ಕಲಾವಿದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಲಾವಿದ

ಕಲಾವಿದನು ಕಲೆಯನ್ನು ಸೃಷ್ಟಿಸುವ, ಕಲೆಗಳನ್ನು ಅಭ್ಯಾಸಮಾಡುವ, ಅಥವಾ ಕಲೆಯನ್ನು ಪ್ರದರ್ಶಿಸುವುದಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿ. ದಿನನಿತ್ಯದ ಮಾತು ಮತ್ತು ಶೈಕ್ಷಣಿಕ ಪ್ರವಚನ ಎರಡರಲ್ಲೂ 'ಕಲಾವಿದ' ಪದದ ಸಾಮಾನ್ಯ ಬಳಕೆಯೆಂದರೆ ಕೇವಲ ದೃಶ್ಯಕಲೆಗಳಲ್ಲಿನ ಅಭ್ಯಾಸಿ. ಈ ಪದವನ್ನು ಹಲವುವೇಳೆ ಮನೋರಂಜನಾ ವ್ಯವಹಾರದಲ್ಲಿ ಸಂಗೀತಗಾರರು ಮತ್ತು ಇತರ ಪ್ರದರ್ಶಕರಿಗೆ (ಕಡಿಮೆವೇಳೆ ನಟರಿಗಾಗಿ) ಬಳಸಲಾಗುತ್ತದೆ, ವಿಶೇಷವಾಗಿ ವ್ಯಾವಹಾರಿಕ ಸಂದರ್ಭದಲ್ಲಿ. ಉದಾಹರಣೆಗೆ ಬರಹಗಾರರನ್ನು ವರ್ಣಿಸಲು ಈ ಪದದ ಬಳಕೆಯು ಸಿಂಧುವಾಗಿದೆ, ಆದರೆ ಕಡಿಮೆ ಸಾಮಾನ್ಯವಾಗಿದೆ, ಮತ್ತು ಬಹುತೇಕವಾಗಿ ವಿಮರ್ಶೆಯಂತಹ ಸಂದರ್ಭಗಳಿಗೆ ಸೀಮಿತಿವಾಗಿದೆ.

ಆಂಗ್ಲ ವಿಕ್ಷನರಿಯು 'ಕಲಾವಿದ' ನಾಮಪದವನ್ನು ಹೀಗೆ ವರ್ಣಿಸುತ್ತದೆ: ಕಲೆಯನ್ನು ಸೃಷ್ಟಿಸುವ ವ್ಯಕ್ತಿ; ಕಲೆಯನ್ನು ವೃತ್ತಿಯಾಗಿ ಸೃಷ್ಟಿಸುವ ಮತ್ತು ಮಾಡುವ ವ್ಯಕ್ತಿ; ಯಾವುದಾದರೂ ಚಟುವಟಿಕೆಯಲ್ಲಿ ಕುಶಲನಾದ ವ್ಯಕ್ತಿ; ಯಾರ ವ್ಯವಹಾರ ಅಥವಾ ವೃತ್ತಿಗೆ ವಿನ್ಯಾಸ, ರೇಖಾಚಿತ್ರ ರಚನೆ, ಚಿತ್ರಕಲೆಯ ಜ್ಞಾನ ಬೇಕಾಗುತ್ತದೊ ಅಂತಹ ವ್ಯಕ್ತಿ. ಆಕ್ಸ್‌ಫ಼ರ್ಡ್ ಆಂಗ್ಲ ನಿಘಂಟು 'ಕಲಾವಿದ' ಪದವನ್ನು ಹೀಗೆ ವ್ಯಾಖ್ಯಾನಿಸುತ್ತದೆ: ವಿದ್ವತ್ಪೂರ್ಣ ವ್ಯಕ್ತಿ ಅಥವಾ ಕಲೆಗಳ ನಿಪುಣ; ಒಂದು ವ್ಯಾವಹಾರಿಕ ವಿಜ್ಞಾನದಲ್ಲಿ ತೊಡಗಿರುವವನು, ಸಾಂಪ್ರದಾಯಿಕವಾಗಿ ವೈದ್ಯಶಾಸ್ತ್ರ, ಜ್ಯೋತಿಷಶಾಸ್ತ್ರ, ರಸವಿದ್ಯೆ, ರಸಾಯನಶಾಸ್ತ್ರ; ಕೌಶಲವು ಅಧ್ಯಯನ ಅಥವಾ ಅಭ್ಯಾಸದಿಂದ ಬರುವಂತಹ ಹವ್ಯಾಸದ ಅನುಯಾಯಿ; ಒಂದು ಹಸ್ತಬಳಕೆ ಕಲೆಯ ಅನುಯಾಯಿ, ಉದಾಹರಣೆಗೆ ಯಂತ್ರಕಾರ; ತಮ್ಮ ಕುಶಲಕರ್ಮವನ್ನು ಲಲಿತಕಲೆಯನ್ನಾಗಿ ಮಾಡುವವನು; ಲಲಿತಕಲೆಗಳಲ್ಲಿ ಒಂದನ್ನು ಅಭ್ಯಾಸಮಾಡುವವನು - ಸಾಂಪ್ರದಾಯಿಕವಾಗಿ ಕಲಾದೇವಿಯರಿಂದ ಅಧ್ಯಕ್ಷತೆ ವಹಿಸಲ್ಪಟ್ಟ ಕಲೆಗಳು.

