶಃ, ಪ್ರಸವ ವಿಧಿಗಳನ್ನು ಕುರಿತದ್ದು) ಮಗುವಿನ ಬುದ್ಧಿಶಕ್ತಿ ಅಭಿವೃದ್ಧಿ ಗಾಗಿ ಈ ವಿಧಿ ಇದೆ.. ಗಂಡು ಜನಿಸಿದ, ತಕ್ಷಣ ನಡೆಸಲಾಗುತ್ತದೆ (ಜನ್ಮ ಸಂಪರ್ಕ ಆಚರಣೆ). , ಸ್ವರ್ಣ ಪ್ರಾಶನ ಸಂಸ್ಕಾರ ಎಂದು ಕರೆಯಲಾಗುತ್ತದೆ. ಆಯುರ್ವೇದದ ಪ್ರಕಾರ ಚಿನ್ನದ ಚಮಚದಲ್ಲಿ , ತುಪ್ಪ ಮತ್ತು ಜೇನು ಮಿಶ್ರಣದ ಒಂದು ಸಣ್ಣ ಭಾಗವನ್ನು ಹೊಸದಾಗಿ ಜನಿಸಿದ ಶಿಶುವಿಗೆ, ನೀಡಲಾಗುತ್ತದೆ. [3] ಈ ವಿಧಿಯ ( ಈ ಪ್ರಕ್ರಿಯೆ) ಉತ್ತಮ ಅದೃಷ್ಟವನ್ನು ಸಂಕೇತಿಸುತ್ತದೆ. (ಮನುಸ್ಮೃತಿ 2.27 ಉಲ್ಲೇಖ)

ಜಾತಕರ್ಮದ ಮುಖ್ಯವಿಧಿಗಳು

[ಬದಲಾಯಿಸಿ]

ಜಾತಕರ್ಮ
ಸಂಬಂಧಪಟ್ಟ ವ್ಯಕ್ತಿಗಳು ನೀರನ್ನು, ಮಗುವಿಗೆ ಜನ್ಮ ಕೊಡುತ್ತಿರುವ ಮಹಿಳೆಗೆ ಸಿಂಪಡಿಸುತ್ತಾರೆ
ಈ ಕ್ರಮ, ಪಾರಸ್ಕರ ಗೃಹ್ಯ ಸೂತ್ರವು ಅಧಿಕೃತವಾಗಿದೆ; ಹಾಗಾಗಿ ಅಶ್ವಲಾಯನ, ಗೋಭೀಲಿಯ ಮತ್ತು ಶೌನಕೀಯ ಗೃಹ್ಯ ಸೂತ್ರಗಳಲ್ಲಿ ಅದನ್ನೇ ಬರೆಯಲಾಗಿದೆ.
ಗರ್ಭಿಣಿಯು ಹರುವ ಸಮಯದಲ್ಲಿ, ಗರ್ಭಿಣಿಯ ದೇಹದ ಮೇಲೆ ನೀರನ್ನು ಚಿಮುಕಿಸುವುದು, ಜೊತೆಗೆ ಯಜುರ್ವೇದ ಮಂತ್ರಗಳನ್ನು ಮತ್ತು ಇತರ ಮಂತ್ರಗಳನ್ನೂ ಹೇಳಬೇಕು.
ಮಗುವಿನ ಹೊಕ್ಕುಳಬಳ್ಳಿ ಕತ್ತರಿಸುವ ಮೊದಲು ಈ ಸಂಸ್ಕಾರ ಕ್ರಿಯೆಗಳನ್ನು (ನಿಕಟ ಕುಟುಂಬ ವಲಯಗಳಲ್ಲಿ ಸಾವಿನ ಅಶೌಚ ಹೊರತು) ಸರಿಯಾದ ರೀತಿಯಲ್ಲಿ ನಡೆಸಬೇಕು . ತಂದೆ ಹೊಸದಾಗಿ ಜನಿಸಿದ ಶಿಶುವಿನ ಮುಖ ನೋಡುವನು; ಅದರಿಂದಲೇ,ಒಮ್ಮೆಗೇ ,ಅವನ ಪೂರ್ವಿಕರಿಗೆ ತನ್ನ ಸಾಲದ ಋಣ ತೀರಿ ಪಾಪಕರ್ಮ ಕಳೆದಂತೆ ಆಗುತ್ತದೆ. ನಂತರ ಅವನು ತಕ್ಷಣ ಬಟ್ಟೆಗಳ ಸಮೇತ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಬೇಕು. / ನದಿ ಅಥವಾ ಸರೋವರದಲ್ಲಿ ನೆಗೆದು ನೀರು ಸಿಡಿಸುವಂತೆ ಮಾಡಬೇಕು (ನೀರು ಮರದಷ್ಟು ಎತ್ತರ ಹಾರಲಿ -ಎಂದಿದೆ). ಅವನು-(ತಂದೆಯು) ನಂತರ ದಾನಗಳನ್ನು ಕೊಡಬೇಕು. ಆ ಸಮಯದಲ್ಲಿ ಅವನು ಮಾಡಿದ ಧರ್ಮ ಇತ್ಯಾದಿ (ದಾನ ಮತ್ತು ಇತರ ಉತ್ತಮ ಕಾರ್ಯಗಳು) ಅಪಾರ ಪುಣ್ಯಪ್ರದವಾದುದು.
ತಂದೆಯು ನಂತರ ಮಂತ್ರಗಳನ್ನು ಉಚ್ಚರಿಸುತ್ತಿದ್ದಂತೆ ಒಂದು ಚಿನ್ನದ ಉಂಗುರದ ಮೂಲಕ ಒಂದು ಜೇನು ಹನಿಯನ್ನು ಶಿಶುವಿನ ನಾಲಿಗೆಯ ಮುಟ್ಟಿಸಿದರೆ, ಮಗುವಿನ ಮೇಧಾ ಶಕ್ತಿ ಹೆಚ್ಚುತ್ತದೆ. (ಸುಶ್ರುತನು ಈ ನಿಟ್ಟಿನಲ್ಲಿ ಜೇನುತುಪ್ಪದ ಗುಣಲಕ್ಷಣಗಳನ್ನು ಹೊಗಳುತ್ತಾನೆ.)
ಮಗುವಿಗೆ ಹೆಸರನ್ನು ರಹಸ್ಯವಾಗಿ ನೀಡಲಾಗುತ್ತದೆ ಏಕೆಂದರೆ ತನ್ನ ಶತ್ರುಗಳು ಮಗುವಿನ ಹೆಸರಿನ ಮೇಲೆ ಕೃತ್ರಿಮ (ಮಾಟ-ಮಂತ್ರ) ಮಾಡುವುದನ್ನು ತಡೆಯಲು ಹೆಸರಿನ ರಹಸ್ಯ ಅಗತ್ಯ. ನಂತರ ತಂದೆ ಶಿಶುವಿನ ಕಿವಿಯಲ್ಲಿ ಅದರ ದೀರ್ಘಾಯುಷ್ಯಕ್ಕಾಗಿ ಒಂದು ಪ್ರಾರ್ಥನೆ ಮಾಡುತ್ತಾನೆ. ಇತರ ಬ್ರಾಹ್ಮಣರು (ಪುರೋಹಿತರು) ಶಿಶುವಿಗೆ ದೀರ್ಘಾಯಷ್ಯ ವಾಗಲಿ ಎಂದು (ಮಗುವಿಗೆ) ಆಶೀರ್ವಾದ ಮಾಡುತ್ತಾರೆ. :ತಂದೆಯು ಭೂಮಿತಾಯಿಯನ್ನು ಕುರಿತು "ನಾವು ಒಂದು ನೂರು ವರ್ಷಗಳ ಕಾಲ ಜೀವಿಸುವಂತಾಗಲಿ." ಎಂದು ಪ್ರಾರ್ಥಿಸುತ್ತಾನೆ. ಮತ್ತೊಂದು ಮಂತ್ರದ ಮೂಲಕ: "; (ಶತ್ರುಗಳಿಗೆ) ಕೊಡಲಿಯಾಗು, ; ಕಲ್ಲಿನನಂತಾಗು ಚಿನ್ನದಂತೆ ಅವಿನಾಶಿಯಾಗು, ಎಂದ ಹರಸುತ್ತಾನೆ." ತಂದೆಯು ಮಗುವು ಶಕ್ತಿ, ಶೌರ್ಯ ಮತ್ತು ಖ್ಯಾತಿಯ ಹೊಂದಲಿ ಎಂದು ಪ್ರಾರ್ಥಿಸುತ್ತಾನೆ
ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದ ನಂತರ, ಮಗುವನ್ನು, ಪತಿಯು ತಾಯಿಗೆ ಎದೆಹಾಲು ಕುಡಿಸಲು ಹಸ್ತಾಂತರಿಸುತ್ತಾನೆ. ನಂತರ ಜಲ ದೇವತೆಗೆ ಮಗುವನ್ನು ರಕ್ಷಿಸಲು ಪ್ರಾರ್ಥಿಸುತ್ತಾನೆ.
(ಸೂಚನೆ: ಈ ಕೆಳಗಿನ ಸಂಕ್ಷಿಪ್ತ ವಿವರಣೆಗಳನ್ನು (ಯಾದೃಚ್ಛಿಕವಾಗಿ ಆಯ್ಕೆಮಾಡಿದ ಸಂಕ್ಷಿಪ್ತ ಸಾರಗಳು) ಸ್ವಾಮಿ ದಯಾನಂದ ಸರಸ್ವತಿ (ಆರ್ಯ ಸಮಾಜದ ಸ್ಥಾಪಕ) ಬರಹಗಳಿಂದ ಆಯ್ಕೆಮಾಡಿದೆ . ಅನುವಾದ: ಆಚಾರ್ಯ ವೈದ್ಯನಾಥ್ ಶಾಸ್ತ್ರಿ ಅವರದು.)
ಪತಿಯು ದಾನಗಳನ್ನು ಮಾಡಿದ ಕಳಿಸಿ ನಂತರ ಸಾಮಾನ್ಯ ಪ್ರಕರಣದ ಕೊನೆಯಲ್ಲಿ ಹೇಳಿದ ’ವಾಮದೇವಾಯ’ ಮಂತ್ರ/ಗಾನ ಪಠಿಸಬೇಕು ಬೇಕು. ಮಗುವಿನ ತಂದೆ ತುಪ್ಪ (ಶೋಧಿಸಿದ ಬೆಣ್ಣೆ) ಮತ್ತು ಜೇನುತುಪ್ಪ ಸರಿಯಾಗಿ ಮಿಶ್ರಣದಲ್ಲಿ ಅದ್ದಿದ ಪೂರ್ವ-ಸಿದ್ಧವಾದ ಚಿನ್ನದ ಕಡ್ಡಿಯಿಂದ, ಮಗುವಿನ ನಾಲಿಗೆಯಮೇಲೆ ‘ಓಂ’ ಅಕ್ಷರವನ್ನು ಬರೆಯಬೇಕು.. ನಂತರ ಮಗುವಿನ ಬಲ ಕಿವಿಯಲ್ಲಿ, ನಿನ್ನ ಗೌಪ್ಯ ಹೆಸರು ‘ವೇದ’ ಆಗಿದೆ ಎಂದು ಪಿಸುಮಾತಿನಲ್ಲಿ ಹೇಳಬೇಕು. ಮಗುವಿನ ಕೆಳಗಿನ ಮಂತ್ರಗಳ ತುಪ್ಪ ಮತ್ತು ಜೇನು ಮಿಶ್ರಣಮಾಡಿದ ಸ್ವಲ್ಪ ದ್ರವವನ್ನು ಚಿನ್ನದ ಕಡ್ಡಿಯಿಂದ, ಮಗುವಿನ ನಾಲಗೆಗೆ ನೆಕ್ಕಿಸಬೇಕು.: ಆಗ ಈ ಅರ್ಥದ ಮಂತ್ರ ಹೇಳಬೇಕು:
"ಓ ಮಗು, ದೇವರು ಈ ವಿಶ್ವದ ಎಲ್ಲಾ ಸಂಪತ್ತಿನ ನಿರ್ಮಾಪಕ. ನಿನಗೆ ನಾನು ದೇವರು ನಿರ್ಮಾಣ ಮಾಡಿದ ತುಪ್ಪ ಮತ್ತು ಜೇನು ನೀಡಿದ್ದೇನೆ. ನಿನ್ನನ್ನು, ನಿನ್ನ ಪೋಷಕರು ಜ್ಙಾನಿಗಳು/ವಿದ್ವಾಂಸರು ರಕ್ಷಿಸಲಿ. ನೀನು ದೀರ್ಘವಾದ ಆಯುಷ್ಯಹೊಂದಿ ನೂರು ಶರತ್ಕಾಲ ಈ ಪ್ರಪಂಚದಲ್ಲಿ ಜೀವನ ನಡೆಸು."
"ನಾನು ನಿನಗೆ ಜೀವವನ್ನು ಸೃಷ್ಟಿಸಿದ ದೇವರ ವಿಚಾರವನ್ನು ನಿನ್ನಲ್ಲಿ ಸ್ಥಾಪಿಸುತ್ತೇನೆ. ಓ ಮಗು, ಎಲ್ಲಾ ಸೌಂದರ್ಯದ ಮೂಲವಾದ ದೇವರ ಕಲ್ಪನೆಯನ್ನು. ನಾನು ನಿನ್ನಲ್ಲಿ ಸ್ಥಾಪಿಸುತ್ತೇನೆ. ಓ ಮಗು,ಎಲ್ಲಾ ಜಗತ್ತಿನ ಚಟುವಟಿಕೆಗಳಿಗೂ ಮೂಲವಾದ ದೇವರ ಭಾವನೆ/ಕಲ್ಪನೆಯನ್ನು ನಾನು ನಿನ್ನಲ್ಲಿ ಸ್ಥಾಪಿಸುತ್ತೇನೆ. ನಾನು ಎಲ್ಲ ಜೀವದ ಮೂಲವಾದ ದೇವರ ಭಾವನೆಯನ್ನು /ಕಲ್ಪನೆಯನ್ನು ನಾನು ನಿನ್ನಲ್ಲಿ ಸ್ಥಾಪಿಸುತ್ತೇನೆ,"
"ನಾವು, ವಿಶ್ವದ, ಎಲ್ಲಾ ವಸ್ತುಗಳ ಸೃಷ್ಟಿಕರ್ತನೋ ಅವನನ್ನು -ಆ ದೈವತ್ವವನ್ನು ಪಡೆಯೋಣ. ಆ ದೈವತ್ವವು ಜ್ಞಾನ (ತಿಳುವಳಿಕೆ) ಯುಳ್ಳದ್ದು ತಾರತಮ್ಯದ ಜ್ಞಾನ ವುಳ್ಳದ್ದು. ವ್ಯಕ್ತಿಗತ ಆತ್ಮಗಳು ಕೂಡಾ ಜ್ಞಾನದ ಮೂಲಕ ತಲುಪಬಹುದಾದ ಆಶ್ಚರ್ಯಕರ ಮತ್ತು ಶಾಶ್ವತವಾದ ದೈವತ್ವವನ್ನು, ವಿಚಾರ ಶಕ್ತಿಯಿಂದ ತಲುಪೋಣ..
ಈ ಮಂತ್ರಗಳ ಪಠಣದೊಂದಿಗೆ , ಮಗುವಿಗೆ ತುಪ್ಪ ಮತ್ತು ಜೇನನ್ನು ಆರು ಬಾರಿ ನೆಕ್ಕಿಸಬೇಕು. ಬಹಳ ಅತ್ಯಲ್ಪ ಪ್ರಮಾಣದ ಸ್ವಚ್ಛಗೊಳಿಸಿದ ಅನ್ನ ಮತ್ತು ಬಾರ್ಲಿಯನ್ನು ಅರೆದು ನೀರಿನಲ್ಲಿ ಬೆರೆಸಿ ಬಟ್ಟೆಯ ಮೂಲಕ ಶೋಧಿಸಿ ನಂತರ ಒಂದು ಪಾತ್ರೆಯಲ್ಲಿ ಇಡಬೇಕು. ಈ ದ್ರವವನ್ನು ಹೆಬ್ಬೆರಳು ಮತ್ತು ಕಿರು ಬೆರಳು ಬಳಸಿ ಮಗುವಿನ ಬಾಯಿಯಲ್ಲಿ ಈ ಒಂದು ಹನಿ ದ್ರಾವಣವನ್ನು ತಂದೆಯು ಕೆಳಗಿನ ಮಂತ್ರ ಉಚ್ಚಾರಮಾಡುತಾ ಹಾಕಬೇಕು.
"ಇದು ತುಪ್ಪ. ಇದು ಧಾನ್ಯ ಇದು ಜೀವಧಾತು. ಇದು ಪ್ರಾಣ ಮತ್ತು ಅಮರತ್ವದ ಅಥವಾ ಸೇವಿಸಬಹುದಾದ ಅಮೃತ ವಾಗಿದೆ.
[ಗಮನಿಸಿ: ಇದು ಕೇವಲ ಗೋಭಿಲೀಯ ಮತ್ತು ಯಾವುದೇ ಇತರ ಗೃಹ್ಯ ಸೂತ್ರ ಮಾತ್ರದ ಅಭಿಪ್ರಾಯವಲ್ಲ.]

ನಂತರ ಮಗುವಿನ ತಂದೆ ಕೆಳಗಿನ ಮಂತ್ರಗಳನ್ನು ಮಗುವಿನ ಬಲ ಕಿವಿಯಲ್ಲಿ ಪಿಸುಗುಟ್ಟುತ್ತಾನೆ.:

"ಓ ಮಗು!, ಎಲ್ಲದರ ಸೃಷ್ಟಿಕರ್ತನಾದ ದೇವರು (ಬ್ರಹ್ಮ), ಸ್ಥಿರವಿವೇಕದಿಂದ ಆಶೀರ್ವಾದ ಮಾಡಲಿ;. ಕಲಿಕೆಯ (ಜ್ಞಾನದ) ದೇವತೆ ಸರಸ್ವತಿ ದೇವತೆಯು ಪೂರ್ಣ ಜ್ಞಾನದಿಂದ ಆಶೀರ್ವಾದ ಮಾಡಲಿ. ಆಕಾಶದಲ್ಲಿ ಸ್ಥಿತರಾದ ಸೂರ್ಯ ಮತ್ತು ಚಂದ್ರರು, ನಿನಗೆ ಜ್ಞಾನ ಮೂಲವಾಗಲಿ.”
"ಬೆಂಕಿ ಜೀವನದ ಮೂಲವಾಗಿದೆ, ಇದು ಮರದ ಇಂಧನದಿಂದ ಈ ಶಕ್ತಿಯನ್ನು ಪಡೆಯುತ್ತದೆ.. ಓ ಮಗು! ನೀನು ಜೀವ ನೀಡುವ ಆ ಬೆಂಕಿಯಿಂದ ದೀರ್ಘಾಯುಷ್ಯವನ್ನು ಪಡೆ."
"ಸೋಮ,/ ಚಂದ್ರನು ಪ್ರಾಣ/ಜೀವ,ಜ್ಞಾನ ಮತ್ತು ಬುದ್ಧಿವಂತಿಕೆಯ ಮೂಲ, ಜೀವನದ ಮೂಲವೂ ಆಗಿದೆ. ಇದು ವೇದಗಳ ಜ್ಞಾತೃಗಳಾದ ಬ್ರಾಹ್ಮಣರಿಂದ ಈ ಶಕ್ತಿಯನ್ನು ಪಡೆಯುತ್ತಾನೆ. ಪ್ರಬುದ್ಧ ಜ್ಞಾನಿಗಳಾದ ವ್ಯಕ್ತಿಗಳು ದೀರ್ಘಾಯುಷ್ಯದ ಮೂಲ ಕಾರಣರು. ಅವರು ಅಮರತ್ವದ ಮೂಲಕ ಈ ಅಧಿಕಾರವನ್ನು ಗಳಿಸಿದ್ದಾರೆ. ಅವರು,ಒಳನೋಟದ ಪ್ರತಿಭೆ ಹೊಂದಿರುವ ಋಷಿಗಳು,(ತ್ರಿಕಾಲ ಜ್ಞಾನ ಉಳ್ಳವರು). ಅವರು ಸಂಯಮ ಮತ್ತು ಶಿಸ್ತು ಉಳ್ಳ ಜೀವನದ ಮೂಲಕ ಈ ಶಕ್ತಿಯನ್ನು ಗಳಿಸಿದ್ದಾರೆ. ಇತ್ಯಾದಿ; ಪಿತೃಗಳು , ಜೀವನದ ಮೂಲ. ಅವರು ಕಾಳುಗಳು, ಧಾನ್ಯಗಳು ಮತ್ತು ಇತರ ಆಹಾರ ವಸ್ತುಗಳಿಂದ ಈ ಅಧಿಕಾರವನ್ನು/ಶಕ್ತಿಯನ್ನು ಗಳಿಸಿದ್ದಾರೆ.
ಯಜ್ಞ ಜೀವನದ ಮೂಲವಾಗಿದೆ. ಅರ್ಹ ರೀತಿಯಲ್ಲಿ ಅದನ್ನು ಮಾಡುವ ಮೂಲಕ ಈ ಶಕ್ತಿ ಪಡೆಯುತ್ತದೆ.ಸಮುದ್ರ ಜೀವನದ ಮೂಲವಾಗಿದೆ. ನದಿಗಳಿಂದ ಈ ಶಕ್ತಿ ಪಡೆಯುತ್ತದೆ.
ಈ ಚಂದ್ರನ ಪ್ರಾಣದಿಂದ , ಅದರ ಜ್ಞಾನ , ವಿದ್ಯೆಯಿಂದ , ವಿದ್ವಾಂಸರ ಜೀವನದಿಂದ , ಪಿತೃಗಳ ,ಋಷಿಗಳ ಜೀವನದಿಂದ ಯಜ್ಞದ ಪ್ರಾಣ /ಜೀವದಿಂದ ಸಮುದ್ರದ ಪ್ರಾಣ /ಜೀವದಿಂದ., ಓ ಮಗು, ನೀನು ದೀರ್ಘಾಯುಷ್ಯದ ಜೀವನ, ಜ್ಞಾನ ಮತ್ತು ತಿಳುವಳಿಕೆ /ಬುದ್ಧಿವಂತಿಕೆಗಳನ್ನು ಪಡೆ.(ಅದನ್ನು ತಲುಪು)."
ಈ ಮಂತ್ರಗಳನ್ನು ಮತ್ತೆ ಮಗುವಿನ ಹೆಗಲ ಮೇಲೆ ಬಹಳ ನಿಧಾನವಾಗಿ ತನ್ನ ಕೈ ಇರಿಸಿ,ತಂದೆಯು,ಮಗುವಿನ ಎಡ ಕಿವಿಯಲ್ಲಿಯೂ, ಪಠಿಸಬೇಕು. ನಂತರ, ಮಗುವಿನ ತಂದೆ, ಹೆಚ್ಚು (ಆಶೀರ್ವಚನ) ಮಂತ್ರಗಳನ್ನು ಪಠಿಸಬೇಕು.. ಈ ಕೆಳಗೆ ಕೇವಲ ಒಂದು ಮಂತ್ರವನ್ನು ಕೊಟ್ಟಿದೆ.

"ಓ ಮಗು, ನೀನು ಒಂದು ಬಂಡೆಯಂತೆ ಬಲಿಷ್ಟನೂ ಮತ್ತು ಸ್ಥಿರನೂ ಆಗು,. ನೀನು ಅನ್ಯಾಯದ ವಿರುದ್ಧ, ನಾಶಮಾಡುವ ಕೊಡಲಿಯಾಗು; ನೀನು ಪುಟವಿಕ್ಕಿದ ಚಿನ್ನದಂತೆ ಜ್ಞಾನ ಮತ್ತು ಕ್ರಿಯೆಯಿಂದ ಪ್ರಕಾಶಿಸು. ಓ ಮಗು!, ನೀನು ನನ್ನ ಆತ್ಮ ಮತ್ತು ಅಂತಃಶಕ್ತಿ. ನೀನು ಅಲ್ಪಾಯುವಾಗಬೇಡ,. ನೀನು ನೂರು ಶರತ್ಕಾಲ ಜೀವಿಸು."

ಹೆಚ್ಚಿನ ವಿವರ

[ಬದಲಾಯಿಸಿ]

ಧರ್ಮಸಿಂಧು ಪ್ರಕಾರ ಜಾತಕರ್ಮ_ (1970ರಕನ್ನಡ ಪ್ರತಿ)
ತಂದೆಯಾದವನು ಸ್ನಾನಾಲಂಕಾರಯುಕ್ತನಾಗಿ ನಾಲಾಛೇದ ಆಗದಿದ್ದ, ಇನ್ನೂ ಮೊಲೆಯ ಹಾಲನ್ನು ಕುಡಿಯದ , ಮತ್ತೊಬ್ಬರು ಮುಟ್ಟದಿರುವ ಶಿಶುವನ್ನು ತಾಯಿಯ ತೊಡೆಯಲ್ಲಿಡುವಂತೆ ಮಾಡಿ, ಆಚಮನ ದೇಶಕಾಲಾದಿ ಉಚ್ಚರಣನಂತರ ,”ಅಸ್ಯ ಕುಮಾರಸ್ಯ (ಕುಮಾರಿ) ಗರ್ಭಾಂಬುಪಾನ ಜನಿತ ದೋಷನಿರ್ಭರಣ ಆಯುರ್ಮೇಭಿವೃದ್ಧಿ ಬೀಜಗರ್ಭಸಮುದ್ಭವೈನೋನಿಬರ್ಹಣ ದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಜಾತ ಕರ್ಮಹರಿಷ್ಯೆ" ,ತದಾದೌ ಸ್ವಸ್ತಿ ಪುಣ್ಯಾಹ ವಾಚನಂ ಮಾತೃಪೂಜನಂ ಕರಿಷ್ಯೆ , ಹಿರಣ್ಯೇನ ಜಾತಕ ಕರ್ಮಾಂಗಂಚ ನಾಂದೀ ಶ್ರಾದ್ಧಂ ಕರಿಷ್ಯೇ : ದಾನಗಳನ್ನು ಮಾಡಿ ಆಮೇಲೆ ನಾಲಾಛೇದವನ್ನು(ಹೊಕ್ಕಳುಬಳ್ಳಿ ಕತ್ತರಿಸುವುದು.) ಮಾಡಿಸಿ ಹಿರಣ್ಯೋದಕದಿಂದ ತಾಯಿಯ ಬಲ ಸ್ತನವನ್ನ ತೊಳೆದು ತಾಯಿಯಿಂದ ಬಾಲಕನಿಗೆ ಸ್ತನಪಾನ ಮಾಡಿಸುವುದು. ಬ್ರಾಹ್ಮಣರು “ಇಮಾಂ ಕುಮಾರಂ” (ಕುಮಾರಿಗೂ ಅನ್ವಯ) ಇತ್ಯಾದಿ ಮಂತ್ರಗಳನ್ನು ಪಠಿಸಬೇಕು. ನಾಮದೀಶ್ರಾದ್ಧವಾದ ನಂತರ ಜಾತ ಕಮಾಂಗ ಹೋಮಂ ಕರಿಷ್ಯೆ . ಎಂದು ಕಲ್ಪಿಸಿ, ಲೌಕಿಕಾಗ್ನಿಯಲ್ಲಿ ,“ ಅಗ್ನಿಂ ಇಂದ್ರಂ ಪ್ರಜಾಪತಿಂ ವಿಶ್ವಾನ್ ದೇವಾನ್ , ಬ್ರಹ್ಮಾಣಂ”, ಈ ದೇವತೆಗಳನ್ನು ಆಜ್ಯದಿಂದ ಹೋಮಿಸುವುದು. ಆಮೇಲೆ ಜೇನುತುಪ್ಪ ತುಪ್ಪ ಗಳನ್ನು ಪ್ರಾಶನ ಮಾಡಿಸಿ ಶಿಶುವಿನ ತಲೆಯನ್ನು ಮೂಸಿ ಸ್ವಿಷ್ಟಕೃದಾದಿಹೋಮ ಶೇಷವನ್ನು ಮುಗಿಸುವುದು.

5.ನಾಮಕರಣ ಸಂಸ್ಕಾರ

[ಬದಲಾಯಿಸಿ]
5.ನಾಮಕರಣ -(ಅಕ್ಷರಶಃ, ಹೆಸರಿಡುವ ಕ್ರಿಯೆ )‍

‌:ಈ ಸಮಾರಂಭದಲ್ಲಿ ಮಗುವಿನ ಹೆಸರಿಡಲು ನಡೆಸಲಾಗುತ್ತದೆ. ಇದು ಜನನದ ನಂತರ 11 ನೇ ದಿನ ನಡೆಸಲಾಗುತ್ತದೆ[೧].

