ಗುಜರಾತಿ ಭಾಷೆ
ಗುಜರಾತಿ ગુજરાતી Gujarātī | ||||
---|---|---|---|---|
ಉಚ್ಛಾರಣೆ: | IPA: /ɡudʒ(ə)ˈɾat̪i/ | |||
ಬಳಕೆಯಲ್ಲಿರುವ ಪ್ರದೇಶಗಳು: |
ಭಾರತ | |||
ಪ್ರದೇಶ: | ಗುಜರಾತ್ | |||
ಒಟ್ಟು ಮಾತನಾಡುವವರು: |
೬೬ಮಿಲಿಯ | |||
ಭಾಷಾ ಕುಟುಂಬ: | ಇಂಡೋ-ಇರಾನಿಯನ್ ಇಂಡೋ-ಆರ್ಯನ್ Western[೧] Gujarati languages ಗುಜರಾತಿ | |||
ಬರವಣಿಗೆ: | ಗುಜರಾತಿ ಅಕ್ಷರಮಾಲೆ (ಬ್ರಾಹ್ಮೀ) Gujarati Braille ಅರೇಬಿಕ್ ಲಿಪಿ ದೇವನಾಗರಿi (ಐತಿಹಾಸಿಕ) | |||
ಅಧಿಕೃತ ಸ್ಥಾನಮಾನ | ||||
ಅಧಿಕೃತ ಭಾಷೆ: | ಗುಜರಾತ್ (ಭಾರತ)[೨] ದಮನ್ ಮತ್ತು ದಿಯು (ಭಾರತ) ದಾದ್ರ ಮತ್ತು ನಗರ ಹವೇಲಿ (ಭಾರತ) | |||
ನಿಯಂತ್ರಿಸುವ ಪ್ರಾಧಿಕಾರ: |
no official regulation | |||
ಭಾಷೆಯ ಸಂಕೇತಗಳು | ||||
ISO 639-1: | gu
| |||
ISO 639-2: | guj
| |||
ISO/FDIS 639-3: | guj
| |||
Gujaratispeakers.png
|
ಗುಜರಾತಿ ಭಾಷೆ ಒಂದು ಇಂಡೋ -ಆರ್ಯನ್ ಶಾಖೆಗೆ ಸೇರಿದ ಭಾಷೆ. ಇದು ಗುಜರಾತ್ ರಾಜ್ಯದ ಅಧಿಕೃತ ಭಾಷೆಯಷ್ಟೇ ಅಲ್ಲದೆ ಕೇಂದ್ರಾದೀನ ಪ್ರದೇಶಗಳಾದ ದಾದ್ರ ಮತ್ತು ನಗರಹವೇಲಿ ಮತ್ತು ದಿಯು ಮತ್ತು ದಾಮನ್ ಗಳ ಅಧಿಕೃತ ಭಾಷೆಯೂ ಹೌದು. ಭಾರತ ರಾಜ್ಯಾಂಗದಲ್ಲಿ ನಮೂದಾಗಿರುವ 15 ಭಾರತೀಯ ಭಾಷೆಗಳಲ್ಲಿ ಒಂದು; ಗುಜರಾತಿನ ಪ್ರಾಂತಭಾಷೆ. ಗುಜರಾತ್ ರಾಜ್ಯದಲ್ಲೂ ಗುಜರಾತಿ ಸಮುದಾಯಗಳು ನೆಲೆಸಿರುವ ಭಾರತದ ವಿವಿಧ ಭಾಗಗಳಲ್ಲೂ ಭಾರತದ ಹೊರಗೆ ಏಷ್ಯ, ಅಫ್ರಿಕಗಳಲ್ಲೂ ಈ ಭಾಷೆಯನ್ನಾಡುವ ಜನ ನೆಲೆಸಿದ್ದಾರೆ. ಗುಜರಾತಿ ಮಾತನಾಡುವವರ ಸಂಖ್ಯೆ ೫೪.೬ ಲಕ್ಷ [೩]. ಗುಜರಾತಿ ಇಂಡೋ-ಆರ್ಯನ್ ಭಾಷೆಗಳಲ್ಲೊಂದು. ಇದರ ಪೂರ್ವ ಮತ್ತು ಈಶಾನ್ಯ ಗಡಿಯಲ್ಲಿ ರಾಜಸ್ಥಾನಿ ಇದೆ. ಸಹಜವಾಗಿ ಇವೆರಡು ಭಾಷೆಗಳೂ ಕ್ರಮೇಣ ಬೆರೆಯುತ್ತ ಬಂದಿವೆಯಾಗಿ ಎಲ್ಲೆಕಟ್ಟಿನ ಭಾಗಗಳಲ್ಲಿ ಉಪಭಾಷೆಗಳು ಯಾವ ಮೂಲದಿಂದ ಬಂದಿವೆಯೆಂಬುದನ್ನು ನಿರ್ಧರಿಸುವುದು ಕಷ್ಟ.
