ವಿಷಯಕ್ಕೆ ಹೋಗು

ಕುಂ.ವೀರಭದ್ರಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಂ. ವೀರಭದ್ರಪ್ಪ

ಕುಂ. ವೀರಭದ್ರಪ್ಪ ಅವರು ಕನ್ನಡದ ಖ್ಯಾತ ಸಾಹಿತಿ. ಅವರ ಅರಮನೆ ಕೃತಿಗೆ ೨೦೦೭ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ.[]

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನಲ್ಲಿ ಅಕ್ಟೋಬರ್ ೧, ೧೯೫೩ರಲ್ಲಿ ಜನನ. ತಂದೆ ಕುಂಬಾರ ಹಾಲಪ್ಪ, ತಾಯಿ ಕೊಟ್ರಮ್ಮ, ಪತ್ನಿ ಅನ್ನಪೂರ್ಣ. ಮಕ್ಕಳು ಪುರೂರವ, ಶಾಲಿವಾಹನ ಮತ್ತು ಪ್ರವರ. ಮೊಮ್ಮಗ ಅಥರ್ವ. ಎಂ ಎ ಪದವೀಧರರು. ಆಂಧ್ರಪ್ರದೇಶದ ಹಳ್ಳಿಗಳಲ್ಲಿ ೩೫ ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವರು. ಗ್ರಾಮೀಣ ಬದುಕಿನ ಸಂವೇದನೆಗಳನ್ನು ತಮ್ಮ ಕೃತಿಗಳಲ್ಲಿ ಸಮರ್ಥವಾಗಿ ಬಳಸಿಕೊಂಡಿರುವ ಬರಹಗಾರ. ಇವರು ಬಳಸುವ ಭಾಷೆಯೂ ಕೂಡ ವಿಶಿಷ್ಟವಾದುದು. ಬಿರುಬಿಸಿಲು ನಾಡಿನ ಬಳ್ಳಾರಿ ಪ್ರದೇಶದ ಗಂಡು ಭಾಷೆಯೇ ಇವರ ಬರಹಕ್ಕೆ ಮತ್ತಷ್ಟು ಶಕ್ತಿ ನೀಡಿವೆ. ಈಗ ತಮ್ಮ ಜನ್ಮಸ್ಥಳವಾದ ಬಳ್ಳಾರಿ ಜಿಲ್ಲೆಯ ಕೊಟ್ಟೂರಲ್ಲಿ ನೆಲಸಿದ್ದಾರೆ.[]

ಕೃತಿಗಳು

[ಬದಲಾಯಿಸಿ]

ಕಾವ್ಯ

[ಬದಲಾಯಿಸಿ]
  • ದಿವಿ ಸೀಮೆಯ ಹಾಡು
  • ನೀನಿಲ್ಲದ ಮನೆ

ಕಥೆ / ಕಥಾ ಸಂಕಲನ

[ಬದಲಾಯಿಸಿ]
  • ನಿಗಿನಿಗಿ ಹಗಲು
  • ಮಣ್ಣೇ ಮೊದಲು
  • ಕೂಳೆ
  • ಬರಿ ಕಥೆಯಲ್ಲೋ ಅಣ್ಣಾ (ಸಮಗ್ರ

ಸಂಕಲನ)[]

  • ಕೂರ್ಮಾವತಾರ
  • ಡೋಮ ಮತ್ತಿತರ ಕಥೆಗಳು
  • ಇನ್ನಾದರೂ ಸಾಯಬೇಕು
  • ಕುಂವೀ ಆಯ್ದ ಕಥೆಗಳು
  • ಭಗವತಿ ಕಾಡು
  • ನಿಜಲಿಂಗ
  • ಅಪೂರ್ವ ಚಿಂತಾಮಣಿ ಕಥೆ
  • ಕರಿವೇಮಲ
  • ಸುಶೀಲೆ ಎಂಬ ನಾಯಿಯೂ ವಾಗಿಲಿ ಎಂಬ ಗ್ರಾಮವೂ
  • ಎಂಟರ್ ದಿ ಡ್ರಾಗನ್
  • ಕುಂವೀ ಬರೆದ ಕಥೆಗಳು
  • ಸೂರ್ಯನ ಕೊಡೆ

