ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
(ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇಂದ ಪುನರ್ನಿರ್ದೇಶಿತ)
Jump to navigation
Jump to search
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕನ್ನಡದ ಸಾಹಿತ್ಯ ಕೃತಿಗಳಿಗೆ ನೀಡಲಾಗುವ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಆಗಿದೆ. ಕನ್ನಡ ಸಾಹಿತ್ಯದ ಕವನ, ಕಾದಂಬರಿ, ಸಣ್ಣ ಕಥೆ, ವಿಮರ್ಶೆ, ಪ್ರವಾಸ ಬರವಣಿಗೆ, ಅನುವಾದ, ಮಕ್ಕಳ ಬರವಣಿಗೆ ಮುಂತಾದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಪುಸ್ತಕಗಳಿಗೆ 1965ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ | |
---|---|
ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಉನ್ನತ ಸಾಹಿತ್ಯ ಪ್ರಶಸ್ತಿ | |
ಪ್ರವರ್ತಕ | ಕರ್ನಾಟಕ ಸಾಹಿತ್ಯ ಅಕಾಡೆಮಿ |
ಸಂಭಾವನೆ | ₹ 50,000 (ಗೌರವ ಪ್ರಶಸ್ತಿ) ₹ 25,000 (ಪುಸ್ತಕ ಬಹುಮಾನ) |
ಅಧಿಕೃತ ಜಾಲತಾಣ | ಕರ್ನಾಟಕ ಸಾಹಿತ್ಯ ಅಕಾಡೆಮಿ |
ಪ್ರಶಸ್ತಿಯ ವಿವರ[ಬದಲಾಯಿಸಿ]
1965ನೇ ಸಾಲಿನಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಗಳನ್ನು ನೀಡಲಾಯಿತು. ಆರಂಭದಲ್ಲಿ ಕೇವಲ ನಾಲ್ಕೈದು ವಿಭಾಗಗಳಲ್ಲಿ ನೀಡಲಾಗುತ್ತಿದ್ದ ಈ ಪ್ರಶಸ್ತಿಯನ್ನು ಈಗ 21 ವಿಭಾಗಗಳಿಗೆ ವಿಸ್ತರಿಸಲಾಗಿದೆ. ಪುಸ್ತಕ ಬಹುಮಾನ, ದತ್ತಿನಿಧಿ ಪ್ರಶಸ್ತಿ ಮತ್ತು ಗೌರವ ಪ್ರಶಸ್ತಿ ಎಂದು ಮೂರು ರೀತಿಯ ಗೌರವಗಳನ್ನು ಸಾಹಿತ್ಯ ಅಕಾಡೆಮಿ ನೀಡುತ್ತಿದೆ. ಪ್ರಶಸ್ತಿ ನೀಡಲಾಗುವ 21 ವಿಭಾಗಗಳು ಈ ಕೆಳಗಿನಂತಿವೆ:
ಕ್ರ.ಸಂ. | ವಿಭಾಗ |
---|---|
1 | ಕಾವ್ಯ (ವಚನಗಳು ಮತ್ತು ಹನಿಗವನಗಳು ಸೇರಿ) |
2 | ನವಕವಿಗಳ ಪ್ರಥಮ ಪ್ರಕಟಿತ ಕವನ ಸಂಕಲನ |
3 | ನವಕವಿಗಳ ಪ್ರಥಮ ಅಪ್ರಕಟಿತ ಕವನ ಸಂಕಲನ / ಹಸ್ತಪ್ರತಿ |
4 | ಕಾದಂಬರಿ |
5 | ಸಣ್ಣಕತೆ |
6 | ನಾಟಕ |
7 | ಲಲಿತ ಪ್ರಬಂಧ (ಹರಟೆ ಮತ್ತು ವಿನೋದ ಸಾಹಿತ್ಯ ಸೇರಿದಂತೆ) |
8 | ಪ್ರವಾಸ ಸಾಹಿತ್ಯ |
9 | ಜೀವನ ಚರಿತ್ರೆ / ಆತ್ಮಕಥೆ |
10 | ಸಾಹಿತ್ಯ ವಿಮರ್ಶೆ (ಸಾಹಿತ್ಯ ಚರಿತ್ರೆ, ಸಾಹಿತ್ಯ ತತ್ವ ಮತ್ತು ಸೌಂದರ್ಯ ಮೀಮಾಂಸೆ ಸೇರಿದಂತೆ) |
11 | ಗ್ರಂಥ ಸಂಪಾದನೆ (ಪ್ರಾಚೀನ ಕೃತಿಗಳ ಸಂಪಾದನೆ) |
12 | ಮಕ್ಕಳ ಸಾಹಿತ್ಯ |
13 | ವಿಜ್ಞಾನ ಸಾಹಿತ್ಯ (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಇಂಜಿನಿಯರಿಂಗ್, ವೈದ್ಯಶಾಸ್ತ್ರ, ಭೂಶಾಸ್ತ್ರ, ಖಗೋಳಶಾಸ್ತ್ರ, ಗೃಹವಿಜ್ಞಾನ, ಪರಿಸರ) |
14 | ಮಾನವಿಕ (ಜನಪದ, ಇತಿಹಾಸ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನಃಶಾಸ್ತ್ರ, ಭಾಷಾಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು, ಗ್ರಂಥಾಲಯ ವಿಜ್ಞಾನ, ಸಮೂಹ ಸಂವಹನ, ಧಾರ್ಮಿಕ, ದಾರ್ಶನಿಕ) |
15 | ಸಂಶೋಧನೆ (ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳಿಗೆ ಸಂಬಂಧಿಸಿದ ಸಂಶೋಧನೆ) |
16 | ವೈಚಾರಿಕ / ಅಂಕಣ ಬರಹ |
17 | ಅನುವಾದ-1 (ಅನ್ಯ ಭಾರತೀಯ ಭಾಷೆಯಿಂದ ಕನ್ನಡಕ್ಕೆ) |
18 | ಅನುವಾದ-2 (ಕನ್ನಡದಿಂದ ಅನ್ಯಭಾಷೆಗೆ) |
19 | ಲೇಖಕರ ಮೊದಲ ಸ್ವತಂತ್ರ ಕೃತಿ |
20 | ಅನುವಾದ-3 (ಕನ್ನಡದಿಂದ ಇಂಗ್ಲಿಷ್‌ಗೆ) |
21 | ದಾಸ ಸಾಹಿತ್ಯದ ಸೃಜನಶೀಲ / ಸೃಜನೇತರ ಕೃತಿ |
ದಶಕವಾರು ಪ್ರಶಸ್ತಿಗಳ ಪಟ್ಟಿ[ಬದಲಾಯಿಸಿ]
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ೧೯೬೫–೧೯೭೦
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ೧೯೭೧–೧೯೮೦
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ೧೯೮೧–೧೯೯೦
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ೧೯೯೧–೨೦೦೦
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ೨೦೦೧–೨೦೧೦
- ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ೨೦೧೧–೨೦೨೦