ಟಿ. ವಿ. ವೆಂಕಟಾಚಲ ಶಾಸ್ತ್ರೀ
ಟಿ. ವಿ. ವೆಂಕಟಾಚಲ ಶಾಸ್ತ್ರೀ | |
---|---|
ಜನನ | ೨೬ ಆಗಸ್ಟ್, ೧೯೩೩ ಕನಕಪುರ, ಬೆಂಗಳೂರು, |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ಕನ್ನಡ ಸಾಹಿತ್ಯ ಚರಿತ್ರೆ , ಕನ್ನಡ ವ್ಯಾಕರಣ , ಛಂದಸ್ಸು, ಗ್ರಂಥಸಂಪಾದನೆ, ಕಾವ್ಯ ಮೀಮಾಂಸೆ ಇತ್ಯಾದಿ. |
ಸಂಸ್ಥೆಗಳು | ಉಸ್ಮಾನಿಯಾ ವಿಶ್ವವಿದ್ಯಾಲಯ –ಹೈದರಾಬಾದ್, ಮೈಸೂರು ವಿಶ್ವವಿದ್ಯಾಲಯ ಮೈಸೂರು , ಸೆಯಿಂಟ್ ಜೋಸೆಫ್ಸ್ ಕಾಲೇಜು ಬೆಂಗಳೂರು |
ಅಭ್ಯಸಿಸಿದ ವಿದ್ಯಾಪೀಠ | ಮಹಾರಾಜ ಕಾಲೇಜು, ಮೈಸೂರು |
ಗಮನಾರ್ಹ ಪ್ರಶಸ್ತಿಗಳು | ಪಟ್ಟಿ ನೋಡಿ |
ಸಂಗಾತಿ | ವೆಂಕಟಲಕ್ಷ್ಮೀ |
ಹಸ್ತಾಕ್ಷರ | |
ಜಾಲತಾಣ T. V. Venkatachala Sastry |
ಪ್ರೊ. ಟಿ. ವಿ. ವೆಂಕಟಾಚಲ ಶಾಸ್ತ್ರಿ (ತೋಗೆರೆ ವೆಂಕಟಸುಬ್ಬಾಶಾಸ್ತ್ರಿ ವೆಂಕಟಾಚಲ ಶಾಸ್ತ್ರಿ), ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ಸಂಶೋಧಕರು, ವಿದ್ವಾಂಸರು, ವ್ಯಾಕರಣಕಾರರು. [೧] ಅವರು ಛಂದಸ್ಸು, ವ್ಯಾಕರಣ, ನಿಘಂಟು, ಕಾವ್ಯಮೀಮಾಂಸೆ, ಗ್ರಂಥಸಂಪಾದನೆ, ಸಾಹಿತ್ಯ ವಿಮರ್ಶೆ, ಸಾಹಿತ್ಯ ಚರಿತ್ರೆ , ಸಂಶೋಧನೆ , ಜೀವನಚರಿತ್ರೆ ಇತ್ಯಾದಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಕುರಿತು ೧೨೦ಕ್ಕೂ ಹೆಚ್ಚು ಕೃತಿಗಳು, ಸಹಕರ್ತೃತ್ವ ಮತ್ತು ಸಹಸಂಪಾದನೆಯಲ್ಲಿ ೧೬ ಕೃತಿಗಳು, ಪ್ರಧಾನ ಸಂಪಾದಕತ್ವದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಕನ್ನಡ ಸಾಹಿತ್ಯ ಸೇವೆಗಾಗಿ ನಾಡೋಜ ಗೌರವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ , ರಾಷ್ಟ್ರಪತಿ ಸಮ್ಮಾನ ಪ್ರಶಸ್ತಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್., ಪಂಪ ಪ್ರಶಸ್ತಿ , ರನ್ನ ಪ್ರಶಸ್ತಿ , ನೃಪತುಂಗ ಸಾಹಿತ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಹಳಗನ್ನಡ ಸಾಹಿತ್ಯದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿರುವ ಪ್ರೊ.ಟಿ.ವಿ.ವಿ. ಅವರನ್ನು ಕುರಿತು 'ಡಿ.ಎಲ್. ನರಸಿಂಹಾಚಾರ್ ಅವರ ನಂತರ ಆ ಸ್ಥಾನವನ್ನು ಶಾಸ್ತ್ರಿಗಳು ತುಂಬಿಕೊಟ್ಟರು' ಎಂದಿರುವ ಮಾತು ಗಮನಾರ್ಹ. [೨]
ಜನನ–ಶಿಕ್ಷಣ–ವೃತ್ತಿಜೀವನ
[ಬದಲಾಯಿಸಿ]ವೆಂಕಟಾಚಲ ಶಾಸ್ತ್ರಿ ೨೬ ಆಗಸ್ಟ್, ೧೯೩೩ ರಂದು ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ತೋಗೆರೆ ವೆಂಕಟಸುಬ್ಬಾಶಾಸ್ತ್ರಿಗಳು, ತಾಯಿ ಸುಬ್ಬಮ್ಮ. ವಿದ್ಯಾರ್ಹತೆ ಎಂ.ಎ, ಪಿಎಚ್.ಡಿ.
