ವೈದೇಹಿ
ಗೋಚರ
ವೈದೇಹಿ | |
---|---|
ಜನನ | ಫೆಬ್ರವರಿ ೧೨, ೧೯೪೫ ಉಡುಪಿ ಜಿಲ್ಲೆಯ ಕುಂದಾಪುರ |
ವೃತ್ತಿ | ಲೇಖಕಿ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಸಣ್ಣಕಥೆ, ಕಾವ್ಯ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ |
ವಿಷಯ | ಕನ್ನಡ ಸಾಹಿತ್ಯ |
ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ 'ಜಾನಕಿ ಶ್ರೀನಿವಾಸಮೂರ್ತಿ'ಯವರು ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಸಣ್ಣಕಥೆ, ಕಾವ್ಯ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಮುಂತಾದವುಗಳಲ್ಲಿ ತೊಡಗಿಕೊಂಡಿದ್ದಾರೆ. 'ವಾಸಂತಿ' ಎಂಬುದು ಇವರ ಮೂಲ ಹೆಸರು. ಸಾಹಿತ್ಯಕ್ಕಾಗಿ ಹಲವು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಕ್ರೌಂಚ ಪಕ್ಷಿಗಳು ಎಂಬ ಕಥಾಸಂಕಲನಕ್ಕೆ ೨೦೦೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ.
ಜನನ-ಜೀವನ
[ಬದಲಾಯಿಸಿ]- ೧೨-೨-೧೯೪೫ ರಲ್ಲಿ ಜನಿಸಿದ ವೈದೇಹಿ, ಉಡುಪಿ ಜಿಲ್ಲೆಯ ಕುಂದಾಪುರದವರು[೧]. ಇವರ ತಂದೆ ಎ.ವಿ.ಎನ್ ಹೆಬ್ಬಾರ್, (ಐರೋಡಿ ವೆಂಕಟ ನರಸಿಂಹ ಹೆಬ್ಬಾರ್) ತಾಯಿ ಮಹಾಲಕ್ಶ್ಮಿ. ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಬಿ.ಕಾಂ ಪದವೀಧರೆ. 'ನೀರೆಯರ ಮನ' ಎಂಬ ಕತೆಯನ್ನು ಸುಧಾ ವಾರಪತ್ರಿಕೆಗೆ "ಜಾನಕಿ" ಎಂಬ ಕಾವ್ಯನಾಮದಲ್ಲಿ ಪ್ರಕಟಣೆಗೆ ಕಳುಹಿಸಿದರು. ಆನಂತರ ಅದು ನಿಜ ಘಟನೆಯಾದ್ದರಿಂದ ಪ್ರಕಟಿಸಬೇಡಿ ಎಂದು ಪತ್ರವನ್ನೂ ಬರೆದರು.
- ಆದರೆ ಸುಧಾದ ಆಗಿನ ಸಂಪಾದಕರು ವೈದೇಹಿ ಎಂಬ ಕಾವ್ಯನಾಮ ನೀಡಿ ಈ ಕಥೆಯನ್ನು ಪ್ರಕಟಿಸಿದರು. ಅಂದಿನಿಂದ ಇವರಿಗೆ ವೈದೇಹಿ ಎಂಬುದೇ ಕಾವ್ಯನಾಮವಾಯಿತು. ಹಲವಾರು ಕಥೆಗಳು ಕರ್ಮವೀರ, ಮಯೂರ, ಸುಧಾ, ಪ್ರಜಾವಾಣಿ, ಉದಯವಾಣಿ, ಕಸ್ತೂರಿ, ಸಾಕ್ಷಿ (ಸಾಗರ) ಸಂಕ್ರಮಣ, ವನಿತಾ, ಮಲ್ಲಿಗೆ, ಗೆಳತಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು.
