ರವಿಚಂದ್ರನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿ.ರವಿಚಂದ್ರನ್


ವಿ.ರವಿಚಂದ್ರನ್ ಒಬ್ಬ ಭಾರತೀಯ ನಟ. ಕನ್ನಡದ ಖ್ಯಾತ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರು ಅವರ ತಂದೆ. ತಮ್ಮ ತಂದೆ ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ರವಿಚಂದ್ರನ್ ನಟಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದೊಡನೆ ಈಶ್ವರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು.

ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಇನ್ನು ಒಂದು ರೀತಿಯ ಸಂಪ್ರದಾಯ ನಮ್ಮ ಚಿತ್ರರಂಗದಲ್ಲಿತ್ತು. ಯಶಸ್ವಿ ಪರಭಾಷಾ ಚಿತ್ರಗಳ ರಿಮೇಕ್ ಇಲ್ಲವೆ ಡಬ್ಬಿಂಗ್ ಸಂಪ್ರದಾಯ ಆಗ ನಮ್ಮ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟಿರಲಿಲ್ಲ.

ನಿರ್ದೇಶಕನ ರೂಪದಲ್ಲಿಯ ರವಿಚಂದ್ರನ್ ಅವರನ್ನು ಕಡೆಗಣಿಸಲಿಕ್ಕೆ ಸಾದ್ಯವೇ ಇಲ್ಲ ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು. ಇನ್ನೊಂದು ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಸಂಗೀತ ಪ್ರತಿಯೊಂದು ಚಿತ್ರದಲ್ಲಿ ಹೊಸತು. ಉದಾಹರಣೆಗೆ ಅವು ಮೊದಲ ನಿರ್ಧೇಶನದ ಚಿತ್ರ ಪ್ರೇಮಲೋಕದಿಂದ ಭಾರಿ ಯಶಸ್ಸು ಕಂಡ ರಾಮಾಚಾರಿ ತೆಗೆದುಕೊಳ್ಳಿ. ೮೦ರ ದಶಕದಲ್ಲಿ ಪ್ರೇಮಲೋಕದ ಹಾಡುಗಳು ಚಿತ್ರಿಕರಣ ಕರ್ನಾಟಕದ ಮಟ್ಟಿಗೆ ಮೊದಲ ಪ್ರಯೋಗ ಕಥೆ ಮಾತ್ರ ಸಾಧಾರಣವಾದ ಪ್ರೇಮಕತೆ ಆದರೆ ಅದರಲ್ಲಿನ ಸೃಜನಾತ್ಮಕತೆ ಅಂದಿನ ದಿನಗಳಲ್ಲಿ ಬೆರಗು ಹುಟ್ಟಿಸುವಂತಹದು. ಅದುನಿಕ ತಂತ್ರಜ್ಞಾನ ವಿದೇಶಗಳಲ್ಲಿ ಹಾಡುಗಳ ಚಿತ್ರಿಕರಣ ಕಾಲ ಪ್ರಾರಂಭವಾದ ಮೇಲೂ ರವಿಚಂದ್ರನ್ ರಾಮಾಚಾರಿಯ ಮೂಲಕ ಹಳ್ಳಿಯ ಸೋಗಡಿಗೆ ತಿರುಗಿ ಸಾಧಾರಣ ಭಾಷಾ ಸಾಹಿತ್ಯದ ಹಾಡುಗಳೊಂದಿಗೆ ಇಡಿ ಕತೆಯನ್ನು ಬಿಡಿಸಿಡುವ ಕಲೆಯಲ್ಲಿ ಅವರೊಬ್ಬರೆ ಪಾರಂಗತ. ಈಶ್ವರ್, ಅಭಿಮಾನಿ, ಕನಸುಗಾರ, ಏಕಾಂಗಿ,ಮಲ್ಲ, ಮನೆದೇವ್ರು,ರಾಮಾಚಾರಿ,ಸ್ವಾಭಿಮಾನಿ, ಯುಗಪುರುಷ, ಯುದ್ದಕಾಂಡ, ಸ್ವಾಭಿಮಾನ,ಶಾಂತಿಕ್ರಾಂತಿ, ರಣಧೀರ,ಅಂಜದ ಗಂಡು ಪ್ರೇಮಲೋಕ ಮುಂತಾದ ಚಿತ್ರಗಳಲ್ಲಿ ಭಾರಿ ಯಶಸ್ಸು ಅಂದರೆ ಪ್ರೇಮಲೋಕ ಹಾಗೂ ರಾಮಾಚಾರಿಯದ್ದು, ರಣಧೀರ, ಅಂಜದ ಗಂಡು,ಯುಗಪುರುಷ, ಯುದ್ದಕಾಂಡಗಳು ಯಶಶ್ವಿ ಚಿತ್ರಗಳ ಸಾಲಿನಲ್ಲಿ ಸೇರಿದರೆ ಇನ್ನುಳಿದವುಗಳು ತೋಪಾಗಿದ್ದೆ ಹೆಚ್ಚು. ಇನ್ನೊಂದು ವಿಶೇಷ ಅಂದರೆ ಸ್ವಂತ ಕಥಾವಸ್ತು ಉಳ್ಳ ಅವರ ನಿರ್ಧೇಶನದ. ನಟನೆಯ ಎಲ್ಲ ಚಿತ್ರಗಳು ವಿಫಲಗೊಂಡಿದ್ದು ವಿಪರ್ಯಾಸ.ನಮನ