ಬೋಧನಾನುಭವ, ಸಂಶೋಧನಾನುಭವ
[ಬದಲಾಯಿಸಿ]- ಕನ್ನಡ ಅಧ್ಯಾಪಕ, ರೂರಲ್ ಕಾಲೇಜು, ಕನಕಪುರ-೧೯೫೫-೫೬
- ಕನ್ನಡ ಅಧ್ಯಾಪಕ, ಸೇಯಿಂಟ್ ಜೋಸೆಫ್ಸ್ ಕಾಲೇಜು, ಬೆಂಗಳೂರು-೧೯೫೭-೫೯
- ಕನ್ನಡ ಅಧ್ಯಾಪಕ, ಮಹಿಳಾ ಕಾಲೇಜು ಮತ್ತು ಆರ್ಟ್ಸ್ ಕಾಲೇಜು, ಉಸ್ಮಾನಿಯ ವಿಶ್ವವಿದ್ಯಾಲಯ, ಹೈದರಾಬಾದು-೧೯೫೯-೬೮
- ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
- ಕನ್ನಡ ಅಧ್ಯಾಪಕ (೧೯೬೮-೧೯೭೪)
- ರೀಡರ್ (೧೯೭೪-೧೯೮೪ )
- ಪ್ರೊಫೆಸರ್ (೧೯೮೪-೧೯೯೪)
- ನಿರ್ದೇಶಕ (೧೯೯೧-೧೯೯೩)
- ಡೀನ್ ಕಲಾವಿಭಾಗ (೧೯೯೨-೧೯೯೩)
ನಿವೃತ್ತಿ
[ಬದಲಾಯಿಸಿ]ಒಟ್ಟು ಬೋಧನಾನುಭವ ಸುಮಾರು ೪೦ ವರ್ಷ; ಸಂಶೋಧನೆ ಸುಮಾರು ೩೦ ವರ್ಷ. ೧೧ ಜನರಿಗೆ ಪಿಎಚ್.ಡಿ. ಪದವಿಯ ಮಾರ್ಗದರ್ಶನ. ೧೯೯೪ ರಲ್ಲಿ ನಿವೃತ್ತರಾದರು.
ಸಂಪರ್ಕ, ಸಮಾಲೋಚನೆ
[ಬದಲಾಯಿಸಿ]- ಬೆಂಗಳೂರು, ಮಂಗಳೂರು, ಮೈಸೂರು, ಕರ್ನಾಟಕ(ಧಾರವಾಡ), ಕನ್ನಡ (ಹಂಪಿ), ಕಲ್ಲಿಕೋಟೆ (ಕಾಸರಗೋಡು), ಉಸ್ಮಾನಿಯ (ಹೈದರಾಬಾದು), ದೆಹಲಿ ವಿಶ್ವವಿದ್ಯಾನಿಲಯಗಳು
- ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳು
- ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಬೆಂಗಳೂರು
- ಮೈಸೂರು ವಿ.ವಿ. ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಪ್ರಸಾರಾಂಗಗಳು
- ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
- ಬಿ.ಎಂ.ಶ್ರೀ. ಪ್ರತಿಷ್ಠಾನ, ಬೆಂಗಳೂರು
- ದಿ ಮಿಥಿಕ್ ಸೊಸೈಟಿ, ಬೆಂಗಳೂರು
- ಅಖಿಲ ಕರ್ನಾಟಕ ಗಮಕ ಕಲಾಪರಿಷತ್ತು, ಬೆಂಗಳೂರು
- ವಿದೇಶೀಯ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳು
- ಪ್ರೊ. ಸ್ಟೀಫನ್ ಅನೇಕರ್, ಸ್ವಿಟ್ಜರ್‌ಲೆಂಡ್
- ಪ್ರೊ. ಷೆಲ್ಡನ್ ಪೋಲಕ್, ಯು.ಎಸ್.ಎ.
- ಪ್ರೊ. ಕಾರ್ಲ್ ಜೋಹೆನ್‌ಸನ್,ಯು.ಎಸ್.ಎ.
- ಪ್ರೊ. ಷೋಮನ್,ಕೆನಡಾ
- ಪ್ರೊ. ಲೌರಿ ಹೋಂಕೋ, ಫಿನ್ಲೆಂಡ್
- ಪ್ರೊ. ಜಾನ್ ಸ್ಟ್ರಾಟನ್ ಹಾಲಿ, ಯು.ಎಸ್.ಎ. ಇತ್ಯಾದಿ.
'ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಂಪಾದಕ ಸಮಿತಿಯ ಸದಸ್ಯರಾಗಿ ಕೆಲಸಮಾಡಿದರು. (೧೯೭೫-೧೯೯೫) ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ-ಇಂಗ್ಲಿಷ್ ನಿಘಂಟಿನ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.(೧೯೯೮)
ಪುಸ್ತಕಗಳು
