ಮಹಾತ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಹಾತ್ಮ ಪದವು ಬಳಕೆಯಲ್ಲಿ ಆಧುನಿಕ ಆಂಗ್ಲ ಪದವಾದ ಸೇಂಟ್‍ಗೆ (ಸಂತ) ಸಮನಾಗಿದೆ.[೧] ಈ ಗುಣವಾಚಕವನ್ನು ಸಾಮಾನ್ಯವಾಗಿ ಬಸವೇಶ್ವರ (೧೧೦೫-೧೧೬೭), ಮೋಹನ್ ದಾಸ್ ಕರಮ್‍ಚಂದ್ ಗಾಂಧಿ (೧೮೬೯-೧೯೪೮), ಮುಂಶಿರಾಮ್ (ನಂತರ ಸ್ವಾಮಿ ಶ್ರದ್ಧಾನಂದ, ೧೮೫೬-೧೯೨೬), ಲಾಲನ್ ಷಾ (೧೭೭೨-೧೮೯೦), ಅಯ್ಯಂಕಲಿ (೧೮೬೩-೧೯೪೧) ಮತ್ತು ಜ್ಯೋತಿಬಾ ಫುಲೆಯಂತಹ (೧೮೨೭-೧೮೯೦) ಪ್ರಮುಖ ವ್ಯಕ್ತಿಗಳಿಗೆ ಅನ್ವಯಿಸಲಾಗುತ್ತದೆ. ಐತಿಹಾಸಿಕವಾಗಿ ಇದನ್ನು ಜೈನ ವಿದ್ವಾಂಸರ ಒಂದು ವರ್ಗಕ್ಕೆ ಕೂಡ ಬಳಸಲಾಗಿದೆ.

ಮೋಹನ್‍ದಾಸ್ ಗಾಂಧಿಯ ಉಪಾಧಿ "ಮಹಾತ್ಮ"[ಬದಲಾಯಿಸಿ]

ಕೆಲವು ಲೇಖಕರ ಪ್ರಕಾರ ರವೀಂದ್ರನಾಥ ಠಾಗೋರ್‌ರು ಈ ಉಪಾಧಿಯನ್ನು ಗಾಂಧಿಯವರಿಗಾಗಿ ಮಾರ್ಚ್ ೬, ೧೯೧೫ರಂದು ಬಳಸಿದರು ಎಂದು ಹೇಳಲಾಗಿದೆ. ಕಾಂಗಡಿ ಗುರುಕುಲದ ನಿವಾಸಿಗಳು ಏಪ್ರಿಲ್ ೧೯೧೫ರಲ್ಲಿ ಅವರನ್ನು ಮಹಾತ್ಮ ಎಂದು ಕರೆದರು ಎಂದು ಕೆಲವರು ಹೇಳುತ್ತಾರೆ. ಪ್ರತಿಯಾಗಿ ಗಾಂಧಿಯವರು ಅದರ ಸಂಸ್ಥಾಪಕರಾದ ಮುಂಷಿರಾಮ್‍ರನ್ನು ಮಹಾತ್ಮ (ನಂತರ ಇವರು ಸ್ವಾಮಿ ಶ್ರದ್ಧಾನಂದರಾದರು) ಎಂದು ಕರೆದರು. ಆದರೆ, ಜನವರಿ ೨೧, ೧೯೧೫ರಂದು ಜೇಟ್‍ಪುರ್, ಗುಜರಾತ್‍ನಲ್ಲಿ "ಮಹಾತ್ಮ" ಎಂಬ ಉಪಾಧಿಯಿಂದ ಅವರನ್ನು ಗೌರವಿಸಿದ ದಸ್ತಾವೇಜನ್ನು ನವದೆಹಲಿಯ ರಾಷ್ಟ್ರೀಯ ಗಾಂಧಿ ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ.[೨]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಮಹಾತ್ಮ&oldid=1129632" ಇಂದ ಪಡೆಯಲ್ಪಟ್ಟಿದೆ