ಸಾಹಿತ್ಯ[ಬದಲಾಯಿಸಿ]

For Jinnah, Gujarati was important only as mother tongue. He was neither born nor raised in Gujarat,[೪] and Gujarat did not end up a part of Pakistan, the state he espoused. He went on to advocate for solely Urdu in his politics.
For Gandhi, Gujarati served as a medium of literary expression. He helped to inspire a renewal in its literature,[೫] and in 1936 he introduced the current spelling convention at the Gujarati Literary Society's 12th meeting.[೬]

The text is a Prakrit didactic work of how best to live a proper Jain life, aimed probably at the laity. The Svetambara pontiff, Sri Dharmadasagaî, lived in the mid-6th century. The Old Gujarati prose commentary was written in 1487. The colophon gives the place, date, and the name of the religious leader, Sri Namdalalaji, on whose order the work was transcribed.
ವಾಂಙ್ಮಯ ಮತ್ತು ವೈಚಾರಿಕ ಗದ್ಯ ಸಾಹಿತ್ಯದ ದೃಷ್ಟಿಯಿಂದ ಆಧುನಿಕ ಗುಜರಾತಿ ಸಾಹಿತ್ಯ ಸಮೃದ್ಧವಾಗಿವೆ. ಇದರ ಸಾಹಿತ್ಯಿಕ ಪರಂಪರೆಯ ಇತಿಹಾಸ ಸುಮಾರು ಒಂದು ಸಾವಿರ ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಉಪದೇಶಾತ್ಮಕ ಗದ್ಯ ಹಾಗೂ ಭಾವಗೀತಾತ್ಮಕ ಮತ್ತು ಪ್ರಶಂಸಾತ್ಮಕ (ಅಥವಾ ಮಾಗಧ) ಪದ್ಯ ರೂಪದ ರಚನೆಗಳು ಈ ಹಂತದಲ್ಲಿ ಕಾಣದೊರೆಯುತ್ತವೆ.
ಲಿಪಿ[ಬದಲಾಯಿಸಿ]
ಗುಜರಾತಿ ಲಿಪಿ ದೇವನಾಗರಿ ಲಿಪಿಯ ಸುತ್ತು ಬರಹದ ರೂಪದ್ದಾಗಿದ್ದು, ಕಳೆದ ಆರೇಳು ಶತಮಾನಗಳಿಂದಲೂ ಪಶ್ಚಿಮ ಭಾರತದಲ್ಲಿ (ವಿಶೇಷವಾಗಿ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ) ಬಳಕೆಯಲ್ಲಿತ್ತು. ಇದನ್ನು ಮಹಾಜನಿ ಎಂದು ಕರೆಯುತ್ತಾರೆ. ಇದರ ವರ್ಣಮಾಲೆ ಸಂಸ್ಕೃತಜನ್ಯವಾಗಿದ್ದು, ಅಕ್ಷರಗಳ ಆಕಾರ ದೇವನಾಗರಿಯನ್ನು ತುಂಬ ನಿಕಟವಾಗಿ ಹೋಲುತ್ತದೆ.