[ಬದಲಾಯಿಸಿ]- ವ್ಯಾಕರಣಗ್ರಂಥಗಳು
- ಹೊಸಗನ್ನಡದ ವ್ಯಾಕರಣ (೧೯೯೦)
- ಕೇಶಿರಾಜ ವಿರಚಿತ 'ಶಬ್ದಮಣಿದರ್ಪಣಂ(ಸಂ.) (೧೯೯೪)
- ಹೊಸಗನ್ನಡ ವ್ಯಾಕರಣ, ಛಂದಸ್ಸು ಮತ್ತು ವ್ಯಾವಹಾರಿಕ ಕನ್ನಡ (ಸಹ)(೧೯೯೭)
- ಕೇಶಿರಾಜ ವಿರಚಿತ ಶಬ್ದಮಣಿದರ್ಪಣಂ(ಸಂ) (೧೯೯೭)
- ದರ್ಪಣ ವಿವರಣ (ಶಬ್ದಮಣಿದರ್ಪಣದ ವಸ್ತುವಿವರಣೆ)(೨೦೦೧)
- ಕನ್ನಡ ಪ್ರಥಮ ವ್ಯಾಕರಣ (ಪರಿಷ್ಕೃತ) (೨೦೦೮)
- ಕನ್ನಡ ಬರೆವಣಿಗೆ : ದೋಷಗಳು,ದೌರ್ಬಲ್ಯಗಳು (ಸಹ)(೨೦೧೦)
- ಹಳಗನ್ನಡ ವ್ಯಾಕರಣ ಪ್ರವೇಶಿಕೆ (೨೦೧೮)
- ಕನ್ನಡ ಆಡುಮಾತು ಬರೆವಣಿಗೆಗಳಲ್ಲಿ ವಿಕಲ್ಪರೂಪಗಳು, ರೂಢಿಯ ತಪ್ಪುಗಳು (೨೦೧೯)
- ಕಾವ್ಯಮೀಮಾಂಸೆ
- ಮಹಾಕಾವ್ಯ ಲಕ್ಷಣಗಳು. (೧೯೬೯)
- ಕನ್ನಡ ಚಿತ್ರಕಾವ್ಯ (೧೯೮೭)
- mahaka:vyalakshNa(2015)
- ಸಾಹಿತ್ಯವಿಮರ್ಶೆ, ಸಂಶೋಧನೆ
- ಸಾಹಿತ್ಯ ಮಂಥನ (೧೯೭೨)
- ಕನ್ನಡ ನೇಮಿನಾಥ ಪುರಾಣಗಳ ತೌಲನಿಕ ಅಧ್ಯಯನ (೧೯೭೩)
- ಚಾವುಂಡರಾಯ (೧೯೭೩)
- ಜೈನ ಭಾಗವತ-ಭಾರತಗಳು: ಒಂದು ಸಮೀಕ್ಷೆ (೧೯೮೦)
- ಪ್ರಾಚೀನ ಕನ್ನಡ ಸಾಹಿತ್ಯ: ಕೆಲವು ನೋಟಗಳು (೧೯೮೧)
- ಮೂರು ಸಮೀಕ್ಷೆಗಳು -(೧೯೮೧)
- ಹೊಸಗನ್ನಡ ಸಾಹಿತ್ಯ: ಕೆಲವು ನೋಟಗಳು(೧೯೮೨)
- ನಮ್ಮ ಕರ್ನಾಟಕ (೧೯೮೩)
- ಪಂಪ (೧೯೮೭)
- ಹಳೆಯ ಹೊನ್ನು (೧೯೯೧)
- ಶಾಸ್ತ್ರೀಯ-೧ (೧೯೯೯)
- ಶಾಸ್ತ್ರೀಯ-೨ (೧೯೯೯)
- ಶಾಸ್ತ್ರೀಯ-೩ (೧೯೯೯)
- ಶಾಸ್ತ್ರೀಯ-೪ (೧೯೯೯)
- ಮುಲಕನಾಡು ಬ್ರಾಹ್ಮಣರು (ಸಮುದಾಯ, ಸಂಸ್ಕೃತಿ)(೨೦೦೦)
- ಅರ್ಧನೇಮಿಪುರಾಣ ಕಥಾಸಾರ, ವಸ್ತುವಿಮರ್ಶೆ (೧೯೯೯)
- ಶಾಸ್ತ್ರೀಯ-೫ : ಮಾರ್ಗದರ್ಶಕ ಮಹನೀಯರು (೨೦೦೨)
- ಶಾಸ್ತ್ರೀಯ-೬ : ಸಾಹಿತ್ಯಶೋಧ (೨೦೦೫)
- ಕನಕಪುರ ಎಂಬ ಕಾನಕಾನ ಹಳ್ಳಿಯ ಚರಿತ್ರೆ (೨೦೦೭)
- ಶಾಸ್ತ್ರೀಯ-೭ : ಸಾಹಿತ್ಯಸನ್ನಿಧಿ (೨೦೦೮)
- ಕನ್ನಡ ಅಭಿಜಾತ ಸಾಹಿತ್ಯ: ಅಧ್ಯಯನದ ಅವಕಾಶಗಳು, ಆಹ್ವಾನಗಳು (೨೦೦೯)
- ಕುವೆಂಪು ಸಂಪುಟ (೨೦೧೦)
- ಶಾಸ್ತ್ರೀಯ-೮ : ಸಾಹಿತ್ಯಕಲ್ಪ (೨೦೧೧)
- ಶಾಸ್ತ್ರೀಯ-೯ : ಸಾಹಿತ್ಯಸಂಧಾನ(೨೦೧೨)
- ಶಾಸ್ತ್ರೀಯ-೧೦: ಸಾಹಿತ್ಯಾನುವಾದ (೨೦೧೩)
- ರನ್ನಕವಿ ಕೃತಿಗಳು:ಕೆಲವು ವಸ್ತು ವಿಚಾರಗಳು;ಪಾಠವಿಮರ್ಶೆಗಳು (೨೦೧೬)
- ಶಾಸ್ತ್ರೀಯ-೧೧: ಸಾಹಿತ್ಯಚಾರಣ (೨೦೧೭)
- ಶಾಸ್ತ್ರೀಯ-೧೨ : ಸಾಹಿತ್ಯ ಸಂಕೀರ್ಣ
- ಶಾಸ್ತ್ರೀಯ-೧೩ : ಸಾಹಿತ್ಯ ಸಂಗತಿ
- ಛಂದಸ್ಸು
- ಕನ್ನಡ ಛಂದಸ್ಸು (೧೯೭೦)
- ಕನ್ನಡ ಛಂದಃಸ್ವರೂಪ (೧೯೭೮)
