ಸುರೇಶ್ ಹೆಬ್ಳೀಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುರೇಶ್ ಹೆಬ್ಳೀಕರ್
ಜನನ
ಸುರೇಶ್ ಹೆಬ್ಳೀಕರ್
ಉದ್ಯೋಗActor / Director/ Environmentalist
ಸಕ್ರಿಯ ವರ್ಷಗಳು1971–present

ಸುರೇಶ ಹೆಬ್ಳೀಕರ ಒಬ್ಬ ಕನ್ನಡ ಚಿತ್ರನಿರ್ಮಾಪಕರು , ನಿರ್ದೇಶಕರು ಮತ್ತು ನಟರು. ಅವರು ಪರಿಸರವಾದಿಯೂ ಹೌದು. ಅವರು ಅನೇಕ ಗಮನಾರ್ಹ ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದು ಅವುಗಳಲ್ಲಿ 'ಕಾಡಿನ ಬೆಂಕಿ' ಚಿತ್ರವು ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ , 'ಉಷಾ ಕಿರಣ' ಚಿತ್ರವು ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಗೆದ್ದಿವೆ. ಭಾವುಕ ಪ್ರಣಯ ಚಿತ್ರಿತವಾಗಿರುವ ಅಸಾಮಾನ್ಯ ಕಥಾಹಂದರವನ್ನು ಅವರ ಚಿತ್ರಗಳು ಹೊಂದಿರುತ್ತವೆ. ಇದಕ್ಕೆ ಅವರ ರಮ್ಯತೆಯುಳ್ಳ ಬಾಲ್ಯ ಕಾರಣ ಎನ್ನಲಾಗಿದೆ. ಅವರ ಚಿತ್ರಕತೆಗಳಲ್ಲಿ ಮನೋವಿಕಾರ ಸಮಸ್ಯೆಗಳು ಮತ್ತು ವೈಜ್ಞಾನಿಕ ಮನೋಭಾವ ಎದ್ದು ಕಾಣುತ್ತಿದ್ದು ಅದಕ್ಕೆ ಮನೋವಿಶ್ಲೇಷಕರೂ ನಿರ್ಮಾಪಕರೂ ಆದ ಡಾ. ಅಶೋಕ್ ಪೈ ಅವರೊಂದಿಗಿನ ತಮ್ಮ ಸಹವಾಸ ಕಾರಣ ಎಂದು ಹೆಬ್ಳಿಕರ್ ವಿನಯದಿಂದ ಹೇಳುತ್ತಾರೆ. ಅವರು ಸ್ವತಃ ಪರಿಸರವಾದಿಯಾಗಿದ್ದು , ಅವರ ಚಿತ್ರಗಳು ನಿಸರ್ಗ ಮತ್ತು ಅದರ ಸಂರಕ್ಷಣೆ ಯನ್ನು ಚಿತ್ರಿಸುತ್ತವೆ .

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

ಅವರು ತಮ್ಮ 'ಆಘಾತ' ಚಿತ್ರಕ್ಕೆ ರಾಜ್ಯಪ್ರಶಸ್ತಿಯನ್ನೂ 'ಕಾಡಿನ ಬೆಂಕಿ' ಚಿತ್ರಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಯನ್ನೂ 'Shepherds on the move' ಚಿತ್ರಕ್ಕೆ ಪ್ರತಿಷ್ಠಿತ ಓಸಿರಿಸ್ ಪ್ರಶಸ್ತಿಯನ್ನೂ ಗಳಿಸಿದ್ದಾರೆ.

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಹೆಭ್ಲೀಕರರು ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದು ಹೆಚ್ಚಿನಂಶ ಅವುಗಳಲ್ಲಿ ನಟಿಸಿಯೂ ಇದ್ದಾರೆ. ಅವರು ಅಭಿನಯಿಸಿದ ಚಿತ್ರಗಳ ಪಟ್ಟಿ ಇಲ್ಲಿದೆ.

ವರ್ಷ ಶೀರ್ಷಿಕೆ ನಿರ್ದೇಶಕರು ಚಲನಚಿತ್ರದ ಪ್ರಕಾರ
೧೯೭೪ ಕಂಕಣ ಎಮ್. ಬಿ. ಎಸ್ ಪ್ರಸಾದ್
೧೯೭೬ ಋಷ್ಯಶೃಂಗ ವಿ. ಆರ್. ಕೆ. ಪ್ರಸಾದ್
೧೯೭೯ ಖಂಡವಿದೆಕೋ ಮಾಂಸವಿದೆಕೋ ಪಿ. ಲಂಕೇಶ್
೧೯೮೦ ವಾತ್ಸಲ್ಯ ಪಥ ಎ. ಎಸ್. ಆರ್. ರಾವ್
೧೯೮೧ ಆಲೆಮನೆ ಮೋಹನ್ ಕುಮಾರ್
೧೯೮೨ ಅಮರ ಮಧುರ ಪ್ರೇಮ ರಾಮದಾಸ್ ನಾಯ್ಡು
೧೯೮೨ ಜ್ಯೋತಿ ಮನೋಹರ್ ರೆಡ್ಡಿ
೧೯೮೩ ಅಂತರಾಳ ಸ್ವತಃ
೧೯೮೩ ಅಪರಿಚಿತ ಕಾಶೀನಾಥ್
೧೯೮೩ ಮತ್ತೆ ವಾತ್ಸಲ್ಯ ರವಿ
೧೯೮೪ ಕಾನೂನಿಗೆ ಸವಾಲ್ ಸಿ. ಎಸ್. ಮಂಜು
೧೯೮೪ ECOLOGY OF THE WESTERN GHATS ಸ್ವತಃ ಸಾಕ್ಷ್ಯಚಿತ್ರ
೧೯೮೪ ENERGY 1984 ಸ್ವತಃ ಸಾಕ್ಷ್ಯಚಿತ್ರ
೧೯೮೪ SMOKING TUNA ಸ್ವತಃ ಸಾಕ್ಷ್ಯಚಿತ್ರ
೧೯೮೫ ಆಗಂತುಕ ಸ್ವತಃ
೧೯೮೭ ಕಾಡಿನ ಬೆಂಕಿ ಸ್ವತಃ
೧೯೯೦ ಪ್ರಥಮ ಉಷಾಕಿರಣ ಸ್ವತಃ
೧೯೯೧ Neduveerppukal ಸ್ವತಃ
೧೯೯೨ ಚಮತ್ಕಾರ ಸ್ವತಃ
೧೯೯೪ ಆಘಾತ ಸ್ವತಃ
೧೯೯೯ ತಾಯೀ ಸಾಹೇಬ ಗಿರೀಶ್ ಕಾಸರವಳ್ಳಿ
೧೯೯೯ ಆಶಾಜ್ಯೋತಿ
೧೯೮೯ ಸೂರಪ್ಪ ಐ. ಡಿ. ಕಮಲಾಕರ್
೧೯೯೪ ಶ್ ಉಪೇಂದ್ರ
೨೦೦೧ ನನ್ನ ಪ್ರೀತಿಯ ಹುಡುಗಿ ನಾಗತಿಹಳ್ಳಿ ಚಂದ್ರಶೇಖರ್
೨೦೦೬ ಕೇರ್ ಆಫ್ ಫುಟ್‌ಪಾಥ್ ಮಾಸ್ಟರ್ ಕಿಶನ್

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು-ಆಕರಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]