ವಿಷಯಕ್ಕೆ ಹೋಗು

ಕರ್ನಾಟಕ ರಾಜ್ಯ ಪ್ರಶಸ್ತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಸ್ತಿ ಪ್ರಶಸ್ತಿ ೨೦೧೭[ಬದಲಾಯಿಸಿ]

 • ೨೬ ಜೂನ, ೨೦೧೭;
 • ಅ.ರಾ.ಮಿತ್ರ, ಜಿ.ಎಚ್‌. ನಾಯಕ, ಗಿರಡ್ಡಿ ಗೋವಿಂದರಾಜ, ನೀಳಾದೇವಿ ಅವರಿಗೆ ‘ಮಾಸ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಮಾಸ್ತಿ ಪ್ರಶಸ್ತಿ ಸಮಿತಿಯ ಸಂಶೋಧಕ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ, ಮಾಸ್ತಿ ಟ್ರಸ್ಟ್‌ ಕಾರ್ಯದರ್ಶಿ ಸಿದ್ರಾಮ ಸಿಂಧೆ, ಎನ್‌.ಸಂತೋಷ್‌ ಹೆಗ್ಡೆ, ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಅಧ್ಯಕ್ಷ ಎ.ಎಚ್‌.ರಾಮರಾವ್‌, ಅಧ್ಯಕ್ಷ ಮಾವಿನಕೆರೆ ರಂಗನಾಥನ್‌. ಪುರಸ್ಕೃತರಿಗೆ ತಲಾ ರೂ.೨೫,೦೦೦ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
 • ಮಾಸ್ತಿ ಕಥಾ ಪುರಸ್ಕಾರ ಪಡೆದ ಕರ್ಕಿ ಕೃಷ್ಣಮೂರ್ತಿ (ಕಥಾ ಸಂಕಲನ– ಗಾಳಿಗೆ ಮೆತ್ತಿದ ಬಣ್ಣ) ಅವರಿಗೆ ಮತ್ತು ಮಾಸ್ತಿ ಕಾದಂಬರಿ ಪುರಸ್ಕಾರ ಪಡೆದ ಡಾ.ಬಾಳಾಸಾಹೇಬ ಲೋಕಾಪುರ (ಕಾದಂಬರಿ– ಕೃಷ್ಣೆ ಹರಿದಳು) ಅವರಿಗೆ ತಲಾ ರೂ.೨೫,೦೦೦ ಹಾಗೂ ಈ ಕೃತಿಗಳನ್ನು ಪ್ರಕಟಿಸಿದ ಛಂದ ಪುಸ್ತಕ ಪ್ರಕಾಶನ ಹಾಗೂ ಕಣ್ವ ಪ್ರಕಾಶನಗಳಿಗೆ ತಲಾ ₹೧೦,೦೦೦ ನಗದು, ಸ್ಮರಣಿಕೆ ನೀಡಿ ಗೌರವಿಸಲಾಯಿತು.[೧]

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ೧೪ ಸಾಧಕರಿಗೆ ಪ್ರಶಸ್ತಿ ಪ್ರದಾನ[ಬದಲಾಯಿಸಿ]

 • ದಿ.೩-೫-೨೦೧೭;
 • ಸರ್ಕಾರದಿಂದ ಪಾರದರ್ಶಕವಾಗಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಆಯ್ಕೆಯಲ್ಲಿ ಆಯ್ಕೆ ಸಮಿತಿಯ ತಿರ್ಮಾನವೇ ಅಂತಿಮ.
 • ಪ್ರಶಸ್ತಿ ಸ್ವೀಕರಿಸಿದ ಗಣ್ಯರು :
 • ಬಸವ ರಾಷ್ಟ್ರೀಯ ಪುರಸ್ಕಾರ- ಸಿಂಧೂತಾಯಿ ಸಪ್ಕಾಳ್.
 • ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ- ವಿದ್ವಾನ್ ಟಿ.ಹೆಚ್.ವಿನಾಯಕರಾಮ್.
 • ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ- ಶಾಂತಿ ನಾಯಕ.
 • ಪ್ರೊ,ಕೆ.ಜೆ.ಕುಂದಣಗಾರ ಗಡಿನಾಡಿನ ಸಾಹಿತ್ಯ ಪ್ರಶಸ್ತಿ- ಹಸನ್ ನಯೀಂ ಸುರಕೋಡ.
 • ಸಂಗೊಳ್ಳಿರಾಯಣ್ಣ ಪ್ರಶಸ್ತಿ- ಡಾ.ಚೆನ್ನಣ್ಣ ವಾಲೀಕಾರ.
 • ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ- ಚಿಂದೋಡಿ ಶ್ರೀಕಂಠೇಶ್.
 • ಬಿ.ವಿ.ಕಾರಂತ ಪ್ರಶಸ್ತಿ- ಶ್ರೀನಿವಾಸ ಜಿ.ಕಪ್ಪಣ್ಣ.
 • ನಿಜಗುಣ ಪುರಂದರ ಪ್ರಶಸ್ತಿ- ಗಣಪತಿ ಭಟ್ ಹಾಸಣಗಿ.
 • ಕುಮಾರವ್ಯಾಸ ಪ್ರಶಸ್ತಿ- ಎನ್.ಆರ್.ಜ್ಞಾನಮೂರ್ತಿ.
 • ಸಂತ ಶಿಶುನಾಳ ಷರೀಪ ಪ್ರಶಸ್ತಿ- ವೈ.ಕೆ.ಮುದ್ದುಕೃಷ್ಣ.
 • ಶಾಂತಲಾ ನಾಟ್ಯ ಪ್ರಶಸ್ತಿ- ಉಷಾ ದಾತಾರ್.
 • ಜಕಣಾಚಾರಿ ಪ್ರಶಸ್ತಿ- ವೈ.ಯಂಕಪ್ಪ.
 • ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ- ಮಹಾವೀರ ರಾಯಪ್ಪ ಬಾಳಿಕಾಯಿ.
 • ಜಾನಪದ ಶ್ರೀ ಪ್ರಶಸ್ತಿ- ಲಲಿತಾ ರಾಚಪ್ಪ ಪಾತ್ರೋಟ.
 • ಪ್ರಶಸ್ತಿ ಮೊತ್ತ ಹೆಚ್ಚಳ

ರಾಜ್ಯ ಸರ್ಕಾರ ನೀಡುವ ರಾಷ್ಟ್ರೀಯ ಪ್ರಶಸ್ತಿಗಳಿಗೆ ತಲಾ ರೂ. ೧೦ ಲಕ್ಷ ಮತ್ತು ರಾಜ್ಯ ಪ್ರಶಸ್ತಿಗಳಿಗೆ ತಲಾ ರೂ. ೫ ಲಕ್ಷ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ‘ಬಸವ ರಾಷ್ಟ್ರೀಯ ಪುರಸ್ಕಾರ’ ಮತ್ತು ‘ಮಹಾವೀರ ಪ್ರಶಸ್ತಿ’ಗೆ ತಲಾ ರೂ. ೧೦ ಲಕ್ಷ ಇದೆ. ಅದೇ ಮೊತ್ತವನ್ನು ‘ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ’ಗೂ ಹೆಚ್ಚಿಸಲಾಗಿದೆ ಎಂದರು. ರಾಜ್ಯ ಪ್ರಶಸ್ತಿಗಳಲ್ಲಿ ‘ಕನಕ ಶ್ರೀ ಪ್ರಶಸ್ತಿ’ಗೆ ರೂ. ೫ ಲಕ್ಷ ಇತ್ತು. ಇದೇ ಮೊತ್ತವನ್ನು ಉಳಿದ ೧೫ ರಾಜ್ಯ ಪ್ರಶಸ್ತಿಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.[೨][೩]

ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗಳು[ಬದಲಾಯಿಸಿ]

 • ೧೧ ಎಪ್ರಿಲ್, ‌೨೦೧೭;
 • ಸಮಾಜ ಸೇವಾ ಕ್ಷೇತ್ರದಲ್ಲಿ ೪೦, ಕ್ರೀಡಾ ಕ್ಷೇತ್ರದಲ್ಲಿ ೨೮, ಮಾಧ್ಯಮ ಕ್ಷೇತ್ರದಲ್ಲಿ ೨೦, ರಂಗಭೂಮಿ ಕ್ಷೇತ್ರದಲ್ಲಿ ೧೪ ಜನರಿಗೆ ಪ್ರಶಸ್ತಿ ನೀಡಲಾಗಿದೆ.‘ಸದ್ಯ ೧೫೮ ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮಂಗಳವಾರ ಸಂಜೆಯ ಹೊತ್ತಿಗೆ ಈ ಪಟ್ಟಿ ಇನ್ನೂ ಬೆಳೆಯಬಹುದು’ ಎಂದು ಪಾಲಿಕೆ ಅಧಿಕಾರಿಯೊಬ್ಬರು ಹೇಳಿದರು.
 • ಕಳೆದ ವರ್ಷ ಸಾಧಕರಿಗೆ ಪ್ರಶಸ್ತಿ ಜತೆಗೆ ₹ ೨೫ ಸಾವಿರ ನಗದು ನೀಡಿ ಸತ್ಕರಿಸಲಾಗಿತ್ತು.[೪]

ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿಗಳು[ಬದಲಾಯಿಸಿ]

 • ೨೦೧೫ನೇ ಸಾಲಿನ ‘ಪಂಪ ಪ್ರಶಸ್ತಿ’ಗೆ ಪ್ರೊ.ಬಿ.ಎ. ಸನದಿ ಅವರನ್ನು ಆಯ್ಕೆ ಮಾಡಲಾಗಿದೆ.
 • ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯು ನೇಮಿಚಂದ್ರ ಅವರಿಗೆ ಲಭಿಸಿದೆ.
 • ಮಹಾರಾಷ್ಟ್ರದ ಜತ್ತ ಪ್ರದೇಶದಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ಕೆಲಸ ಮಾಡುತ್ತಿರುವ ಎಂ.ಎಸ್. ಸಿಂಧೂರ ಅವರನ್ನು ‘ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

[೫]

ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ[ಬದಲಾಯಿಸಿ]

 • ಕನ್ನಡ ಸಾಹಿತ್ಯ ಪರಿಷತ್ತು ‘ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ’ಗೆ ಸಾಹಿತಿ ಡಾ.ಪ್ರಭುಶಂಕರ ಅವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ರೂ. ೨೫ ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

೨೦೧೬-೧೭ ರ ಪ್ರಶಸ್ತಿಗಳು[ಬದಲಾಯಿಸಿ]

ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿಗಳು ೨೦೧೬ - ೨೦೧೭[ಬದಲಾಯಿಸಿ]

 • ೨೧ ಮಾರ್ಚ, ೨೦೧೭;
 • ಕರ್ನಾಟಕ ಲಲಿತಕಲಾ ಅಕಾಡೆಮಿ ಈ ವರ್ಷದಿಂದ ಪ್ರಾರಂಭಿಸಿರುವ ‘ಕಲಾ ಸಂಕ್ರಾಂತಿ ಪುರಸ್ಕಾರ’ಕ್ಕೆ ರಾಷ್ಟ್ರಮಟ್ಟದ ೧೪ ಕಲಾವಿದರನ್ನು ಆಯ್ಕೆ ಮಾಡಿದ್ದು, ₹೧ ಲಕ್ಷ ನಗದು, ಚಿನ್ನದ ಸ್ಮರಣಿಕೆಯನ್ನು ಪುರಸ್ಕಾರವು ಒಳಗೊಂಡಿದೆ. ಆಯ್ಕೆ ಸಮಿತಿ ಮೊದಲ ಸುತ್ತಿನಲ್ಲಿ ೧೧೭ ಕಲಾಕೃತಿಗಳನ್ನು ಆಯ್ಕೆ ಮಾಡಿತ್ತು. ಅಂತಿಮ ಸುತ್ತಿನಲ್ಲಿ ೧೪ ಕಲಾಕೃತಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಅಕಾಡೆಮಿಯ ಸುವರ್ಣ ಮಹೋತ್ಸವದ ಅಂಗವಾಗಿ ಇದೇ ೨೩ರಂದು ರಾಷ್ಟ್ರೀಯ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಅಂದು ಸಂಜೆ ೬ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಎಂ.ಎಸ್‌. ಮೂರ್ತಿ ತಿಳಿಸಿದರು.
 • ಆಯ್ಕೆ ಸಮಿತಿ ಮೊದಲ ಸುತ್ತಿನಲ್ಲಿ ೧೧೭ ಕಲಾಕೃತಿಗಳನ್ನು ಆಯ್ಕೆ ಮಾಡಿತ್ತು. ಅಂತಿಮ ಸುತ್ತಿನಲ್ಲಿ ೧೪ ಕಲಾಕೃತಿಗಳನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಬಳ್ಳಾರಿಯ ಶಿವಾನಂದ ಎಚ್‌. ಬಂಟನೂರು ಅವರ ‘ಸಮಕಾಲೀನ ಕನ್ನಡ ದೃಶ್ಯ ಕಲಾ ಸಾಹಿತ್ಯ’ ಕೃತಿಯನ್ನು ಕಲಾ ಸಾಹಿತ್ಯ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಮೆರಿಟ್‌ ಸರ್ಟಿಫಿಕೇಟ್‌ಗಾಗಿ ೧೫ ಕಲಾಕೃತಿಗಳನ್ನು ಆಯ್ಕೆ ಮಾಡಿದೆ ಎಂದು ವಿವರಿಸಿದರು.