- ಕನ್ನಡ ಛಂದೋವಿಹಾರ (೧೯೮೯)
- ಕನ್ನಡ ಛಂದೋಮೀಮಾಂಸೆ (೨೦೦೩)
- ಛಂದೋಂಬುಧಿ (ಸಂ.) (೨೦೦೭)
- ಕನ್ನಡ ಛಂದಃಕೋಶ (೨೦೧೧)
- ನಿಘಂಟುರಚನೆ
- ೧೯೭೧ - ಶ್ರೀವತ್ಸ ನಿಘಂಟು
- ೧೯೭೭ - ಕನ್ನಡ ರತ್ನಕೋಶ (ಸಹ)
- ೧೯೯೪ - ಗಜಶಾಸ್ತ್ರ ಶಬ್ದಕೋಶ
- ೨೦೧೪ - ಅಚ್ಚಗನ್ನಡ ಪ್ರಾಣಿಪದಕೋಶ
- ೨೦೧೭ - ಅಚ್ಚಗನ್ನಡ ದೇಹಾವಯವ ಪದಕೋಶ
- ಗ್ರಂಥಸಂಪಾದನೆ
- ಶಬ್ದಾರ್ಥವಿಹಾರ
- ಗ್ರಂಥ ಸಂಪಾದನ ಪರಿಭಾಷಾಕೋಶ
- ಜೀವನ ಚರಿತ್ರೆ
- ಮಹಾಮಹೋಪಾಧ್ಯಾಯ ಡಾ.ಆರ್. ಶಾಮಶಾಸ್ತ್ರಿ (೧೯೮೦)
- ರಾವ್ ಬಹದ್ದೂರ್ ಎಂ. ಶಾಮರಾಯರು(೧೯೮೨)
- ಸಾಹಿತ್ಯ ಶಿಲ್ಪಿಗಳು (೧೯೮೫)
- ಎಂ.ಶಾಮರಾಯರು : ಜೀವನ ಮತ್ತು ಕಾರ್ಯ (೧೯೯೫)
- ಎ.ಆರ್. ಕೃಷ್ಣಶಾಸ್ತ್ರೀ (೨೦೦೦)
- ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಪೂರ್ವಜರು (೨೦೦೫)
- ಆಪ್ತರು ಆಚಾರ್ಯರು (೨೦೦೫)
- ಬೆಂಗಳೂರು ಕಲಾಸಿಪಾಳ್ಯದ ಶ್ರೀ ಸಹಜಾನಂದ ಭಾರತೀ ಸ್ವಾಮಿಗಳು (೨೦೦೬)
- ಡಾ.ಎ.ವೆಂಕಟಸುಬ್ಬಯ್ಯ (೨೦೦೭)
- ಎ.ವೆಂಕಟಕೃಷ್ಣಯ್ಯನವರ ಆತ್ಮಕಥೆ (ಸಂ)(೨೦೦೮)
- ಕ.ವೆಂ.ರಾಘವಾಚಾರ್ (೨೦೧೦)
- ಬಾಪು ಸುಬ್ಬರಾಯರು : ಜೀವನಕಾರ್ಯ (೨೦೧೦)
- ಎಂ.ಎ.ರಾಮಾನುಜ ಅಯ್ಯಂಗಾರ್ (೨೦೧೩)
- ನೆನಪುಗಳ ನೆರಳಲ್ಲಿ-೧೧೧ ವ್ಯಕ್ತಿಚಿತ್ರಗಳು (೨೦೧೮)
- ಆರ್. ನರಸಿಂಹಾಚಾರ್ಯ (೨೦೧೯)
- ಉಪಕುಲಪತಿ ಎನ್.ಎಸ್. ಸುಬ್ಬರಾಯರು (೨೦೧೯)
- ಕಾದಂಬರೀ ಸಂಗ್ರಹ ಮಾಸಪತ್ರಿಕೆಯ ಚಾಮರಾಜನಗರ ವೆಂಕಟರಮಣ ಶಾಸ್ತ್ರಿಗಳು (೨೦೨೦)
- ಲೋಕಸೇವಾನಿರತ ಅಂಬಳೆ ಅಣ್ಣಯ್ಯ ಪಂಡಿತರು (೨೦೨೧)
- ಸಂಪಾದಿತ ಗ್ರಂಥಗಳು - ಗದ್ಯ
- ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ ಸಂ.೧, ಸಂ.೨, ಮೈಸೂರು ವಿ.ವಿ, ಮೈಸೂರು (೧೯೭೪),(೧೯೭೫)
- ಸಂಶೋಧನ ಲೇಖನಗಳು-ಎಸ್. ಶ್ರೀಕಂಠಶಾಸ್ತ್ರೀ(ಸಹ) ಮೈಸೂರು ವಿ.ವಿ, ಮೈಸೂರು (೧೯೭೫)
- ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ ಸಂ.೩, ಸಂ.೪-ಭಾಗ ೧ ಮೈಸೂರು ವಿ.ವಿ, ಮೈಸೂರು (೧೯೭೬) ,(೧೯೭೬)
- ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ ಸಂ.೪-ಭಾಗ ೨,ಸಂ.೫-ಭಾಗ ೧,ಮೈಸೂರು ವಿ.ವಿ, ಮೈಸೂರು(೧೯೭೬) ,(೧೯೭೬)
- ಸ್ವಸ್ತಿ:ತ.ಸು. ಶಾಮರಾಯರ ಅಭಿನಂದನ ಗ್ರಂಥ (ಸಹ) ತ.ವೆಂ. ಸ್ಮಾರಕ ಗ್ರಂಥಮಾಲೆ,ಮೈಸೂರು(೧೯೮೩)
