ವಿಷಯಕ್ಕೆ ಹೋಗು

ಅಂಜದ ಗಂಡು (೧೯೮೮ರ ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಂಜದ ಗಂಡು ಇಂದ ಪುನರ್ನಿರ್ದೇಶಿತ)

(2014ರ ಅಂಜದ ಗಂಡು ಚಿತ್ರಕ್ಕಾಗಿ ಅಂಜದ ಗಂಡು (೨೦೧೪ರ ಚಲನಚಿತ್ರ) ಪುಟವನ್ನು ನೋಡಿರಿ)

ಅಂಜದ ಗಂಡು (೧೯೮೮ರ ಚಲನಚಿತ್ರ)
ಅಂಜದ ಗಂಡು
ನಿರ್ದೇಶನರೇಣುಕಾಶರ್ಮ
ನಿರ್ಮಾಪಕಬಿ.ಎನ್.ಗಂಗಾಧರ್
ಪಾತ್ರವರ್ಗರವಿಚಂದ್ರನ್ ಖುಷ್ಬೂ ತೂಗುದೀಪ ಶ್ರೀನಿವಾಸ್, ಮಾ.ಮಂಜುನಾಥ್, ಇಂದಿರಾ, ಶ್ರೀನಿವಾಸ ಮೂರ್ತಿ, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಅಶೋಕ್ ಬಾದರದಿನ್ನಿ
ಸಂಗೀತಹಂಸಲೇಖ
ಛಾಯಾಗ್ರಹಣಪ್ರಸಾದ್ ಬಾಬು
ಬಿಡುಗಡೆಯಾಗಿದ್ದು೧೯೮೮
ಚಿತ್ರ ನಿರ್ಮಾಣ ಸಂಸ್ಥೆಎ.ಎನ್.ಎಸ್.ಪ್ರೊಡಕ್ಷನ್ಸ್
ಸಾಹಿತ್ಯಹಂಸಲೇಖ, ಆರ್.ಎನ್.ಜಯಗೋಪಾಲ್, ವಿ.ಮನೋಹರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್, ಬಿ.ಆರ್.ಛಾಯಾ, ಲತಾ ಹಂಸಲೇಖ

ರವಿಚಂದ್ರನ್ ಹಾಗು ಖುಷ್ಬೂ ಮುಖ್ಯಪಾತ್ರಗಳಲ್ಲಿ ನಟಿಸಿದ ಅಂಜದ ಗಂಡು, ೧೯೮೮ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. []ಈ ಚಿತ್ರವನ್ನು ರೇಣುಕಾಶರ್ಮ ನಿರ್ದೇಶಿಸಿದರು. ಈ ಚಿತ್ರವು ತಮಿಳಿನಲ್ಲಿ ರಜನೀಕಾಂತ್ ನಟಿಸಿದ ತಂಬಿಕು ಎಂದ ಊರು(೧೯೮೪) ಚಿತ್ರದ ರೀಮೇಕ್ ಆಗಿದೆ. ಹಂಸಲೇಖರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಚಿತ್ರದ ಎಲ್ಲಾ ಹಾಡುಗಳು ಈ ಚಿತ್ರವನ್ನು ಜನಮನದಲ್ಲಿ ಈಗಲೂ ಸಹ ಅಚ್ಚಳಿಯದಿಂತೆ ಉಳಿದಿವೆ. ಈ ಚಿತ್ರದ ಎರಡು ಹಾಡುಗಳನ್ನು ತೆಲುಗಿನ ಎರಡು ಬೇರೆ ಬೇರೆ ಚಿತ್ರಗಳಲ್ಲಿ ಉಪಯೋಗಿಸಲಾದವು.

ಚಿತ್ರ ಮಂದಿರಗಳಲ್ಲಿ ೨೫ ವಾರಗಳ ಕಾಲ ಪ್ರದರ್ಶನವಾಯಿತು. ಈ ಚಿತ್ರವು, ೧೯೮೮ರ ಎರಡನೇ ಅತಿ ಹೆಚ್ಚು ಗಳಿಕೆಯನ್ನು ಸಂಪಾದಿಸಿ ಮನ್ನಣೆ ಗಳಿಸಿಕೊಂಡಿತು. ಮೊದಲನೇ ಸ್ಥಾನದಲ್ಲಿದ್ದ ರಣಧೀರ ಸಹ ರವಿಚಂದ್ರನ್ ಹಾಗು ಖುಷ್ಬೂರವರನ್ನು ಮುಖ್ಯ ತಾರಾಗಣದಲ್ಲಿ ಹೊಂದಿತ್ತು.

೧೯೮೦ರ ದಶಕದ ರವಿಚಂದ್ರನ್ ರವರ ಗಮನಾರ್ಹ ಚಿತ್ರಗಳಲ್ಲಿ, ಅಂಜದ ಗಂಡು ಸಹ ಒಂದು.

ಉಲ್ಲೇಖಗಳು

[ಬದಲಾಯಿಸಿ]