ಕಲಾ ಸಂಕ್ರಾಂತಿ ಬಹುಮಾನ ಪಡೆದವರು[ಬದಲಾಯಿಸಿ]

 1. ಕೋಲ್ಕತ್ತದ ಭೋಲನಾಥ್ ರುದ್ರ,
 2. ನವದೆಹಲಿಯ ಆಶಿಷ್ ಕುಶ್‌ವಾಹ(ವಾಟರ್‌ ಕಲರ್‌ ಆನ್ ಪೇಪರ್),
 3. ಗೋವಾದ ವಿತೇಶ್‌ ನಾರಾಯಣ ನಾಯ್ಕ,
 4. ನವದೆಹಲಿಯ ಶಹಾನ್‌ಶಾ ಮಿಠ್ಠಲ್,
 5. ಮುರ್ಷಿದಾಬಾದ್‌ನ ಸುಜಯ್‌ ಮಲಾಕರ್‌,
 6. ಛತ್ತೀಸಗಡದ ವಿಪಿನ್‌ ಸಿಂಗ್ ರಜಪೂತ್ (ಮಿಶ್ರ ಮಾಧ್ಯಮ),
 7. ಕರ್ನಾಟಕದ ವಿ. ಅಂಜಲಿ (ಪೋಸ್ಟಲ್‌ ಕಲರ್‌ ಆನ್ ಪೇಪರ್‌),
 8. ಗುಜರಾತ್‌ನ ಸಂಕೇತ್‌ಕುಮಾರ್‌ ಜಯಂತಿ ಲಾಲ್‌ ವಿರಾಂಗಮಿ(ಅಕ್ರಾಲಿನ್ ಆನ್‌ ಕ್ಯಾನ್ವಸ್‌),
 9. ನವದೆಹಲಿಯ ಜೆ.ಡಿ. ರಾವ್‌ ತಮ್ಮಿನೇನಿ,
 10. ಮಹಾರಾಷ್ಟ್ರದ ಸುಚೇತ ಮಾಧವ ರಾವ್‌ ಗಾಡ್ಗೇ,
 11. ಉತ್ತರ ಪ್ರದೇಶದ ಜಗ್‌ಜೀತ್‌ಕುಮಾರ್‌ ರೈ(ವುಡ್‌ ಕಟ್‌),
 12. ಛತ್ತೀಸಗಡದ ವಿಜಯಾ(ಟೆರ್ರಕೋಟಾ, ಸ್ಟೀಲ್, ಜ್ಯೂಟ್ ಮತ್ತು ವುಡ್‌),
 13. ಪಶ್ಚಿಮ ಬಂಗಾಳದ ಕಾಂಚನ್‌ ಕರ್ಜಿ(ವುಡ್‌ ಅಂಡ್‌ ವಾಟರ್‌ ಕಲರ್),
 14. ಪಶ್ಚಿಮ ಬಂಗಾಳದ ಅಕಿಲ್‌ ಚಂದ್ರ ದಾಸ್‌(ವುಡ್‌ ಅಂಡ್‌ ಬ್ರಾಂಝ್‌).
 • ಪ್ರಶಸ್ತಿ ತಲಾ ರೂ.೧ ಲಕ್ಷ ನಗದು, ಚಿನ್ನದ ಸ್ಮರಣಿಕೆ ಹೊಂದಿದೆ.[೬]

ಹುಬ್ಬಳ್ಳಿ ಬಾಲಕಿಗೆ ಶೌರ್ಯ ಪ್ರಶಸ್ತಿ[ಬದಲಾಯಿಸಿ]

 • ೧೫ ಡಿಸೆಂಬರ್, ‌೨೦೧೬
 • ವಿದ್ಯುತ್‌ ಅವಘಡದಿಂದ, ತನ್ನ ನಾಲ್ಕು ವರ್ಷದ ಸಹೋದರನನ್ನು ರಕ್ಷಿಸಿದ್ದ ಇಲ್ಲಿನ ಬಾಲಕಿ ಸಿಯಾ ವಾಮನಸಾ ಖೋಡೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ. ‘ವಿದ್ಯುತ್‌ ತಂತಿ ತಾಗಿದ್ದ ಮನೆಯ ಗ್ರಿಲ್‌ ಅನ್ನು ನಾಲ್ಕು ವರ್ಷದ ಬಾಲಕ ಯಲ್ಲಪ್ಪ ಹಿಡಿದುಕೊಂಡಿದ್ದರಿಂದ ಅಪಾಯಕ್ಕೆ ಸಿಲುಕಿದ್ದ. ಸಿಯಾ ಧೈರ್ಯ ಮಾಡಿ ಆತನನ್ನು ರಕ್ಷಿಸಿದ್ದಳು. ಹೀಗಾಗಿ ಈ ಪ್ರಶಸ್ತಿ ಸಂದಿದೆ’

‘ನನ್ನ ತಮ್ಮ ಅಳುತ್ತಿದ್ದಾಗ ಏನು ಮಾಡಬೇಕು ಎನ್ನುವುದೇ ಗೊತ್ತಾಗಲಿಲ್ಲ. ನಾನು ಕೂಡ ಗೊತ್ತಿಲ್ಲದೆ ಗ್ರಿಲ್‌ ಮುಟ್ಟಿದಾಗ ವಿದ್ಯುತ್‌ ತಗುಲಿತು. ಆದರೂ ತಕ್ಷಣ ಆತನನ್ನು ಜೋರಾಗಿ ಎಳೆದೆ. ಆಗ ಗ್ರಿಲ್‌ನಿಂದ ಆತ ಬೇರ್ಪಟ್ಟ’ ಎಂದು ಸಿಯಾ ತನ್ನ ಅನುಭವವನ್ನು ಈ ಹಂಚಿಕೊಂಡಳು. ಈ ಘಟನೆ ೨೦೧೪ರ ಏಪ್ರಿಲ್‌ ೧೫ರಂದು ನಡೆದಿತ್ತು. ಘಟನೆ ನಡೆದಾಗ ಸಿಯಾಗೆ ೧೦ ವರ್ಷ. ಇಲ್ಲಿನ ದಾಜಿಬಾನ್‌ ಪೇಟೆಯ ಹರಪನಹಳ್ಳಿ ಓಣಿಯ ವಾಮನಸಾ ಯಲ್ಲಪ್ಪ ಮತ್ತು ವಿಜಯಶ್ರೀ ದಂಪತಿ ಪುತ್ರಿ.

 • ‘ಈ ಹಿಂದೆ ರಾಜ್ಯ ಪ್ರಶಸ್ತಿ ಬಂದಿತ್ತು. ಈಗ ರಾಷ್ಟ್ರ ಪ್ರಶಸ್ತಿಯೂ ಬಂದಿದೆ. ಈ ಪ್ರಶಸ್ತಿಯನ್ನು ಎಲ್ಲ ಮಕ್ಕಳಿಗೆ ಅರ್ಪಿಸುತ್ತೇನೆ’ ಎಂದು ಸಿಯಾ ಸುದ್ದಿಗಾರರಿಗೆ ತಿಳಿಸಿದಳು.ಜನವರಿ ೨೬ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.[೭]

೨೦೧೬ ರ ಕಾರಂತರ ಪ್ರಶಸ್ತಿ[ಬದಲಾಯಿಸಿ]

ಮೂಡುಬಿದಿರೆ: ಹಿರಿಯ ಸಾಹಿತಿ ಡಾ.ಶಿವರಾಮ ಕಾರಂತರ ಹೆಸರಿನಲ್ಲಿ ಇಲ್ಲಿ ಸ್ಥಾಪನೆಯಾದ ಪ್ರತಿಷ್ಠಾನದಿಂದ ಪ್ರತಿ ವರ್ಷ ನೀಡುವ ‘ಶಿವರಾಮ ಕಾರಂತ ಪುರಸ್ಕಾರ’ಕ್ಕೆ ಈ ಬಾರಿ ಸಾಹಿತಿ ಡಾ.ನಾ.ಮೊಗಸಾಲೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ರೂ.೧೦ ಸಾವಿರ ನಗದು ಒಳಗೊಂಡಿದೆ. ಡಿಸೆಂಬರ್‌ ೧೦ರಂದು ಮೂಡುಬಿದಿರೆ ಎಂಸಿಎಸ್‌ ಬ್ಯಾಂಕ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಅಮರನಾಥ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ್‌ ಮಾವಿನಕುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೨೦೧೬ರ ವಿವಿಧ ಪ್ರಶಸ್ತಿಗಳು[ಬದಲಾಯಿಸಿ]

 • ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುರಸ್ಕರತರಿಗೆ ಪ್ರಶಸ್ತಿ ನೀಡಿದರು.
 • ತಬಲಾ ವಾದಕ ಪುಣೆಯ ಸುರೇಶ್‌ ತಲ್ವಾಲ್ಕರ್‌ ಅವರಿಗೆ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು.
 • ಇತರೆ ಪ್ರಶಸ್ತಿ ಪುರಸ್ಕೃತರು:
 • ಬೆಳಕವಾಡಿ ರಾಮಸ್ವಾಮಿ ಅಯ್ಯಂಗಾರ್‌– ನಿಜಗುಣ ಪುರಂದರ ಪ್ರಶಸ್ತಿ,
 • ಎನ್‌. ಪುಷ್ಪಮಾಲಾ– ಜಕಣಾಚಾರಿ ಪ್ರಶಸ್ತಿ,
 • ಎಂ.ಶಕುಂತಲಾ– ಶಾಂತಲಾ ನಾಟ್ಯ ಪ್ರಶಸ್ತಿ,
 • ನೇಮಿಚಂದ್ರ– ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ,
 • ರತ್ನಮಾಲಾ ಪ್ರಕಾಶ್‌– ಸಂತ ಶಿಶುನಾಳ ಷರೀಫ ಪ್ರಶಸ್ತಿ,
 • ಡಾ.ನ. ರತ್ನ– ಬಿ.ವಿ. ಕಾರಂತ ಪ್ರಶಸ್ತಿ
 • ಆರ್‌. ಪರಮಶಿವನ್‌– ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ,
 • ಪೀಟರ್‌ ಎ. ಲೂಯಿಸ್‌– ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ,
 • ಕಮಲಮ್ಮ ವಿಠ್ಠಲರಾವ್‌– ಕುಮಾರವ್ಯಾಸ ಪ್ರಶಸ್ತಿ,
 • ಎಂ.ಎಸ್‌. ಸಿಂಧೂರ– ಪ್ರೊ.ಕೆ.ಜಿ. ಕುಂದಣಗಾರ ಪ್ರಶಸ್ತಿ,
 • ಜಂಬಣ್ಣ ಅಮರಚಿಂತ– ಸಂಗೊಳ್ಳಿ ರಾಯಣ್ಣ ಪ್ರಶಸ್ತಿ,
 • ಸತ್ತೂರ ಇಮಾಂಸಾಬ್‌– ಜಾನಪದ ಶ್ರೀ ಪ್ರಶಸ್ತಿ,
 • [೮]

ಚಿತ್ರದುರ್ಗ ಮುರುಘಾಮಠದ ಪ್ರಶಸ್ತಿ[ಬದಲಾಯಿಸಿ]

 • ಚಿತ್ರದುರ್ಗ ಮುರುಘಾಮಠದ ಶಾಖಾಮಠವಾದ ಇಲ್ಲಿಯ ಹೊಸಮಠ ನೀಡುವ ಡಾ. ಶಿವಮೂರ್ತಿ ಮುರುಘಾ ಶರಣ ಪ್ರಶಸ್ತಿಗೆ (‘ಡಾ. ಶಿಮು­ಶ ಪ್ರಶಸ್ತಿ’) ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ.೫೦ ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಡಿಸೆಂಬರ್‌ 3 ರಂದು ಹಾವೇರಿಯಲ್ಲಿ ನಡೆಯುವ ‘ಶರಣ ಸಂಸ್ಕೃತಿ ಉತ್ಸವ’ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು[೯]

ಅರೆಭಾಷೆ ಪ್ರಶಸ್ತಿ[ಬದಲಾಯಿಸಿ]

 • ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡ ಮಾಡುವ 2015ನೇ ಸಾಲಿನ ಗೌರವ ಪ್ರಶಸ್ತಿಗೆ ಪಂಜದ ಸಾಹಿತಿ ಪಿ.ಜಿ.ಮುಡೂರು, ರಂಗ ಕಲಾವಿದೆ ಗೀತಾ ಮೋಂಟಡ್ಕ ಹಾಗೂ ಕೊಡಗಿನ ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ ಅವರು ಆಯ್ಕೆಯಾಗಿದ್ದಾರೆ.
 • ಪ್ರಶಸ್ತಿಯು ತಲಾ ₹ ೫೦ ಸಾವಿರ ನಗದು ಒಳಗೊಂಡಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದೇ 26ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಪ್ರಕಟಣೆ ಮಾಹಿತಿ ನೀಡಿದೆ.

