ವಿಷಯಕ್ಕೆ ಹೋಗು

ಕೂಡ್ಲಿಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೂಡ್ಲಿಗಿ
ಕೂಡ್ಲಿಗಿ
city
Population
 (2001)
 • Total೨೧,೮೫೫

ಕೂಡ್ಲಿಗಿ ಕರ್ನಾಟಕವಿಜಯನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬೆಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ ಕಂಡುಬರುವ ಕೂಡ್ಲಿಗಿ ಪಟ್ಟಣ ಧಾರ್ಮಿಕ, ಐತಿಹಾಸಿಕ, ರಾಜಕೀಯವಾಗಿ ಪ್ರಸಿದ್ಧಿ ಪಡೆದ ಸ್ಥಳ.ಕೂಡ್ಲಿಗಿಯ ಇತಿಹಾಸವನ್ನು ಗಮನಿಸುತ್ತ ಬಂದಾಗ ಮೌರ್ಯರು, ಶಾತವಾಹನರು, ಪಲ್ಲವರು, ಕದಂಬರು, ಚಾಳುಕ್ಯರ ಆಳ್ವಿಕೆಗೆ ಈ ಭಾಗ ಒಳಪಟ್ಟದ್ದೆಂದು ತಿಳಿದುಬರುತ್ತದೆ. ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಇದು ಅವರ ಸಾಮಂತರಾದ ಗಂಗರ ಆಳ್ವಿಕೆಯಲ್ಲಿತ್ತು. ನಂತರ ವಿಜಯನಗರ ಅರಸರು, ಹೈದರಾಲಿ, ಟಿಪ್ಪೂಸುಲ್ತಾನರ ಆಳ್ವಿಕೆ. ನಂತರ ಬ್ರಿಟೀಶರ ಅಧಿಪತ್ಯಕ್ಕೊಳಪಟ್ಟಿತ್ತು. ಸ್ವಾತಂತ್ರ್ಯಾನಂತರ ೧೯೫೩ರ ಅಕ್ಟೋಬರ್ ನಲ್ಲಿ ಬಳ್ಳಾರಿ ಜಿಲ್ಲೆಯೊಂದಿಗೆ ಇದು ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟಿತು. ೧೯೫೬ರಲ್ಲಿ ಕರ್ನಾಟಕದಲ್ಲಿ ವಿಲೀನವಾಯಿತು.


ಶಿಡೆಗಲ್ಲು

ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡ್ಲಿಗಿಯ ಪಾತ್ರ[ಬದಲಾಯಿಸಿ]

ಜನತೆಯದೂ ಪ್ರಮುಖ ಪಾತ್ರವಿದೆ. ಅನೇಕ ಸ್ವಾತಂತ್ರ್ಯ ಪ್ರೇಮಿಗಳು ಈ ಮಹಾನ್ ಕಾರ್ಯದಲ್ಲಿ ಭಾಗಿಗಳಾದರು. ಕೊಟ್ಟೂರಿನ ಗೊರ್ಲಿ ಶರಣಪ್ಪನವರು ಕಟ್ಟಿ ಬೆಳೆಸಿದ ಕೊಟ್ಟೂರು ವ್ಯಾಯಾಮ ಶಾಲೆ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರ ಸ್ಥಾನವಾಗಿ ಬೆಳೆಯಿತು. ೧೯೪೨ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದುದರಲ್ಲಿ ಬಣಕಾರ ಸಿದ್ದಲಿಂಗಪ್ಪ, ಸುತ್ರಾವೆ ಗೋವಿಂದರಾವ್, ಗೊರ್ಲಿ ಶರಣಪ್ಪ, ಕೆಲಸಿಗರ ತಿಮ್ಮಪ್ಪ, ಪರಶುರಾಮಪ್ಪ, ಅಡವಿಗೌಡ, ಯಲಿಗಾರ ಅಜ್ಜಯ್ಯ, ಸಿರಿಗೆರೆ ರಾಮಶೆಟ್ಟಿ, ಡಾ.ನಂಜಪ್ಪ, ಉಜ್ಜಿನಿ ಸಿದ್ದನಗೌಡ, ಅಯ್ಯನಹಳ್ಳಿ ಕೊಟ್ರಯ್ಯ, ಉಜ್ಜಿನಿ ಮರುಳನಗೌಡ, ಗೂಳೆಪ್ಪ, ರಾಟೆ ರುದ್ರಪ್ಪ, ಹಾರಕಬಾವಿ ಬಸಯ್ಯ, ಮುಂತಾದವರು ಪ್ರಮುಖರು. ದಿ.ಸುಮಿತ್ರಪ್ಪ ಎಂಬ ಹೋರಾಟಗಾರರು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಅನುಯಾಯಿಯಾಗಿ ಅವರೊಂದಿಗೆ ಕಾರ್ಯನಿರ್ವಹಿಸಿದವರು. ಆ ಸಂದರ್ಭದಲ್ಲಿ ಭೂಗತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೂ ಇದ್ದಾರೆ.

ಕೂಡ್ಲಿಗಿಯ ಭೌಗೋಳಿಕ ಪರಿಸರ[ಬದಲಾಯಿಸಿ]

ಕೂಡ್ಲಿಗಿ ತಾಲೂಕು ಮಧ್ಯದಲ್ಲಿ ಸಣ್ಣ ಬೆಟ್ಟಗುಡ್ಡಗಳನ್ನು ಹೊಂದಿದ್ದು, ಉಳಿದಂತೆ ಪ್ರಸ್ಥಭೂಮಿಯನ್ನು ಹೊಂದಿದೆ. ಕೆಂಪು-ಬಿಳಿ ಮಿಶ್ರಿತವಾದ ಮಣ್ಣನ್ನೂ ಭೂಮಿ ಹೊಂದಿದೆ. ಹವಾಮಾನ ಆರೋಗ್ಯಕರವಾಗಿದ್ದು, ಚಳಿಗಾಲ ಬಿಟ್ಟರೆ ಉಳಿದಂತೆ ಉಷ್ಣತೆ ಹೆಚ್ಚು. ತಾಲೂಕಿನ ಪ್ರಮುಖ ಬೆಳೆಗಳೆಂದರೆ ಜೋಳ, ಸಜ್ಜೆ, ನವಣೆ, ನೆಲಗಡಲೆ, ಹತ್ತಿ, ಬೇಳೆಕಾಳುಗಳು, ನೀರಿನ ಆಶ್ರಯವಿರುವಕಡೆ ಭತ್ತ, ಮೆಣಸಿನಕಾಯಿ, ಈರುಳ್ಳಿ, ಕಬ್ಬು ಬೆಳೆಯಲಾಗುತ್ತದೆ. ಕೂಡ್ಲಿಗಿ ತಾಲೂಕು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ಪ್ರದೇಶ. ಕೂಡ್ಲಿಗಿ ಪಟ್ಟಣದಲ್ಲಿಯೇ ಮಹಾತ್ಮ ಗಾಂಧಿಯವರ ಚಿತಾಭಸ್ಮ ಸ್ಮಾರಕವಿದೆ. ಇದಕ್ಕೆ ಸಾಕಷ್ಟು ಇತಿಹಾಸವಿದ್ದು.