ರವಿಚಂದ್ರನ್ ಅವರದು ಬಹುಮುಖ ಪ್ರತಿಭೆ. ನಟನೆ, ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ..ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ.

ರವಿಚಂದ್ರನ್ ಚಿತ್ರಗಳು[ಬದಲಾಯಿಸಿ]

# ವರ್ಷ ಚಿತ್ರ
೧೯೮೨ ಖದೀಮ ಕಳ್ಳರು
೧೯೮೩ ಚಕ್ರವ್ಯುಹ
೧೯೮೪ ಪ್ರಳಯಾಂತಕ
೧೯೮೪ ಪ್ರೇಮಿಗಳ ಸವಾಲು
೧೯೮೫ ಸಾವಿರ ಸುಳ್ಳು
೧೯೮೪ ಪಿತಾಮಹ
ವರ್ಷ- ಕನ್ನಡಚಿತ್ರಗಳು ನಾನೆ ರಾಜ
೧೯೮೬ ಅಸಂಭವ
ವರ್ಷ-ಕನ್ನಡಚಿತ್ರಗಳು ಸ್ವಾಭಿಮಾನ
೧೦ ೧೯೮೫ ನಾನು ನನ್ನ ಹೆಂಡತಿ
೧೧ ೧೯೮೬ ಬಾ ನನ್ನ ಪ್ರೀತಿಸು
೧೨ ೧೯೮೬ ರಾಮಣ್ಣ ಶಾಮಣ್ಣ
೧೩ ೧೯೮೮ ಪ್ರೇಮಲೋಕ
೧೪ ೧೯೮೮ ರಣಧೀರ
೧೫ ೧೯೮೮ ಸಂಗ್ರಾಮ
೧೬ ೧೯೮೮ ಅಂಜದ ಗಂಡು
೧೭ ೧೯೮೯ ಯುಗ ಪುರುಷ
೧೭೮ ೧೯೮೯ ಕಿಂದರ ಜೋಗಿ
೧೯ ೧೯೮೯ ಬ್ರಹ್ಮ ವಿಷ್ಣು ಮಹೇಶ್ವರ
೨೦ ೧೯೮೯ ಯುದ್ಢಕಾಂಡ
೨೧ ೧೯೮೯ ಪೋಲಿ ಹುಡುಗ
೨೨ ೧೯೮೯ ಬಣ್ಣದ ಗೆಜ್ಜೆ
೨೩ ೧೯೯೦ ಅಭಿಮನ್ಯು
೨೪ ೧೯೯೧ ಶಾಂತಿ ಕ್ರಾಂತಿ
೨೫ ೧೯೯೧ ರಾಮಾಚಾರಿ
೨೬ ೧೯೯೨ ಹಳ್ಳಿ ಮೇಷ್ಟ್ರು
೨೭ ೧೯೯೨ ಗೋಪಿಕೃಷ್ಣ
೨೮ ೧೯೯೨ ಗುರುಬ್ರಹ್ಮ
೨೯ ೧೯೯೨ ಮನೆದೇವ್ರು
೩೦ ೧೯೯೨ ಚಿಕ್ಕೆಜಮಾನ್ರು
೩೧ ೧೯೯೨ ಶ್ರೀರಾಮಚಂದ್ರ
೩೨ ೧೯೯೩ ಗಡಿಬಿಡಿ ಗಂಡ
೩೩ ೧೯೯೩ ಅಣ್ಣಯ್ಯ
೩೪ ೧೯೯೪ ಚಿನ್ನ
೩೫ ೧೯೯೪ ರಸಿಕ
೩೬ ೧೯೯೪ ಜಾಣ
೩೭ ೧೯೯೪ ಮಾಂಗಲ್ಯಂ ತಂತುನಾನೇನ
೩೮ ವರ್ಷ-ಕನ್ನಡಚಿತ್ರಗಳು ಪುಟ್ನಂಜ