ಕರ್ನಾಟಕ ಲಲಿತಕಲಾ ಅಕಾಡೆಮಿಯ 2016ರ ಗೌರವ ಪ್ರಶಸ್ತಿ[ಬದಲಾಯಿಸಿ]

 • ಕರ್ನಾಟಕ ಲಲಿತಕಲಾ ಅಕಾಡೆಮಿಯ ೨೦೧೬ರ ಗೌರವ ಪ್ರಶಸ್ತಿಗೆ ಹಿರಿಯ ಕಲಾವಿದರಾದ ಬೆಂಗಳೂರಿನ ಮಾರ್ಥಾ ಝಾಕಿಮೋವಿಜ್‌, ಬೆಳಗಾವಿಯ ಬಾಬುರಾವ್‌ ವಿ.ನಡೋಣಿ, ಬಳ್ಳಾರಿಯ ಕೆ.ಕೆ.ಮಕಾಳಿ ಭಾಜನರಾಗಿದ್ದಾರೆ. ‘ಪ್ರಶಸ್ತಿಯು ತಲಾ ₹೫೦ ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಮಂಡ್ಯದಲ್ಲಿ ನಡೆಯಲಿದ್ದು, ದಿನಾಂಕ ನಿಗದಿಪಡಿಸಬೇಕಿದೆ’ ಎಂದು ಅಕಾಡೆಮಿಯ ಅಧ್ಯಕ್ಷ ಎಂ.ಎಸ್‌.ಮೂರ್ತಿ ಹೇಳಿದರು.
 • ‘ಪೋಲೆಂಡ್‌ ಮೂಲದ ಮಾರ್ಥಾ ಝಾಕಿಮೋವಿಜ್‌ ಅವರು ಕಳೆದ ೩೫ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ದೃಶ್ಯಕಲಾ ವೈಚಾರಿಕತೆಯನ್ನು ಆಳವಾಗಿ ಅಭ್ಯಾಸಿರುವ ಅವರು, ರಾಜ್ಯದ ಕಲಾವಿದರು ಹಾಗೂ ಕಲಾಕೃತಿಗಳ ವಿಮರ್ಶೆ ಮಾಡಿದ್ದಾರೆ. ಮಾರ್ಥಾ ಅವರ ಲೇಖನಗಳು ‘ಡೆಕ್ಕನ್‌ ಹೆರಾಲ್ಡ್‌’ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ’ ಎಂದರು.
 • ‘ಬಾಬುರಾವ್‌ ನಡೋಣಿ ಅವರು ಬೆಳಗಾವಿ ಜಿಲ್ಲೆಯ ರಾಯಬಾಗದ ವಿವೇಕಾನಂದ ಕಾಲೇಜ್‌ ಆಫ್‌ ಫೈನ್‌ ಆರ್ಟ್ಸ್‌ನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯವರಾದ ಕೆ.ಕೆ.ಮಕಾಳಿ ಅವರು ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಹವ್ಯಾಸಿ ಕಲಾವಿದರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಗೌರವ ಪ್ರಶಸ್ತಿ ನೀಡಲಾಗಿದೆ’ ಎಂದರು.

[೧೦]

ಕಲಬುರ್ಗಿ ಪ್ರಶಸ್ತಿ[ಬದಲಾಯಿಸಿ]

 • ಬಸವಕಲ್ಯಾಣ (ಬೀದರ್‌ ಜಿಲ್ಲೆ)ಯ ಪ್ರಸಕ್ತ ಸಾಲಿನ ಡಾ. ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಸಂಶೋಧಕ ಪ್ರಶಸ್ತಿಗೆ ಸಾಹಿತಿ ಡಾ.ವೀರಣ್ಣ ರಾಜೂರ್ ಭಾಜನ ರಾಗಿದ್ದಾರೆ. ಪ್ರಶಸ್ತಿ ರೂ.೨೫ ಸಾವಿರ ನಗದು ಮತ್ತು ಫಲಕ ಒಳಗೊಂಡಿದೆ.
 • ‘ನವೆಂಬರ್ ೨೬ ಮತ್ತು ೨೭ರಂದು ಇಲ್ಲಿ ನಡೆಯುವ ೩೭ನೇ ಅನುಭವ ಮಂಟಪ ಉತ್ಸವ ಮತ್ತು ಶರಣ ಕಮ್ಮಟ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.
 • ‘ಡಾ.ವೀರಣ್ಣ ರಾಜೂರ್ ಅವರು ಹಳಗನ್ನಡ, ನಡುಗನ್ನಡ, ಹೊಸಗನ್ನಡ, ವಚನ ಸಾಹಿತ್ಯ, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರ, ಸಂಶೋಧನೆ, ರಂಗಭೂಮಿ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ೧೨೨ ಗ್ರಂಥಗಳನ್ನು ಮತ್ತು ೬೦೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

[೧೧]

ವಿವಿಧ ಪ್ರಶಸ್ತಿಗಳು[ಬದಲಾಯಿಸಿ]

 • ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ೨೦೧೫ನೇ ಸಾಲಿನ ಟಿ. ಚೌಡಯ್ಯ ಪ್ರಶಸ್ತಿಗೆ ಮುಂಬೈನ ಹಿರಿಯ ತಬಲಾ ಕಲಾವಿದ ಸುರೇಶ್ ತಲ್ವಾಲಕರ್‌ ಮತ್ತು
 • ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್‌ ಅವರು ಭಾಜನರಾಗಿದ್ದಾರೆ.
 • ಚೌಡಯ್ಯ ಪ್ರಶಸ್ತಿ ರೂ.೫ ಲಕ್ಷ ನಗದು ಮತ್ತು ಸ್ಮರಣಿಕೆ, ಶಿಶುನಾಳ ಷರೀಫ ಪ್ರಶಸ್ತಿ ರೂ. ೩ ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
 • ಇತರ ಪ್ರಶಸ್ತಿ ಪುರಸ್ಕೃತರ ಹೆಸರನ್ನೂ ಪ್ರಕಟಿಸಲಾಗಿದೆ. ಈ ಪ್ರಶಸ್ತಿಗಳೂ ತಲಾ ರೂ. ೩ ಲಕ್ಷ ನಗದು ಮತ್ತು ಸ್ಮರಣಿಕೆಗಳನ್ನು ಒಳಗೊಂಡಿವೆ.

ಆಗಸ್ಟ ೧೫, ೨೦೧೬ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಕ್ರ.ಸಂ. ಪ್ರಶಸ್ತಿಯ ಹೆಸರು ಪುರಸ್ಕೃತರು
ವರ್ಣಶಿಲ್ಪಿ ವೆಂಕಟಪ್ಪ ಪೀಟರ್ ಲೂಯಿಸ್
ಜಕಣಾಚಾರಿ ಎನ್.ಪಷ್ಪಮಾಲಾ ಬೆಂಗಳೂರು
ಶ್ರೀ ನಿಜಗುಣ ಪುರಂಧರ ಬೆಳಕವಾಡಿ ರಂಗಸ್ವಾಮಿ ಐಯ್ಯಂಗಾರ್
ಕುಮಾರವ್ಯಾಸ ಕಮಲಮ್ಮ ವಿಠಲರಾವ್
ನಾಟ್ಯರಾಣಿ ಶಕುಂತಲಾ ಎಂ.ಶಕುಂತಲಾ ಬೆಂಗಳೂರು
ಜಾನಪದಶ್ರೀ ಸತ್ತೂರು ಇಮಾಂಸಾಬ್ ಬಳ್ಳಾರಿ

[೧೨]

೨೦೧೬-೧೭ರ ಕುವೆಂಪು ರಾಷ್ಟ್ರೀಯ ಪುರಸ್ಕಾರ[ಬದಲಾಯಿಸಿ]

 • ೬ ಅಕ್ಟೋಬರ್, ‌೨೦೧೬;
 • ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಪ್ರಸಕ್ತ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಸಾಹಿತಿ ದೇವನೂರ ಮಹಾದೇವ ಆಯ್ಕೆಯಾಗಿದ್ದಾರೆ. ಹಿಂದಿ ಲೇಖಕ ಗಂಗಾಪ್ರಸಾದ್‌ ಬಿಮಲ್‌, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಭಾರತೀಯ ಭಾಷಾ ಕೇಂದ್ರದ ಅಧ್ಯಕ್ಷ ಪ್ರೊ. ಅನ್ವರ್‌ ಪಾಶಾ, ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ಮಧ್ಯಪ್ರದೇಶದ ಅಮರಕಂಟಕದಲ್ಲಿರುವ ಇಂದಿರಾಗಾಂಧಿ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ವಿ. ಕಟ್ಟೀಮನಿ ಅವರನ್ನು ಒಳಗೊಂಡ ಸಮಿತಿಯು ದೇವನೂರ ಮಹಾದೇವ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು.
 • ಪ್ರಶಸ್ತಿಯು ರೂ.೫ ಲಕ್ಷ ನಗದು, ಫಲಕ ಒಳಗೊಂಡಿದೆ. ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವಾದ ಡಿ.೨೯ರಂದು ಕುಪ್ಪಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಲು ಮಹಾದೇವ ಅವರು ಒಪ್ಪಿಗೆ ಸೂಚಿಸಿದರು ಎಂದು ಪ್ರತಿಷ್ಠಾನದ ಅಧ್ಯಕ್ಷ ಹಂ.ಪ. ನಾಗರಾಜಯ್ಯ, ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌ ತಿಳಿಸಿದರು[೧೩]

೨೦೧೫ನೇ ಸಾಲಿನ ಏಕಲವ್ಯ ಮತ್ತು ಕ್ರೀಡಾರತ್ನ ಪ್ರಶಸ್ತಿ[ಬದಲಾಯಿಸಿ]

 • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ೨೦೧೫ನೇ ಸಾಲಿನ ಏಕಲವ್ಯ ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ. ೧೬ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ, ೧೦ ಕ್ರೀಡಾಳುಗಳಿಗೆ ಕ್ರೀಡಾರತ್ನ ಹಾಗೂ ಇಬ್ಬರಿಗೆ ಜೀವಮಾನದ ಸಾಧನೆ ಪ್ರಶಸ್ತಿಗಳನ್ನು ಕರ್ನಾಟಕದ ಸಚಿವ ಪ್ರಮೋದ್‌ ಮಧ್ವರಾಜ್‌ ಪ್ರಕಟಿಸಿದ್ದರು.
 • ಏಕಲವ್ಯ ಪ್ರಶಸ್ತಿ
 • ದಾಮಿನಿ ಕೆ ಗೌಡ, ಈಜು
 • ವಿದ್ಯಾ ಪಿಳ್ಳೆ, ಬಿಲಿಯರ್ಡ್ಸ್
 • ಪವನ್ ಶೆಟ್ಟಿ, ಬಾಡಿ ಬಿಲ್ಡಿಂಗ್
 • ನಿತಿನ್ ತಿಮ್ಮಯ್ಯ, ಹಾಕಿ
 • ರಾಜಗುರು ಎಸ್, ಕಬಡ್ಡಿ
 • ಕೃಷ್ಣ ಎ ನಾಯ್ಕೋಡಿ, ಸೈಕ್ಲಿಂಗ್
 • ಅರವಿಂದ ಎ, ಬ್ಯಾಸ್ಕೆಟ್‌ಬಾಲ್
 • ಅರ್ಪಿತಾ ಎಂ, ಅಥ್ಲೆಟಿಕ್ಸ್‌
 • ಮೊಹಮ್ಮದ್ ರಫೀಕ್‌ ಹೋಳಿ, ಕುಸ್ತಿ
 • ಮೇಘನಾ ಎಂ ಸಜ್ಜನರ್‌, ರೈಫಲ್‌ ಶೂಟಿಂಗ್
 • ಧೃತಿ ತಾತಾಚಾರ್‌ ವೇಣುಗೋಪಾಲ್, ಟೆನಿಸ್
 • ಅನೂಪ್‌ ಡಿ ಕೋಸ್ಟಾ, ವಾಲಿಬಾಲ್
 • ಜಿ.ಎಂ. ನಿಶ್ಚಿತ, ಬ್ಯಾಡ್ಮಿಂಟನ್
 • ಶಾವದ್‌ ಜೆಎಂ, ಪ್ಯಾರಾ ಅಥ್ಲೆಟಿಕ್
 • ಉಮೇಶ್‌ ಆರ್ ಖಾಡೆ, ಪ್ಯಾರಾ ಈಜು
 • ಕಂಚನ್ ಮುನ್ನೋಳ್ಕರ್, ವೇಟ್‌ಲಿಫ್ಟಿಂಗ್‌
 • ಜೀವಮಾನ ಸಾಧನೆ ಪ್ರಶಸ್ತಿ
 • ಧ್ಯಾನ್ ಕ್ರಿಸ್ಟೋಫರ್ ನಿರ್ಮಲ್‌ ಕುಮಾರ್, ಈಜು ತರಬೇತುದಾರ
 • ಶಿವಾನಂದ ಆರ್, ಕುಸ್ತಿ
 • ಕ್ರೀಡಾ ರತ್ನ ಪ್ರಶಸ್ತಿ
 • ಡಿಎನ್ ರುದ್ರಸ್ವಾಮಿ, ಯೋಗ
 • ಪೂರ್ಣಿಮಾ ಪಿ– ಥ್ರೋ ಬಾಲ್‌
 • ಅಮೋಘ್ ಯು ಚಚಡಿ – ಆಟ್ಯ ಪಾಟ್ಯ
 • ರಂಜಿತಾ ಎಂಪಿ, ಬಾಲ್‌ ಬ್ಯಾಡ್ಮಿಂಟನ್
 • ಕೆ.ಸಿ. ಪ್ರದೀಪ್‌ ಕೊಕ್ಕೊ
 • ಸುಮಿತಾ ಯುಎಂ, ಕಬಡ್ಡಿ
 • ಡಾ.ಜೀವಂಧರ್‌ ಬಲ್ಲಾಳ್, ಕಂಬಳ
 • ಆನಂದ್ ಇರ್ವತ್ತೂರು, ಕಂಬಳ
 • ಆನಂದ್ ಎಲ್, ಕುಸ್ತಿ
 • ಮೋಶಪ್ಪ ವಿಠ್ಠಪ್ಪ ಗುಳಬಾಳ, ಗುಂಡು ಎತ್ತುವುದು.

(ಕ್ರೀಡಾಪಟುಗಳಿಗೆ 2015ನೇ ಸಾಲಿನ ಪ್ರಶಸ್ತಿ)

ಏಕಲವ್ಯ ಪ್ರಶಸ್ತಿ[ಬದಲಾಯಿಸಿ]

 • ೨೦೧೧ ಹಾಗೂ ೨೦೧೦ನೇ ಏಕಲವ್ಯ ಪ್ರಶಸ್ತಿ;
 • ೨೦೧೧ ಪ್ರಸಕ್ತ ಸಾಲಿನ ೧೫ ಹಾಗೂ ೨೦೧೦ನೇ ಸಾಲಿನ ನಾಲ್ವರು ಸೇರಿದಂತೆ ಒಟ್ಟು ೧೯ ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವಕಪ್‌ ವಿಜೇತ ಭಾರತೀಯ ವನಿತಾ ಕಬಡ್ಡಿ ತಂಡದ ನಾಯಕಿ, ಕಾರ್ಕಳದ ಮಮತಾ ಪೂಜಾರಿ ಹಾಗೂ ಕ್ರಿಕೆಟಿಗ ವಿನಯ್‌ ಕುಮಾರ್‌ ಏಕಲವ್ಯ ಪ್ರಶಸ್ತಿ ಪಡೆಯುವ ಪ್ರಮುಖರಾಗಿದ್ದಾರೆ.
 • ೨೦೧೪ ರ ಪ್ರಶಸ್ತಿಗಳು
 • ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್‌ ಭವನದಲ್ಲಿ ಕ್ರೀಡಾ ಇಲಾಖೆಯು ಮಂಗಳವಾರ (೧೦ ಮೈ, ೨೦೧೬) ಆಯೋಜಿಸಿದ್ದ ೨೦೧೪ನೇ ಸಾಲಿನ ಪ್ರಶಸ್ತಿ ಪ್ರದಾನ ಹಾಗೂ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮ ನಡೆಯಿತು.