ಬಹುತೇಕ ವೇಳೆ, "ಕಲಾವಿದ" ಪದವು ಲಲಿತಕಲೆಗಳು ಅಥವಾ 'ಉನ್ನತ ಸಂಸ್ಕೃತಿಯಲ್ಲಿ' ರೇಖಾಚಿತ್ರ ರಚನೆ, ಚಿತ್ರಕಲೆ, ಶಿಲ್ಪಕಲೆ, ನಟನೆ, ನರ್ತನ, ಬರವಣಿಗೆ, ಚಿತ್ರತಯಾರಿಕೆ, ಹೊಸ ಮಾಧ್ಯಮ, ಛಾಯಾಗ್ರಹಣ, ಮತ್ತು ಸಂಗೀತದಂತಹ ಚಟುವಟಿಕೆಗಳನ್ನು ಸೃಷ್ಟಿಸುವವರನ್ನು ವರ್ಣಿಸುತ್ತದೆ, ಅಂದರೆ ಸೌಂದರ್ಯ ಮೌಲ್ಯವನ್ನು ಹೊಂದಿವೆ ಎಂದು ನಿರ್ಣಯಿಸಬಹುದಾದ ಕೃತಿಗಳನ್ನು ಸೃಷ್ಟಿಸಲು ಕಲ್ಪನಾಶಕ್ತಿ, ಪ್ರತಿಭೆ, ಅಥವಾ ಕೌಶಲವನ್ನು ಬಳಸುವ ವ್ಯಕ್ತಿಗಳು. ಕಲಾ ಇತಿಹಾಸಕಾರರು ಮತ್ತು ವಿಮರ್ಶಕರು ಕಲಾವಿದರನ್ನು ಒಂದು ಗುರುತಿಸಲ್ಪಟ್ಟ ಅಥವಾ ಗುರುತಿಸಬಲ್ಲ ಕ್ಷೇತ್ರದೊಳಗೆ ಕಲೆಯನ್ನು ಸೃಷ್ಟಿಸುವವರು ಎಂದು ವ್ಯಾಖ್ಯಾನಿಸುತ್ತಾರೆ. ಮಾಧ್ಯಮಗಳು, ಆನ್ವಯಿಕ ಕಲೆಗಳು, ಅಥವಾ ಅಲಂಕಾರಿಕ ಕಲೆಗಳಲ್ಲಿನ ಬಹಳ ಕುಶಲ ಕಾರ್ಮಿಕರಿಗೆ ಬಳಸಲಾದ ವ್ಯತಿರಿಕ್ತ ಪದಗಳಲ್ಲಿ ಕುಶಲಕರ್ಮಿ, ಕರಕುಶಲಿ, ಮತ್ತು ಕುಂಬಾರ, ಅಕ್ಕಸಾಲಿಗ ಅಥವಾ ಗಾಜೂದುಗದಂತಹ ವಿಶೇಷಿಕೃತ ಪದಗಳು ಸೇರಿವೆ. ವರ್ಣಚಿತ್ರಕಾರರಂತಹ ಲಲಿತಕಲೆಗಳ ಕಲಾವಿದರು ನವೋದಯ ಕಾಲದಲ್ಲಿ ತಮ್ಮ ಸ್ಥಾನಮಾನವನ್ನು ನಿರ್ಣಾಯಕವಾಗಿ ಉನ್ನತ ಮಟ್ಟಕ್ಕೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಪೂರ್ವದಲ್ಲಿ ಇವರ ಸ್ಥಾನವು ಹಿಂದೆ ಹೇಳಲಾದ ಕಾರ್ಮಿಕರ ಸ್ಥಾನವನ್ನು ಹೋಲುತ್ತಿತ್ತು.

"https://kn.wikipedia.org/w/index.php?title=ಕಲಾವಿದ&oldid=912759" ಇಂದ ಪಡೆಯಲ್ಪಟ್ಟಿದೆ