ಕುಡ್ಲಿಗಿಯಲ್ಲಿ ಇತರ ಸ್ಥಳಗಳು[ಬದಲಾಯಿಸಿ]

ಮಾಕನಡುಕು[ಬದಲಾಯಿಸಿ]

ಮಾಕನಡುಕು ಗ್ರಾಮದಲ್ಲಿ ಶ್ರೀ ಕಂಚೋಬಳೇಶ್ವರ ಸ್ವಾಮಿ ದೇವಸ್ಥಾನ ತುಂಬಾ ಪ್ರಸಿದ್ದಿ,ಇಲ್ಲಿಗೆ ಶ್ರಾವಣದಲ್ಲಿ ಪ್ರತಿ ಶನಿವಾರ ಸಹಸ್ರಾರು ಜನರು ಬರುತ್ತಾರೆ ಹಾಗೂ ಭಾರತ ಹುಣ್ಣಿಮೆಯ ಸಮೀಪ ನಡೆಯುವ ಸ್ವಾಮಿಯ ಗುಗ್ಗರಿ ಹಬ್ಬಕ್ಕೆ ಸಾವಿರಾರು ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಅಮರದೇವರಗುಡ್ಡ[ಬದಲಾಯಿಸಿ]

ಕೂಡ್ಲಿಗಿ ಕೇಂದ್ರ ಸ್ಥಳದಿಂದ ಸುಮಾರು ೩ ಕಿ.ಮೀ ದೂರದಲ್ಲಿ ಇರುವ ಪುಟ್ಟ ಗ್ರಾಮ ಅಮರದೇವರಗುಡ್ದ. ಊರಿನ ಬೆಟ್ಟದ ಮೇಲೆ ಅಮರೇಶ್ವರಲಿಂಗವಿದ್ದು ಅದರಿಂದಲೇ ಊರಿಗೆ ಈ ಹೆಸರು ಬರಲು ಕಾರಣವೆಂದು ಜನರ ನಂಬಿಕೆ. ಗ್ರಾಮದ ಸಮೀಪದಲ್ಲೇ ಸುಮಾರು ೧.೭೧ ಎಕರೆಯಷ್ಟು ವಿಶಾಲವಾಗಿ ಆವರಿಸಿದ ಆಲದ ಮರ ವಿಹಾರದ ಸ್ಥಳವಾಗಿದೆ. ಈಗ ಅರಣ್ಯ ಇಲಾಖೆಯ ವತಿಯಿಂದ ಅದೊಂದು ಸುಂದರ ವಿಹಾರ ಸ್ಥಳವಾಗಿ ರೂಪುಗೊಂಡಿದೆ. ಇಲ್ಲಿರುವ ಪಿರಾಮಿಡ್ ಧ್ಯಾನ ಕೇಂದ್ರ ಧ್ಯಾನಾಸಕ್ತರಾಗಿ ಪ್ರಿಯವಾಗಿದೆ.

ಚಿಕ್ಕಜೋಗಿಹಳ್ಳಿ[ಬದಲಾಯಿಸಿ]

ಕೂಡ್ಲಿಗಿಯಿಂದ ಸುಮಾರು ೨೬ ಕಿ.ಮೀ ದೂರದಲ್ಲಿರುವ ಚಿಕ್ಕಜೋಗಿಹಳ್ಳಿ ಗ್ರಾಮ ರಾಷ್ಟ್ರೀಯ ಹೆದ್ದಾರಿ ೧೩ರ ಚಿತ್ರದುರ್ಗ ಮಾರ್ಗದಲ್ಲಿ ಬರುತ್ತದೆ. ಹಿಂದೆ ದೇಶದಲ್ಲಿಯೇ ಮಾದರಿಗ್ರಾಮವೆನಿಸಿತ್ತು. ಚಿಕ್ಕಜೋಗಿಹಳ್ಳಿ ಮೊದಲು ಚಿಕ್ಕದಾದ ಹಳ್ಳಿಯಾಗಿದ್ದು, ಅಲ್ಲಿಯೇ ಹುಟ್ಟಿ ಬೆಳೆದ ದಿ.ಕೆ.ವೆಂಕಟಸ್ವಾಮಿಯವರು ಬೆಂಗಳೂರಿನಲ್ಲಿ ವಾಸಿಸತೊಡಗಿದ ನಂತರ, ಅವರ ದೂರದರ್ಶಿತ್ವ, ಸ್ಥಳೀಯ ಜನತೆಯ ಸಹಕಾರ, ಸರ್ಕಾರದ ನೆರವಿನೊಂದಿಗೆ ಅದೊಂದು ಮಾದರಿ ಗ್ರಾಮವಾಗಿ ರೂಪುಗೊಂಡಿತು. ರೇಷ್ಮೇ ಸಂಕೀರ್ಣ, ಅಂಚೆ ಕಚೇರಿ, ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ, ಶಾಲೆ, ಚಿತ್ರಮಂದಿರ, ಕೋಳಿ ಸಾಕಾಣಿಕೆ, ಕಂಬಳಿ ನೇಯ್ಗೆ, ಬ್ಯಾಂಕ್ ಹೀಗೆ ಹತ್ತು ಹಲವು ವೈಶಿಷ್ಟ್ಯಗಳೊಂದಿಗೆ ಕೂಡಿರುವ ಗ್ರಾಮ. ಇಲ್ಲಿ ಈಗೆ ನವೋದಯ ವಸತಿ ಶಾಲೆಯೂ ಇದೆ.