ಭಾಷಾವರ್ಗ[ಬದಲಾಯಿಸಿ]
ಗುಜರಾತಿನ ಇಂಡೋ-ಯೂರೋಪಿಯನ್ (ಭಾರೋಷೀಯ) ಭಾಷಾ ಪರಿವಾರದ ಇಂಡೋ-ಇರಾನಿಯನ್ (ಭಾರತೀಯ ಇರಾನಿ) ಉಪವರ್ಗದ ಇಂಡೋ-ಆರ್ಯನ್ (ಭಾರತೀಯ-ಆರ್ಯ) ಶಾಖೆಗೆ ಸೇರಿದ. ಇಂಡೋ-ಆರ್ಯನ್ ಶಾಖೆಯ ಎರಡು ಮುಖ್ಯಕವಲುಗಳು (ಉತ್ತರದ ಕವಲು-ಪಹಾಡಿ. ಪಂಜಾಬಿ, ಲಹಂದ, ಸಿಂಧಿ, ಕಚ್ಛಿ; ಪೂರ್ವದ ಕವಲು-ಬಂಗಾಳಿ ಅಸ್ಸಾಮಿ ಮತ್ತು ಒರಿಯ) ಬೇರ್ಪಟ್ಟ ತರುವಾಯ ಪಶ್ಚಿಮ, ದಕ್ಷಿಣ ಮತ್ತು ನಡುವಣ ಶಾಖೆಗಳು ಮತ್ತೆ ಕವಲೊಡೆದವು. ದಕ್ಷಿಣದ ಭಾಷೆಗಳ (ಮರಾಠಿ-ಕೊಂಕಣಿ) ಬೇರ್ಪಡೆಯನ್ನು ಹಿಂಬಾಲಿಸಿ, ಪಶ್ಚಿಮದ ಭಾಷೆಗಳೂ (ಗುಜರಾತಿ, ರಾಜಸ್ಥಾನಿ, ಭೀಲಿ) ನಡುವಣ ವಲಯದ (ಪಶ್ಚಿಮ ಹಿಂದಿ) ಭಾಷೆಗಳಿಂದ ಬೇರ್ಪಟ್ಟವು. ನಡುವಣ ವಲಯದಲ್ಲಿ ನಾಮವಾಚೀ ಏಕವಚನ ಪುಲ್ಲಿಂಗದ ಆ ಕಾರಾಂತ್ಯದ ರೂಪದಲ್ಲೂ ಪಶ್ಚಿಮ ವಲಯದಲ್ಲಿ ಓ ಕಾರಾಂತ್ಯದ ರೂಪದಲ್ಲೂ ಈ ಬೇರ್ಪಡೆ ಎದ್ದು ಕಾಣುತ್ತದೆ. ಹೀಗಾಗಿ ಪಶ್ಚಿಮ ಮಲಯದಲ್ಲಿ ಘೋಡ (ಕುದುರೆ) ರೂಪವೂ ಗುಜರಾತಿಯಲ್ಲಿ ಘೋಡೊ ರೂಪವೂ ಕಾಣದೊರೆಯುತ್ತವೆ. ಪಶ್ಚಿಮ ಮತ್ತು ದಕ್ಷಿಣ ವರ್ಗದ ಭಾಷೆಗಳೂ ನಪುಂಸಕ ಲಿಂಗವನ್ನು ಉಳಿಸಿಕೊಂಡಿವೆ. ಪಶ್ಚಿಮ ವಲಯದ ಭಾಷೆಗಳಲ್ಲಿ ಮೊದಲಿಗೆ ಭೀಲಿಯೂ ಅನಂತರದಲ್ಲಿ ಗುಜರಾತಿ ಹಾಗೂ ರಾಜಸ್ಥಾನದ ಉಪಭಾಷೆಗಳೂ ಬೇರ್ಪಡುತ್ತವೆ.
