ಭಾಸ್ಕರ್ ಚಂದಾವರ್ಕರ್
ಭಾಸ್ಕರ್ ಚಂದಾವರ್ಕರ್ | |
---|---|
ಸಂಗೀತ ಶೈಲಿ | ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ |
ವೃತ್ತಿ | ಸಂಗೀತ ರಚನೆಕಾರ, ಸಂಗೀತ ನಿರ್ದೇಶಕ |
ವಾದ್ಯಗಳು | ಸಿತಾರ್ |
(ಮಾಚ್, ೧೬, ೧೯೩೬-ಜುಲೈ, ೨೬, ೨೦೦೯)
ಭಾಸ್ಕರ್ ಚಂದಾವರ್ಕರ್ ವಿಶ್ವಪ್ರಸಿದ್ಧ ಸಿತಾರ್ ವಾದಕ, ಪಂಡಿತ್ ರವಿಶಂಕರ್ ರವರ ಶಿಷ್ಯರು. ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತಗಳ ಸಮ್ಮಿಳನದ ಮೂಲಕ ತಮ್ಮದೇ ಆದ ಪ್ರತ್ಯೇಕ ಶೈಲಿಯ ಸಂಗೀತ ವೈಖರಿಯನ್ನು ಕಂಡುಕೊಂಡವರು, ಕೆಲಸಮಯದಿಂದ ಕ್ಯಾನ್ಸರ್ ಪೀಡಿತರಾಗಿದ್ದರು.
ವೃತ್ತಿಜೀವನ
[ಬದಲಾಯಿಸಿ]'ಭಾಸ್ಕರ್ ಚಂದಾವರ್ಕರ್' ಗೌರವಾನ್ವಿತ ಸಂಗೀತ ಶಿಕ್ಷಕರು. ಸುಮಾರು ೪೦ ಹಿಂದಿ ಚಿತ್ರಗಳಿಗೆ, ಮರಾಠಿ ಮತ್ತು ಮಲಯಾಳಮ್ ಚಲನ-ಚಿತ್ರಗಳಿಗೆ ಸಂಗೀತವನ್ನು ಸಂಯೋಜಿಸಿಕೊಟ್ಟಿದ್ದರು. ಹೊಸಬಗೆಯ ಸಂಗೀತವನ್ನು ಸೃಷ್ಟಿಸಿ, ಸಂಗೀತಪ್ರಿಯರೆಲ್ಲರ ಮನರಂಜಿಸಿದ್ದರು. ಹೆಸರಾಂತ, ಮರಾಠಿ ನಾಟಕ ರಚನೆಕಾರ, 'ವಿಜಯ್ ತೆಂದುಲ್ಕರ್' ರವರ 'ಘಾಶಿರಾಂ ಕೊತ್ವಾಲ್' ನಾಟಕಕ್ಕೆ, 'ಜಬ್ಬರ್ ಪಟೇಲ್,' ನಿರ್ದೇಶಿಸಿದ್ದರು. ೧೯೭೦ ರ ದಶಕದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮೇಧಾವಿ, ಹಾಗೂ ಕಠಿಣ ಪರಿಶ್ರಮಿಯಾಗಿದ್ದ 'ಭಾಸ್ಕರ್ ಚಂದಾವರ್ಕರ್' ಸಂಗೀತವನ್ನು ಪುಣೆಯ 'ಫಿಲ್ಮ್ ಅಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ' ದಲ್ಲಿ ಕಲಿಸುತ್ತಿದ್ದರು. ತಮ್ಮ ೧೫ ವರ್ಷಗಳಕಾಲದ ಅಧ್ಯಾಪನ ಸಮಯದಲ್ಲಿ ಅವರ ವಿಧ್ಯಾರ್ಥಿವೃಂದಕ್ಕೆ ಒಬ್ಬ ಉಚ್ಚಮಟ್ಟದ ಮಾದರಿಯ ಬೋಧಕರಾಗಿ, ಕೆಲಸಮಾಡಿ, ಎಳೆಯರ ಪ್ರೀತ್ಯಾದರ, ಗೌರವಗಳನ್ನು ಗಳಿಸಿದ್ದರು.
- ಕನ್ನಡದ ನಂಟು
1978ರಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ ಒಂದಾನೊಂದು ಕಾಲದಲ್ಲಿ ಚಿತ್ರಕ್ಕೆ ಸಂಗೀತ ನೀಡಿದ ಭಾಸ್ಕರ್, ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಗೆ ಮೊದಲ ಅವಕಾಶ ನೀಡಿದ್ದರು.