ಗುಡೇಕೋಟೆ[ಬದಲಾಯಿಸಿ]

ಹಿಂದೊಮ್ಮೆ ಪಾಳೇಗಾರರ ಕೇಂದ್ರಸ್ಥಾನವಾಗಿದ್ದ ಗುಡೇಕೋಟೆ ಅಭೇದ್ಯವಾದ ಕೋಟೆಯಿಂದ ಕೂಡಿದೆ. ೧೬ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಪತನಾನಂತರ ಉಂಟಾದ ಅನಿಶ್ಚಿತ ಪರಿಸ್ಥಿತಿ ಬಳಸಿಕೊಂಡು ಪಾಳೇಗಾರರು ಪ್ರಬಲರಾದರು. ಹೈದರಾಲಿಯು ಚಿತ್ರದುರ್ಗಕ್ಕೆ ಮುತ್ತಿಗೆ ಹಾಕಿದಾಗ ಚಿತ್ರದುರ್ಗದ ಪರವಾಗಿ ಪಾಳೇಗಾರರು ಹೋರಾಡಿದರು. ಕ್ರಿ.ಶ. ೧೭೭೭ರಲ್ಲಿ ಹೈದರಾಲಿಯು ಗುಡೇಕೋಟೆಯನ್ನು ವಶಪಡಿಸಿಕೊಂಡನು. 'ಇಷ್ಟು ಬೃಹತ್ ಗಾತ್ರದ ಬಂಡೆಗಳನ್ನು ಬಳಸಿ ಕಟ್ಟಿದ ಕೋಟೆಗೋಡೆಗಳನ್ನು ಇಡೀ ದಕ್ಷಿಣ ಭಾರತದಲ್ಲಿಯೇ ಕಂಡಿಲ್ಲ' ಎಂದು ಪ್ರಾಕ್ತನ ಶಾಸ್ತ್ರದ ಬ್ರೂಸ್ ಫುಟ್ ಹೇಳಿದ್ದಾರೆ. ಗ್ರಾಮದಲ್ಲಿ ಈಗಲೂ ಹಳೆಯ ದೇವಾಲಯಗಳಿವೆ. ಶಿಥಿಲವಾದ ಕೋಟೆಯಿದೆ. ಬೃಹತ್ ಗಾತ್ರದ ನಾಗರ ಶಿಲಾಮೂರ್ತಿಗಳಿವೆ. ಎಲ್ಲದಕ್ಕೂ ಮಿಗಿಲಾಗಿ ಎಲ್ಲಿಯೂ ಕಾಣಸಿಗದ ಅಪರೂಪದ ಶಿವಪಾರ್ವತಿ ಮೂರ್ತಿಯಿರುವ ದೇವಸ್ಥಾನವಿದೆ. ಏಕಶಿಲೆಯಲ್ಲಿರುವ ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತಿರುವ ಅಪೂರ್ವವಾದ ಕಪ್ಪುಶಿಲೆಯ ಮೂರ್ತಿಯಿದೆ. ಚಿತ್ರದುರ್ಗದ ಇತಿಹಾಸಲ್ಲಿ ವೀರ ಮಹಿಳೆಂದು ಗುರುತಿಸಲಾಗಿರುವ ಒನಕೆ ಓಬವ್ವಳ ತವರು ಮನೆ ಈ ಗುಡೇಕೋಟೆ. ಗುಡೇಕೋಟೆ ಗ್ರಾಮ ತಾಲೂಕು ಕೇಂದ್ರ ಕೂಡ್ಲಿಗಿಯಿಂದ ೨೮ ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಬಳ್ಳಾರಿಯಿಂದ ೫೫ ಕಿ.ಮೀ ದೂರದಲ್ಲಿದೆ. ಗ್ರಾಮವು ಕಲ್ಲುಗುಡ್ಡಗಳಿಂದ ಅವೃತ್ತವಾಗಿದೆ. ಊರಿನ ಸಮೀಪ ಪಶ್ಚಿಮ ದಿಕ್ಕಿನಲ್ಲಿ ಪಾಳೇಗಾರರ ಕಾಲದ ಬೊಮ್ಮಲಿಂಗನ ಕೆರೆಯಿದೆ.

ಗುಣಸಾಗರ[ಬದಲಾಯಿಸಿ]

ಕೂಡ್ಲಿಗಿಯಿಂದ ೨೦ ಕಿ.ಮೀ ದೂರದಲ್ಲಿರುವ ಗ್ರಾಮ. ಸುಂದರವಾದ ಹಾಗು ಪುರಾತನವಾದ ಒಂದೆ ಶಿಲೆಯಿಂದ ನಿರ್ಮಿಸಿರುವ ಶ್ರೀವೇಣುಗೋಪಾಲಕೃಷ್ಣನ ಮೂರ್ತಿಯಿಂದ ಈ ಸ್ಥಳ ಪ್ರಸಿದ್ಧಿಯನ್ನು ಪಡೆದಿದೆ. ಈ ದೇವಾಲಯವು ಮಹಾನ್ ಶಿಲ್ಪಿ ಜಕಣಾಚಾರಿಯಿಂದ ಕೆತ್ತಲ್ಪಟ್ಟಿದೆಯೆಂದು ಪ್ರತೀತಿ.

ಕೈವಲ್ಯಾಪುರ[ಬದಲಾಯಿಸಿ]

ಕೂಡ್ಲಿಗಿಯಿಂದ ಹೊಸಪೇಟೆ ಮಾರ್ಗದಲ್ಲಿ ೪ ಕಿ.ಮೀ ದೂರವಿರುವ ಗ್ರಾಮ. ಇಲ್ಲಿನ ಶ್ರೀರಂಗನಾಥನ ಮೂರ್ತಿ, ಶ್ರೀರಂಗಪಟ್ಟಣದ ಮೂರ್ತಿಯನ್ನೇ ಹೋಲುತ್ತದೆ. ಕಪ್ಪುಶಿಲೆಯ ಮೂರ್ತಿಯಲ್ಲಿ ಕುಸುರಿ ಕೆಲಸ ಸುಂದರವಾದುದು.