- ಪ್ರಾಕ್ತನ : ಆರ್. ನರಸಿಂಹಾಚಾರ್ಯರ ಲೇಖನಗಳು, ಭಾಷಣಗಳು, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ,ಮೈಸೂರು-(೧೯೮೬)
- ಪ್ರೊ.ಡಿ.ಎಲ್.ನರಸಿಂಹಾಚಾರ್ಯರ ರುದ್ರನಾಟಕೋಪನ್ಯಾಸಗಳು(೧೯೮೬)
- ಚಾಮರಸ(ಸಹ) (೧೯೮೭)
- ಗದ್ಯಕುಸುಮಾಂಜಲಿ(ಸಹ) (೧೯೮೮)
- ಅಲ್ಲಾವುದ್ದೀನ್ ಮತ್ತು ಅದ್ಭುತದೀಪ-ಎಸ್.ಜಿ.ನರಸಿಂಹಾಚಾರ್ (೧೯೯೨)
- ಅಭಿಜ್ಞಾನ : ಡಾ. ಕೆ. ಕೃಷ್ಣಮೂರ್ತಿ ಅಭಿನಂದನ ಗ್ರಂಥ(ಸಹ)(೧೯೯೫)
- ಮುದ್ರಾಮಂಜೂಷವು : ಕೆಂಪು ನಾರಾಯಣ ಕವಿ(೧೯೯೯)
- ಡಾ. ಎ. ವೆಂಕಟಸುಬ್ಬಯ್ಯನವರ ಸಂಶೋಧನ ಲೇಖನಗಳು (೨೦೦೧)
- ಮುಲಕನಾಡು ಸಿರಿ (೨೦೦೨)
- ಶ್ರೀ ಸಾಹಿತ್ಯಮಣಿಮಾಲೆ:ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರ ಹೆಚ್ಚಿನ ಬರಹಗಳು, ಭಾಷಣಗಳು(೨೦೦೮)
- ಪ್ರೊ.ಡಿ.ಎಲ್. ನರಸಿಂಹಾಚಾರ್ಯರ ಹೆಚ್ಚಿನ ಬರಹಗಳು, ಭಾಷಣಗಳು (೨೦೦೮)
- ಗಲಿವರನ ದೇಶಸಂಚಾರ-ಎಸ್.ಜಿ. ನರಸಿಂಹಾಚಾರ್ಯರು (೨೦೦೮)
- ಮಂ-ಪ್ರಬಂಧಗಳು-ಎಸ್.ಮಂಜುನಾಥ್ (೨೦೦೮)
- ಜಿ.ಎಸ್.ಗಾಯಿರವರ ಸಂಶೋಧನ ಲೇಖನಗಳು (೨೦೦೯)
- Srikanthika : Prof. S. Srikantha Sastri Felicitation Vol. (Co-ed)(೧೯೭೫)
- Vibrant India : Collected Papers of Mahamahopadhyaya Dr. R. Shamasastry (Co)(2009)
- Srikanthayana : Collected Papers of Dr. S. Srikanthasastri Vol I & II (Co)(2016)
- ಎನ್.ಎಸ್. ಸುಬ್ಬರಾಯರು ಬದುಕು:ಬರಹ,ಭಾಷಣಗಳು(೨೦೧೯)
- ಕಥಾವಳಿ (ಬಾಪು ಸುಬ್ಬರಾಯರು) (೨೦೧೯)
- ಸಂಪಾದಿತ ಗ್ರಂಥಗಳು - ಪದ್ಯ
- ಕನ್ನಡ ಕಾವ್ಯಸಂಚಯ-ಭಾಗ ೧ (ಸಹ) ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ.ವಿ(೧೯೭೧)
- ಶ್ರೀಕಂಠೇಶ್ವರ ಶತಕಂ-ಎಸ್. ಶ್ರೀಕಂಠಶಾಸ್ತ್ರೀ (೧೯೭೫)
- ಕನ್ನಡ ಕಾವ್ಯಸಂಚಯ-ಭಾಗ ೨ (ಸಹ) (೧೯೭೮)
- ಎಸ್.ಜಿ.ನರಸಿಂಹಾಚಾರ್ಯರ ಕವಿತೆಗಳು-ಭಾಗ ೧ (೧೯೮೬)
- ಗಮಕಮಂಜೂಷ (೧೯೮೭)
- ಕನ್ನಡ ಕವಿಗಳು ಕಂಡ ಗೊಮ್ಮಟೇಶ್ವರ (೧೯೯೦)
- ಅನುಕರಣಗೀತಲಹರಿ-ಎನ್.ಜಯರಾಮಾಚಾರ್ಯ (೧೯೯೧)
- ಕನ್ನಡ ಚೆನ್ನುಡಿ (ಮೂಲ ತಾತ್ಪರ್ಯಸಹಿತ ಕನ್ನಡ ಸುಭಾಷಿತಗಳ ಬೃಹತ್ ಸಂಪುಟ) (೧೯೯೧)
- ಕಾವ್ಯವಾಹಿನಿ-ದಸರಾ ಕವಿಸಮ್ಮೇಳನಗಳ ಕವಿತೆಗಳು (೧೯೯೧)
- ಕಾವ್ಯಶ್ರೀರಂಗ-ದಸರಾ ಕವಿಸಮ್ಮೇಳನಗಳ ಕವಿತೆಗಳು (೧೯೯೨)
- ಪಂಪಕವಿ ವಿರಚಿತ ಆದಿಪುರಾಣಂ (೧೯೯೫)
- ಸಿರಿಭೂವಲಯ-ಕುಮುದೇಂದು ಮುನಿ (ಸಹ)(೨೦೦೩)
