ಕುಂದಗನ್ನಡ
ಗೋಚರ
(ಕುಂದಾಪುರ ಕನ್ನಡ ಇಂದ ಪುನರ್ನಿರ್ದೇಶಿತ)
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕುಂದಗನ್ನಡ ಅಥವಾ ಕುಂದಾಪ್ರ ಕನ್ನಡ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಮಾತನಾಡುವ ಕನ್ನಡದ ಒಂದು ಶೈಲಿಯ ಹೆಸರು. ಕರ್ನಾಟಕದಲ್ಲಿ ಪ್ರಾದೇಶಿಕ ಲಕ್ಷಣಕ್ಕೆ ಅನುಗುಣವಾಗಿ ಕನ್ನಡವನ್ನು ಹಲವು ರೀತಿಯಲ್ಲಿ, ಸುಲಭವಾಗುವಂತೆ ಉಪಯೋಗಿಸುತ್ತಾರೆ. ಹಾಗೆಯೇ ಕುಂದಾಪುರ, ಬ್ರಹ್ಮಾವರ, ಬೈಂದೂರು ,ಹೆಬ್ರಿ ತಾಲೂಕಿನಲ್ಲಿ ಬಳಸಲಾಗುವ ಕನ್ನಡದ ಒಂದು ಉಪಭಾಷೆ ಅಥವಾ ವಿಶಿಷ್ಟ ಶೈಲಿಯ ಕನ್ನಡವೇ ಕುಂದಾಪುರ ಕನ್ನಡ. ಕೋಟದ ಬ್ರಾಹ್ಮಣರು ಕೂಡ ಈ ಶೈಲಿಯನ್ನು ಉಪಯೋಗಿಸುವುದರಿಂದ ಇದನ್ನು ಕೋಟಕನ್ನಡ ಎಂದೂ ಸಹ ಕರೆಯುತ್ತಾರೆ.
ಕುಂದಾಪುರ ಕನ್ನಡದ ಕೆಲವೊಂದು ಪದಗಳು :
[ಬದಲಾಯಿಸಿ]ಕುಂದಾಪುರ ಕನ್ನಡ | ಗ್ರಾಂಥಿಕ ಕನ್ನಡ |
---|---|
ಹೋಪಾ | ಹೋಗುವ/ಹೋಗೋಣ |
ಬಪ್ಪಾ | ಬರುವ |
ಎಂತಾ | ಏನು |
ಅಬ್ಬಿ | ಅಮ್ಮ |
ಅಪ್ಪಯ್ಯ | ಅಪ್ಪ |
ಮಳಿ | ಮಳೆ |
ಗಡ | ಹುಡುಗ |
ಹೆಣ | ಹುಡುಗಿ |
ಬತ್ತೆ | ಬರುತ್ತೇನೆ |
ಲೈಕ್ | ಇಷ್ಟ |
ಅಗಿ | ಪೈರು |
ಅತ್ತಿ | ಅತ್ತೆ |
ಆರ | ಇವಳೆ |
ಅಂಸ್ರ | ಅವಸರ |
ಇಪ್ಪುದ್ | ಇರುವುದು |
ಉಜ್ರ | ಚಿಲುಮೆ |
ಉಡುಕೆ | ಉಡಲಿಕ್ಕೆ |
ಇಳ್ಸ್ | ಇಳಿಸು |
ಕದುಕೆ | ಕದಿಯಲಿಕ್ಕೆ |
ಕ್ವಾಣಿ | ಕೊಣೆ |
ಕಿಮೀದ್ | ಕಿವಿಯದ್ದು |
ಕರ್ಕಿ ಹುಲ್ಲು | ಗರಿಕೆಹುಲ್ಲು |
ಓದುಕ್ಕಿತ್ತಾ | ಓದಲ್ಲಿಕ್ಕೆ ಇದೆಯಾ |
ಓಟ್ಲಾ | ಹೋಟೆಲ್ |
ಕಳ್ರ್ | ಕಳ್ಳರು |
ಕಡ್ಗಿ | ಹಲಸಿನ ಕಾಯಿ |
ಚಣಿಲು | ಅಳಿಲು |
ಚಿನ್ನಿ | ಚಿಹ್ನೆ |
ಗೆಡ್ಡಿ | ಗೆಡ್ಡೆ |
ಕೊಜಿ | ಜೇಡಿಮಣ್ಣು |
ಚಪ್ರು | ಚಪ್ಪರ |
ತತ್ರಾ | ತರುತ್ತಾರ |
ಚುಣ್ಕಿ | ತುರಿಸುವ ಗಿಡ |
ತಬಾ | ತೆಗೆದುಕೊಡು ಬಾ |
ಚರ್ಬಿ | ಸೊಕ್ಕ್ |
ಬರ್ಕ ಬರ್ಕಾ | ಬರೆದುಕೊಂಡು ಬರಬೇಕಾ |
ಹೆರ್ಮಣೆ | ತುರಿಮಣೆ |
ಗೋಯ್ಕಡ್ | ಒಣಮೆಣಸು |
ಒಣ್ಕಟಿ ಮೀನ್ | ಒಣ ಮೀನು |
ಬಣ್ಚ | ಬಂಡಾಸ್ |
ಜಾರಿ | ಏಡಿ |
ಉಂಡ್ಯಾ | ಊಟ ಮಾಡಿದಿಯಾ |
ಮಲ್ಕಂತಿಲ್ಯಾ | ಮಲಗುದಿಲ್ಲವಾ |
ಮರ್ಕುದ್ | ಅಳುವುದು |
ತಕೋ | ತೆಗೆದಿಕೊ |
ಮದಿ | ಮದುವೆ |
ಮೀಯುದಿಲ್ಲ | ಸ್ನಾನ ಮಾಡುದಿಲ್ಲ |
ಜಬ್(ಕಾಣಿ)ಮೀನ್ | ಬಿಳಿ ಮೀನು |
ಹ್ಯಾಂಗಿದ್ರಿ | ಹೇಗೆ ಇದ್ದಿರಾ |
ಮರ್ಲ್ | ಹುಚ್ಚು |