ಜರಿಮಲೆ[ಬದಲಾಯಿಸಿ]

ಕೂಡ್ಲಿಗಿಯಿಂದ ಸುಮಾರು ೧೪ ಕಿ.ಮೀ ದೂರವಿರುವ ಐತಿಹಾಸಿಕ ಸ್ಥಳ. ಇಲ್ಲಿಯೂ ಪಾಳೇಗಾರರ ಆಳ್ವಿಕೆಯಿತ್ತು. ಸುಮಾರು ೮೦೦ ಅಡಿ ಎತ್ತರದಲ್ಲಿನ ಗುಡ್ಡದ ಮೇಲೆ ಜರಿಮಲೆ ಪಾಳೇಗಾರರ ಶಿಥಿಲಗೊಂಡ ಕೋಟೆಯ ಅವಶೇಷಗಳಿವೆ. ಜರಿಮಲೆ ಪಲೆಯ ಸ್ಥ್ಪಾಪಕ ಪೆನಪ್ಪ ನಾಯಕ . ಪಾಳೇಗಾರರ ಕೊನೆಯ ತಲೆಮಾರಿನ ಶ್ರೀ ಸಿದ್ದಪ್ಪನಾಯಕರು ಈಗಲೂ ಇದ್ದಾರೆ. ಜರಿಮಲೆಯ ಸೀತಾಫಲ ಹಣ್ಣು ಈ ಭಾಗದಲ್ಲಿ ಪ್ರಸಿದ್ಧ. ಅದರಲ್ಲೂ ಉಪ್ಪರಿಗೆ ಹಣ್ಣುಗಳು ಗಾತ್ರದಲ್ಲಿ, ಸಿಹಿಯಲ್ಲಿ ಮಧುರವಾದವುಗಳು.

ಕಾನಾಮಡುಗು[ಬದಲಾಯಿಸಿ]

ಕೂಡ್ಲಿಗಿಯಿಂದ ಸುಮಾರು ೩೫ ಕಿ.ಮೀ ದೂರವಿರುವ ಇಲ್ಲಿ ಶಿವಶರಣ ಶ್ರೀ ಶರಣಬಸವೇಶ್ವರರ ಯೋಗಸಮಾಧಿಯ ಗದ್ದುಗೆಯಿದೆ. ಜಾಗೃತ ಸ್ಥಳವೆಂದು ಕರೆಯಲ್ಪಟ್ಟಿದೆ. ಇಲ್ಲಿನ ದಾಸೋಹ ಮಠದಲ್ಲಿ ನಾಡಿನ ಹಿರಿಯರು ರೂಪುಗೊಂಡಿದ್ದಾರೆ. ಮಠದಿಂದ ನಡೆಯುವ ಶಿಕ್ಷಣಸಂಸ್ಥೆಗಳು, ದಾಸೋಹ ಸುತ್ತುಮುತ್ತಲಿನ ಜನತೆಗೆ ಅಪ್ಯಾಯಮಾನವಾಗಿವೆ.

ಕಾನಾ ಹೊಸಹಳ್ಳಿ[ಬದಲಾಯಿಸಿ]

ಕಾನಾ ಹೊಸಹಳ್ಳಿ ತಾಲೂಕಿನಲ್ಲಿ ಅತೀ ದೊಡ್ಡ ಗ್ರಾಮ. ಕೂಡ್ಲಿಗಿ ಇಂದ 30 km ದೂರದಲ್ಲಿದೆ ಹಾಗೂ ಬೆಂಗಳೂರಿನಿಂದ 250 ದೂರದಲ್ಲಿದೆ. ಪಕ್ಕದ ಊರುಗಳು ಜಗಳೂರು, ಮೊಳಕಾಲ್ಮೂರು, ಚಿತ್ರದುರ್ಗ, ಚಳ್ಳಕೆರೆ,ನಾಯಕನಹಟ್ಟಿ, ಉಜ್ಜಿನಿ, ಕೊಟ್ಟೂರು .

ಇಲ್ಲಿ ಪ್ರಮಖ ದೇವಸ್ಥಾನಗಳು ಸುಮಾರು ಮೂರು ಶತಮಾನ ಇತಿಹಾಸ ಇರುವ ಶ್ರೀ ಮಾರಿಕಾಂಬಾ ಗುಡಿ, ಬಸವಣ್ಣಗುಡಿ , ಶಿವ ಆಲಯ. ಹಾಗೂ ಸಾಲೇಶ್ವರ ದೇವಸ್ಥಾನ, ಯಲ್ಲಮ್ಮ ದೇವಸ್ಥಾನ ಪ್ರಮುಖ ದೇವಸ್ಥಾನಗಳು.

  • "ಪಾಲಯ್ಯನಕೋಟೆ"