5.ನಾಮಕರಣ ಸಂಸ್ಕಾರ (ಮಗುವಿನ ನಾಮಕರಣ-ಹೆಸರು ಇಡುವುದು)[೨]
ಈ ಮಗುವಿನ ಹೆಸರು ಇಡುವ ಕಾರ್ಯಕ್ರಮ ಒಂದು ಸರಳ ಸಮಾರಂಭ. ಅಶ್ವಲಾಯನರ ಪ್ರಕಾರ, ಹುಡುಗರ ಹೆಸರುಗಳು ಅಕ್ಷರಗಳ ಸಂಖ್ಯೆ , ಸಮ ಸಂಖ್ಯೆ ಇರಬೇಕು. ಎರಡು ಅಕ್ಷರದ ಹೆಸರು ಪಾಪಂಚಿಕ ಏಳಿಗೆ ಮತ್ತು ಕೀರ್ತಿ ತರುವುದು. ತರುವ ಮತ್ತು ನಾಲ್ಕು ಅಕ್ಷರದ ಹೆಸರು ಧಾರ್ಮಿಕ ಖ್ಯಾತಿಯನ್ನು ತರುವುದು.
ಹುಡುಗಿಯರ ಹೆಸರುಗಳು ಒಂದು ಬೆಸ ಸಂಖ್ಯೆಯ ಅಕ್ಷರಗಳಾಗಿರಬೇಕು, ಮತ್ತು "ಈ/ಐ" ಅಥವಾ "ಆ" ನಲ್ಲಿ ಕೊನೆಗೊಳ್ಳಬೇಕು. ಉಚ್ಚರಿಸಲು ಸುಲಭ ಇರಬೇಕು ಅದು ಕಿವಿಗೆ ಇಂಪಾಗಿರಬೇಕು ಮತ್ತು ಶುಭಕರವಾಗಿದ್ದು ಮನಸೂರೆಗೊಳ್ಳುವಂತಿರಬೇಕು. ,. ಅದು ಅಸಹ್ಯಕರ/ವಿಚಿತ್ರವಾದ ಅರ್ಥ ಕೊಡುವಚಿತಿರಬಾರದು.., ಹೆಸರುಗಳು ಜನ್ಮ ನಕ್ಷತ್ರದ ಅಕ್ಷರಗಳಿಂದ ಆರಂಭಾಗುವುದನ್ನು ಇಡುವ ಸಂಪ್ರದಾಯವಿದೆ. ನಂತರ (ಅಕ್ಷರಗಳು ರಾಶಿಚಕ್ರದ ಚಿಹ್ನೆಗಳ ಆದಾರದಿಂದ ಅಕ್ಷರವನ್ನುಹೆಸರು- ಆಯ್ಕೆ ಆಡುತ್ತಾರೆ.). ಕೆಲವರು ತಮ್ಮ ಪೂರ್ವಿಕರ ಹೆಸರನ್ನು ಮಕ್ಕಳಿಗೆ ಇಡುತ್ತಾರೆ. .
ನೆಚ್ಚಿನ ದೇವತೆಗಳ ಹೆಸರನ್ನು ಮಕ್ಕಳಿಗೆ ಇಡುವ ಅಭ್ಯಾಸ ಪೌರಾಣಿಕ ಕಾಲದಿಂದಲೂ ಇದೆ.. ಭಕ್ತಿ ಪಂಥದ ಚಳುವಳಿಗಳ ಆರಂಭದಲ್ಲಿ ಪ್ರಾರಂಭವಾದ ಈ ಪದ್ಧತಿಯು ಸಾಮಾನ್ಯವಾಗಿ ಜನಪ್ರಿಯವಾಗಿದೆ. ದೇವರುಗಳ ಹೆಸರಿಸುವ ಮೂಲಕ ನಾವು ಮಗುವಿನ್ನು ಕರೆದರೆ, ದೇವರ ಹೆಸರು ಉಚ್ಚರಿಸಿದಂತೆ ಆಗುವುದೆಂದು ಹಲವರು ಈ ಅವಕಾಶವನ್ನು ಪರಿಗಣಿಸಿ ದೇವರ ಹೆಸರಿಡುತ್ತಾರೆ.
ನಾಮಕರಣ ಸಂಸ್ಕಾರ ಸಾಮಾನ್ಯವಾಗಿ ಜನನದ ನಂತರ ಹತ್ತನೇ ಅಥವಾ ಹನ್ನೆರಡನೆಯ ದಿನ, ನಡೆಸಲಾಗುತ್ತದೆ. ಅನನುಕೂಲತೆಗಳ ಇದ್ದರೆ ಇದು ಮೊದಲ ವರ್ಷದ ಅಂತ್ಯದಲ್ಲಿ ಮಾಡಲಾಗುತ್ತದೆ.
ಪ್ರಾರಂಭಿಕ ಕ್ರಿಯೆಗಳ ನಂತರ, ಪೋಷಕರು ದೇವರಿಗೆ ಅರ್ಪಣೆಗಳನ್ನು ನೀಡಿ ಮಗುವಿನ ಉಸಿರಾಟ ಮನಸ್ಸಿನ ಜಾಗ್ರತಿಯನ್ನು ಸ್ರಚಿಸುವುದೆಂದು ಭಾವಿಸಲಾಗುತ್ತದೆ. ಮಗುವಿನ ಕಿವಿಯಲ್ಲಿ ಮೂರು ಬಾರಿ: "ನಿನ್ನ ಹೆಸರು .---ದೇವ.. . ಆಗಿದೆ ಹೇಳಲಾಗುವುದು..". ಬ್ರಾಹ್ಮಣರು ಮತ್ತು ಹಿರಿಯರು ಆ ಹೆಸರಿನಿಂದ ಮಗುವಿನ ಕರೆದು ಮಂತ್ರಪೂರ್ವಕ ಆಶೀರ್ವಾದ ಮಾಡುತ್ತಾರೆ,
ಧರ್ಮಸಿಂಧು ಪ್ರಕಾರ ಜಾತಕರ್ಮ_ (1970ರಕನ್ನಡ ಪ್ರತಿ
ಪುಟ-156,157.158)
ಮುಖ್ಯವಿಚಾರಗಳು
ಹನ್ನೊಂದು ,ಹನ್ನೆರಡನೆಯದಿನ ನಾಮಕರಣ ಮಾಡಲು ದಿನ-ನಕ್ಷತ್ರ ನೋಡಬೇಕಾದದ್ದಿಲ್ಲ .
  • ನಾಮ ಚತುಷ್ಟಯ : ದೇವತಾನಾಮ, ಮಾಸನಾಮ, ನಾಕ್ಷತ್ರನಾಮ, ವ್ವಹಾರಿಕನಾಮ ಹೀಗೆ ನಾಲ್ಕು ವಿಧ ನಾಮಗಳಿವೆ. ರಾಮಭಕ್ತ, ವಿಷ್ಣುಭಕ್ತ -ಇವು ದೇವತಾನಾಮವು,
  • ಆಯಾಯಾ ಮಾಸ-ಜನನಾನುಸಾರ ಹೆಸರು- ಚೈತ್ರದಲ್ಲಿ ಜನಿಸಿದವನಿಗೆ ವೈಕುಂಠ ಶ್ರಾನದಲ್ಲಿ ಜನಿಸಿದವನಿಗೆ ವಾಸುದೇವ ಹೀಗೆ; *ನಾಕ್ಷತ್ರನಾಮ ಹೇಗೆಂದರೆ ತದ್ದಿತ ಪ್ರತ್ಯಯ ಸಾಧಿತ ನಾಮ -ಅಶ್ವಯುಕ್, ಕಾರ್ತೀಕಃ ಇತ್ಯಾದಿ ಇದು ಶ್ರೌತ ಕ್ರಮ;
  • ಪೌರಾಣಿಕ -ಯಾ ಜ್ಯೋತಿಷ ಕ್ರಮ -ನಕ್ಷತ್ರಗಳಿಗೆ ಕೊಟ್ಟಿರುವ ಅಕ್ಷರಗಳಿಂದ ಆರಂಭವಾಗುವ ಹೆಸರುಗಳು : ಚುಚೇಚೋಲಾಶ್ವಿನೀ-ಇದಕ್ಕೆ ಚೂಡಾಮಣೀ, -ಲಕ್ಷ್ಮಣ, ಇತ್ಯಾದಿ.
  • ಗಂಡುಮಗುವಿಗೆ ಅಂತ್ಯದಲ್ಲಿ ,“ಶರ್ಮಾ” ಎಂದು ಇಡಬೇಕು; ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ “ಈ” ಅಥವಾ “ಆ”ಕಾರಾಂತವಾಗಿ ಹೆಸರಿಡಬೇಕು.

6.ನಿಷ್ಕ್ರಮಣ

[ಬದಲಾಯಿಸಿ]
6.ನಿಷ್ಕ್ರಮಣ ಸಂಸ್ಕಾರ
ನಿಷ್ಕ್ರಮಣ(ಅಕ್ಷರಶಃ, ಮೊದಲ ಪ್ರವಾಸ)
ಶಿಶು ಜನನದ ನಂತರ ನಾಲ್ಕನೇ ತಿಂಗಳು , ಮಗುವನ್ನು ಮೊದಲ ಬಾರಿಗೆ ಮುಕ್ತವಾಗಿ ಅಂಗಳಕ್ಕೆ -ದೇವಾಲಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.

[೨][ಸೂಚನೆ: ಈ ಕೆಳಗಿನ ಸಂಕ್ಷಿಪ್ತ ವಿವರಣೆಗಳನ್ನು ಸ್ವಾಮಿ ದಯಾನಂದ ಸರಸ್ವತಿ (ಆರ್ಯ ಸಮಾಜದ ಸ್ಥಾಪಕ) ಬರಹಗಳಿಂದ ಆಯ್ದಿದೆ. ಅನುವಾದ: ಆಚಾರ್ಯ ವೈದ್ಯನಾಥ್ ಶಾಸ್ತ್ರಿ ]

ಶಿಶುವನ್ನು ತಾಜಾ ಗಾಳಿಯ ಮತ್ತು ಸೂರ್ಯನ ವಾತಾವರಣಣಕ್ಕೆ ಮನೆಯ ಹೊರಗೆ ತೆಗೆದುಕೊಂಡು ಹೋಗುವುದು.

ಗೋಭಿಲ ಗೃಹ್ಯಸೂತ್ರ-2.8.1; ||ಚತುರ್ಥಮಾಸಿ ನಿಷ್ಕ್ರಮಣಿಕಾ ಸೂರ್ಯಮುದೀಕ್ಷಯತಿ ತಚ್ಚಕ್ಷರಿತಿ|| ಮತ್ತು "ಜನನಾದ್ಯಸ್ತ್ರಿತೀಯೋ ಜೌತ್ಸ್ನಸ್ತಸ್ಯ ತ್ರತೀಯಾಂ||

ಸೂರ್ಯ ದರ್ಶನ
ನಿಷ್ಕ್ರಮಣ ಸಮಯದಲ್ಲಿ. ಎರಡು ದಿನಾಂಕಗಳನ್ನು ಉಲ್ಲೇಖಿಸಲಾಗಿದೆ.
ಮೊದಲ ದಿನಾಂಕ: ಮಗು ಹುಟ್ಟಿದ ದಿನಾಂಕದಿಂದ ಮೂರನೇ ಪೂರ್ಣ ಚಂದ್ರ ಮಾಸದ ಶುಕ್ಲ ಪಕ್ಷದ ಮೂರನೇ (ತಿಥಿ) ತೃತೀಯ (ಚಂದ್ರನ ದಿನಾಂಕವಾಗಿದೆ.)
ಎರಡನೆಯ ದಿನಾಂಕ : ಜನ್ಮ ದಿನಾಂಕದಿಂದ ನಾಲ್ಕನೇ ತಿಂಗಳಲ್ಲಿ ಮಗು ಹುಟ್ಟಿದ ತಿಥಿ ಆಗಿರುತ್ತದೆ.
ವಿಧಾನ
ಬೆಳಿಗ್ಗೆ, ಸೂರ್ಯೋದಯಕ್ಕೆ , ಶಿಶುವಿಗೆ ಸ್ನಾನ ಮತ್ತು ಬಟ್ಟೆ ಹಾಕಿ . ಮಗುವಿನ ತಾಯಿ ಯಜ್ಞಶಾಲೆಗೆ ಬಂದು , ತನ್ನ ಪತಿಯ ಬಲ ಬದಿಯಿಂದ ಸುತ್ತಿಬಂದು ಪತಿ ಎದುರಿಗೆ, ಉತ್ತರ ದಿಕ್ಕಿನಲ್ಲಿ ಮಗುವಿನ ತಲೆ ಇರುವಂತೆ, ಪತಿ ಕೈಗೆ ಮಗು ನೀಡುವುದು, ಮತ್ತು ಮಗುವಿನ ಮುಖ ಮತ್ತು ಎದೆಯ ಮೆಲ್ಮುಖವಾಗಿರುವಂತೆಇರಬೇಕು.. ತಾಯಿ ನಂತರ ಪತಿಯನ್ನು ಪ್ರದಕ್ಷಿಣಾ ರೀತಿಯಲ್ಲಿ ಹಿಂದಿನಿಂದ ಸುತ್ತುವರಿದು ಪೂರ್ವಕ್ಕೆ ಮುಖಮಾಡಿ ಪತಿಯ ಎಡಭಾಗದಲ್ಲಿ ಕುಳಿತುಕೊಳ್ಳಬೇಕು. ಹಿಂದಿನ ಜಾತಕರ್ಮದ ಅದೇ ಮಂತ್ರಗಳನ್ನುದೀ ಸಂಸ್ಕಾರದಲ್ಲಿ ಬಳಸಲಾಗುತ್ತದೆ.
ನಂತರ ಮಗುವಿನ ತಂದೆ ದಕ್ಷಿಣ ದಿಕ್ಕಿನಲ್ಲಿ ಮಗುವಿನ ಕಾಲುಗಳು ಮತ್ತು ಉತ್ತರ ದಿಕ್ಕಿನಲ್ಲಿ ತಲೆ ಇರುವಂತೆ ತಾಯಿಗೆ ಮಗು ನೀಡಬೇಕು. ಮೌನವಾಗಿ ಪತಿಯು, ಪತ್ನಿಯ ತಲೆ ಮುಟ್ಟಬೇಕು. ನಂತರ ಮಗುವನ್ನು ಸೂರ್ಯನ ಬಿಸಿಲಿಗೆ ತೆಗೆದುಕೊಂಡು ಹೋಗಬೇಕು. ಶಿಶು /ಮಗುವಿನ ಪರವಾಗಿ ಈ ಕೆಳಗಿನ ಮಂತ್ರ ಯಜುರ್ವೇದ ಮಂತ್ರವನ್ನು ಪಠಿಸಬೇಕು:
ಓಂ, ತಚ್ಚಕ್ಷುರ್ದೇವಹಿತಂ | ಪುರುಸ್ತಾತ್‍ಸ್ಚುಕ್ರಮಸ್ಚರತ್|
ಪಶ್ಯೇಮ ಶರದಃ ಶತಮ್ |ಶೃಣುಯಾಮ ಶರದಃ ಶತಂ||
ಪ್ರಬ್ರಾವಾಮ್ ಶರದಃ ಶತಮ್‍ದೇನಾಹಾ ಶ್ಯಾಮ ಶರದಃ ಶತಮ್ |
ಭೂಯಶ್ಚಶರದಃ ಶತಾತ್||
ತಾತ್ಪರ್ಯ:ಭಕ್ತರು ಕೇಳಿದ್ದನ್ನು ಕೊಡುವ ಓ ದಾನಿ! ನಾನು ನಿನ್ನ ಪರಿಶುದ್ಧ ಶಕ್ತಿ ಯ ಮೇಲೆ ಏಕಾಗ್ರ ಗಮನ ಇಡುತ್ತೇನೆ. ನನಗೆ ಪೂರ್ಣ ಆರೋಗ್ಯವನ್ನು ನೀಡು. ನನ್ನ ಕಣ್ಣು, ಕಿವಿ, ನಾಲಿಗೆ ಮತ್ತು ಇತರ ಅಂಗಗಳು ಒಂದು ನೂರು ವರ್ಷಗಳ ಕಾಲ ಆರೋಗ್ಯಕರ ರೀತಿಯಲ್ಲಿ ಕೆಲಸ ಮಾಡಲಿ. ನಾನು ಈ/ಆ ಸಮಯದಲ್ಲಿ ಅಸಹಾಯಕತೆ ಮತ್ತು ಪರಾವಲಂಬನೆಯನ್ನು ಹೊಂದದೆ ಇರುವಂತಾಗಲಿ. ನನಗೆ ನೂರು ವರ್ಷಗಳ ಕಾಲ ಕಾಯಿಲೆಯಿಲ್ಲದ ಆಹ್ಲಾದಕರವಾದ ಜೀವನವನ್ನು ನೀಡು.
ಸೂರ್ಯ ಮತ್ತು ಶುದ್ಧ ಗಾಳಿಗೆ ಶಿಶುವಿನ ಮೈಯೊಡ್ಡಿದ ನಂತರ, ಮಗುವನ್ನು ಪುನಃ ಯಜ್ಞಶಾಲೆಗೆ ತರಲಾಗುತ್ತದೆ: ಅಲ್ಲಿ ಜನರು ಕೆಳಗಿನ ವಾಕ್ಯದಿಂದ ಮಗುವನ್ನು ಆಶೀರ್ವಾದ ಮಾಡಬೇಕು.
" ತ್ವಂ ಜೀವ ಶರದಃ ಶತಂ ವರ್ಧಮಾನಃ|(ನೀನು ಆರೋಗ್ಯ ಮತ್ತು ಶಕ್ತಿಯನ್ನು ಹೊಂದಿ ನೂರು ವರ್ಷಗಳ ಕಾಲ ಭಾಳು.(ಜೀವಿಸು).
ಚಂದ್ರ ದರ್ಶನ
ರಾತ್ರಿ ಬೆಳದಿಂಗಳಿಗೆ ಮಗುವನ್ನು ಒಡ್ಡುವಿಕೆ
ರಾತ್ರಿ, ತಾಯಿ ಬಲಭಾಗದಿಂದ ಪತಿಯನ್ನು ಸಮೀಪಿಸಿ ಮಗುವಿನ ತಲೆ ಉತ್ತರ ದಿಕ್ಕಿಗೆ ಬರುವಂತೆ ಮಗುವನ್ನು ನೀಡುವುದು, ನಂತರ, ಪ್ರದಕ್ಷಿಣವಾಗಿ, ಪತಿ ಹಿಂಬದಿಯಿಂದ ಪತಿಯ/ಅವನ ಎಡಭಾಗದಲ್ಲಿ ಚಂದ್ರನ ಎದುರು ನಿಲ್ಲಬೇಕು. ತಾಯಿ ಬಲ ಹಸ್ತದಲ್ಲಿ ಸ್ವಲ್ಪ ನೀರು ಇರಬೇಕು. . ಕೆಳಗಿನ ಮಂತ್ರದ ಪ್ರಾರ್ಥನೆ ಮಾಡಲಾಗುತ್ತದೆ:
ಓಂ,ಯದದಶ್ಚಂದ್ರಮಸಿ ಕೃಷ್ಣಂ ಪೃಥಿವ್ಯಾ ಹೃದಯಂ ಶ್ರಿತಮ |
ತದಹಂ ವಿದ್ವಾಘ್ವಂ ತತ್ಪಶ್ಯಾನ್‍ಮಹಮ್ ಪೌತ್ರಮಘಂ ರುದಮ್||
ನಂತರ ಕೈಯಲ್ಲಿರುವ ನೀರನ್ನು ನೆಲಕ್ಕೆ ಚಿಮುಕಿಸಲಾಗುತ್ತದೆ. ನಂತರ ತಾಯಿಯು ಪತಿ ಹಿಂದಿನಿಂದ ಅಪ್ರದಕ್ಷಿಣವಾಗಿ ಬಂದು ಮಗುವನ್ನು ತೆಗೆದುಕೊಳ್ಳುತ್ತಾಳೆ. ಮತ್ತೆ ಪ್ರದಕ್ಷಿಣಾ ಕ್ರಮದಲ್ಲಿ ಬಂದು ಪತಿಯ ಎಡಕ್ಕೆ ನಿಲ್ಲುವುದು. ಮಗುವಿನ ತಲೆ ಉತ್ತರ ದಿಕ್ಕಿಗೆ ಕಾಲು ದಕ್ಷಿಣಕ್ಕೆ ಇರುವುದು.. ಈಗ ಮಗುವಿನ ತಂದೆ ತನ್ನ ಬಲಗೈ ಹಸ್ತದಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದೇ ಮಂತ್ರ ಹೇಳಿ ನೆಲಕ್ಕೆ ನೀರನ್ನು ಚಿಮುಕಿಸ ಬೇಕು..
ನಂತರ ಪತಿ ಮತ್ತು ಪತ್ನಿ ಇಬ್ಬರೂ ಸಂತೋಷದಿಂದ, ಮತ್ತೆ ಮನೆಯ ಒಳಗೆ ಮಗುವನ್ನು ತೆಗೆದುಕೊಂಡು ಹೋಗುವುದು.[೨]

7.ಅನ್ನ ಪ್ರಾಶನ

[ಬದಲಾಯಿಸಿ]
ಅನ್ನ ಪ್ರಾಶನ(ಅಕ್ಷರಶಃ, ಗಟ್ಟಿ ಲಘು ಆಹಾರ ಕೊಡುವುದು )
ಮಗುವಿಗೆ ಆರು ತಿಂಗಳ ಕಳೆದ ನಂತರ ನಡೆಯುವ ಧಾರ್ಮಿಕ ಕ್ರಿಯೆ, ಭಾರತದಲ್ಲಿ ಮಗುವಿಗೆ, ಅಕ್ಕಿಯನ್ನು ಬೇಸಿ ಮಾಡಿದ ಅನ್ನವನ್ನು (ಘನ ಆಹಾರ), ಮೊದಲ ಬಾರಿಗೆ. ತುಪ್ಪ ಬೆರೆಸಿಕೆಲವು ಅನ್ನದ ಅಗುಳುಗಳನ್ನು ಶಿಶುವಿಗೆ ಉಣಿಸುವುದು/ತಿನ್ನಿಸುವುದು.. ಈ ಇವಕ್ಕೆ ಹಿಂದೂಗಳ ಎಲ್ಲಾ ವಿಭಾಗಗಳಲ್ಲೂ ಪ್ರಮುಖ ಆಚರಣೆಯಾಗಿದೆ. (ಮನುಸ್ಮೃತಿ 2.34 ಉಲ್ಲೇಖಿಸಲ್ಪಟ್ಟ)[೧]
ಈ ಸಮಾರಂಭ, ಬೇಯಿಸಿದ ಅನ್ನವನ್ನು ಮೊದಲ ಸಲ ಮಗುವಿಗೆ ಕೊಡುವ ಸಮಾರಂಭ. ಈ ಸಂಸ್ಕಾರದ ಉದ್ದೇಶ ಮಗುವಿಗೆ ಉತ್ತಮ ಜೀರ್ಣಶಕ್ತಿ, ಉತ್ತಮ ಆಲೋಚನೆಗಳು ಮತ್ತು ಪ್ರತಿಭೆಗಳನ್ನು ಕೊಡಬೇಕೆಂದು ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಇದರ ಸಮಯ ಮಗುವಿಗೆ ಆರು ತಿಂಗಳು ತುಂಬಿದ ಸಂದರ್ಭದಲ್ಲಿ ನಡೆಸಲಾಗುತ್ತದೆ. ತಾಯಿ ಮತ್ತು ಮಗುವಿಗೆ ಇಬ್ಬರಿಗೂ ಈ ಎದೆ ಹಾಲನ್ನು ಬಿಡಿಸುವ ಸಮಯ. ಸುಶ್ರುತನು ಇದು ಎದೆ ಹಾಲನ್ನು ಬಿಡಿಸಲು ಅತಿ ಉತ್ತಮ ಸಮಯ ವೆಂದು ಹೇಳುತ್ತಾನೆ. ವೈದಿಕ ಮಂತ್ರಗಳ ಮೂಲಕ ವಾಗ್ದೇವತೆಗೆ ಮಾತು ಮತ್ತು ಶೌರ್ಯಕ್ಕಾಗಿ ಪ್ರಾರ್ಥನೆ ಮಾಡಲಾಗುತ್ತದೆ. ಮಗುವಿನ ಇಂದ್ರಿಯಗಳ ತಮ್ಮ ಪೂರ್ಣ ತೃಪ್ತಿಯ ಫಲ ಹೊಂದಲಿ ಮತ್ತು ಸಂತೋಷದ ,ತೃಪ್ತ ಜೀವನ ನೆಡಸಲಿ ಎಂದು ಪ್ರಾರ್ಥನೆ ಮಾಡಲಾಗುವುದು. . ತಂದೆಯು ಮಗುವಿಗೆ ಆರೋಗ್ಯಕರ ಜೀವನ ಹೊಂದಲು ಮತ್ತು ಅನಾರೋಗ್ಯದಿಂದ ತಡೆಗಟ್ಟುವ ಪ್ರಾರ್ಥನೆಯ ಮಂತ್ರಗಳ ಪೂರ್ವಕ ಚಿನ್ನದ ಚಮಚ/ಕಡ್ಡಿ/ಉಂಗುರ ದ ಮೂಲಕ ಸ್ವಲ್ಪ ಸಿಹಿ ಆಹಾರವನ್ನು ಮಗುವಿಗೆ ತಿನ್ನಿಸುತ್ತಾನೆ.
ಇದಲ್ಲದೆ ಮಂತ್ರಗಳ ಮೂಲಕ ವಿಶೇಷವಾಗಿ ನಿರೀಕ್ಷಿತ ಫಲಿತಾಂಶಗಳು ಖಾತ್ರಿಗೊಳಿಸಲ್ಪಡುತ್ತದೆ. ಇಲ್ಲದಿದ್ದರೆ ಈ ಸಮಾರಂಭದ ಪರಿಣಾಮಕಾರಿ ಆಚರಣೆಗೆ ವೈಜ್ಞಾನಿಕವಾಗಿ ಆ ವಯಸ್ಸಿನಲ್ಲಿ ಮಗುವಿನ ಎಲ್ಲಾ ಅಗತ್ಯಗಳನ್ನು ಅರಿವಿನಲ್ಲಿ ಸೃಷ್ಟಿಸುತ್ತದೆ. ಆದ್ದರಿಂದ ಅದರ ವ್ಯವಸ್ಥಿತ ಆಚರಣೆ ಅಗತ್ಯ.

ಅಶ್ವಲಾಯನ ಗೃಹ್ಯ ಸೂತ್ರ

[ಬದಲಾಯಿಸಿ]

[ಸೂಚನೆ: ಈ ಕೆಳಗಿನ ಸಂಕ್ಷಿಪ್ತ ವಿವರಣೆಗಳನ್ನು ಸ್ವಾಮಿ ದಯಾನಂದ ಸರಸ್ವತಿ (ಆರ್ಯ ಸಮಾಜದ ಸ್ಥಾಪಕ) ಬರಹಗಳಿಂದ ಇವೆ. ಅನುವಾದ] ಆಚಾರ್ಯ ವೈದ್ಯನಾಥ್ ಶಾಸ್ತ್ರಿ ಅವರದು.[೨]
ಮಗುವಿಗೆ ಮೊದಲ ಆಹಾರ. ಮಗುವಿಗೆ ಆರು ತಿಂಗಳ ಪ್ರಾಯ ಇದ್ದಾಗ, ಅನ್ನಪ್ರಾಶನ ಸಂಸ್ಕಾರ ಮಾಡಲಾಗುವುದು.
ಅಶ್ವಲಾಯನ ಗೃಹ್ಯ ಸೂತ್ರ (1.16.1,4,5) ದಿಂದ ಪಡೆಯಲಾಗಿದೆ. ಸಹ ಅದೇ ಪರಾಸ್ಕರ ಗೃಹ್ಯ ಸೂತ್ರದಲ್ಲೂ ಇದೆ.
ಅನ್ನಪ್ರಾಶನ ಸಂಸ್ಕಾರ ಸಮಾರಂಭದಲ್ಲಿ ಮಕ್ಕಳು ಜೀರ್ಣಿಸಿಕೊಳ್ಳಲು ಶಕ್ತಿಪಡೆದ ಸಮಯದಲ್ಲಿ ನಡೆಸಬೇಕು (ಏಕದಳ )ಧಾನ್ಯಗಳಿಂದ ಅನ್ನವನ್ನು ತಯಾರಿಸಲಾಗುತ್ತದೆ ಮಗುವಿನ ಮೊಟ್ಟ ಮೊದಲ ಆಹಾರ ಸೇವನೆ ಈ ಸಮಾರಂಭದಲ್ಲಿ ಪ್ರಾರಂಭವಾಗುತ್ತದೆ. ಯಾರು ಅವರು ತುಪ್ಪ (ಶೋಧಿಸಿದ ಬೆಣ್ಣೆ) ಅಥವಾ ಜೇನು, ಮೊಸರು ಮತ್ತು ತುಪ್ಪ ಬೆರೆಸಿ ಅನ್ನದೊಂದಿಗೆ ಬೆರೆಸಿಕೊಂಡು ಅಕ್ಕಿ ಬೇಯಿಸಿ ಆಹಾರ ತಯಾರಿಸ ಬೇಕು ತನ್ನ ಮಗು ಅದ್ಭುತ ಪ್ರತಿಭೆ ಹೊಂದಲು ಮತ್ತು ಪ್ರಸಿದ್ಧನಾಗಲು.
ಮೊದಲ ಅನ್ನ ಪ್ರಾಶನ ಸಮಾರಂಭದಲ್ಲಿ ಸ್ವಸ್ತಿವಾಚನ ಮತ್ತು ಸಾಮಾನ್ಯ ಪ್ರಕರಣದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ಮಗು ಜನಿಸಿದ ಚಾಂದ್ರಮಾನ ತಿಥಿಯ ದಿನ (ಮಗುವಿಗೆ ಆರು ತಿಂಗಳು ತುಂಬಿದ ಸಂದರ್ಭದಲ್ಲಿ) ಈ ಸಮಾರಂಭದಲ್ಲಿ ನಡೆಸಬೇಕು ಎಂದು ಹೇಳಲಾಗಿದೆ.: ಅಕ್ಕಿ ತೊಳೆದು ಶುದ್ಧಗೊಳಿಸಿ, ಚೆನ್ನಾಗಿ ಬೇಯಿಸಿ ಸರಿಯಾದ ಪ್ರಮಾಣದಲ್ಲಿ ತುಪ್ಪ ಅನ್ನ ಬೆರೆಸಿ. ಈ ಸರಿಯಾಗಿ ಬೇಯಿಸಿದ ಅನ್ನವನ್ನು ಮತ್ತು ಹೋಮ ಸ್ಥ್ಥಾಲಿಯಲ್ಲಿ (ಪಾತ್ರೆ) ಇರಿಸಲಾಗುತ್ತದೆ. ಈ ಹೋಮಸ್ಥಾಲಿ ಅನ್ನವನ್ನು ಪುರೋಹಿತರು I್ಮತ್ವಿಜರು ಸಣ್ಣ ಧಾರಕಗಳಲ್ಲಿ ಮಂತ್ರಗಳ ಪಠಣ ಜೊತೆ ಜೊತೆಗೆ ಯಜಮಾನನಿಗಗೆ (ಮಗುವಿನ ತಂದೆ ನೀಡಲಾಗುವುದು; ,) ಅಗ್ನಧಾನ ಮತ್ತು ಸಮಿಧಾದಾನ ಮಾಡಬೇಕು .ಅಘವರ್ಜ್ಯಭಗಹುತಿ . ನಾಲ್ಕು, ಮತ್ತು ವ್ಯಾಹೃತಿ ನಾಲ್ಕು ಅಹುತಿ. ಹಾಕಬೇಕು. ನಂತರ ಯಜಮಾನನಿಗೆ ಕೊಟ್ಟ ಅನ್ನ/ ಮತ್ತು ಅರ್ಚಕರಲ್ಲಿರವ ಚರುವುಗಳನ್ನು ಋಗ್ವೇದದ ಒಂದು ಮಂತ್ರ ಮತ್ತು ಯಜುರ್ವೇದದ ಒಂದು ಮಂತ್ರ ದಿಂದ ಆಹುತಿ ಹಾಕಬೇಕು.. ನಂತರ ಯಜಮಾನನು ಸಣ್ಣ ಪ್ರಮಾಣದ ಮೊಸರು, ಮತ್ತು ಜೇನು ತುಪ್ಪವನ್ನು ಸೇರಿಸಿ ಉಳಿದ ಅನ್ನಕ್ಕೆ ಸೇರಿಸಿ ಮಗುವಿನ ಶಕ್ತಿಗೆ ಅನುಗುಣವಾಗಿ ಅಲ್ಪ ಪ್ರಮಾಣದಲ್ಲಿ. ಈ. ಕೆಳಗಿನ ಯಜುರ್ವೇದ ಮಂತ್ರ ಹೇಳಿ ಮಗುವಿಗೆ ಆಹಾರ ಕೊಡಬೇಕು:
"ಓಂ ಅನ್ನಪತಯೇನ್ನಸ್ಯ ಣೋ |
ಧೆಹ್ಯನಮಿವಸ್ಯ ಶುಶ್ಮಿನಃ ||
ಪ್ರ ಪ್ರ ಧಾತಾರಮ್ ತಾರಿಷ ಊಜ್ರ್ವಂ ಣೋ|
ದೇಹಿ ದ್ವಿಪದೇ ಚತುಷ್ಪದೇ "
ಓ ದೇವರೇ! ನಮಗೆ ಸಾಕಷ್ಟು (ಆಹಾರ) ನಮಗೆ ಶಕ್ತಿ ತುಂಬುವ ಆಹಾರದ ಪಾಲನ್ನು ಕೃಪೆ ಮಾಡು, ಮತ್ತು ಯಾವುದೇ ಖಾಯಿಲೆ ತರದ ಆಹಾರವನ್ನು ಕೊಡು. ಓ ದೇವರೇ, ನೀನು ನಮ್ಮ ನಾಯಕ ; ನಮಗೆ ಪೋಷಣೆಯನ್ನು (ದೈನಂದಿನ ನಿರ್ವಹಣೆಯನ್ನು) ನೀಡು. ದ್ವಿಪದಿಗೂ ಮತ್ತು ಚತುಷ್ಪದಿ ಎರಡಕ್ಕೂ ನೀಡು.
"ನಂತರ ಮಗುವನ್ನು ಮಗುವಿನ ತಾಯಿ ಮತ್ತು ತಂದೆ ಮತ್ತು ಪುರೋಹಿತರು, ಹಿರಿಯರು ಮತ್ತು ಅತಿಥಿಗಳು ಆಶೀರ್ವಾದ ಮಾಡಬೇಕು. ಆ ವಾಕ್ಯ ಈ ರೀತಿ ಇದೆ:
“ತ್ವಂ ಅನ್ನಪತಿ ಅನ್ನಾವೋ ವರ್ಧಮಾನೋ ಭೂಯಾಃ” ||
ಅರ್ಥ: "ಓ ಮಗು,. ಅನ್ನವು (ಆಹಾರ) ದೇವರ ಕೃಪೆಯಿಂದ ದೊರಕುವುದು ನೀನು ಅದರಿಂದ ಶಕ್ತಿ ಪಡೆದು ವೃದ್ಧಿಹೊಂದು ಮತ್ತು ನೀನು ದೀರ್ಘ ಆಯುಷ್ಯವನ್ನು ಪಡೆ.