ಕೆಲವು ವಿಶೇಷ ನಾಟಕ-ಕೃತಿ ಪ್ರಯೋಗಗಳು
[ಬದಲಾಯಿಸಿ]ಕೆಲವು ಸಾಂಪ್ರದಾಯಕ ಚೌಕಟ್ಟನ್ನು ಬಿಟ್ಟು ಹೊರಗೆ ಹೋಗಿ ಹೆಸರುಮಾಡಿದ ಚಿತ್ರಗಳು : ಮರಾಠಿ ಚಲನಚಿತ್ರ ರಂಗದ ಮೇರುನಟ, ಅಮೋಲ್ ಪಾಲೇಕರ್ ರ,
- 'ಆಕೃತಿ',
- 'ಸಾಮ್ನಾ'
- 'ಸಿಂಹಾಸನ್'
ಮರಾಠಿ ನಾಟಕರಂಗದ ಮಹಾ ದಿಗ್ಗಜರಾದ ಪೂ. ಲಾ. ದೇಶ್ ಪಾಂಡೆಯವರ ಮರಾಠಿ ನಾಟಕ, 'ತೀನ್ ಪೈಶಾಚಾ ತಾಮ್ ಆಶಾ,' ಕ್ಕೆ ವಿಶೇಷ ಸಂಗೀತ ಸಂಯೋಜಿಸಿ ಕೊಟ್ಟಿದ್ದರು. ಎಲ್ಲರಿಗೂ ಅಪೇಕ್ಷೆಯಾಗುವ ಲಘುಹಾಸ್ಯ ರಚನೆಯ ಈ ಪ್ರಾಯೋಗಿಕ ನಾಟಕ ಹಾಗೂ ಚಂದಾವರ್ಕರ್ ರ ಸಂಗೀತ ಜೊತೆಗೂಡಿ ಒಳ್ಳೆಯ ಹೆಸರುಮಾಡಿತು. ಸಂಗೀತ, ನಟನೆ, ಪ್ರದರ್ಶನ ಮುಂತಾದ ವಿವಿಧ ಪ್ರಾಕಾರಗಳಲ್ಲಿ ಕೈಯಾಡಿಸಿ ಯಶಸ್ವಿಯಾಗಿರುವ ಅತ್ಯಂತ ಅನುಭವಿ, ನವ್ಯ ಪ್ರಯೋಗಗಳಿಗೆ ಸದಾಕಾಲವೂ ತಮ್ಮನ್ನು ತೆರೆದುಕೊಂಡ ಉತ್ಕೃಷ್ಟ ಕಲಾಭ್ಯಾಸಿಕ. 'ಭಾಸ್ಕರ್ ಚಂದಾವರ್ಕರ್' ರವರ ಕ್ರಿಯಾಶೀಲತೆಗೆ ಗರಿಮೂಡಿಸಿದ ಮತ್ತಿತರ ಚಿತ್ರಗಳು.
- 'ಕೈರ',
- 'ರಾವ್ಸಾಹೇಬ್',
- 'ಮತಿ ಮಾಯಿ',
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]- ೧೯೮೮ ರಲ್ಲಿ 'ಸಂಗೀತನಾಟಕ ಅಕ್ಯಾಡಮಿ ಪ್ರಶಸ್ತಿ, 'ಯನ್ನು ಪಡೆದರು.
ಮರಣ
[ಬದಲಾಯಿಸಿ]೭೩ ವರ್ಷ ಹರೆಯದ ಪ್ರಸಿದ್ಧ ಸಂಗೀತ ನಿರ್ದೇಶಕ, ಹೆಸರಾಂತ ಸಿತಾರ್ ವಾದಕ, 'ಭಾಸ್ಕರ್ ಚಂದಾವರ್ಕರ್,' ಜುಲೈ, ೨೬, ೨೦೦೯ ರ, ಬೆಳಿಗ್ಯೆ ಪುಣೆನಗರದಲ್ಲಿ ನಿಧನರಾದರು. 'ಭಾಸ್ಕರ್ ಚಂದಾವರ್ಕರ್' ರವರು, ರವರು ಕೆಲವರ್ಷಗಳಿಂದ ಕಾಯಿಲೆಯಿಂದ ನರಳುತ್ತಿದ್ದರು. ಅವರು ಪ್ರೀತಿಯ ಪತ್ನಿ, ಮಗ, ಬಂಧುಗಳು, ಹಾಗೂ ಒಬ್ಬ ಅಪಾರ ಕಲಾರಸಿಕವೃಂದವನ್ನು ಅಗಲಿ ಹೋಗಿದ್ದಾರೆ. ಮರಾಠಿ ನಾಟಕದ ಮತ್ತೊಬ್ಬ ಹೆಸರಾಂತ ನಿರ್ದೇಶಕ ಜಬ್ಬರ್ ಪಟೇಲ್, 'ಭಾಸ್ಕರ್ ಚಂದಾವರ್ಕರ್' ರವರ ಮರಣದ ಬಗ್ಗೆ ಸಂತಾಪ ವ್ಯಕ್ತಪಡಿಸುತ್ತಾ, ಸಂಗೀತವಿಶ್ವ, ಒಬ್ಬ ಅತ್ಯಂತ ಸಮರ್ಥ, ಹಾಗೂ ಕ್ರಿಯಾಶೀಲ ಕಲಾವಂತನನ್ನು ಕಳೆದುಕೊಂಡು ಬಡವಾಗಿದೆ' ಎಂದು ಉದ್ಗರಿಸಿದರು.