ಇದು ಕೂಡ್ಲಿಗಿ ತಾಲೂಕಿನ ಸೂಲದಹಳ್ಳಿ ಗ್ರಾಮ ಪಂಚಾಯ್ತಿಯ ಎರಡು ಕಂದಾಯ ಗ್ರಾಮಗಳಲ್ಲಿ ಒಂದಾಗಿದೆ.(ಈ ಪಂಚಾಯ್ತಿಯಲ್ಲಿ ಮತ್ತೆರಡು ಮಜಿರೆ ಗ್ರಾಮಗಳಿವೆ.೧.ಗುಣಸಾಗರ,೨.ಅಗ್ರಹಾರ) ಕೂಡ್ಲಿಗಿ ನಗರದ ದಕ್ಷಿಣಕ್ಕೆ ಸು.೨೫ ಕಿ.ಮೀ ಅಂತರದಲ್ಲಿರುವ ಈ ಗ್ರಾಮ ಐತಿಹಾಸಿಕ ಸ್ಥಳ. ಇದಕ್ಕೆ ಸಾಕಷ್ಟು ಪುರಾತತ್ವ ಕುರುಹುಗಳಿವೆ. ಇಲ್ಲಿ ಪಾಲಯ್ಯ ಎಂಬ ದಂಡಿನ ನಾಯಕ ಆಡಳಿತ ನಡೆಸಿದ್ದರಿಂದ ಆತನ ಹೆಸರಿನಿಂದಲೇ ಕರೆದಿರಬಹುದು.ಅಲ್ಲದೇ ಇದನ್ನು ಅಡವಿ ಪೂಜಾರಹಳ್ಳಿ ಎಂದೂ ಕರೆಯುತ್ತಾರೆ. ಆದರೆ ದಾಖಲೆಗಳಲ್ಲೆಲ್ಲಾ ಪಾಲಯ್ಯನಕೋಟೆ ಎಂದೇ ನಮೂದು ಇರುತ್ತದೆ. ಇಲ್ಲಿನ ದುರ್ಗಾದೇವಿ ಬೆಟ್ಟದಲ್ಲಿರುವ ಪುರಾತನ ಕೋಟೆ ಚಿತ್ರದುರ್ಗದ ಕೋಟೆಯ ಮಾದರಿಯಲ್ಲಿ ನಿರ್ಮಿಸಲ್ಪಟ್ಟಿದೆ.ಇದರಲ್ಲಿ ಕುದುರೆ ಲಾಯ, ಸೈನಿಕರ ಮನೆಗಳು,ದೊಡ್ಡ ಸಭಾಂಗಣ,ಪ್ರವೇಶ ದ್ವಾರ, ಕೋಟೆಯ ಸುತ್ತಲೂ ನಾಲ್ಕು ದಿಕ್ಕಿನಲ್ಲಿ ಭದ್ರತಾ ವೀಕ್ಷಣಾ ಹಾಗೂ ೪-೫ ಜನ ಸೈನಿಕರು ಒಟ್ಟಿಗೆ ಇರಬಹುದಾದಂತಹ ಸ್ಥಳಗಳಿವೆ. ಕೋಟೆಯ ಪಕ್ಕದಲ್ಲೇ ಹೊಂಡ ಇದ್ದು ಇದು ಸಮೀಪದ ಹಾರಕಭಾವಿ ಎಂಬ ಗ್ರಾಮದಲ್ಲಿರುವ ಚೌಡೇಶ್ವರಿ ದೇವಸ್ಥಾನದ ಬಾವಿಯೊಂದಕ್ಕೆ ಸಂಪರ್ಕ ಹೊಂದಿದೆ ಎಂಬ ಪ್ರತೀತಿ ಇದೆ.ಇದೇ ಬೆಟ್ಟದಲ್ಲಿ ಪವಾಡ ಪುರುಷ ಉಜ್ಜಿನಿ ಮರಳುಸಿದ್ದೇಶ್ವರರ ಕುದುರೆ ಪಾದದ ಗುರುತು, ಒಳಕಲ್ಲು, ದುರ್ಗಮ್ಮನ ಗುಡಿ, ಕಣಗಿಲ ಮರ,ಲೋಬಾನ ಗುಹೆಗಳಿವೆ.

ಇದರ ಪಕ್ಕದಲ್ಲಿ ಬಸವಣ್ಣನ ಗುಡ್ಡವಿದೆ ಇದರ ಮೇಲೆಯೂ ಪುರಾತನ ದೇವಸ್ಥಾನವಿದೆ. ಈ ಎರಡೂ ಬೆಟ್ಟಗಳಿಗೆ ಸೇರಿಸಿದಂತೆ ನಿರ್ಮಿಸಿರುವ ಕೆರೆ ಏರಿಯು ಸು.೧ ಟಿ.ಎಂ.ಸಿ ಯಷ್ಟು ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.ದಾಖಲೆಗಳಲ್ಲಿ ಇದನ್ನು ಸಿದ್ದಯ್ಯನ ದುರ್ಗದ ಕೆರೆ ಎಂದು ಕರೆಯಲಾಗುತ್ತದೆ. ಇದಕ್ಕೆ ದೊಡ್ಡಹಳ್ಳ, ಉಜ್ಜಿನಿಹಳ್ಳಗಳಿಂದ ಮಳೆಗಾಲದಲ್ಲಿ ಮಾತ್ರ ನೀರು ಬರುತ್ತದೆ. ಪ್ರಸ್ತುತ ಪಾಲಯ್ಯನಕೋಟೆ ಗ್ರಾಮವು ಸ್ಥಳಾಂತರಗೊಂಡ ನಾಲ್ಕನೇ ಸ್ಥಳದಲ್ಲಿದೆ.ಮೊದಲನೆಯದು ಬೆಟ್ಟದ ಮೇಲೆ, ನಂತರ ಹಾಳೂರು(ಹಾಳಾಗಿರುವ ಊರು) ಇಲ್ಲಿ ಬಸವೇಶ್ವರ ದೇವಸ್ಥಾನ ಇದೆ ಅಲ್ಲದೇ ಪಾಳುಬಿದ್ದ ಮನೆಗಳ ಕುರುಹುಗಳು ಇಂದಿಗೂ ಇವೆ.ಮೂರನೆಯದು ಪ್ರಸ್ತುತ ಇರುವ ಗ್ರಾಮಕ್ಕೆ ಅಂಟಿಕೊಂಡಿರುವ ಊರಮರಡಿ(ಊರ್ಮಲ್ಡಿ) ಇದರ ಮೇಲೆ ಪಾಳುಬಿದ್ದ ಮನೆಗಳ ಕುರುಹುಗಳು, ನೆಲದಲ್ಲಿ ಧಾನ್ಯ ಸಂಗ್ರಹಿಸುತ್ತಿದ್ದಂತಹ ಅಗೇವುಗಳು ಇವೆ.