- ೨೩ನೇ ವಯಸ್ಸಿನಲ್ಲಿ ಕೆ.ಎಲ್.ಶ್ರೀನಿವಾಸಮೂರ್ತಿಯವರನ್ನು ಮದುವೆಯಾದರು. ನಯನಾ ಕಶ್ಯಪ್ ಮತ್ತು ಪಲ್ಲವಿ ರಾವ್ ಎನ್ನುವ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮದುವೆಯನಂತರ ಅವರು ತಮ್ಮ ಹೆಸರನ್ನು 'ಜಾನಕಿ ಶ್ರೀನಿವಾಸಮೂರ್ತಿ' ಎಂದು ಬದಲಾಯಿಸಿಕೊಂಡರು. ಶಿವಮೊಗ್ಗದಲ್ಲಿ ನೆಲೆಸಿದರು. ಅನಂತರ ಅವರ ಕುಟುಂಬ ಉಡುಪಿಯಲ್ಲಿದ್ದು ಪ್ರಸ್ತುತ ಮಣಿಪಾಲದಲ್ಲಿ ನೆಲೆಸಿದ್ದಾರೆ.
- ವೈದೇಹಿಯವರ ಪುತ್ರಿ ನಯನಾ ಅವರು ವೈದೇಹಿಯವರ ಐದು ಕಾದಂಬರಿಗಳನ್ನೂ ಸೇರಿದಂತೆ ಇನ್ನೂ ಕೆಲವು ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಇವರ ಕಥೆಗಳ ಅತ್ಯಂತ ಪ್ರಮುಖ ಲಕ್ಷಣಗಳೆಂದರೆ ತಮ್ಮ ಮನೆಮಾತಾದ ಕುಂದಾಪುರ ಕನ್ನಡದ ಬಳಕೆ ಹಾಗೂ ಸ್ತ್ರೀ ಲೋಕದ ಸೂಕ್ಷ್ಮ ಅಂಶಗಳ ಅನಾವರಣ.
ಕೃತಿಗಳು
[ಬದಲಾಯಿಸಿ]ಕಥಾಸಂಕಲನ
[ಬದಲಾಯಿಸಿ]- ಮರ ಗಿಡ ಬಳ್ಳಿ (೧೯೭೯)
- ಅಂತರಂಗದ ಪುಟಗಳು (೧೯೮೪)
- ಗೋಲ (೧೯೮೬)
- ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ (೧೯೯೧)
- ಅಮ್ಮಚ್ಚಿ ಎಂಬ ನೆನಪು (೨೦೦೦)
- ಕ್ರೌಂಚ ಪಕ್ಷಿಗಳು (೨೦೦೫)
- ಕತೆಕತೆ ಕಾರಣ (೨೦೧೬)
ಕವನಗಳ ಸಂಗ್ರಹಗಳು
[ಬದಲಾಯಿಸಿ]- ಬಿಂದು ಬಿಂದಿಗೆ (೧೯೯೦)
- ಪಾರಿಜಾತ (೧೯೯೯)
- ಹೂವಕಟ್ಟುವ ಕಾಯಕ(೨೦೧೧)
- ದೀಪದೊಳಗಿನ ದೀಪ (೨೦೨೦)
ಕಾದಂಬರಿ
[ಬದಲಾಯಿಸಿ]- ಅಸ್ಪೃಶ್ಯರು (೧೯೯೨)
ಮಕ್ಕಳ ಸಾಹಿತ್ಯ
[ಬದಲಾಯಿಸಿ]- ಧಾಂ ಧೂಂ ಸುಂಟರಗಾಳಿ (೧೯೯೨)
- ಮೂಕನ ಮಕ್ಕಳು (೧೯೯೨)
- ಗೊಂಬೆ ಮ್ಯಾಕ್ ಬೆಥ್ (೧೯೯೨)
- ಢಣಾಡಂಗೂರ (೧೯೯೨)
- ನಾಯಿಮರಿ ನಾಟಕ (೧೯೯೨)
- ಸೂರ್ಯ ಬಂದ (೧೯೯೭)
- ಜುಂ ಜಾಂ ಆನೆ ಮತ್ತು ಪುಟ್ಟ (೧೯೯೭)
- ಕೋಟು ಗುಮ್ಮ (೧೯೯೭)
- ಹಕ್ಕಿ ಹಾಡು (೨೦೦೨)
- ಅರ್ಧಚಂದ್ರ ಮಿಠಾಯಿ (೨೦೦೨)
- ಸೋಮಾರಿ ಓಳ್ಯಾ (೨೦೦೪)
- ಅಳಿಲು ರಾಮಾಯಣ (೨೦೦೯)
- ಸತ್ರು ಅಂದ್ರೆ ಸಾಯ್ತಾರ? (೨೦೦೯)
- ಆನೆ ಬಂತೋ ಆನೆ (೨೦೧೫)
- ರಾಜಾ ಲಿಯರ್ (೨೦೧೫)
ಪ್ರಬಂಧಗಳು