೧೫ ಸಾಧಕರಿಗೆ ‘ಏಕಲವ್ಯ’ ಪ್ರಶಸ್ತಿ, ನಾಲ್ವರು ತರಬೇತುದಾರರಿಗೆ ‘ಜೀವಮಾನ ಶ್ರೇಷ್ಠ ಸಾಧನೆ’ ಹಾಗೂ ೧೦ ಮಂದಿ ಗ್ರಾಮೀಣ ಕ್ರೀಡಾಪಟುಗಳಿಗೆ ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಲಭಿಸಿದೆ. [೧೪] [೧೫]

ಪಂಪ ಪ್ರಶಸ್ತಿ[ಬದಲಾಯಿಸಿ]

 • ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರಿಗೆ ೨೦೧೪ನೇ ಸಾಲಿನ ಪಂಪ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಶಸ್ತಿಯು ೩ ಲಕ್ಷ ನಗದು ಮತ್ತು ಸನ್ಮಾನ ಫಲಕ ಒಳಗೊಂಡಿದೆ. ವಿಷ್ಣು ನಾಯಕ್‌ ಅಧ್ಯಕ್ಷತೆಯ ಸಮಿತಿಯು ಅವರನ್ನು ಆಯ್ಕೆ ಮಾಡಿದೆ.
 • ೨೦೧೫ನೇ ಸಾಲಿನ ‘ಪಂಪ ಪ್ರಶಸ್ತಿ’ಗೆ ಪ್ರೊ.ಬಿ.ಎ. ಸನದಿ ಅವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ[ಬದಲಾಯಿಸಿ]

 • ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ| ಮಾಲತಿ ಪಟ್ಟಣಶೆಟ್ಟಿ ಯಿಂದ ಪ್ರಕಟಣೆ:
 • ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೪ನೇ ಸಾಲಿನ ಗೌರವ ಪ್ರಶಸ್ತಿಗಳು ಘೋಷಣೆಯಾಗಿದ್ದು, ಹಿರಿಯ ಸಂಶೋಧಕ ಷ.ಶೆಟ್ಟರ್‌, ಚಿಂತಕ ಡಾ| ಜಿ.ರಾಮಕೃಷ್ಣ, ಕವಿ ಸುಬ್ರಾಯ ಚೊಕ್ಕಾಡಿ, ಕವಯತ್ರಿಯರಾದ ಧಾರವಾಡದ ಪ್ರೊ| ಸುಕನ್ಯಾ ಮಾರುತಿ ಮತ್ತು ಶಿವಮೊಗ್ಗ ಸವಿತಾ ನಾಗಭೂಷಣ ಅವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
 • ಸಾಹಿತ್ಯ ಅಕಾಡೆಮಿಯು ೨೦೧೩ನೇ ಸಾಲಿನ ಪುಸ್ತಕ ಪ್ರಶಸ್ತಿ ಮತ್ತು ೬ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಗೌರವ ಪ್ರಶಸ್ತಿ ತಲಾ ೧೦ ಸಾವಿರ ನಗದು ಒಳಗೊಂಡಿದ್ದರೆ, ಪುಸ್ತಕ ಪ್ರಶಸ್ತಿ ಮತ್ತು ದತ್ತಿನಿಧಿ ಪ್ರಶಸ್ತಿಗಳು ತಲಾ ೫ ಸಾವಿರ ನಗದನ್ನು ಒಳಗೊಂಡಿವೆ. ಗೌರವ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗಳನ್ನು ಎ.೨೯ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು. ಖ್ಯಾತ ಭಾಷಾಶಾಸ್ತ್ರಜ್ಞ ಡಾ| ಗಣೇಶ್‌ದೇವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
೨೦೧೩ರ ದತ್ತಿನಿಧಿ ಬಹುಮಾನ
 • ಚದುರಂಗ ದತ್ತಿನಿಧಿ ಪ್ರಶಸ್ತಿ- ಸಿ.ಆರ್‌.ಪಾರ್ಥಸಾರಥಿ (ಅನಾವರಣ- ಕಾದಂಬರಿ); ಸಿಂಪಿ ಲಿಂಗಣ್ಣ ದತ್ತಿನಿಧಿ ಪ್ರಶಸ್ತಿ- ಗುಂಡಪ್ಪ ದೇವಿಗೇರಿ (ನೆಲದೊಡಲ ಚಿಗುರು- ಜೀವನಚರಿತ್ರೆ); ಪಿ.ಶ್ರೀನಿವಾಸರಾವ್‌ ದತ್ತಿನಿಧಿ ಪ್ರಶಸ್ತಿ- ಬಸವರಾಜ ಸಬರದ (ಸಾಹಿತ್ಯ ಸಿಂಚನ- ಸಾಹಿತ್ಯ ವಿಮರ್ಶೆ); ಎಲ್‌. ಗುಂಡಪ್ಪ- ಶಾರದಮ್ಮ ದತ್ತಿನಿಧಿ ಪ್ರಶಸ್ತಿ- ಡಾ| ಅಶೋಕ್‌ಕುಮಾರ್‌ (ಕುರಿಂಜಿ ಜೇನು- ಅನುವಾದ ಕೃತಿ); ಮಧುರಚೆನ್ನ ದತ್ತಿನಿಧಿ- ರಮೇಶ್‌ ಮ.ಕಲ್ಲನಗೌಡರ್‌ (ಅಮೃತಕ್ಕೆ ಹಾರಿದ ಗರುಡ- ಮೊದಲ ಕೃತಿ); ಅಮೆರಿಕನ್ನಡ ದತ್ತಿನಿಧಿ- ದೀಪಾ ಗಣೇಶ್‌ (ಹಂಟ್‌ ಬ್ಯಾಂಗಲ್‌ ಕೆಮಿಲಿಯನ್‌- ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ).[೧೬]

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ[ಬದಲಾಯಿಸಿ]

ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ[ಬದಲಾಯಿಸಿ]

ಪ್ರಶಸ್ತಿಗೆ ನಾಲ್ವರು ಲೇಖಕರು ಆಯ್ಕೆಯಾಗಿದ್ದಾರೆ.

 • ಪ್ರಶಸ್ತಿ ಪುರಸ್ಕೃತರು–ಎಚ್.ಎಸ್. ರಾಘವೇಂದ್ರ ರಾವ್ ಮತ್ತು ಟಿ.ಪಿ.ಅಶೋಕ (ವಿಮರ್ಶೆ), ರೇಖಾ ಕಾಖಂಡಕಿ (ಸೃಜನಶೀಲ), ನೇಮಿಚಂದ್ರ (ವಿಜ್ಞಾನ ಸಾಹಿತ್ಯ) ಅವರು ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
 • ಜೂನ್ ತಿಂಗಳಲ್ಲಿ ನಗರದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ₹೨೫ ಸಾವಿರ ನಗದು ಮತ್ತು ಮಾಸ್ತಿ ಪ್ರಶಸ್ತಿ ಫಲಕ ನೀಡಿ ನಾಲ್ವರೂ ಲೇಖಕರನ್ನು ಸನ್ಮಾನಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.[೧೭]
 • ಫೋಟೊ :[ಶಾಶ್ವತವಾಗಿ ಮಡಿದ ಕೊಂಡಿ][ಶಾಶ್ವತವಾಗಿ ಮಡಿದ ಕೊಂಡಿ]

ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ[ಬದಲಾಯಿಸಿ]

೨೦೧೪ನೇ ಸಾಲಿನಪ್ರಶಸ್ತಿ ಪುರಸ್ಕೃತರು
 • ಮಂಗಳೂರಿನ ಪದ್ಮಾ ಶೆಣೈ (ಸಾಹಿತ್ಯ),
 • ಕೋಣಿ ಶೇಷಗಿರಿ ನಾಯಕ್ (ಕಲೆ),
 • ಧಾರವಾಡದ ಗಜಾನನ ಮಹಾಲೆ (ಜಾನಪದ) ಅವರಿಗೆ ೨೦೧೪ನೇ ಸಾಲಿನ ಗೌರವ ಪ್ರಶಸ್ತಿ,
 • ಕಿನ್ನಿಗೋಳಿಯ ನವೀನ್ ಕುಂಬಿರ್ಲ್ (ಕಥಾ ಸಂಗ್ರಹ),
 • ಮಣಿಪಾಲದ ಡಾ. ನಾಗೇಶ್‌ಕುಮಾರ್ ಜಿ. ರಾವ್ (ಕವಿತೆಗಳು),
 • ಹಾಸನದ ಜೆ.ವಿ. ಕಾರ್ಲೊ (ಅನುವಾದಿತ) ಅವರಿಗೆ ಪುಸ್ತಕ ಬಹುಮಾನ.
 • ಮೈಸೂರಿನ ಅಶ್ವಿನ್ ಎಂ. ಪ್ರಭು (ಸಂಗೀತ),
 • ಬೆಂಗಳೂರಿನ ಪ್ರಜ್ವಲ್ ಎಂ. ನಾಯಕ್ (ಯೋಗ),
 • ಆಕಾಶವಾಣಿ ಕಲಾವಿದ ಅರುಣ ನಾಯಕ್ ಅವರಿಗೆ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
 • ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪುರಸ್ಕೃತರಿಗೆ ಅನುಕ್ರಮವಾಗಿ ತಲಾ 10 ಹಾಗೂ 5 ಸಾವಿರ ರೂ. ನಗದು ಬಹುಮಾನ ನೀಡಲಾಯಿತು.

ರಾಜ್ಯ ಚಲನಚಿತ್ರ ಪ್ರಶಸ್ತಿ[ಬದಲಾಯಿಸಿ]

 • ಜೀವಮಾನ ಸಾಧನೆಯ ಪ್ರಶಸ್ತಿಯು ೨ ಲಕ್ಷ ನಗದು ಚಿನ್ನದ ಪದಕ ಒಳಗೊಂಡಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ೨೦,೦೦೦ರೂ. , ಬೆಳ್ಳಿ ಪದಕ; ಪ್ರಥಮ ಚಿತ್ರ ೧ ಲಕ್ಷ ರೂ. ನಗದು ಚಿನ್ನದ ಪದಕ; ದ್ವಿತೀಯ ಚಿತ್ರ ೭೫,೦೦೦ರೂ. ಬೆಳ್ಳಿ ಪದಕ ; ಇತರೆ : ೫೦,೦೦೦ರೂ. ಬೆಳ್ಳಿ ಪದಕ ;(ಪ್ರಜಾವಾಣಿ/೫-೧-೨೦೧೫)
೨೦೧೩ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ
 • ನಿಖಿಲ್ ಮಂಜು, ನಿವೇದಿತ ಅತ್ಯುತ್ತಮ ನಟ-ನಟಿ
 • ಶ್ರೀನಾಥ್‌ಗೆ ಡಾ.ರಾಜ್‌ಕುಮಾರ್, ನಿರ್ದೇಶಕ ಪಿ.ಎಚ್.ವಿಶ್ವನಾಥ್‌ಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
೨೦೧೪-೧೫ ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ
 • 'ನಾನು ಅವನಲ್ಲ ಅವಳು' ಸಿನಿಮಾಗಾಗಿ ನಟ ಸಂಚಾರಿ ವಿಜಯ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ವಿದಾಯ ಸಿನಿಮಾದ ನಟನೆಗಾಗಿ ನಟಿ ಲಕ್ಷ್ಮೀ ಗೋಪಾಲಸ್ವಾಮಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹರಿವು ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದ್ರೆ, ದ್ವಿತೀಯ ಅತ್ಯುತ್ತಮ ಚಿತ್ರವಾಗಿ ಅಭಿಮನ್ಯ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ.
 • ಬಸಂತ್ ಕುಮಾರ್ ಪಾಟೀಲ್ ಅವರಿಗೆ ಡಾ.ರಾಜ್ ಕುಮಾರ್ ಪ್ರಶಸ್ತಿ, ಡಾ.ಬರಗೂರು ರಾಮಚಂದ್ರಪ್ಪ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಡಾ.ವಿಷ್ಣುವರ್ಧನ್ ಪ್ರಶಸ್ತಿ ಸುರೇಶ್ ಅರಸ್ ಅವರ ಪಾಲಿಗಿದೆ. ಪ್ರಶಸ್ತಿ ಪುರಸ್ಕೃತರಿಗೆ ಎರಡು ಲಕ್ಷ ರೂ ಗಳ ನಗದು ಬಹುಮಾನ ಮತ್ತು 50 ಗ್ರಾಂ ಚಿನ್ನದಪದಕ ದೊರೆಯುವುದು.
 • ಸಾಮಾಜಿಕ ಕಾಳಜಿಯ ಚಿತ್ರ ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ. ಹಾಗೇ ಅತ್ಯುತ್ತಮ ಮನರಂಜನಾ ಚಿತ್ರ ಗಜಕೇಸರಿ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ.ಅತ್ಯುತ್ತಮ ಮಕ್ಕಳ ಚಿತ್ರ ಬಾನಾಡಿ, ಹಾಗೇ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ ಉಳಿದವರು ಕಂಡಂತೆ ಸಿನಿಮಾಕ್ಕೆ ದೊರೆತಿದೆ. ಇನ್ನು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಅರುಣ್ ದೇವಸ್ಯ ಆಯ್ಕೆಯಾಗಿದ್ರೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಡಾ. ಬಿ.ಜಯಶ್ರೀ ಅವರಿಗೆ ದೊರೆತಿದೆ.
 • ಅತ್ಯುತ್ತಮ ಕತೆ ಪ್ರಶಸ್ತಿ ಲಿವಿಂಗ್ ಸ್ಮೈಲ್ ವಿದ್ಯಾ ಅವರಿಗೆ ದೊರತಿದೆ. ಅತ್ಯುತ್ತಮ ಚಿತ್ರಕಥೆ ಪಿ.ಶೇಷಾದ್ರಿ, ಅತ್ಯುತ್ತಮ ಸಂಭಾಷಣೆ ಬಿ.ಎಲ್.ವೇಣು, ಅತ್ಯುತ್ತಮ ಛಾಯಾಗ್ರಹಣ ಸತ್ಯ ಹೆಗಡೆ, ಅತ್ಯುತ್ತಮ ಸಂಗೀತ ನಿರ್ದೇಶನ ಅಜನೀಶ್ ಲೋಕನಾಥ್, ಅತ್ಯುತ್ತಮ ಸಂಕಲನ – ಶ್ರೀಕಾಂತ, ಅತ್ಯುತ್ತಮ ಬಾಲ ನಟ ಮಾ.ಸ್ನೇಹಿತ್, ಅತ್ಯುತ್ತಮ ಬಾಲ ನಟಿ ಕು.ಲಹರಿ,ಅತ್ಯುತ್ತಮ ಕಲಾ ನಿರ್ದೇಶನ ಚಂದ್ರಕಾಂತ್, ಅತ್ಯುತ್ತಮ ಗೀತರಚನೆ ಹುಲಿಕುಂಟೆ ಮೂರ್ತಿ, ಅತ್ಯುತ್ತಮ ಹಿನ್ನಲೆ ಗಾಯಕ ಚಿಂತನ್, ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಶ್ರೀಮತಿ ವಿದ್ಯಾ ಮೋಹನ್ ಅವರಿಗೆ ದೊರತಿದೆ. ಇನ್ನು ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಸಾಹಸಿ ಜ್ಯೋತಿರಾಜ್ ಆಯ್ಕೆಯಾಗಿದ್ದಾರೆ.[೧೮]