ಇಲ್ಲಿ ಪಾಳೆಯಪಟ್ಟು ಇತ್ತು ಎಂಬುದಕ್ಕೆ ಜೀವಂತ ಕುರುಹುಗಳು;೧.ಅಗ್ರಹಾರ-ಇದು ಪಾಲಯ್ಯನಕೋಟೆಯ ಪೂರ್ವಕ್ಕೆ ೪ ಕಿ.ಮೀ ಅಂತರದಲ್ಲಿದ್ದು ಆಗಿನ ವಿದ್ಯಾಕೇಂದ್ರ ಇಲ್ಲಿ ಜಂಗಮರು ಸೇರಿದಂತೆ ಸಮಾಜದ ಉನ್ನತವರ್ಗದ ಜನರು ವಾಸಿಸುತ್ತಿದ್ದು ಬಹುಶಃ ಇವರ ಪೂರ್ವಿಕರು ಬೋಧಕರಿರಬಹುದು. ೨.ಸೂಲದಹಳ್ಳಿ-ಇದು ದೊಡ್ಡ ಗ್ರಾಮವಾಗಿದ್ದು, ಕೋಟೆಯ ಪೂರ್ವಕ್ಕೆ ಅಗ್ರಹಾರದ ನಂತರ ಸು.೬ ಕಿ.ಮೀ ಅಂತರದಲ್ಲಿದೆ. ಇಲ್ಲಿ ರಾಜಕಾರಣಿಗಳು, ವಿದ್ಯಾವಂತರು,ಸರ್ಕಾರಿ ನೌಕರರು ಹಾಗೂ ಅತಿ ಹೆಚ್ಚು ಯುವಜನರಿಂದ ಕೂಡಿದೆ ಮತ್ತು ಗ್ರಾಮಪಂಚಾಯ್ತಿ ಕಛೇರಿಯನ್ನು ಹೊಂದಿದೆ. ಇದು ಈ ಹಿಂದೆ ಪಾಲಯ್ಯನಕೋಟೆ ಪಾಳೆಯಪಟ್ಟಿನಲ್ಲಿ ತಪ್ಪು ಮಾಡಿದವರಿಗೆ ಶೂಲ(ಸೂಲ)ಕ್ಕೇರಿಸುವ(ನೇಣುಗಂಬ ಶಿಕ್ಷೆ) ಸ್ಥಳವಿದ್ದಿರಬಹುದು.೩.ಗುಣಸಾಗರ ಇದು ಕೋಟೆಯ ಈಶಾನ್ಯ ದಿಕ್ಕಿಗೆ ೫ ಕಿ.ಮೀ ಅಂತರದಲ್ಲಿದ್ದು, ಪುರಾತನ ವೇಣುಗೋಪಾಲ ಸ್ವಾಮಿ ದೇವಸ್ಥಾನವಿದೆ.ಇಲ್ಲಿ ಮಾತ್ರ ಬ್ರಾಹ್ಮಣರು ಕಂಡುಬರುತ್ತಿದ್ದು,ಶಾನುಭೋಗರೆಂದೂ ಕರೆಯಲ್ಪಡುತ್ತಾರೆ.ಪಾಳೆಯಪಟ್ಟಿನ ಗುಣೋತ್ತಮರು ವಾಸಿಸುವ ಈ ಸ್ಥಳಕ್ಕೆ ಹೀಗೆ ಕರೆದಿರಬಹುದು. ಈ ಗ್ರಾಮದ ಪಕ್ಕದಲ್ಲಿ ಪಾಲನಹಳ್ಳಿ ಎಂಬ ಹಾಳೂರು ಇದ್ದು ಇಲ್ಲಿ ಶಿವೇಜಮೀನು ಎಂಬ ಅನಾಮಧೇಯ ಭೂಮಿ ಇರುವುದು ದಾಖಲೆಗಳಲ್ಲಿ ಉಲ್ಲೇಖವಿದೆ. ೪.ಸುಂಕದಕಲ್ಲು-ಇದು ಕೋಟೆಯ ಪಶ್ಚಿಮಕ್ಕೆ ೫ ಕಿ.ಮೀ ಅಂತರದಲ್ಲಿದ್ದು ಇದು ಪಾಳೆಯಪಟ್ಟಿನ ನಾಯಕರು ತನ್ನ ಪ್ರಜೆಗಳಿಗೆ, ತಮ್ಮಿಂದ ರಕ್ಷಣೆಗೆ ಒಳಗಾದವರಿಗೆ ವಿಧಿಸುತ್ತಿದ್ದ ಸುಂಕ(ತೆರಿಗೆ Tax)ದ ಕಟ್ಟೆಯೇ ಆಗಿರಬಹುದು. ಮರುಳಸಿದ್ದೇಶ್ವರರ ಮೇಲಿನ ಭಕ್ತಿ; ಕೋಟೆಯ ಜನರಿಗೆ, ಪಂಚ ಪೀಠಗಳಲ್ಲೊಂದಾದ ಶ್ರೀ ಶ್ರೀ ಶ್ರೀ ೧೦೦೮ ಸದ್ಧರ್ಮ ಪೀಠ ಉಜ್ಜಿನಿ ಮರುಳಸಿದ್ದೇಶ್ವರ ದೈವದ ಮೇಲೆ ಅಪಾರ ಭಕ್ತಿ. ಜರ್ಮಲೆ ರಾಜಮನೆತನದವರು ಉಜ್ಜಿನಿ ಶಿಖರಕ್ಕೆ ಪ್ರತಿ ವರ್ಷ ಎಣ್ಣೆ ಒಯ್ಯುವಾಗ ಅದರ ಕುಂಭವನ್ನು ಪಾಲಯ್ಯನಕೋಟೆಯ ದ್ವಾರಬಾಗಿಲಿನಲ್ಲಿ ಪೂಜಿಸಲಾಗುತ್ತದೆ. ಈ ಕುರಿತು ನಮ್ಮೂರಿನ ಹಿರಿಯರಾದ ಕೊಟಗೇರಿ ಮೂಗಜ್ಜ, ಸಿದ್ದಯ್ಯನಕೋಟೆ ಬಸೆಟಪ್ಪ,ಗಿರಿಯಪ್ಪ ಮುಂತಾದವರು ಹೇಳುವ ಕಥೆ ಆಚರಣೆಗೆ ಹತ್ತಿರವೆನಿಸುತ್ತದೆ. ಅದೇನೆಂದರೆ, ಉಜ್ಜಿನಿಯ ಮರುಳ ಸಿದ್ದರು ಉಜ್ಜಿನಿಯ ದಟ್ಟಾರಣ್ಯದಲ್ಲಿ ತಪಸ್ಸು ಮಾಡುತ್ತಿದ್ದಾಗ, ಆ ಪ್ರದೇಶಕ್ಕೆ ಬೇಟೆಗೆಂದು ಬಂದಿದ್ದ ಜರ್ಮಲೆ ಬೇಡ ರಾಜನು ಬಿಟ್ಟ ಬಾಣವು ಮರುಳ ಸಿದ್ಧರ ತಲೆಗೆ ತಾಕಿ ರಕ್ತ ಬರುತ್ತದೆ. ನರಳಾಟದ ಶಬ್ಧ ಕೇಳಿದ ರಾಜ ಹತ್ತಿರ ಹೋಗಿ ನೋಡಿ,ಏನು ಮಾಡಲು ತೋಚದೇ ತನ್ನ ರಥದ ಚಕ್ರಕ್ಕೆ ಹಾಕುವ ಎಣ್ಣೆಯನ್ನೇ ಅವರ ತಲೆಯ ಮೇಲೆ ಎರೆದಿದ್ದಾಗಿ ಆಗ ರಕ್ತ ಬರುವುದು ನಿಂತಿತೆಂದು ಇದರಿಂದ ಕುಪಿತನಾದ ರಾಜನು ಹೇಳದೇ ಕೇಳದೇ ಜರಮಲೆ ಕಡೆಗೆ ಮರಳುತ್ತಿದ್ದಾಗ.ರಾಜನನ್ನು, ಮರಳುಸಿದ್ಧರ ಭಕ್ತರಾದ ಪಾಲಯ್ಯನಕೋಟೆಯ ಬೇಡರು ತಡೆದರೆಂದು, ಘಟನೆಯನ್ನು ರಾಜ ವಿವರಿಸಿದಾಗ, ಇಲ್ಲಿನ ಬೇಡರು ಜರ್ಮಲೆ ರಾಜನನ್ನು ಪುನಃ ಮರಳುಸಿದ್ದೇಶ್ವರರ ಬಳಿಗೆ ಕರೆದೊಯ್ದು,ಪಶ್ಚತ್ತಾಪ ಪಟ್ಟ ಈ ರಾಜನಿಗೆ ಎಂದೆಂದಿಗೂ ನಿಮ್ಮ ಭಕ್ತನಾಗಿರುವಂತೆ ಹರಸಿ,ಕ್ಷಮಿಸಬೇಕೆಂದು ಕೇಳಿಕೊಂಡರೆಂದು ತನ್ನ ಭಕ್ತರಾದ ಕೋಟೆ ಬೇಡರ ಮನವಿಗೆ ಸ್ಪಂದಿಸಿದೆ ಸ್ವಾಮಿಯು ಪ್ರತೀ ವರ್ಷ ನಿಗದಿತ ದಿನದಂದು ತನಗೆ ತೈಲ ಅರ್ಪಣೆ ಮಾಡಬೇಕೆಂದು ರಾಜನಿಗೆ ಆಜ್ಞಾಪಿಸಿದರೆಂದು ಇದಕ್ಕೆ ಕಾರಣೀಭೂತರಾದ ಕೋಟೆ ಬೇಡರು ಮರುಳಸಿದ್ಧರ ಶಿಷ್ಯರಾದರೆಂದು, ಜರಮಲೆ ರಾಜನಿಗೂ ಹಿತೈಷಿಗಳಾದರೆಂದೂ ಎರಡೂ ಕಡೆಯಿಂದ ಮಾನ್ಯರಾದ ಇವರ ನಾಡು ಸಭೀಕ್ಷವಾಗಿತ್ತೆಂದು. ಹೇಳುತ್ತಾರೆ. ನಂತರ ಇದು ಹೇಗೆ ನಶಿಸಿತೆಂಬ ಬಗ್ಗೆ ಖಚಿತವಾಗಿ ಹೇಳುವವರಿಲ್ಲ. ಈ ಬಗ್ಗೆ ಪುರಾತತ್ವ ಉತ್ಖನನ ಅವಶ್ಯವಾಗಿದೆ.ಆ ಕಾರ್ಯಕ್ಕಾಗಿ ಸಹಕರಿಸುವ ದೊಡ್ಡ ವಿದ್ಯಾವಂತರ ದಂಡೇ ಸಧ್ಯಕ್ಕೆ ಪಾಲಯ್ಯನಕೋಟೆಯಲ್ಲಿದೆ. ಇಲ್ಲಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಹತ್ಕಾರ್ಯಕ್ಕೆ ಸಹಕರಿಸಲು ಯುವಜನರು ಉತ್ಸುಕರಾಗಿದ್ದಾರೆ.