ಧರ್ಮಸಿಂಧು

[ಬದಲಾಯಿಸಿ]
ಧರ್ಮಸಿಂಧು ಕನ್ನಡ ಪ್ರತಿ ಪುಟ-162;(1976) :
ಸೂರ್ಯಾವಲೋಕನ, ನಿಷ್ಕ್ರಮಣ, ಭೂಮ್ಯಪವೇಶನ , ಆನ್ನಪ್ರಾಶನಗಳು;
ಮೂರನೇ ತಿಂಗಳಲ್ಲಿ ಸೂರ್ಯನ ಅವಲೋಕನ ಮಾಡುವುದು. ನಾಲ್ಕನೇತಿಂಗಳಲ್ಲಿ ಅನ್ನ ಪ್ರಾಶನ . ಅನ್ನ ಪ್ರಾಶನ ಕಾಲದಲ್ಲೇ ‘ನಿಷ್ಕ್ರಮಣ’ ಮಾಡತಕ್ಕದ್ದು ; ವಿಷ್ಣು, ಶಿವ, ಚಂದ್ರ, ಸೂರ್ಯ, ದಿಕ್ಪಾಲಕರು, ಭೂಮಿ, ದಿಕ್ಕುಗಳು, ಬ್ರಾಹ್ಮಣ ಇವುಗಳನ್ನು ಪೂಜಿಸಿ ತಾಯಿಯ ತೊಡೆಯಲ್ಲಿ ಶಿಶುವನ್ನು ಕೂಡ್ರಿಸಿ , ಬಂಗಾರ ಅಥವಾ ಕಂಚಿನ ಪಾಯ್ರೆಯಲ್ಲಿ ಮೊಸರು,ಜೇನುತುಪ್ಪ, ತುಪ್ಪಗಳಿಂದ ಯುಕ್ತವಾದ ಪಾಯಸವನ್ನು , ಹಸ್ತದಲ್ಲಿ ಬಂಗಾರವನ್ನಿಟ್ಟಕೊಂಡು ಪ್ರಾಶನ ಮಾಡಿಸತಕ್ಕದ್ದು. ಶಷ್ಟರಾದವರು ಸೂರ್ಯಾವಲೋಕನಾದಿ ಅನ್ನಪ್ರಾಶನಾಂತ ಕಾರ್ಯವನ್ನು ಅನ್ನಪ್ರಾಶನಕಾದಲ್ಲಿ ಕೂಡಿಮಾಡುವುದು ಕಂಡುಬರುತ್ತದೆ.
ಕರ್ಣವೇಧನ
ಕಿವಿ ಚುಚ್ಚುವುದು,
ಕಿವಿ ಚುಚ್ಚುವುದು ಹತ್ತನೇ ಹನ್ನೆರಡನೇ, ಅಥವಾ ಹದಿನಾರನೇ ದಿನ ಅಥವಾ ಆರನೇ, ಏಳನೇ, ಎಂಟನೇ, ಅಥವಾ ಹತ್ತನೇ ತಿಂಗಳಲ್ಲಿ ಅಥವಾ ಹನ್ನರಡನೇತಿಂಗಳಲ್ಲಿಮಾಡುವುದು. ಸ್ತ್ರೀ-ಪುರುಷ ಇಬ್ಬರಿಗೂ ಸಮವರ್ಷಗಳಲ್ಲಿ ಮಾಡಬಾರದು. ವಿಷ್ಣು, ರುದ್ರ, ಬ್ರಹ್ಮ , ಚಂದ್ರ, ಸೂರ್ಯ, ದಿಕ್ಪಾಲಕರು, ಅಶ್ವಿನೀದೇವತಾ,ಸರಸ್ವತೀ, ಗೋವು, ಬ್ರಾಹ್ಮಣ ಗುರು ಇವುಗಳನ್ನು ಪೂಜಿಸಿ, ಕಿವಿಗೆ ಅರಗಿನ ರಸವನ್ನು ಹಚ್ಚಿ ,ಪರುಷನಿಗೆ ಮೊದಲು ಬಲದ ಕಿವಿಯನ್ನೂ, ಸ್ತ್ರೀಗೆ ಮೊದಲು ಎಡದ ಕಿವಿಯನ್ನೂ ಚುಚ್ಚುವುದು. .

8.ಚೌಲ/ಚೂಡಾಕರ್ಮ

[ಬದಲಾಯಿಸಿ]
ಚೂಡಾಕರ್ಮ (ಅಕ್ಷರಶಃ, ಕೂದಲು ಕತ್ತರಿಸಿ ಸರಿಪಡಿಸುವ ವ್ಯವಸ್ಥೆ), ಚೌಲ ಅಥವಾ ಮುಂಡನ ಎಂದುಹೇಳುವರು . (ಅಕ್ಷರಶಃ, ಕ್ಷೌರಕರ್ಮ) ಮೊದಲ ಬಾರಿಗೆ ಮಗುವಿನ ಕೂದಲು ಕತ್ತರಿಸುವ ಸಮಾರಂಭ. ಮಗುವಿನ ಮೂರನೇ ಅಥವಾ ಐದನೇ ವರ್ಷದಲ್ಲಿ ಒಂದು ಸಣ್ಣ/ಗಿಡ್ಡ ಜುಟ್ಟು ಬಿಟ್ಟು ತಲೆ ಕೂದಲು ಕತ್ತರಿಸುವುದು ಅಥವಾನುಣ್ಣಗೆ ತೆಗೆಯುವುದು. (ಮನು.2.27,35 ಉಲ್ಲೇಖ)[೧]

ಚೂಡಾಕರ್ಮ-ವಿವರ

[ಬದಲಾಯಿಸಿ]

(ಶ್ರೀ Sri V.A.K.Ayer ಅವರ ವಿವರಣೆ)[೨]

ಚೂಡಾಕರ್ಮದಲ್ಲಿ ಕೂದಲನ್ನು, 1ನೇ ವರ್ಷ ಅಥವಾ 3 ನೇ ವರ್ಷದಲ್ಲಿ ಮೊದಲ ಬಾರಿಗೆ ಕತ್ತರಿಸುವ ಕ್ರಿಯೆ.
ಮೊದಲ ಕ್ಷೌರಕರ್ಮ: ಈ ಸಮಾರಂಭದಲ್ಲಿ ಗಂಡು ಮಗುವಿಗೆ ಮೂರನೇ ವರ್ಷದಲ್ಲಿ ನಿರ್ವಹಿಸಲಾಗುವ. ( ಆ ವಯಸ್ಸಿನ ನಂತರ ಸಹ) ಧಾರ್ಮಿಕ ಕ್ರಿಯೆ. 'ಶಿಖಾ/ಶಿಖೆ' (ತಲೆಯ ಮೇಲೆ ಒಂದು ರೂಪಾಯಿ/ಅಂಗೈ ಅಗಲ ಗಿಡ್ಡ ಜುಟ್ಟು ಬಿಟ್ಟು) ಕೂದಲು ತೆಗೆಯುವುದು. ಸುಶ್ರುತನ ಪ್ರಕಾರ, ತಲೆಯ ಮೇಲೆ ಕೂದಲ ಜುಟ್ಟು ತಲೆಗೆ ಒಂದು ರಕ್ಷಿಸುವ ಪ್ರಮುಖ ಭಾಗವಾಗಿದೆ.
ಸುಶ್ರುತನ ಮತ್ತು ಚರಕ ಪ್ರಕಾರ ಕೂದಲು, ಹೆಚ್ಚುವರಿ ಉಗುರುಗಳು ಇತ್ಯಾದಿ ತೆಗೆಯುವ್ಯದರಿಂದ , ಶಕ್ತಿ, ಸತ್ವ, ದೀರ್ಘಾಯುಷ್ಯ, ಪರಿಶುದ್ಧತೆ ಮತ್ತು ಸೌಂದರ್ಯ ಇವುಗಳನ್ನು ನೀಡುತ್ತದೆ..
ಈ ಸಮಾರಂಭಕ್ಕೆ ಶುಭಕಾರಕ ದಿನವನ್ನು ಆಯ್ಕೆ ಮಾಡಬೇಕು. ಒಂದು ಮುಳ್ಳುಹಂದಿ ಗರಿ, ದರ್ಭೆ ಹುಲ್ಲು, ಮತ್ತು ನಕಲಿ ಕ್ಷೌರದ ಕತ್ತಿ ಇವು ಸಾಂಕೇತಿಕವಾಗಿ ಮಗುವಿನ ಮೊದಲ ಸಲ ಕೂದಲು ಕತ್ತರಿಸುವ ತಂದೆ ಬಳಸುವ ನಿರ್ದಿಷ್ಟ ವಸ್ತುಗಳಾಗಿವೆ. ಈ ನಿರ್ದಿಷ್ಟ ಸಮಾರಂಭದಲ್ಲಿ ಪಠಿಸುವ ಮಂತ್ರದ ತಾತ್ಪರ್ಯ/ ಮುಖ್ಯಾಂಶ:
ಮಗುವು ನೂರು ವರ್ಷಗಳ ದೀರ್ಘಾಯುಷ್ಯ ಹೊಂದಲಿ(ವರ್ಷಗಳನ್ನು ಮೀರಿ) ; ಅವನ ಕಣ್ಣಿನ ದೃಷ್ಟಿ ಕುಗ್ಗದೆ ಆರೋಗ್ಯವಾಗಿ ಉಳಿಯಲಿ; ಅವನು ಇತರ ಅಗತ್ಯವಿರುವವರಿಗೆ ಉದಾರವಾಗಿ ನೀಡುವಷ್ಟು ಶ್ರೀಮಂತನಾದಲಿ ಮತ್ತು ಸಂಪತ್ತನ್ನು ಹೊಂದಲಿ;..). ಅವನ (ಮಗುವಿನ) ಜೀರ್ಣಶಕ್ತಿಯು ಚನ್ನಾಗಿರಲಿ, ಪರಿಪೂರ್ಣ ಅರೋಗ್ಯವಾಗಿರಲಿ . ಅವನು ಒಬ್ಬ ವರ್ಚಸ್ವಿ ವ್ಯಕ್ತಿಯಾಗಲಿ "
[ಸೂಚನೆ: ಈ ಕೆಳಗಿನ ಸಂಕ್ಷಿಪ್ತ ವಿವರಣೆಗಳನ್ನು ಸ್ವಾಮಿ ದಯಾನಂದ ಸರಸ್ವತಿ (ಆರ್ಯ ಸಮಾಜದ ಸ್ಥಾಪಕ) ಬರಹಗಳಿಂದ ಇವೆ. ಅನುವಾದ] ಆಚಾರ್ಯ ವೈದ್ಯನಾಥ್ ಶಾಸ್ತ್ರಿ ಆಗಿದೆ.
{ಅಶ್ವಲಾಯನ ಗೃಹ್ಯಸೂತ್ರ: ತೃತೀಯೇ ವರ್ಷೇ ಚೌಲಮ್ ವ್ರೀರ್ವಿಹಿಯಮವಾವಾಸ್ಯತಿಲಾನಾಮ್ ಪೃಥಕ್‍ಪ್ರರ್uಶರಾವಣೀ ನಿಧಧಾತಿ}
(ಪರಾಸ್ಕರ ಗೃಹ್ಯಸೂತ್ರ :ಸಂವತ್ಸವರಿಕಸ್ಯಚೂಡಾಕರಣಮ್)
ಗೋಭಿಲ ಗೃಹ್ಯಸೂತ್ರ ಸಹ:2.8.10.6 ಇದೇ ಅಭಿಪ್ರಾಯ."
ಈ ಸಮಾರಂಭದಲ್ಲಿ ಮಗುವಿನ ಜನ್ಮ ದಿನಾಂಕದಿಂದ ಮೂರನೇ ವರ್ಷದ ಅಥವಾ 1 ವರ್ಷದ ನಡೆಸಬೇಕು. ಈ ಸಮಾರಂಭದ ದಿನಾಂಕಗಳನ್ನು ಉತ್ತರಾಯಣದಲ್ಲಿ ಶುಕ್ಲ ಪಕ್ಷ ಸಮಯದಲ್ಲಿ ಆಯ್ಕೆ ಮಾಡಬೇಕು.(ಶ್ರೀBy Sri V.A.K.Ayer ಅವರ ವಿವರಣೆ))[೨]

ವಿಧಿ-ವಿಧಾನ

[ಬದಲಾಯಿಸಿ]

ನಾಪಿತನನ್ನು/ಕ್ಷೌರಿಕನನ್ನು ಈ ಸಮಾರಂಭಕ್ಕೆ ಆಹ್ವಾನಿಸಲಾಗುತ್ತದೆ.
ನಾಲ್ಕು ಮಣ್ಣಿನ ಮಡಕೆಗಳನ್ನು ಯಜ್ಞಶಾಲೆಗೆ ತರಲಾಗುತ್ತದೆ. ಅದರಲ್ಲಿ ಅಕ್ಕಿ, ಬಾರ್ಲಿ/ಗೋಧಿ , ಹೆಸರುಕಾಳು ಮತ್ತು ನಾಲ್ಕನೇಯದರಲ್ಲಿ ಎಳ್ಳು ಇರಬೇಕು , ಈ ನಾಲ್ಕು ಮಡಿಕೆಗಳನ್ನು ಹವನ ಕುಂಡದ ಉತ್ತರ ಭಾಗದಲ್ಲಿ ಇರಿಸಲಾಗುತ್ತದೆ. ಒಂದು ಹವನ ಕ್ರಿಯೆ ನಡೆಸಲಾಗುತ್ತದೆ.
ನಂತರ, ಕ್ಷೌರಿಕನನ್ನು ಕುರಿತು, ಅಥರ್ವವೇದ ಈ ಕೆಳಗಿನ ಮಂತ್ರ ಪಠಿಸಸಲಾಗುವುದು:
ಓಂ ಆಯಮಾಗಂತ್ಸವಿತಾ ಕ್ಷುರ ಎನೋಶ್ನೇನ ವಾಂiÀi ಉದಕನೆಹಿ| ಆದಿತ್ಯಾ ರುದ್ರಾ ವಸವ ಉದಂತು| ಸ ಚೇತಸಃ ಸೋಮಸ್ಯ ರಗ್ನೋ ವಪತ ಪ್ರಚೇತಸಃ||
ಈ ನಾಪಿತನು ಸಮರ್ಥ ಮತ್ತು ಚುರಕಾಗಿದ್ದಾನೆ . ಅವನು ಬೆಚ್ಚಗಿನ ನೀರು ಮತ್ತು ಪ್ರಖರವಾದ ಕತ್ತಿ ಅಥವಾ ಕತ್ತರಿ ಯೊಡನೆ ಬಂದಿದ್ದಾನೆ. ರುದ್ರ ಮತ್ತು ವಸು ಸೋಮವೆಂಬ ಗಿಡಮೂಲಿಕೆಗಳನ್ನು ಎಚ್ಚರಿಕೆಯಿಂದ ಕತ್ತರಿಸುವಂತೆ ಸೋಮ ರಾಜ ನಂತಹ ಕೂದಲನ್ನು ಅತ್ಯಂತ ಎಚ್ಚರಿಕೆಯಿಂದ (ಕ್ಷೌರವಿದ್ಯೆvಯನ್ನು)ಕಲಿತ ಇವನು ಕೂದಲನ್ನು ನೀರು ಬಳಸಿಕೊಂಡು ಒದ್ದೆ ಮಾಡಿಕೊಂಡು ಎಂಬ ಕತ್ತರಿಸಲಿ

-ಎಂದು ಮಗುವಿನ ತಂದೆ ಕೆಳಗಿನ ಮಂತ್ರ ವಾಚನ ದೊಂದಿಗೆ ಬಿಸಿ ನೀರು ಮತ್ತು ತಣ್ಣೀರನ್ನು ಸೇರಿಸುತ್ತಾನೆ.

"ಓಂ ಉಷ್ಣೇನ ವಾಯ ಉದಕನೇಹಿ."
ಬಿಸಿನೀರಿ ಮತ್ತು ತಣ್ಣೀರು ಸೇರಿದೆ.
ನಂತರ, ಆ ಮಗುವಿನ ಕೂದಲಿಗೆ ಆ ಬೆಚ್ಚನೆಯ ನೀರು ಮತ್ತು ಸ್ವಲ್ಪ ಬೆಣ್ಣೆ ಅಥವಾ ಮೊಸರು ಹಚ್ಚಿ ಒದ್ದೆ ಮಾಡಿ . ಕೆಳಗಿನ ಅಥರ್ವವೇದ ಮಂತ್ರ ಪಠಿಸಬೇಕು .
”ಓಂ ಅದಿತಿಹಿ ಶಸ್ತ್ರು ವಪತ್ವಾಪ | ಉಂದಂತು ವರ್ಚಸಾ | ಚಿಕಿತ್ಸು ಪ್ರಜಾಪತಿ | ದೀರ್ಗಾಯುತ್ವಾಯ ಚಕ್ಷಸೇ||”
ಈ ಮುರಿಯಲಾಗದ ಕತ್ತಿಯು / ಕತ್ತರಿ ಮಗುವಿನ ಕೂದಲನ್ನು ಕತ್ತರಿಸಲಿ. ಮಗುವಿನ ಕೂದಲು ನೀರಿನಿಂದ ಮೃದುವಾಗಲಿ. ಜೀವಿಗಳೆಲ್ಲದರ ದೇವನು ಈ ಮಗುವಿನ ರೋಗಗಳನ್ನು ನಿವಾರಿಸಲಿ, ಈ ಮಗು ದೀರ್ಘಾಯುವಾಗಲಿ ಮತ್ತು ಜ್ಞಾನ ಸಂಪನ್ನನಾಗಲಿ.
ಪರಾಸ್ಕರ ಗೃಹ್ಯಸೂತ್ರ ದಲ್ಲಿ : “ಓಂ ಸವಿತ್ರ ಪ್ರಸೂತ ದೈವ್ಯಾ ಆಪ ಉಂದಂತು ತೆ ತನು ದೀರ್ಘಾಯುತ್ವಾಯ ವರ್ಚಸೇ”
"ಓ ಮಗು! ಸೂರ್ಯ ಉತ್ಪಾದಿತ ಶಕ್ತಿಶಾಲಿ ಸ್ವರ್ಗದ/ಆಕಾಶದ ನೀರಿನಲ್ಲಿ ನಿಮ್ಮ ತಲೆ ತೇವ ಹೊಂದಲಿ . ನೀನು ಸುದೀರ್ಘ ಜೀವನವನ್ನು ಹೊಂದು ನೀನು ಜ್ಞಾನವನ್ನು ಪಡೆದುಕೊಳ್ಳುವಂತಾಗಲಿ".
ತಂದೆ ತನ್ನ ಕೈಯಲ್ಲಿ ಒಂದು ಬಾಚಣಿಗೆ ತೆಗೆದುಕೊಂಡು ಬಾಚಣಿಗೆ ಬಳಸಿ, ಮಗುವಿನ ತಲೆಯ ಬಲಭಾಗದ ಕೆಲವು ಕೂದಲು ಕಲೆಹಾಕಬೇಕು. ಮೂರು ದರ್ಭೆ ಕಡ್ಡಿ/ದಳಗಳಿಂದ ಕೂದಲನ್ನು ಸ್ಪರ್ಶಿಸುವುದು ಮತ್ತು ಸ್ವಲ್ಪ ದರ್ಭೆ ಹುಲ್ಲು 3 ದಳಗಳಿಂದ ಕೂದಲನ್ನು ಒತ್ತಿ ಹಿಡಿದು, ಕೆಳಗಿನ ಮಂತ್ರ ಪಠಿಸಬೇಕು:
“ಗೋಭಲೀಯ ಗೃಹ್ಯ ಸೂತ್ರ: 219,14,
”ಓಂ ಓóಷಧೇ ತ್ರಾಯಸ್ವಯನಮ್”
“ಈ ದರ್ಭೆಯ ಮೂಲಿಕೆ ಈ ಮಗುವನ್ನು ರಕ್ಷಿಸಲಿ.”
ನಂತರ ಒಂದು ಕೈಯಲ್ಲಿ ಕ್ಷೌರದ ಕತ್ತಿಯನ್ನು ಹಿಡಿದು ತಂದೆ ಕೆಳಗಿನ ಮಂತ್ರ ಪಠಿಸುವನು.
ಗೋಭಲೀಯ ಗೃಹ್ಯ ಸೂತ್ರ: , 219,13 -1.6.4;
“ವಿಷ್ಣೋರ್ದ ಅಸ್ತ್ರೋ ಅಸಿ.”
‘ಈ ಕ್ಷೌರದ ಕತ್ತಿಯ ಚೂದಾಕರ್ಮ ಕ್ರಿಯೆUಯ ಈ ಯಜ್ಞ (ಸಂಸ್ಕಾರ)ಕ್ಕೆ ಕಾರ್ಯನಿರ್ವಹಣೆಯಲ್ಲಿ ಮುಖ್ಯವಾಗಿದೆ’.
ಯಜುರ್ವೇದ:
“ಓಂ ಶಿವೋ ನಾಮಾಸಿ ಸ್ವಧಿತಿಷ್ಟೆ ಪಿತಾ ನಮಸ್ತೇ(ಅಸ್ತು),ಮಾ ಮಾ ಹಿಂಶಿಸು”
ಈ ಕ್ಷೌರದ ಕತ್ತಿಯು ಮಂಗಳಕರವಾಗಿದೆ. ಇದು ವಜ್ರ (ಶಸ್ತ್ರ) ದಂತೆ ಬಲಿಷ್ಠವಾಗಿದೆ; ಇದು ವಜ್ರದಂತೆ ಕಠಿಣವಾಗಿದೆ ಉಕ್ಕಿನಿಂದ (ಲೋಹದ) ಮಾಡಲ್ಪಟ್ಟಿದೆ. ಈ ಕ್ಷೌರದ ಕತ್ತಿಯು ಕೂದಲು ಕತ್ತರಿಸಲು ಯೋಗ್ಯವಾಗಿದೆ. . ಅದು ಯಾವುದೇ ರೀತಿಯ ನೋವು ಉಂಟುಮಾಡುವುದು ಬೇಡ.
ಯಜುರ್ವೇದ:
“ಓಂ ಸ್ವಧೈತೇ ಮಯಿ ನಾಮ್ ಹ್ರಿಮ್ಷಿಹಿ”|
ಈ ಕ್ಷೌರದ ಕತ್ತಿಯು ಮಗುವಿಗೆ ಯಾವುದೇ ತೊಂದರೆ ಕೊಡದಿರಲಿ.
ಯಜುರ್ವೇದ: "ಓಂ ನಿವತ್ರ್ತಯಾಮ್ ಯಾಯುಷೇನಾದ್ಯಾಯ ಪ್ರಣನಾಯರಾಯಸ್ಪೋಶಾಯ ಸೂಪ್ರಜಾಸ್ತ್ವಾಯ ಸುವಿರಾಯ||”

ಮಗುವಿನ ತಂದೆ : ಓ ಮಗು! ನೀನು ದೀರ್ಘಾಯುಷ್ಯ, ರಚನಾತ್ಮಕ ಶಕ್ತಿ, ಸಾಮರ್ಥ್ಯ ಮತ್ತು ಚಟುವಟಿಕೆ, ಸಂಪತ್ತು, ಮತ್ತು ಉತ್ತಮ ವಂಶಾಭಿವೃದ್ಧಿ ಹೊಂದುವದಕ್ಕೆ ನಾನು ಈ ಚೂಡಾಕರ್ಮ-ಸಮಾರಂಭವನ್ನು ಮಾಡಿದ್ದೇನೆ” ಎಂದು ಹೇಳುತ್ತಾನೆ.

