ಅಬ್ದುಲ್ ರಶೀದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಚಿತ್ರ:05-abdul-rasheed1.jpg
'ಅಬ್ದುಲ್ ರಶೀದ್'

ಅಬ್ದುಲ್ ರಶೀದ್, ಯೆಂಬ ಹೆಸರಿನಲ್ಲಿ ಸಾಹಿತ್ಯಲೋಕದಲ್ಲಿ ಒಳ್ಳೆಯ ಹೆಸರು ಮಾಡಿರುವ, 'ರಶೀದ್', ಪ್ರಸ್ತುತದಲ್ಲಿ 'ಕೆಂಡ ಸಂಪಿಗೆ ಇ-ಪತ್ರಿಕೆ'ಯ [ಸಾಕ್ಷ್ಯಾಧಾರ ಬೇಕಾಗಿದೆ]ಗೌರವ ಸಂಪಾದಕರಾಗಿದ್ದಾರೆ.'ಅಬ್ದುಲ್ ರಶೀದ್ ಖಾನರು', ಕಥಾ ಸಂಕಲನ, ಪುಸ್ತಕದಿಂದಾಗಿ, ಜನರಿಗೆ ಗೊತ್ತಾಗಿದ್ದಾರೆ.

ಜನನ,ಬಾಲ್ಯ, ವಿದ್ಯಾಭ್ಯಾಸ[ಬದಲಾಯಿಸಿ]

ಚಿತ್ರ:Rashid-2.jpg
'ಪ್ರಶಸ್ತಿ ಗಳಿಸಿದಾಗ'

ಕೊಡಗು ಜಿಲ್ಲೆಯ ಸುಂಟಿಕೊಪ್ಪ ದಲ್ಲಿ, ಸನ್, ೧೯೬೫ ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ 'ಇಂಗ್ಲಿಷ್ ಎಂಎ ಪದವಿ'. 'ಮಂಗಳೂರು', 'ಶಿಲ್ಲಾಂಗ್', 'ಗುಲ್ಬರ್ಗಾ', 'ಮೈಸೂರು' ಹಾಗೂ ಈಗ 'ಮಡಿಕೇರಿ' ಆಕಾಶವಾಣಿಯಲ್ಲಿ 'ಕಾರ್ಯಕ್ರಮ ನಿರ್ವಾಹಕ'ರಾಗಿ ಕೆಲಸಮಾಡುತ್ತಿದ್ದಾರೆ. 'ರಶೀದ್ ಶುಂಠಿಕೊಪ್ಪ', ಎಂಬ ಹೆಸರಿನಿಂದಲೇ ಕರೆಯಲ್ಪಡುವ ಇವರು 'ಮಡಿಕೇರಿ ಆಕಾಶವಾಣಿ'ಯಲ್ಲಿ ಪ್ರತಿ ಬುದವಾರ ಬೆಳಿಗ್ಗೆ ಒಂಬತ್ತು ಗಂಟೆಗೆ 'ಹಳ್ಳಿ ರೇಡಿಯೋ' ಎಂಬ ವಿಶೇಷ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದಾರೆ, ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದ ಕುಗ್ರಾಮಕ್ಕೆ (ಹಳ್ಳಿಗೆ)ಬೇಟಿ ನೀಡಿ, ಅಲ್ಲಿಂದಲೇ ನೇರ ಪ್ರಸಾರದಿಂದ ಹಳ್ಳಿಗರ ಕಷ್ಟವನ್ನು ಅಧಿಕಾರಿಗಳಿಗೆ ಮುಟ್ಟಿಸುತ್ತ ಆ ಪ್ರದೇಶದಲ್ಲಿ ಗುರುತಿಸಲ್ಪಟ್ಟಿದ್ದಾರೆ. [ಸಾಕ್ಷ್ಯಾಧಾರ ಬೇಕಾಗಿದೆ].ಕಳೆದ ಕೆಲವು ಸಮಯದಿಂದ ವಿಜಯಕರ್ನಾಟಕ ಪತ್ರಿಕೆಯಲ್ಲಿ ಭಾನುವಾರದಂದು "ಕಾಲು ಚಕ್ರ "ಎಂಬ ಅಂಕಣ ಬರೆಯುತ್ತಿದ್ದಾರೆ.ನಮನ

  • 'ಹಾಲು ಕುಡಿದ ಹುಡುಗಾ' (೧೯೯೦),
  • 'ಪ್ರಾಣಪಕ್ಷಿ' (೧೯೯೭) ಇವರ ಕಥಾಸಂಕಲನಗಳು.
  • 'ನನ್ನಪಾಡಿಗೆ ನಾನು (೧೯೯೧) ಕವನಸಂಕಲನ.
  • 'ಮಾತಿಗೂ ಆಚೆ' (೧೯೯೫),
  • 'ಅಲೆಮಾರಿಯ ದಿನಚರಿ', ಅಂಕಣ ಬರಹಗಳ ಸಂಕಲನ
  • 'ದ ಮೈಸೂರ್ ಪೋಸ್ಟ್'(The Mysore Post) ಎಂಬ ಬ್ಲಾಗ್ ಬರೆಯುತ್ತೀದ್ದಾರೆ.http://mysorepost.wordpress.com/

ಪ್ರಶಸ್ತಿಗಳು[ಬದಲಾಯಿಸಿ]

  • 'ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ',
  • 'ಕೇಂದ್ರ ಸಾಹಿತ್ಯ ಅಕಾಡೆಮಿಯ ಸುವರ್ಣಮಹೋತ್ಸವ ವಿಶೇಷಪ್ರಶಸ್ತಿ',
  • 'ವರ್ಧಮಾನಪ್ರಶಸ್ತಿ', ಮತ್ತು
  • 'ಶಿವಮೊಗ್ಗೆಯ ಕರ್ನಾಟಕ ಸಂಘದ ಲಂಕೇಶ್ ಪ್ರಶಸ್ತಿ'ಗಳನ್ನು ಪಡೆದಿದ್ದಾರೆ