ಸಿಡೆಗಲ್ಲು

ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಎಪಿಗ್ರಫಿ ವಿಭಾಗದ ಸಂಶೋಧನಾ ವಿದ್ವಾಂಸರು ವಿಜಯನಗರದ ಕೂಡ್ಲಿಗಿಯ ಹಳ್ಳಿಯಲ್ಲಿ ಮೆಗಾಲಿಥಿಕ್ ಕಾಲದ 2,500 ವರ್ಷಗಳ ಹಿಂದಿನ ಅಪರೂಪದ ಕಲ್ಲಿನ ವರ್ಣಚಿತ್ರವನ್ನು ಕಂಡುಹಿಡಿದಿದ್ದಾರೆ.

ಕೂಡ್ಲಿಗಿಯು ದೇಶದ ಕೆಲವು ಪ್ರಾಚೀನ ನಾಗರಿಕತೆಗಳ ತವರೂರು ಎಂದು ತಿಳಿದುಬಂದಿದೆ. ಈ ಚಿತ್ರಕಲೆ ಪತ್ತೆಯಾದ ಸೈಡೆಗಲ್ಲು ಗ್ರಾಮವು ಬೆಟ್ಟಗಳಿಂದ ಆವೃತವಾಗಿದೆ ಮತ್ತು ಈ ಕಲಾಕೃತಿಯನ್ನು 10 ಅಡಿ ಎತ್ತರ ಮತ್ತು 12 ಅಡಿ ಅಗಲದ ಬಂಡೆಯ ಮೇಲೆ ಕೆತ್ತಲಾಗಿದೆ

ಸಂಶೋಧನಾ ವಿದ್ವಾಂಸರಾದ ಡಿ ವೀರೇಶ್ ಅವರು ಸಿಡೆಗಲ್ಲು ಬೆಟ್ಟದ ಶ್ರೇಣಿಯಿಂದ ಆವೃತವಾಗಿದೆ ಮತ್ತು ಈ ಬಂಡೆಯು ಸ್ಥಳೀಯರಿಗೆ ‘ಬೊಮ್ಮದೇವರ ಮಠ’ ಎಂದು ಕರೆಯಲ್ಪಡುವ ಬೆಟ್ಟದ ಭಾಗವಾಗಿದೆ. ಮಳೆ ಮತ್ತು ಬಿಸಿಲಿನ ತಾಪದಿಂದ ದೂರವಿರುವ ಬಂಡೆಗಲ್ಲುಗಳ ಮೇಲೆ ಚಿತ್ರಕಲೆ ಮಾಡಲಾಗಿದ್ದು, ಇಷ್ಟು ವರ್ಷ ಅದು ಏಕೆ ಸುಸ್ಥಿತಿಯಲ್ಲಿದೆ ಎಂದು ವಿವರಿಸಿದರು.