ಮಗುವಿನ ತಂದೆ ನಂತರ ದರ್ಭೆ ಹುಲ್ಲು ಸುತ್ತಿ ಸ್ವಲ್ಪ ಕೂದಲನ್ನು ಹಿಡಿದುಕೊಳ್ಳುತ್ತಾನೆ. ಕೆಳಗಿನ ಮಂತ್ರ ಹೇಳಿ ಮಗುವಿನ ಕೂದಲಿನ ಮೊದಲ ಕೂದಲು ಕತ್ತರಿಸುವ ಶಾಸ್ತ್ರ ಮಾಡುತ್ತಾನೆ.
ಅಥರ್ವವೇದ : ಮಂತ್ರ ಅರ್ಥ:
"ಓ ಪುರೋಹಿತರೇ ಮತ್ತು ಕಲಿತ ಅತಿಥಿಗಳೇ ! ಈಸಮರ್ಥನಾದ ನಾಪಿತನು ನಮ್ಮ ಮುಖ್ಯಸ್ಥನ ಮತ್ತು ಉದಾತ್ತ ಪುರುಷರ ತಲೆ ಕ್ಷೌರ ಕ್ಕೆ ಬಳಸುವ ಅದೇ ಕತ್ತಿ ಅಥವಾ ಕತ್ತರಿಯ ಮೂಲಕ ಈ ಮಗುವಿನ sಕೂದಲು ತೆಗೆಯುತ್ತಾನೆ . ಈ ಮಗು ಸಂಪತ್ತನ್ನೂ , ಅಭಿವೃದ್ಧಿಯನ್ನೂ ಮತ್ತು ಉತ್ತಮ ವಂಶಾಭಿವೃದ್ಧಿಯನ್ನೂ ಹೊಂದಲಿ . "
ದರ್ಭೆ ಹುಲ್ಲು ಮತ್ತು ಶಮಿ ಎಲೆಗಳನ್ನು ಒಟ್ಟಾಗಿ ಹಿಡಿದು , ಕತ್ತರಿ ಕತ್ತರಿಸಿದ ಎಲ್ಲಾ ಕೂದಲನ್ನು ಮಡಕೆಯಲ್ಲಿ ಇಡಬೇಕು. ನೆಲದ ಮೇಲೆ ಇರುವ ಎಲ್ಲಾ ಕೂದಲು ತುಣುಕುಗಳನ್ನು ಎಚ್ಚರಿಕೆಯಿಂದ ತೆಗೆದು ಮಡಕೆಯಲ್ಲಿ ಇಡಬೇಕು..
( ವಿವರ: ಮೊದಲು ಮಂತ್ರದೊಂದಿಗೆ ಬಲಭಾಗದ ಕೂದಲು ಸ್ವಲ್ಪ ಕತ್ತರಿಸಿ , ಅದೇ ಅನುಕ್ರಮದಲ್ಲಿ ತಲೆಯ ಎಡಭಾಗದಲ್ಲಿ ಅನುಸರಿ ಅದೇ ರೀತಿ ಸೂಕ್ತ ಮಂತ್ರಗಳ ಪಠಣದೊಂದಿಗೆ ಕತ್ತರಿಸಿ , ನಂತರ ಮೂರನೇ ಬಾರಿ ಹಿಂಭಾಗದಿಂದ ಕೂದಲನ್ನು (ಎರಡು ಬಾರಿ) ಕತ್ತರಿಸುತ್ತಾನೆ. ನಾಲ್ಕನೇ ಬಾರಿ ಮತ್ತೆ ತಂದೆ ಹಿಂಭಾಗದ ಸ್ವಲ್ಪ ಕೂದಲು ಕತ್ತರಿಸಬೇಕು . ಆ ನಂತರ ತಂದೆ ತನ್ನ ಬಲಹಸ್ತವನ್ನು ಮಗುವಿನ ತಲೆಯಮೇಲೆ ಇಟು ಮಂತ್ರದ ಮೂಲಕ ಆಶೀರ್ವದಿಸುತ್ತಾನೆ.
ನಂತರ ಮಗುವಿನ ತಂದೆ ಮಗುವಿನ ತಲೆಯ ಮೇಲೆ ತನ್ನ ಬಲ ಹಸ್ತವನ್ನು ಇಟ್ಟು (ಮಂತ್ರ ಪೂರ್ವಕ) ಮಗುವನ್ನು ಆಶೀರ್ವದಿಸುತ್ತಾನೆ.
ನಂತರ ಕೆಳಗಿನ ಮಂತ್ರ,ಹೇಳೀ ತಂದೆ ನಾಪಿತ್ನಿಗೆ ಕತ್ತಿ ಮತ್ತು ಕತ್ತರಿ) ನೀಡುತ್ತಾನೆ..
ಅಶ್ವಲಾಯನ ಗೃಹ್ಯಸೂತ್ರ,: 1.17.15,
"ಓಂ ಯತ್ಕ್ಷರೇನ ಮರ್ಚಯತ ಷುಪಸಾ ವಪ್ತಾ ವಪಸಿ ಕೇಶಾನ್ ಷುಂ(ಶಿಂ)ದಿ ಶಿರೋ ಮಾಸ್ಯಯುಹು ಪ್ರ ಮೊಶಿಹಿ||”.
“ಓ ನಾಪಿತನೇ ! ನೀನು ಕೂದಲು ಕತ್ತರಿಸಿ.. ಹರಿತವಾದ ಮೃದು ಕತ್ತಿ ಯಿಂದ ಮಗುವಿನ ಕೂದಲು ಕತ್ತರಿಸು; ಮಗುವಿನ ಆಯುಷ್ಯ ಕಡಿಮೆ ಆಗದಂತೆ ತಲೆಯ ಕೂದಲ ಕ್ಷೌರ ಮಾಡು.”
ತಂದೆ, ನಂತರ ಸ್ಟೋನ್ ತನ್ನ ಕತ್ತಿಯನ್ನು ಸಾಣೆಕಲ್ಲಿನಲ್ಲಿ ಹರಿತ ಮಾಡಲು ಹೇಳುತ್ತಾನೆ.ನಂತರ ತಂದೆ ನಾಪಿತನಿಗೆ ನಿಧಾನವಾಗಿ ಬೆಚ್ಚನೆ ನೀರಿನಿಂದ ಮಗುವಿನ ತಲೆಯನ್ನು ನಾದಿಕೊಳ್ಳಲು ವಿನಂತಿಸುತ್ತಾನೆ. ಕ್ಷೌರಿಕ ಕತ್ತಯನ್ನು ಯಾವುದೇ ಗಾಯ ಮಾಡದೆ , ನಯವಾಗಿ ಗಮನವಿಟ್ಟು ಕ್ಷೌರಮಾಡು ಎಂದು ಹೇಳುತ್ತಾನೆ. . ಈ ಮಾತನ್ನು ಹೇಳಿ ನಾಪಿತನನ್ನು ಅವನು ಯಜ್ಞ-ಕುಂಡದ ಉತ್ತರಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಮಗು ಪೂರ್ವಕ್ಕೆ ಮುಖಮಾಡಿದಂತೆ ಕುಳಿತುಕೊಳ್ಳುತ್ತಾನೆ. ನಾಪಿತನು ಮಗುವಿನ ತಲೆಯನ್ನು ಪೂರ್ತಿ ಕ್ಷೌರ ಮಾಡುತ್ತಾನೆ.
ಸ್ವಲ್ಪ ಜುಟ್ಟು (ಕೂದಲು)ತಲೆಯಲ್ಲಿ ಬಿಡಬಹುದು. ಮೊದಲ (ಕ್ಷೌರದಲ್ಲಿ)ವರ್ಷದಲ್ಲಿ ಚೂಡಾಕರ್ಮ ಸಂಸ್ಕಾರವನ್ನು ಮಾಡಿದಾಗ ಎಲ್ಲಾ ಕೂದಲು ಕ್ಷೌರಮಾಡಿ ತೆಗೆಯುವುದು ಹೆಚ್ಚು ಸರಿಯಾದ ಕ್ರಮ ಎಂದು ಪರಿಗಣಿಸಲಾಗಿದೆ. ಚೂಡಾಕರ್ಮ ಸಂಸ್ಕಾರವನ್ನು ಮೂರನೇ ವರ್ಷದಲ್ಲಿ ಮಾಡುವಾಗ ಕೂದಲಿನ ಜುಟ್ಟನ್ನು ತಲೆಯ ಸ್ವಲ್ಪ ಎಡಕ್ಕೆ ಮಾಡಬೇಕು.[೨]

ಕಾರ್ಯಕ್ರಮದ ಮುಕ್ತಾಯ

[ಬದಲಾಯಿಸಿ]
ಕ್ಷೌರಿಕನಿಗೆ ಬಟ್ಟೆಗಳನ್ನು, ಧಾನ್ಯಗಳನ್ನು ಮತ್ತು ನಾಲ್ಕು ಮಡಕೆಗಳನ್ನೂ,, ಹಣ ಇತ್ಯಾದಿ ನೀಡಲಾಗುತ್ತದೆ. ಕ್ಷೌರಿಕನು ಶಮಿಎಲೆ ಮತ್ತು ದರ್ಭೆ ಹುಲ್ಲನ್ನು ಕತ್ತರಿಸಿದ ಕೂದಲುಗಳನ್ನು ಒಯ್ಯುತ್ತಾನೆ. ಅವನ್ನು ಅಥವಾ ದೂರದ ಸ್ಥಳದಲ್ಲಿ ಉದಾ, ನದಿ ಬದಿಯಲ್ಲಿ ಅಥವಾ ಕಾಡಿನಲ್ಲಿ ಹೂಳುತ್ತಾನೆ. ; ನೆಲದಲ್ಲಿ ಹೂಳಲು /ಮುಚ್ಚಲು. ಕುಟುಂಬದ ಸದಸ್ಯರೊಬ್ಬರು ಅಥವಾ ಸ್ನೇಹಿತರು ಕ್ಷೌರಿಕನ ಜೊತೆ ಸಹಾಯಕ್ಕೆ ಹೋಗಬೇಕು.
ನಂತರ ತಂದೆ ಮಗುವಿನ ತಲೆಯ ಮೇಲೆ ಸ್ವಲ್ಪ ಬೆಣ್ಣೆ ಅಥವಾ ಮೊಸರು ಹಾಕಿ ಉಜ್ಜುತ್ತಾನೆ. ನಂತರ ಮಗುವಿನ ಸ್ನಾನ. ಮಗು ಬಟ್ಟೆ ಧರಿಸಿದ ನಂತರ ತಂದೆ ಮಗುವಿನ ಜೊತೆ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುತ್ತಾನೆ. ಮತ್ತು ಮಹಾದೇವ ಗಣ ಸ್ತೋತ್ರವನ್ನು ಹೇಳಬೇಕು. ಅತಿಥಿಗಳು, ಹೋಗುವ ಮೊದಲು ಮಗುವಿಗೆ ಆಶೀರ್ವಾದ ಮಾಡಿ ಹೋಗಬೇಕು.
"ಓಂ ತತ್ ತ್ವಂ ಜೀವ ಶರದಃ ಶತಮ್ ವರ್ಧಮಾನ."
“ಓ ಮಗು! ನೀನು ಶಕ್ತಿ ಮತ್ತು ಚಟುವಟಿಹೊಂದಿ ಬೆಳೆದು ನೂರು ಶರತ್ಕಾಲವು ಜೀವಿಸಬಹುದಾದ ದೀರ್ಘಆಯುಷ್ಯಹೊಂದು.”[೨]

9.ಕರ್ಣವೇಧ

[ಬದಲಾಯಿಸಿ]
ಕಿವಿ ಚುಚ್ಚುವುದು
(ಸಾಮಾನ್ಯವಾಗಿ ಕಿವಿಚುಚ್ಚುವ ಶಾಸ್ತ್ರವನ್ನು ಮಗು ಜನನವಾದ 12 ಡನೆಯ ದಿನ ಅಥವಾ ಒಂದು ವರ್ಷದ ಒಳಗೆ ಒಂದು ದಿನ ಮಾದುವುದು ರೂಢಿ ಕೆಲವರು ಚೂಡಾಕರ್ಮದ ದಿನ ಮಾಡುತ್ತಾರೆ. ಒಬ್ಬ ಅನುಭವವಿರುವ ಅಕ್ಕಸಾಲಿಗನನ್ನು ಕರೆಸಿ ಕಿವಿಚುಚ್ಚುವ /ರಂದ್ರಮಾಡುವ ಸ್ಥಳದಲ್ಲಿ ಸುಣ್ಣದ ಬೊಟ್ಟನ್ನಿಟ್ಟು ಗುರುತುಮಾಡಿ ಅದಕ್ಕಾಗಿ ಮಾಡಿದಚಿನ್ನದ ತಂತಿಯ ಕೊಂಡಿಯಿಂದ (ಚಿನ್ನದ ಮುರ) ದಿಂದ ಚುಚ್ಚಿ ತುದಿಯನ್ನು ಅದರ ಹಿಂದಿನ ಕೊಂಡಿಗೆ ಸುತ್ತಿಚುಚ್ಚದಂತೆ ಮಾಡುವುದು ರೂಢಿ. ಈಗ ಕೆಲವರು ಒಳ್ಳೆಯ ದಿನ ನೋಡಿ, ಡಾಕ್ಟರಲ್ಲಿಗೆ ಹೋಗಿ ಅವರಿಂದ ಕುದಿವ ನೀರಿನಲ್ಲಿ ಅದ್ದಿತೆಗೆದ ಸೂಜಿಯಿಂದ ಚುಚ್ಚಿಸಿ ದಾರ ಪೋಣಿಸಿ ನಂತರ ಚಿನ್ನದ ಮುರ ಹಾಕುತ್ತಾರೆ.)
ಶಾಸ್ತ್ರ ವಿಧಿ
ಮೂರನೇ ಅಥವಾ ಐದನೇ ವರ್ಷದಲ್ಲಿ ಕಿವಿ ಚುಚ್ಚುವ ಕ್ರಿಯೆ/ಸಂಸ್ಕಾರ ಮಾಡಬೇಕು.
[ಸೂಚನೆ: ಈ ಕೆಳಗಿನ ಸಂಕ್ಷಿಪ್ತ ವಿವರಣೆಗಳನ್ನು ಸ್ವಾಮಿ ದಯಾನಂದ ಸರಸ್ವತಿ (ಆರ್ಯ ಸಮಾಜದ ಸ್ಥಾಪಕ)ಅವರ ಬರಹಗಳಿಂದ ಆಯ್ದಿವೆ. ಅನುವಾದ: ಆಚಾರ್ಯ ವೈದ್ಯನಾಥ್ ಶಾಸ್ತ್ರಿ ಅವರದು;.
ಕಾತ್ಯಾಯನ ಗೃಹ್ಯಸೂತ್ರ 1.2
“ಕರ್ಣವೇಧೋ ವರ್ಷೇ ತೃತೀಯೇ ಪಂಚಮೇ ವಾ.”
ಮಗುವಿನ ಕಿವಿ ಚುಚ್ಚುವ ಕ್ರಿಯೆಯನ್ನು ಮೂರನೇ ಅಥವಾ ಐದನೇ ವರ್ಷದಲ್ಲಿ ಮಾಡಬೇಕು (ಜನ್ಮ ದಿನಾಂಕದಿಂದ.)
ಸುಶ್ರುತ ಮತ್ತು ಚರಕ ಪ್ರಕರಣವನ್ನು ಅಧ್ಯಯನ ಮಾಡಿದ ತಜ್ಞ ಮತ್ತು ಒಬ್ಬ ಅನುಭವಿ ವೈದ್ಯರನ್ನು ಈ ಸಮಾರಂಭದಲ್ಲಿ ಆಹ್ವಾನಿಸಲಾಗುತ್ತದೆ(ಕರೆಯಬೇಕು).
ಬೆಳಗ್ಗೆ, ಮಗುವಿಗೆ ಸ್ನಾನಮಾಡಿ ಮತ್ತು ಬಟ್ಟೆ ಮತ್ತು ಆಭರಣಗಳು ಧರಿಸಿದ ನಂತರ, ಮಗುವನ್ನು ತಾಯಿ ಯಜ್ಞಶಾಲೆಗೆ ತೆರುತ್ತಾಳೆ ಒಂದು ಹೋಮದ ಕಾರ್ಯದಲ್ಲಿ ಸಾಮಾನ್ಯ ಪ್ರಕರಣದಿಂದ ಮಂತ್ರಗಳನ್ನು ಹೇಳಲಾಗುತ್ತದೆ.
ನಂತರ ವೈದ್ಯರು ಕೆಳಗಿನ ಮಂತ್ರಹೇಳಿ ಮೊದಲು ಬಲ ಕಿವಿ ಚುಚ್ಚ ಬೇಕು.:
ಯಜುರ್ವೇದ: 25,21
"ಓಂ ಭದ್ರಮ್ ಕರ್ಣಭಿಃ ಶ್ರುಣುಯಾಮ ದೇವಾ ಭದ್ರಮ್|
ಪಶ್ಯೇಮಾಕ್ಷಭಿರ್ಯಜತ್ರಾ| ಸ್ಥಿರೈರಂಗೈ ಸ್ತುಷ್ಟುಮಾನ್
ಸಸ್ತಾನೋಭಿರ್ವ್ಯಾಶೇಮಹಿ ದೇವಹಿತಮ್ ಯದಾಯುಃ ||."
ಅರ್ಥ:
ಓ ಸಜ್ಜನ ವಿದ್ವಾಂಸರೇ , ನಮ್ಮ ಕಿವಿಗಳಿಂದ ನಾವು ಉತ್ತಮವಾದುದನ್ನು ಕೇಳೋಣ , ಮತ್ತು ನಮ್ಮ ಕಣ್ಣುಗಳು ಒಳ್ಳೆಯದನ್ನೇ ನೋಡಲಿ. ನಮ್ಮ ಅಂಗಗಳು ಮತ್ತು ಗಟ್ಟಿಯಾದ ದೇಹಗಳು ಸಂಸ್ಥೆಯ ನಾವು, ದೇವರು ತೋರಿದ ಮತ್ತು ಋಷಿಗಳ ಹೇಳಿದ ಉತ್ತಮ ದಾರಿಯ ಜೀವನವನ್ನು ನೆಡೆಸುವಂತಾಗಲಿ.[ದೇವಿ ಚಾಂದ್ ಅನುವಾದ, ಎಮ್.ಎ.]
ವೈದ್ಯರು ಕೆಳಗಿನ ಮಂತ್ರ ಹೇಳಿ ಎಡ ಕಿವಿ ಚುಚ್ಚ ಬೇಕು.:
ಯಜುರ್ವೇದ 29,40 :
“ಯಕ್ಷಯಂತಿ ವೇದ ಗಾನೀಗಂತಿ ಕರ್ಣಮ್ ಪ್ರಿಯಮ್
ಸಖಾಯಮ್ ಪರಿಶಸ್ವಜಾನಾ ಯಶೋವಾ ಶಿಂಗ್ ಕ್ತೇ
ವಿತತಾಧಿ ಧನವತ್ರಜ್ಯಾ ಈಯಂ ಸಮನೆ ಪಾರಯಂತಿ ||”
ಅರ್ಥ
"ಈ ಬಿಲ್ಲಿನಂತೆ ಬಗ್ಗಿದ ಈ ತಂತಿ/ದಾರ (ಕಿವಿಗೆ ಚುಚ್ಚಿದಾಗ ಹಾಕುವ ತಂತಿ /ದಾರ) ಮಹಿಳೆಯ ರೀತಿಯಲ್ಲಿ ಪಿಸುಗಡುತ್ತದೆ; ಮತ್ತು ಯುದ್ಧದಲ್ಲಿ ನಮಗೆ ರಕ್ಷಿಣೆ ನೀಡುತ್ತದೆ; ಅದು ಹೆಂಡತಿಯು ಅಕ್ಕರೆಯಿಂದ ತಬ್ಬಿಕೊಂಡು ಪ್ರಶಂಸಾರ್ಹನಾದ ಪತಿಗೆ ಸಲಹೆ ನೀಡುವ ರೀತಿಯಲ್ಲಿ ಇದೆ."
ವೈದ್ಯರು ನಂತರ ಹೊಸದಾಗಿ ಕಿವಿ ಚುಚ್ಚಿದ ರಂಧ್ರಗಳನ್ನು ಮುಚ್ಚುವುದನ್ನು ತಡೆಯಲು ತೆಳುವಾದ ತಂತಿಯನ್ನು ಅದಕ್ಕೆ ಅಳವಡಿಸುತ್ತಾರೆ. ನಂತರ ವೈದ್ಯರು ಕಿವಿಗಳಿಗೆ ಮುಲಾಮುಗಳನ್ನು ಹಚ್ಚಿ ಚಿಕಿತ್ಸೆ ಮಾಡುತ್ತಾರೆ.[೨]
10.ವಿದ್ಯಾರಂಭ

ವಿದ್ಯಾರಂಭ : ಮಗು ಮೂರು ಅಥವಾ ಐದು ವರ್ಷಗಳು ತುಂಬಿದಾಗ ಅಕ್ಷರಾರಂಭ ಮಾಡಲಾಗುತ್ತದೆ. ಮಗುವಿನ ನಾಲಿಗೆಯ ಮೇಲೆ ,ಮಾತೃಭಾಷೆಯಲ್ಲಿ "ಹರಿ ಶ್ರೀ, ಗಣಪತಯೇ ನಮಃ ನಮಃ ಅವಿಘ್ನಮಸ್ತು ,“ ಬರೆಯಲಾಗುವುದು; ಮತ್ತು ವರ್ಣಮಾಲೆಯ ಎಲ್ಲಾ ಅಕ್ಷರಗಳನ್ನು ಚಿನ್ನದ ಚೂರನಲ್ಲಿ ಬರೆಯಲಾಗುತ್ತದೆ. ನಂತರ ಮಗುವಿನ ತೋರು ಬೆರಳಿನಿಂದ ಒಂದು ಕಂಚಿನ ತಟ್ಟೆಯಲ್ಲಿ ಹರಡಿದ ಅಕ್ಕಿಯ ಮೇಲೆ ತನ್ನ ಜೊತೆ "ಹರಿ ಶ್ರೀ" ಯನ್ನೂ ಮತ್ತು ಅದೇ ಅಕ್ಷರಗಳನ್ನು ಬರೆಯಿಸಲಾಗುತ್ತದೆ. ಹಾಗೆ ಬರೆಯುವಾಗ ಬರೆದ ಅಕ್ಷರಗಳನ್ನು ಮಗು ಉಚ್ಛರಿಸುವಂತೆ ಹೇಳಲಾಗುತ್ತದೆ. ಮಗುವಿನ ತಂದೆ ಅಥವಾ ಉತ್ತಮ ಶಿಕ್ಷಕ ಈ ಆಚರಣೆಯಲ್ಲಿ ಶಾಸ್ರ ವಿಧಿ ಪೂರ್ವಕ ಈ ಕ್ರಿಯೆಗಳನ್ನು ನಡೆಸುತ್ತಾನೆ . (ಉಲ್ಲೇಖ ಮನು.2.69)[೧]

10.ಉಪನಯನ
(ಉಪನಯನ ಮಡಿಕೊಳ್ಳುವ ಬಾಲಕನಿಗೆ -“ವಟು” ಎಂದು ಕರೆಯಲಾಗುವುದು.)
ಯಜ್ಞೋಪವೀತವೆಂಬ (ಜನಿವಾರವೆಂಬ) ಪವಿತ್ರದಾರವನ್ನು ವೇದಾಧ್ಯನ ಅಧಿಕಾರ ಪಡೆಯಲು, ಪವಿತ್ರ ದಾರವನ್ನು ಮಗುವು /ವಟುವು ಧರಿಸುವ ಸಂಸ್ಕಾರ ಸಮಾರಂಭವೇ ಉಪನಯನ
ಗಂಡು ಮಗುವಿಗೆ ಎಂಟು ವರ್ಷಗಳು ತುಂಬಿದ ನಂತರ ನಡೆಯುವ ಕ್ರಿಯೆ. ಜನಿವಾರ ಅಥವಾ ಯಜ್ಞೋಪವೀತವನ್ನು, ಶಾಸ್ತ್ರ ವಿಧಿಯಂತೆ ವಟುವಿಗೆ ಧಾರಣೆ ಮಾಡಿಸಲಾಗುತ್ತದೆ. ಇದು ಬಾಲಕನಿಗೆ ಸಾಂಪ್ರದಾಯಿಕ ಶಿಕ್ಷಣವನ್ನು ನೀಡಲು ಶಿಕ್ಷಕರು/ಉಪಾಧ್ಯಾಯರು ದೀಕ್ಷಾಬದ್ಧವಾಗಿ ಮಗುವನ್ನು ಸ್ವೀಕರಿಸುವ ಕ್ರಿಯೆ. ಜನಿವಾರದ ಜೊತೆಗೆ, ಕೃಷ್ಣಾಜಿನವನ್ನೂ (ಜಿಂಕೆಯ ಹದಮಾಡಿದ ಚರ್ಮ)ಹುಡುಗನಿಗೆ ಜನಿವಾರದ ಜೊತೆಗೆ ಧರಿಸಲು ಕೊಡಲಾಗುತ್ತದೆ.(ಕುಳಿತುಕೊಳ್ಳಲು ಉಪಯೋಗಿಸುವ,ಇಡೀ ಕೃಷ್ಣಾಜಿನದ ಬದಲಿಗೆ ಸಾಂಕೇತಿಕವಾಗಿ ಕೃಷ್ಣಾಜಿನದ ಒಂದು ಚೂರನ್ನು ಜನಿವಾರಕ್ಕೆ ಕಟ್ಟಲಾಗುವುದು) ಹುಡುಗನಿಗೆ ಗಾಯತ್ರಿ ಮಂತ್ರವನ್ನು - ಉಪನಯನದಲ್ಲಿ ಸಮಾರಂಭದಲ್ಲಿ ಬೋಧನೆ ಮಾಡಲಾಗುವುದು ; ಇದಕ್ಕೆ “ಬ್ರಹ್ಮೋಪದೇಶ” ವೆಂದು ಹೇಳುವರು. (ಉಲ್ಲೇಖ-ಮನುಸ್ಮೃತಿ 2.27 )[೧]

ವಿಧಿ-ವಿಧಾನ

[ಬದಲಾಯಿಸಿ]
10.ಎ.ಉಪನಯನ ಮತ್ತು
10.ಬಿ.ವೇದಾರಂಬ-ವೇದಗಳ ಅಧ್ಯಯನ ವ್ಯಾಖ್ಯಾನದೊಂದಿಗೆ ಪ್ರಾರಂಭಿಸುವುದು ಯಜ್ಞೋಪವೀತ ಪವಿತ್ರ ದಾರ , ಮತ್ತು ವೇದಾಧ್ಯನದ ಆರಂಭ.
  • (ಜನಿವಾರ- ಹಿಂದಿ:ಜನೋಯಿ)(ವಿ.ಎ.ಕೆ. ಅಯ್ಯರವರ ವಿವರಣೆ:-)

ಪೀಠಿಕೆ

[ಬದಲಾಯಿಸಿ]
ಯಜ್ಞೋಪವೀತ ಧಾರಣೆ ಸಮಾರಂಭದಲ್ಲಿ ಮೊದಲ ಮೂರು ವರ್ಣಗಳಲ್ಲಿ(ಬ್ರಹ್ಮ; ವೈಶ್ಯ; ಕ್ಷತ್ರಿಯ) ಗರ್ಭಧಾರಣೆಯ ದಿನಾಂಕದ ಲೆಕ್ಕ ಹಿಡಿದು ಗಂಡು ಮಗುವಿಗೆ, ಎಂಟನೇ ಹನ್ನೊಂದನೇ ಮತ್ತು ಹನ್ನೆರಡನೆಯ ವರ್ಷಗಳಲ್ಲಿ ನಡೆಸಲಾಗುತ್ತದೆ (ಬ್ರಾಹ್ಮಣರಿಗೆ ಎಂಟನೇ ವರ್ಷದಲ್ಲಿ , ಕ್ಷತ್ರಿಯರಿಗೆ ಹನ್ನೊಂದನೇ ವರ್ಷದಲ್ಲಿ ಮತ್ತು ವೈಶ್ಯರಿಗೆ ಹನ್ನೆರಡನೇ ವರ್ಷದಲ್ಲಿ) . ಉಪನಯನ ಪದ ವ್ಯುತ್ಪತ್ತಿಯು, ಕೆಲವರ ಪ್ರಕಾರ, ಶಿಕ್ಷಕರ ಜೊತೆ ತೆರಳುವುದು( ಉಪ=ಜೊತೆ,ನಯನ=ತೆರಳುವುದು). ಅಥವಾ ಗಾಯತ್ರಿ ಮಂತ್ರದ ಜೊತೆಹೊಂದುವುದು.
ಈ ಸಮಾರಂಭದಲ್ಲಿ ಗುರುವು (ಶಿಕ್ಷಕ) ಮಗುವಿನ/ವಟುವಿನ ತಂದೆಯ ಸ್ಥಾನದಲ್ಲಿ ನಿಲ್ಲುತ್ತಾನೆ. ಮತ್ತು ಗಾಯತ್ರಿ ಅವನ ತಾಯಿ ಎನಿಸುವುದು ,ಜಿದು ಮಗುವಿಗೆ ಎರಡನೇ ಜನ್ಮ (ದ್ವಿಜ)ನೀಡುತ್ತದೆ. ಯಜ್ಞೋಪವೀತದ ಧಾರಣೆಯು ವೇದಗಳನ್ನು ಅಧ್ಯಯನಮಾಡಲು ದೀಕ್ಷೆ ನೀಡುವುದು, ಮತ್ತು ವೈದಿಕ ಕಾರ್ಯಗಳಲ್ಲಿ ಭಾಗವಹಿಸಲು ಮಗು ಅರ್ಹತೆಪಡೆಯುವುದು. ಮೂಲಭೂತವಾಗಿ, ಮಗುವಿನ ಆಧ್ಯಾತ್ಮಿಕ ಜೀವನದ ಹಾದಿಯಲ್ಲಿ ತನ್ನ ಪ್ರಯಾಣದ ಪ್ರಾರಂಭವಾಗುತ್ತದೆ. ಈ ಜೀವನವು, ಕೇವಲ ಪ್ರಾಣಿಗಳ ಜೀವನ ರೀತಿಯಾದ ಸಹ ಬಾಳ್ವೆಯ ,ತಿನ್ನುವ, ನಿದ್ರೆಯ ಮತ್ತು ವಂಶಾಭಿವೃದ್ಧಿಯ, ಜೀವನಕ್ಕಿಂತ ವಿಭಿನ್ನವಾಗಿದೆ. ಗುರುಕುಲ ಶಿಕ್ಷಣದಲ್ಲಿ ಮಗು ಆದರ್ಶ ಜೀವನದ ಮಾರ್ಗದಲ್ಲಿ ರೂಪುಗೊಳ್ಳುತ್ತಾನೆ.
ಗಾಯತ್ರಿ ಮಂತ್ರವು ಅತ್ಯಂತ ಶಕ್ತಿಶಾಲಿ ಮಂತ್ರ.. ಇದರ ದೀಕ್ಷೆಯನ್ನು ‘ಬ್ರಹ್ಮೋಪದೇಶ’ ಎಂದೂ ಕರೆಯುತ್ತಾರೆ. ಇದು ಬ್ರಹ್ಮನ್ (ಬ್ರಹ್ಮ=ಅತ್ಯಂತ ಮಹತ್ತಿನ/ಎಲ್ಲದಕ್ಕೂ ಮಿಗಿಲಾದ ಸತ್ಯ/ದೊಡ್ಡದು); ಬ್ರಹ್ಮ ಸಾಕ್ಷಾತ್ಕಾರಕ್ಕೆ ಕಾರಣವಾಗುತ್ತದೆ. ಈ ಮಂತ್ರದ ಜೊತೆಗೆ ಗುರುವು ಮಗುವಿಗೆ ತನ್ನ ಶಕ್ತಿಯನ್ನು (ವಿದ್ಯುತ್) ನೀಡುತ್ತಾನೆ ; ಹೀಗಾಗಿ ಗುರು ಶಿಷ್ಯರ ದೀಕ್ಷಾ ಸಮಯದಲ್ಲಿ ರೇಷ್ಮೆ ಬಟ್ಟೆಗಳನ್ನು ತೊಡಿಸಲಾಗುತ್ತದೆ.
ಈ ಸಮಾರಂಭದಲ್ಲಿ ಬಳಸುವ ವಿಚಾರ/ವಸ್ತುಗಳು ಅತೀಂದ್ರಿಯ ಪ್ರಾಮುಖ್ಯತೆಯನ್ನು ಹೊಂದಿವೆ. ಯಜ್ಞೋಪವಿತವು ಮೂರು ಮಡಿಕೆಯ ದಾರವನ್ನು ಹೊಂದಿದೆ. ಅವು ಸತ್ವ, ರಜಸ್ಸು ಮತ್ತು ತಮಸ್ ಈ ಗುಣಗಳನ್ನು ಸಂಕೇತಿಸುತ್ತದೆ. ಮೂರು ಮಡಿಕೆಗಳ ದಾರವು ಮೂರು ಪಟ್ಟು ಇದೆ (ಒಟ್ಟು 9 ಎಳೆ ಒಳಗೊಂಡಿದೆ) . ಇದಲ್ಲದೆ ಒಂದು ಒಂದು (ಪೂರ್ವಜರನ್ನು /ಪಿತೃಗಳನ್ನು; ಒಂದು, ಋಷಿಗಳನ್ನು (ಆಧ್ಯಾತ್ಮಿಕ ಜ್ಞಾನ ಹೊಂದಿದವರು , ಕಾಲಜ್ಞಾನಿಗಳು ಮತ್ತು ಒಂದು ದೇವತೆಗಳನ್ನು ನೆನಪಿಸುವುದೆಂದು ಹೇಳಲಾಗುತ್ತದೆ),. ಮೂರು ಎಳೆಗಳು ಪ್ರಣವ-'ಓಂ' ಬೀಜಾಕ್ಷರವನ್ನು ಸಹ-ಅ~ಉ~ಮ-ಈ ಮೂರು ಅಕ್ಷರಗಳನ್ನು ಪ್ರತಿನಿಧಿಸುತ್ತದೆ /ನೆನಪಿಸುತ್ತದೆ; - ಬ್ರಹ್ಮ, ವಿಷ್ಣು ಮತ್ತು ಶಿವ (ಸೃಷ್ಟಿಕರ್ತ, ಪೋಷಕ ಮತ್ತು ಸಂಹಾರಕ)ಇವರನ್ನು ಸಹ ಪ್ರತಿನಿಧಿಸುವದೆಂದು ಹೇಳಲಾಗುವುದು.