ಧ್ವನಿ ವ್ಯವಸ್ಥೆ[ಬದಲಾಯಿಸಿ]
ಗುಜರಾತಿ ಧ್ವನಿಮಾವ್ಯವಸ್ಥೆಯ ವಿಶಿಷ್ಟ ಲಕ್ಷಣಗಳೆಂದರೆ ಎಂಟು ಸ್ತರಗಳ - ಇ, ಎ ( ಉ ಓ ( ಅಆ-ವ್ಯವಸ್ಥೆ ಮತ್ತು ನ ಹಾಗೂ ಣ ಗಳ ಮತ್ತು ಲ ಮತ್ತು ಳ ಗಳ ಸ್ಪಷ್ಟ ಧ್ವನಿಘಟಕಗಳು. ಆರು ಸ್ವರಗಳೂ - ಇ (, ಉ (, ಆ, ಆ - ಅನುನಾಸಿಕಗಳಾಗಿಯೂ ಬರಬಹುದು. ಎಲ್ಲ ಸ್ವರಗಳೂ ಘೋಷ ಅಥವಾ ಆರ್ಧಘೋಷ ಸ್ವರಗಳಾಗಿರಬಹುದು. ಹೀಗಾಗಿ, ಬಾರ್ (ಹನ್ನೆರಡು) ಬಾರ್ (ಹೊರಗೆ) (ಅಕ್ಷರದ ಕೆಳಗಿನ ಕಿರುಗೀಟು ಅರ್ಧಘೋಷ ಸ್ವರವನ್ನು ಸೂಚಿಸುತ್ತವೆ) ಮತ್ತು ಭಾರ್ (ಹೊರೆ) ನಂಥ ಶಬ್ದಗಳಲ್ಲಿ ಬಾರ್‍ನಲ್ಲಿ ಬರುವ ಅರ್ಧಘೋಷಸ್ವರ ಬಾರ್ ಮತ್ತು ಭಾರ್‍ನಲ್ಲಿ ಬರುವ ಸಾಮಾನ್ಯ ದೀರ್ಘ ಸ್ವರವಾದ ಆ ಕ್ಕಿಂತ ಭಿನ್ನವಾಗಿದೆ. ಸ್ವರಗಳ ಮಾತ್ರೆಗೆ ಗುಜರಾತಿಯಲ್ಲಿ ಅಂಥ ಮಹತ್ತ್ವವಿಲ್ಲ. ಲಿಪಿಯಲ್ಲೇನೋ ಇ, ಉ, ಕಾರಗಳ ಹ್ವಸ್ವ ಮತ್ತು ದೀಘ ಸ್ವರಗಳನ್ನೇ ಸೂಚಿಸುವ ಪ್ರತ್ಯೇಕ ವರ್ಣಗಳಿವೆ; ( ಮತ್ತು ( ಕಾರಗಳಿಗೆ (ದೇವನಾಗರಿ ಸಂಪ್ರದಾಯದಂತೆ) ಪ್ರತ್ಯೇಕ ವರ್ಣಗಳಿಲ್ಲ.
ವ್ಯಾಕರಣ[ಬದಲಾಯಿಸಿ]
ನಾಮರೂಪಗಳಲ್ಲಿ ಗುಜರಾತಿ ಮೂರು ಲಿಂಗಗಳನ್ನೂ ಎರಡು ವಚನಗಳನ್ನೂ ಹೊಂದಿದೆ. ವಿಶೇಷ್ಯ, ವಿಶೇಷಣ ಮತ್ತು ಕೃದಂತ ರೂಪಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕ ಲಿಂಗಗಳಲ್ಲಿಯೂ ಏಕ ಮತ್ತು ಬಹು ವಚನಗಳಲ್ಲಿಯೂ ಸಾಧಿಸಬಹುದು. ವಿಭಕ್ತಿ ರೂಪಕ್ಕೆ ಸಂಬಂಧಿಸಿದಂತೆ ಹೆಚ್ಚೆಂದರೆ ಮೂರು ವಿಭಕ್ತಿ ರೂಪಗಳನ್ನು ಸ್ಪಷ್ಟವಾಗಿ ಗುರುತಿಸಬಹುದು: ಪ್ರತ್ಯಕ್ಷ ಏಕವಚನ, ಪ್ರತ್ಯಕ್ಷ ಬಹುವಚನ ಮತ್ತು ಪರೋಕ್ಷ ರೂಪ. ಈ ಬಗೆಗಳಲ್ಲಿ ಪುಲ್ಲಿಂಗ ನಾಮಪದಗಳು ಎರಡು ರೂಪಗಳನ್ನು ನಪುಂಸಕ ಲಿಂಗನಾಮಪದಗಳು ಮೂರು ರೂಪಗಳನ್ನು ಹೊಂದಿರುತ್ತವೆ. ಸಬಲ ನಾಮಪದಗಳಿಗೆ ಹಾಗೂ ಸ್ತ್ರೀಲಿಂಗ ನಾಮಪದಗಳಿಗೆ ವಿಭಕ್ತಿ ಪ್ರತ್ಯಯಗಳಾವುವೂ ಇರುವುದಿಲ್ಲ. ದಿಕ್ರೋ ನಂಥ ( ಪುಲ್ಲಿಂಗದ ನಾಮಪದ ಹಾಗೂ ಮಾಥೂನಂಥ ನಪುಂಸಕ ನಾಮಪದಗಳಿಗೆ ಈ ರೀತಿ ಪ್ರತ್ಯಯಗಳನ್ನು ಹಚ್ಚಬಹುದು.