- ಕಾವ್ಯಜಿನಾಷ್ಟಕಗಳು (೨೦೦೬)
- ಬೊಪ್ಪಣಪಂಡಿತನ ಗೊಮ್ಮಟಜಿನೇಂದ್ರ ಗುಣಸ್ತವಂ (೨೦೦೬)
- ನಿರ್ವಾಣಲಕ್ಷ್ಮೀಪತಿಸ್ತವನಂ (ಸಂ) (೨೦೦೬)
- ಪಂಪಸಂಪುಟ-ಆದಿಪುರಾಣಂ, ವಿಕ್ರಮಾರ್ಜುನ ವಿಜಯಂ (೨೦೦೬)
- ಗಂಗರಾಜ ಶಿವಮಾರಕೃತ ಕಲ್ಪನಾರತ್ನ (ಸಹ) (೨೦೦೭)
- ಬ್ರಹ್ಮಶಿವನ ಸಮಯಪರೀಕ್ಷೆ (೨೦೦೮)
- ತ್ರೈಲೋಕ್ಯಚೂಡಾಮಣಿಸ್ತೋತ್ರ (ಸಂ) (೨೦೦೯)
- ಚಂದ್ರನ ಮೇಲೊಂದು ಚಂದದ ಪಯಣ (ಚಂದ್ರವೀಥೀವಿಹಾರ) (೨೦೧೦)
- ಶ್ರೀವಿಜಯಪ್ರಭೂತಂ ಕವಿರಾಜಮಾರ್ಗಂ (೨೦೧೧)
- ಬಾಲವೈದ್ಯದ ಚೆಲುವ ವಿರಚಿತ ರತ್ನಶಾಸ್ತ್ರ (೨೦೧೧)
- ಚಂದ್ರರಾಜವಿರಚಿತಂ ಮದನತಿಲಕಂ (೨೦೧೨)
- ನಾಟಕ
- ಬದ್ಧಪ್ರಮೀತ್ಯೂಸ್ (೧೯೬೬)- ಈಸ್ಕಿಲಸ್ ಕವಿಯ ರುದ್ರನಾಟಕದ ಹಳಗನ್ನಡಾನುವಾದ
- ಕಂಸ (೧೯೭೧)ಮೂಲ-ನೇಮಿಚಂದ್ರನ ಅರ್ಧನೇಮಿಪುರಾಣಂ
- ಟ್ರಾಕಿಯ ಪೆಣ್ಗಳ್ (೧೯೭೮)- ಸಾಪೊಕ್ಲಿಸ್ ಕವಿಯ Women of Trachis ರುದ್ರನಾಟಕದ ಹಳಗನ್ನಡಾನುವಾದ
- ಹೊಸಗನ್ನಡ ಮಿತ್ರವಿಂದಾಗೋವಿಂದ (೧೯೮೧)
- ಎರಡು ಗ್ರೀಕ್ ರುದ್ರನಾಟಕಗಳು (೨೦೦೯)(ಬದ್ಧ ಪ್ರಮೀತ್ಯೂಸ್ ಮತ್ತು ಟ್ರಾಕಿಯ ಪೆಣ್ಗಳ್)
- ಎರಡು ಭಾರತೀಯ ನಾಟಕಗಳು (೨೦೧೦)(ಕಂಸ ಮತ್ತು ಮಿತ್ರವಿಂದಾಗೋವಿಂದ)
- ಪ್ರಬಂಧ
- ಕಾವ್ಯಚಿತ್ರಗಳು (೧೯೭೫)
- ಸದ್ದೆಂತೆಂಬರ ಗಂಡ(೧೯೮೨)
- ಮೆಲುಗಾಳಿಯ ಮಾತುಗಳು(೧೯೯೦)
- ಉದಾರಚರಿತರು ಉದಾತ್ತಪ್ರಸಂಗಗಳು (೨೦೦೨)
- ನೆನಪುಗಳ ನೆರಳಲ್ಲಿ (೨೦೧೬)
- ಕೆಲವು ಹಳೆಯ ಪ್ರಸಂಗಗಳು (೨೦೧೮)
- ಸಮಾಧಾನದ ಸಾವು : ಕೆಲವು ನೈಜ ಘಟನೆಗಳು (೨೦೨೦)
- ಭಾಷಾಂತರ
- ವೇದಂ ವೆಂಕಟರಾಯ ಶಾಸ್ತ್ರಿ(೧೯೮೬)
- ಹರಿವಂಶಪುರಾಣಸಾರ (೧೯೮೭)
- ಕರ್ಣಪಾರ್ಯನ ನೇಮಿನಾಥಪುರಾಣ ಕಥಾಸಾರ (೨೦೦೨)
- ನಮ್ಮ ಮಾತೃಭೂಮಿ-ಸ್ವಾಮಿ ವಿವೇಕಾನಂದ (೨೦೧೦)
ಪ್ರಶಸ್ತಿ–ಪುರಸ್ಕಾರಗಳು
[ಬದಲಾಯಿಸಿ]- ೨೦೨೨ - ನಾಡೋಜ ಗೌರವ ಪದವಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ [೧][೨][೩] Archived 2023-02-07 ವೇಬ್ಯಾಕ್ ಮೆಷಿನ್ ನಲ್ಲಿ. [೪]
- ೨೦೨೨ - ಆಚಾರ್ಯ ಬಿ.ಎಂ. ಶ್ರೀಕಂಠಯ್ಯ ಗೌರವ ಪ್ರಶಸ್ತಿ, ಬಬ್ಬೂರು ಕಮ್ಮೆ ಸೇವಾ ಸಮಿತಿ, ಬೆಂಗಳೂರು
- ೨೦೨೦ - ಅ. ನ. ಕೃ. ಪ್ರಶಸ್ತಿ, ಅ. ನ. ಕೃ. ಪ್ರತಿಷ್ಠಾನ, ಬೆಂಗಳೂರು [೫]
- ೨೦೨೦ - ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು [೬] Archived 2022-08-26 ವೇಬ್ಯಾಕ್ ಮೆಷಿನ್ ನಲ್ಲಿ.