ದೀಕ್ಷಾಬದ್ಧ ವಟುವಿನ ಕರ್ತವ್ಯಗಳು

[ಬದಲಾಯಿಸಿ]
ವಟುವಿಗೆ ಯಯ್ಞೋಪವೀತ ಧಾರಣೆ ಮಾಡಿಸುವಾಗ , ಆಚಾರ್ಯನು (ಪ್ರಧಾನ ಶಿಕ್ಷಕ) ಹುಡುಗನಿಗೆ ಶಕ್ತಿ, ತೇಜಸ್ಸು ಮತ್ತು ದೀರ್ಘಾಯುವನ್ನು ಕೋರುತ್ತಾನೆ. ಯಯ್ಞೋಪವೀತಕ್ಕೆ ಜೋಡಿಸಲಾದ ಕೃಷ್ಣಾಜಿನ ಆಧ್ಯಾತ್ಮಿಕ ಮತ್ತು ಬೌದ್ಧಿಕ ಶಕ್ತಿಯನ್ನು ಸೂಚಿಸುತ್ತದೆ ( ಕೃಷ್ಣಾಜಿನವು ವಾಸ್ತವವಾಗಿ ಕುಳಿತುಕೊಳ್ಳುವ, ಧ್ಯಾನಮಾಡಲು ಉಪಯೋಗಿಸುವ ಆಸನ.ಸ್ವ. ಅದನ್ನು ಬಾಲಕನು ಯಾವಾಗಲೂ ಜೊತೆಯಲ್ಲಿ ಇಟ್ಟುಕೊಳ್ಳ ಬೇಕು. ಕೌಪೀನವು (ಲಂಗೋಟಿ -ಬ್ರಹ್ಮಚರ್ಯದ ಸಂಕೇತ, ಅಗತ್ಯ.-ಸ್ವ) ಅಮರತ್ವದ ಹೊಂದಿದೆ. ಮೂರು ಎಳೆಯ ಹುಲ್ಲಿನ ಉಡುದಾರ (ಮೇಖಲೆಯು) ಮೂರು ವೇದ (ಋಗ್ವೇದ, ಸಾಮವೇದ ಮತ್ತು ಯಜುರ್ವೇದ)ಗಳು ವಟುವನ್ನು ಆವರಿಸಿರುವುದನ್ನು ತೋರಿಸುತ್ತದೆ. ಆಗಿದೆ ಮೇಖಲೆಯು "ಋಷಿಗಳು ನಂಬಿಕೆಯ ಮಗಳು ಮತ್ತು ಸಹೋದರಿ," ಎನ್ನಲಾಗುತ್ತದೆ. ಶುದ್ಧತೆ ರಕ್ಷಿಸುವ ಮತ್ತು ದುಷ್ಟನಿಗ್ರಹದ ಸಂಕೇತ. ಹುಡುಗ ಹಿಡಿದ ಪಲಾಶ (ಮುತ್ತುಗದ) ಮರದ ದಂಡ (ದೊಣ್ಣೆ) ಅವರನ್ನು ವೇದಗಳ ರಕ್ಷಕನಾಗಿ ಮತ್ತು ಅವನಿಗೆ ದೀರ್ಘ ಜೀವನ, ತೇಜಸ್ಸು ಮತ್ತು ಪಾವಿತ್ರ್ಯತೆ ನೀಡುತ್ತದೆ. ಒಳಗೆ ಹುಡುಗ,
ಗಾಯತ್ರಿ ಮಂತ್ರದ ಉಪದೇಶಕ್ಕೆ ಮೊದಲು ಗುರುವು (ಆಧ್ಯಾತ್ಮಿಕ ತಂದೆ) ಹುಡುಗನ ಅಂಗೈಗೆ ಸೇರಿದರು ನೀರಿನ್ನು ಹಾಕುವನು. ಈ ಮಂತ್ರ ಪಡೆಯುವ ಮುನ್ನ ಅವನನ್ನು ಶುದ್ಧೀಕರಿಸುವ ಸಂಕೇತವಾಗಿದೆ.
ಹುಡುಗ ಸೂರ್ಯನನ್ನು ನೋಡಲು ಹೇಳಲಾಗುವುದು. ಸೂರ್ಯನಿಂದ ದೃಢತೆ ಕರ್ತವ್ಯ ಮತ್ತು ಶಿಸ್ತಿನ್ನು ಕಲಿಯಲು ಹೇಳಲಾಗುವುದು. ವಟು ಸದ್ಗುಣಗಳನ್ನು ಸಾಧನೆಗಾಗಿ ಸೂರ್ಯನಿಗೆ ಪ್ರಾಥನೆ ಮಾಡಬೇಕು.
ಒಂದು ಕಲ್ಲಿನ ಮೇಲೆ ವಟು ನಿಲ್ಲುವನು. ಅದರಿಂದ ಬಲ ಮತ್ತು ಉತ್ತಮ ಆರೋಗ್ಯ ಜವಾಬ್ದಾರಿಗಳಿಂದ ಮತ್ತು ಅಧ್ಯಯನಗಳಲ್ಲಿ ಪರಿಶ್ರಮ ಮತ್ತು ದೃಢತೆ ನಿಶ್ಚಲತೆಯನ್ನು ಮತ್ತು ಅಭಿವೃದ್ಧಿಯನ್ನು ಹೊಂದಲು ಹೇಳಲಾಗುವುದು.(ಮೇಖಲೆ=ಸೊಂಟಕ್ಕೆ ಕಟ್ಟುವ ದಾರ: ಮುಂಜಹುಲ್ಲುಗಳಿಂದ ಮಾಡಿದ ಸಮನಾಗಿರುವ ನುಣುಪಾದ ಮೂರುಸುತ್ತಿನ ಒಂದು, ಮೂರು, ಅಥವಾ ಐದು ಗಂಟುಗಳಿರಬೇಕು; ಮುಂಜೆಯ ಹುಲ್ಲು ಸಿಗದಿದ್ದಾಗ ದರ್ಭೆಯಿಂದ ಮಾಡಬಹುದು.ಧರ್ಮಸಿಂಧು-ಕನ್ನಡ-೧೯೭೦ರ ೧೬೯ಪುಟ)
ಉಪನಯನ ಸಂಸ್ಕಾರ ಸಮಯದಲ್ಲಿ, ಕೆಲವು ವ್ರತ , ನಿಯಮಗಳನ್ನು ಅನುಸರಿಸಲು ಹೇಳಲಾಗುವುದು. .1. ನಿಯಮಗಳನ್ನು / ಪ್ರತಿಜ್ಞೆಗಳನ್ನು ಪಾಲಿಸುವುದು 2.ಉತ್ತಮ ಪುರುಷನಾಗುವುದು. 3 ಕ್ರಿಯಾಶೀಲನಾಗಿರುವುದು. 4.ದಾನ/ಧರ್ಮಮಾಡುವುದು. 5. ದೇವತೆಗಳನ್ನು ತೃಪ್ತಿ ಪಡಿಸುವುದು./ಪ್ರೀತಿ ಗಳಿಸುವುದು. 6. ಸಹಚರರನ್ನು ಸಂತೋಷವಾಗಿಡುವುದು.7. ಆಶ್ರತರನ್ನು ರಕ್ಷಿಸುವುದು. 8 . ಮದುವೆಯಾದನಂತರ ವಂಶಾಭಿವೃದ್ಧಿ ಮಾಡುವುದು. 9 ಇತರರಲ್ಲಿ ¸ಮಾನತೆ ಈ ಬ್ರಹ್ಮಚರ್ಯ ಆಶ್ರಮದಲ್ಲಿ ಪ್ರಣವ, ಮೇಧಾ, ಶ್ರದ್ಧಾ ಇವು ಮತ್ತು ದೇವರು, ನಂಬುಗೆ, ಬುದ್ಧಿ, ಇವು ಮುಖ್ಯವಾದದ್ದು. ಸಂಧ್ಯಾವಂದನ, ಸಮಿಧಾದಾನ, ಹವನ ಇವು ಮಾಡಬೇಕಾದ ಆಹ್ನಿಕವೆಂಬ ನಿತ್ಯ ಕರ್ಮಗಳು . ಉತ್ತಮ ಆಹಾರ, ನಿಯಂತ್ರಣ, ಬ್ರಹ್ಮಚರ್ಯೆ ಇತ್ಯಾದಿ ಇವೆಲ್ಲವೂ ಉತ್ತಮ ವ್ಯಕ್ತಿತ್ವದ ಅಭಿವೃದ್ಧಿಗೆ ಅಗತ್ಯ.

ಉಪನಯನ ಸಂಸ್ಕಾರ ಯಜ್ಞೋಪವೀತ ಧಾರಣೆ ಸಮಯ

[ಬದಲಾಯಿಸಿ]
ಉಪನಯನದಲ್ಲಿ ಗಾಯತ್ರೀ ಉಪದೇಶಕ್ಕೆ ಅಧಿಕಾರಿಗಳು
ಧರ್ಮಸಿಂಧು -ಕನ್ನಡ/1970-ಶಂಭುಶರ್ಮಾ ನಾಜಗಾರು,(ಪುಟ-163)
‘ಉಪನಯನ’ ಎಂದರೆ ಆಚಾರ್ಯನ ಸಮೀಪದಲ್ಲಿ ಒಯ್ಯುವುದು. ಇದು ‘ಅಂಗಕರ್ಮ’. ಗಾಯತ್ರ್ಯುಪದೇಶವು ‘ಪ್ರಧಾನ ಕರ್ಮ’. ಈ ಪದವು ‘ಯೋಗಾರೂಢವಾದದ್ದು. ಇದಕ್ಕೆ ಅಧಿಕಾರಿಗಳು ತಂದೆಯು;”ಮುಖ್ಯಾಧಿಕಾರಿಯು” . ಅವನ ಅಭಾವದಲ್ಲಿ ತಂದೆಯ ಅಣ್ಣತಮ್ಮಂದಿರು , ಅದರ ಅಭಾವದಲ್ಲಿ ಅವನ ಅಣ್ಣ , ಅದರ ಅಭಾವದಲ್ಲಿ ಅಸಗೋತ್ರಜರು- ಸೋದರಮಾವ ಮೊದಲಾದವರು; ಕುಮಾರನಿಗಿಂತ ಹಿರಿಯರು; ಇವರಾರೂ ಸಿಗದಿದ್ದರೆ ಶ್ರೋತ್ರೀಯರು ಮಾಡಬಹುದು (ಪುರೋಹಿತರು). ಬರೇ ಜನ್ಮದಿಂದ ಬ್ರಾಹ್ಮಣ ವರ್ಣ; ಉಪನಯನ ಸಂಸ್ಕಾರದಿಂದ, ‘ದ್ವಿಜತ್ವ’ವು ಬರುವುದು; ವಿದ್ಯಾನೈಪುಣ್ಯ ಪಡೆದಾಗ ವಿಪ್ರನೆಂದಾಗುವನು; ಈ ಮೂರೂ ಗುಣಗಳಿಂದ ಕೋಡಿದವನಿಗೆ “ಶ್ರ್ರೇತ್ರೀಯ’ ನೆನ್ನುವರು.
ವಿ.ಸೂ(ಮುಂದಿನ ಅಶ್ವಲಾಯನ ಸೂತ್ರ -ದ.ಮಹರ್ಷಿ ಪ್ರಣೀತ ಕರ್ತೃವು ಶಿಕ್ಷನೆಂದಿದೆ -ದಕ್ಷಿಣ ಭಾರತದಲ್ಲಿ ತಂದೆಯೇ ಮಗನಿಗೆ ಗಾಯತ್ರಿ ಉಪದೇಶ ಮಾಡುವನು ಅಥವಾ ಮೇಲೆ ಹೇಳಿದಂತೆ ಅನುಸರಿಸುವರು. )
[ಸೂಚನೆ: ಈ ಕೆಳಗಿನ ಸಂಕ್ಷಿಪ್ತ ವಿವರಣೆಗಳನ್ನು ಸ್ವಾಮಿ ದಯಾನಂದ ಸರಸ್ವತಿ (ಆರ್ಯ ಸಮಾಜದ ಸ್ಥಾಪಕ) ಅವರ ಬರಹಗಳಿಂದ ಆಯ್ದಿದೆ . ಅನುವಾದ ಆಚಾರ್ಯ ವೈದ್ಯನಾಥ್ ಶಾಸ್ತ್ರಿ ಅವರದು.]
ಅಶ್ವಲಾಯನ ಗೃಹ್ಯ ಸೂತ್ರ :1-19-1-6 ಗೆ.
ಬ್ರಾಹ್ಮಣ ಮಗುವಿಗೆ , ಮಗುವಿನ, ಜನ್ಮ ದಿನಾಂಕದಿಂದ ಅಥವಾ ಗರ್ಭಧಾರಣೆಯ ದಿನಾಂಕದ ಎಂಟನೇ ವರ್ಷದಲ್ಲಿ ಜನಿವಾರ ಹಾಕವುದು. . ಕ್ಷತ್ರಿಯ ಮಗುವಿಗೆ ಜನ್ಮ ದಿನಾಂಕದಿಂದ ಅಥವಾ ಗರ್ಭಧಾರಣೆಯ ದಿನಾಂಕದ ಹನ್ನೊಂದನೇ ವರ್ಷದಲ್ಲಿ ಯಜ್ಞೋಪವೀತವನ್ನು ಹಾಕುವುದು. ವೈಶ್ಯ ಮಗುವಿಗೆ , ಅದರ ಜನ್ಮ ದಿನಾಂಕದಿಂದ ಅಥವಾ ಗರ್ಭಧಾರಣೆಯ ದಿನಾಂಕದ ಹನ್ನೆರಡನೆಯ ವರ್ಷದಲ್ಲಿ ಯಜ್ಞೋಪವೀತವನ್ನು ಹಾಕುವುದು ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಮಕ್ಕಳು ಕ್ರಮವಾಗಿ ಅವರ ವಯಸ್ಸು 16, 22 ಮತ್ತು 24 ರ ಮೊದಲು ಯಜ್ಞೋಪವೀತವನ್ನು ಹಾಕುವುದು.ಇದೇ ಹೇಳಿಕೆಗಳು ಪರಾಸ್ಕರ ಗೃಹ್ಯಸ್ರತ್ರಗಳಲ್ಲೂ ಕಂಡುಬರುತ್ತವೆ
ಮನುಸ್ಮೃತಿಯಲ್ಲಿ: "ಬ್ರಾಹ್ಮಣರಿಗೆ ಸಾವಿತ್ರಿ (ಗಾಯತ್ರಿ) ದೀಕ್ಷಾ ಸಮಯವು(ಗರ್ಭಧಾರಣೆಯ ನಂತರ) ಹದಿನಾರನೇ ವರ್ಷದೊಳಗೆ, ಕ್ಷತ್ರಿಯರಿಗೆ ಇಪ್ಪತ್ತೆರಡನೇ ವರ್ಷದ ಪೂರ್ಣಗೊಳ್ಳುವರೆಗೆ, ಮತ್ತು ವೈಶ್ಯರಿಗೆ ಇಪ್ಪತ್ತನಾಲ್ಕನೇ ವರ್ಷ ಪೂರ್ಣಗೊಳ್ಳುವದರವಳಗೆ "2.38.
"ಅವರು ನಿಯಮ ಪ್ರಕಾರ ಸಂಸ್ಕಾರಗೊಳ್ಳದಿದ್ದರೆ ಅಶುದ್ದರೆಂದು ಪರಿಗಣಿಸಲಾಗುತ್ತದೆ”.

ಯಯ್ಞೋಪವೀತ ಧಾರಣೆ ವಿಧಿ

[ಬದಲಾಯಿಸಿ]
ಒಂದೊಂದು ಪ್ರದೇಶದಲ್ಲಿ ಬೇರೆ ಬೇರೆ ಬಗೆಯ ಪ್ರಯೋಗಗಳಿವೆ ಅದರಂತೆ ಕ್ರಿಯೆ /ವಿಧಾನ ನೆಡೆಯುವುದು. ಇದು ಪ್ರಾಯಶಹ ಉತ್ತರ ಭಾರತದ ಕ್ರಮ-ವಿಧಾನ
ಯಜ್ಞಕ್ಕೆ ಪಾತ್ರೆಗಳನ್ನು ಹೊಂದಿಸಿಕೊಂಡು , ಸೂಕ್ತವಾಗಿ ಜೋಡಿಸಿ, ಸಮಾರಂಭದ ದಿನ ಯಜ್ಞ ಕುಂಡದ ವ್ಯವಸ್ಥೆ ಮಾಡಬೇಕು. 'ಸಾಮಾನ್ಯ ಪ್ರಕರಣ'ದಲ್ಲಿ ಹೇಳಿದಂತೆ ಯಜ್ಞಕ್ಕೆ ಬೇಕಾದ ವಸ್ತುಗಳನ್ನು ಯಜ್ಞ ಕುಂಡದ ಹತ್ತಿರ ಸಿದ್ಧಪಡಿಸಿ, ವಟು , ತನ್ನ ತಲೆ ಕ್ಷೌರ ನಂತರ ಸ್ನಾನ ಮಾಡಿ, ಸೂಕ್ತವಾದ ಬಟ್ಟೆ ಧರಿಸಬೇಕು. ಯಯ್ಞೋಪವೀತವನ್ನು ಧಾರಣೆ ಮಾಡಲು. ಆಚಾರ್ಯ ಅಥವಾ ತಂದೆ, ಹುಡುಗನಿಗೆ ಸಿಹಿತಿಂಡಿ, ಆಹಾರ ಕೊಟ್ಟು , ಯಜ್ಞ ಕುಂಡದ ಬಳಿ ಪೂರ್ವಾಭಿಮುಖವಾಗಿ ಕೂಡುವುದು. ನಂತರ ಮಗುವಿನ ತಂದೆ 'ಸಾಮಾನ್ಯ ಪ್ರಕರಣ'ದಲ್ಲಿ ನಿಗದಿ ಪಡಿಸಿದಂತೆ ಪುರೋಹಿತರು ತಮ್ಮ ಸ್ಥಾನಗಳಲ್ಲಿ ಕುಳಿತಿರಬೇಕು. ಆಚಮನ ಮಾಡಿ ,ತಮ್ಮ ಅನ್ವಯಿಸುವ ಗೃಹ್ಯಸೂತ್ರದಂತೆ ಕ್ರಿಯೆ ನೆಡೆಸಬೇಕು. ನಂತರ, ಆಚಾರ್ಯರು ಮಗುವಿನ ಬಾಯಿಯಿಂದ ಕೆಳಗಿನ ವಾಕ್ಯ ಹೇಳಿಸಬೇಕು.
"ನಾನು ಬ್ರಹ್ಮಚರ್ಯೆಯ ನಿಯಮ ಪಾಲಿಸುವೆ, ಹಾಗಾಗಿ ನಾನು ಬ್ರಹ್ಮಚಾರಿಯಾಗಿರುವೆನು.”
ಆಚಾರ್ಯರು ನಂತರ ಕೆಳಗಿನ ಮಂತ್ರ ಉಚ್ಚರಿಸಿ ಮತ್ತು ಉಡುಪು ಉಪವಸ್ತ್ರ ಧರಿಸಲು ಮಗುವಿಗೆ ನೀಡುವುದು;
ಪರಾಸ್ಕರ ಗೃಹ್ಯಸೂಕ್ತ , 2.2.7 ಗೆ.ಓಂ ಯನೇಂದ್ರಾಯ ಬೃಹಸ್ಪತಿ ವಾಸಃ ಪರ್ಯಾದಧಾದಮೃತಮ್
(ತೇನ) ತ್ವಾ ಪರಿದಧಾಮ್ಯಾಯುಷೇ ದೀರ್ಘಾಯುತ್ವಾಯ ಬಲಾಯ ವರ್ಚಸೇ||
ಓ ಮಗು! ನಿನಗೆ ಈ ಉಡುಪನ್ನು ನೀಡುತ್ತೇನೆ ದೀರ್ಘಾಯುಷಿಯಾಗು; , ಶಕ್ತಿ ಮತ್ತು ಕ್ರಿಯಾಶೀಲತೆಗಳನ್ನು ಹೊಂದು;
ನಂತರ ಮಗುವಿನ ಕೈಯಲ್ಲಿ ಯಯ್ಞೋಪವೀತವನ್ನು ಹಿಡಿದುಕೊಳ್ಳತ್ತಾನೆ . ಮತ್ತು ಆಚಾರ್ಯನ ಮುಂದೆ ಕೂರುತ್ತಾನೆ. . ಆಚಾರ್ಯ ಕೆಳಗಿನ ಮಂತ್ರ ಹೇಳಿ ಯಜ್ಞೋಪವೀತವನ್ನು ಮಗುವಿನ ಎಡ ಭುಜದ ಮೇಲೆ ಮತ್ತು ಬಲ ಕಂಕುಳ ಅಡಿಯಲ್ಲಿ ಬರುವಂತೆ ದರಿಸುವಂತೆ ಮಾಡುವನು. ::“ಯಜ್ಞೋಪವೀತಮ್ ಪರಮಂ ಪವಿತ್ರಮ್ ,ಪರಜಾಪತಯೇರ್ಯತ್ ಸಹಜಮ್ ಪುರಸ್ತಾತ್ |
ಆಯುಷ್ಯಮಗ್ರಯಮ್ ಪ್ರತಿಮಂಚ ಶುಭ್ರಂ ಯಜ್ಞೋಪವೀತಮ್ ಬಲಮಸ್ತುತೇಜಃ||
(ಯಜ್ಞೋಪವೀತಮಸಿ ಯಜ್ಞಸ್ಯ ತ್ವಯಜ್ಯಪಯವೀತೆನೋಪನಾಹಯಾಮಿ||)
ಈ ಯಜ್ಞೋಪವಿತವು ಬಹಳ ಪವಿತ್ರವಾಗಿದೆ. ಪ್ರಜಾಪತಿ ಸ್ವತಃ ಈ ಪವಿತ್ರ ದಾರವನ್ನು ಅನುಗ್ರಹಿಸಿದ್ದಾನೆ. ನಾನು ಈ ಬಿಳಿ ಯಜ್ಞೋಪವವೀತವನ್ನು ನಿನಗೆ ಧಾರಣೆ ಮಾಡಿಸಿದ್ದೇನೆ . ನಿನಗೆ ಇದು ಮುಖ್ಯ ವಸ್ತು. ನಿನಗೆ ಇದು ಶಕ್ತಿ ಮತ್ತು ಕ್ರಿಯಾಶೀಲತೆ ಕೊಡುವುದು.
ಯಜ್ಞವನ್ನು ಮಾಡುವ ಉದ್ದೇಶದಿಂದ ನಿನಗೆ ಇದನ್ನು ನಾನು ತೊಡಿಸಿದ್ದೇನೆ.
ನಂತರ ಆಚಾರ್ಯನು ಬಲಭಾಗದಲ್ಲಿ ಕುಳಿತಿರುವ ಮಗುವಿಗೆ ಯಜ್ಞ /ಹೋಮ ಕ್ರಿಯೆಯಲ್ಲಿ ತೊಡಗಿಸಲಾಗುತ್ತದೆ. ಕೆಲವು ಅಹುತಿಗಳನ್ನು ಮಗು ಹೋಮಕ್ಕೆ ಹಾಕುವುದು.
ಈ ಸಮಾರಂಭದಲ್ಲಿ ಬಳಸಲಾಗುವ ಕೆಲವು ಮಂತ್ರಗಳು:
"ಓಂ ಅಗ್ನೇ ವೃತಪತೇ ವ್ರತಮ್ ಚರಿಷ್ಯಾಮಿ ತತ್ತೇ ಪ್ರಬ್ರವೀಮಿ ತತ್ಛಕೇಯಮ್||
ಓಂ ವಾಯೋ ವ್ರತಪತೇ ಸ್ವಾಹಾ. ವಾಯವೇ ಇದಂ ನಮಮ||
ಓಂ ಸೂರ್ಯ ವ್ರತಪತೇ ಸ್ವಾಹಾ.ಸೂರ್ಯಾಯ ಇದಂ ನಮಮ ||
ಓಂ ಚಂದ್ರ ವ್ರತಪತೇ ಸ್ವಾಹಾ. ಇದಂ ಚಂದ್ರಾಯ ನಮಮ ||
ಓಂ ವ್ರತಾನಾಮ್ ವ್ರತಪತೇ ಸ್ವಾಹಾ. ಇಂದ್ರಾಯ ಇದಂ ನಮಮ || "

(ಓ ಸ್ವಯಂ ಪ್ರಕಾಶನಾದ ದೇವ! ನೀನು ಪ್ರತಿಜ್ಞೆಯ ಅಧಿಪತಿ (ದೇವನು)-(ಪ್ರತಿಜ್ಞೆಯನ್ನು ಸ್ವೀಕರಿಸುವವನು) ನಾನು ನಿನ್ನ ಮುಂದೆ , ನಾನು ಬ್ರಹ್ಮಚರ್ಯೆ ನಿಯಮಗಳನ್ನು ಆಚರಿಸುವೆನೆಂದು ಪ್ರತಿಜ್ಞೆಮಾಡುತ್ತೇನೆ. ನಾನು ಈ ಪ್ರತಿಜ್ಞೆಯ ನೆರವೇರಿಸಲು ನನ್ನನ್ನು ಶಕ್ತಗೊಳಿಸು. ನಾನು ಈ ಪ್ರತಿಜ್ಞೆಯಿಂದ ಏಳಿಗೆ ಹೊಂದುವಂತಾಗಲಿ ಮತ್ತು ಅಂತಿಮ ಸತ್ಯವನ್ನು (ಪರಮ ಸತ್ಯದ ಜ್ಞಾನವನ್ನು) ಪಡೆಯುವಂತಾಗಲಿ. ಈಗ ನೀಡಿದ ಅಹುತಿ (ನೈವೇದ್ಯ) ಅಗ್ನಿಗೆ ಮಾತ್ರವಾಗಿದೆ ಮತ್ತು ಇದು ಇನ್ನು ನನ್ನದಲ್ಲ.

ಹವಿಸ್ಸನ್ನು (ಅಹುತಿ) ಎಲ್ಲಾ ದೇವರುಗಳಿಗೆ- ವಾಯು, ಸೂರ್ಯ, ಎಲ್ಲಾ ಆನಂದಮಯ ಚಂದ್ರ, ಎಲ್ಲಾ ನಿಯಾಮಕ ಇಂದ್ರನಿಗೆ ಭಗವಂತನಿಗೆ ಅರ್ಪಿಸಲಾಗುತ್ತದೆ). ಆಚಾರ್ಯರು ನಂತರ, ಪೂರ್ವ ದಿಕ್ಕಿಗೆ ತನ್ನ ಮುಖಮಾಡಿ ಯಜ್ಞ ಕುಂಡದ ಉತ್ತರಕ್ಕೆ ಕುಳಿತುಕೊಳ್ಳುತ್ತಾನೆ. ಮಗು ಆಚಾರ್ಯರ ಮುಂದೆ ಪಶ್ಚಿಮದ ಕಡೆ ಮುಖಮಾಡಿ ಕುಳಿತಿರುತ್ತಾನೆ. ಮಗುವನ್ನು ನೋಡುತ್ತಾ ಆಚಾರ್ಯರು ಕೆಳಗಿನ ಮಂತ್ರ ಹೇಳಬೇಕು. ಮಂತ್ರದ ಅರ್ಥ: ಓ ಸ್ವಯಂ ಪ್ರಕಾಶವುಳ್ಳ ದೇವ! ಈ ಮಗುವಿನಿಂದ ಉತ್ತಮ ಸಹಕಾರ ಪಡೆದಿದ್ದೇವೆ. ದಯವಿಟ್ಟು ನಮಗೆ ಉತ್ತಮ ಶಿಕ್ಷಕರು ಮತ್ತು ಪುರುಷರ ಸಹವಾಸ ಸಿಗುವಂತೆ ಮಾಡು. ಈ ಯುವಕನ ಜೊತೆ ನಾವು ಸುಲಭವಾಗಿ ಜ್ಞಾನದ ಮಾರ್ಗವನ್ನು ಅನುಸರಿಸುವಂತಾಗಲಿ. ಈ ಮಗು ಎಲ್ಲರಿಗೂ ಮಂಗಳಕರವಾದುದನ್ನು ಮಾಡಲಿ. ಏನೇ ಮಾಡಲಿ ಅದು ಮಂಗಳಕರವಾಗಿರಲಿ. ನಂತರ ಆಚಾರ್ಯರು ಮಗುವಿನ ಹೆಸರು ಕೇಳುವರು . ವಟು ಹೇಳುತ್ತಾನೆ: “ವಟುವು ಓ ಆಚಾರ್ಯರೇ ! ನಾನು ಬ್ರಹ್ಮಚರ್ಯೆ ಪಾಲಿಸಲೂ ಒಪ್ಪಿದ್ದೇನೆ ದಯವಿಟ್ಟು ನನಗೆ ತಮ್ಮ ಹತ್ತಿರ ಪ್ರವೇಶ ನೀಡಿ ಮತ್ತು ಯಜ್ಞೋಪವೀತ ದೀಕ್ಷೆಯನ್ನು ಅನುಗ್ರಹಿಸಿ.” ಎಂದು ವಟು ಹೇಳುತ್ತಾನೆ.)