ಅಂಗವಿಕಲರಿಗೆ ರಾಜ್ಯ ಪ್ರಶಸ್ತಿ[ಬದಲಾಯಿಸಿ]

ಕರ್ನಾಟಕ ಲಲಿತ¬ಕಲಾ ಅಕಾಡೆಮಿಯ ಪ್ರಶಸ್ತಿಗಳು[ಬದಲಾಯಿಸಿ]

 • ಈ ಪ್ರಶಸ್ತಿಯು ತಲಾ ೧೦ ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡಿದೆ.
 • ೨೦೧೪–೧೫ನೇ ಸಾಲಿನ ಗೌರವ ಪ್ರಶಸ್ತಿ ಪಡೆದವರು
 • ಚಂದ್ರಶೇಖರ ಸೋಮಶೆಟ್ಟಿ (ಬೀದರ್‌),
 • ಬಸವರಾಜ ಮುಳಸಾವಳಗಿ (ಮೈಸೂರು) ಮತ್ತು
 • ಕೆ. ಗಂಗಾಧರ (ವಿಜಯಪುರ).

ನೃಪತುಂಗ ಸಾಹಿತ್ಯ ಪ್ರಶಸ್ತಿ[ಬದಲಾಯಿಸಿ]

೨೦೧೬

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ಸ್ಥಾಪಿಸಿರುವ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ (೨೦೧೫) ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ. ೭ ಲಕ್ಷ ನಗದು ಒಳಗೊಂಡಿದೆ.[೧೯]

ನೃತ್ಯ ಕಲಾವಿದೆ ಪ್ರಶಸ್ತಿ[ಬದಲಾಯಿಸಿ]

ರಾಷ್ಟ್ರೀಯ ಮಕ್ಕಳ ಪ್ರಶಸ್ತಿ[ಬದಲಾಯಿಸಿ]

ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ[ಬದಲಾಯಿಸಿ]

 • ೨೦೧೫ನೇ ಸಾಲಿನದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯು ನೇಮಿಚಂದ್ರ ಅವರಿಗೆ ಲಭಿಸಿದೆ.ನೇಮಿಚಂದ್ರ (ಜುಲೈ ೧೬, ೧೯೫೯) ಕನ್ನಡದ ವೈಶಿಷ್ಟ್ಯಪೂರ್ಣ ಬರೆಹಗಾರ್ತಿ. ಸಣ್ಣಕತೆ, ಕಾದಂಬರಿ ಹಾಗೂ ವಿಚಾರಪೂರ್ಣ ಲೇಖನಗಳ ಮೂಲಕ ಹೆಸರಾಗಿದ್ದಾರೆ.

ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ[ಬದಲಾಯಿಸಿ]

 • ಮಹಾರಾಷ್ಟ್ರದ ಜತ್ತ ಪ್ರದೇಶದಲ್ಲಿ ಕನ್ನಡ ಶಾಲೆಗಳ ಉಳಿವಿಗಾಗಿ ಕೆಲಸ ಮಾಡುತ್ತಿರುವ ಎಂ.ಎಸ್. ಸಿಂಧೂರ ಅವರನ್ನು ‘ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ[ಬದಲಾಯಿಸಿ]

 • ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಸರ್ಕಾರ ನೀಡುವ ೨೦೧೪–೧೫ನೇ ಸಾಲಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರಟಕಗೊಂಡಿದೆ.

ಪ್ರಶಸ್ತಿ ವಿವರ

ಮಹಿಳಾ ಅಭಿವೃದ್ಧಿ ಸಂಸ್ಥೆ
 • ಅಸ್ರ(AASRA)– ಬೆಂಗಳೂರು, ವರ್ಲ್ಡ್ ವಿಷನ್ ಇಂಡಿಯಾ–ವಿಜಯಪುರ, ಶ್ರೀ ಸತ್ಯ ಪ್ರೇಮ ಸಾಯಿ ಮಹಿಳಾ ಸಮಾಜ– ತುಮಕೂರು, ಜಾಗೃತ ಮಹಿಳಾ ಸಂಘ– ದಾವಣಗೆರೆ, ನವಜ್ಯೋತಿ ಇನ್‌ಸ್ಟಿಟ್ಯೂಟ್ ಫಾರ್ ಸೆಲ್ಫ್ ಹೆಲ್ಪ್ ಅಂಡ್ ರೂರಲ್ ಡೆವಲಪ್ ಮೆಂಟ್, ರಾಣಿಬೆನ್ನೂರು, ಚಿಕ್ಕಮಗಳೂರು ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್.
ಮಹಿಳಾ ಅಭಿವೃದ್ಧಿ
ವ್ಯಕ್ತಿ
 • ಅಕ್ಕಮಾರಮ್ಮ– ಬೆಂಗಳೂರು ಗ್ರಾಮಾಂತರ, ಹಿಶಿಥ.ಜೆ–ಬೆಂಗಳೂರು ನಗರ, ರಾಜೀವಿ–ಉಡುಪಿ, ಕವಿತಾ ಗೋಪಾಲ್–ಚಿಕ್ಕಮಗಳೂರು, ಅಕ್ಕಮಹಾದೇವಿ ಚ. ಹಿರೇಮಠ –ವಿಜಯಪುರ, ಕಲಾವತಿ ಜಿ. ಎಸ್–ರಾಯಚೂರು, ಮಹಾದೇವಿ ಹುಲ್ಲೂರ–ವಿಜಯಪುರ, ಚಂದ್ರಮ್ಮ ಗೋಳಾ– ಕಲಬುರ್ಗಿ.
ಕಲಾ
 • ಚೂಡಾಮಣಿ ರಾಮಚಂದ್ರ–ಶಿವಮೊಗ್ಗ, ಪೂರ್ಣಿಮಾ ಯತೀಶ್ ರೈ– ದಕ್ಷಿಣಕನ್ನಡ, ನಾಗರತ್ನ ಬಿ. ಎಚ್– ಮೈಸೂರು, ಸುಶೀಲ–ಬೆಂಗಳೂರು ನಗರ, ಸವಿತಾ ಚಿರುಕುನ್ನಯ್ಯ–ಮಂಡ್ಯ .
ಸಾಹಿತ್ಯ
 • ಗೀತಾ ನಾಗಭೂಷಣ–ಕಲಬುರ್ಗಿ, ಪ್ರಭಾ ನಾರಾಯಣಗೌಡ– ಚಿಕ್ಕಬಳ್ಳಾಪುರ, ಮಂಜುಕನ್ನಿಕಾ– ಕೋಲಾರ.

ಕ್ರೀಡಾ: ಪ್ರೇಮಾ ಆರ್. ಹುಚ್ಚಣ್ಣನವರ್–ಗದಗ, ಮೈತ್ರಾ ಉದಯ ಬನ್ನಿಕೊಪ್ಪ– ಧಾರವಾಡ.

ಶಿಕ್ಷಣ ಕ್ಷೇತ್ರ
 • ರಾಜಶ್ರೀ ನಾಗರಾಜ – ಬೆಂಗಳೂರು ನಗರ. ಮಾರ್ಚ್‌ ೮ ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚಾರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.

[೨೦]

ಪಾರ್ತಿಸುಬ್ಬ ಪ್ರಶಸ್ತಿ,೨೦೧೫[ಬದಲಾಯಿಸಿ]

 • ಬಯಲಾಟ ಕಲಾವಿದ ಗುಂಡ್ಲವದ್ದಿಗೇರಿ ತಿಮ್ಮಾರೆಡ್ಡಿ ಅವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2015ನೇ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’, ಹಾಗೂ 10 ಜನ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
 • ಬೀದರ್ ನಗರದ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ೧೪-೦೩-೨೦೧೬ ರಂದು ನಡೆದ ಸಮಾರಂಭದಲ್ಲಿ ಕಲಬುರ್ಗಿ ಕೇಂದ್ರೀಯ ವಿ.ವಿ ಕುಲಪತಿ ಡಾ.ಎಚ್.ಎಂ. ಮಹೇಶ್ವರಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪಾರ್ತಿಸುಬ್ಬ ಪ್ರಶಸ್ತಿ ರೂ.೧ ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದ್ದು, ವಾರ್ಷಿಕ ಗೌರವ ಪ್ರಶಸ್ತಿ ತಲಾ ರೂ.೫೦ ಸಾವಿರ ನಗದು ಒಳಗೊಂಡಿದೆ.
 • ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಗುಂಡ್ಲವದ್ದಿಗೇರಿ ಗ್ರಾಮದ ತಿಮ್ಮಾರೆಡ್ಡಿ ಅವರು ಆರು ದಶಕಗಳಿಂದ ಬಯಲಾಟ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಕಲಾಸೇವೆ ಗುರುತಿಸಿ ಪಾರ್ತಿಸುಬ್ಬ ಪ್ರಶಸ್ತಿ ನೀಡಲಾಗಿದೆ’ ಎಂದು ಅಕಾಡೆಮಿಯ ಅಧ್ಯಕ್ಷ ಬೆಳಗಲ್ಲು ವೀರಣ್ಣ ತಿಳಿಸಿದರು.
ವಾರ್ಷಿಕ ಗೌರವ ಪ್ರಶಸ್ತಿ ಸ್ವೀಕರಿಸಿದ ಕಲಾವಿದರು
 • ಕಂದಾವರ ರಘುರಾಮ ಶೆಟ್ಟಿ– ಯಕ್ಷಗಾನ ಪ್ರಸಂಗಕರ್ತ (ನೂಜಾಡಿ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ), ಹಡಿನಬಾಳ ಶ್ರೀಪಾದ ಹೆಗಡೆ– ಯಕ್ಷಗಾನ ಕಲಾವಿದ (ಕೊಂಡಾಕುಳಿ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ), ಬೊಟ್ಟಿಕೇರೆ ಪುರುಷೋತ್ತಮ ಪೂಂಜಾ–ಭಾಗವತರು ತೆಂಕುತಿಟ್ಟು (ಹಸೈಗೋಳಿ, ಮಂಗಳೂರು ಜಿಲ್ಲೆ), ಮೇಗರವಳ್ಳಿ ರಾಮನಾಯಕ– ಯಕ್ಷಗಾನ ಪ್ರಸಾಧನ ಕಲಾವಿದ (ಮೇಗರವಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ), ಅವ್ವಪ್ಪ ಸಣ್ಣಪ್ಪ ಅಳ್ಳಿಚಂಡಿ– ಶ್ರೀಕೃಷ್ಣ ಪಾರಿಜಾತ (ಬ್ಯಾಲ್ಯಾಳ, ಬಸವನ ಬಾಗೇವಾಡಿ ತಾಲ್ಲೂಕು, ವಿಜಯಪುರ ಜಿಲ್ಲೆ), ಯಮುನಾಬಾಯಿ ಲಕ್ಷ್ಮಣ ಕಲಾಚಂದ್ರ–ಸಣ್ಣಾಟ (ಧುಳಗನವಾಡಿ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ), ಗೌರಮ್ಮ –ತೊಗಲುಗೊಂಬೆಯಾಟ (ಮರಸುಕೊಪ್ಪಲು, ಆಲೂರು ತಾಲ್ಲೂಕು, ಹಾಸನ ಜಿಲ್ಲೆ), ಎಸ್. ಸೊಲ್ಲಮ್ಮ–ಬಯಲಾಟ (ಕೂಡ್ಲಿಗಿ, ಬಳ್ಳಾರಿ ಜಿಲ್ಲೆ), ಸಣ್ಣತಿಮ್ಮಯ್ಯ– ಮೂಡಲಪಾಯ ಯಕ್ಷಗಾನ (ತೋಟಮಡಗಲು, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ), ಎ.ಕೆ. ಮಾರಯ್ಯ –ಬಯಲಾಟ ಮದ್ದಳೆಗಾರರು (ಬೆಳಗಟ್ಟ, ಚಿತ್ರದುರ್ಗ ಜಿಲ್ಲೆ).[೨೧]