ಸ್ಥಳೀಯ ಸಮುದಾಯವು ಹಲವಾರು ತಲೆಮಾರುಗಳಿಂದ ಈ ವರ್ಣಚಿತ್ರವನ್ನು ಪೂಜಿಸುತ್ತಿದೆ, ಅವರು ಇದನ್ನು ಮಂಗಳಕರವೆಂದು ನಂಬುತ್ತಾರೆ ಎಂದು ಅವರು ಹೇಳಿದರು.

ಪೇಂಟಿಂಗ್ ಮೂರು ಗುಂಪುಗಳನ್ನು ಪ್ರತಿ ಏಳು ಜನರೊಂದಿಗೆ ಚಿತ್ರಿಸುತ್ತದೆ, ಕೈಗಳನ್ನು ಹಿಡಿದು ನೃತ್ಯ ಮಾಡುತ್ತದೆ. ಇದು ವ್ಯಕ್ತಿಗಳು ಮತ್ತು ದಂಪತಿಗಳನ್ನು ಸಹ ತೋರಿಸುತ್ತದೆ. ಇದಲ್ಲದೆ, ಕುದುರೆ, ಚಿರತೆ, ಗಿಳಿ ಮತ್ತು ಹದ್ದು ಸವಾರಿ ಮಾಡುವ ಮನುಷ್ಯನು ಕೆಲವು ಕಲ್ಲಿನ ಉಪಕರಣಗಳೊಂದಿಗೆ ಚಿತ್ರಕಲೆಯ ಭಾಗವಾಗಿದೆ. ಆಕೃತಿಗಳು ಕೆಂಪು ಮತ್ತು ಬಿಳಿ ಬಣ್ಣವನ್ನು ಹೊಂದಿರುತ್ತವೆ. ವೀರೇಶ್ ಅವರ ಪ್ರಕಾರ, ಚಿತ್ರಕಾರರು ಈ ಕೃತಿಯಲ್ಲಿ ನೈಜ ಘಟನೆಯನ್ನು ಚಿತ್ರಿಸಿದ್ದಾರೆ. ಬಿಳಿಯ ರೇಖಾಚಿತ್ರಗಳನ್ನು ನಂತರ ಸೇರಿಸಬಹುದೆಂದು ಅವರು ನಂಬುತ್ತಾರೆ.

ಇದನ್ನು “ಅಪರೂಪದ ಮತ್ತು ವಿಶೇಷ ಆವಿಷ್ಕಾರ” ಎಂದು ಬಣ್ಣಿಸಿದ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಡಿ ವಿ ಪರಮಶಿವಮೂರ್ತಿ, ಬಳ್ಳಾರಿ-ವಿಜಯನಗರ ಪ್ರದೇಶವು ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಿಗೆ ಹೆಸರುವಾಸಿಯಾಗಿದೆ, ಆದರೆ ಕೂಡ್ಲಿಗಿ ಭಾರತದ ಕೆಲವು ಪ್ರಾಚೀನ ನಾಗರಿಕತೆಗಳಿಗೆ ನೆಲೆಯಾಗಿದೆ ಎಂದು ತಿಳಿಸಿದರು.

“ವ್ಯಕ್ತಿಗಳನ್ನು ಬಿಂಬಿಸುವ ಹಲವಾರು ಕಲ್ಲಿನ ಚಿತ್ರಗಳು ಕಂಡುಬಂದಿವೆ ಆದರೆ ಸಮೂಹ ಚಿತ್ರವನ್ನು ಹೋಲುವವು ಅಪರೂಪ. ಕೊಪ್ಪಳದ ಹಿರೇಬೆಣಕಲ್ನಲ್ಲಿ ಇದೇ ರೀತಿಯ ಚಿತ್ರಕಲೆ ಅಸ್ತಿತ್ವದಲ್ಲಿದೆ ಆದರೆ ಆ ಚಿತ್ರವು ಹೆಚ್ಚಿನ ಜನರ ಗುಂಪನ್ನು ತೋರಿಸುವುದಿಲ್ಲ. ಅಲ್ಲದೆ, ಈ ಚಿತ್ರವು ಘಟನೆಯನ್ನು ಚಿತ್ರಿಸುತ್ತದೆ ಮತ್ತು ಇದು ಯಾದೃಚ್ಛಿಕವಲ್ಲ. ,” ಅಂತಹ ಕಲಾಕೃತಿಗಳು ನಮ್ಮ ಪ್ರಾಚೀನ ನಾಗರಿಕತೆಗಳಿಗೆ ಒಂದು ಸಾಕ್ಷಿಯಾಗಿದೆ ಎಂದು ಒತ್ತಿ ಹೇಳಿದರು.

ಇಂತಹ ಎಲ್ಲಾ ಆವಿಷ್ಕಾರಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ದಾಖಲಿಸಿಲ್ಲವಾದರೂ, ವಿದ್ವಾಂಸರು ತಮ್ಮ ಸಂಶೋಧನೆಗಳನ್ನು ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟಿಸುತ್ತಾರೆ, ಅದನ್ನು ದಾಖಲೆಯಲ್ಲಿ ಇರಿಸುತ್ತಾರೆ. ಸ್ಥಳೀಯ ಸಮುದಾಯಗಳು ಅಂತಹ ವರ್ಣಚಿತ್ರಗಳು ಮತ್ತು ಶಾಸನಗಳನ್ನು ತಮ್ಮ ಪೂರ್ವಜರೊಂದಿಗೆ ಸಂಯೋಜಿಸುತ್ತವೆ ಮತ್ತು ಅವುಗಳನ್ನು ಮಂಗಳಕರವೆಂದು ನಂಬುತ್ತಾರೆ. ಹಾಗಾಗಿ ಈ ದಾಖಲೆಗಳು ಅವರ ಕೈಯಲ್ಲಿ ಸುರಕ್ಷಿತವಾಗಿವೆ ಎಂದು ಕನ್ನಡ ವಿಶ್ವವಿದ್ಯಾಲಯದ ಎಪಿಗ್ರಫಿ ವಿಭಾಗದ ಅಧ್ಯಕ್ಷ ಅಮರೇಶ ಯಾತಗಲ್ ತಿಳಿಸಿದರು.