ವಿಷಯಕ್ಕೆ ಹೋಗು

ನೃಪತುಂಗ ಸಾಹಿತ್ಯ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೃಪತುಂಗ ಸಾಹಿತ್ಯ ಪ್ರಶಸ್ತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಸ್ಥಾಪಿಸಿರುವ ಪ್ರಶಸ್ತಿಯಾಗಿದ್ದು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಮೃದ್ದವಾದ ಹಾಗೂ ಮೌಲಿಕವಾದ ಕೊಡುಗೆ ನೀಡಿದ ಬರಹಗಾರರೊಬ್ಬರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಪ್ರಶಸ್ತಿಯನ್ನು ಯಾವುದೇ ಕೃತಿಗೆ ನೀಡದೆ, ವ್ಯಕ್ತಿಯ ಸಮಗ್ರ ಕೊಡುಗೆಯನ್ನು ಪರಿಗಣಿಸಲಾಗುತ್ತದೆ.[೧]

ಪ್ರಶಸ್ತಿ

[ಬದಲಾಯಿಸಿ]
  • ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಯನ್ನು ಕನ್ನಡದ ಶ್ರೇಷ್ಠ ವಿದ್ವಾಂಸರು, ಕನ್ನಡಪರ ಹೋರಾಟಗಾರರಿಗೆ ನೀಡಲಾಗುತ್ತಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಸಾಪದಲ್ಲಿರಿಸಿರುವ 1.5 ಕೋಟಿ ರೂ. ದತ್ತಿಯ ಮೂಲಕ ಕನ್ನಡದ ಗಣ್ಯ ಸಾಧಕರಿಗೆ ನೃಪತುಂಗ ಪ್ರಶಸ್ತಿಯನ್ನು ಪ್ರದಾನ ಮಾಡುವುದು.[೧]
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೊಡುವ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಭಾಜನರು:
  • ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ (2015) ವಿದ್ವಾಂಸ ಡಾ.ಟಿ. ವಿ. ವೆಂಕಟಾಚಲ ಶಾಸ್ತ್ರಿ ಅವರು ಆಯ್ಕೆಯಾಗಿದ್ದಾರೆ. [೨]
  • 2016 ರ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಭಾಜನರಾಗಿದ್ದಾರೆ.

[೩]

ಇದುವರೆಗೆ ಪ್ರಶಸ್ತಿ ಪಡೆದವರು

[ಬದಲಾಯಿಸಿ]
  • ಜಿ. ಎಸ್. ಆಮೂರ -2020
  • ಜಿ ವೆಂಕಟೇಶ್ - 2021

ಉಲ್ಲೇಖ & ಬಾಹ್ಯಕೊಂಡಿಗಳು

[ಬದಲಾಯಿಸಿ]
  1. ಹೆಚ್ಚಿನ ವಿವರ, ಕಸಪ ಮತ್ತು ಬಿ.ಎಂ.ಟಿ.ಸಿ ಜಂಟಿಯಾಗಿ ಸ್ಥಾಪಿಸಿರುವ ನೃಪತುಂಗ ಪ್ರಶಸ್ತಿಯ ಬಗ್ಗೆ ಹೆಚ್ಚಿನ ವಿವರ
  2. ದಿ.14/04/2016 :w:prajavani.net/article/ಡಾಟಿವಿ-ವೆಂಕಟಾಚಲ-ಶಾಸ್ತ್ರಿಗೆ-ನೃಪತುಂಗ-ಪ್ರಶಸ್ತಿ
  3. ಚಿದಾನಂದ ಮೂರ್ತಿಗೆ ‘ನೃಪತುಂಗ ಪ್ರಶಸ್ತಿ’;ಪ್ರಜಾವಾಣಿ ವಾರ್ತೆ;25 Jan, 2017