ಜಲತಜ್ಞ ರಾಜೇಂದ್ರ ಸಿಂಗ್‌ಗೆ ೨೦೧೬ನೇ ಸಾಲಿನ ಕೆ.ಎಚ್‌.ಪಾಟೀಲ ಪ್ರಶಸ್ತಿ[ಬದಲಾಯಿಸಿ]

 • ಸಹಕಾರ, ಗ್ರಾಮೀಣಾಭಿವೃದ್ಧಿ, ಜಲ ಸಂವರ್ಧನೆ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕೆ.ಎಚ್‌. ಪಾಟೀಲ ಪ್ರತಿಷ್ಠಾನ ನೀಡುವ ‘ಕೆ.ಎಚ್‌. ಪಾಟೀಲ ಗ್ರಾಮಾಭಿವೃದ್ಧಿ ರಾಷ್ಟ್ರೀಯ ಪ್ರಶಸ್ತಿ’ಗೆ ರಾಜಸ್ತಾನದ ಜಲತಜ್ಞ ರಾಜೇಂದ್ರ ಸಿಂಗ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಿ.ಆರ್‌. ಪಾಟೀಲ ಗದಗದಲ್ಲಿ ತಿಳಿಸಿದರು.
 • ಕೃಷಿ ಉತ್ಪನ್ನ-ಮಾರಾಟ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯಾಭಿವೃದ್ಧಿ, ಕೃಷಿ ತಂತ್ರಜ್ಞಾನ, ಜಲ ನಿರ್ವಹಣೆ ಇತರೆ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುವುದು. ಜಲ ಜಾಗೃತಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಡಾ.ರಾಜೇಂದ್ರಸಿಂಗ್ ಅವರಿಗೆ 2016ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗುವುದು, ಪ್ರಶಸ್ತಿಯು ರೂ. ೫ ಲಕ್ಷ ನಗದು ಹಾಗೂ ನೆನಪಿನ ಕಾಣಿಕೆ ಒಳಗೊಂಡಿದೆ. ಇದೇ ಮಾರ್ಚಿ ೧೬ ರಂದು ಗದಗದಲ್ಲಿ ನಡೆಯುವ ಕೆ.ಎಚ್.ಪಾಟೀಲ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.[೨೨]

ಬಾಬು ಜಗಜೀವನ ರಾಂ ಪ್ರಶಸ್ತಿ[ಬದಲಾಯಿಸಿ]

 • ದಲಿತರ ಅಭಿವೃದ್ಧಿಗೆ ದುಡಿದವರಿಗೆ ರಾಜ್ಯ ಸರ್ಕಾರ ನೀಡುವ ಪ್ರತಿಷ್ಠಿತ ‘ಬಾಬು ಜಗಜೀವನ ರಾಂ’ ಪ್ರಶಸ್ತಿಗೆ ಚಿತ್ರದುರ್ಗದ ದಲಿತ ಮುಖಂಡ ಎಂ.ಜಯಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.
 • ಪ್ರಶಸ್ತಿಯು ರೂ.೫ ಲಕ್ಷ ನಗದು, ಬಂಗಾರದ ಪದಕ ಹಾಗೂ ಪ್ರಶಂಸಾ ಪತ್ರ ಒಳಗೊಂಡಿದೆ. ಮಂಗಳವಾರ ವಿಧಾನಸೌಧದಲ್ಲಿ ನಡೆಯುವ ಜಗಜೀವನರಾಂ ಅವರ ೧೦೯ನೇ ಜನ್ಮ ದಿನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಸೋಮವಾರ ತಿಳಿಸಿದರು. ಪ್ರಶಸ್ತಿ ಆಯ್ಕೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್‌.ಹನುಮಂತಯ್ಯ ಅಧ್ಯಕ್ಷತೆಯ ಸಮಿತಿಯನ್ನು ರಚಿಸಲಾಗಿತ್ತು.
 • ೧೯೭೦–೮೦ರ ದಶಕದಲ್ಲಿ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯನ್ನು ತಳಮಟ್ಟದಿಂದ ಕಟ್ಟಿದ ಪ್ರಮು­ಖ­ರಲ್ಲಿ ಜಯಣ್ಣ ಒಬ್ಬರು. ಪ್ರೊ.ಬಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ದಲಿತಪರ ಹೋರಾಟ ಆರಂಭಿಸಿದರು. ಚಿತ್ರದುರ್ಗದಿಂದ ಆರಂಭಿಸಿದ ಈ ಹೋರಾಟವನ್ನು ನಾಡಿನಾದ್ಯಂತ ವಿಸ್ತರಿಸಿದರು. ಅವರು ಜಿಲ್ಲೆಯ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರೂ ಆಗಿದ್ದಾರೆ.
 • ‘ಹೆಂಡ ಬೇಡ, ಹೋಬಳಿಗೊಂದು ವಸತಿಶಾಲೆ ನೀಡಿ’ ಎಂಬ ಘೋಷಣೆಯೊಂದಿಗೆ ರಾಜ್ಯಮಟ್ಟದ ಹೋರಾಟ ಮಾಡಿದ್ದು, ಜಯಣ್ಣ ಅವರ ಹೋರಾಟದ ಹೆಜ್ಜೆಗಳಲ್ಲಿ ಪ್ರಮುಖವಾದದು. ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷನಾಗಿ, ಪ್ರತಿಭಟನೆ, ಹೋರಾಟ, ನಡಿಗೆ ಜಾಥಾ, ಜಾಗೃತಿ ಯಾತ್ರೆಗಳ ಮೂಲಕ ಜಿಲ್ಲೆಗೆ ನೀರು ಹರಿಸಲು ನಡೆಸಿದ ಪ್ರಯತ್ನ ಮಾಡಿದ್ದಾರೆ.(ಆಧಾರ;ಪ್ರಜಾವಾಣಿ ವಾರ್ತೆ ೦೫/೦೪/೨೦೧೬[೨೩]

ಡಾ.ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿ[ಬದಲಾಯಿಸಿ]

 • ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನವು ನೀಡುವ ಡಾ.ಬೆಟಗೇರಿ ಕೃಷ್ಣಶರ್ಮ ವಿಮರ್ಶಾ ಪ್ರಶಸ್ತಿಗೆ, ಪ್ರಸಕ್ತ ವರ್ಷ ಹಿರಿಯ ವಿಮರ್ಶಕ ಡಾ.ಜಿ.ಎಸ್‌. ಆಮೂರ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ. ೧ ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದ್ದು, ೧೬-೦೪-೨೦೧೬ ರಂದು ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ. ಕಥೆ, ಕಾದಂಬರಿ, ಜಾನಪದ ಸಂಶೋಧನೆ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಿದರು. ವಿಮರ್ಶಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಆಮೂರ ಈ ವರ್ಷ ಪ್ರಶಸ್ತಿಗೆ ಭಾಜನರಾದರು. (ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ)
 • ಆಯ್ಕೆ ಸಮಿತಿ: ಹಿರಿಯ ಕವಿ, ಡಾ.ಚೆನ್ನವೀರ ಕಣವಿ ಅಧ್ಯಕ್ಷರು; ಸದಸ್ಯರು: ಎಚ್‌.ಎಸ್‌. ವೆಂಕಟೇಶಮೂರ್ತಿ ಹಾಗೂ ಪ್ರೊ.ಶಾಂತಾ ಇಮ್ರಾಪುರ.[೨೪]

ಶಿವಮೊಗ್ಗ ಕರ್ನಾಟಕ ಸಂಘ ಪ್ರಶಸ್ತಿ[ಬದಲಾಯಿಸಿ]

ಶಿವಮೊಗ್ಗ ನಗರದ ಕರ್ನಾಟಕ ಸಂಘದ ವತಿಯಿಂದ ನೀಡಲಾಗುವ ಜೀವಮಾನ ಸಾಧನೆಗಾಗಿ ಪ್ರೊ.ತೀ.ನಂ. ಶ್ರೀಕಂಠಯ್ಯ ಸಾಹಿತ್ಯ ವಿಮರ್ಶೆ ಪ್ರಶಸ್ತಿಯನ್ನು ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್‌ರಿಗೆ, ಡಾ. ಬೇಂದ್ರೆ ಕಾವ್ಯ ಪ್ರಶಸ್ತಿಯನ್ನು ಕವಿ, ನಾಟಕಕಾರ ಪ್ರೊ. ಸತ್ಯನಾರಾಯಣ ರಾವ್ ಅಣತಿ ಅವರಿಗೆ ಪ್ರದಾನ ಮಾಡಲಾಯಿತು. ಸಂಘದ ಅಧ್ಯಕ್ಷ ಪ್ರೊ.ಡಿ.ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.[೨೫]

ಕರ್ನಾಟಕ ಕ್ರೀಡಾ ರತ್ನ-ಪ್ರಶಸ್ತಿ[ಬದಲಾಯಿಸಿ]

 • ಪ್ರಶಸ್ತಿಗಳ ಆಯ್ಕೆಗಾಗಿ ನಿರ್ದೇಶಕ ಭಗವಾನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ.
 • ಕರ್ನಾಟಕ ರಾಜ್ಯದ ದೇಸೀ ಮತ್ತು ಸ್ಥಳೀಯ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ೨೦೧೪ ನೇ ಸಾಲಿನ ‘ಕರ್ನಾಟಕ ಕ್ರೀಡಾ ರತ್ನ' ಪ್ರಶಸ್ತಿಯನ್ನು ಕಾವ್ಯ ಎಂ.ಆರ್.,ವಿನೋದ್ ರಾಠೋಡ, ದುಂಡಪ್ಪ ದಾಸನ್ನವರ, ರೂಪಶ್ರೀ ಬಿ.ಕೆ., ಕಾರ್ತಿಕ್ ಜಿ ಕಾಟಿ, ಯೋಗೇಶ್, ಅನಿಲ್ ಕುಮಾರ್ ಹೆಚ್. ಶೆಟ್ಟರ್, ಜಯಕರ ಯಾನೆ ನಕ್ರೆ ಜಯಕರ ಮಡಿವಾಳ, ಕೊಳಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ, ಇಬ್ರಾಹಿಂ ಸಾಬ್ ಮ. ಅರಬ್ ಅವರಿಗೆ ನೀಡಲಾಯಿತು. [೨೬]

ಡಾ.ರಾಜಕುಮಾರ್ ಪ್ರಶಸ್ತಿ[ಬದಲಾಯಿಸಿ]

 • ೩೦-೭-೨೦೧೬
 • ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನದ ಸೇವೆಯನ್ನು ಪುರಸ್ಕರಿಸಿ ಹಿರಿಯ ನಟಿ ಹರಿಣಿ ಅವರನ್ನು ೨೦೧೫ನೇ ಸಾಲಿನ ‘ಡಾ. ರಾಜಕುಮಾರ್ ಪ್ರಶಸ್ತಿ’ಆಯ್ಕೆ ಮಾಡಲಾಗಿದೆ. ‘ ತಮ್ಮ ವೃತ್ತಿ ಜೀವನದದಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದ ಹರಿಣಿ, ‘ಜಗನ್ಮೋಹಿನಿ’, ‘ಕನ್ಯಾದಾನ’, ‘ನಾಂದಿ’ ಚಿತ್ರಗಳ ಮೂಲಕ ಚಿತ್ರರಸಿಕರ ಗಮನ ಸೆಳೆದಿದ್ದರು.

ಪುಟ್ಟಣ್ಣ ಕಣಗಾಲ್’ ಪ್ರಶಸ್ತಿ[ಬದಲಾಯಿಸಿ]

 • 'ಪುಟ್ಟಣ್ಣ ಕಣಗಾಲ್ ಪ್ರಶಸ್ತಿ'ಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ‘ಡಾ. ವಿಷ್ಣುವರ್ಧನ್ ಪ್ರಶಸ್ತಿ’ಗೆ ಸಂಗೀತ ನಿರ್ದೇಶಕ ರಾಜನ್ ಅವರು ಭಾಜನರಾಗಿದ್ದಾರೆ.
 • ಈ ಮೇಲಿನ ಪ್ರಶಸ್ತಿಯು ತಲಾ ಎರಡು ಲಕ್ಷ ರೂಪಾಯಿ ನಗದು ಮತ್ತು ಐವತ್ತು ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.