ಗಾಯತ್ರಿ ಉಪದೇಶ ಮತ್ತು ವೇದಾರಂಭ

[ಬದಲಾಯಿಸಿ]

ಆಚಾರ್ಯರು(ಗುರು) ವಟುವಿನ ಹೆಸರು ಹೇಳಿಸಿ , ನೀರನ್ನು ವಟುವಿನ ಹಸ್ತದಲ್ಲಿ ತುಂಬಿ, ನೀರಿನಿಂದ ಆಪೋ(ನೀರು0 ದೇವತೆಯು ವಟುವಿಗೆ ಕಣ್ಣಿನ ಆರೋಗ್ಯ, ಶಕ್ತಿ, ಮಳೆ-ಬೆಳೆ, ಓಷಧಗಳು, ಇವಗಳಿಗಾಗಿ ಪ್ರರ್ಥನಾ ಮಂತ್ರ ಹೇಳಿ Pಹಸ್ತದ ಜಲದೊಡನೆ ವಟುವಿನ ಹಸ್ತದ ಜಲ ಮಿಶ್ರಮಾಡಿ ನೀರು ತಟ್ಟೆಗೆ ಬೀಳುವಣಂತೆ ಅಘ್ರ್ಯ ಕೊಡಿಸುತ್ತಾನೆ. ಹೀಗೆ ಹೇಳಿದ ನಂತರ ಆಚಾರ್ಯನು ವಟುವಿನ ಕೈ ಹಿಡಿದು “ನಿನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದೇನೆ” ಎಂದು ಹೇಳುತ್ತಾನೆ.
ತನ್ನ ಹಸ್ತದಲ್ಲಿರುವ ನೀರನ್ನು ವಟುವಿನ ಹಸ್ತದಲ್ಲಿ ಬಿಡುತ್ತಾನೆ.
ಮತ್ತೆ ವಟುವಿನ ಕೈಹಿಡಿದು , “ ಮಂತ್ರ-ಅರ್ಥ: ನಿನ್ನಕೈಯನ್ನು ಎಲ್ಲಾ ಜ್ಞಾನದ ಆಗರವಾಗಿರುವ ಸವತೃವು ಹಿಡಿದಿದ್ದಾನೆ.” ಪುನಃ ವಟುವಿನ ಕೈಗೆ ನೀರನ್ನು ಹಾಕಿ , “ಸ್ವಯಂ ಪ್ರಕಾಶನಾದ ದೇವನೇ ನಿನ್ನ ಗುರು ; (ನಿನ್ನ ನಿಜವಾದ ಗುರು).” ಎನ್ನುತ್ತಾನೆ
ನಂತರ ಆಚಾರ್ಯರು ವಟುವನ್ನು ಹೊರಗೆ ಕರೆತಂದು , ಸೂರ್ಯನ ದರ್ಶನ ಮಾಡಿಸುತ್ತಾನೆ, (ಮಂತ್ರಾರ್ಥ) “ಓ ಸೃಷ್ಟಿಕರ್ತನಾದ ದೇವನೇ ಈ ವಟುವು ಬ್ರಹ್ಮಚರ್ಯಜೀವನವನ್ನು ಸ್ವೀಕರಿಸಿದ್ದಾನೆ. ಅವನನ್ನು ಕಾಒಆಡು ಮತ್ತು ಈ ಬ್ರಹ್ಮಚರ್ಯ ಜೀವನ ನಡೆಸುವ ಇವನನ್ನು ರಕ್ಷಿಸು.” ಈ ಕೆಳಗಿನ ಮಂತ್ರ ಹೇಳುತ್ತಾನೆ :
ಓಂ ಯುವಾ ಸುವಾಸಾಹಾ ಪರಿವೀತ ಆಗಾತ್ಸಊ ಶ್ರೇಯನ್ ಭವತಿ ಜಾಯಮಾನಃ.|
ಆಚಾರ್ಯನು ವಟುವಿನ ಹೆಸರು ಹೇಳಿ, “ಉತ್ತಮ ದೇಹಧಾಡ್ಯವುಳ್ಳ, ಉತ್ತಮ ಬಟ್ಟೆತೊಟ್ಟ ಇವನಿಗೆ ಎರಡನೇಜನ್ಮ ವುಂಟಾಗಿದೆ. ಇವನು ವೇದ ಜ್ಞಾನಪಡೆದು ಶ್ರೇಯೋವಂತನಾಗಲಿ” ಎಂದು ಹರಸುತ್ತಾನೆ;(ಪ್ರಾರ್ಥಿಸುತ್ತಾನೆ.)
“ಓಂ ಸೂರ್ಯಾಸಾ ವೃತಮನ್ವಾವತ್ರ್ತಸ್ವ ಅಸೌ||” ;“ಆಚಾರ್ಯನನ್ನು ಪ್ರದಕ್ಷಿಣೆ ಮಾಡು; ಅವನು ಜ್ಞಾನದ ಸೂರ್ಯನಾಗಿದ್ದಾನೆ.”
ವಟುವುಆಚಾರ್ಯನನ್ನು ಪ್ರದಕ್ಷಿಣೆಮಾಡಿ ನಮಸ್ಕರಿಸುತ್ತಾನೆ. ಆಚಾರ್ಯನು ಅವನ ಭುಜಗಳು, ಎದೆ ಗಳನ್ನು ಸ್ಪರ್ಶಿಸಿ , “ನಿನಗೆ ವಿದ್ಯೆಯ ಎಲ್ಲಾ ಸಂಕೀರ್ಣತೆಯು ಅರಿವಾಗಿ ವಿದ್ಯೆಯು ಸಿದ್ಧಿಸಲಿ.”ಎಂದು ಆಶೀರ್ವದಿಸುತ್ತಾನೆ.
ಆಚಾರ್ಯನು ವಟುವಿಗೆ (ಮಂತ್ರ)“ ನೀನು ನಿನ್ನಮನಸ್ಸನ್ನು ನನ್ನ ಮನಸ್ಸಿನಲ್ಲಿ ನೆಲೆಗೂಡಿಸು. ಶ್ರದ್ಧೆಯಿಂದ ಏಕಾಗ್ರಚಿತ್ತದಿಂದ ನನ್ನ ಬೋಧನೆಗಳನ್ನು ಪ್ರೀತಿಯಿಂದ ಕೇಳಿ ಅರ್ಥಮಾಡಿಕೋ. ವೇದದಪುರಷನಾದ ಆ ಪರಮಾತ್ಮನು ನಿನ್ನನ್ನು ನನ್ನು ಚಂತನೆ ಮತ್ತು ಕ್ರಿಗಳಲ್ಲಿ ಒಂದುಗೂಡಿಸಲಿ.” ವಟುವು ಸಮ್ಮತಿಸುತ್ತಾನೆ.
ವಟುವು ತಾನು ಆಚಾರ್ಯನ ಶಿಷ್ಯನಾದೆನೆಂದು ತನ್ನ ಹೆಸರು ಹೇಳಿ ಒಪ್ಪಿಕೊಳ್ಳುತ್ತಾನೆ.
“ಇಂದ್ರಸ್ಯ ಬ್ರಹ್ಮಃ ಆಚಾರ್ಯಸ್ಯ ಅಗ್ನಿಃ|
ಆಚಾರ್ಯಸ್ತ್ವಾಹಮಾಚರ್ಯಸ್ತವ ಅಸೌ||”
“ಮಗು ನೀನು ಆ ಸರ್ವಶಕ್ತನಾದ ಬ್ರಹ್ಮನ ಶಿಷ್ಯ. ಸ್ವಯಂ ಪ್ರಕಾಶನಾದ ದೇವನು ನಿನ್ನ ಗುರು. ನಾನು ಆ ದೇವನ ಪ್ರತಿನಿಧಿಯಾಗಿ ನಿನ್ನ ಗುರು.”

ಇದೇ ರೀತಿ ಪ್ರಜಾಪತಿಯು ವಟುವಿನ ಗುರುವೆಂದು ಹೊಗಳುವ ಮಂತ್ರಗಳಿವೆ.

ನಂತರ ತಂದೆ ತಾಯಿ ಮಗನನ್ನು ನೂರು ವರ್ಷಕಾಲ ಬಾಳು ,ಅಭಿವೃದ್ಧಿಹೊಂದು ತೇಜಸ್ವಿಯೂ ವರ್ಚಸ್ವಿಯೂ ಆಗು ಎಂದು ಹರಸುತ್ತಾರೆ.

(ಓಂ ತ್ವಂ ಜೀವ ಶರದಃ ಶತಮ್ ವರ್ಧಮಾನಃ . ಆಯುಷ್ಮಾನ್ ತೇಜಸ್ವಿ ಭೂಯಾಃ||)

ಆಚಾರ್ಯರು ಆಚಮನ ,ಅಂಗಸ್ಪರ್ಶ ಈಶ್ವರ ಉಪಾಸನ, ಶಾಂತಿ ಮಂತ್ರಗಳ, ನಂತರ ವೇದಾರಂಭ-ಗಾಯತ್ರಿ ಉಪದೇಶದ ಕಾರ್ಯಕ್ರಮ ನಡೆಸುವರು.
ಹೋಮ ಹವನಗಳ ಕಾರ್ಯಕ್ರಮ ಆರಂಭ ; ವಟುವು ಗುರು/ಆಚಾರ್ಯರನ್ನು ಕುರಿತು ಪ್ರಾರ್ಥನೆ ಮಾಡುತ್ತಾನೆ; (ಮಂತ್ರಾರ್ಥ)”ಗುರುಗಳೇ ನನ್ನನ್ನು ನಿಮ್ಮಂತೆಯೇ ವಿದ್ಯಾವಂತನೂ ಜ್ಞಾನಸಂಪನ್ನನೂ ಆಗುವಚಿತೆ ಮಾಡಿರಿ.”
ಆನಂತರ ಹೋಮದ ಕ್ರಿಯೆ ನಡೆದು ದೇವತೆಗಳ ಪ್ರೀತ್ಯರ್ಥ ಮತ್ತ ವಟುವು ಜ್ಞಾನಸಂಪನ್ನನಾಗಲು, ದೀರ್ಘಯುóಇಯಾಗಲು ಪ್ರಾರ್ಥಿಸಿ , ಅಹುತಿಗಳನ್ನೂ , ಸಮಿತ್ತುಗಳನ್ನೂ ಮಂತ್ರಪೂರ್ವಕ ಅಗ್ನಿಗೆ ಹಾಕಲಾಗುವುದು.
ವಟುವು ಪೂರ್ವಾಭಿಮುಖವಾಗಿ ಕುಳಿತು ನೀರಿನಿಂದ ತೇವವಾದ ಅಂಗೈಯನ್ನು ಅಂಗೈ ಬಿಸಿಯಾಗುವಂತೆ ಅಗ್ನಿಗೆ ತೋರುತ್ತಾ ಏಳು ಮಂತ್ರಗಳನ್ನು ಹೇಳುತ್ತಾನೆ. (ಆರ್ಥ): ‘ಅಗ್ನಿಯು ದೇಹವನ್ನು ರಕ್ಷಿಸುವುದು, ನನ್ನ ದೇಹವನ್ನು ರಕ್ಷಿಸಲಿ.” ಹಾಗೆಯೇ ದೀರ್ಘಾಯು, ಪ್ರತಿಭೆ, ಶಕ್ತಿಯ ಪುನರುಜ್ಜೀವನ, ವಿವೇಕ, ಜ್ಞಾನ, ಇವುಗಳನ್ನುಕೊಡಲಿ ಎಚಿದು ಅಗ್ನಿಯನ್ನು ಪ್ರಾರ್ಥಿಸುತ್ತಾನೆ. ಮಂತ್ರ ಪೂರ್ವಕ ಮುಖದ ಇಂದ್ರಿಯಗಳನ್ನು ಸ್ಪರ್ಶೀ ಸಿ ಅವನ್ನು ಶಕ್ತಿಗೊಳಿಸುವಂತೆ ಪಾರ್ಥಿಸುತ್ತಾನೆ. (ಉದಾ:ವಾಕ್ಕಿಗೆ-ಓಂ ವಾಕ್ ಚ ಮ ಅಪ್ಯಾಯತಾªಯಿತ್ಯಾದಿ)
ನಂತರ ಧ್ಯಾನ: ಅಗ್ನಿ,ಇಂದ್ರ, ಸೂರ್ಯ, ಇವರನ್ನು ಕುರಿತು, ವಿವೇಕ, ಪುತ್ರರು, ಆರೋಗ್ಯ, ಪ್ರತಿಭೆ, ತೇಜಸ್ಸು ಇವುಗಳನ್ನು

ಕೊಡಲುಪ್ರಾರ್ಥೀಸುತ್ತಾನೆ.

ಈಗ ಗುರುವಿಗೆ ನಮಿಸಿ ಕೇಳಿಕೊಳ್ಳುತ್ತಾನೆ
“ಆಧಿಃ ಭುಹು ಸವಿತೃ ಭೋ ಅನುಬ್ರೂಹಿ||”
ಸವಿತರ್ -ಸೂರ್ಯ ದೇವತೆಯ, ಮಂತ್ರವಾದ ಗಾಯತ್ರಿಯನ್ನು ನನಗೆ ಉಪದೇಶಿಸಿ”
ಒಂದು ಸಣ್ಣ ಪಂಚೆಯನ್ನು ತನ್ನ ಹೆಗಲ ಮೇಲೂ ಮತ್ತು ವಟುವಿನ ಹೆಗಲ ಮೇಲೂ ಹಾಕಿಕೊಂಡು ;ವಟುವಿನ ಎರಡೂ ಕೈಗಳನ್ನು ಹಿಡಿದುಕೊಂಡು ಗಾಯತ್ರೀ ಮಂತ್ರವನ್ನು ಉಪದೇಶ ಮಾಡುತ್ತಾನೆ.
(ದಕ್ಷಿಣ ಭಾರತದಲ್ಲಿ ಬೋಧಾಯನ ಸೂತ್ರದವರೂ, ಅಶ್ವಲಾಯನ ಸೂತ್ರದವರೂ ವಟುವಿಗೆ ಗಾಯತ್ರೀ ಮಂತ್ರವನ್ನು ತಂದೆ ಅಥವಾಆಸ್ಥಾನದಲ್ಲಿರುವ ಹಿರಿಯರು ಉಪದೇಶ ಮಾಡುತ್ತಾರೆ.)
ಗುರು ಅಥವಾ ತಂದೆ ಹೇಳಿದುದನ್ನು ವಟು ಪನರುಚ್ಛರಿಸುತ್ತಾನೆ. :
ಮೊದಲ ಭಾಗ>“ಓಂ ಭೂರ್ಭುವಃ ಸುವಃ ತತ್ಸವಿತೃವರೇಣ್ಯಂ”
ಎರಡನೇಭಾಗ>“ಓಂ ಭೂರ್ಭುವಃ ಸುವಃ ತತ್ಸವಿತೃವರೇಣ್ಯಂ ಭರ್ಗೋ ದೇವಸ್ಯ ಧೀಮಹಿ,”
ಮೂರನೇಭಾಗ>“ಓಂ ಭೂರ್ಭುವಃ ಸುವಃ ತತ್ಸವಿತೃವರೇಣ್ಯಂ ಭರ್ಗೋ ದೇವಸ್ಯ ಧೀಮಹಿ, ಧಿಯೋಯೋನಃ ಪ್ರಚೋದಯಾತ್,” ಗುರುವು
ಮಂತ್ರದ ಅರ್ಥವನ್ನು ಸಂಕ್ಷಿಪ್ತವಾಗಿ ವಟವಿಗೆ ಹೇಳುತ್ತಾನೆ.
ಆಚಾಯ್ನು/ಗುರು ವಟುವಿಗೆ ಹುಲ್ಲಿನ ಉಡುದಾರ ಮತ್ತು ತಲೆಯಷ್ಟು ಎತ್ತರದ ಪಾಲಾಶ ದಂಡವನ್ನು ಕೊಡುತ್ತಾನೆ.
ದಂಡವನ್ನು ಹಿಡುದು ವಟುವು ಇದನ್ನು ವೇದ ಕಲಿಕೆ, ಜ್ಞಾನಾರ್ಜನೆ, ಶಕ್ತಿ ಮತ್ತು ಸಂಯಮದ ಪಾಲನೆಗಾಗಿ ಸ್ವೀಕರಿಸುವುದಾಗಿ ಹೇಳುತ್ತಾನೆ

ಉಪನಯನಮತ್ತು ವೇದಾರಂಭ ಮುಕ್ತಾಯ

[ಬದಲಾಯಿಸಿ]
(ಅಶ್ವಲಾಯನ ಗೃಹ್ಯಸೂತ್ರ ಮತ್ತು ಪರಾಸ್ಕರ ಗೃಹ್ಯಸೂತ್ರ) ಗಾಯತ್ರಿ ಉಪದೇಶದ ನಂತರ ತಂದೆಯು ಮಗನಿಗೆ ಬ್ರಹ್ಮಚರ್ಯದ ಕಠಿಣ ನಿಯಮಗಳನ್ನು ಹೇಳಿ ಅದನ್ನು ಚಾಚೂ ತಪ್ಪದೆ ಅನುಸರಿಸುವಂತೆ ಹೇಳುತ್ತಾನೆ. ಊದಾಗಿಂದಿನಿಂದ ನೀನು ಬ್ರಹ್ಮಚಾರಿ. ಬ್ರಹ್ಮಚರ್ಯದ ನಿಯಮಗಳನ್ನು ಪಾಲಿಸು. ಊಟ ಮಾಡುವಾಗ ಆಪೋಶನ ತೆಗೆದುಕೊಂಡು ಊಟ ಮಾಡಬೇಕು. ಆಚಾರ್ಯನಿಗೆ ವಿಧೇಯನಾಗಿರಬೇಕು; ಇತ್ಯಾದಿ. ವಟುವು ಅನುಸರಿಸುವುದಾಗಿಹೇಳಿ ತಂದೆಗೆ ಸಾಷ್ಟಂಗ ನಮಸ್ಕಾರ ಮಾಡುವನು,
ವಟುವು ನಂತರ ಯಜ್ಞಕುಂಡವನ್ನು ಪ್ರದಕ್ಷಿಣೆ ಮಾಡಿ . ಪೂರ್ವಕ್ಕೆ ಮುಖಮಾಡಿನಿಂತು ,ತನ್ನ ತಾಯಿ, ತಂದೆ, ಮತ್ತು ಹತ್ತಿರದ ಬಂಧು ಬಳಗದವರಿಂದ ಬಿಕ್ಷೆಯನ್ನು ಬೆಡುತ್ತಾನೆ. ಬಂದ ಭಿಕ್ಷವನ್ನಲ್ಲಾ ಗುರುವಿಗೆ ಕೊಡುತ್ತಾನೆ. ಅದರಲ್ಲಿ ಸ್ವಲ್ಪ ಬಾಗವನ್ನು ಶಿóಯನಿಗೆ ಕೊಡುತ್ತಾನೆ.

ಆಮೇಲೆ ಹೋಮಕ್ರಿಯೆ. ಹೋಮಕ್ಕೆ ಮಂತ್ರಪೂರ್ವಕ ಚೆರುವನ್ನು ಗುರುವು ಗಾಯತ್ರೀ ಮಂತ್ರ ಪೂರ್ವಕ ಹಾಕುತ್ತಾನೆ.

ಮಂತ್ರ-ಯಜುರ್ವೇದ -32.13:
ತತ್ಸವಿತೃವರೇಣ್ಯಂ ಭರ್ಗೋದೇವಸ್ಯಧೀಮಹಿ ಧಿಯೋಯೋನಃ ಪ್ರಚೋದಯಾತ್, ಸ್ವಾಹಾ, ಇದಂ ಸವಿತೃ ,ಇದಂ ನಮಮ ||
ಯಜುರ್ವೇದ -22.9; ವೇದವಿದರಾದ ಋಷಿಗಳಿಗೆ ಗೌರವಾರ್ಪಣೆ|
ಓಂ ಋಷಿಭ್ಯಃ ಸ್ವಾಹಾ ; ಇದಂ ಋಷಿಭ್ಯಃ, ಇದಂ ನಮಮ ||
ಮುಕ್ತಾಯ ಮಂತ್ರ: ಓಂ ಯದಸ್ಯ ಕರ್ಮಣಃತ್ಯರುಚಮ್----|| ಇತ್ಯಾದಿ
ಈ ಮುಕ್ತಾಯದ ನಂತರ ವಟುವು ಆಚಾರ್ಯರಿಗೆ ತನ್ನ ಗೋತ್ರ ಪ್ರವರ ಹೆಸರು ಹೇಳಿ ಅಭಿವಾದನೆ ಮಾಡುವನು. ಮತ್ತು ಸಾಷ್ಟಾಂಗ ನಮಸ್ಕಾರ ಮಾಡುವನು.(ಉದಾ:ಕಾತ್ಯಾಯನ ಸೂತ್ರಾನ್ವಿತ ಕಾಶ್ಯಪ ವತ್ಸರ ನೈದ್ರವ ವತ್ತ್ರಯಾ ಋಷಯ ಕಾಶ್ಯಪ ಗೋತ್ರೋತ್ಪನ್ನ ರಾಮ ಶರ್ಮಣಃ ಅಹಂಭೋ ಭವತಮ್ ಅಭಿವಾದಯೇ||)
ಅದಕ್ಕೆ ಆಚಾರ್ಯನು , “ಆಯುಷ್ಮಾನ್ ವಿದ್ಯಾವಾನ್ ಭವ ಸೌಮ್ಯ" || ಎಂದು ಹರಸುತ್ತಾನೆ.
ವಟುವನ್ನು ಬಂಧುಗಳೆಲ್ಲರೂ ಹರಸುತ್ತಾರೆ. ಭೋಜನ ನಂತರ ಸಮಾರಂಭ ಮುಕ್ತಾಯವಾಗುತ್ತದೆ.[೨]

11.ಸಮಾವರ್ತನ

[ಬದಲಾಯಿಸಿ]
ಸಮಾವರ್ತನ > ಅಧ್ಯಯನಗಳು ಪೂರ್ಣಗೊಂಡಾಗ ಗೃಹಸ್ಥಾಶ್ರಮಕ್ಕೆ ಸಿದ್ಧತೆ:
12.ಪ್ರೈಶಾರ್ಥ, 13] ಕೇಶಾಂತ ಮತ್ತು ಋತುಸಿದ್ಧಿ (ಉಪನಿಷತ್ ವ್ರತ?) ,14]ಸಮಾವರ್ತನ,(ಇಂಗ್ಲಿಷ್ ತಾಣದಲ್ಲಿ ಹೇಳಿದಂತೆ -ಮನುಸ್ಮೃತಿ)
ಪ್ರೈಶಾರ್ಥ ಅಥವಾ ವೇದಾರಂಭ,
ಪ್ರೈಶಾರ್ಥ ಅಥವಾ ವೇದಾರಂಭ  : ವೇದ ಮತ್ತು ಉಪನಿಷತ್ ಗಳನ್ನು ಗುರುಕುಲ ಅಥವಾ ಪಾಠಶಾಲೆಯಲ್ಲಿ 'ಕಲಿಕೆ. ಪ್ರತಿ ಶೈಕ್ಷಣಿಕ ಅವಧಿಯ ಆರಂಭದಲ್ಲಿ ಉಪಾಕರ್ಮ ಎಂಬ ಸಮಾರಂಭದಲ್ಲಿ ವೇದಾರಂಭ ಮಾಡಲಾಗುವುದು ಮತ್ತು ಪ್ರತಿ ಶೈಕ್ಷಣಿಕ ಅವಧಿಯ ಅಂತ್ಯದಲ್ಲಿ ಉಪಸರ್ಜನಮ್ ಎಂಬ ಮತ್ತೊಂದು ಸಮಾರಂಭದಲ್ಲಿ ಅಂತ್ಯಗೊಳಿಸಲಾಗುವುದು. (ಮನು 2.71)
ಕೇಶಾಂತ ಮತ್ತು ಋತುಶುದ್ಧಿ,
ಕೇಶಾಂತ ಮತ್ತು ಋತುಶುದ್ಧಿಗಳು (ಅಕ್ಷರಶಃ, ಕೂದಲನ್ನು ತೆಗೆಯುವುದು.) ಮೊದಲ ಕ್ಷೌರ. ಇದನ್ನು ಹುಡುಗನಿಗೆ 16. ತನ್ನ ವಯಸ್ಸಿನಲ್ಲಿ ಒಂದು ಸಮಾರಂಭರೀತಿಯಲ್ಲಿ ನಡೆಸಲಾಗುತ್ತದೆ.(ಈಗ ಈಪದ್ದತಿ ಇಲ್ಲ) ನಡೆಸಲಾಗುತ್ತದೆ (ಉಲ್ಲೇಖದ: ಮನು. 2.65)
ಋತು ಶುದ್ಧಿಯು ಒಂದು ಹುಡುಗಿಯ ಮೊದಲ ಮುಟ್ಟಿನಲ್ಲಿ ನೆಡುಸುವ ಒಂದು ಸಮಾರಂಭದಲ್ಲಿ ಆಗಿದೆ.
ಸಮಾವರ್ತನ
ಸಮಾವರ್ತನ (ಅಕ್ಷರಶಃ, ಪದವಿ ಎಂದು ಅರ್ಥ) 'ಗುರುಕುಲದಲ್ಲಿ' ಅಥವಾ ಪಾಠಶಾಲೆಯಲ್ಲಿ ವೇದದ ಔಪಚಾರಿಕ ಶಿಕ್ಷಣ ಕೊನೆಯಲ್ಲಿ ನಡೆಸುವ ಸಮಾರಂಭ. ಈ ಸಮಾರಂಭದಲ್ಲಿ ವಿದ್ಯಾರ್ಥಿದೆಸೆ (ಬ್ರಹ್ಮಚರ್ಯಆಶ್ರಮ) ಅಂತ್ಯವಾಯಿತು. ಇದು ಜೀವನದ ಗೃಹಸ್ಥಾಶ್ರಮಕ್ಕೆ ಪ್ರವೇಶದ ಸಂಸ್ಕಾರ ಸಮಾರಂಭ. (ಉಲ್ಲೇಖದ: ಮನು.3.4)

ಧರ್ಮಸಿಂಧುವಿನಲ್ಲಿ ವಿವರಣೆ

[ಬದಲಾಯಿಸಿ]
ವಿದ್ಯಾಭ್ಯಾಸ ಮುಗಿದ ನಂತರ ಗುರವಿಗೆ ಸೂಕ್ತ ಗುರುದಕ್ಷಿಣೆ ಕೊಟ್ಟು ಅವರ ಅನುಮತಿ ಪಡೆದು ಸ್ನಾನ ಮಾಡಬೇಕು.ಇದಕ್ಕೆ “ವ್ರತಾಂತಸ್ನಾನ”ವೆನ್ನುವರು. ಈ ವ್ರತಾಂತಸ್ನಾನಕ್ಕೆ “ಸಮಾವರ್ತನ”ವೆಂದು ಹೇಳುತ್ತಾರೆ. ಸ್ನಾತಕನಲ್ಲಿ, “ವಿದ್ಯಾಸ್ನಾತಕ”, “ವ್ರತಸ್ನಾತಕ”, “ಉಭಯಸ್ನಾತಕ” , ಹೀಗೆ ಮೂರು ವಿಧವಿದೆ.
ಒಂದು, ಎರಡು, ಮೂರು ಮತ್ತು ನಾಲ್ಕು ವೇದಗಳನ್ನಾಗಲಿ . ಅಥವಾ ವೇದಗಳ ಕಲವು ಭಾಗಗಳನ್ನಾಗಲಿ ಅಧ್ಯನ ಮಾಡಿ , ಅರ್ಥವನ್ನು ತಿಳಿದು ಹನ್ನರಡು ವರ್ಷ ಬ್ರಹ್ಮಚರ್ಯ ಮಾಡಿದವನಿಗೆ , “ವಿದ್ಯಾಸ್ನಾತಕ” ಎನ್ನುವರು.
ಉಪನಯನ ವ್ರತ, ಸಾವಿತ್ರೀ ವ್ರತ , ವೇದವ್ರತಗಳನ್ನು ಅನುಷ್ಠಾನ ಮಾಡಿ ವೇದ ಸಮಾಪ್ತಿಯಾಗುವ ಮೊದಲೇಸ್ನಾನ ಮಾಡಿದವನು “ವ್ರತಸ್ನಾತಕ”.
ಇನ್ನು ಹನ್ನೆರಡು ವರ್ಷ ಕಾಲ ಬ್ರಹ್ಮಚರ್ಯ ಸಮಾಪ್ತಿಮಾಡಿ ವೇದವನ್ನೂಮುಗಿಸಿ ಸ್ನಾನ ಮಾಡಿದವನು “ವಿದ್ಯಾವ್ರತೋಭಯ ಸ್ನಾತಕ”ನೆಂದಾಗುವನು.
“ಉಪನಯನ ವ್ರತ”ವೆಂದರೆ ಉಪನಯನದ ನಂತರ ಮೇಧಾಜನನ ಪರ್ಯಂತ ಮಾಡುವ ತ್ರಿರಾತ್ರಾದಿ ದ್ವಾದಶ ರಾತ್ರಾದಿ ವ್ರತಾನುಷ್ಠಾನ ಮಾಡುವುದು.
ಮೇಧಾಜನನಾಂತರ ಉಪಾಕರ್ಮದವರೆಗೆ ಮಾಡುವ ಬ್ರಹ್ಮಚರ್ಯಾನುಷ್ಟಾನಕ್ಕೆ “ಸಾವಿತ್ರೀ ವ್ರತ”ವೆನ್ನುವರು. ಅದರ ನಂತರ ವೇದಾಧ್ಯಯನಕ್ಕಾಗಿ ದ್ವಾದಶ ವರ್ಷಾದಿ ಕಾಲಾವಧಿಯ ವ್ರತಕ್ಕೆ “ವೇದವ್ರತ”ವೆನ್ನುವರು.