- ೨೦೨೦- ೨೦೧೯-೨೦ರ ಸಾಲಿನ ಸಾಧಕ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು
- ೨೦೧೯- The Presidential Award of Certificate of Honour (Classical Kannada) GOI, New Delhi, ರಾಷ್ಟ್ರಪತಿಗಳ ಸಮ್ಮಾನ ಪ್ರಶಸ್ತಿ ನವದೆಹಲಿ,[ಸೂಕ್ತ ಉಲ್ಲೇಖನ ಬೇಕು]
- ೨೦೧೯- ಭಾಷಾವಿಭೂಷಣ ಪ್ರಶಸ್ತಿ, ಶ್ರೀ ಕ್ಷೇತ್ರ ಹೊಂಬುಜ ಜೈನಮಠ
- ೨೦೧೯- ವಾಗ್ದೇವಿ ವಾಙ್ಮಯ ರತ್ನ, ವಾಗ್ದೇವಿ ಶಿಕ್ಷಣ ಸಂಸ್ಥೆಗಳು, ಬೆಂಗಳೂರು
- ೨೦೧೯- ಶ್ರೀ ಜಯಚಾಮರಾಜೇಂದ್ರ ಪ್ರಶಸ್ತಿ, ಅರಮನೆ, ಮೈಸೂರು
- ೨೦೧೯- ಪ್ರೊ. ಎಂ. ಮರಿಯಪ್ಪ ಭಟ್ಟ ಪ್ರಶಸ್ತಿ, ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟಯ್ಯ ಭಟ್ಟ ಸಂಪ್ರತಿಷ್ಠಾನ, ಬಂಟ್ವಾಳ
- ೨೦೧೮- ರಾಷ್ಟ್ರೀಯ ರನ್ನ ಪ್ರಶಸ್ತಿ, ಕವಿಚಕ್ರವರ್ತಿ ರನ್ನ ಪ್ರತಿಷ್ಠಾನ, ಮುಧೋಳ,
- ೨೦೧೭- ಗೌರವ ಡಿ.ಲಿಟ್. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಬೆಂಗಳೂರು
- ೨೦೧೭- ಎಂ. ವೆಂಕಟಕೃಷ್ಣಯ್ಯ ಪ್ರಶಸ್ತಿ , ಅನಾಥಾಲಯ, ಮೈಸೂರು
- ೨೦೧೭- ಹೊಯ್ಸಳ ಪ್ರಶಸ್ತಿ, ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ, ಮೈಸೂರು
- ೨೦೧೫- ನೃಪತುಂಗ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು [೩]
- ೨೦೧೫- ಅಮ್ಮೆಂಬಳ ಶಂಕರನಾರಾಯಣ ನಾವಡ-ಪಾರ್ವತಿ ನಾವಡ ಶತಮಾನೋತ್ಸವ ಪ್ರಶಸ್ತಿ, ಮಂಗಳೂರು
- ೨೦೧೫- ಮುಳಿಯ ತಿಮ್ಮಪ್ಪಯ್ಯ ಸ್ಮರಣಾರ್ಥ ಪ್ರಶಸ್ತಿ , ಮಂಗಳೂರು
- ೨೦೧೪- ಗಾಂಧಿವಾದಿ ಶ್ರೀ ಎಸ್.ನಂಜುಂಡಯ್ಯ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ , ಮೈಸೂರು
- ೨೦೧೪- ಸಮೇತನಹಳ್ಳಿ ರಾಮರಾವ್ ಪ್ರಶಸ್ತಿ , ಸಿಂಧುಭೈರವಿ ಕಲಾಕುಟೀರ, ಬೆಂಗಳೂರು
- ೨೦೧೪- ಪ್ರೊ.ಎಸ್.ವಿ. ಪರಮೇಶ್ವರಭಟ್ಟ ಸಂಸ್ಮರಣ ಪ್ರಶಸ್ತಿ , ಮಂಗಳೂರು
- ೨೦೦೯- ಶ್ರೀ ವನಮಾಲಿ ಸಾಹಿತ್ಯಸೇವಾ ಪ್ರಶಸ್ತಿ , ಮೈಸೂರು
- ೨೦೦೯- ನಾ. ಶ್ರೀ.ರಾಜಪುರೋಹಿತ ಪ್ರಶಸ್ತಿ, ಧಾರವಾಡ
- ೨೦೦೮- ಪಂಪ ಪ್ರಶಸ್ತಿ , ಕರ್ನಾಟಕ ಸರ್ಕಾರ, ಬೆಂಗಳೂರು
- ೨೦೦೮- ವಿದ್ವಾನ್ ರಘುಸುತ ಪ್ರಶಸ್ತಿ , ಬೆಂಗಳೂರು
- ೨೦೦೮- ಡಾ.ಮಾಸ್ತಿ ಪ್ರಶಸ್ತಿ , ಬೆಂಗಳೂರು
- ೨೦೦೬- ಆರ್ಯಭಟ ಪ್ರಶಸ್ತಿ , ಬೆಂಗಳೂರು
- ೨೦೦೬- ಶ್ರೀಕೃಷ್ಣ ಪ್ರಶಸ್ತಿ , ಉಡುಪಿ
- ೨೦೦೫- ಆಳ್ವಾಸ್ ನುಡಿಸಿರಿ ಪ್ರಶಸ್ತಿ , ಮೂಡಬಿದಿರೆ
- ೨೦೦೪- ಸೀತಾಸುತ-ಡಾ.ವಿ.ಟಿ. ಸುಶೀಲ ಜಯರಾಮನ್ ಸಾಹಿತ್ಯ ಪ್ರಶಸ್ತಿ, ಮಂಡ್ಯ
- ೨೦೦೪- ಚಾವುಂಡರಾಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
- ೨೦೦೩- ಡಾ. ಶಂ.ಬಾ ಜೋಶಿ ಪ್ರಶಸ್ತಿ, ಕರ್ನಾಟಕ ಸಂಘ, ಶಿವಮೊಗ್ಗ
- ೨೦೦೧- ಭಾಷಾಸಮ್ಮಾನ್ ಪ್ರಶಸ್ತಿ, (Bhasha Samman,Sahitya Academy,Delhi) ಕೇಂದ್ರ ಸಾಹಿತ್ಯ ಅಕಾಡೆಮಿ, ದೆಹಲಿ
- ೨೦೦೧- ಚಿದಾನಂದ ಪ್ರಶಸ್ತಿ, ಬೆಂಗಳೂರು
- ೧೯೯೮- ಸೇಡಿಯಾಪು ಪ್ರಶಸ್ತಿ, ಉಡುಪಿ
- ೧೯೯೭- ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ , ಬೆಂಗಳೂರು
- ೧೯೯೬- ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಶ್ರವಣಬೆಳಗೊಳ
- ೧೯೮೮- ಕರ್ನಾಟಕ ಸರ್ಕಾರದ ರಾಜ್ಯಪ್ರಶಸ್ತಿ
- ೧೯೮೭- ಗ್ರಂಥಲೋಕ ಪತ್ರಿಕೆಯ ವರ್ಷದ ಲೇಖಕ ಪ್ರಶಸ್ತಿ , ಮೈಸೂರು
- ೧೯೮೭- ಐಬಿಎಚ್ ಎಜುಕೇಷನಲ್ ಟ್ರಸ್ಟ್ ಪ್ರಶಸ್ತಿ, ಮುಂಬಯಿ
ಪುಸ್ತಕ ಬಹುಮಾನಗಳು