[೨೭]

ಜೀವಮಾನದ ಸಾಧನೆಯ ಪ್ರಶಸ್ತಿ[ಬದಲಾಯಿಸಿ]

 • ಭಾರತೀಯ ಗಣಿ ಎಂಜಿನಿಯರ್‌ಗಳ ಸಂಘಟನೆಯ ಆಶ್ರಯದಲ್ಲಿ ಶನಿವಾರ ಖನಿಜ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂಎಸ್‌ಪಿಎಲ್‌ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕ ಮೆಡಾ ವೆಂಕಟಯ್ಯ ಅವರಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ನಿಲಯ ಮಿತಾಶ್ ಅವರು ಜೀವಮಾನದ ಸಾಧನೆಯ ಪ್ರಶಸ್ತಿ ಪ್ರದಾನ ಮಾಡಿದರು. (ಭಾರತೀಯ ಗಣಿ ಇಲಾಖೆಯ ನಿಯಂತ್ರಕ ಎಸ್‌.ತಿಯು, ಸಂಘಟನೆಯ ಬೆಂಗಳೂರು ವಿಭಾಗದ ಅಧ್ಯಕ್ಷ ಆರ್‌.ಎಚ್‌.ಸಾವ್ಕರ್‌, ಎಂ.ಇ.ಎ.ಐ ಅಧ್ಯಕ್ಷ ಟಿ.ವಿಕ್ಟರ್‌ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ)[೨೮]

ಸರ್ಕಾರಿ ಶಾಲೆಗಳ ೩೦ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ[ಬದಲಾಯಿಸಿ]

 • ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ ವಿವಿಧ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ೩೦ ಶಿಕ್ಷಕರಿಗೆ ರಾಜ್ಯ ಸರ್ಕಾರ ೨೦೧೬-೧೭ನೇ ಸಾಲಿನ "ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ' ಲಭಿಸಿದೆ. ೨೦ ಪ್ರಾಥಮಿಕ ಮತ್ತು ೧೦ ಪ್ರೌಢ ಶಾಲಾ ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇವರಿಗೆ ಸೆ.5ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರು[ಬದಲಾಯಿಸಿ]

 • ಶಿವಮೊಗ್ಗ ಜಿಲ್ಲೆ ಹಳ್ಳಿàಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್‌. ಕೂಬಾ ನಾಯಕ್‌, ಬೆಂಗಳೂರಿನ ಅರೇಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಸ್‌.ಅನಂತಲಕ್ಷ್ಮಿ, ದೇವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎನ್‌.ಶಿವಕುಮಾರ್‌, ತಿಂಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್‌.ಎ.ಲಕ್ಷ್ಮೀಕುಮಾರ್‌, ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಗೋಪಾಲಕೃಷ್ಣ. ಉಡುಪಿ ಜಿಲ್ಲೆ ಕೂಡಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಕೃಷ್ಣ ಮೊಯ್ಲಿ, ದಕ್ಷಿಣ ಕನ್ನಡ ಜಿಲ್ಲೆ ಮೊಳಂತಿಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಚ್‌.ಸಂಜೀವ್‌, ಕೊಡಗು ಜಿಲ್ಲೆ ಚಿನ್ನನ ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಬಿ.ಬಿ.ಜಾಜಿ, ಚಿಕ್ಕಮಗಳೂರು ಜಿಲ್ಲೆ ಕಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎನ್‌.ಪಿ.ಸುಕೇಶ, ಚಾಮರಾಜನಗರ ಜಿಲ್ಲೆ ಹನೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಭಾಗ್ಯರೇಖ. ಉತ್ತರ ಕನ್ನಡ ಜಿಲ್ಲೆ ಮಂಕಿಮಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಥೊಮಸ್‌ ತೊಮ್ಮೆ ಹೊರ್ಟಾ, ಬಾಗಲಕೋಟೆ ಜಿಲ್ಲೆ ಹೊಸೂರಿನ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮುತ್ತಯ್ಯ ಅಂದಯ್ಯ ಘಂಟಿ, ಚಿಕ್ಕೋಡಿಯ ಮೂಡಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಧ್ಯಾಯ ಬಿ.ಎಸ್‌.ನಂದೆಪ್ಪನವರ, ಗದಗ ಜಿಲ್ಲೆ ಸೂಡಿ ಬಾಲಕರ ಸರ್ಕಾರಿ ಮಾದರಿ ಕೇಂದ್ರ ಶಾಲೆ ಶಿಕ್ಷಕ ಅಶೋಕ ರಂಗಪ್ಪ ಉಂಡಿ, ಧಾರವಾಡ ಜಿಲ್ಲೆ ಮದಾರಮಡ್ಡಿಯ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಪದವೀಧರೇತರ ಮುಖ್ಯೋಪಾಧ್ಯಾಯ ವಿಜಯ ರುದ್ರಪ್ಪ ಮೆಳವಂಕಿ. ಯಾದಗಿರಿ ಜಿಲ್ಲೆ ಸ್ಟೇಷನ್‌ ಬಜಾರ್‌ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶಿಕ್ಷಕ ಮಲ್ಲಿಕಾರ್ಜುನ ಬಳೆ, ಬಳ್ಳಾರಿ ಜಿಲ್ಲೆ ಗೊರವಿನ ಗುಡ್ಡ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಹನುಮಂತಪ್ಪ ದ್ಯಾಮಪ್ಪ ಜಗೀನ, ಬೀದರ್‌ ಜಿಲ್ಲೆ ಚಂಗಲೇರಾ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಲವಂತ ರೆಡ್ಡಿ, ರಾಯಚೂರು ಜಿಲ್ಲೆ ಚಿಕ್ಕಕೋಟೆ°ಕಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಮಾಧುರಿ ಮುವ್ವಾ, ಕುಲಬುರಗಿ ಜಿಲ್ಲೆ ಮದರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಹ್ಮದ ನೂರುದ್ದೀನ್‌.

ಪ್ರೌಢಶಾಲಾ ಶಿಕ್ಷಕರು[ಬದಲಾಯಿಸಿ]

 • ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಶ್ರೀರಾಮಕೃಷ್ಣ ಪ್ರೌಢಶಾಲೆ ಶಿಕ್ಷಕಿ ಕೆ.ವಸಂತಿ, ಕಲಬುರಗಿ ಜಿಲ್ಲೆ ಚಿಂಚನಸೂರಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಆರ್‌.ಟಿ.ಜಗದೀಶ್ವರಯ್ಯ, ಉಡುಪಿ ಜಿಲ್ಲೆ ಎರ್ಮಾಳು ಬಡಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಸಂಪತ್‌ ಕುಮಾರ್‌ ಪಾಂಗಾಳ, ಕೊಪ್ಪಳ ಜಿಲ್ಲೆ ಕೊರಡಕೇರಾ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ರಾಮೇಶ್ವರ ಡಾಣಿ, ತುಮಕೂರು ಜಿಲ್ಲೆ ವಿನೋಬ ನಗರ ಸಿದ್ಧಾರ್ಥ ನಿವಾಸ ಪ್ರೌಢಶಾಲೆ ಶಿಕ್ಷಕ ಎಂ.ವಿ.ನಂಜಪ್ಪ, ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಶಿಕ್ಷಕ ಚನ್ನಬಸಪ್ಪ ಮಲ್ಲಪ್ಪ ಕುರುಬರ, ಬೀದರ್‌ ಜಿಲ್ಲೆ ವಲಖೀಂಡಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ರಾಜು ಸಿಂಗ್‌ ಎಚ್‌.ರಾಜಪೂತ, ಉತ್ತರ ಕನ್ನಡ ಜಿಲ್ಲೆ ವಂದಾನೆ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಶಿವಾನಂದ ಬೊಮ್ಮಯ್ಯ ನಾಯ್ಕ, ದಾವಣಗೆರೆ ಜಿಲ್ಲೆ ನಿಟ್ಟೂರು ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಪಿ.ನಾಗರಾಜ, ಬೆಂ.ಗ್ರಾಮಾಂತರ ಜಿಲ್ಲೆ ದೊಡ್ಡಗಟ್ಟಿಗನಬ್ಬೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎಂ.ಲಲಿತಮ್ಮ ಅವರುಗಳು ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.[೨೯]

ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೫ರ ಗೌರವ ಪ್ರಶಸ್ತಿಗಳು[ಬದಲಾಯಿಸಿ]

 • ನೇಮಿಚಂದ್ರ, ಶಿವಪ್ರಕಾಶ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ[೬]
 • ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೫ರ ಗೌರವ ಪ್ರಶಸ್ತಿಗೆ ಡಾ. ಕೃಷ್ಣಮೂರ್ತಿ ಹನೂರು, ಡಾ. ಎಚ್.ಎಸ್‌. ಶಿವಪ್ರಕಾಶ್‌ ಸೇರಿ ಐವರು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು.

ಡಾ. ಎಲ್‌. ಹನುಮಂತಯ್ಯ, ನೇಮಿಚಂದ್ರ ಮತ್ತು ಡಾ.ಎಚ್‌. ನಾಗವೇಣಿ ಅವರಿಗೂ ಗೌರವ ಪ್ರಶಸ್ತಿ ಸಂದಿದೆ.

 • ಪ್ರಶಸ್ತಿಯು ರೂ.೫೦ ಸಾವಿರ ನಗದು ಮತ್ತು ಫಲಕ ಒಳಗೊಂಡಿದ್ದು, ಅಕ್ಟೋಬರ್‌ ಅಂತ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದೂ ಅವರು ತಿಳಿಸಿದರು.
 • ೨೦೧೪ರಲ್ಲಿ ಪ್ರಕಟವಾದ ವಿವಿಧ ಪ್ರಕಾರದ ೧೭ ಕೃತಿಗಳನ್ನು ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಕೃತಿಗಳ ಲೇಖಕರಿಗೆ ತಲಾ ₹ ೨೫ ಸಾವಿರ ನಗದು ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದರು. ಕೆಲವು ಸಾಹಿತ್ಯ ಪ್ರಕಾರಗಳಿಗೆ ದಾನಿಗಳು ಸ್ಥಾಪಿಸಿರುವ ೬ ದತ್ತಿ ನಿಧಿ ಬಹುಮಾನಕ್ಕೆ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಚದುರಂಗ ದತ್ತಿನಿಧಿ ಬಹುಮಾನಕ್ಕೆ ₹ ೧೫ ಸಾವಿರ ಮತ್ತು ಉಳಿದ ೫ ದತ್ತಿನಿಧಿ ಬಹುಮಾನಕ್ಕೆ ತಲಾ ₹ ೫ ಸಾವಿರ ನೀಡಲಾಗುವುದು ಎಂದು ವಿವರಿಸಿದರು.
 • ಮುಖ್ಯಾಂಶಗಳು
 • ಐವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿ
 • ಫಲಕ ಹಾಗೂ ರೂ. ೫೦ ಸಾವಿರ ನಗದು

-ಸಾಹಿತ್ಯ ಅಕಾಡೆಮಿ ೨೦೧೫ರ ಗೌರವ *ಪ್ರಶಸ್ತಿ ಪ್ರಕಟ;ಪ್ರಜಾವಾಣಿ; ೨೭ ಸೆಪ್ಟೇಂಬರ್, ‌೨೦೧೬:[೩೦]

೨೦೧೪ರ ವಿವಿಧ ಬಹುಮಾನಗಳ ವಿವರ[ಬದಲಾಯಿಸಿ]

ಪ್ರಕಾರ ನಿಧಿ-ಬಹುಮಾನ ಕೃತಿಯ ಹೆಸರು ಲೇಖಕರು
ಕಾದಂಬರಿ ಚದುರಂಗ ದತ್ತಿನಿಧಿ ಉರಿವ ಜಲ. ವೈ.ಎಸ್.ಹರಗಿ.
ಜೀವನ ಚರಿತ್ರೆ ಸಿಂಪಿ ಲಿಂಗಣ್ಣದತ್ತಿನಿಧಿ ಬಿಳಿಸಾಹೇಬನ ಭಾರತ ಎನ್.ಜಗದೀಶ್ ಕೊಪ್ಪ
ಸಾಹಿತ್ಯ ವಿಮರ್ಶೆ ಪಿ.ಶ್ರೀನಿವಾಸರಾವ್ ದತ್ತಿನಿಧಿ ಜಿಮ್ ಕಾರ್ಬೆಟ್ಟ್ನ ಜೀವನ ಗಾಥೆ. ರಾಮಲಿಂಗಪ್ಪ ಟಿ ಬೇಗೂರು..
ಅನುವಾದ (ಸೃಜನಶೀಲ) ಎಲ್.ಗುಂಡಪ್ಪ &ಶಾರದಮ್ಮ ದತ್ತಿನಿಧಿ ಮಹಿಳೆ ಚರಿತ್ರೆ -ಪುರಾಣ ಬಸು ಬೇವಿನ ಗಿಡದ
ಲೇಖಕರ ಮೊದಲ ಸ್ವತಂತ್ರ ಕೃತಿ ಮಧುರ ಚೆನ್ನ ದತ್ತಿ ನಿಧಿ, ಸಮಕಾಲೀನ ಭಾರತೀಯ ಸಣ್ಣಕಥೆಗಳು ಪದ್ಮನಾಭ ಭಟ್ಟ ಶೇವ್ಯಾರ
ಕನ್ನಡದಿಂದ ಇಂಗ್ಲಿಷ್ ಗೆ ಅನುವಾದ ಅಮೇರಿಕಾದ ದತ್ತಿ ನಿಧಿ ಮೂಲ: ಕಂಟೆಂಪರರಿ ಇಂಡಿಯನ್ ಶಾರ್ಟ್ ಸ್ಟೋರೀಸ್ ಡಾ. .ಎಚ್.ಎಸ್.ಎಂ.ಪ್ರಕಾಶ್

[೩೧]

ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ೨೦೧೬[ಬದಲಾಯಿಸಿ]

 • ಹಾವೇರಿ ಜಿಲ್ಲೆಯ ಹೊಸರಿತ್ತಿ ‘ಹಳ್ಳಿಕೇರಿ’ ಅನೇಕ ಸ್ವಾತಂತ್ರ್ಯ ಯೋಧರನ್ನು ದೇಶಕ್ಕೆ ಕೊಟ್ಟಿದೆ. ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನ­ರಾಗಿರುವ ಚನ್ನಮ್ಮ ಹಳ್ಳಿಕೇರಿ ಇದೇ ಊರಿನವರು. [https://web.archive.org/web/20161002124134/http://www.prajavani.net/news/article/2016/10/02/442159.html Archived 2016-10-02 ವೇಬ್ಯಾಕ್ ಮೆಷಿನ್ ನಲ್ಲಿ.]
 • ಪ್ರಶಸ್ತಿ ರೂ.೫ ಲಕ್ಷ ಮತ್ತು ಫಲಕ ಒಳಗೊಂಡಿದೆ.೨-೧೦-೨೦೧೬ ಸಂಜೆ ೬ ಗಂ.ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ. [೩೨]

೨೦೧೫ ಮತ್ತು ೨೦೧೬ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ[ಬದಲಾಯಿಸಿ]

 • ೨೫ ಅಕ್ಟೋಬರ್, ‌೨೦೧೬
 • ರಂಗಭೂಮಿಗೆ ಸಲ್ಲಿಸಿರುವ ಸೇವೆ ಪರಿಗಣಿಸಿ ದಾವಣಗೆರೆಯ ಮಾನೂಬಾಯಿ ನಾಕೋಡ ಮತ್ತು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಕ್ರಮವಾಗಿ ೨೦೧೫ ಮತ್ತು ೨೦೧೬ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
 • ‘ರಂಗ ಸಾಧನೆ’ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿ ಫಲಕ ಮತ್ತು ತಲಾ ₹೫೦ ಸಾವಿರ ಒಳಗೊಂಡಿದೆ.
 • ರಂಗಭೂಮಿಯ ವಾರ್ಷಿಕ ಪ್ರಶಸ್ತಿಗಳು:

ರಂಗಭೂಮಿಯ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ೨೦೧೫ರಲ್ಲಿ ೧೫ ಹಾಗೂ ೨೦೧೬ರಲ್ಲಿ ೨೫ ರಂಗ ಕರ್ಮಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಾರ್ಷಿಕ ಪ್ರಶಸ್ತಿಯು ₹೨೫ ಸಾವಿರ ನಗದು ಒಳಗೊಂಡಿದೆ.

