ಲೋಕೇಶ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲೋಕೇಶ್

ಲೋಕೇಶ್ (೧೯೪೭ - ೨೦೦೪) ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲಿ ಒಬ್ಬರು. ನಾಯಕ ನಟರಾಗಿ ಮಾತ್ರವಲ್ಲದೆ,ಅನೇಕ ಚಿತ್ರಗಳಲ್ಲಿಯೂ ಪೋಷಕ ನಟರಾಗಿ ಅಭಿನಯಿಸಿದ್ದಾರೆ. ಲೋಕೇಶ್ ಅವರು ಪ್ರಸಿಧ್ಧ ರಂಗ ಕಲಾವಿದರಾಗಿದ್ದ ಹಾಗು ಕನ್ನಡ ಚಿತ್ರರಂಗ ಕಂಡ ಪ್ರಥಮ ನಾಯಕನಟ ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಮಗ. ಲೋಕೇಶ್ ಅಭಿನಯದ ಚಿತ್ರಗಳಾದ ಪರಸಂಗದ ಗೆಂಡೆತಿಮ್ಮ, ಭೂತಯ್ಯನ ಮಗ ಅಯ್ಯು ಕಾಕನಕೋಟೆ, ಅವರಿಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟಿದ್ದವು. ಅಲ್ಲದೆ ಕನ್ನಡದ ಅನೇಕ ಶ್ರೇಷ್ಠ ನಿರ್ದೇಶಕರ ಚಿತ್ರಗಳಲ್ಲಿ ಶ್ರೇಷ್ಠ ಏನ್ನುವಂತ ಅಭಿನಯ ನೀಡಿದ ಮಹಾನ್ ಕಲಾವಿದ.


ಲೋಕೇಶ್ ಅವರದು ಕಲಾವಿದರ ಕುಟುಂಬ. ಲೋಕೇಶ್ ಪತ್ನಿ ಗಿರಿಜಾ ಲೋಕೇಶ್, ಮಗ ಸೃಜನ್ ಲೋಕೇಶ್, ಮಗಳು ಪೂಜಾ ಲೋಕೇಶ್ ಅನೇಕ ಚಿತ್ರಗಳಲ್ಲಿಯೂ, ಕಿರುತೆರೆಯ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಲೋಕೇಶ್ ಭುಜಂಗಯ್ಯನ ದಶಾವತಾರಗಳು ಎಂಬ ಚಿತ್ರವನ್ನು ನಿರ್ಮಿಸಿ,ಅವರೇ ನಿರ್ದೇಶಿಸಿದ್ದರು.

ಲೋಕೇಶ್ ಅಭಿನಯದ ಕೆಲವು ಚಿತ್ರಗಳು[ಬದಲಾಯಿಸಿ]

"http://kn.wikipedia.org/w/index.php?title=ಲೋಕೇಶ್&oldid=247770" ಇಂದ ಪಡೆಯಲ್ಪಟ್ಟಿದೆ