ಅಂಜದ ಗಂಡು (೧೯೮೮ರ ಚಲನಚಿತ್ರ)
ಗೋಚರ
(2014ರ ಅಂಜದ ಗಂಡು ಚಿತ್ರಕ್ಕಾಗಿ ಅಂಜದ ಗಂಡು (೨೦೧೪ರ ಚಲನಚಿತ್ರ) ಪುಟವನ್ನು ನೋಡಿರಿ)
ಅಂಜದ ಗಂಡು (೧೯೮೮ರ ಚಲನಚಿತ್ರ) | |
---|---|
ಅಂಜದ ಗಂಡು | |
ನಿರ್ದೇಶನ | ರೇಣುಕಾಶರ್ಮ |
ನಿರ್ಮಾಪಕ | ಬಿ.ಎನ್.ಗಂಗಾಧರ್ |
ಪಾತ್ರವರ್ಗ | ರವಿಚಂದ್ರನ್ ಖುಷ್ಬೂ ತೂಗುದೀಪ ಶ್ರೀನಿವಾಸ್, ಮಾ.ಮಂಜುನಾಥ್, ಇಂದಿರಾ, ಶ್ರೀನಿವಾಸ ಮೂರ್ತಿ, ಮುಖ್ಯಮಂತ್ರಿ ಚಂದ್ರು, ಉಮಾಶ್ರೀ, ಅಶೋಕ್ ಬಾದರದಿನ್ನಿ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಪ್ರಸಾದ್ ಬಾಬು |
ಬಿಡುಗಡೆಯಾಗಿದ್ದು | ೧೯೮೮ |
ಚಿತ್ರ ನಿರ್ಮಾಣ ಸಂಸ್ಥೆ | ಎ.ಎನ್.ಎಸ್.ಪ್ರೊಡಕ್ಷನ್ಸ್ |
ಸಾಹಿತ್ಯ | ಹಂಸಲೇಖ, ಆರ್.ಎನ್.ಜಯಗೋಪಾಲ್, ವಿ.ಮನೋಹರ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್, ಬಿ.ಆರ್.ಛಾಯಾ, ಲತಾ ಹಂಸಲೇಖ |
ರವಿಚಂದ್ರನ್ ಹಾಗು ಖುಷ್ಬೂ ಮುಖ್ಯಪಾತ್ರಗಳಲ್ಲಿ ನಟಿಸಿದ ಅಂಜದ ಗಂಡು, ೧೯೮೮ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. [೧]ಈ ಚಿತ್ರವನ್ನು ರೇಣುಕಾಶರ್ಮ ನಿರ್ದೇಶಿಸಿದರು. ಈ ಚಿತ್ರವು ತಮಿಳಿನಲ್ಲಿ ರಜನೀಕಾಂತ್ ನಟಿಸಿದ ತಂಬಿಕು ಎಂದ ಊರು(೧೯೮೪) ಚಿತ್ರದ ರೀಮೇಕ್ ಆಗಿದೆ. ಹಂಸಲೇಖರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಚಿತ್ರದ ಎಲ್ಲಾ ಹಾಡುಗಳು ಈ ಚಿತ್ರವನ್ನು ಜನಮನದಲ್ಲಿ ಈಗಲೂ ಸಹ ಅಚ್ಚಳಿಯದಿಂತೆ ಉಳಿದಿವೆ. ಈ ಚಿತ್ರದ ಎರಡು ಹಾಡುಗಳನ್ನು ತೆಲುಗಿನ ಎರಡು ಬೇರೆ ಬೇರೆ ಚಿತ್ರಗಳಲ್ಲಿ ಉಪಯೋಗಿಸಲಾದವು.
ಚಿತ್ರ ಮಂದಿರಗಳಲ್ಲಿ ೨೫ ವಾರಗಳ ಕಾಲ ಪ್ರದರ್ಶನವಾಯಿತು. ಈ ಚಿತ್ರವು, ೧೯೮೮ರ ಎರಡನೇ ಅತಿ ಹೆಚ್ಚು ಗಳಿಕೆಯನ್ನು ಸಂಪಾದಿಸಿ ಮನ್ನಣೆ ಗಳಿಸಿಕೊಂಡಿತು. ಮೊದಲನೇ ಸ್ಥಾನದಲ್ಲಿದ್ದ ರಣಧೀರ ಸಹ ರವಿಚಂದ್ರನ್ ಹಾಗು ಖುಷ್ಬೂರವರನ್ನು ಮುಖ್ಯ ತಾರಾಗಣದಲ್ಲಿ ಹೊಂದಿತ್ತು.
೧೯೮೦ರ ದಶಕದ ರವಿಚಂದ್ರನ್ ರವರ ಗಮನಾರ್ಹ ಚಿತ್ರಗಳಲ್ಲಿ, ಅಂಜದ ಗಂಡು ಸಹ ಒಂದು.