[ಬದಲಾಯಿಸಿ]- ಮಲ್ಲಿನಾಥನ ಧ್ಯಾನ (೧೯೯೬)
- ಮೇಜು ಮತ್ತು ಬಡಗಿ (೨೦೦೭)
- ಜಾತ್ರೆ (೧೯೯೮)
ಅನುವಾದ ಸಾಹಿತ್ಯ
[ಬದಲಾಯಿಸಿ]- ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ.[೨]
- ಬೆಳ್ಳಿಯ ಸಂಕೋಲೆಗಳು (ಮೈತ್ರೇಯಿ ಮುಖ್ಯೋಪಾಧ್ಯಾಯಅವರ 'Silver Shackles'ನಿಂದ ಅನುವಾದಿಸಿದ್ದು)
- ಸೂರ್ಯಕಿನ್ನರಿಯರು (ಸ್ವಪ್ನ ದತ್ತ ಅವರ 'Sun Fairies'ನಿಂದ ಅನುವಾದಿಸಿದ್ದು)
- ಸಂಗೀತ ಸಂವಾದ (ಭಾಸ್ಕರ್ ಚಂದಾವರ್ಕರ್ ಅವರ ಟಿಪ್ಪಣಿಗಳಿಂದ)
ಆತ್ಮಕಥೆ ನಿರೂಪಣೆ
[ಬದಲಾಯಿಸಿ]- ಕೋಟ ಲಕ್ಷ್ಮೀನಾರಾಯಣ ಕಾರಂತ (ಕೋ ಲ ಕಾರಂತ)ರ ಆತ್ಮಕಥೆ "ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು"
- ಸೇಡಿಯಾಪು ಕೃಷ್ಣಭಟ್ಟರ "ಸೇಡಿಯಾಪು ನೆನಪುಗಳು"
- ಬಿ.ವಿ.ಕಾರಂತರ "ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ".
ಅಭಿನಂದನಾ ಗ್ರಂಥ
[ಬದಲಾಯಿಸಿ]- ಇರುವಂತಿಗೆ
ಇತರೆ ವಿಷಯಗಳು
[ಬದಲಾಯಿಸಿ]- ಇವರ 'ಅಸ್ಪೃಶ್ಯರು' ಕಾದಂಬರಿ, ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ.
- 'ವೈದೇಹಿಯವರ ಸಣ್ಣ ಕಥೆಗಳು' ಬೆಂಗಳೂರು ವಿಶ್ವ ವಿದ್ಯಾಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ.
- ಹಲವಾರು ಸಣ್ಣ ಕಥೆಗಳು ಹಿಂದಿ, ಮಲೆಯಾಳಂ, ತಮಿಳು, ತೆಲುಗು, ಗುಜರಾತಿ ಭಾಷೆಗಳಿಗೆ ಅನುವಾದಿವಾಗಿವೆ.
- ಇವರು ಬರೆದ ಕಥೆಯನ್ನು ಆಧರಿಸಿದ, ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಗುಲಾಬಿ ಟಾಕೀಸು ಚಲನಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಪ್ರಾದೇಶಿಕ ಚಲನಚಿತ್ರ ೨೦೦೯ ರಾಷ್ಟ್ರೀಯ ಪ್ರಶಸ್ತಿ, ಹಾಗೂ ಚಿತ್ರದ ಪ್ರಮುಖ ಪಾತ್ರಧಾರಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿಗಳು
[ಬದಲಾಯಿಸಿ]- 'ಕರ್ನಾಟಕ ಲೇಖಕಿಯರ ಸಂಘ'ದಿಂದ ಗೀತಾ ದೇಸಾಯಿ ದತ್ತಿ ನಿಧಿ ಪುರಸ್ಕಾರ -'ಅಂತರಂಗದ ಪುಟಗಳು' ಮತ್ತು 'ಬಿಂದು ಬಿಂದಿಗೆ' ಕೃತಿಗಳಿಗೆ.