ಹಾಥೀ (ಆನೆ) ಮತ್ತು ಮಚ್ಛರ್ (ಸೊಳ್ಳೆ) ಯಂಥ ಸಬಲ ನಾಮಪದಗಳಿಗೆ ವಿಭಕ್ತಿರೂಪಗಳನ್ನು ಹಚ್ಚುವುದಿಲ್ಲ. ಅಂತೆಯೇ, ದಿಕ್ರಿ (ಮಗಳು), ತಮಾಕು (ಹೊಗೆಸೊಪ್ಪು), ಬೋ (ರಿಬ್ಬನ್), ಸತ್ತಾ (ಅಧಿಕಾರ) ದಂಥ ಸ್ತ್ರೀಲಿಂಗ ನಾಮಪದಗಳಿಗೆ ವಿಭಕ್ತಿ ಪ್ರತ್ಯಯಗಳನ್ನಾಗಲೀ ವಚನ ಪ್ರತ್ಯಯಗಳನ್ನಾಗಲೀ ಹಚ್ಚುವುದಿಲ್ಲ. ಪ್ರಾಚೀನ ವಿಭಕ್ತಿ ಪ್ರತ್ಯಯಗಳಿಗೆ ಬದಲಾಗಿ ಅನೇಕ ಅಬೆಯ ಪರಪ್ರತ್ಯಯಗಳನ್ನು ಬಳಸಲಾಗುತ್ತದೆ. ಓ ಎಂಬ ಹೊಸ ಬಹುವಚನ ಪ್ರತ್ಯಯವನ್ನು (18 ನೆಯ ಶತಮಾನದಿಂದ ಈಚೆಗೆ) ಬಳಸಲಾಗುತ್ತಿದೆ ಐಚ್ಛಿಕವಾಗಿ ವಿಭಕ್ತಿ ಪ್ರತ್ಯಯ ಸಹಿತವಾದ ಬಹುವಚನ ರೂಪದಲ್ಲಿ ಆ ಪ್ರತ್ಯಯವನ್ನೂ ಬಳಸಲಾಗುತ್ತಿದೆ.
ಉದಾ: ದಿಕ್ರ್ + ಆ ( ದಿಕ್ರ್ + ಆ + ಓ (ಮಕ್ಕಳು), ( ( ( ಮಾಥ್ + ಆ ಮಾಥ್ + ಆ + ಓ (ತಲೆಗಳು)
ಗುಜರಾತಿನ ಪುರುಷವಾಚಕ ಸರ್ವನಾಮಗಳಲ್ಲಿ ಲಿಂಗವಿವಕ್ಷೆಯಿಲ್ಲ. ಉತ್ತಮ ಪುರುಷ ಬಹುವಚನದಲ್ಲಿ ಸಮಾವೇಶಿ ಮತ್ತು ಅಸಮಾವೇಶಿ ಸರ್ವನಾಮಗಳಿಗೆ ಪ್ರತ್ಯೇಕ ರೂಪಗಳಿವೆ: ಅಮೆ (ನಾವು-ಅಸಮಾವೇಶಿ), ಆಪ್‍ಣೆ (ನಾವು-ಸಮಾವೇಶಿ).