ಕಾದಂಬರಿ

[ಬದಲಾಯಿಸಿ]
  • ಕಪ್ಪು
  • ಪಕ್ಷಿಗಳು
  • ಹನುಮ
  • ಆಸ್ತಿ
  • ಕಿಲುಬು
  • ಬೇಲಿ ಮತ್ತು ಹೊಲ
  • ಬೇಲಿಯ ಹೂಗಳು
  • ಹೇಮರೆಡ್ಡಿ ಮಲ್ಲಮ್ಮನ ಕಥೆಯು
  • ಕೊಟ್ರ ಹೈಸ್ಕೂಲಿಗೆ ಸೇರಿದ್ದು
  • ಯಾಪಿಲ್ಲು
  • ಶಾಮಣ್ಣ
  • ಕೆಂಡದ ಮಳೆ
  • ಪ್ರೇಮವೆಂಬ ಹೊನ್ನುಡಿ
  • ಬೇಟೆ
  • ಪ್ರತಿಧ್ವನಿ
  • ಏಕಾಂಬರ
  • ಅರಮನೆ
  • ಆರೋಹಣ
  • ನಿಜಲಿಂಗ (ಕಾದಂಬರಿ)
  • ಶ್ವಾನಾವಲಂಬನಕರಿ
  • ಕತ್ತೆಗೊಂದು ಕಾಲ
  • ಜೈ ಭಜರಂಗಬಲಿ
  • ಸುಪಾರಿ
  • ಎನ್ಕೌಂಟರ್
  • ಎಲ್ಲೋಜೋಗಪ್ಪ ನಿನ್ನರಮನೆ
  • ವಿಶ್ವಸುಂದರಿ
  • ಮಾಕನಡಕು

ಜೀವನ ಚರಿತ್ರೆಗಳು

[ಬದಲಾಯಿಸಿ]
  • ಚಾಪಲಿನ್
  • ರಾಹುಲ ಸಾಂಕೃತ್ಯಾಯನ
  • ನೇತಾಜಿ ಸುಭಾಸ್ಚಂದ್ರಬೋಸ್
  • ಸುಭದ್ರಮ್ಮ ಮನ್ಸೂರ್
  • ಶ್ರೀಕೃಷ್ಣದೇವರಾಯ
  • ರಾಯಲ ಸೀಮಾ

ಆತ್ಮ ಚರಿತ್ರೆ

[ಬದಲಾಯಿಸಿ]
  • ಗಾಂಧಿ ಕ್ಲಾಸು

ಅನುವಾದ

[ಬದಲಾಯಿಸಿ]
  • ಚಿನ್ನದತೆನೆ
  • ತೆಲುಗು ಕಥೆ
  • ಒಂದು ಪೀಳಿಗೆಯ ತೆಲುಗು ಕಥೆಗಳು
  • ತನ್ನ ಮಾರ್ಗ (ಅಬ್ಬೂರಿ ಛಾಯಾದೇವಿ ಕತೆಗಳು)
  • ಕಾಲಪುರುಷನ ಹೆಜ್ಜೆ ಗುರುತು

ನಾಲ್ಕೂ ಸಂಕಲನಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ, ಇವೊಂದೇ ಅಲ್ಲದೆ ಬೇರೆ ಬೇರೆ ಭಾಷೆಗಳ ಮುನ್ನೂರಕ್ಕೂ ಹೆಚ್ಚು ಕಥೆಗಳನ್ನು ಕುಂವೀ ಕನ್ನಡಕ್ಕೆ ಅನುವಾದಿಸಿರುವರು.

ವಿಮರ್ಶೆ

[ಬದಲಾಯಿಸಿ]
  • ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ

ಸಂಪಾದಿತ

[ಬದಲಾಯಿಸಿ]
  • ಕಥೆಗಳು: ೧೯೮೯

ಪ್ರಶಸ್ತಿಗಳು

[ಬದಲಾಯಿಸಿ]

ಚಲನಚಿತ್ರಗಳು

[ಬದಲಾಯಿಸಿ]
  • ಮನಮೆಚ್ಚಿದ ಹುಡುಗಿ (ಬೇಟೆ ಕಿರು ಕಾದಂಬರಿಯಾಧಾರಿತ)
  • ದೊರೆ (ಬೇಲಿಯ ಹೂಗಳು ಕಾದಂಬರಿಯಾಧಾರಿತ)
  • ಕೊಟ್ರೇಶಿ ಕನಸು (ಇದಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ)
  • ಕೆಂಡದ ಮಳೆ
  • ಕೂರ್ಮಾವತಾರ(ಇದಕ್ಕೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ವೈಯಕ್ತಿಕ ಕಥಾಪ್ರಶಸ್ತಿ ಲಭಿಸಿದೆ.)
  • ಭಗವತಿ ಕಾಡು
  • ಬೇಲಿ ಮತ್ತು ಹೊಲ

ಉಲ್ಲೇಖಗಳು

[ಬದಲಾಯಿಸಿ]
  1. "Kum Veerabhadrappa". Kannada Sahitya Parishat.
  2. "Kum Veerabhadrappa". sallapa.
  3. "Kannada writer Kum Veerbhadrappa returns his Sahitya Akademi award". News18. October 15, 2015.
  4. Khajane, Muralidhara (November 15, 2014). "Award for Kum Veerbhadrappa". The Hindu.
  5. "Kum Veerabhadrappa". kanaja.