[ಬದಲಾಯಿಸಿ]- ೧೯೭೦- ಕನ್ನಡ ಛಂದಸ್ಸು ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
- ೧೯೭೨- ಸಾಹಿತ್ಯ ಮಂಥನ ದೇವರಾಜ ಬಹದ್ದೂರ್ ಬಹುಮಾನ, ಕರ್ನಾಟಕ ಸರ್ಕಾರ
- ೧೯೭೮- ಕನ್ನಡ ಛಂದಃಸ್ವರೂಪ ಸುವರ್ಣ ಮಹೋತ್ಸವ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯ, ತೀ.ನಂ.ಶ್ರೀಕಂಠಯ್ಯ ಸ್ಮಾರಕ ಬಹುಮಾನ, ಮೈಸೂರು ವಿಶ್ವವಿದ್ಯಾನಿಲಯ, ವಿದ್ಯಾವರ್ಧಕ ಸಂಘ, ಧಾರವಾಡ, ದೇವರಾಜ ಬಹದ್ದೂರ್ ಬಹುಮಾನ, ಕರ್ನಾಟಕ ಸರ್ಕಾರ
- ೧೯೮೬- ಎಸ್.ಜಿ. ನರಸಿಂಹಾಚಾರ್ಯರ ಕವಿತೆಗಳು ತೀ.ನಂ.ಶ್ರೀಕಂಠಯ್ಯ ಸ್ಮಾರಕ ಬಹುಮಾನ, ಮೈಸೂರು ವಿಶ್ವವಿದ್ಯಾನಿಲಯ
- ೧೯೮೭- ಕನ್ನಡ ಚಿತ್ರಕಾವ್ಯ ಸೃಜನೇತರ ಶ್ರೇಷ್ಠಕೃತಿ ವಿಶೇಷ ಬಹುಮಾನ-ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಐಬಿಎಚ್ ಎಜುಕೇಷನ್ ಟ್ರಸ್ಟ್ ಬಹುಮಾನ, ಮುಂಬಯಿ, ಸುವರ್ಣ ಮಹೋತ್ಸವ ಬಹುಮಾನ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು,
- ೧೯೮೯- ಕನ್ನಡ ಛಂದೋವಿಹಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
ಸಮ್ಮೇಳನಾಧ್ಯಕ್ಷತೆ
[ಬದಲಾಯಿಸಿ]- ೧೯೯೧- ಅಧ್ಯಕ್ಷತೆ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಕನಕಪುರ
- ೧೯೯೫- ಅಧ್ಯಕ್ಷತೆ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಜಯಪುರ
- ೨೦೦೨- ಅಧ್ಯಕ್ಷತೆ, ೭೦ನೆಯ ಸಾಹಿತ್ಯ ಸಮ್ಮೇಳನ, ಧರ್ಮಸ್ಥಳ
- ೨೦೦೩- ಅಧ್ಯಕ್ಷತೆ, ಪ್ರಥಮ ಅಖಿಲ ಕರ್ನಾಟಕ ಹಸ್ತಪ್ರತಿ ಸಮ್ಮೇಳನ, ಕನ್ನಡ ವಿಶ್ವವಿದ್ಯಾನಿಲಯ,ಹಂಪಿ
- ೨೦೦೬- ಅಧ್ಯಕ್ಷತೆ, ೧೫ನೆಯ ಚುಟುಕು ಸಾಹಿತ್ಯ ಸಮ್ಮೇಳನ, ಮೈಸೂರು
- ೨೦೦೮- ಅಧ್ಯಕ್ಷತೆ, ೧೦ನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಕುದೂರು, ಮಾಗಡಿ ತಾಲ್ಲೂಕು
ಅಭಿನಂದನಾ ಗ್ರಂಥಗಳು
[ಬದಲಾಯಿಸಿ]- ಶ್ರೀಮುಖ - ೧೯೯೭ (ಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ ಅಭಿನಂದನಾಗ್ರಂಥ)
- ಕನ್ನಡ ಮೇರು - ೨೦೦೮ (ಡಾ. ಟಿ.ವಿ.ವಿ-೭೫ ಅಭಿನಂದನಸಂಪುಟ)
- ಡಾ. ಟಿ.ವಿ.ವೆಂಕಟಾಚಲಶಾಸ್ತ್ರೀ: ಬದುಕು-ಬರಹ ೨೦೦೮
- ತಿಂಗಳ ಬೆಳಕು -೨೦೧೫
ಸೂಚಿಗಳು
[ಬದಲಾಯಿಸಿ]- ೧೯೬೬. A Descriptive Catalogue of the Kannada Manuscripts in the Osmania University Library(Co-ed) Osmania University, Hyderabad.(ಹಸ್ತಪ್ರತಿಸೂಚಿ)
- ೧೯೭೨. A Bibliography of Karnataka Studies, Vol.I (Co-ed), Prasaranga, University of Mysore (ಲೇಖನಸೂಚಿ)
- ೧೯೯೭. ಕನ್ನಡ ರಾಮಾಯಣ ಗ್ರಂಥಸೂಚಿ
- ೧೯೯೮. A Bibliography of Karnataka Studies, Vol.II (Co-ed), Prasaranga, University of Mysore
ಉಲ್ಲೇಖಗಳು
[ಬದಲಾಯಿಸಿ]http://www.prajavani.net/news/article/2018/02/23/555760.html Archived 2018-02-23 ವೇಬ್ಯಾಕ್ ಮೆಷಿನ್ ನಲ್ಲಿ.
- ↑ 'ಕರ್ನಾಟಕ ಸಾಹಿತ್ಯ ಅಕಾಡೆಮಿ,'
- ↑ "saaludipagalu 'ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ', ಸಾಲುದೀಪಗಳು". Archived from the original on 2016-03-11. Retrieved 2014-09-16.
- ↑ http://www.prajavani.net/article/ಡಾಟಿವಿ-ವೆಂಕಟಾಚಲ-ಶಾಸ್ತ್ರಿಗೆ-ನೃಪತುಂಗ-ಪ್ರಶಸ್ತಿಪ್ರಜಾವಾಣಿ ವರದಿ