ಕ್ರಿಯಾರೂಪದಲ್ಲಿ ಗುಜರಾತಿ ಪುರುಷ ಮತ್ತು ವಚನ ರೂಪ ನಿದರ್ಶನವನ್ನು ಹೊಂದಿದೆ. ಪರಪ್ರತ್ಯಯಗಳನ್ನು ಹಚ್ಚುವುದರ ಮೂಲಕ ಕಾಲ ಮತ್ತು ಅವಸ್ಥಾ ವಿಶೇಷಗಳನ್ನು ಅಥವಾ ಕ್ರಿಯಾರೂಪಗಳನ್ನು (ಮೂಡ್ಸ್) ಸೂಚಿಸಲಾಗುತ್ತದೆ. ಹೋ (ಇರು) ಎಂಬ ಸಹಾಯಕ ಕ್ರಿಯಾಪದಯುಕ್ತವಾದ ಬಹುಪದ ರಚನೆಗಳ ಮೂಲಕ ಪೂರ್ಣಕಾಲಗಳನ್ನು ಸೂಚಿಸಲಾಗುತ್ತದೆ. ತಾತ್ಕಾಲಿಕ ವರ್ತಮಾನಕಾಲ. ಭೂತಕಾಲ ಮತ್ತು ಪೂರ್ವಕಾಲಿಕ ರೂಪಗಳು ಕೃದಂತಗಳಾಗಿದ್ದು, ನಾಮಪದಗಳಂತೆಯೇ ಅವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಹಚ್ಚಲಾಗುತ್ತದೆ. ಕಾರಕ ರೂಪಗಳಂತೆಯೇ ಧಾತುರೂಪಗಳನ್ನೂ ನಡೆಸಬಹುದು. ಏಕವಚನದಲ್ಲಿ ಎರಡು, ಬಹುವಚನದಲ್ಲಿ ಎರಡು-ಹೀಗೆ ಕ್ರಿಯಾರೂಪನಿದರ್ಶನದಲ್ಲಿ ಅಥವಾ ಕ್ರಿಯಾರೂಪ ಕಾಲಿಕೆಯಲ್ಲಿ ಹೆಚ್ಚೆಂದರೆ ನಾಲ್ಕು ರೂಪಗಳನ್ನು ಸ್ಪಷ್ಟವಾಗಿ ಗುರುತಿಸಬಹುದು.
ಉಪ ಭಾಷೆಗಳು[ಬದಲಾಯಿಸಿ]
ದಕ್ಷಿಣ, ಮಧ್ಯ ಹಾಗೂ ಉತ್ತರ ಗುಜರಾತ್ ಮತ್ತು ಸೌರಾಷ್ಟ್ರ ಪರ್ಯಾಯದ್ವೀಪ-ಇವು ಗುಜರಾತಿಯ ನಾಲ್ಕು ಪ್ರಮುಖ ಉಪಭಾಷಾ ವಲಯಗಳು. ಸೌರಾಷ್ಟ್ರದ ಉಪಭಾಷೆಗಳು ಪ್ರಾಚೀನವಾದುವಾಗಿದ್ದು ಕೆಲವು ಪ್ರಾಚೀನತರ ರೂಪಗಳನ್ನು ಉಳಿಸಿಕೊಂಡಿವೆ. ಅವುಗಳಲ್ಲಿ ಕೆಲವು ಆರು ಸ್ವರ (( ಮತ್ತು ( ಗಳನ್ನು ಬಿಟ್ಟು) ವ್ಯವಸ್ಥೆಯನ್ನು ಹೊಂದಿವೆ.