“ವ್ರತಲೋಪ”ವಾಗಿದ್ದಲ್ಲಿ ಸಂಧ್ಯಾ, ಅಗ್ನಿಕಾರ್ಯ, ಭಿಕ್ಷ -ಇವುಗಳ ಲೋಪ; ಬ್ರಹ್ಮಚರ್ಯಾ ವ್ರತಲೋಪ ಪ್ರಾಯಶ್ಚಿತ ಮಾಡಿಕೊಂಡು , ಕೃಚ್ಛತ್ರಯವನ್ನು ಮುಗಿಸಿ, ಮಹಾವ್ಯಾಹೃತಿಹೋಮ ಮಾಡಿ ಸಮಾವರ್ತನ ಮಾಡತಕ್ಕದ್ದು. (ಧರ್ಮಸಿಂಧು-ಕನ್ನಡ-1970/ಪುಟ 181-182)

ಸಮಾವರ್ತನ ಕ್ರಿಯೆ-ವಿಧಿ-ವಿಧಾನ[೫]

[ಬದಲಾಯಿಸಿ]
ಬ್ರಹ್ಮಚರ್ಯಾಶ್ರಮದ ನಂತರ ಗೃಹಸ್ಥಾಶ್ರಮ ಪ್ರವೇಶಕ್ಕೆ ಹೋಗಲು “ಸಮಾವರ್ತನ” ಎಂಬ ಸಂಸ್ಕಾರವನ್ನು ಮಾಡಿಕೊಳ್ಳಬೇಕು. ಇದು ವೇದಾಭ್ಯಾಸ ಮುಗಿದ ನಂತರ ಗೃಹಸ್ತಾಶ್ರಮಕ್ಕೆ ಅರ್ಹತೆಯನ್ನು ಪಡೆಯಲು. ಆಚರಿಸಲ್ಪಡುವ ಸಂಸ್ಕಾರ.
ಈಗ ಇದು ಪ್ರತ್ಯೆಕ ಸಂಸ್ಕಾರವಾಗಿರವ ಬದಲು ವಿವಾಹ ಸಂಸ್ಕಾರದಲ್ಲಿ ಸೇರಿಹೋಗಿದೆ. ವಿವಾಹದ ಅಂಗವಾಗಿ ವಿವಾಹಕ್ಕೆ ಸ್ವಲ್ಪ ಮುಂಚೆ ಅದೇ ದಿನ ಅಥವಾ ಮುನ್ನಾದಿನ ಆಚರಿಸಲ್ಪಡುತ್ತದೆ. ಈಗ ಸಮಾವರ್ತದಲ್ಲಿ ಮುಖ್ಯವಾಗಿ “ಕಾಶೀಯಾತ್ರೆ”ಯ ಅಣಕು ಶಾಸ್ತ್ರ ನಡೆಯುತ್ತದೆ. ಈ ಸಮಾವರ್ತನೆ ಮತ್ತು ವಿವಾಹ ಸಂಸ್ಕಾರಗಳು ಒಂದೊಂದು ಪಂಗಡದಲ್ಲಿ , ಒಂದೊಂದು ಪ್ರದೇಶದಲ್ಲಿ ಬೇರೆ ಬೇರೆ ರೀತಿ ಇದೆ (ದೇಶಾಚಾರ ,ಕುಲಾಚಾರ). ವೇದಮಂತ್ರಗಳೂ ಗೃಹ್ಯ ಸೂತ್ರಕ್ಕೆ ಅನುಗುಣವಾಗಿ ಮತ್ತು ಪದ್ಧತಿಯ ಕ್ರಮದಲ್ಲಿ ವ್ಯತ್ಯಾಸ ವಾಗುವುದು. ಕೆಲವು ಕ್ರಿಯೆಗಳು ಎಲ್ಲರಲ್ಲೂ ಸಮಾನವಾಗಿವೆ. ಒಂದೇ ಶಾಖೆಯ ಮಂತ್ರಗಳು ಸಮಾನವಾಗಿವೆ.
ದಕ್ಷಿಣ ಭಾರತದಲ್ಲಿ ಕೃಷ್ಣ ಯಜುರ್ವೇದದ ಆಪಸ್ತಂಭ-ಗೃಹ್ಯಸೂತ್ರ ಬಳಕೆ ಹೆಚ್ಚು (ಏಕಾಗ್ನಿಕಾಂಡ). ಬೋಧಾಯನ ಸೂತ್ರವೂ ಅನೇಕರಲ್ಲಿ ಬಳಕೆಯಲ್ಲಿದೆ. ಅದರಲ್ಲಿ ಪ್ರಯೋಗ ಕ್ರಮ ಬರೆದವರು ಒಂದೇ ಸೂತ್ರದಲ್ಲಿಯೇ ಸ್ವಲ್ಪ ಬೇರೆ ಕ್ರಮ ಬೆರೆದಿದ್ದಾರೆ.
(ಶಾಸ್ತ್ರಭಾಗ/ವಿಧಾನ) ಶಿಕ್ಷಣ ಮುಗಿಸಿದವನು ಸಮಾವರ್ತನ ಮಾಡಿಕೊಳ್ಳುವವನು , ಸೂರ್ಯೋದಯಕ್ಕೆ ಮೊದಲು ಎದ್ದು ಕೊಟ್ಟಿಗೆಯಲ್ಲಿ ಸೂರ್ಯನ ಬಿಸಿಲು ಅವನ ಮೇಲೆ ಬೀಳದಂತೆ ಕುಳಿತುಕೊಳ್ಳಬೇಕು. [ಆ ದಿನ ಮಧ್ಯಾಹ್ನ (ಅಗ್ನಿಯಲ್ಲಿ) ಹವನದಲ್ಲಿ ಆರಂಭದ ಆಜ್ಯಭಾಗ ನಂತರ ಪಲಾಶ (ಮುತ್ತುಗ)ಸಮಿತ್ತನ್ನು ಅಗ್ನಿಗೆ ಅರ್ಪಿಸಬೆಕು]. ನಂತರ ಗ್ನಿಯ ಪಶ್ಚಿಮದಲ್ಲಿ ಕುಳಿತು ಮಾಡಿ ಕ್ಷರಕರ್ಮ ಮಾಡಿಕೊಳ್ಳಬೇಕು. ನಂತರ ಬ್ರಹ್ಮಚಾರಿಯ ಲಕ್ಷಣಗಳಾದವುಗಳನ್ನು ತ್ಯಜಿಸುವುದು; ಅವು ಮೇಖಲೆ, ದಂಡ ,ಅಜಿನಗಳನ್ನು ತ್ಯಾಗ ಮಾಡುತ್ತಾನೆ. ಅವನ್ನು ಒಬ್ಬ ಬ್ರಹ್ಮಚಾರಿಯು ಗೌಪ್ಯ ಸ್ಥಳದಲ್ಲಿ ಇಡುತ್ತಾನೆ. ಅದಾದ ನಂತರ, “ದಂತಧಾವನ” (ಹಲ್ಲುಜಿ)್ಜ, “ಸ್ನಾನ”, “ವಸû್ರಧಾರಣೆ”, ಅಲಂಕಾರ->”ಚಂದನ ಲೇಪನ”, “ಮಣಿಧಾರಣೆ” “”ಸುವರ್ಣಮಣಿಬಂಧನ”, ಉತ್ತರೀಯ ಧಾರಣೆ, ;ಇದು “ವಸ್ತ್ರ ಪರಿಧಾನ”. ನಂತರ “ಪ್ರಧಾನ ಹೋಮ”, ಸುವರ್ಣ ಕುಂಡಲ ಧಾರಣೆ, ಹಾರಧಾರಣೆ, ಅಂಜನಲೇಪನ, ಆದರ್ಶಾವೇಕ್ಣಣ, ಪಾದರಕ್ಷಾಧಾರಣ, ಛತ್ರಧಾರಣ, ದಂಡ ಧಾರಣ, ಮೌನ -ವಾಗ್ಯಮನ; ಉತ್ತರದ ದಿಕ್ಕಿಗೆಹೋಗಿ ,ದಿಕ್ಕು,ನಕ್ಷತ್ರಗಳ ಪೂಜೆ. ಸೂರ್ಯ ಉದಯದ ನಂತರ ಬಂಧುಮಿತ್ರರೊದನೆ ಮಾತನಾಡುತ್ತಾನೆ; ಇದು “ಮೌನವಿಸರ್ಜನೆ”; (ಬ್ರಹ್ಮಚಾಇಯು ಅನಗತ್ಯ ಮಾತನಾಡುವಂತಿಲ್ಲ -ಈಗ ಅದರ ವಿಸರ್ಜನೆ)
ಈಗ ಆಚರಣೆಯಲ್ಲಿ ಇರುವ ಶಾಸ್ತ್ರ ವಿಧಿ-ವಿಧಾನಗಳು>ಈಗ ರೂಢಿಯಲ್ಲಿರುವ ಕಾಶಿಯಾತ್ರೆಯಲ್ಲಿ 1.“ವಸ್ತ್ರ ಪರಿಧಾನ”. ನಂತರ 2.“ಪ್ರಧಾನ ಹೋಮ”, 3.”ಚಂದನ ಲೇಪನ”, 4.ಹಾರಧಾರಣೆ, 5.ಅಂಜನಲೇಪನ, 6.ಆದರ್ಶಾವೇಕ್ಣಣ, 7.ಪಾದರಕ್ಷಾಧಾರಣ, 8.ಛತ್ರಧಾರಣ, 8.ದಂಡ ಧಾರಣ, ಈ ಎಂಟು ವಿಧಿಗಳು ಮಾತ್ರಾ ಆಚರಣೆಯಲ್ಲಿವೆ. ಪ್ರತಿಯೊಂದು ಕ್ರಿಯಗೂ ಮಂತ್ರಗಳಿವೆ.
ಉದಾರರಣೆಗೆ ಕ್ಷುರಕರ್ಮ ಮಾಡುವಾಗಿನ ಮಂತ್ರ: ವಪನ (ಕ್ಷೌರ) ಮಾಡುವವನನ್ನು ಕುರಿತು ಹೇಳುವ ಮಂತ್ರ-
ಯತ್ ಕ್ಷುರೇಣ ಮರ್ಚಯತಾ ಸುಪೇಶಸಾ ವಪ್ತ್ರಾ ವಪಸಿ ಕೇಶಾನ್ |
ಶುಂಧಿ ಶಿರೋ ಮಾ~ಸ್ಯಾಯುಃ ಪ್ರಮೋಷಿಃ ||
ಹರಿತವಾದ ಪ್ರಕಾಶಿಸುವ ಕತ್ತಿಯಿಂದ ಕ್ಷೌರಮಾಡಿ ಇವನ ಶಿರಸ್ಸನ್ನು ಶುದ್ಧಗೊಳಿಸು. ಇವನ ಆಯುಸ್ಸನ್ನು ಕಡಿಮೆ ಮಾಡಬೇಡ.
ಮೇಖಲೋಪಗೂಹನ ಮಂತ್ರ (ಮೇಕಲೆಯನ್ನು ಶುದ್ದವಾದ ಸ್ಥಳದಲ್ಲಿ ಬಚ್ಚಿಡುವಾಗಿನ ಮಂತ್ರ >
ಇದಮಹಮಮುಷ್ಯಾ ಮುಷ್ಯಾಯಣಸ್ಯ |
ಪಾಪ್ಮಾನಮುಪಗೂಮ್ಯುತ್ತರೋ~ಸೌದ್ವಿಷದ್ಭ್ಯಃ ||
---ಈಗೋತ್ರದ ನಾನು ಅಶಕ್ತತೆಯನ್ನು ಬಚ್ಚಿಡುತ್ತೇನೆ . ಇವನು ಶತ್ರುಗಳಿಗಿಂತ ಅಧಿಕನಾಗಲಿ.
ಸ್ನಾನದ ಮಂತ್ರ > (ಆಪೋಹಿಸ್ಠಾ ಮಯೋಭುವ ಸ್ತಾನ ಊರ್ಜೇ ದಧಾತನ| ಮಹೇ ರಣಾಯ ಚಕ್ಷಸೇ-ಇತ್ಯಾದಿ||
ಓಂ ಆಪೋಹಿಷ್ಠಾ ಮಯೋ ಭುವಃ|
ತಾನ ಊರ್ಜೆ ದದಾತನ || ಓಂ ಮಹೇರಣಾಯ ಚಕ್ಷಸೇ |
ಯೋವಃ ಶಿವತಮೋ ರಸಃ|| ಓಂ ತಸ್ಯ ಭಾಜಯತೇ ಹನಃ|
ಉಶತೀರಿವ ಮಾತರಃ | ಓಂ ತಸ್ಮಾ ಅರಂಗ ಮಾಮವಃ|
ಯಸ್ಯ ಕ್ಷಯಾಯ ಜಿನ್ವಥಃ | ಓಂ ಆಪೋ ಜನಯ ಥಾ ಚ ನಃ||
----ಅಗ್ನಿಂ ಯಾ ಗರ್ಭಂ ದಧಿರೇ ವಿರೂಪಾ|
ಸ್ತಾನ ಆಪಶ್ಶಗ್ಗ್ ಸ್ಯೋನಾ ಭವಂತು||
ಎಲೈ ಆಪೋ ದೇವತೆಗಳೇ (ಆಪೋ=ನೀರೇ-) ನೀವುಸುಖವನ್ನುನೀಡುವವರು. ಮಹತ್ತಾದ, ರಮಣೀಯದರ್ಶನ ಮಾಡಲು ಶಕ್ತಿಯನ್ನುನಮಗೆ ನೀಡಿ. ;ಮಂಗಳಕರ ಜಲದಲ್ಲಿ ನಮ್ಮನ್ನು ಒಂದುಗೂಡಿಸಿ. ನಮ್ಮ ಮಾಲಿನ್ಯ ತೆಗೆಯಿರಿ ;ನಮಗೆ ಸಂತೋಷವನ್ನೂ ಸಮೃದ್ಧೀಯನ್ನೂ ಉಚಿಟುಮಾಡಿ. ---ಅಗ್ನಿಯನ್ನು ಗರ್ಭದಲ್ಲಿ ಧರಿಸಿದ ಅನೇಕ ರೂಪವಾಗಿರುವ ನೀರು ನಮಗೆ ಮಂಗಳಕರವಾಗಲಿ.
ಹೀಗೆ 1.“ವಸ್ತ್ರ ಪರಿಧಾನ”. ನಂತರ 2.“ಪ್ರಧಾನ ಹೋಮ”, 3.”ಚಂದನ ಲೇಪನ”, 4.ಹಾರಧಾರಣೆ, 5.ಅಂಜನಲೇಪನ, 6.ಆದರ್ಶಾವೇಕ್ಷಣ, 7.ಪಾದರಕ್ಷಾಧಾರಣ, 8.ಛತ್ರಧಾರಣ, 8.ದಂಡ ಧಾರಣ ಇದೆಲ್ಲದಕ್ಕೂ ಮಂತ್ರಗಳಿವೆ. ಅವು ದೇವತೆಗಳ ಜೊತೆ, ನಿರ್ಜೀವ ವಸ್ತುಗಳಿಗೆ ಜೀವವಿದೆಯೋ ಎನ್ನುವಂತೆ ಅವನ್ನು ಪ್ರಾರ್ಥಿಸುವ ಮಂತ್ರಗಳು. ಉದಾಹರಣೆ: (ಚಿನ್ನದ ಮಣಿಹಾರಕ್ಕೆ) ಎಲೈ ಮಣಿಯೇ ನೀನು ನನಗೆ ಪಾಶವಾಗಿಲ್ಲ ; ನನಗೆ ನೀನು ಹಿಂಸಿಸಬೇಡ. ; ಕರ್ಣಕುಂಡಲ ಕುರಿತು- ಧರಿಸುವಾಗ ಹೋಮದ ಎದುರಲ್ಲಿ 8 ಮಂತ್ರಗಳು :---ತಂ ಮಾ ಹಿರಣ್ಯ ವರ್ಚಸಂ ಪುರುಷು ಪ್ರಿಯಂ ಕುರು || ನನ್ನನ್ನು ಚಿನ್ನದ ಕಾಂತಿಯುಳ್ಳವನನ್ನಾಗಿ ಮಾಡು, ಮತ್ತು ಅನೇಕರಿಗೆ ನಾನು ಪ್ರಿಯವಾಗುವಂತೆ ಮಾಡು.|| ---ಎಲ್ಲರಿಗೂ ನಾನು ಪ್ರಿಯವಾಗುವಂತೆಮಾಡು. ||---ಎಲೈ ದಂಡವೇ ನಿನ್ನನ್ನು ಶತ್ರುಗಳ ವಧೆಗಾಗಿ ತೆಗೆದುಕೊಳ್ಳುತ್ತೇನೆ. ----ಭವ ಯತ್ಪಾಪಂ ತನ್ನಿವಾರಯ-ನೀನು ಪಾಪವನ್ನು ನಿವಾರಿಸು ---||
ಅನಂತರ , ದಿಕ್ಕುಗಳನ್ನು ನಕ್ಷತ್ರ , ಚಂದ್ರ ಇವುಗಳನ್ನು ಪೂಜಿಸಿದ ನಂತರ ಸಮಾವರ್ತನ ಸಂಸ್ಕಾರವು ಮುಕ್ತಾಯವಾಗುವುದು. “ಮಾ ಹಾಸ್ಮಹಿ ಪ್ರಜಯಾ ಮಾ ತನೂಭಿರ್ಮಾ ರಧಾಮ ದಿ ್ವಷತೇ ಸೋಮರಾಜನ್”|| ಎಲೈ ಚಂದ್ರನೇ ಎಲೈ ನಕ್ಷತ್ರಗಳೇ ನಿಮ್ಮ ಅನುಗ್ರಹದಿಂದ ನಮಗೆ ಸಚಿತ್ತಿ ಹಾನಿಯಾಗುವುದು ಬೇಡ; ಶತ್ರುಗಳಿಗೆ ನಾವು ವಶವಾಗುವುದು ಬೇಡ||

ವಿವಾಹ ಸಿದ್ಧತೆ

[ಬದಲಾಯಿಸಿ]
ಸ್ನಾತವೃತನಾದ ಯುವಕನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ಹೊರಡುತ್ತಾನೆ. ಆಗ ಈ ಎಲ್ಲಾ ಅಲಂಕಾರಯುಕ್ತನಾದ ವರ (ವಿವಾಹ ಯೋಗ್ಯನಾದ ಯುವಕ)ನನ್ನು ಕನ್ಯೆಯ ಸೋದರ ಅಥವಾ ಅವನ ಸ್ಥಾನದಲ್ಲಿರುವವನು, ವರನನ್ನು ತಡೆದು ತನ್ನ ಸೋದರಿ ವಿವಾಹ ಯೋಗ್ಯಳಿದ್ದಾಳೆ, ಅವಳನ್ನು ವಿವಾಹ ಮಾಡಿಕೊಂದು ಮುಂದಿನ ವಿದ್ಯಾಬ್ಯಾಸಕ್ಕೆ ತೆರಳಬಹುದೆಂದು ಹೇಳುತ್ತಾನೆ. ಯುವಕನು/ವರನು ಒಪ್ಪಿ ಕಾಶೀಯಾತ್ರೆಯನ್ನು ನಿಲ್ಲಿಸಿ ವಿವಾಹಕ್ಕೆ ಸಿದ್ಧನಾಗುತ್ತಾನೆ. ಮುಂದಿನದು ವಿವಾಹ ಕಾಯ‍ಕ್ರಮ.
ಈಗಿನ ಪದ್ದತಿಯಂತೆ ಕೂಡಲೆ ವಿವಾಹ ಸಂಸ್ಕಾರ ಸಮಾರಂಭ ಆರಂಭವಾಗುವುದು..

12.ವಿವಾಹ ಸಂಸ್ಕಾರ

[ಬದಲಾಯಿಸಿ]
16.ವಿವಾಹ ಸಂಸ್ಕಾರ. (ಇಂಗ್ಲಿಷ್ ತಾಣದಂತೆ)
ವಿವಾಹ (ಸಂಸ್ಕೃತ) ; (ಹಿಂದಿ
ವಿವಾಹ್:)
ದಕ್ಷಿಣ ಏಷ್ಯಾದಲ್ಲಿ ಮದುವೆಗೆ ‘ವಿವಾಹ’ ಎಂಬ ಪದವನ್ನು ವೈದಿಕ ಸಂಪ್ರದಾಯದಂತೆ ಮದುವೆಯನ್ನು ವಿವರಿಸಲು ಬಳಸಲಾಗುತ್ತದೆ. ವೈದಿಕ ಹಿಂದೂ ಸಂಪ್ರದಾಯದಲ್ಲಿ “ಮದುವೆ” ಅಡಿಯಲ್ಲಿ ಪತ್ನಿ ಮತ್ತು ಪತಿ ಇವರ ಆಜೀವ ಬದ್ಧತೆಯನ್ನು ವಿವಾಹ ಸಂಸ್ಕಾರವೆಂದು (ಪವಿತ್ರ ವಿಧಿಯೆಂದು ), ತಿಳಿಯಲಾಗುತ್ತದೆ. ಮದುವೆ ಸ್ವರ್ಗದಲ್ಲಿ ಮಾಡಿದ್ದು ಮತ್ತು 'ಒಂದು' 'ಅಗ್ನಿಸಾಕ್ಷಿಯಾದ ಪವಿತ್ರವಾದ ‘ದೈವಿಕ ಬಂಧ' ಎಂದು ಭಾರತದಲ್ಲಿ ,ಪರಿಗಣಿಸಲಾಗುತ್ತದೆ. ಇದು ಕುಲಾಚಾರ ಮತ್ತು ದೇಶಾಚಾರ ಪದ್ದತಿಯನ್ನು ಒಳಗೊಂಡಿದ್ದು ವಿಭಿನ್ನ ಆಚರಣೆಗಳಿವೆ. ಹಿಂದೂಗಳಲ್ಲಿ ಹೆಂಡತಿ ಗಂಡನ (ಜೊತೆ) ಮನೆಗೆ ಹೋಗುವ ಕ್ರಿಯೆ (ವಿ +ವಾಹ: ವಿಶಿಷ್ಟವಾಗಿ-ಹೋಗುವುದು).
ಹಿಂದೂ ಮದುವೆ ಪದ್ದತಿಯಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಸಣ್ಣ ಪುಟ್ಟ ವಿಚಾರಗಳಲ್ಲಿ ಬದಲಾವಣೆಯಾಗಗಬಹುದು ಮತ್ತು ವಿವಿಧ ಪುರೋಹಿತರು ಕೆಲವು ವ್ಯತ್ಯಾಸಗಳನ್ನು ಮಾಡುತ್ತಾರೆ.

ಮದುವೆಯ ಪದ್ಧತಿ

[ಬದಲಾಯಿಸಿ]
ಹಿಂದೂ ಧರ್ಮ ಪ್ರಕಾರ, ಮದುವೆ ಗಂಡು ಮತ್ತು ಹೆಣ್ಣು , ಒಟ್ಟಿಗೆ ಧರ್ಮ, ಅರ್ಥ (ಆಸ್ತಿ), ಕಾಮ (ದೈಹಿಕ ಮತ್ತು ಇತರ ಬಯಕೆಗಳು) ಮತ್ತು ಮೋಕ್ಷ ( ಮಾಯೆಯಿಂದ ಬಿಡುಗಡೆ ) ಗಳಾದ ಚತುರ್ವಿಧ ಪುರುಷಾರ್ಥಗಳನ್ನು ಸಾಧಸಲು ಬದ್ಧವಾದ ಸ್ತ್ರೀ ಪುರುಷರ ನಡುವೆ ಒಪ್ಪಂದದ ಒಕ್ಕೂಟ. ಇದು ಎರಡು ಕುಟುಂಬಗಳನ್ನು ಸೇರಿಸುತ್ತದೆ. ಇದು ಮಾನವನನ್ನು ಆಧ್ಯಾತ್ಮಿಕ ಅನುಭವದ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ದಾರಿ. ಆನಂದ, ಪ್ರಗತಿ, ಅಭ್ಯುದಯ ಮತ್ತು ಐಹಿಕ ಸಂತೋಷ ಇವುಗಳನ್ನು ಪಡೆಯುವ ಜೀವನದ ದಾರಿ ಆಗಿದೆ. ಅದನ್ನು ಭವಿಷ್ಯದ ಪೀಳಿಗೆಯ ಸೃಷ್ಟಿಸುವುದು (ವಂಶಾಭಿವೃದ್ಧಿ) ಮತ್ತು ಪಾಲನೆ, ಮತ್ತು ತನ್ಮೂಲಕ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಪ್ರಭಾವ ನಿಯಂತ್ರಣ ಮಾಡುವುದು.(ಮನು), ಮನುವಿನ ನಿಯಮ ಪ್ರಕಾರ, ವಿವಾಹದಲ್ಲಿ ಎಂಟು ವಿಧಗಳಿವೆ. ಎಲ್ಲಾ ಎಂಟು ಬಗೆಯೂ ಧಾರ್ಮಿಕ ಸಮ್ಮತಿ ಹೊಂದಿವೆ. ಆದರೆ ಕೊನೆಯ ನಾಲ್ಕು ವಿಧ ವಿವಾಹಗಳು, ನಿಶಿದ್ಧವೆಂದು ಖಂಡಿಸಲ್ಪಟ್ಟಿವೆ ಎಂಟು ವಿಧ ವಿವಾಹಗಳು : 1.ಬ್ರಹ್ಮ,, 2.ದೈವ, 3.ಅರ್ಶ,4. ಪ್ರಜಾಪತ್ಯ , , 5.ಗಂಧರ್ವ, 6.ಅಸುರ, 7.ರಾಕ್ಷಸ, 8.ಪೈಶಾಚ .(ಪ್ರಾಚೀನ ಭಾರತೀಯ ಗ್ರಂಥ- ಮನು ಸ್ಮೃತಿಯ III.20-34)..
ವರನು ಬ್ರಹ್ಮಚರ್ಯೆ ಆಶ್ರಮ (ವಿದ್ಯಾರ್ಥಿ ದೆಸೆ ) ಮುಕ್ತಾಯ (ಸಮಾವರ್ತನೆ) ನಂತರ ವಿವಾಹ ಸಂಸ್ಕಾರಕ್ಕೆ ಅರ್ಹನಾಗುತ್ತಾನೆ. ಪ್ರೌಢಾವಸ್ಥೆ ಪಡೆದ, ಮದುವೆಯಾಗಿಲ್ಲದ ಕನ್ಯೆ/ವಧು ವಿವಾಹ ಸಂಸ್ಕಾರಕ್ಕೆ ಅರ್ಹಳಾಗುತ್ತಾಳೆ.