- 'ವರ್ಧಮಾನ ಪ್ರಶಸ್ತಿ ಪೀಠ', ಮೂಡಬಿದಿರೆ ಯಿಂದ ವರ್ಧಮಾನ ಉದಯೋನ್ಮುಖ ಪ್ರಶಸ್ತಿ- 'ಗೊಲ' ಕೃತಿಗೆ.
- 'ಕಥಾ ಆರ್ಗನೈಝೆಶನ್' ನವದೆಹಲಿ ಯಿಂದ ಕಥಾ ಪುರಸ್ಕಾರ -'ಹಗಲು ಗೀಚಿದ ನೆಂಟ' ಕೃತಿಗೆ.
- 'ಕರ್ನಾಟಕ ಲೇಖಕಿಯರ ಸಂಘ'ದಿಂದ ಅನುಪಮಾ ಪುರಸ್ಕಾರ -'ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗೆ' ಕೃತಿಗೆ.
- 'ಕರ್ನಾಟಕ ಸಂಘ' ಶಿವಮೊಗ್ಗ ದಿಂದ ಎಂ.ಕೆ.ಇಂದಿರಾ ಪುರಸ್ಕಾರ -'ಅಸ್ಪೃಶ್ಯರು' ಕೃತಿಗೆ.
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ -'ಐದು ಮಕ್ಕಳ ನಾಟಕಗಳು' ಕೃತಿಗೆhttps://www.loc.gov/acq/ovop/delhi/salrp/vaidehi.html
- 'ಅತ್ತಿಮಬ್ಬೆ ಪ್ರತಿಷ್ಠಾನ' ದಿಂದ ಅತ್ತಿಮಬ್ಬೆ ಪುರಸ್ಕಾರ.
- ಸಾಹಿತ್ಯ ಅಕಾಡೆಮಿ ಪುರಸ್ಕಾರ -'ಮಲ್ಲಿನಾಥನ ಧ್ಯಾನ' ಕೃತಿಗೆ.
- ಕರ್ನಾಟಕ ರಾಜ್ಯ ಸರ್ಕಾರದಿಂದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ
- 'ಕ್ರೌಂಚ ಪಕ್ಷಿಗಳು' ಎಂಬ ಸಣ್ಣ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
- ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ [೩]
- ನಿರಂಜನ ಪ್ರಶಸ್ತಿ [೪]
- ಸುನಂದಮ್ಮ ಸಾಹಿತ್ಯ ಪ್ರಶಸ್ತಿ-೨೦೧೯
- ನೃಪತುಂಗ ಸಾಹಿತ್ಯ ಪ್ರಶಸ್ತಿ, ೨೦೨೨ [೫][೬]
ಉಲ್ಲೇಖಗಳು
[ಬದಲಾಯಿಸಿ]- ↑ https://www.loc.gov/acq/ovop/delhi/salrp/vaidehi.html
- ↑ 'ಭಾರತೀಯ ಮಹಿಳೆಯರ ಸ್ವಾತಂತ್ರ್ಯ ಹೋರಾಟ', ಮೂಲ(ಇಂಗ್ಲೀಷ್):ಡಾ.ಕಮಲಾದೇವಿ ಚಟ್ಟೋಪಾಧ್ಯಾಯ. ಅನುವಾದ:ವೈದೇಹಿ
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2015-04-29.
- ↑ http://www.bangalorewaves.com/news/bangalorewaves-news.php?detailnewsid=5341
- ↑ https://www.kannadaprabha.com/karnataka/2023/feb/24/nrupathunga-award-for-kannada-senior-writer-vaidehi-488126.html
- ↑ https://www.prajavani.net/karnataka-news/nrupatunga-award-for-vaidehi-1018049.html
ಹೊರಕೊಂಡಿಗಳು
[ಬದಲಾಯಿಸಿ]- ವೈದೇಹಿ Archived 2016-03-06 ವೇಬ್ಯಾಕ್ ಮೆಷಿನ್ ನಲ್ಲಿ. - 'ಕಣಜ' ಅಂತರಜಾಲ ಜ್ಞಾನಕೋಶ