 • ರಂಗಭೂಮಿ ಪುಸ್ತಕ ಪುರಸ್ಕಾರ: ಪ್ರಕಾಶ ಗರುಡ ಅವರ ‘ಕಂಪನಿ ನಾಟಕ ಅರ್ಥಾತ್‌ ವೃತ್ತಿ ರಂಗಭೂಮಿ’ ಹಾಗೂ ಗೋಪಾಲ ವಾಜಪೇಯಿ ಅವರ ‘ರಂಗದ ಒಳಗೆ ಮತ್ತು ಹೊರಗೆ’ ನಾಟಕ ಕೃತಿಗಳು ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿವೆ.

[೩೩]

ಮನ್ವಂತರಕ್ಕೆ ಚಡಗ ಸ್ಮಾರಕ ಪ್ರಶಸ್ತಿ[ಬದಲಾಯಿಸಿ]

 • ೨೬ ಅಕ್ಟೋಬರ್, ‌೨೦೧೬
 • ಉಡುಪಿ ಜಿಲ್ಲೆ ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ದಿ. ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ಕೊಡುವ ಚಡಗ ಸ್ಮಾರಕ ೨೦೧೬ನೇ ಸಾಲಿನ ಶ್ರೇಷ್ಠ ಕಾದಂಬರಿ ಪ್ರಶಸ್ತಿಗೆ ಮೈಸೂರಿನ ಲೇಖಕಿ ವಸುಮತಿ ಉಡುಪ ಅವರು ಬರೆದ ‘ಮನ್ವಂತರ’ ಕಾದಂಬರಿ ಆಯ್ಕೆಯಾಗಿದೆ. ಪ್ರಶಸ್ತಿಯು ₹ ೧೦ ಸಾವಿರ, ಶಾಲು, ಪ್ರಶಸ್ತಿ ಫಲಕ, ಸ್ಮರಣಿಕೆಯನ್ನು ಒಳಗೊಂಡಿದೆ.[೩೪]

‘ಗಳಗನಾಥ’, ‘ರಾಜಪುರೋಹಿತ’ ಪ್ರಶಸ್ತಿ[ಬದಲಾಯಿಸಿ]

 • ೨೬ ಅಕ್ಟೋಬರ್, ‌೨೦೧೬
 • ಹಾವೇರಿ ಜಿಲ್ಲೆ; ಶ್ರೀ ಗಳಗನಾಥ ಮತ್ತು ನಾ. ಶ್ರೀ ರಾಜಪುರೋಹಿತ ಪ್ರತಿಷ್ಠಾನದ ಈ ಸಾಲಿನ ‘ಶ್ರೀ ಗಳಗನಾಥ’ ಪ್ರಶಸ್ತಿಗೆ ಕಾರ್ಕಳ ತಾಲ್ಲೂಕಿನ ಕಾಂತಾವರದ ಡಾ. ನಾ. ಮೊಗಸಾಲೆ ಹಾಗೂ ‘ನಾ.ಶ್ರೀ.ರಾಜಪುರೋಹಿತ’ ಪ್ರಶಸ್ತಿಗೆ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀನಿವಾಸ ವಿ. ಪಾಡಿಗಾರ ಆಯ್ಕೆಯಾಗಿದ್ದಾರೆ. ‘ಪ್ರತಿಷ್ಠಾನವು ಇದೇ ಮೊದಲ ಬಾರಿ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗಳು ತಲಾ ರೂ. ೫೦ ಸಾವಿರ ನಗದು ಹಾಗೂ ಫಲಕಗಳನ್ನು ಒಳಗೊಂಡಿವೆ. ಕನ್ನಡ ಸಾಹಿತ್ಯ, ಇತಿಹಾಸ ಮತ್ತು ಸಂಶೋಧನೆಯಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ನವೆಂಬರ್‌ ೨೭ ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. [೩೫]

ಮುದ್ದಣ ಕಾವ್ಯ ಪ್ರಶಸ್ತಿ[ಬದಲಾಯಿಸಿ]

 • ೨೯ ಅಕ್ಟೋಬರ್, ‌೨೦೧೬
 • ಮೂಡುಬಿದಿರೆಯ ಕಾಂತಾವರ ಕನ್ನಡ ಸಂಘದ ಪಟೇಲ್‌ ಪುನರೂರು ವಾಸುದೇವ ರಾವ್ ಟ್ರಸ್ಟ್‌ನ ಪ್ರಾಯೋಜಕತ್ವದ ೨೦೧೬ ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಗೆ ಪ್ರೊ. ಟಿ.ಯಲ್ಲಪ್ಪ ಆಯ್ಕೆಯಾಗಿದ್ದಾರೆ. ಯಲ್ಲಪ್ಪ ಅವರ ‘ಕಣ್ಣ ಪಾಪೆಯ ಬೆಳಕು’ ಎಂಬ ಕವನ ಸಂಕಲನ ಹಸ್ತಪ್ರತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಅವರು ತಿಳಿಸಿದ್ದಾರೆ. ಪ್ರಶಸ್ತಿ ರೂ.೧೦ ಸಾವಿರ ಗೌರವ ಸಂಭಾವನೆ ಮತ್ತು ಸನ್ಮಾನವನ್ನು ಒಳಗೊಂಡಿದೆ. ೨೦೧೭ರ ಫೆಬ್ರುವರಿ ೧೨ರಂದು ಕಾಂತಾವರದ 'ಕನ್ನಡ ಭವನ'ದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.[೩೬]

ಆಧಾರ[ಬದಲಾಯಿಸಿ]

೧.www.prajavani.net/article/ಸನದಿಗೆ-ಪಂಪ-ಪ್ರಶಸ್ತಿ-೨೭-೨-೨೦೧೬[೭] Archived 2016-02-28 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖ[ಬದಲಾಯಿಸಿ]

 1. "ಆರ್ಕೈವ್ ನಕಲು". Archived from the original on 2017-06-29. Retrieved 2017-06-26.
 2. ಪ್ರಶಸ್ತಿಗಳನ್ನು ಡಿಸೆಂಬರ್ ತಿಂಗಳಲ್ಲೇ ನೀಡಲಾಗುವುದು[ಶಾಶ್ವತವಾಗಿ ಮಡಿದ ಕೊಂಡಿ]
 3. "'ಅಂದು ಭಿಕ್ಷೆಗೆ ಬಂದಿದ್ದೆ, ಇಂದು ಪ್ರಶಸ್ತಿಗೆ ಬಂದೆ'\4 May, 2017". Archived from the original on 2017-05-03. Retrieved 2017-05-04.
 4. 158 ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ;ಪ್ರಜಾವಾಣಿ ವಾರ್ತೆ;11 Apr, 2017
 5. "ಆರ್ಕೈವ್ ನಕಲು". Archived from the original on 2016-02-28. Retrieved 2016-03-05.
 6. 14 ಕಲಾವಿದರಿಗೆ ಕಲಾಸಂಕ್ರಾಂತಿ ಪುರಸ್ಕಾರ;ಪ್ರಜಾವಾಣಿ ವಾರ್ತೆ;21 Mar, 2017
 7. ಬಾಲಕಿಗೆ ಶೌರ್ಯ ಪ್ರಶಸ್ತಿ;15 Dec, 2016[ಶಾಶ್ವತವಾಗಿ ಮಡಿದ ಕೊಂಡಿ]
 8. ಪ್ರಶಸ್ತಿ ಪ್ರದಾನ;16 Nov, 2016[ಶಾಶ್ವತವಾಗಿ ಮಡಿದ ಕೊಂಡಿ]
 9. "ಆರ್ಕೈವ್ ನಕಲು". Archived from the original on 2016-11-16. Retrieved 2016-11-17.
 10. "2016ರ ಪ್ರಶಸ್ತಿ;ಮೂವರು ಹಿರಿಯ ಕಲಾವಿದರಿಗೆ ಲಲಿತಕಲಾ ;ಅಕಾಡೆಮಿ ಗೌರವ;ಪ್ರಜಾವಾಣಿ ವಾರ್ತೆ;10 Nov, 2016". Archived from the original on 2016-11-10. Retrieved 2016-11-10.
 11. ಡಾ.ರಾಜೂರ್‌ಗೆ ಕಲಬುರ್ಗಿ ಪ್ರಶಸ್ತಿ;ಪ್ರಜಾವಾಣಿ ವಾರ್ತೆ;10 Nov, 2016[ಶಾಶ್ವತವಾಗಿ ಮಡಿದ ಕೊಂಡಿ]
 12. "ಸುರೇಶ್ ತಲ್ವಾಲಕರ್‌ಗೆ ಚೌಡಯ್ಯ ಪ್ರಶಸ್ತಿ;ಪ್ರಜಾವಾಣಿ ವಾರ್ತೆ10 Nov, 2016". Archived from the original on 2016-11-10. Retrieved 2016-11-10.
 13. ದೇವನೂರ ಮಹಾದೇವಗೆ ಕುವೆಂಪು ಪ್ರಶಸ್ತಿ
 14. http://kannada.webdunia.com/sports/othersports/sportsnews/1208/28/1120828034_1.htm
 15. "ಆರ್ಕೈವ್ ನಕಲು". Archived from the original on 2013-09-01. Retrieved 2016-05-11.
 16. [https://web.archive.org/web/20160513010308/http://www.udayavani.com/kannada/news/state-news/140656/sahithya-academy-award#WxZs0dhuhexPuie5.99 Archived 2016-05-13 ವೇಬ್ಯಾಕ್ ಮೆಷಿನ್ ನಲ್ಲಿ.]
 17. http://m.prajavani.net/article/2016_04_29/405660[ಶಾಶ್ವತವಾಗಿ ಮಡಿದ ಕೊಂಡಿ]
 18. http://kannada.webdunia.com/article/kannada-cinema-news/state-cinema-prizes-announced-116021300014_1.html
 19. ದಿ.14/04/2016 :w:prajavani.net/article/ಡಾಟಿವಿ-ವೆಂಕಟಾಚಲ-ಶಾಸ್ತ್ರಿಗೆ-ನೃಪತುಂಗ-ಪ್ರಶಸ್ತಿ
 20. [೧]
 21. [೨]
 22. [೩]
 23. [೪]
 24. ೧೩-೪-೨೦೧೬:http://www.prajavani.net/article/ಆಮೂರರಿಗೆ-ವಿಮರ್ಶಾ-ಪ್ರಶಸ್ತಿ
 25. w:prajavani.net/article/ಡಾಸಿಎನ್ಆರ್‌-ಅಣತಿ-ಅವರಿಗೆ-ಪ್ರಶಸ್ತಿ-ಪ್ರದಾನ
 26. May 10, 2016,ಒನ್ ಇಂಡಿಯಾhtml[೫]
 27. "ರಾಜ್ಯಹಿರಿಯ ನಟಿ ಹರಿಣಿಗೆ ರಾಜ್‌ಕುಮಾರ್‌ ಪ್ರಶಸ್ತಿ:30/7/2016". Archived from the original on 2020-12-03. Retrieved 2016-07-30.
 28. ಪ್ರಶಸ್ತಿ ಪ್ರದಾನ:07/31/2016
 29. "ಉದಯವಾಣಿ, Sep 03, 2016". Archived from the original on ಸೆಪ್ಟೆಂಬರ್ 4, 2016. Retrieved ಸೆಪ್ಟೆಂಬರ್ 3, 2016.
 30. [https://web.archive.org/web/20160927140153/http://www.prajavani.net/news/article/2016/09/27/440789.html Archived 2016-09-27 ವೇಬ್ಯಾಕ್ ಮೆಷಿನ್ ನಲ್ಲಿ.]
 31. "2014ರ ವಿವಿಧ ಬಹುಮಾನಗಳ". Archived from the original on 2016-09-27. Retrieved 2016-09-27.
 32. (ಕರ್ನಾಟಕ ವಾರ್ತೆ)
 33. 50 ರಂಗಕರ್ಮಿಗಳಿಗೆ ವಾರ್ಷಿಕ ಪ್ರಶಸ್ತಿ
 34. ಚಡಗ ಸ್ಮಾರಕ ಪ್ರಶಸ್ತಿ[ಶಾಶ್ವತವಾಗಿ ಮಡಿದ ಕೊಂಡಿ]
 35. ಗಳಗನಾಥ’-‘ರಾಜಪುರೋಹಿತ’ ಪ್ರಶಸ್ತಿ[ಶಾಶ್ವತವಾಗಿ ಮಡಿದ ಕೊಂಡಿ]
 36. ಮುದ್ದಣ ಕಾವ್ಯ ಪ್ರಶಸ್ತಿ