ಪ್ರೇಮಾ ಕಾರಂತ

ವಿಕಿಪೀಡಿಯ ಇಂದ
Jump to navigation Jump to search

ಪ್ರೇಮಾ ಕಾರಂತ (ಆಗಸ್ಟ್ ೧೫, ೧೯೩೬ - ಅಕ್ಟೋಬರ್ ೨೯, ೨೦೦೭) ಕನ್ನಡದ ಪ್ರಸಿದ್ಧ ರಂಗಕರ್ಮಿ ಹಾಗೂ ಕನ್ನಡದ ಪ್ರಪ್ರಥಮ ಮಹಿಳಾ ನಿರ್ದೇಶಕಿ. ಇವರು ಕನ್ನಡದ ಬಿ. ವಿ. ಕಾರಂತ್ ಅವರ ಪತ್ನಿ.

ಎಂ.ಕೆ.ಇಂದಿರಾ ಅವರ ಕಾದಂಬರಿಯಾಧಾರಿತ "ಫಣಿಯಮ್ಮ" ಮೂಲಕ ಕನ್ನಡ ಚಿತ್ರರಂಗದ ಪ್ರಥಮ ಮಹಿಳಾ ನಿರ್ದೇಶಕಿಯಾದರು.


ಹುಟ್ಟು, ಮೊದಲ ವರ್ಷಗಳು[ಬದಲಾಯಿಸಿ]

ಪ್ರೇಮಾ ಕಾರಂತರು ಹುಟ್ಟಿದ್ದು ೧೯೩೦ರಲ್ಲಿ , ಮೈಸೂರು ಜಿಲ್ಲೆಯಲ್ಲಿ. ಬನಾರಸ್ ವಿಶ್ವವಿದ್ಯಾನಿಲಯ , ನಂತರ ದೆಹಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದರು. ಅಧ್ಯಾಪಕಿಯಾಗಿ ೧೨ ವರ್ಷ ದೆಹಲಿ ಮತ್ತು ಬೆಂಗಳೂರುಗಳಲ್ಲಿ ಸೇವೆ ಕೆಲಸಮಾಡಿದರು.

ಸಾಹಿತ್ಯ ರಂಗದಲ್ಲಿ[ಬದಲಾಯಿಸಿ]

ರಾಷ್ಟ್ರೀಯ ಪುಸ್ತಕ ಟ್ರಸ್ಟ್ ನ ಭಾಷಾಂತರಕಾರರೂಆಗಿದ್ದ ಅವರು ಕನ್ನಡದಿಂದ ಹಿಂದಿ ಮತ್ತು ಹಿಂದಿಯಿಂದ ಕನ್ನಡಕ್ಕೆ ೮ ನಾಟಕಗಳನ್ನು ಅನುವಾದಿಸಿದ್ದಾರೆ.

ನಾಟಕರಂಗದಲ್ಲಿ[ಬದಲಾಯಿಸಿ]

೧೦ ನಾಟಕಗಳ ನಿರ್ದೇಶನ, ೨೦ ಮಕ್ಕಳ ನಾಟಕಗಳ ನಿರ್ಮಾಣ ಮತ್ತು ೧೨೦ ನಾಟಕಗಳ ವಸ್ತ್ರ ವಿನ್ಯಾಸ ಇವರ ನಾಟಕರಂಗಕ್ಕೆ ಕೊಡುಗೆಗಳಲ್ಲಿ ಕೆಲವು.

ಚಲನಚಿತ್ರರಂಗದಲ್ಲಿ[ಬದಲಾಯಿಸಿ]

  • ಸಾಕ್ಷ್ಯ ಚಿತ್ರ ನಿರ್ಮಾಣ : ೭
  • ವಸ್ತ್ರ ವಿನ್ಯಾಸ ಮಾಡಿದ ಕನ್ನಡ / ಹಿಂದಿ ಚಿತ್ರಗಳ ಸಂಖ್ಯೆ : ೮ಕ್ಕೂ ಹೆಚ್ಚು
  • ನಿರ್ದೇಶನ : ೪ ಕನ್ನಡ ಮತ್ತು ಒಂದು ಹಿಂದಿ (ಬಂದ್ ಝರೋಕೆ)
  • ಪ್ರಶಸ್ತಿ : ಇವರು ನಿರ್ದೇಶಿಸಿದ ’ಫಣಿಯಮ್ಮ’ ಚಿತ್ರಕ್ಕೆ ಅನೇಕ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಸಂದಿವೆ.

ನಿಧನ[ಬದಲಾಯಿಸಿ]

ಅಕ್ಟೋಬರ್‍ ೨೯, ೨೦೦೭.


ಬಾಹ್ಯ ಸಂಪರ್ಕಗಳು[ಬದಲಾಯಿಸಿ]