ಬ್ರಾಹ್ಮ ವಿವಾಹ

[ಬದಲಾಯಿಸಿ]
ಪ್ರಮುಖ ಆಚರಣೆ
ಬ್ರಾಹ್ಮ ವಿವಾಹ: ಬ್ರಹ್ಮ ವಿವಾಹವು ಅತ್ಯುತ್ತಮ ಮದುವೆ ಎಂದು ಪರಿಗಣಿಸಲಾಗಿದೆ. ಹುಡುಗಿ/ಕನ್ಯೆ ಉತ್ತಮ ಕುಟುಂಬಕ್ಕೆ ಸೇರಿದವಳಾ ಗಿರಬೇಕು. ಮತ್ತು ಹುಡುಗ ತನ್ನ ಬ್ರಹ್ಮಚರ್ಯೆ ಆಶ್ರಮ ಪೂರ್ಣಗೊಳಿಸಿರಬೇಕು. ಈ ಮದುವೆಗಾಗಿ ಯಾವುದೇ ವರದಕ್ಷಿಣೆ ಇರಕೂಡದು. ಮತ್ತು ಹುಡುಗಿಯು ಕೇವಲ ಎರಡು ಜೊತೆ ಬಟ್ಟೆ ಮತ್ತು ಕೆಲವು ಆಭರಣಗಳ ಜೋತೆ ಹುಡುಗನ ಮನೆಯನ್ನು ಪ್ರವೇಶಿಸುತ್ತಾಳೆ. . ಈ ಮದುವೆಯಲ್ಲಿ , ಹುಡುಗನ ಕುಟುಂಬದವರು ಹುಡುಗಿಯ ಕುಟುಂಬವನ್ನು ವಧುವಿಗಾಗಿ ಸಂಪರ್ಕಿಸುತ್ತಾರೆ. ವಧುವನ್ನು ವರನ ತಂದೆಗೆ ಒಪ್ಪಿಸಲಾಗುವುದು..(ಹಸ್ತಾಂತರಿಸಲಾಗುವುದು.) ಇದು “ಕನ್ಯಾದಾನ

ಪ್ರಜಾಪತ್ಯ :

[ಬದಲಾಯಿಸಿ]

ಈ ವಿಧದ ವಿವಾಹದಲ್ಲಿ : ವಧುವಿನ ತಂದೆ ಮಗಳನ್ನು ವರನ ಬದಲಿಗೆ, ವರನ ತಂದೆಗೆ ತನ್ನ ಮಗಳನ್ನು ದಾನವಾಗಿ/ಉಡುಗೊರೆಯಾಗಿ ನೀಡುತ್ತಾನೆ . ಈ ಕ್ರಮವನ್ನು ಹೊರತುಪಡಿಸಿ ಉಳಿದ ಎಲ್ಲಾ -ವಿಷಯಗಳಲ್ಲಿ ಬ್ರಹ್ಮ ವಿವಾಹ ಮತ್ತು ಪ್ರಜಾಪತ್ಯ ವಿವಾಹ ಒಂದೇ . ಇಲ್ಲಿ ವಧೂವರರು ಚಿಕ್ಕವರಿದ್ದು (ಬಾಲ್ಯ ವಿವಾಹ) ವಧುವಿನ ರಕ್ಷಣೆ ವರನ ತಂದೆಯದಾಗಿರುತ್ತದೆ. ಈ ರೀತಿಯ ಮದುವೆಯಲ್ಲಿ ವರ ಹಾಗು ವಧು ಇಭ್ಭರೂ ಪ್ರಾಪ್ತ ವಯಸ್ಕರು ಆಗುವವರೆಗೆ ತಂದೆಯೇ ಪೋಷಕನಾಗಿರುತ್ತಾನೆ ..ಪಾಣಿಗ್ರಹಣ ಸಮಾರಂಭದಲ್ಲಿ ವಧುವಿನ ತಂದೆ ವರನ ತಂದೆಯ ಕೈಗೆ ಮಗಳನ್ನು ಕೊಡುತ್ತಾನೆ. ,..ಪಾಣಿಗ್ರಹಣ ಕ್ರಿಯೆ ನಡೆದರೂ ವಧೂವರರು ಯೌವನಕ್ಕೆ ಬರುವವರೆಗೆ ಮದುವೆ ಸಮಾರಂಭ ಮುಂದೂಡಬಹುದು; ಪ್ರಾಪ್ತ ವಯಸ್ಕರಾಗಿದ್ದಲ್ಲಿ ಸಮಾರಂಭ ತಕ್ಷಣವೇ ನಡೆಯಬಹುದು,

ದೈವ ವಿವಾಹ:

[ಬದಲಾಯಿಸಿ]

ಈ ರೀತಿ ಮದುವೆಯಲ್ಲಿ , ವಿವಾಹ ವಿಶೇಷ ಆಡಂಬರವಿಲ್ಲದೆ ಸರಳವಾಗಿ ಉದಾರತಿಗಳ ಸಹಾಯದಿಂದ ನೆಡೆಯುವುದು. ಅದಾರಿ ವ್ಯಕ್ತಿಗಳು ಪುರೋಹಿತರಿಗೆ ವಧೂವರರಿಗೆ ಉಚತ ಧನ, ಕಾಣಿಕೆಗಳನ್ನು ಕಡುತ್ತಾರೆ. ಬಡವರಾದ ಕನ್ಯಾ- ವರ ಪಿತೃಗಳು ಅನಕೂಲವಂತ ಉದಾರಿಗಳ ಸಹಾಯದಿಂದ ಈವಿವಾಹ ಸಮಾರಂಭ ನಡೆಯುವುದು. ಅದೇ ಹುಡುಗಿ ವಯಸ್ಕಳಾಗಿ ವಿವಾಹ ಮಾಡಲು ತಂದೆ ಅಥವಾಪೋಷಕನಿಗೆ ಸಾದ್ಯವಾಗದ ಸಂದರ್ಭದಲ್ಲಿಯೂ ಶ್ರೀಮಂತರ ಸಹಾಯದಿಂದ ವಿವಾಹ ನಡೆಯಬಹುದು. ಧರ್ಮಶಾಸ್ತ್ರ ಪ್ರಕಾರ ದೈವ ಮದುವೆ ಪ್ರಕಾರ, ಪ್ರಾಮಾಣಿಕ ಬಡತನವಿದ್ದಲ್ಲಿ ಸ್ವೀಕಾರಾರ್ಹ.; ಆದರೆ ಅದಲ್ಲದಿದ್ದರೆ ನಿಂದನೀಯ.

ಧರ್ಮಸಿಂಧು

[ಬದಲಾಯಿಸಿ]
1.ಬ್ರಾಹ್ಮ,, 2.ದೈವ, 3.ಅರ್ಶ,4. ಪ್ರಜಾಪತ್ಯ , , 5.ಗಂಧರ್ವ, 6.ಅಸುರ, 7.ರಾಕ್ಷಸ, 8.ಪೈಶಾಚ ಹೀಗೆ ವಿವಾಹ ಎಂಟು ಬಗೆ.

-(ಶಂಭುಸರ್ಮಾಅವರ ಕನ್ನಡ 1970ರ ಪ್ರತಿ ಪುಟ 206)

1. ಯೋಗ್ಯ ವರನನ್ನು ತಂದು ಅಲಂಕರಿಸಿ ವಿಧಿಪೂರ್ವಕವಾಗಿ ಕನ್ಯಾದಾನ ಮಾಡುವುದಕ್ಕೆ ಬ್ರಾಹ್ಮ ವಿವಾಹವೆನ್ನುವರು.
2. ಯಜ್ಞದಲ್ಲಿ ಋತ್ವಿಜ ಕರ್ಮವನ್ನು ಮಾಡುವವನಿಗೆ ಸಾಲಂಕಾರ ಕನ್ಯೆಯನ್ನು ಕೊಡುವುದಕ್ಕೆ “ದೈವ”ವೆನ್ನುವರು.
3. ವರನಿಂದ ಎರಡು (ಜೋಡು) ಗೋವನ್ನು ತೆಗೆದುಕೊಂಡು ಅವನಿಗೆ ಕನ್ಯೆಯನ್ನು ಕೊಡುವುದಕ್ಕೆ “ಆರ್ಷ”,ವೆನ್ನುವರು. ಗೋವು ಕನ್ಯಗೆ ಪೂಜಾರ್ಹವಾದುದು; ಆದ್ದರಿಂದ ಅದು ಕನ್ಯಾವಿಕ್ರಯವಲ್ಲ.
4. “ನೀನು ಇವಳಿಂದಲೇ ಕೂಡಿ ಗೃಹಸ್ತಧರ್ಮವನ್ನಾಚರಿಸತಕ್ಕದ್ದು ಇವಳ ಜೀವನ ಪರ್ಯಂತ ಬೇರೆ ವಿವಾಹವನ್ನೂ ಸಂನ್ಯಾಸವನ್ನೂ ಸ್ವೀಕರಿಸಬಾರದು. ಎಂದು ಹೇಳಿ ಕೊಡುವ ಕನ್ಯಾದಾನಕ್ಕೆ “ಪ್ರಾಜಪತ್ಯ” :5. ಬಂಧು-ಬಾಂಧವರಿಗೆ ಯಥೇಚ್ಛ ಧನವನ್ನು ಕೊಟ್ಟು ಮಾಡಿಕೊಳ್ಳವ ವಿವಾಕ್ಕೆ ,”ಆಸುರ” ವಿವಾಹವೆನ್ನುವರು.
6. ವಧೂವರರು ಪರಸ್ಪರ ಇಚ್ಛೆಯೊದ ಮಾಡಿಕೊಳ್ಳುವ ವಿವಾಹವು, “ಗಾಂಧರ್ವ”ವು.
7. ಯುದ್ಧಾದಿ ಬಲಾತ್ಕಾರದಿಂದ ಮಾಡಿಕೊಳ್ಳುವ ವಿವಾಹವು ರಾಕ್ಷಸ”ವೆನ್ನುವರು.
8. ಚೋರತನದಿಂದ ಕನ್ಯೆನ್ನಪಹರಿಸಿದರೆ , ಅದಕ್ಕೆ “ಪೈಶಾಚ”ವೆನ್ನುವರು.
(ಈ ವಿವಾಹ ಗಳಲ್ಲಿ 4 ಕ್ಕಿಂತ 3; 3,ಮೂರಕ್ಕಿಂತ 2; 2 ಕ್ಕಿಂತ 1 -ಹೀಗೆ ಶ್ರೇóಷ್ಠವು. -:- ಈ ಕಳಗಿನ ನಾಲ್ಕು ಬಗೆಯ ವಿವಾಹಗಳಲ್ಲಿ ಮುಂದು ಮುಂದಿನದು ಒಂದಕ್ಕಿಂತ ಮುಂದಿನದು ನಿಂದ್ಯವು. 5, ಕ್ಕಿಂತ 6 ; 6 ಕ್ಕಿಂತ 7 ; 7ಕ್ಕಿಂತ 8 ಹೆಚ್ಚು ನಿಂದ್ಯವು.
ಬ್ರಾಹ್ಮಣನು ಆಪತ್ತಿನಲ್ಲಿ ಹೊರತಾಗಿ, ರಾಕ್ಷಸ ಹೊರತಾದ ಏಳು ವಿಧವಾದ ವಿವಾಹವನ್ನು ಮಾಡಿಕೊಳ್ಳಬಹುದು.

ದೈವ ವಿವಾಹ:

[ಬದಲಾಯಿಸಿ]

ಈ ರೀತಿ ಮದುವೆಯಲ್ಲಿ , ವಿವಾಹ ವಿಶೇಷ ಆಡಂಬರವಿಲ್ಲದೆ ಸರಳವಾಗಿ ಉದಾರತಿಗಳ ಸಹಾಯದಿಂದ ನೆಡೆಯುವುದು. ಅದಾರಿ ವ್ಯಕ್ತಿಗಳು ಪುರೋಹಿತರಿಗೆ ವಧೂವರರಿಗೆ ಉಚತ ಧನ, ಕಾಣಿಕೆಗಳನ್ನು ಕಡುತ್ತಾರೆ. ಬಡವರಾದ ಕನ್ಯಾ- ವರ ಪಿತೃಗಳು ಅನಕೂಲವಂತ ಉದಾರಿಗಳ ಸಹಾಯದಿಂದ ಈವಿವಾಹ ಸಮಾರಂಭ ನಡೆಯುವುದು. ಅದೇ ಹುಡುಗಿ ವಯಸ್ಕಳಾಗಿ ವಿವಾಹ ಮಾಡಲು ತಂದೆ ಅಥವಾಪೋಷಕನಿಗೆ ಸಾದ್ಯವಾಗದ ಸಂದರ್ಭದಲ್ಲಿಯೂ ಶ್ರೀಮಂತರ ಸಹಾಯದಿಂದ ವಿವಾಹ ನಡೆಯಬಹುದು. ಧರ್ಮಶಾಸ್ತ್ರ ಪ್ರಕಾರ ದೈವ ಮದುವೆ ಪ್ರಕಾರ, ಪ್ರಾಮಾಣಿಕ ಬಡತನವಿದ್ದಲ್ಲಿ ಸ್ವೀಕಾರಾರ್ಹ.; ಆದರೆ ಅದಲ್ಲದಿದ್ದರೆ ನಿಂದನೀಯ.

ಬ್ರಾಹ್ಮ ವಿವಾಹದ ಕ್ರಮ:

[ಬದಲಾಯಿಸಿ]
1.ವರಪ್ರೇಕ್ಷಣ ; 2.ಕನ್ಯಾ ಸಮೀಕ್ಷಣ ; 3.ವಧೂಸಮ್ಮಾರ್ಜನ ; 4.ದರ್ಭೇಣ್ವನಿಧಾನ. ; 5.ಯುಗಚ್ಛಿದ್ರಪ್ರತಿಷ್ಠಾಪನ ; 6.ಸುವರ್ಣನಿಧಾನ ; 7.ಸ್ನಾಪನ; ;8..ವದ್ವಾನಯನ ; 9.ಪಾಣಿಗ್ರಹಣ ;10. ಸಪ್ತಪದೀ 11.ಆಜ್ಯಹೋಮ ; 12.ಅಶ್ಮಾಸ್ಥಾಪನ ; 13.ಲಾಜಾಹೋಮ ; 14.ಯೋಕ್ತ್ರವಿಮೋಚನ ;14.ಪತಿಗೃಹಸ್ಥಿತವಧ್ವಭಿಮಂತ್ರಣ ;15.ಗೃಹಪ್ರವೇಶ -ಗೃಹಪ್ರವೇಶ ಹೋಮ ; 16.ಅಂಕೋಪವೇಶನ : 17.ಫಲದಾನ ; 18.ಧ್ರುವದರ್ಶನ ; 19.ಅರುಂಧತೀ ದರ್ಶನ. (ಈಗಿನ ಪದ್ಧತಿಯಂತೆ ,ನಂತರ ಮೊದಲನೇ ಸಂಸ್ಕಾರ -ಗರ್ಭಾದಾನ -ಹೋಮವೂ ಇದೆ; ಇದನ್ನು ವಧೂ ಗೃಹಪ್ರವೇಶದ ಸಂಧರ್ಭದಲ್ಲಿಯೇ ಕೊನೆಯಲ್ಲಿ ಮಾಡುತ್ತಾರೆ.(ಆಪಸ್ತಂಬ ಗೃಹ್ಯಸೂತ್ರದ ಪ್ರಕಾರ-ಡಾ.ರೂಪಾ.)

ಬ್ರಾಹ್ಮ ವಿವಾಹದ ಕ್ರಮ-2.

[ಬದಲಾಯಿಸಿ]
(ಇಂಗಿಷ್ ತಾಣದ ಲ್ಲಿರುವ ಕ್ರಮ)
1..ಮದುವೆಯ ದೀಕ್ಷೆ

2. ಮದುವೆಯ ಕೌಟುಂಬಿಕತೆ 3. ವಿವಾಹ ; (ವಿವಾಹ ಸಂಸ್ಕಾರ ಎಂದು) 4. ಕ್ರಮಗಳು [8] 4.3. ವರಪ್ರೇಕ್ಷಣ ; 4.3.1. ಮಧುಪರ್ಕ ಕಾರ್ಯಕ್ರಮ 4.3.2. ಒಂದು ವಿಧ್ಯುಕ್ತ ಹಸುವಿನ ಕೊಡುಗೆ (ಗೋದಾನ) 4.4. ಮಂಗಳ ಸ್ನಾನ ಮತ್ತು ವಧು ಮದುವೆ ಬಟ್ಟೆ ಧರಿಸಿ ಬರುವುದು. 4.5. ಮಾಂಗಲ್ಯ ಧಾರಣ 4.6. ಪಾಣಿಗ್ರಹಣ 4.7, ಸಪ್ತ ಪದಿ 4.8. ಪ್ರಧಾನಹೋಮ ಹೋಮ ಅಥವಾ ಜಯಾದಿಹೋಮ . 4.9, ಅಶ್ಮಾರೋಹಣ (ಕಲ್ಲು ಮೆಟ್ಟುವುದು) 4.10, ಲಾಜಾ ಹೋಮ 4.11 ಗೃಹ ಪ್ರವೇಶ 4.12, ಪ್ರಾವಿಶ್ಯ ಹೋಮ 4.13, ನಿಶೇಕ 5. ಕನ್ಯಾ ದಾನ (ವಧುವನ್ನು ಕೊಡುವುದು.) 6, ವಿವಾಹ ಹೋಮ. 7. ಪಾಣಿಗ್ರಹಣ (ಕನ್ಯೆಯ ಸ್ವೀಕಾರ) 8. ಪ್ರತಿಜ್ಞಾ ಕರಣ (ಗಂಭೀರ ಪ್ರತಿಜ್ಞೆ) 9. ಶಿಲಾರೋಹಣ (ಕಲ್ಲಿನಮೇಲೆ ಕಾಲಿಡುವುದು. 10. ಲಾಜಾಹೋಮ. (ಭತ್ತದ ಅರಳು ಅರ್ಪಣೆ) 11. ಪರಿಕ್ರಮ, ಹೋಮದ ಪ್ರದಕ್ಷಿಣೆ Pheಡಿಚಿ 12.ಸಪ್ತಪದಿ (ಏಳು ಹೆಜ್ಜೆ ನಡೆಯುವುದು) 13. ಅಭಿಷೇಕ್ (ನೀರನ್ನು ಚಿಮುಕಿಸುವುದು -ಸ್ನಾನದ ಕ್ರಿಯೆ) 14. ಸೂರ್ಯ ದರ್ಶನ (ಸೂರ್ಯ ಮೇಲೆ ಧ್ಯಾನ) 15. ಹೃದಯ ಸ್ಪರ್ಶ (ಹೃದಯ ಸ್ಪರ್ಶಿಸುವುದು) 16. ಧ್ರುವ ದರ್ಶನ ಮತ್ತು ಧ್ಯಾನ (ಧ್ರುವ ನಕ್ಷತ್ರ ಮತ್ತು ಅರುಂಧತಿ ನಕ್ಷತ್ರ ನೋಡುವುದು ಮತ್ತು ಧ್ಯಾನ) 17. ಅನ್ನ ಪ್ರಾಶನ ಒಟ್ಟಿಗೆ ಆಹಾರ ಸೇವನೆ.) 18 ಆಶೀರ್ವಚನ (ಪುರೋಹಿತರು , ಹಿರಿಯರು ಆಶೀರ್ವಾದ ಮಾಡುವುದು

ಹೆಚ್ಚಿನ ವಿವರಕ್ಕೆ -;
ವಿವಾಹ---ತಾಣ ನೋಡಿ :

ಷೋಡಶ ಸಂಸ್ಕಾರಗಳು

[ಬದಲಾಯಿಸಿ]

(ಪುನಃ :)

ಷೋಡಶ ಸಂಸ್ಕಾರಗಳು
ಮೊದಲ ಬಗೆ:1.ಗರ್ಭಾದಾನ, 2.ಪುಂಸವನ, 3.ಸೀಮಂತ, 4.ಜಾತಕರ್ಮ, 5.ನಾಮಕರಣ (ಮತ್ತು ನಿಷ್ಕ್ರಮಣ), 6.ಅನ್ನಪ್ರಾಶನ, 7.ಚೌಲ; ಚೂಡಾಕರ್ಮ, 8.ಉಪನಯನ, 9,ಉಪಾಕರ್ಮ, 10.ಉತ್ಸರ್ಜನ, 11.ವೇದವ್ರತ, 12.ಗೌದಾನಿಕ, 13.ಸ್ನಾತಕ, 14.ವಿವಾಹ, 15.ಸ್ಮಾರ್ತಾಗ್ನಿ ಹೋತ್ರ, 16.ಔರ್ಧ್ವದೇಹಿಕ ಅಥವಾ ಅಂತ್ಯೇಷ್ಟಿ ಅಥವಾ ಅಂತ್ಯಕ್ರಿಯೆ.;
ಷೋಡಶ ಇನ್ನೊಂದು ಬಗೆ - (ಪೂರ್ವ ಶೋಡಶ (ಬೋಧಾಯನ -ತೂದೂರು ತುಂಗಭದ್ರಾ ತಟ ಶಂಕರ ಸಾನ್ಯಿಧ್ಯ (ವಾಸಿ)- ಮರಿಯಪ್ಪ ಬಾಲನಾಮಾಖ್ಯ / ವೆಂಕಟಪತಿ - ನಿತ್ಯಕರ್ಮ ದೀಪಿಕಾ) :
1.ಗರ್ಭಾದಾನ, 2.ಪುಂಸವನ, 3.ಸೀಮಂತ, 4 ವಿಷ್ಣುಬಲಿ, 5.ಜಾತಕರ್ಮ, 6 .ನಾಮಕರಣ, 7, ಉಪನಿಷ್ಕ್ರಮಣ 8,.ಅನ್ನಪ್ರಾಶನ, 9,.ಚೌಲ, (ಕರ್ಣವೇಧನ?)10,.ಉಪನಯನ, 11, ಹೋತೃ , 12. ಶುಕ್ರೀಯ 13, ಉಪನಿಷದ್, 14. ಗೋದಾನ, 15. ಸಮಾ ವರ್ತನ, 16. ವಿವಾಹ
ಷೋಡಶ ಮೂರನೆ ಬಗೆ :1]ಗರ್ಭಾದಾನ, 2]ಪುಂಸವನ, 3)ಸೀಮಂತೋನ್ನಯನ; 4]ವಿಷ್ಣು ಬಲಿ, 5]ಜಾತಕರ್ಮ, 6]ನಾಮಕರಣ, 7]ನಿಷ್ಕ್ರಮಣ, 8] ಅನ್ನಪ್ರಾಶನ, 9]ಚೌಲ, (9.ಕರ್ಣವೇಧನ? 10. ವಿದ್ಯಾರಂಭ) 10]ಉಪನಯನ , 10]ಮಹಾನಾಮ್ನೀ ,12] ಮಹಾವೃತ(12.ಪ್ರೈಶಾರ್ಥ?), 13]ಉಪನಿಷತ್ ವ್ರತ (13.ಕೇಶಾಂತ ರಿತುಸಿದ್ಧಿ ), 14] ಗೋದಾನ ವ್ರತ, 15] ಸಮಾವರ್ತನ, 16]ವಿವಾಹ, (16. ಅಂತ್ಯೇಷ್ಟಿ
ಷೋಡಶ ನಾಲ್ಕನೇ ಬಗೆ(ಇಂಗ್ಲಿಷ್ ತಾಣ):1]ಗರ್ಭಾದಾನ 2]ಪುಂಸವನ 3)ಸೀಮಂತೋನ್ನಯನ; 4]ಜಾತಕರ್ಮ 5]ನಾಮಕರಣ ,6]ನಿಷ್ಕ್ರಮಣ 7] ಅನ್ನಪ್ರಾಶನ, 8]ಚೌಲ/ಚೂಡಾಕರ್ಮ, 9.ಕರ್ಣವೇಧನ. 10. ವಿದ್ಯಾರಂಭ 11]ಉಪನಯನ , 12.ಪ್ರೈಶಾರ್ಥ, 13] ಕೇಶಾಂತ ಮತ್ತು ಋತುಸಿದ್ಧಿ (ಉಪನಿಷತ್ ವ್ರತ?) ,14]ಸಮಾವರ್ತನ, 15]ವಿವಾಹ, 16.ಅಂತ್ಯೇಷ್ಟಿ

ಸಂಸ್ಕಾರಗಳಲ್ಲಿ ಮತ್ತೊಂದು ವಿಧ2:

[ಬದಲಾಯಿಸಿ]
  • 1]. ಗರ್ಭಾದಾನ (ಪತ್ನಿಯನ್ನು, ದೇಹ ಸಂಬಂಧದಿಂದ ಗರ್ಭವತಿಯನ್ನಾಗಿ ಮಾಡುವುದು)
  • 2]. ಪುಂಸವನ (ಗರ್ಭಧಾರಣೆಯ ಎರಡನೇ ಅಥವಾ ಮೂರನೇ ತಿಂಗಳಲ್ಲಿ ನಡೆಸುವ ಕ್ರಿಯೆ)
  • 3]. ಸೀಮಂತೋನ್ನಯನ : (ಗರ್ಭಧಾರಣೆಯ ಐದನೇ ಮತ್ತು ಎಂಟನೇ ತಿಂಗಳ ನಡುವೆ ನಡೆಸುವ ಕ್ರಿಯೆ)
  • 4]. ಜಾತಕರ್ಮ (ಮಗುವಿನ ಜನನದ ಸಮಯದಲ್ಲಿ ಕ್ರಿಯೆ)
  • 5]. ನಾಮಕರಣ (ಮಗುವಿನ ನಾಮಕರಣ)
  • 6]. ನಿಷ್ಕ್ರಮಣ(ಮಗುವನ್ನು ಹೊರಗೆ ತರುವುದು 4ನೇ ತಿಂಗಳಲ್ಲಿ )
  • 7]. ಅನ್ನಪ್ರಾಶನ (ಆರು ತಿಂಗಳಲ್ಲಿ ಏಕದಳ ಮೊದಲ ಆಹಾರ)
  • 8]. ಚೌಲ/ಚೂಡಾಕರ್ಮ (ಕೂದಲು ಮೊದಲ ಬಾರಿಗೆ ಕತ್ತರಿಸುವುದು, 1 ವರ್ಷ ಅಥವಾ 3 ನೇ ವರ್ಷದಲ್ಲಿ )
  • 9]. ಕರ್ಣವೇಧನ (ಮೂರನೇ ಅಥವಾ ಐದನೇ ವರ್ಷದ ಕಿವಿ ಚುಚ್ಚುವ ಕ್ರಿಯೆ)
  • 10]. ಉಪನಯನ (8 ನೇ ವರ್ಷದಲ್ಲಿ ಪವಿತ್ರ ದಾರ- ಯಜ್ಞೋಪವೀತ ಧಾರಣೆ)
  • 11]. ಸಮಾವರ್ತನ (ಅಧ್ಯಯನಗಳು ಪೂರ್ಣಗೊಂಡಾಗ ಗೃಹಸ್ಥಾಶ್ರಮಕ್ಕೆ ಸಿದ್ಧತೆ)
  • 12]. ವಿವಾಹ ಸಂಸ್ಕಾರ (ಮದುವೆ ಸಮಾರಂಭ )
  • 13]. ಗೃಹಸ್ಥಾಶ್ರಮ (ಸಂಸಾರದಲ್ಲಿ ಗೃಹಸ್ಥ ನಾಗಿ ಅದಕ್ಕೆ ಸಂಬಂಧಿಸಿದ.ಕ್ರಿಯೆ)
  • 14]. ವಾನಪ್ರಸ್ಥ (ಗೃಹಸ್ಥ ಜೀವನ ತ್ಯಜಿಸುವ ಕ್ರಿಯೆ)
  • 15]. ಸಂನ್ಯಾಸ ಆಶ್ರಮ(ಸನ್ಯಾಸಿ ಜೀವನ -ತ್ಯಾಗದ/ವಿರಕ್ತ ಜೀವನ)
  • 16]. ಅಂತ್ಯೇಷ್ಟಿ (ಮರಣ ನಂತರ - ಅಂತಿಮ ಸಂಸ್ಕಾರ)ಹಿಂದೂ ಧಾರ್ಮಿಕ ಅಂತ್ಯೇಷ್ಟಿ
  • ನೋಡಿ:ಅಂತ್ಯೇಷ್ಟಿ ಮತ್ತು ಅಥವಾ ಮರಣ ನಂತರ - ಅಂತಿಮ ಸಂಸ್ಕಾರ--ಉತ್ತರಕ್ರಿಯೆ

[][][] [][]

ವೀರಶೈವರಲ್ಲಿ ಸಂಸ್ಕಾರ ಅಥವಾ ದೀಕ್ಷಾ ವಿಧಿ

[ಬದಲಾಯಿಸಿ]

ವೀರಶೈವರಲ್ಲಿ ಸಂಸ್ಕಾರ ಅಥವಾ ದೀಕ್ಷಾ ವಿಧಿ

ಉತ್ತರಕ್ರಿಯೆ

[ಬದಲಾಯಿಸಿ]

ಅಂತ್ಯೇಷ್ಟಿ

ಅಂತಿಮ ಸಂಸ್ಕಾರ ಉತ್ತರಕರ್ಮ / ಅಪರಕ್ರಿಯೆ/ಉತ್ತರಕ್ರಿಯೆ: ಸತ್ತ ಮೇಲೆ ಮಾಡುವ ಕರ್ಮ. ಉತ್ತರಕ್ರಿಯೆ, ಅಂತ್ಯಕ್ರಿಯೆ ಅಂತ್ಯೇಷ್ಟಿ ಎಂದೂ ಕರೆಯುತ್ತಾರೆ. ಮನುಷ್ಯ ಜೀವಂತನಾಗಿರುವಾಗ ಮಾಡತಕ್ಕ ಜಾತಕರ್ಮಾದಿ ಸಂಸ್ಕಾರಗಳು ಪೂರ್ವಕ್ರಿಯೆಗಳಾದರೆ ಮರಣೋತ್ತರ ಕಾಲದಲ್ಲಿ ಮಾಡುವ ಶರೀರದಹನ ಅಸ್ಥಿಸಂಚಯನ, ಪಿಂಡದಾನ, ಉದಕದಾನ, ಏಕೋದ್ದಿಷ್ಟ ಶ್ರಾದ್ಧ. ಸಪಿಂಡೀಕರಣಶ್ರಾದ್ಧ ಮೊದಲಾದವು ಅಪರಕ್ರಿಯೆ ಅಥವಾ ಉತ್ತರಕರ್ಮಗಳು.
ಮುಂದುವರೆಸಿದೆ-ನೋಡಿ ->ಅಂತಿಮ ಸಂಸ್ಕಾರ

ಇಂಗ್ಲಿಷ್ ವಿಭಾಗ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. http://www.hinduism.co.za/sacramen.htmB y Sri V.A.K. Ayer//
  2. ಧರ್ಮಸಿಂಧು ಕನ್ನಡ ಭಾಗ1 1976 ರ ಮುದ್ರಣ ಮತ್ತು 197೦ರ ಮುದ್ರಣ ಶಂಭು ಶರ್ಮಾನಾಜಗಾರ 1976 ಮುದ್ರಣ/ ಪುಟ 123-129)
  3. ಕೃಷ್ಣಯಜುರ್ವೇದೀಯ ಸಮಾವರ್ತನ (ಕಾಶೀಯಾತ್ರೆ) ವಿವಾಹ -ಮಂತ್ರಾರ್ಥ -ಡಾ.ರೂಪಾ, ಎಂ.ಎ.ಪಿ.ಎಚ್.ಡಿಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಸಂಸ್ಕೃತ ವಿಭಾಗ ಮಹಾರಾಜ ಕಾಲೇಜು ಮೈಸೂರು.
  4. ಧರ್ಮಸಿಂಧು-(ಶಂಭುಸರ್ಮಾಅವರ ಕನ್ನಡ 1970ರ ಪ್ರತಿ -ಪುಟ 206)
  5. ವೀರಶೈವ ಪಂಥ
"https://kn.wikipedia.org/w/index.php?title=ಸಂಸ್ಕಾರ&oldid=1175551" ಇಂದ ಪಡೆಯಲ್ಪಟ್ಟಿದೆ