೩೯ ೧೯೯೭ ಕಲಾವಿದ
೪೦ ೧೯೯೭ ಮೊಮ್ಮಗ
೪೧ ೧೯೯೭ ಸಿಪಾಯಿ
೪೨ ೧೯೯೭ ಚೆಲುವ
೪೩ ೧೯೯೮ ಪ್ರೀತ್ಸೋದ್ ತಪ್ಪ
೪೪ ೧೯೯೮ ಯಾರೇ ನೀನು ಚೆಲುವೆ
೪೫ ೧೯೯೯ ನಾನು ನನ್ನ ಹೆಂಡ್ತೀರು
೪೬ ೧೯೯೯ ರವಿಮಾಮ
೪೭ ೧೯೯೯ ಸ್ನೇಹ
೪೮ ೧೯೯೯ ಓ ಪ್ರೇಮವೇ
೪೯ ೧೯೯೯ ಚೋರ ಚಿತ್ತ ಚೋರ
೫೦ ೨೦೦೦ ಮಹಂತ
೫೧ ೨೦೦೦ ಪ್ರೀತ್ಸು ತಪ್ಪೇನಿಲ್ಲ
೫೨ ೨೦೦೦ ಓ ನನ್ನ ನಲ್ಲೆ
೫೩ ೨೦೦೦ ಪ್ರೇಮಕ್ಕೆ ಸೈ
೫೪ ೨೦೦೧ ಕನಸುಗಾರ
೫೫ ೨೦೦೦ ಉಸಿರೇ
೫೬ ೨೦೦೨ ಪ್ರೀತಿ ಮಾಡೋ ಹುಡುಗರಿಗೆಲ್ಲ
೫೭ ೨೦೦೨ ಏಕಾಂಗಿ
೫೮ ೨೦೦೨ ಕೋದಂಡರಾಮ
೫೯ ೨೦೦೩ ಒಂದಾಗೋಣ ಬಾ
೬೦ ೨೦೦೪ ಮಲ್ಲ
೬೧ ೨೦೦೪ ರಾಮಕೃಷ್ಣ
೬೨ ೨೦೦೪ ಸಾಹುಕಾರ
೬೩ ೨೦೦೫ ಅಹಂ ಪ್ರೇಮಾಸ್ಮಿ
೬೪ ೨೦೦೫ ಪಾಂಡು ರಂಗ ವಿತ್ತಲ
೬೫ ೨೦೦೬ ರವಿ ಶಾಸ್ತ್ರೀ
೬೬ ೨೦೦೬ ಹಠವಾದಿ
೬೭ ೨೦೦೫ ಒಡವುಟ್ಟಿದವಳು
೬೮ ೨೦೦೫ [ನೀಲಕಂಠ]]
೬೯ ವರ್ಷ-ಕನ್ನಡಚಿತ್ರಗಳು ಯುಗಾದಿ
೭೦ ೨೦೦೮ ನೀ ಟಾಟಾ ನಾ ಬಿರ್ಲಾ
೭೧ ೨೦೦೮ ರಾಜಕುಮಾರಿ
೭೨ ೨೦೧೦ಇನ್ನು ಬಿಡುಗಡೆ ಆಗಿಲ್ಲ ಮಂಜಿನ ಹನಿ
೭೩ ೨೦೧೨ ಹೂ
೭೪ ೨೦೦೮ಇನ್ನು ಬಿಡುಗಡೆ ಆಗಿಲ್ಲ ಕೀಚಕ
೭೫ ೨೦೧೩ ದಶಮುಕಖ
೭೬ ೨೦೧೪ ಪರಮಶಿವಾ
೭೭ ೨೦೧೪ ಕ್ರೇಜಿ ಸ್ಟಾರ
೭೮ ೨೦೧೩ ಕ್ರೇಜಿ ಲೋಕ
೭೯ ೨೦೧೪ ಮಾಣಿಕ್ಯ
೮೦ ೨೦೧೪ ದೃಶ್ಯ
೮೧ ೨೦೧೪ ಪರಮ ಶಿವ
೮೨ ೨೦೧೫ ಆಪೂರ್ವ
೮೩ ೨೦೧೫ ಲವ ಯು ಅಲಿಯ
೮೪ ೨೦೧೫ ಮುಗರು ಮಳೆ ೨
೮೫ ೨೦೧೫ ಲಕ್ಷ್ಮಣ