( ಉತ್ತರದ ಉಪಭಾಷೆಗಳು ನೆರೆಯ ಪ್ರದೇಶದ ಭೀಲಿ ಭಾಷೆಯ ಕೆಲವು ಲಕ್ಷಣಗಳನ್ನು ಒಳಗೊಂಡಿವೆ. ಅನುನಾಸಿಕ ( ಅಥವಾ ಇ ಇ ಅನುನಾಸಿಕ ವ್ಯಂಜನಗಳ ಸನಿಹದಲ್ಲಿದ್ದಾಗ ವಿವೃತ ( ಅಥವಾ ( ಆಗಿಯೂ ಬದಲಾಗುವುದು ಹಾಗೂ ಕ ಕಾರ ಗ ಕಾರಗಳು ಇ, ಏ ಅಥವಾ ( ಯ ಕಾರದ ಎದುರಿನಲ್ಲಿ ಚಕಾರ ಜ ಕಾರಗಳಾಗಿ ತಾಲವ್ಯೀಕರಣಕ್ಕೊಳಗಾಗುವುದು-ಇವು ಉತ್ತರ ಹಾಗೂ ಮಧ್ಯ ಗುಜರಾತಿ ಉಪಭಾಷೆಗಳ ವಿಶಿಷ್ಟ ಲಕ್ಷಣ. ಮುಂದಿನ ವರ್ಣದಲ್ಲಿಯ ಕಾರವಿದ್ದರೆ ವರ್ಣವ್ಯತ್ಯಯವಾಗುವುದು ದಕ್ಷಿಣದ ಉಪಭಾಷೆಗಳ ವಿಶಿಷ್ಟ ಲಕ್ಷಣ. ಹೀಗಾಗಿ ಶಿಷ್ಟ ಆಪ್ಯೋ ರೂಪ ದಕ್ಷಿಣದ ಭಾಷಾಶೈಲಿಯಗಳಲ್ಲಿ ಗಮನಾರ್ಹವಾದುವೆಂದರೆ ಸೌರಾಷ್ಟ್ರ ಹಾಗೂ ಹಾಗೂ ದಕ್ಷಿಣ ಗುಜರಾತಿನ ಕರಾವಳಿಯ ಬೆಸ್ತರ ಮಾತು. ಸೌರಾಷ್ಟ್ರದ ವಂದಿಮಾಗಧೀಯ ಹಾಗೂ ಹುಲ್ಲುಗಾವಲಿನ ಜನಸಮುದಾಯಗಳ ಮಾತು. ಸೌರಾಷ್ಟ್ರದ ಇಸ್ಮಾಯಿಲೀ ಖೋಜಾಗಳ ಮಾತು ಮತ್ತು ದಕ್ಷಿಣ ಗುಜರಾತಿನ ಪಾರ್ಸಿಗಳ ಮಾತು. ಒಟ್ಟಿನಲ್ಲಿ ಮಧ್ಯ ಹಾಗೂ ಉತ್ತರ ಗುಜರಾತಿನ ಉಪಭಾಷೆಗಳು ಆವಿಷ್ಕಾರಕ ಉಪಭಾಷೆಗಳು. ಸುಶಿಕ್ಷಿತ, ಮೇಲು ಜಾತಿಯ ಜನಸಮುದಾಯದ ಮಾತೇ ಆಧುನಿಕ ಶಿಷ್ಟ ಗುಜರಾತಿಗೆ ಆಧಾರವಾಗಿದೆ.
ಉಲ್ಲೇಖಗಳು[ಬದಲಾಯಿಸಿ]
- ↑ Ernst Kausen, 2006. Die Klassifikation der indogermanischen Sprachen (Microsoft Word, 133 KB)
- ↑ Dwyer 1995, p. 5
- ↑ Sandra Küng (6 June 2013). "Translation from Gujarati to English and from English to Gujarati – Translation Services". wwt-services.co.uk. Archived from the original on 17 ಅಕ್ಟೋಬರ್ 2014. Retrieved 29 March 2015.
- ↑ Timeline: Personalities, Story of Pakistan. "Muhammad Ali Jinnah (1876–1948)". Retrieved 12 May 2007.
- ↑ Dalby 1998, p. 237
- ↑ Mistry 1997, p. 654
